ಒಂದು ಪಾಪರಹಿತ ಲೋಕ—ಹೇಗೆ?
ಟೋಕ್ಯೊದ ಶಾಂತವಾದ ನೆರೆಹೊರೆಯಲ್ಲಿ ಒಂದು ಚಳಿಗಾಲದ ಮುಂಜಾವದ ತಾಸುಗಳಲ್ಲಿ ಸಹಾಯಕ್ಕಾಗಿ ಚೀತ್ಕಾರದ ಕೂಗುಗಳು ಪ್ರಶಾಂತತೆಯನ್ನು ಭಗ್ನಗೊಳಿಸಿದವು. ಐದರಿಂದ ಹತ್ತು ನಿಮಿಷಗಳವರೆಗೆ, ಪುನಃ ಪುನಃ ಇರಿಯಲ್ಪಡುತ್ತಾ ಅಟಿಕ್ಟೊಂಡು ಹೋಗಲ್ಪಡುತ್ತಿದ್ದ ಒಂದು ವಾರ್ತಾಪತ್ರಿಕೆ ಹಂಚುವ ಸ್ತ್ರೀಯ ಹತಾಶ ಅರಚುವಿಕೆಗಳನ್ನು ಡಜನ್ನುಗಟ್ಟಲೆ ಜನರು ಕೇಳಿದರು. ಏನು ನಡೆಯುತ್ತಾ ಇದೆ ಎಂದು ಕಂಡುಕೊಳ್ಳಲು ಒಬ್ಬ ವ್ಯಕ್ತಿಯಾದರೂ ಬೇಕಾದ ಆಸಕ್ತಿ ವಹಿಸಲಿಲ್ಲ. ಆಕೆಯು ಮಿತಿಮೀರಿದ ರಕ್ತಸ್ರಾವದಿಂದ ಸತ್ತಳು. ಒಬ್ಬ ತನಿಖೆ ಮಾಡುವವನು ಹೇಳಿದ್ದು: “ಈ ಜನರಲ್ಲಿ ಒಬ್ಬನಾದರೂ ಆಕೆಯ ಕಿರಿಚಾಟವನ್ನು ಕೇಳಿದಾಕ್ಷಣವೆ ಘಟನೆಯನ್ನು ಪೋಲಿಸರಿಗೆ ವರದಿಸುತ್ತಿದ್ದಲ್ಲಿ, ಆಕೆಯ ಜೀವವು ರಕ್ಷಿಸಲ್ಪಡುತಿತ್ತು.”
ಸಾಯುವ ಹೆಂಗಸನ್ನು ಯಾರು ಕೇಳಿದರೋ ಅವರು ಕೇವಲ ಅಲಕ್ಷಿಸುವುದಕ್ಕಿಂತ ಹೆಚ್ಚೇನೂ ಮಾಡಲಿಲ್ಲವಾದರೂ, ತಾವು ದೋಷ ಮುಕ್ತರೆಂದು ಯುಕ್ತವಾಗಿಯೆ ಹೇಳಿಕೊಳ್ಳಬಹುದಿತ್ತೊ? “ಕೊಲ್ಲುವಿಕೆಯ ಬಗ್ಗೆ ನನಗೆ ತಿಳಿದ ನಂತರ ಶುಕ್ರವಾರದ ಇಡೀ ದಿನ ನನ್ನ ಮನಸ್ಸಾಕ್ಷಿಯು ನನ್ನನ್ನು ಹಿಂಸಿಸಿತು,” ಎಂದು ಆಕೆಯ ಕೂಗುಗಳನ್ನು ಕೇಳಿದಂಥ ಒಬ್ಬ ಮನುಷ್ಯನು ಹೇಳಿದನು. ಇದು ನಿಜವಾಗಿಯೂ ಪಾಪವೆಂದರೇನು? ಎಂದು ನಾವು ಕೌತುಕಗೊಳ್ಳುವಂತೆ ಮಾಡುತ್ತದೆ.
ಪಾಪವೆಂದರೇನು?
ಅಸಹಿ ಶೀಂಬನ್ ವಾರ್ತಾಪತ್ರಿಕೆಯಲ್ಲಿ ಉಲ್ಲೇಖಿಸಿದಂತೆ, ಒಬ್ಬನ ಪಾಪಪೂರ್ಣತೆಯ ಅರಿವಿನ ಬಗ್ಗೆ ಸೂಚಿಸುತ್ತಾ, ಜಪಾನಿನ, ಟೋಕ್ಯೊದ ಹೋಸಿ ವಿಶ್ವವಿದ್ಯಾಲಯದಲ್ಲಿನ ಸಾಹಿತ್ಯ ವಿಮರ್ಶಕ ಮತ್ತು ವಿಶ್ರಾಂತ ಮಹೋಪಧ್ಯಾಯ, ಹಿಡೆಓ ಒಡೇಗಿರಿ, ಹೇಳಿದ್ದು: “ಮಗುವಿನಲ್ಲಿರುವ ಗಲೀಜಾದ ಆತ್ಮ ದುರಭಿಮಾನ, ಲಜ್ಜಾಸ್ಪದವಾದ ಈರ್ಷ್ಯೆ, ವ್ಯಕ್ತಿಯ ಬೆನ್ನ ಹಿಂದಿನ ದ್ರೋಹಗಳಂಥ, ನನಗಿರುವ ಪಾಪಗಳ ಪ್ರಜ್ಞೆಯ ಸ್ಫುಟ ನೆನಪುಗಳನ್ನು ನಾನು ಅಳಿಸಿ ಹಾಕಲು ಸಾಧ್ಯವಿಲ್ಲ. ಈ ಪ್ರಜ್ಞೆಯು ನಾನು ಪ್ರಾಥಮಿಕ ಶಾಲೆಯಲ್ಲಿರುವಾಗ ನನ್ನ ಮನಸ್ಸಿನ ಮೇಲೆ ಅಚ್ಚೊತ್ತಲಾಯಿತು ಮತ್ತು ಈಗಲೂ ನನ್ನನ್ನು ಹಿಂಸಿಸುತ್ತದೆ.” ಅಂಥಾ ಭಾವನೆಗಳ ಅನುಭವ ನಿಮಗೆಂದಾದರೂ ಆಗಿದೆಯೋ? ನಿಮಗೆ ತಪ್ಪೆಂದು ಗೊತ್ತಿರುವ ಏನನ್ನಾದರೂ ನೀವು ಮಾಡುವಲ್ಲಿ ಖಂಡಿಸುವ ಒಂದು ಅಂತಃಸರ್ವ ನಿಮಗಿದೆಯೋ? ಒಂದು ವೇಳೆ ಅಪರಾಧಗೈಯಲ್ಪಟ್ಟಿರಲಿಕ್ಕಿಲ್ಲ, ಆದರೆ ಒಂದು ಅಸಮಾಧಾನಕರ ಭಾವನೆ ಬಹು ಕಾಲ ಉಳಿಯುತ್ತದೆ ಮತ್ತು ನಿಮ್ಮ ಮನಸ್ಸಿನ ಮೇಲೆ ಭಾರವಾಗಿ ತೂಗುತ್ತದೆ. ಇದು ನಿಮ್ಮ ಮನಸ್ಸಾಕ್ಷಿಯ ಕಾರ್ಯನಡಿಸುವಿಕೆ, ಮತ್ತು ಬೈಬಲ್ ಈ ಕೆಳಗಿನ ಭಾಗದಲ್ಲಿ ಇದನ್ನು ಸೂಚಿಸುತ್ತದೆ: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗೆಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” (ರೋಮಾಪುರ 2:14, 15) ಹೌದು, ವ್ಯಭಿಚಾರ, ಕಳ್ಳತನ ಮತ್ತು ಸುಳ್ಳಾಡುವಂಥ ಕೃತ್ಯಗಳ ಮೂಲಕ ಹೆಚ್ಚಿನ ಜನರು ಸ್ವಾಭಾವಿಕವಾಗಿಯೆ ಕಲಕಲ್ಪಟ್ಟ ಭಾವನೆಯುಳ್ಳವರಾಗುತ್ತಾರೆ. ಅವರ ಮನಸ್ಸಾಕ್ಷಿಯು ಪಾಪಕ್ಕೆ ರುಜುವಾತನ್ನೀಯುತ್ತದೆ.
ಹೇಗಾದರೂ, ಮನಸ್ಸಾಕ್ಷಿಯ ಸರ್ವವನ್ನು ಪುನರಾವೃತ್ತಿತ ರೀತಿಯಲ್ಲಿ ಅಲಕ್ಷ್ಯ ಮಾಡಿದಾಗ, ಅದು ಇನ್ನು ಮುಂದೆ ಸುರಕ್ಷಿತ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದು ಗ್ರಹಣಶಕ್ತಿಯಿಲ್ಲದ್ದಾಗುವುದು ಮತ್ತು ಮಲಿನವಾಗುವುದು. (ತೀತ 1:15) ಯಾವುದು ಕೆಟ್ಟದ್ದೊ ಅದರ ಕಡೆಗೆ ಸೂಕ್ಷ್ಮ ಗ್ರಾಹಿತ್ವವು ಕಳೆದು ಹೋಗುತ್ತದೆ. ವಾಸ್ತವದಲ್ಲಿ, ಇಂದು ಪಾಪದ ಮಟ್ಟಿಗೆ ಹೆಚ್ಚಿನ ಜನರ ಮನಸ್ಸಾಕ್ಷಿಯು ಸತ್ತಿರುತ್ತದೆ.
ಮನಸ್ಸಾಕ್ಷಿಯು ಪಾಪದ ಏಕಮಾತ್ರ ಅಳತೆಯೊ, ಯಾ ಪಾಪವು ಏನಾಗಿರುತ್ತದೆ ಮತ್ತು ಏನಾಗಿರುವುದಿಲವ್ಲೆಂಬುದಕ್ಕೆ ಸಮಗ್ರ ಮಟ್ಟವಾಗಿ ಕಾರ್ಯ ನಡಿಸುವದೇನಾದರೂ ಇದೆಯೋ? ಮೂರು ಸಾವಿರ ವರ್ಷಗಳಿಗಿಂಲೂ ಹೆಚ್ಚು ಹಿಂದೆ, ದೇವರು ತನ್ನ ಆದುಕೊಂಡ ಜನರಿಗೊಂದು ನಿಯಮ ಸಂಗ್ರಹವನ್ನು ಕೊಟ್ಟನು, ಮತ್ತು ಈ ನಿಯಮದ ಮೂಲಕ, ಪಾಪವು “ಪಾಪವೆಂದು ಗುರುತಿಸಲ್ಪಡುವಂತೆ” ಆಯಿತು. (ರೋಮಾಪುರ 7:13, ನ್ಯೂ ಇಂಟರ್‌ನ್ಯಾಷನಲ್ ವರ್ಶನ್) ಹಿಂದೆ ತುಸು ಅಂಗೀಕಾರಾರ್ಹವಾಗಿದ್ದ ವರ್ತನೆಯು ಕೂಡ ನಿಜ ತೋರಿಕೆಯಲ್ಲಿ ಪಾಪವೆಂದು ತೋರಿಸಲ್ಪಟ್ಟಿತು. ದೇವರಾದುಕೊಂಡ ಜನರಾದ ಇಸ್ರಾಯೇಲ್ಯರು, ಪಾಪಿಗಳಾದರು ಮತ್ತು ಅಂಥವರಾಗಿದದ್ದರಿಂದ ಖಂಡನೆಗೆ ಪಾತ್ರರಾಗಿದ್ದರು.
ನಮ್ಮ ಮನಸ್ಸಾಕ್ಷಿಗಳು ನಮ್ಮನ್ನು ಅರಿವುಳ್ಳವರಾಗಿರುವಂತೆ ಮಾಡುವ ಮತ್ತು ಮೋಶೆಯ ನಿಯಮ ಸ್ಪಷ್ಟವಾಗಿಗಿ ನಮೂದಿಸುವ ಮತ್ತು ಪಟ್ಟಿ ಮಾಡುವ ಈ ಪಾಪಗಳು ಯಾವುವು? ಬೈಬಲಿನ ಉಪಯೋಗದಲ್ಲಿ ಪಾಪವೆಂಬ ಈ ಪದದ ಅರ್ಥವು, ಸೃಷ್ಟಿಕರ್ತನಿಗೆ ಸಂಬಂಧಿಸಿ ಮಟ್ಟವನ್ನು ತಲುಪದೆ ಇರುವುದು ಎಂದಾಗಿದೆ. ಆತನ ವ್ಯಕ್ತಿತ್ವಕ್ಕೆ, ಮಟ್ಟಗಳಿಗೆ, ಮಾರ್ಗಗಳಿಗೆ ಮತ್ತು ಚಿತ್ತಕ್ಕೆ ಹೊಂದಿಕೆಯಲ್ಲಿರದ ಯಾವುದೇ ವಿಷಯವು ಅದಾಗಿರುತ್ತದೆ. ಆತನು ಸ್ಥಾಪಿಸಿರುವ ಗುರಿಯನ್ನು ತಲುಪದಿರುವ ಯಾವುದೇ ಸೃಷ್ಟಿಯನ್ನು ಅಸ್ತಿತ್ವದಲ್ಲಿ ಮುಂದುವರಿಯುವಂತೆ ಆತನು ಅನುಮತಿಸುವುದಿಲ್ಲ. ಆದುದರಿಂದಲೇ ಮೊದಲನೇ ಶತಮಾನದ ಒಬ್ಬ ನಿಯಮ ಪ್ರವೀಣನು ಇಬ್ರಿಯ ಕ್ರೈಸ್ತರನ್ನು ಎಚ್ಚರಿಸಿದ್ದು: “ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.” (ಇಬ್ರಿಯ 3:12) ಹೌದು, ಸೃಷ್ಟಿಕರ್ತನಲ್ಲಿ ನಂಬಿಕೆಯ ಕೊರತೆಯು ದೊಡ್ಡ ಪಾಪವಾಗಿ ಸಂಯೋಜಿಸಲ್ಪಡುತ್ತದೆ. ಹೀಗೆ, ಬೈಬಲಿನಲ್ಲಿ ವಿವರಿಸಲ್ಪಟ್ಟಂತೆ ಪಾಪದ ವ್ಯಾಪ್ತಿಯು ಯಾವುದು ಸಾಮಾನ್ಯವಾಗಿ ಪಾಪವೆಂದು ಪರಿಗಣಿಸಲ್ಪಡುತ್ತದೊ ಅದಕ್ಕಿಂತಲೂ ಅಧಿಕ ವಿಸ್ತಾರವುಳ್ಳದ್ದಾಗಿದೆ. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ,” ಎಂದು ನಮೂದಿಸುವಷ್ಟು ದೂರ ಬೈಬಲು ಹೋಗುತ್ತದೆ.—ರೋಮಾಪುರ 3:23.
ಪಾಪದ ಮೂಲ
ಮನುಷ್ಯನು ಪಾಪಿಯಾಗಿಯೆ ಸೃಷ್ಟಿಸಲ್ಪಟ್ಟಿದ್ದಾನೆಂದದರ ಅರ್ಥವೋ? ಅಲ್ಲ, ಮಾನವ ಜೀವದ ಉಗಮನಾದ ಯೆಹೋವ ದೇವರು, ಪ್ರಥಮ ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡಿದನು. (ಆದಿಕಾಂಡ 1:26, 27; ಧರ್ಮೋಪದೇಶಕಾಂಡ 32:4) ಹಾಗಿದ್ದರೂ, ದೇವರು ಇಟ್ಟ ಒಂದೇ ನಿಷೇಧವನ್ನು ಅವರು ಉಲ್ಲಂಘಿಸಿದಾಗ, ತಿನ್ನಕೂಡದೆಂದು ಹೇಳಿದ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ” ದಿಂದ ಅವರು ತಿಂದಾಗ, ಮೊದಲ ಮಾನವ ಜತೆಯು ಮಟ್ಟವನ್ನು ತಲುಪಲು ತಪ್ಪಿತು. (ಆದಿಕಾಂಡ 2:17) ಅವರನ್ನು ಪರಿಪೂರ್ಣರನ್ನಾಗಿ ಸೃಷ್ಟಿಸಿದ್ದಾಗ್ಯೂ, ಅವರೀಗ ಅವರ ತಂದೆಗೆ ಪೂರ್ಣ ವಿಧೇಯತೆಯ ಗುರಿಯನ್ನು ತಪ್ಪಿದರು, ಪಾಪಿಗಳಾದರು, ಮತ್ತು ಅದಕ್ಕನುಗುಣವಾಗಿ ಸಾಯುವಂತೆ ಖಂಡಿಸಲ್ಪಟ್ಟರು.
ಈ ಪ್ರಾಚೀನ ಇತಿಹಾಸದೊಂದಿಗೆ ಇಂದಿನ ಪಾಪಕ್ಕೆ ಏನು ಸಂಬಂಧವಿದೆ? ಬೈಬಲ್ ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಅನುವಂಶೀಯತೆಯ ಮೂಲಕ ವಿನಾಯಿತಿ ಇಲ್ಲದೆ ನಾವೆಲ್ಲರೂ ಪಾಪಿಗಳಾಗಿದ್ದೇವೆ; ಆದ್ದರಿಂದ, ನಾವು ಮರಣ ದಂಡನೆಯ ಕೆಳಗೆ ಬಂದಿರುತ್ತೇವೆ.—ಪ್ರಸಂಗಿ 7:20.
ಪಾಪವನ್ನು ಅಳಿಸಿ ಹಾಕಲು ಮಾನವ ಪ್ರಯತ್ನಗಳು
ಆದಾಮನು ತನ್ನ ಸಂತಾನಕ್ಕೆ ಪಾಪವನ್ನು ದಾಟಿಸಿದ್ದಲ್ಲದೆ, ಆತನು ದೇವರು ಕೊಟ್ಟ ಮನಸ್ಸಾಕ್ಷಿಯ ಸಾಮರ್ಥ್ಯವನ್ನು ಕೂಡ ದಾಟಿಸಿದನು. ಪಾಪವು ಒಂದು ಕಳವಳಗೊಂಡ ಭಾವನೆಗೆ ಕಾರಣವಾಗಬಹುದು. ಈ ಮುಂಚೆಯೇ ತಿಳಿಸಿದಂತೆ, ಮನುಷ್ಯರು ಅಂಥ ಭಾವನೆಗಳನ್ನು ಲಘುವಾಗಿಸಲು ವಿವಿಧ ವಿಧಾನಗಳನ್ನು ಕಲ್ಪಿಸಿದ್ದಾರೆ. ಹೇಗೂ, ಅವುಗಳು ನಿಜವಾಗಿಯೂ ಪರಿಣಾಮಕಾರಕವಾಗಿವೆಯೋ?
ಪೂರ್ವ ಮತ್ತು ಪಶ್ಚಿಮ ದೇಶದ ಜನರು ಅವರ ಮಟ್ಟಗಳನ್ನು ಬದಲಾಯಿಸುವುದರ ಮೂಲಕ ಯಾ ಪಾಪದ ಅಸ್ತಿತ್ವವನ್ನೇ ತಿರಸ್ಕರಿಸುವುದರ ಮೂಲಕ ಪಾಪದ ಪರಿಣಾಮದೊಂದಿಗೆ ವ್ಯವಹರಿಸಲು ಪ್ರಯತ್ನಿಸಿರುತ್ತಾರೆ. (1 ತಿಮೊಥೆಯ 4:1, 2) ಮಾನವ ಕುಲದ ಪಾಪಪೂರ್ಣ ಸ್ಥಿತಿಯನ್ನು ಜ್ವರ ಬಂದಿರುವ ರೋಗಿಗೆ ಹೋಲಿಸಬಹುದು. ಕದಡಲ್ಪಟ್ಟ ಮನಸ್ಸಾಕ್ಷಿಯು ಅಹಿತಕರ ಜ್ವರಕ್ಕೆ ಹೋಲಿಸಲ್ಪಡುವಾಗ ರೋಗ ಸೂಚಕ ಲಕ್ಷಣಗಳನ್ನು ಉಂಟುಮಾಡುವ ವಿಷಾಣುವನ್ನು ಪಾಪಕ್ಕೆ ತುಲನೆಮಾಡಬಹುದು. ಶಾಖಮಾಪಕವನ್ನು ಒಡೆದುಹಾಕುವುದು ರೋಗಿಗೆ ತೀವ್ರ ಜ್ವರವಿದೆ ಎಂಬ ನಿಜತ್ವವನ್ನು ಬದಲಾಯಿಸುವುದಿಲ್ಲ. ಅನೇಕವಾದವುಗಳಲ್ಲಿ ಕ್ರೈಸ್ತಪ್ರಪಂಚವು ಮಾಡಿದಂತೆ, ನೈತಿಕ ಮಟ್ಟಗಳನ್ನು ದೂರ ಬಿಸಾಡುವುದು, ಮತ್ತು ಒಬ್ಬನ ಸ್ವಂತ ಮನಸ್ಸಾಕ್ಷಿಯ ಸಾಕ್ಷ್ಯವನ್ನು ಅಲಕ್ಷಿಸುವುದು ಪಾಪವನ್ನು ತಾನೇ ಅಳಿಸಿ ಹಾಕಲು ಸಹಾಯಕವಲ್ಲ.
ಒಬ್ಬ ವ್ಯಕ್ತಿ ತನ್ನ ಜ್ವರವನ್ನು ಶಮನಗೊಳಿಸಲು ಒಂದು ನೀರ್ಗಲ್ಲು ಚೀಲವನ್ನು ಹಚ್ಚಬಹುದು. ಶಿಂಟೋ ಶುದ್ಧೀಕರಣ ಸಂಸ್ಕಾರದ ಮೇಲು ಮೇಲಿನ ನಿರ್ವಹಣೆಯ ಮೂಲಕ ಮನಸ್ಸಾಕ್ಷಿಯ ಚುಚ್ಚುವಿಕೆಗಳನ್ನು ಶಮನಗೊಳಿಸಲು ಪ್ರಯತ್ನಿಸುವಂತೆ ಅದಾಗಿರುತ್ತದೆ. ನೀರ್ಗಲ್ಲು ಚೀಲವು ಜ್ವರಕ್ಕೆ ಬಲಿಯಾದವನನ್ನು ತಾತ್ಕಾಲಿಕವಾಗಿ ತಂಪಾಗಿಸಬಹುದು, ಆದರೆ ಇದು ಜ್ವರದ ಕಾರಣವನ್ನು ತೆಗೆದುಹಾಕಲಾರದು. ಯೆರೆಮೀಯನ ದಿನದಲ್ಲಿ ಯಾಜಕರು ಮತ್ತು ಪ್ರವಾದಿಗಳು ಆ ಸಮಯದ ಇಸ್ರಾಯೇಲ್ಯರಿಗೋಸ್ಕರ ಅದೇ ವಿಧದ ಗುಣಪಡಿಸುವಿಕೆಯನ್ನು ಪ್ರಯತ್ನಿಸಿದರು. “ಎಲ್ಲವೂ ಸಾಂಗವಾಗಿದೆ, ಎಲ್ಲವೂ ಸಾಂಗವಾಗಿದೆ,” ಎಂದು ಹೇಳಿ, ಜನರ ಆತ್ಮಿಕ ಮತ್ತು ನೈತಿಕ ಗಾಯಗಳನ್ನು ಅವರು “ಮೆತುವಾಗಿ” ವಾಸಿಮಾಡಿದರು. (ಯೆರೆಮೀಯ 6:14; 8:11, ಆ್ಯನ್ ಅಮೆರಿಕನ್ ಟ್ರಾನ್ಸ್‌ಲೇಶನ್) ಕೇವಲ ಮೇಲು ಮೇಲಿನ ಧಾರ್ಮಿಕ ನಿರ್ವಹಣೆಗಳ ಮೂಲಕ ಮತ್ತು “ಎಲ್ಲವೂ ಸಾಂಗವಾಗಿದೆ” ಎಂಬಂತೆ ಪಠಿಸುವುದರ ಮೂಲಕ ದೇವ ಜನರ ನೈತಿಕ ಕುಸಿತವು ವಾಸಿಯಾಗಲಿಲ್ಲ, ಮತ್ತು ಇಂದು ಶುದ್ಧೀಕರಣ ಸಂಸ್ಕಾರಗಳು ಜನರ ನೀತಿ ತತ್ವಗಳನ್ನು ಬದಲಾಯಿಸುವುದಿಲ್ಲ.
ಜ್ವರವಿರುವ ವ್ಯಕ್ತಿಯು ಜ್ವರ ನಿವಾರಕಗಳನ್ನು ತಕ್ಕೊಳ್ಳುವುದು ಆತನ ಜ್ವರ ಕಡಮೆಯಾಗುವಂತೆ ಮಾಡಬಹುದು, ಆದರೆ ವಿಷಾಣುವು ಇನ್ನೂ ಅವನ ದೇಹದಲ್ಲಿದೆ. ವಿದ್ಯೆಯ ಮೂಲಕ ಕೆಟ್ಟತನದೊಂದಿಗೆ ವ್ಯವಹರಿಸುವ ಕನ್‌ಫ್ಯೂಷಿಯನ್ ಮಾರ್ಗದ ವಿಷಯದಲ್ಲಿಯೂ ಕೂಡ ಇದು ನಿಜವಾಗಿರುತ್ತದೆ. ಮೇಲ್ ತೋರ್ಕೆಯಲ್ಲಿ ಅದು ಜನರಿಗೆ ಕೆಟ್ಟತನದಿಂದ ದೂರ ಸರಿಯುವಂತೆ ಸಹಾಯ ಮಾಡಬಹುದು, ಆದರೆ ಲೀ ಯನ್ನು ಆಚರಿಸುವುದು ಪಾಪಭರಿತ ನಡವಳಿಕೆಯನ್ನು ಕೇವಲ ನಿಗ್ರಹಿಸುತ್ತದೆ ಮತ್ತು ಕೆಟ್ಟ ನಡತೆಯ ಮೂಲಭೂತ ಕಾರಣವಾದ, ಆತನ ಸ್ವಭಾವ ಸಿದ್ಧ ಪಾಪಪೂರ್ಣ ಪೃವ್ರತ್ತಿಯನ್ನು ಒಬ್ಬ ವ್ಯಕ್ತಿಯಿಂದ ತೊಲಗಿಸುವುದಿಲ್ಲ.—ಆದಿಕಾಂಡ 8:21.
ಒಬ್ಬನನ್ನು ಪಾಪಭರಿತ ಪ್ರವೃತ್ತಿಗಳಿಂದ ಬಿಡಿಸಿಕೊಳ್ಳಲು ಬೌದ್ಧ ಮತದ ನಿರ್ವಾಣದಲ್ಲಿ ಒಳಸೇರುವ ಬೋಧನೆಯ ಕುರಿತಾಗಿ ಏನು? ನಿರ್ವಾಣವೆಂಬ ಸ್ಥಿತಿಯು, “ಆರಿಸಿಬಿಡುವುದು” ಎಂದರ್ಥ ಕೊಡುತ್ತದೆಂದು ಹೇಳಲಾಗಿರುವ ನಿರ್ವಾಣ ಸ್ಥಿತಿಯು ವರ್ಣನಾತೀತ ಸಕಲ ಭಾವೋದ್ರೇಕ ಮತ್ತು ಬಯಕೆಗಳನ್ನು ಆರಿಸಿ ಬಿಡುತ್ತದೆಂದು ಭಾವಿಸಲಾಗುತ್ತದೆ. ಅದು ವೈಯಕ್ತಿಕ ಅಸ್ತಿತ್ವದ ಬಿಟ್ಟುಕೊಡುವಿಕೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಅದು ಜ್ವರದಿಂದ ಅಸೌಖ್ಯವಾಗಿರುವ ಮನುಷ್ಯನಿಗೆ ಪರಿಹಾರ ಕಂಡುಕೊಳ್ಳಲಿಕ್ಕಾಗಿ ಸಾಯಲು ಹೇಳುವಂತೆ ಅನಿಸುವುದಿಲ್ಲವೋ? ಇನ್ನೂ ಕೂಡಿಸಿ, ನಿರ್ವಾಣದ ಸ್ಥಿತಿಯನ್ನು ಎಟಕಿಸಿಕೊಳ್ಳುವುದು ಬಹಳ ಕಷ್ಟಕರ, ಅಸಾಧ್ಯವೂ ಕೂಡ ಎಂದು ಪರಿಗಣಿಸಲಾಗಿದೆ. ಬಾಧಿತ ಮನಸ್ಸಾಕ್ಷಿಯನ್ನು ಹೊಂದಿರುವವನೊಬ್ಬನಿಗೆ ಈ ಬೋಧನೆಯು ಸಹಾಯಕರವೆಂದನಿಸುತ್ತದೋ?
ಪಾಪದಿಂದ ಬಿಡುಗಡೆ
ಜೀವ ಮತ್ತು ಪಾಪಭರಿತ ಪ್ರವೃತ್ತಿಗಳ ಮೇಲಿನ ಮಾನವ ತತ್ವಜ್ಞಾನಗಳು, ಅವುಗಳ ಉತ್ತಮತೆಯಲ್ಲಿ, ಕೇವಲ ಒಬ್ಬನ ಮನಸ್ಸಾಕ್ಷಿಯನ್ನು ಶಾಂತಗೊಳಿಸಬಹುದೆಂಬುದು ಸ್ಪಷ್ಟ. ಅವುಗಳು ಪಾಪಭರಿತ ಸ್ಥಿತಿಯನ್ನು ತೆಗೆದುಬಿಡುವುದಿಲ್ಲ. (1 ತಿಮೊಥೆಯ 6:20) ಈ ಪಾಪಭರಿತ ಸ್ಥಿತಿಯನ್ನು ತೆಗೆದುಬಿಡುವಂಥ ಬೇರೆ ಯಾವುದಾದರೂ ಮಾರ್ಗವಿದೆಯೋ? ಸಮೀಪ ಪೂರ್ವದಲ್ಲಿ ಬರೆದ ಒಂದು ಪುಸ್ತಕವಾದ ಬೈಬಲಿನಲ್ಲಿ, ಪಾಪದಿಂದ ಬಿಡುಗಡೆಗಾಗಿ ಇರುವ ಕೀಲಿ ಕೈಯನ್ನು ನಾವು ಕಂಡುಕೊಳ್ಳುತ್ತೇವೆ. “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು . . . ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ.” (ಯೆಶಾಯ 1:18, 19) ತನ್ನ ಆದುಕೊಂಡ ಜನರಾಗಿದ್ದರೂ, ಆತನಿಗೆ ಸಮಗ್ರತೆಯ ಗುರಿಯನ್ನು ತಪ್ಪಿದ ಇಸ್ರಾಯೇಲ್ಯರಿಗೆ, ಇಲ್ಲಿ ಯೆಹೋವನು ಮಾತಾಡುತ್ತಾನೆ. ಹೇಗೂ, ಅದೇ ಸೂತ್ರವು, ಇಡೀ ಮಾನವ ಜಾತಿಗೆ ಅನ್ವಯಿಸುತ್ತದೆ. ಸೃಷ್ಟಿಕರ್ತನ ಮಾತುಗಳನ್ನು ಕೇಳಲು ಸ್ವಇಷ್ವವನ್ನು ತೋರಿಸುವುದು, ವಾಸ್ತವಾಂಶದಲ್ಲಿ, ಒಬ್ಬನ ಪಾಪಗಳನ್ನು ಶುಭ್ರಗೊಳಿಸಲು, ತೊಳೆದುಕೊಳ್ಳಲು ಕೀಲಿ ಕೈ ಆಗಿರುತ್ತದೆ.
ಮಾನವ ಕುಲದ ಪಾಪಗಳನ್ನು ತೊಳೆದು ಹಾಕುವ ವಿಷಯದಲ್ಲಿ ದೇವರ ವಾಕ್ಯವು ನಮಗೆ ಏನು ಹೇಳುತ್ತದೆ? ಒಬ್ಬ ಮನುಷ್ಯನ ಪಾಪದಿಂದಾಗಿ ಇಡೀ ಮಾನವ ಕುಲವು ಪಾಪಿಗಳಾದಂತೆ, ಇನ್ನೊಬ್ಬ ಮನುಷ್ಯನ ಪರಿಪೂರ್ಣ ವಿಧೇಯತೆಯಿಂದಾಗಿ, ವಿಧೇಯ ಮಾನವ ಕುಲವು ಅವರ ದುರವಸ್ಥೆಯಿಂದ ಬಿಡುಗಡೆ ಹೊಂದುವುದು, ಎಂದು ಬೈಬಲ್ ಅನ್ನುತ್ತದೆ. (ರೋಮಾಪುರ 5:18, 19) ಹೇಗೆ? “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:8) ಪರಿಪೂರ್ಣ ಮತ್ತು ಪಾಪರಹಿತ ಮನುಷ್ಯನಾಗಿ ಹುಟ್ಟಿದ ಯೇಸು ಕ್ರಿಸ್ತನು, ಪಾಪ ಮಾಡುವ ಮುಂಚಿನ ಮೊದಲ ಆದಾಮನಿಗೆ ಸರಿಸಮಾನನಾಗಿದ್ದು, ಮಾನವ ಕುಲದ ಪಾಪಗಳನ್ನು ಕೊಂಡೊಯ್ಯುವ ಸ್ಥಿತಿಯಲ್ಲಿದ್ದನು. (ಯೆಶಾಯ 53:12; ಯೋಹಾನ 1:14; 1 ಪೇತ್ರ 2:24) ದುಷ್ಕರ್ಮಿಯೋ ಎಂಬಂತೆ ಯಾತನಾ ಕಂಬದ ಮೇಲೆ ಮರಣಕ್ಕೆ ಹಾಕಿದರ್ದ ಮೂಲಕ, ಯೇಸುವು ಮಾನವ ಕುಲವನ್ನು ಪಾಪ ಮತ್ತು ಮರಣದ ಬಂಧನದಿಂದ ಬಿಡಿಸಿದನು. ರೋಮಾಪುರದ ಕೈಸ್ತರಿಗೆ ಪೌಲನು ವಿವರಿಸಿದ್ದು, “ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣ ಕೊಟ್ಟನು. . . . ಪಾಪವು ಮರಣವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ ದೇವರ ಕೃಪೆಯು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು ನಿತ್ಯಜೀವವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸುವದು.”—ರೋಮಾಪುರ 5:6, 21.
ಇಡೀ ಮಾನವ ಕುಲಕ್ಕಾಗಿ ಕ್ರಿಸ್ತನ ಸಾಯುವಿಕೆಯನ್ನು ಮತ್ತು ಆದಾಮನಿಂದ ಕಲಕಲ್ಪಟ್ಟ ತಕ್ಕಡಿಯನ್ನು ಸರಿ ಸಮಾನತೆಗೆ ತರುವಿಕೆಯನ್ನು “ಪ್ರಾಯಶ್ಚಿತ್ತ” ಏರ್ಪಾಡು ಎಂದು ಕರೆಯಲಾಗಿದೆ. (ಮತ್ತಾಯ 20:28) ಇದನ್ನು ಜ್ವರವನ್ನುಂಟು ಮಾಡುವ ವಿಷಾಣುವಿನ ವಿರುದ್ಧ ಕಾರ್ಯನಡಿಸುವ ಔಷಧಕ್ಕೆ ಹೋಲಿಸಬಹುದು. ಮಾನವ ಕುಲಕ್ಕೆ ಯೇಸುವಿನ ಪ್ರಾಯಶ್ಚಿತದ್ತ ಮೌಲ್ಯವನ್ನು ಅನ್ವಯಿಸುವುದರ ಮೂಲಕ, ಪಾಪದಿಂದಾಗಿ ಉಂಟಾದ ಮಾನವ ಕುಲದ ರೋಗಪೀಡಿತ ಸ್ಥಿತಿಯನ್ನು—ಮರಣವನ್ನೂ ಸೇರಿಸಿ—ಗುಣಪಡಿಸಬಹುದು. ಈ ಗುಣಪಡಿಸುವ ಕಾರ್ಯಗತಿಯನ್ನು ಬೈಬಲಿನ ಕೊನೆಯ ಪುಸ್ತಕದಲ್ಲಿ ಸಾಂಕೇತಿಕವಾಗಿ ವಿವರಿಸಲಾಗಿದೆ: “ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ.” (ಪ್ರಕಟನೆ 22:2) ಆಲೋಚಿಸಿರಿ! ಎಲೆಗಳಿರುವ ಜೀವವೃಕ್ಷಗಳ ಮಧ್ಯದಿಂದ ಒಂದು ಜೀವಜಲದ ಸಾಂಕೇತಿಕ ನದಿಯು ಹರಿಯುವಂಥಾದ್ದು, ಎಲ್ಲವೂ ಮಾನವ ಕುಲದ ವಾಸಿಮಾಡುವಿಕೆಗಾಗಿಯೆ. ಈ ದೈವಿಕವಾಗಿ ಪ್ರೇರಿತವಾದ ಪ್ರತೀಕಗಳು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಮಾನವಕುಲವನ್ನು ಪರಿಪೂರ್ಣತೆಗೆ ಪುನಃ ಸ್ಥಾಪಿಸುವುದಕ್ಕಾಗಿ ದೇವರ ಒದಗಿಸುವಿಕೆಯನ್ನು ಪ್ರತಿನಿಧಿಸುತ್ತವೆ.
ಪ್ರಕಟನೆ ಪುಸ್ತಕದ ಪ್ರವಾದನಾ ದರ್ಶನಗಳು ಬೇಗನೆ ನಿಜತ್ವಗಳಾಗುವವು. (ಪ್ರಕಟನೆ 22:6, 7) ನಂತರ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯದ ಸಂಪೂರ್ಣ ಅನ್ವಯದೊಂದಿಗೆ, ಎಲ್ಲಾ ಸಹೃದಯಿಗಳು ಪರಿಪೂರ್ಣರಾಗುವರು ಮತ್ತು “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲು” ಹೊಂದುವರು. (ರೋಮಾಪುರ 8:21) ಬೈಬಲ್ ಪ್ರವಾದನೆಗಳ ನೆರವೇರಿಕೆಯು ಈ ಮಹಿಮಾಭರಿತ ಬಿಡುಗಡೆಯು ಹತ್ತಿರವಿದೆ ಎಂದು ತೋರಿಸಿಕೊಡುತ್ತದೆ. (ಪ್ರಕಟನೆ 6:1-8) ಬೇಗನೇ ದೇವರು ದುಷ್ಟತನವನ್ನು ಭೂಮಂಡಲದಿಂದ ತೊಲಗಿಸುವನು, ಮತ್ತು ಮಾನವರು ಪ್ರಮೋದವನವಾದ ಭೂಮಿಯಲ್ಲಿ ನಿತ್ಯ ಜೀವವನ್ನು ಅನುಭವಿಸುವರು. (ಯೋಹಾನ 3:16) ಅದು ವಾಸ್ತವದಲ್ಲಿ ಪಾಪರಹಿತ ಲೋಕವಾಗಿರುವುದು!
[ಪುಟ 7 ರಲ್ಲಿರುವ ಚಿತ್ರ]
ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಈ ತರಹದ ಕುಟುಂಬಗಳಿಗೆ ನಿತ್ಯ ಸಂತೋಷವನ್ನು ಅನುಭವಿಸುವಂತೆ ಸಹಾಯ ಮಾಡುವುದು