-
ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿಕಾವಲಿನಬುರುಜು—2011 | ನವೆಂಬರ್ 15
-
-
8 ಅನೇಕ ನಿಯಮಗಳನ್ನು ಹೊಂದಿದ್ದ ಧರ್ಮಶಾಸ್ತ್ರ ಪಾಪಿಗಳನ್ನು ಖಂಡಿಸಿತು. ಧರ್ಮಶಾಸ್ತ್ರದಡಿಯಲ್ಲಿ ಇಸ್ರಾಯೇಲ್ಯರ ಮಹಾ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದವರು ಅಪರಿಪೂರ್ಣರಾಗಿದ್ದ ಕಾರಣ ಪಾಪಗಳಿಗೆ ಸಮರ್ಪಕವಾದ ಯಜ್ಞವನ್ನು ಅರ್ಪಿಸಲು ಅವರಿಂದ ಅಸಾಧ್ಯವಾಗಿತ್ತು. ಈ ಅರ್ಥದಲ್ಲಿ ಧರ್ಮಶಾಸ್ತ್ರವು “ಶರೀರಭಾವದಿಂದ ಬಲಹೀನ” ಆಗಿತ್ತು. ಆದ್ದರಿಂದ ದೇವರು “ತನ್ನ ಸ್ವಂತ ಮಗನನ್ನು ಪಾಪಾಧೀನ ಶರೀರದ ರೂಪದಲ್ಲಿ ಕಳುಹಿಸಿ” ವಿಮೋಚನಾ ಮೌಲ್ಯವನ್ನು ಒದಗಿಸುವ ಮೂಲಕ “ಶರೀರದಲ್ಲಿರುವ ಪಾಪವನ್ನು ಖಂಡಿಸಿದನು.” ಹೀಗೆ ಧರ್ಮಶಾಸ್ತ್ರಕ್ಕೆ “ಯಾವುದನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ದೇವರು ಮಾಡಿದನು.” ಅಂದರೆ ಜನರನ್ನು ಪಾಪದಿಂದ ವಿಮೋಚಿಸಲು ಯೇಸುವಿನ ಯಜ್ಞದಿಂದ ಸಾಧ್ಯವಾಯಿತು. ಈ ವಿಮೋಚನಾ ಮೌಲ್ಯ ಯಜ್ಞದಲ್ಲಿ ಅಭಿಷಿಕ್ತ ಕ್ರೈಸ್ತರು ನಂಬಿಕೆ ಇಡುವುದರಿಂದ ದೇವರು ಅವರನ್ನು ನೀತಿವಂತರೆಂದು ವೀಕ್ಷಿಸುತ್ತಾನೆ. ಆ ನಿಲುವನ್ನು ಸದಾ ಕಾಪಾಡಿಕೊಳ್ಳಬೇಕಾದರೆ ಅವರು “ಶರೀರಭಾವಕ್ಕೆ ಅನುಸಾರವಾಗಿ ಅಲ್ಲ, ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯಬೇಕೆಂದು ಪೌಲ ಪ್ರೋತ್ಸಾಹಿಸಿದನು. (ರೋಮನ್ನರಿಗೆ 8:3, 4 ಓದಿ.) ಅವರು ತಮ್ಮ ಭೂಜೀವಿತದ ಕೊನೆಯ ವರೆಗೂ ಹೀಗೆ ನಿಷ್ಠೆಯಿಂದ ನಡೆಯಬೇಕು. ಆಗ ಮಾತ್ರ “ಜೀವದ ಕಿರೀಟವನ್ನು” ಪಡೆಯುವರು.—ಪ್ರಕ. 2:10.
-
-
ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿಕಾವಲಿನಬುರುಜು—2011 | ನವೆಂಬರ್ 15
-
-
10. ಪಾಪ ಮತ್ತು ಮರಣದ ನಿಯಮ ನಮ್ಮೆಲ್ಲರನ್ನು ಯಾವ ರೀತಿಯಲ್ಲಿ ನಿಯಂತ್ರಿಸುತ್ತದೆ?
10 “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ಅಪೊಸ್ತಲ ಪೌಲ ಬರೆದನು. (ರೋಮ. 5:12) ನಾವೆಲ್ಲರೂ ಆದಾಮನ ಮಕ್ಕಳಾಗಿರುವ ಕಾರಣ ಪಾಪ ಮತ್ತು ಮರಣದ ನಿಯಮ ನಮ್ಮೆಲ್ಲರನ್ನು ನಿಯಂತ್ರಿಸುತ್ತದೆ. ದೇವರಿಗೆ ಮೆಚ್ಚಿಕೆಯಾಗದ ಕೆಲಸಗಳನ್ನು ಮಾಡುವಂತೆ ನಮ್ಮ ಪಾಪಯುಕ್ತ ಶರೀರ ಸದಾ ಪ್ರಚೋದಿಸುತ್ತದೆ. ಇಂಥ ಕೆಲಸಗಳಿಗೆ ಸಿಗುವ ಫಲ ಮರಣ. ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಈ ಪಾಪಪೂರ್ಣ ಪ್ರವೃತ್ತಿಗಳನ್ನು ಪೌಲ “ಶರೀರಭಾವದ ಕಾರ್ಯಗಳು” ಎಂದು ಕರೆದನು. ಮಾತ್ರವಲ್ಲ, “ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂದೂ ಹೇಳಿದನು. (ಗಲಾ. 5:19-21) ಆ ರೀತಿಯ ಜನರು “ಶರೀರಭಾವಕ್ಕೆ ಅನುಸಾರವಾಗಿ” ನಡೆಯುತ್ತಾರೆ. (ರೋಮ. 8:4) ಅವರ ಪ್ರೇರಕಶಕ್ತಿ ಹಾಗೂ ಬದುಕಿನ ಮಟ್ಟ ಸಂಪೂರ್ಣವಾಗಿ ಶರೀರಭಾವಕ್ಕೆ ಅನುಸಾರವಾಗಿರುತ್ತದೆ. ಆದರೆ, “ಶರೀರಭಾವಕ್ಕೆ ಅನುಸಾರವಾಗಿ” ನಡೆಯುವವರು ಜಾರತ್ವ, ವಿಗ್ರಹಾರಾಧನೆ, ಮಾಟಮಂತ್ರ ಇನ್ನಿತರ ಘೋರ ಪಾಪಗಳನ್ನು ಮಾಡುವ ಜನರು ಮಾತ್ರನಾ? ಇಲ್ಲ. ಕೇವಲ ಬಲಹೀನತೆಯೆಂದು ಕೆಲವರು ನೆನಸುವ ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಮತ್ಸರ ಮುಂತಾದ ಗುಣಗಳು ಸಹ ಶರೀರಭಾವದ ಕಾರ್ಯಗಳಾಗಿವೆ. ಈಗ ಹೇಳಿ, ಶರೀರಭಾವಕ್ಕೆ ಅನುಸಾರವಾಗಿ ನಡೆಯದಿರಲು ನಮಲ್ಲಿ ಪ್ರತಿಯೊಬ್ಬರೂ ಹೋರಾಟ ಮಾಡಲೇಬೇಕಲ್ಲವೇ?
-
-
ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿಕಾವಲಿನಬುರುಜು—2011 | ನವೆಂಬರ್ 15
-
-
12 ನಮ್ಮ ಸ್ಥಿತಿ ದೊಡ್ಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಪರಿಸ್ಥಿತಿಯಂತಿದೆ. ಸಂಪೂರ್ಣವಾಗಿ ಗುಣಮುಖರಾಗಲು ಬಯಸುವಲ್ಲಿ ವೈದ್ಯನು ಹೇಳಿದಂತೆ ಮಾಡಬೇಕು. ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ ಪಾಪ ಮತ್ತು ಮರಣದ ನಿಯಮದಿಂದ ನಾವು ಬಿಡುಗಡೆ ಹೊಂದುತ್ತೇವಾದರೂ ನಾವಿನ್ನೂ ಅಪರಿಪೂರ್ಣರೂ ಪಾಪಿಗಳೂ ಆಗಿದ್ದೇವೆ. ಆಧ್ಯಾತ್ಮಿಕವಾಗಿ ಸುದೃಢ ಆರೋಗ್ಯ ಪಡೆಯಬೇಕಾದರೆ ಹಾಗೂ ದೇವರ ಅನುಗ್ರಹ, ಆಶೀರ್ವಾದವನ್ನು ಹೊಂದಬೇಕಾದರೆ ನಾವೊಂದು ವಿಷಯ ಮಾಡಬೇಕು. ಪೌಲ ಹೇಳಿದಂತೆ ನಾವು “ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯಬೇಕು.
“ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯುವುದು ಹೇಗೆ?
13. “ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯುವುದು ಎಂದರೇನು?
13 ನಡೆಯುವಾಗ ನಾವು ಮುಂದೆ ಸಾಗುತ್ತೇವಲ್ಲವೆ. ಅದೇ ರೀತಿ ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆಯಲು ನಾವು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿರಬೇಕು. (1 ತಿಮೊ. 4:15) ಇದಕ್ಕಾಗಿ ನಾವು ಪರಿಪೂರ್ಣರು ಆಗಿರಬೇಕೆಂದಿಲ್ಲ. ದಿನ ದಿನವೂ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರ ಜೀವಿಸುತ್ತಾ ಮುನ್ನಡೆಯಲು ಆದಷ್ಟು ಶ್ರಮಿಸಬೇಕಷ್ಟೆ. “ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ” ಇರುವುದಾದರೆ ದೇವರು ನಮ್ಮನ್ನು ಮೆಚ್ಚುವನು.—ಗಲಾ. 5:16.
-