ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳು ನಿಮಗೆ ಪ್ರಾಯೋಗಿಕ ಮೌಲ್ಯವುಳ್ಳವುಗಳಾಗಿದ್ದವೆಂದು ನೀವು ಕಂಡುಕೊಂಡಿದ್ದೀರೊ? ಹಾಗಿರುವಲ್ಲಿ, ಈ ಕೆಳಗಿನ ಪ್ರಶ್ನೆಗಳೊಂದಿಗೆ ನಿಮ್ಮ ಜ್ಞಾಪಕಶಕ್ತಿಯನ್ನು ಏಕೆ ಪರೀಕ್ಷಿಸಿ ನೋಡಬಾರದು?
◻ ಅನೇಕ ಕ್ರೈಸ್ತರು ಉದ್ಯೋಗ ಸಂಬಂಧಿತ ನಿರ್ಣಯಗಳನ್ನು ಮಾಡುವಾಗ ಒಂದು ವೈಯಕ್ತಿಕ ನಿರ್ಣಯವನ್ನು ಮಾಡುವುದರಲ್ಲಿ ಯಾವ ಎರಡು ಪ್ರಶ್ನೆಗಳು ಸಹಾಯ ಮಾಡಿವೆ?
ಮೊದಲನೆಯ ಮುಖ್ಯ ಪ್ರಶ್ನೆಯು ಹೀಗಿದೆ: ಐಹಿಕ ಉದ್ಯೋಗವನ್ನು ಬೈಬಲು ಪ್ರತ್ಯೇಕವಾಗಿ ಖಂಡಿಸುತ್ತದೊ? ಎರಡನೆಯ ಪ್ರಶ್ನೆಯು ಹೀಗಿದೆ: ಈ ಉದ್ಯೋಗವು, ಖಂಡಿಸಲ್ಪಟ್ಟ ಆಚರಣೆಯಲ್ಲಿ ಒಬ್ಬನು ಭಾಗಿಯಾಗುವಂತೆ ಮಾಡುವುದೊ?—4/15, ಪುಟ 28.
◻ ‘ಮಾನವ ಸೃಷ್ಟಿಯು ವ್ಯರ್ಥತ್ವಕ್ಕೆ ಒಳಗಾದದ್ದು’ ಯಾವ ವಿಧದಲ್ಲಿ? (ರೋಮಾಪುರ 8:20)
ನಾವು ನಮ್ಮ ಮೂಲ ಹೆತ್ತವರಾದ ಆದಾಮ ಮತ್ತು ಹವ್ವರ ಕೃತ್ಯದ ಕಾರಣ “ವ್ಯರ್ಥತ್ವಕ್ಕೆ ಒಳಗಾದೆವು.” ಇದು ಸಂಭವಿಸಿದ್ದು, “ಸ್ವೇಚ್ಛೆಯಿಂದಲ್ಲ” ಅಥವಾ ವ್ಯಕ್ತಿಗತ ಆಯ್ಕೆಯ ಪರಿಣಾಮದಿಂದಲ್ಲ. ನಾವಿದನ್ನು ಪಿತ್ರಾರ್ಜಿತವಾಗಿ ಪಡೆದುಕೊಂಡೆವು. ನಮ್ಮ ಮೂಲ ಹೆತ್ತವರು ಈಗ ಅಪರಿಪೂರ್ಣತೆ, ಪಾಪ ಮತ್ತು ಮರಣಗಳನ್ನು ಮಾತ್ರವೇ ದಾಟಿಸಶಕ್ತರಾಗಿದ್ದರೂ, ಮಕ್ಕಳನ್ನು ಪಡೆಯುವ ಅನುಮತಿಯನ್ನು ಯೆಹೋವನು ನೀಡಿರುವುದು ಆತನ ಕೃಪೆಯಿಂದಲೇ. ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು, ಹೀಗೆ ಆ ಅರ್ಥದಲ್ಲಿ ದೇವರು ‘[ಸೃಷ್ಟಿಯನ್ನು] ವ್ಯರ್ಥತ್ವಕ್ಕೆ ಒಳಪಡಿಸಿದನು.’—5/1, ಪುಟ 5.
◻ “ಅಸಹ್ಯವಸ್ತು” ಭವಿಷ್ಯತ್ತಿನಲ್ಲಿ ‘ಪವಿತ್ರ ಸ್ಥಾನದಲ್ಲಿ ನಿಲ್ಲುವುದು’ ಎಂದು ಹೇಳುವುದು ಏಕೆ ತರ್ಕಸಮ್ಮತವಾಗಿದೆ? (ಮತ್ತಾಯ 24:15)
ಗತಕಾಲದ ಉದಾಹರಣೆಯಲ್ಲಿ, ‘ಪವಿತ್ರ ಸ್ಥಾನದಲ್ಲಿ ನಿಂತಿರುವ ಅಸಹ್ಯವಸ್ತು’ ಸಾ.ಶ. 66ರಲ್ಲಿ ಜನರಲ್ ಗ್ಯಾಲಸನು ಮಾಡಿದ ರೋಮನ್ ದಾಳಿಗೆ ಸಂಬಂಧಿಸಿತ್ತು. ಆ ದಾಳಿಯ ಆಧುನಿಕ ದಿನದ ಸಮಾಂತರವು, ಅಂದರೆ ಮಹಾ ಸಂಕಟದ ಆರಂಭವು ಭವಿಷ್ಯತ್ತಿನಲ್ಲಿ ಜರುಗಲಿದೆ. (ಮತ್ತಾಯ 24:21) ಆದುದರಿಂದ “ಹಾಳುಮಾಡುವ ಅಸಹ್ಯವಸ್ತುವು” ಪವಿತ್ರಸ್ಥಾನದಲ್ಲಿ ನಿಲ್ಲುವ ಸಮಯವು ಇನ್ನೂ ಮುಂದಿದೆ.—5/1, ಪುಟಗಳು 16, 17.
◻ ಉದ್ಯೋಗಸ್ಥ ತಂದೆತಾಯಂದಿರು ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಹೇಗೆ ಶಕ್ತರಾಗಬಹುದು?
ದಿನವೆಲ್ಲ ಕೆಲಸಮಾಡಿ ದಣಿದುಹೋಗಿರುವ ಒಬ್ಬ ಉದ್ಯೋಗಸ್ಥ ತಾಯಿಯು, ಊಟವನ್ನು ತಯಾರಿಸಲು ಮಕ್ಕಳು ತನ್ನೊಂದಿಗೆ ಜೊತೆಗೂಡುವಂತೆ ಕೇಳಿಕೊಳ್ಳಬಹುದು. ವಾರಾಂತ್ಯಗಳಲ್ಲಿ ಮಾಡಬೇಕಾದ ಕೆಲಸಗಳ ಒಂದು ದೊಡ್ಡ ಪಟ್ಟಿಯೇ ಇರುವ ತಂದೆಯು, ಈ ಕೆಲಸಗಳಲ್ಲಿ ಕೆಲವೊಂದನ್ನು ತನ್ನ ಮಕ್ಕಳೊಂದಿಗೆ ಮಾಡಬಹುದು.—5/15, ಪುಟ 6.
◻ ‘ಯೆಹೋವನ ಮಾರ್ಗದಲ್ಲಿ ನಡೆಯುವವರು’ ಏನನ್ನು ಮಾಡತಕ್ಕದ್ದು? (ಯೆರೆಮೀಯ 7:23)
ಯೆಹೋವನ ಮಾರ್ಗದಲ್ಲಿ ನಡೆಯುವುದು ನಿಷ್ಠೆಯನ್ನು, ಅಂದರೆ ಆತನನ್ನು ಮಾತ್ರ ಸೇವಿಸುವ ದೃಢನಿರ್ಧಾರವನ್ನು ಕೇಳಿಕೊಳ್ಳುತ್ತದೆ. ಅದು ಭರವಸೆಯನ್ನು, ಅಂದರೆ ಯೆಹೋವನ ವಾಗ್ದಾನಗಳು ಭರವಸಯೋಗ್ಯ ಮತ್ತು ಖಂಡಿತವಾಗಿಯೂ ನಿಜವಾಗುವವೆಂಬ ಸಂಪೂರ್ಣ ನಂಬಿಕೆಯನ್ನು ಕೇಳಿಕೊಳ್ಳುತ್ತದೆ. ಯೆಹೋವನ ಮಾರ್ಗದಲ್ಲಿ ನಡೆಯುವುದು ವಿಧೇಯತೆಯನ್ನು, ಅಂದರೆ ದಾರಿತಪ್ಪದೆ ಆತನ ನಿಯಮವನ್ನು ಅನುಸರಿಸುವುದು ಮತ್ತು ಆತನ ಉಚ್ಚ ಮಟ್ಟಗಳನ್ನು ಪಾಲಿಸುವುದನ್ನು ಕೇಳಿಕೊಳ್ಳುತ್ತದೆ. (ಕೀರ್ತನೆ 11:7)—5/15, ಪುಟ 14.
◻ ‘ಪುರುಷರ ರೂಪದಲ್ಲಿ ದಾನಗಳು’ ಯಾವ ನಾಲ್ಕು ಮುಖ್ಯ ಜವಾಬ್ದಾರಿಗಳನ್ನು ಪೂರೈಸಬಲ್ಲರು? (ಎಫೆಸ 4:8)
ಇವರು ನಮ್ಮನ್ನು ಕೋಮಲವಾಗಿ ಸರಿಪಡಿಸಬಲ್ಲರು, ನಮ್ಮನ್ನು ಪ್ರೀತಿಪೂರ್ವಕವಾಗಿ ಕಟ್ಟಬಲ್ಲರು, ನಾವು ಸಭೆಯೊಂದಿಗೆ ಐಕ್ಯಗೊಳ್ಳುವಂತೆ ನೆರವಾಗಬಲ್ಲರು ಮತ್ತು ನಮ್ಮನ್ನು ಧೈರ್ಯದಿಂದ ಸಂರಕ್ಷಿಸಬಲ್ಲರು. (ಎಫೆಸ 4:12-14)—6/1, ಪುಟ 14.
◻ ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಮತ್ತು ಪೌಲನ ಪತ್ರಿಕೆಗಳಲ್ಲಿ ಉಲ್ಲೇಖಿಸಲಾದ ಸುಮಾರು ನೂರು ವ್ಯಕ್ತಿಗಳೊಂದಿಗೆ ಪೌಲನ ಸಹವಾಸದಿಂದ ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ?
ನಾವು ಯಾವಾಗಲೂ ದೇವರ ಸಂಸ್ಥಾಪನೆಯೊಂದಿಗೆ, ನಮ್ಮ ಸ್ಥಳೀಯ ಸಭೆಯೊಂದಿಗೆ ಮತ್ತು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಕೆಲಸಮಾಡುತ್ತಿರಬೇಕು. ನಮಗೆ ಅನುಕೂಲವಾದ ಸಮಯಗಳಲ್ಲಿ ಹಾಗೂ ಅನನುಕೂಲಕರವಾದ ಸಮಯಗಳಲ್ಲಿ ಅವರ ಸಹಾಯ, ಬೆಂಬಲ ಹಾಗೂ ಸಾಂತ್ವನದ ಅಗತ್ಯವಿರುತ್ತದೆ.—6/1, ಪುಟ 31.
◻ ಸೃಷ್ಟಿಕರ್ತನ ಕುರಿತು ಇತರರು ಯೋಚಿಸುವಂತೆ ಸಹಾಯ ಮಾಡಲು ಯಾವ ಮೂರು ತರ್ಕಸರಣಿಗಳನ್ನು ಉಪಯೋಗಿಸಬಹುದು?
ವ್ಯಾಪಕವಾದ ವಿಶ್ವದಲ್ಲಿ ಪ್ರತಿಬಿಂಬಿತವಾಗುವ ನಿಷ್ಕೃಷ್ಟತೆ, ಭೂಮಿಯ ಮೇಲೆ ಜೀವದ ಆರಂಭ, ಮತ್ತು ವಿಭಿನ್ನ ಸಾಮರ್ಥ್ಯಗಳಿರುವ ಮಾನವ ಮಿದುಳಿನ ಅಲ್ಲಗಳೆಯಲಾಗದ ಅಸದೃಶತೆ.—6/15, ಪುಟ 18.
◻ ಸೃಷ್ಟಿಕರ್ತನ ವೈಯಕ್ತಿಕವಾದ ಹೆಸರಿನ ಅರ್ಥವನ್ನು ತಿಳಿದುಕೊಳ್ಳುವುದು ಯಾಕೆ ಅಷ್ಟು ಪ್ರಾಮುಖ್ಯವಾಗಿದೆ?
ದೇವರ ಹೆಸರಿನ ಅರ್ಥ “ಆತನು ಆಗಿಸುತ್ತಾನೆ” ಎಂದಾಗಿದ್ದು, ಆತನು ಉದ್ದೇಶಿಸುತ್ತಾನೆ ಮತ್ತು ಕ್ರಿಯೆಗೈಯುತ್ತಾನೆಂಬುದನ್ನು ಅದು ಒತ್ತಿಹೇಳುತ್ತದೆ. ಆತನ ಹೆಸರನ್ನು ಅರಿತು, ಅದನ್ನು ಉಪಯೋಗಿಸುವ ಮೂಲಕ, ಆತನು ವಾಗ್ದಾನಗಳನ್ನು ನೆರವೇರಿಸುತ್ತಾನೆಂದು ಮತ್ತು ತನ್ನ ಉದ್ದೇಶವನ್ನು ಕ್ರಿಯಾಶೀಲವಾಗಿ ಪೂರ್ತಿಗೊಳಿಸುತ್ತಾನೆಂದು ನಾವು ತಿಳಿದುಕೊಳ್ಳಬಲ್ಲೆವು.—6/15, ಪುಟ 21.
◻ ಕುಟುಂಬ ಬೈಬಲ್ ಅಧ್ಯಯನದಲ್ಲಿ ಮಕ್ಕಳನ್ನು ಒಳಗೂಡಿಸಲು ಏನನ್ನು ಮಾಡಸಾಧ್ಯವಿದೆ?
ಸಾಧ್ಯವಿರುವಲ್ಲಿ, ಪ್ರತಿಯೊಂದು ಮಗುವು ತನ್ನ ಸ್ವಂತ ಬೈಬಲ್ ಹಾಗೂ ಅಧ್ಯಯನ ಸಾಹಿತ್ಯವನ್ನು ಹೊಂದಿರುವಂತೆ ಏರ್ಪಡಿಸಿರಿ. ಅಧ್ಯಯನದ ವಿಷಯದೊಂದಿಗೆ ಮೂಡಿಬರುವ ಒಂದು ಚಿತ್ರವನ್ನು ಎಳೆಯನೊಬ್ಬನು ವಿವರಿಸುವಂತೆ ಕುಟುಂಬದ ತಲೆಯು ನೇಮಿಸಬಹುದು. ಮಗುವು ಒಂದು ನಿರ್ದಿಷ್ಟ ವಚನವನ್ನು ಓದುವಂತೆ ಮುಂಚಿತವಾಗಿಯೇ ನೇಮಿಸಸಾಧ್ಯವಿದೆ. ಅಧ್ಯಯನ ವಿಷಯವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಸಂದರ್ಭಗಳನ್ನು ಹಿರಿಯ ಮಕ್ಕಳು ಹೇಳುವಂತೆ ನೇಮಿಸಬಹುದು.—7/1, ಪುಟ 15.
◻ ಸಭಾಕೂಟಗಳಿಗಾಗಿ ತಯಾರಿಸುವುದರಲ್ಲಿ ಕುಟುಂಬವೊಂದು ಒಳಗೂಡಿಸಸಾಧ್ಯವಿರುವ ಕೆಲವು ಗುರಿಗಳಾವುವು?
(1) ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಸಭಾ ಕೂಟಗಳಲ್ಲಿ ಉತ್ತರಗಳನ್ನು ಕೊಡಲು ಸಿದ್ಧರಾಗಿರುವುದು, (2) ಪ್ರತಿಯೊಬ್ಬರೂ ಸ್ವಂತ ಮಾತುಗಳಲ್ಲಿ ಉತ್ತರ ಕೊಡಲು ಪ್ರಯತ್ನಿಸುವುದು, (3) ಉತ್ತರಗಳಲ್ಲಿ ವಚನಗಳನ್ನು ಸೇರಿಸುವುದು, ಮತ್ತು (4) ವೈಯಕ್ತಿಕ ಅನ್ವಯವನ್ನು ಮಾಡುವ ಉದ್ದೇಶದಿಂದ ವಿಷಯವನ್ನು ವಿಶ್ಲೇಷಿಸುವುದು.—7/1, ಪುಟ 20.
◻ ಸುಖೀ ವಿವಾಹಕ್ಕೆ ಕೀಲಿಕೈ ಯಾವುದು?
ಸುಖೀ ವಿವಾಹದ ಅಮೂಲ್ಯ ಸಂತೋಷಗಳ ಬೀಗವನ್ನು ತೆರೆದು ಅದನ್ನು ಅನುಭವಿಸಲಿಕ್ಕಾಗಿ ಅತ್ಯಾವಶ್ಯಕವಾಗಿರುವ ಒಂದು ಸಂಗತಿಯು, ಹಿತಕರವಾದ ಸಂವಾದವೇ. ಇದರಲ್ಲಿ ಭಾವನೆಗಳು ಮತ್ತು ವಿಚಾರಗಳ ಹಂಚಿಕೊಳ್ಳುವಿಕೆಯು ಒಳಗೂಡಿರುತ್ತದೆ. ಅಷ್ಟೇ ಅಲ್ಲ ಹಿತಕರವಾದ ಸಂವಾದದಲ್ಲಿ, ಹುರಿದುಂಬಿಸುವ, ಚೈತನ್ಯಗೊಳಿಸುವ, ಸದ್ಗುಣಶೀಲ, ಸ್ತುತಿಯೋಗ್ಯ ಮತ್ತು ಸಾಂತ್ವನಪಡಿಸುವ ವಿಷಯಗಳು ಒಳಗೂಡಿವೆ. (ಎಫೆಸ 4:29-32; ಫಿಲಿಪ್ಪಿ 4:8)—7/15, ಪುಟ 21.
◻ ‘ಯೆಹೋವನ ಮಾರ್ಗ’ವು ಯಾವುದು? (ಕೀರ್ತನೆ 25:8, 9, 12)
ಆ ಮಾರ್ಗವು ಪ್ರೀತಿಯ ಮಾರ್ಗವಾಗಿದೆ. ಅದು ದೇವರ ಮಟ್ಟಗಳಿಗನುಸಾರ, ಸರಿಯಾಗಿರುವುದನ್ನು ಮಾಡುವುದರ ಮೇಲೆ ಅವಲಂಬಿಸಿದೆ. ಬೈಬಲು ಈ ತತ್ವಾಧಾರಿತವಾದ ಪ್ರೀತಿಯ ಅನ್ವಯವನ್ನು ‘ಉತ್ಕೃಷ್ಟವಾದ ಮಾರ್ಗ’ವೆಂಬುದಾಗಿ ಕರೆಯುತ್ತದೆ. (1 ಕೊರಿಂಥ 12:31)—8/1, ಪುಟ, 12.