-
ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣಕಾವಲಿನಬುರುಜು—2012 | ಮಾರ್ಚ್ 15
-
-
10, 11. (1) ಬೇರೆ ಕುರಿಗಳಿಗೆ ಯಾವ ನಿರೀಕ್ಷೆಯಿದೆ? (2) ಭೂನಿರೀಕ್ಷೆಯ ನೆರವೇರಿಕೆಯು ಕ್ರಿಸ್ತನಿಗೆ ಮತ್ತು ‘ದೇವರ ಪುತ್ರರು ಪ್ರಕಟವಾಗುವುದಕ್ಕೆ’ ಹೇಗೆ ಸಂಬಂಧಿಸಿದೆ?
10 ಕ್ರಿಸ್ತನೊಂದಿಗೆ ‘ಜೊತೆ ಬಾಧ್ಯರಾಗುವ’ ಮಹಿಮಾಭರಿತ ನಿರೀಕ್ಷೆಯನ್ನು ದೇವರ ಆತ್ಮಜನಿತ “ಪುತ್ರರು” ಹೊಂದಿದ್ದಾರೆ. ಇದರ ಕುರಿತು ಅಪೊಸ್ತಲ ಪೌಲ ಬರೆದ ಬಳಿಕ ಅಸಂಖ್ಯಾತ ಬೇರೆ ಕುರಿಗಳಿಗೆ ಯೆಹೋವನು ಇಟ್ಟಿರುವ ಆಶ್ಚರ್ಯಕರ ನಿರೀಕ್ಷೆಯ ಬಗ್ಗೆ ಹೇಳಿದನು: “ದೇವರ ಪುತ್ರರು [ಅಭಿಷಿಕ್ತರು] ಪ್ರಕಟವಾಗುವುದಕ್ಕಾಗಿ [ಮಾನವ] ಸೃಷ್ಟಿಯು ಬಹಳ ತವಕದಿಂದ ಎದುರುನೋಡುತ್ತಿದೆ. ಏಕೆಂದರೆ ಸೃಷ್ಟಿಯು ತನ್ನ ಸ್ವಂತ ಇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದಾತನ ಇಚ್ಛೆಯಿಂದಲೇ ನಿರೀಕ್ಷೆಯ ಆಧಾರದಲ್ಲಿ ವ್ಯರ್ಥತ್ವಕ್ಕೆ ಒಳಗಾಯಿತು. ಆ ನಿರೀಕ್ಷೆ ಏನೆಂದರೆ, ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುವುದೇ.”—ರೋಮ. 8:14-21.
-
-
ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣಕಾವಲಿನಬುರುಜು—2012 | ಮಾರ್ಚ್ 15
-
-
12. ಅಭಿಷಿಕ್ತರ ಪ್ರಕಟವಾಗುವಿಕೆ ಮಾನವಕುಲಕ್ಕೆ ಯಾವ ಮಹಿಮಾಭರಿತ ಪ್ರಯೋಜನಗಳನ್ನು ತರುವುದು?
12 ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಮಾನವ ‘ಸೃಷ್ಟಿಗೆ’ ಸಿಗಲಿರುವ ಉಪಶಮನವೋ ಅಗಾಧ! ಆ ಸಮಯದಲ್ಲಿ ಮಹಿಮೆಗೇರಿಸಲ್ಪಟ್ಟ “ದೇವರ ಪುತ್ರರು” ಕ್ರಿಸ್ತನೊಂದಿಗೆ ಯಾಜಕರಾಗಿ ಸೇವೆ ಮಾಡುವಾಗ ಇನ್ನೂ ಹೆಚ್ಚಾಗಿ “ಪ್ರಕಟ”ವಾಗುವರು. ಮಾನವರು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಪ್ರಯೋಜನಗಳನ್ನು ಹೊಂದುವಂತೆ ಅವರು ಸಹಾಯ ಮಾಡುವರು. ಆಗ ಸ್ವರ್ಗೀಯ ರಾಜ್ಯದ ಪ್ರಜೆಯಾಗಿರುವ ಮಾನವ “ಸೃಷ್ಟಿ” ಪಾಪ, ಮರಣಗಳ ಪರಿಣಾಮಗಳಿಂದ ಮುಕ್ತಿ ಪಡೆಯಲಾರಂಭಿಸುವುದು. ವಿಧೇಯ ಮಾನವರು ಕ್ರಮೇಣ “ನಾಶದ ದಾಸತ್ವದಿಂದ ಬಿಡುಗಡೆ” ಹೊಂದುವರು. ಕ್ರಿಸ್ತನ ಸಾವಿರ ವರುಷಗಳ ಆಳ್ವಿಕೆಯ ಸಮಯದಲ್ಲಿ ಮತ್ತು ಅದರ ಅಂತ್ಯದಲ್ಲಿ ಬರುವ ಕೊನೆಯ ಪರೀಕ್ಷೆಯಲ್ಲಿ ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೆ ಅವರ ಹೆಸರುಗಳು “ಜೀವದ ಸುರುಳಿ”ಯಲ್ಲಿ ಚಿರಸ್ಥಾಯಿಯಾಗಿ ಬರೆಯಲ್ಪಡುವುವು. ಅವರು “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದುವರು. (ಪ್ರಕ. 20:7, 8, 11, 12) ಇದು ಮಹಿಮಾಭರಿತ ನಿರೀಕ್ಷೆಯೇ ಸರಿ!
-