-
ಯೆಹೋವನ ಕೈ ಮೋಟುಗೈಯಲ್ಲಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
17. ಚೀಯೋನನ್ನು ವಿಮೋಚಿಸುವವನಾರು, ಮತ್ತು ಆತನು ಚೀಯೋನನ್ನು ಯಾವಾಗ ವಿಮೋಚಿಸುತ್ತಾನೆ?
17 ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಇಸ್ರಾಯೇಲ್ಯನು ತನ್ನನ್ನೇ ದಾಸತ್ವಕ್ಕೆ ಮಾರಿಕೊಂಡರೆ, ವಿಮೋಚಕನಾದ ಒಬ್ಬ ವ್ಯಕ್ತಿಯು ಅವನಿಗಾಗಿ ಈಡುಕೊಟ್ಟು ಅವನನ್ನು ದಾಸತ್ವದಿಂದ ಬಿಡಿಸಿಕೊಳ್ಳಬಹುದಿತ್ತು. ಈ ಹಿಂದೆ, ಯೆಶಾಯನ ಪ್ರವಾದನ ಪುಸ್ತಕದಲ್ಲಿ ಯೆಹೋವನನ್ನು ಪಶ್ಚಾತ್ತಾಪಪಡುವ ವ್ಯಕ್ತಿಗಳ ವಿಮೋಚಕನಾಗಿ ಚಿತ್ರಿಸಲಾಗಿತ್ತು. (ಯೆಶಾಯ 48:17) ಈಗ ಪುನಃ ಒಮ್ಮೆ ಆತನನ್ನು ಪಶ್ಚತ್ತಾಪಪಡುವವರ ವಿಮೋಚಕನಾಗಿ ವರ್ಣಿಸಲಾಗುತ್ತದೆ. ಯೆಹೋವನ ವಾಗ್ದಾನವನ್ನು ಯೆಶಾಯನು ದಾಖಲಿಸುತ್ತಾನೆ: “ಆದರೆ ಚೀಯೋನಿಗೂ ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ವಿಮೋಚಕನಾಗಿ ಬರುವನು. ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 59:20) ಪುನರಾಶ್ವಾಸನೆಯನ್ನು ಕೊಡುವ ಈ ವಾಗ್ದಾನವು ಸಾ.ಶ.ಪೂ. 537ರಲ್ಲಿ ನೆರವೇರಿತಾದರೂ, ಅದಕ್ಕೆ ಇನ್ನೊಂದು ನೆರವೇರಿಕೆಯಿದೆ. ಈ ಮಾತುಗಳನ್ನು ಅಪೊಸ್ತಲ ಪೌಲನು ಸೆಪ್ಟ್ಯುಅಜಿಂಟ್ ಭಾಷಾಂತರದಿಂದ ಉಲ್ಲೇಖಿಸಿ, ಅವುಗಳನ್ನು ಕ್ರೈಸ್ತರಿಗೆ ಅನ್ವಯಿಸಿದ್ದಾನೆ. ಅವನು ಬರೆದುದು: “ಆ ಮೇಲೆ ಇಸ್ರಾಯೇಲ್ ಜನವೆಲ್ಲಾ ರಕ್ಷಣೆಹೊಂದುವದು. ಇದಕ್ಕೆ ಆಧಾರವಾಗಿ ಶಾಸ್ತ್ರದಲ್ಲಿ—ಬಿಡಿಸುವವನು ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು. ನಾನು ಅವರ ಸಂಗಡ ಮಾಡಿಕೊಂಡ ಈ ಒಡಂಬಡಿಕೆಯು ನಾನು ಅವರ ಪಾಪಗಳನ್ನು ಪರಿಹರಿಸುವಾಗ ನೆರವೇರುವದು ಎಂದು ಬರೆದದೆ.” (ರೋಮಾಪುರ 11:26, 27) ಹೌದು, ಯೆಶಾಯನ ಪ್ರವಾದನೆಗೆ ಹೆಚ್ಚು ವಿಸ್ತಾರವಾದ ಅನ್ವಯವಿದೆ, ಅಂದರೆ ನಮ್ಮ ದಿನಗಳ ವರೆಗೂ ಮುಟ್ಟಿ ಅದನ್ನು ದಾಟಿಹೋಗುವ ಅನ್ವಯವಿದೆ. ಅದು ಹೇಗೆ?
-
-
ಯೆಹೋವನ ಕೈ ಮೋಟುಗೈಯಲ್ಲಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
19. ದೇವರ ಇಸ್ರಾಯೇಲಿನೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡುತ್ತಾನೆ?
19 ಈಗ ಯೆಹೋವನು ದೇವರ ಇಸ್ರಾಯೇಲಿನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ನಾವು ಓದುವುದು: “ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ; ನಿಮ್ಮಲ್ಲಿ ಆವೇಶಿಸಿರುವ ನನ್ನ ಆತ್ಮವೂ ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ ನಿಮ್ಮ ಬಾಯಿಂದಾಗಲಿ ನಿಮ್ಮ ಸಂತತಿಯ ಬಾಯಿಂದಾಗಲಿ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 59:21) ಈ ಮಾತುಗಳು ಸ್ವತಃ ಯೆಶಾಯನಿಗೆ ಅನ್ವಯಿಸಿರಲಿ ಇಲ್ಲದಿರಲಿ, ಅವು ಖಂಡಿತವಾಗಿಯೂ ‘ಅವನು ತನ್ನ ಸಂತಾನವನ್ನು ನೋಡುವನು’ ಎಂಬ ಆಶ್ವಾಸನೆಯನ್ನು ಪಡೆದ ಯೇಸುವಿನಲ್ಲಿ ನೆರವೇರಿದವು. (ಯೆಶಾಯ 53:10) ಯೇಸು ಯೆಹೋವನಿಂದ ಕಲಿತಿದ್ದ ಮಾತುಗಳನ್ನು ಹೇಳಿದನು ಮತ್ತು ಅವನ ಮೇಲೆ ಯೆಹೋವನ ಆತ್ಮವು ನೆಲೆಸಿತು. (ಯೋಹಾನ 1:18; 7:16) ಯೋಗ್ಯವಾಗಿಯೇ, ಅವನ ಸಹೋದರರೂ ಜೊತೆ ಬಾಧ್ಯಸ್ಥರೂ ಆದ ದೇವರ ಇಸ್ರಾಯೇಲಿನ ಸದಸ್ಯರು ಸಹ ಯೆಹೋವನ ಪವಿತ್ರಾತ್ಮವನ್ನು ಪಡೆಯುತ್ತಾರೆ ಮತ್ತು ತಮ್ಮ ಸ್ವರ್ಗೀಯ ಪಿತನಿಂದ ಅವರು ಕಲಿತಿರುವ ಸಂದೇಶವೊಂದನ್ನು ಸಾರುತ್ತಾರೆ. ಅವರೆಲ್ಲರೂ “ಯೆಹೋವನಿಂದ ಶಿಕ್ಷಿತರಾಗಿರುವ” ವ್ಯಕ್ತಿಗಳಾಗಿದ್ದಾರೆ. (ಯೆಶಾಯ 54:13; ಲೂಕ 12:12; ಅ. ಕೃತ್ಯಗಳು 2:38) ಒಂದೊ ಯೆಶಾಯನ ಮೂಲಕ ಇಲ್ಲವೆ ಯೆಶಾಯನು ಪ್ರವಾದನಾರೂಪವಾಗಿ ಚಿತ್ರಿಸಿದ ಯೇಸುವಿನ ಮೂಲಕ ಯೆಹೋವನು ಈಗ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ಅದೇನೆಂದರೆ, ಇನ್ನೆಂದಿಗೂ ಅವರ ಸ್ಥಾನಪಲ್ಲಟಗೊಳಿಸದೇ ಅವರನ್ನು ಸದಾಕಾಲಕ್ಕೂ ತನ್ನ ಸಾಕ್ಷಿಗಳಾಗಿ ಉಪಯೋಗಿಸುವನೆಂಬುದೇ. (ಯೆಶಾಯ 43:10) ಆದರೆ ಈ ಒಡಂಬಡಿಕೆಯಿಂದ ಪ್ರಯೋಜನ ಪಡೆಯುವ ಅವರ “ಸಂತಾನ”ದವರು ಯಾರಾಗಿದ್ದಾರೆ?
-