ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕರಾಗಿರಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • 2. ನಾವು ಪ್ರತಿದಿನ ಹೇಗೆಲ್ಲಾ ಪ್ರಾಮಾಣಿಕರಾಗಿ ಇರಬಹುದು?

      ನಾವು “ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಬೇಕು” ಅಂತ ಯೆಹೋವ ದೇವರು ಬಯಸ್ತಾನೆ. (ಜೆಕರ್ಯ 8:16, 17) ಇದರ ಅರ್ಥ ಏನು? ನಾವು ಎಲ್ಲರ ಜೊತೆ ಪ್ರಾಮಾಣಿಕರಾಗಿ ಇರಬೇಕು. ನಮ್ಮ ಜೊತೆ ಕೆಲಸ ಮಾಡುವವರ, ಸಹೋದರ ಸಹೋದರಿಯರ ಅಥವಾ ಸರ್ಕಾರಿ ಅಧಿಕಾರಿಗಳ ಹತ್ತಿರ ಸುಳ್ಳು ಹೇಳಲ್ಲ ಅಥವಾ ಮುಖ್ಯವಾದ ವಿಷಯಗಳನ್ನ ಮುಚ್ಚಿಡಲ್ಲ. ಪ್ರಾಮಾಣಿಕ ಜನರು ಕದಿಯಲ್ಲ, ಮೋಸ ಮಾಡೋದಿಲ್ಲ. (ಜ್ಞಾನೋಕ್ತಿ 24:28 ಮತ್ತು ಎಫೆಸ 4:28 ಓದಿ.) ಅವರು ತೆರಿಗೆಯನ್ನ (ಟ್ಯಾಕ್ಸ್‌) ಪ್ರಾಮಾಣಿಕವಾಗಿ ಕಟ್ಟುತ್ತಾರೆ. (ರೋಮನ್ನರಿಗೆ 13:5-7) ಹೀಗೆ ಮಾಡೋದಾದ್ರೆ ನಾವು ‘ಎಲ್ಲ ವಿಷಯದಲ್ಲೂ ಪ್ರಾಮಾಣಿಕವಾಗಿ ಇರುತ್ತೇವೆ.’—ಇಬ್ರಿಯ 13:18.

  • ತಟಸ್ಥರಾಗಿರೋದು ಅಂದರೇನು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • ಪಾಠ 45. ಬೇರೆಯವರು ದೇಶಕ್ಕೆ ಸಂಬಂಧಪಟ್ಟ ಪ್ರತಿಜ್ಞೆಯನ್ನ ಮಾಡುತ್ತಿರುವಾಗ ಒಬ್ಬ ಯುವ ಸಹೋದರಿ ಗೌರವಪೂರ್ವಕವಾಗಿ ನಿಂತಿದ್ದಾಳೆ, ಅವಳು ಅದನ್ನ ಹೇಳುತ್ತಿಲ್ಲ ಮತ್ತು ಬೇರೆಯವರಂತೆ ತನ್ನ ಕೈಯನ್ನ ಎದೆ ಮೇಲೆ ಇಟ್ಟುಕೊಂಡಿಲ್ಲ.

      ಪಾಠ 45

      ತಟಸ್ಥರಾಗಿರೋದು ಅಂದರೇನು?

      ಯೇಸು ತನ್ನ ಶಿಷ್ಯರಿಗೆ ‘ಲೋಕದ ಜನ್ರ ತರ ಇರಬಾರದು’ ಅಂತ ಹೇಳಿದನು. (ಯೋಹಾನ 15:19) ಇದರಲ್ಲಿ ತಟಸ್ಥರಾಗಿರೋದು ಕೂಡ ಸೇರಿದೆ. ಹಾಗಾದ್ರೆ ತಟಸ್ಥರಾಗಿರೋದು ಅಂದರೆ ಏನು? ರಾಜಕೀಯದಲ್ಲಿ ಅಥವಾ ಯುದ್ಧಗಳಲ್ಲಿ ಯಾವುದೇ ಪಕ್ಷವಹಿಸದೆ ಇರೋದೇ ಆಗಿದೆ. ನಾವು ತಟಸ್ಥರಾಗಿ ಇರೋದ್ರಿಂದ ಜನರು ನಮ್ಮನ್ನ ಹೀಯಾಳಿಸಬಹುದು. ಹಾಗಾಗಿ ತಟಸ್ಥರಾಗಿರೋದು ಯಾವಾಗ್ಲೂ ಸುಲಭ ಅಲ್ಲ. ನಾವು ಹೇಗೆ ತಟಸ್ಥರಾಗಿ ಇರಬಹುದು? ಯೆಹೋವನಿಗೆ ನಿಷ್ಠೆ ತೋರಿಸುತ್ತಾ ಇರಬಹುದು?

      1. ಕ್ರೈಸ್ತರು ಸರ್ಕಾರಕ್ಕೆ ಗೌರವ ಕೊಡ್ತಾರಾ?

      ಕ್ರೈಸ್ತರಾದ ನಾವು ಸರ್ಕಾರಗಳಿಗೆ ಗೌರವ ಕೊಡುತ್ತೇವೆ. “ರಾಜಂದು ರಾಜನಿಗೆ ಕೊಡಿ” ಅನ್ನೋ ಮಾತನ್ನ ಪಾಲಿಸುತ್ತೇವೆ. ಹೇಗೆಂದರೆ ನಾವು ತೆರಿಗೆಯನ್ನ ಕಟ್ಟುತ್ತೇವೆ ಮತ್ತು ಸ್ಥಳೀಯ ನಿಯಮಗಳನ್ನ ಪಾಲಿಸುತ್ತೇವೆ. (ಮಾರ್ಕ 12:17) ಯೆಹೋವನ ಅನುಮತಿ ಇರೋದ್ರಿಂದನೇ ಈಗಿರುವ ಸರ್ಕಾರಗಳು ಅಧಿಕಾರದಲ್ಲಿವೆ ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 13:1) ಸರ್ಕಾರಿ ಅಧಿಕಾರಿಗಳಿಗೆ ಅಧಿಕಾರ ಇರೋದು ನಿಜ, ಆದರೆ ಅವರಿಗಿಂತ ಹೆಚ್ಚು ಅಧಿಕಾರ ಇರೋದು ಯೆಹೋವ ದೇವರಿಗೆ. ದೇವರ ಸರ್ಕಾರದಿಂದ ಮಾತ್ರ ಮಾನವರ ಸಮಸ್ಯೆಗಳನ್ನ ತೆಗೆದು ಹಾಕೋಕೆ ಸಾಧ್ಯ ಅಂತ ನಾವು ನಂಬುತ್ತೇವೆ.

      2. ನಾವು ಹೇಗೆಲ್ಲಾ ತಟಸ್ಥರಾಗಿ ಇರಬಹುದು?

      ಯೇಸು ಮಾಡಿದ ಒಂದು ಅದ್ಭುತವನ್ನ ನೋಡಿದ ಜನರು ಆತನನ್ನ ರಾಜನನ್ನಾಗಿ ಮಾಡಬೇಕು ಅಂತ ಅಂದುಕೊಂಡರು. ಆದ್ರೆ ಯೇಸು ಅದಕ್ಕೆ ಒಪ್ಪಲಿಲ್ಲ. (ಯೋಹಾನ 6:15) ಯೇಸು ತರ ನಾವೂ ಕೂಡ ರಾಜಕೀಯ ವಿಷಯಗಳಲ್ಲಿ ತಲೆ ಹಾಕಲ್ಲ. “ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಯೇಸು ಹೇಳಿದನು. (ಯೋಹಾನ 18:36) ಯೇಸು ತರ ನಾವೂ ಕೂಡ ತಟಸ್ಥರಾಗಿದ್ದೇವೆ ಅಂತ ಅನೇಕ ವಿಧಗಳಲ್ಲಿ ತೋರಿಸಬಹುದು. ಉದಾಹರಣೆಗೆ, ನಾವು ಯುದ್ಧಗಳಲ್ಲಿ ಭಾಗವಹಿಸಲ್ಲ. (ಮೀಕ 4:3 ಓದಿ.) ಧ್ವಜದಂಥ ರಾಷ್ಟ್ರೀಯ ಚಿಹ್ನೆಗಳನ್ನ ನಾವು ಗೌರವಿಸುತ್ತೇವೆ ಆದರೆ ಅದನ್ನ ಆರಾಧಿಸಲ್ಲ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ದೇವರಿಗೆ ಕೊಡಬೇಕಾದ ಗೌರವವನ್ನ ಅವುಗಳಿಗೆ ಕೊಡಲ್ಲ. (1 ಯೋಹಾನ 5:21) ಅಷ್ಟೇ ಅಲ್ಲ, ಯಾವುದೇ ರಾಜಕೀಯ ಅಥವಾ ಪ್ರತಿನಿಧಿಯ ಪಕ್ಷ ವಹಿಸೋದು ಇಲ್ಲ, ವಿರೋಧಿಸೋದು ಇಲ್ಲ. ಹೀಗೆ ನಾವು ದೇವರ ಸರ್ಕಾರಕ್ಕೆ ಮಾತ್ರ ಪೂರ್ತಿ ನಿಷ್ಠೆಯನ್ನ ತೋರಿಸುತ್ತೇವೆ.

      ಹೆಚ್ಚನ್ನ ತಿಳಿಯೋಣ

      ತಟಸ್ಥರಾಗಿರಲು ಕಷ್ಟವಾದ ಸನ್ನಿವೇಶಗಳು ಯಾವುವು ಅಂತ ನೋಡಿ. ಅಂಥ ಸನ್ನಿವೇಶಗಳಲ್ಲಿ ಯೆಹೋವ ದೇವರಿಗೆ ಮೆಚ್ಚಿಗೆಯಾಗುವ ನಿರ್ಧಾರಗಳನ್ನ ಹೇಗೆ ಮಾಡಬಹುದು ಅಂತನೂ ತಿಳಿಯಿರಿ.

      ಎರಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಬೆಂಬಲಿಗರ ಜೊತೆ ಮಾತಾಡುತ್ತಿದ್ದಾರೆ. ಆದರೆ ಒಬ್ಬ ಅವರಿಬ್ಬರ ಪಕ್ಷನೂ ವಹಿಸದೆ ತಟಸ್ಥನಾಗಿದ್ದಾನೆ.

      3. ಕ್ರೈಸ್ತರು ತಟಸ್ಥರಾಗಿ ಇರುತ್ತಾರೆ

      ಇದಕ್ಕೆ ಯೇಸು ಮತ್ತು ಆತನ ಶಿಷ್ಯರು ಒಳ್ಳೆಯ ಮಾದರಿ ಇಟ್ಟಿದ್ದಾರೆ. ರೋಮನ್ನರಿಗೆ 13:1, 5-7 ಮತ್ತು 1 ಪೇತ್ರ 2:13, 14 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.

      ವಿಡಿಯೋ: ನಿಜ ಕ್ರೈಸ್ತರು ತಟಸ್ಥರಾಗಿರುತ್ತಾರೆ—ಭಾಗ 1 (4:28)

      • ನಾವು ಯಾಕೆ ಸರ್ಕಾರಿ ಅಧಿಕಾರಿಗಳಿಗೆ ಗೌರವ ತೋರಿಸಬೇಕು?

      • ನಾವು ಅವರ ಮಾತು ಕೇಳುತ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು?

      ಯುದ್ಧಗಳು ನಡೆಯುತ್ತಿರುವಾಗ ಕೆಲವು ದೇಶದವರು ತಾವು ತಟಸ್ಥರಾಗಿದ್ದೇವೆ ಅಂತ ಹೇಳುತ್ತಾರೆ ಆದರೆ ಅವರು ಯುದ್ಧ ಮಾಡುತ್ತಿರುವ ಎರಡೂ ದೇಶದವರಿಗೆ ಬೆಂಬಲ ಕೊಡುತ್ತಾರೆ. ಹಾಗಾದ್ರೆ ನಿಜವಾಗಿಯೂ ತಟಸ್ಥರಾಗಿರೋದು ಅಂದರೆ ಏನು? ಯೋಹಾನ 17:16 ಓದಿ, ನಂತರ ವಿಡಿಯೋ ನೋಡಿ ಮತ್ತು ಈ ಪ್ರಶ್ನೆಯನ್ನ ಚರ್ಚಿಸಿ.

      ವಿಡಿಯೋ: ನಿಜ ಕ್ರೈಸ್ತರು ತಟಸ್ಥರಾಗಿರುತ್ತಾರೆ—ಭಾಗ 2 (3:11)

      • ತಟಸ್ಥರಾಗಿರೋದು ಅಂದರೆ ಏನು?

      ಒಂದುವೇಳೆ ಸರ್ಕಾರದ ನಿಯಮಗಳು ದೇವರ ನಿಯಮಕ್ಕೆ ವಿರುದ್ಧವಾಗಿದ್ರೆ ಏನು ಮಾಡಬೇಕು? ಅಪೊಸ್ತಲರ ಕಾರ್ಯ 5:28, 29 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.

      ವಿಡಿಯೋ: ನಿಜ ಕ್ರೈಸ್ತರು ತಟಸ್ಥರಾಗಿರುತ್ತಾರೆ—ಭಾಗ 3 (1:18)

      • ದೇವರ ನಿಯಮಕ್ಕೆ ವಿರುದ್ಧವಾದ ವಿಷಯಗಳನ್ನ ಸರ್ಕಾರಿ ಅಧಿಕಾರಿಗಳು ಮಾಡಕ್ಕೆ ಹೇಳಿದ್ರೆ ನೀವೇನು ಮಾಡುತ್ತೀರಾ?

      • ಒಬ್ಬ ಕ್ರೈಸ್ತನು ಯಾವೆಲ್ಲಾ ಸನ್ನಿವೇಶಗಳಲ್ಲಿ ಅಧಿಕಾರಿಗಳ ಮಾತನ್ನ ಕೇಳಲ್ಲ?

      4. ಯೋಚನೆಯಲ್ಲಿ ಮತ್ತು ನಡತೆಯಲ್ಲಿ ತಾಟಸ್ಥ್ಯ ತೋರಿಸಿ

      1 ಯೋಹಾನ 5:21 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.

      ವಿಡಿಯೋ: ನಿಜ ಕ್ರೈಸ್ತರಿಗೆ ಧೈರ್ಯಬೇಕು ಯಾಕೆ?—ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು (2:49)

      • ವಿಡಿಯೋದಲ್ಲಿ ನೋಡಿದ ಹಾಗೆ ಅಯೆಂಗೆ ಯಾಕೆ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಲಿಲ್ಲ ಮತ್ತು ಧ್ವಜ ವಂದನೆ ಮಾಡಲಿಲ್ಲ?

      • ಆ ಸಹೋದರನ ನಿರ್ಧಾರ ಸರಿಯಾಗಿತ್ತು ಅಂತ ನಿಮಗೆ ಅನಿಸುತ್ತಾ?

      ನಾವು ಇನ್ನೂ ಯಾವೆಲ್ಲಾ ಸನ್ನಿವೇಶಗಳಲ್ಲಿ ತಟಸ್ಥರಾಗಿ ಇರಬೇಕು? ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.

      ವಿಡಿಯೋ: ಕಾವಲಿನಬುರುಜು ಕಲಿಸಿದ ಪಾಠಗಳು—ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ (5:09)

      • ಎರಡು ದೇಶಗಳ ಮಧ್ಯೆ ಕ್ರೀಡೆಗಳು ನಡೆಯುವಾಗ ನಾವು ಹೇಗೆ ತಟಸ್ಥರಾಗಿರಬಹುದು?

      • ರಾಜಕಾರಣಿಗಳ ನಿರ್ಧಾರದಿಂದ ನಮಗೆ ಒಳ್ಳೇದಾದರೂ ಕೆಟ್ಟದಾದರೂ ನಾವು ಏನು ಮಾಡಬಾರದು?

      • ವಾರ್ತಾ ಮಾಧ್ಯಮ (ನ್ಯೂಸ್‌) ಮತ್ತು ನಮ್ಮ ಆಪ್ತರು ಹೇಗೆ ನಮ್ಮ ತಾಟಸ್ಥ್ಯಕ್ಕೆ ಅಡ್ಡಿಯಾಗಬಹುದು?

      ಕೊಲಾಜ್‌: 1. ಪ್ರತಿಭಟನಕಾರರು ತಮ್ಮ ಕೈಯಲ್ಲಿ ಫಲಕಗಳನ್ನ ಹಿಡಿದುಕೊಂಡು ಕೋಪದಿಂದ ಕಿರಿಚುತಿದ್ದಾರೆ. 2. ಕ್ರೀಡಾಕೂಟದಲ್ಲಿ ಒಬ್ಬ ಅಭಿಮಾನಿ ಧ್ವಜವನ್ನ ಹಿಡಿದುಕೊಂಡು ಕೂಗುತ್ತಿದ್ದಾನೆ. 3. ಒಬ್ಬ ವಿದ್ಯಾರ್ಥಿ ದೇಶಕ್ಕೆ ಸಂಬಂಧಪಟ್ಟ ಪ್ರತಿಜ್ಞೆಯನ್ನ ಮಾಡುತ್ತಿದ್ದಾನೆ.4. ಗನ್‌ ಹಿಡಿದುಕೊಂಡಿರುವ ಒಬ್ಬ ಸೈನಿಕ. 5. ಎರಡು ಪಕ್ಷಗಳ ಪ್ರತಿನಿಧಿಗಳು ವಾದವಿವಾದ ಮಾಡುತ್ತಿದ್ದಾರೆ. 6. ಒಬ್ಬ ಸ್ತ್ರೀ ವೋಟು ಹಾಕುತ್ತಿದ್ದಾಳೆ.

      ಒಬ್ಬ ಕ್ರೈಸ್ತನು ತನ್ನ ಯೋಚನೆ ಮತ್ತು ನಡತೆಯಲ್ಲಿ ತಾಟಸ್ಥ್ಯವನ್ನ ತೋರಿಸಬೇಕಾದ ಸನ್ನಿವೇಶಗಳು ಯಾವುವು?

      ಕೆಲವರು ಹೀಗೆ ಕೇಳಬಹುದು: “ನೀವು ಯಾಕೆ ಧ್ವಜ ವಂದನೆ ಮಾಡಲ್ಲ, ರಾಷ್ಟ್ರಗೀತೆ ಹಾಡಲ್ಲ?”

      • ನೀವೇನು ಹೇಳುತ್ತೀರಾ?

      ನಾವೇನು ಕಲಿತ್ವಿ

      ಕ್ರೈಸ್ತರು ತಮ್ಮ ಯೋಚನೆ, ಮಾತು ಮತ್ತು ನಡತೆಯಲ್ಲಿ ಯಾವುದೇ ರಾಜಕೀಯ ವಿಷಯಗಳಲ್ಲಿ ಪಕ್ಷವಹಿಸದಂತೆ ಜಾಗ್ರತೆವಹಿಸಬೇಕು.

      ನೆನಪಿದೆಯಾ

      • ನಾವು ಸರ್ಕಾರಿ ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು?

      • ನಾವು ಯಾಕೆ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿ ಇರುತ್ತೇವೆ?

      • ಯಾವೆಲ್ಲಾ ಸನ್ನಿವೇಶಗಳಲ್ಲಿ ತಟಸ್ಥರಾಗಿರಲು ಕಷ್ಟ ಆಗುತ್ತೆ?

      ಇದನ್ನ ಮಾಡಿ ನೋಡಿ

      ಇದನ್ನೂ ನೋಡಿ

      ತಟಸ್ಥರಾಗಿರಲು ನಾವು ಯಾವೆಲ್ಲಾ ತ್ಯಾಗಗಳನ್ನ ಮಾಡಬೇಕಾಗಬಹುದು?

      ಯೆಹೋವ ಯಾವತ್ತೂ ನಮ್ಮ ಕೈ ಬಿಡಲ್ಲ (3:15)

      ತಟಸ್ಥರಾಗಿರಲು ಕಷ್ಟಕರವಾದ ಸನ್ನಿವೇಶಗಳು ಬರುವಾಗ ಏನು ಮಾಡಬೇಕು ಅಂತ ಕುಟುಂಬಗಳು ಹೇಗೆ ಮೊದಲೇ ತಯಾರಿ ಮಾಡಬಹುದು?

      ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾಟಸ್ಥ್ಯವನ್ನು ಕಾಪಾಡಿಕೊಳ್ಳಿ (4:25)

      ಒಬ್ಬ ವ್ಯಕ್ತಿಯ ಜೀವನ ಯಾವಾಗ ಸಾರ್ಥಕ ಆಗುತ್ತೆ?

      “ದೇವರಿಗೆ ಎಲ್ಲಾ ಸಾಧ್ಯ” (5:19)

      ಕೆಲಸದ ಬಗ್ಗೆ ತೀರ್ಮಾನಗಳನ್ನ ಮಾಡುವಾಗ ಯಾವೆಲ್ಲಾ ವಿಷಯಗಳನ್ನ ಗಮನಿಸಬೇಕು?

      “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” (ಕಾವಲಿನಬುರುಜು, ಮಾರ್ಚ್‌, 2006)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ