ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 1/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಜೀವಸ್ವರೂಪನಾದ ದೇವರ ಮಾರ್ಗದರ್ಶನವನ್ನು ಅಂಗೀಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ರಕ್ತ–ಜೀವಾಧಾರ
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ರಕ್ತ ವಿಕ್ರಯ ದೊಡ್ಡ ವ್ಯಾಪಾರ
    ಎಚ್ಚರ!—1991
  • ರಕ್ತದಿಂದ ಜೀವವನ್ನು ರಕ್ಷಿಸುವುದು—ಹೇಗೆ?
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು—1993
w93 1/15 ಪು. 30-31

ವಾಚಕರಿಂದ ಪ್ರಶ್ನೆಗಳು

ಒಣಗಿದ ರಕ್ತರಸ [ಪ್ಲಾಸ್ಮ] ದಂತಹ ರಕ್ತದ ಅಂಶಗಳು ಆಹಾರ ಉತ್ಪಾದನೆಗಳಲ್ಲಿ ಸೇರಿಸಿರಬಹುದಾದಲ್ಲಿ ಕ್ರೈಸ್ತರು ಎಷ್ಟೊಂದು ಚಿಂತಿತರಾಗಿರತಕ್ಕದ್ದು?

ಸ್ಥಳೀಕವಾಗಿ ಆಹಾರದ ಉತ್ಪಾದನೆಯಲ್ಲಿ ಪ್ರಾಣಿ ರಕ್ತವನ್ನು (ಯಾ ಅದರ ಅಂಶವನ್ನು) ಉಪಯೋಗಿಸಲಾಗಿದೆ ಎಂದು ನಂಬಲು ಸಕಾರಣವಿರುವಲ್ಲಿ, ಕ್ರೈಸ್ತರು ಆವಶ್ಯಕವಾದ ಜಾಗ್ರತೆಯನ್ನು ವಹಿಸತಕ್ಕದ್ದು. ಆದರೂ, ಕೇವಲ ಸಂಶಯದಿಂದ ಯಾ ಅನಾಧಾರಿತ ಚಿಂತೆಯಿಂದ ತೊಂದರೆಪಡುವುದು ಅವಿವೇಕತನದ್ದಾಗಿರಬಹುದು.

ಮಾನವ ಇತಿಹಾಸದ ಆರಂಭದಲ್ಲಿ, ಮಾನವರು ರಕ್ತವನ್ನು ಭುಜಿಸಬಾರದೆಂದು ನಮ್ಮ ನಿರ್ಮಾಣಿಕನು ಆಜ್ಞೆಯನ್ನಿತ್ತನು. (ಆದಿಕಾಂಡ 9:3, 4) ರಕ್ತವು ಆತನ ಕೊಡುಗೆಯಾದ ಜೀವವನ್ನು ಪ್ರತಿನಿಧಿಸುತ್ತದೆ ಎಂದು ಅವನು ಹೇಳಿದನು. ಜೀವಿಯಿಂದ ತೆಗೆಯಲ್ಪಟ್ಟ ರಕ್ತವನ್ನು ಕೇವಲ ವೇದಿಯಂತಹದರ ಮೇಲೆ ಯಜ್ಞವಾಗಿ ಉಪಯೋಗಿಸಬಹುದು. ಇಲ್ಲದಿದ್ದರೆ, ಜೀವಿಯ ರಕ್ತವನ್ನು ನೆಲದ ಮೇಲೆ ಸುರಿಸತಕ್ಕದ್ದು, ಒಂದರ್ಥದಲ್ಲಿ ದೇವರಿಗೆ ಅದನ್ನು ಹಿಂದಕ್ಕೆ ಕೊಡುವದಾಗಿದೆ. ಅವನ ಜನರು ರಕ್ತವನ್ನು ಸೇವಿಸುವುದರ ಮೂಲಕ ಜೀವವನ್ನು ಪೋಷಿಸುವುದನ್ನು ಹೋಗಲಾಡಿಸಬೇಕಿತ್ತು. ಅವನು ಅಪ್ಪಣೆಯನ್ನಿತ್ತದ್ದು: “ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನಮಾಡಿದವನಿಗೆ ಬಹಿಷ್ಕಾರವಾಗಬೇಕು.” (ಯಾಜಕಕಾಂಡ 17:11-14) ರಕ್ತವನ್ನು ಭುಜಿಸುವುದರ ವಿರುದ್ಧವಾದ ದೇವರ ನಿಷೇಧವನ್ನು ಕ್ರೈಸ್ತರಿಗೆ ಪುನರಾವರ್ತಿಸಲಾಗಿತ್ತು. (ಅ.ಕೃತ್ಯಗಳು 15:28, 29) ಆದುದರಿಂದ, ಆರಂಭದ ಕ್ರೈಸ್ತರು ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸ ಯಾ ರಕ್ತದ ಸಾಸೆಜ್‌ಗಳಂತಹ ರಕ್ತ ಭರಿತ ಆಹಾರವನ್ನು ವರ್ಜಿಸುವ ಆವಶ್ಯಕತೆಯಿತ್ತು.

ಆದರೂ, ವ್ಯಾವಹಾರಿಕ ರೀತಿಯಲ್ಲಿ, ‘ರಕ್ತವನ್ನು ತಾವಾಗಿಯೇ ವರ್ಜಿಸುವ’ ಅವರ ನಿರ್ಧಾರದ ಮೇಲೆ ಆ ಕ್ರೈಸ್ತರು ಹೇಗೆ ಕ್ರಿಯೆಗೈಯಲಿದ್ದರು? (ಅ.ಕೃತ್ಯಗಳು 21:25) ಅವರು ಸರಳವಾಗಿ ಅಪೊಸ್ತಲ ಪೌಲನ ಮಾತುಗಳನ್ನು ಅನ್ವಯಿಸಬೇಕೋ: “ಕಟುಕರ ಅಂಗಡಿಯಲ್ಲಿ ಮಾರುವಂಥದು ಏನಿದ್ದರೂ ಅದನ್ನು ಮನಸ್ಸಿನಲ್ಲಿ ಸಂಶಯಹುಟ್ಟಿಸುವ ವಿಚಾರಣೆಮಾಡದೆ ತಿನ್ನಿರಿ”?

ಇಲ್ಲ. ಆ 1 ಕೊರಿಂಥ 10:25ರ ಮಾತುಗಳು ಒಂದು ವಿಗ್ರಹಾಲಯದಲ್ಲಿ ಯಜ್ಞಮಾಡಲ್ಪಟ್ಟ ಪ್ರಾಣಿಯ ಮಾಂಸದ ಕುರಿತಾಗಿ ಸೂಚಿಸುತ್ತವೆ. ಹಿಂದೆ ಆಗ ದೇವಾಲಯದಲ್ಲಿ ಮಿಕ್ಕಿದ ಮಾಂಸವನ್ನು ಮಾರಾಟಗಾರರಿಗೆ ಕೊಟ್ಟು ಬಿಡುತ್ತಿದ್ದರು, ಅವರು ತಮ್ಮ ಅಂಗಡಿಗಳಲ್ಲಿ ಮಾಂಸದೊಟ್ಟಿಗೆ ಇದನ್ನು ಮಾರಾಟಕ್ಕಾಗಿ ಸೇರಿಸುತ್ತಿದ್ದರು. ದೇವಾಲಯದ ಮಾಂಸ ಅದು ತಾನೇ ಕೆಟ್ಟದ್ದಲ್ಲ ಯಾ ದೂಷಿತವಾದುದ್ದಲ್ಲ ಎಂಬುದು ಪೌಲನ ವಿಚಾರವಾಗಿತ್ತು. ಅನ್ಯಧರ್ಮದ ವೇದಿಗಳ ಮೇಲೆ ಅರ್ಪಿಸಲ್ಪಟ್ಟ ಪ್ರಾಣಿಗಳ ರಕ್ತವು ಬಸಿಯಲ್ಪಟ್ಟು, ಬಳಸಲ್ಪಡುವ ಪದ್ಧತಿಯಿತ್ತು ಎಂಬದು ಸುಸ್ಪಷ್ಟ. ಆದುದರಿಂದ ಮಿಕ್ಕಿದ ಸ್ವಲ್ಪ ಮಾಂಸವನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಲ್ಲಿ, ಮತ್ತು ದೇವಾಲಯಕ್ಕಾಗಲಿ ಯಾ ವಿಧರ್ಮಿಯರಿಗಾಗಲಿ ಯಾವುದೇ ಸಂಬಂಧವಿಲ್ಲದಿರುವುದು ವ್ಯಕ್ತವಾಗಿರುತ್ತಿದ್ದಲ್ಲಿ, ಕ್ರೈಸ್ತರು ಅದನ್ನು ಶುದ್ಧವೂ, ಯೋಗ್ಯವಾಗಿ ರಕ್ತ ಸುರಿಯುವಿಕೆಯನ್ನು ಮಾಡಿರುವಂತಹದ್ದೂ ಆಗಿ, ಕೇವಲ ಮಾರಾಟದ ಒಂದು ಮಾಂಸವಾಗಿ ಖರೀದಿಸಬಹುದಾಗಿತ್ತು.

ಆದಾಗ್ಯೂ, ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸವು (ಯಾ ರಕ್ತದ ಸಾಸೆಜ್‌) ಸ್ಥಳೀಕ ಅಂಗಡಿಗಳಲ್ಲಿ ಆರಿಸಬಹುದಾದ ಒಂದೆಂದು ಆ ಕ್ರೈಸ್ತರು ತಿಳಿದಿರುವಲ್ಲಿ, ವಿಷಯವು ಭಿನ್ನವಾಗಿರಬೇಕಿತ್ತು. ಯಾವ ಮಾಂಸವನ್ನು ಅವರು ಆರಿಸುತ್ತಾರೆ ಎನ್ನುವುದರಲ್ಲಿ ಅವರು ಜಾಗ್ರತೆ ವಹಿಸುವ ಅಗತ್ಯತೆ ಇತ್ತು. ಒಂದು ವಿಶಿಷ್ಟವಾದ ಬಣ್ಣವಿರುವಲ್ಲಿ ಮಾಂಸದ ಉತ್ಪಾದನೆಗಳಲ್ಲಿ ರಕ್ತವು ಸೇರಿದೆಯೊ (ಎಲ್ಲಿ ಇದು ಸಾಮಾನ್ಯವಾಗಿದೆಯೋ ಅಲ್ಲಿ ಇಂದು ರಕ್ತದ ಸಾಸೆಜ್‌ಗಳು ಸರಳವಾಗಿ ಗುರುತಿಸಲ್ಪಡುವಂತೆ) ಎಂದು ಅವರು ತಿಳಿದು ಕೊಳ್ಳಶಕ್ತರಾಗಬಹುದಿತ್ತು. ಯಾ ಒಬ್ಬ ಒಳ್ಳೆಯ ಹೆಸರು ಪಡೆದಿರುವ ಕಟುಕನಿಗೆ ಯಾ ಮಾಂಸ ಮಾರಾಟಗಾರನಿಗೆ ಕ್ರೈಸ್ತರು ವಿಚಾರಿಸಲೂ ಬಹುದಿತ್ತು. ನಿರ್ದಿಷ್ಟ ಮಾಂಸವು ರಕ್ತಭರಿತವಾಗಿದೆ ಎಂದು ನಂಬಲು ಸಕಾರಣವಿಲ್ಲದಿದ್ದಲ್ಲಿ, ಅವರು ಅದನ್ನು ಸರಳವಾಗಿಯೇ ಖರೀದಿಸಬಹುದಿತ್ತು ಮತ್ತು ತಿನ್ನಬಹುದಿತ್ತು.

ಪೌಲನು ಇದನ್ನೂ ಬರೆದನು: “ನಿಮ್ಮ ಸೈರಣೆಯು [ಸಮಂಜಸತೆ, NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” (ಫಿಲಿಪ್ಪಿ 4:5) ಮಾಂಸವನ್ನು ಖರೀದಿಸುವ ವಿಷಯಕ್ಕೂ ಅದನ್ನು ಅನ್ವಯಿಸಬಹುದಾಗಿತ್ತು. ಇಸ್ರಾಯೇಲಿನ ನಿಯಮಶಾಸ್ತ್ರವಾಗಲಿ, ಯಾ ಮೊದಲನೆಯ ಶತಕದ ಕ್ರೈಸ್ತ ಆಡಳಿತ ಮಂಡಲಿಯ ಶಾಸನವಾಗಲಿ, ಮಾಂಸದ ಕುರಿತು ಬಹಳ ಕೂಲಂಕಷವಾಗಿ ದೇವರ ಜನರು ವಿಚಾರಿಸಬೇಕು, ಯಾ ದೊರಕುವ ಮಾಂಸದಲ್ಲಿ ರಕ್ತದ ಕುರಿತು ಕೊಂಚವೇ ಅನುಮಾನವಿದ್ದರೆ, ಸಸ್ಯಾಹಾರಿಗಳಾಗಲೂ ಬೇಕು ಎಂದು ಸೂಚಿಸಿರುವುದಿಲ್ಲ.

ಒಬ್ಬ ಇಸ್ರಾಯೇಲ್‌ ಬೇಟೆಗಾರನು ಪ್ರಾಣಿಯೊಂದನ್ನು ಕೊಂದರೆ ಅದರ ರಕ್ತವನ್ನು ಸುರಿಸಬೇಕಾಗಿತ್ತು. (ಹೋಲಿಸಿರಿ ಧರ್ಮೋಪದೇಶಕಾಂಡ 12:15, 16.) ಅವನ ಕುಟುಂಬವು ಎಲ್ಲಾ ಮಾಂಸವನ್ನು ತಿನ್ನಲು ಅಶಕ್ತವಾಗಿರುವಲ್ಲಿ, ಅವನು ಕೆಲವನ್ನು ಮಾರಬಹುದಿತ್ತು. ಯೋಗ್ಯವಾದ ರೀತಿಯಲ್ಲಿ ರಕ್ತವು ಸುರಿಸಲ್ಪಟ್ಟ ಪ್ರಾಣಿ ಶವದಲ್ಲಿಯೂ ಕೂಡ, ಸ್ವಲ್ಪ ಮಟ್ಟದ ರಕ್ತವು ಮಾಂಸದಲ್ಲಿ ಉಳಿಯುತ್ತದೆ, ಆದರೆ ಮಾಂಸವನ್ನು ಖರೀದಿಸುವ ಯೆಹೂದ್ಯನೊಬ್ಬನು, ಹತಿಸುವ ಮತ್ತು ಸುರಿಯುವಿಕೆಯ ನಡುವೆ ಎಷ್ಟು ನಿಮಿಷಗಳು ಕಳೆದಿವೆ, ರಕ್ತದ ಸುರಿಯುವಿಕೆಗೆ ಯಾವ ಅಪಧಮನಿಯು ಯಾ ರಕ್ತನಾಳವು ಕತ್ತರಿಸಲ್ಪಟ್ಟಿದೆ, ಮತ್ತು ಪ್ರಾಣಿಯನ್ನು ಹೇಗೆ ನೇತಾಡಿಸಲಾಗಿತ್ತು ಮತ್ತು ಎಷ್ಟು ದೀರ್ಘಕಾಲದ ತನಕ ಎಂಬಂತಹ ವಾಸ್ತವಾಂಶಗಳನ್ನು ಪಡೆದುಕೊಳ್ಳುವ ಅತಿರೇಕತೆಗೆ ಹೋಗಬೇಕಿತ್ತು ಎಂದು ಬೈಬಲ್‌ ಎಲ್ಲಿಯೂ ಸೂಚಿಸುವುದಿಲ್ಲ. ಇನ್ನೂ ಹೆಚ್ಚಾಗಿ, ಯಾವುದೇ ಮಾಂಸವನ್ನು ತಿನ್ನುವ ಮೊದಲು ಕಟ್ಟಕಡೆಯ ಉತ್ತರಗಳು ಅವರಿಗೆ ಆವಶ್ಯಕವಾಗಿವೆಯೋ ಎಂಬಂತೆ ಕ್ರೈಸ್ತರು ಈ ವಿಷಯದಲ್ಲಿ ವಿಶೇಷತಮ ಮುಂಜಾಗರೂಕತೆಗಳನ್ನು ತಕ್ಕೊಳ್ಳಬೇಕು ಎಂದು ಆಡಳಿತ ಮಂಡಳಿಯು ಬರೆಯಲಿಲ್ಲ.

ಇಂದು ಅನೇಕ ದೇಶಗಳಲ್ಲಿ, ಹತಿಸುವಾಗ, ರಕ್ತವನ್ನು ಸುರಿಸಿದ ಪ್ರಾಣಿಗಳಿಂದ ಮಾಂಸ ಉತ್ಪಾದನೆಗಳ (ರಕ್ತದ ಸಾಸೆಜ್‌ಗಳಂತಹ ಅಸಾಧಾರಣವಾದ ವಸ್ತುಗಳ ಹೊರತಾಗಿ) ಕುರಿತು ಕಾನೂನು, ಸಂಪ್ರದಾಯ, ಯಾ ಧಾರ್ಮಿಕ ಆಚರಣೆ ಇರುತ್ತದೆ. ಹೀಗೆ, ಆ ವಠಾರಗಳಲ್ಲಿರುವ ಕ್ರೈಸ್ತರು ಸಾಮಾನ್ಯವಾಗಿ ಹತಿಸುವುದರ ಯಾ ಪರಿಷ್ಕರಣೆಗಳ ಕ್ರಮವಿಧಾನಗಳ ಕುರಿತು ವಿಪರೀತ ಚಿಂತಿತರಾಗುವ ಜರೂರಿಯಿಲ್ಲ. ಒಂದು ವಿಸ್ತಾರವಾದ ಅರ್ಥದಲ್ಲಿ, ಅವರು ಸರಳವಾಗಿಯೇ ‘ಮಾರಾಟದ ಮಾಂಸವನ್ನು ತಿನ್ನುವಾಗ, ವಿಚಾರಿಸದೆ ಮಾಡಿರಿ,’ ಮತ್ತು ಅವರು ರಕ್ತವನ್ನು ವರ್ಜಿಸುತ್ತಾರೆಂಬ ಸ್ಪಷ್ಟ ಮನಸ್ಸಾಕ್ಷಿ ಅವರಿಗಿರಸಾಧ್ಯವಿದೆ.

ಆದರೂ, ಆಗಿಂದಾಗ್ಗೆ ನಿರ್ದಿಷ್ಟ ಕ್ರೈಸ್ತರನ್ನು ಕ್ಲೇಶಕ್ಕೊಳಪಡಿಸಿದ ವಾಣಿಜ್ಯದ ರಕ್ತದ ಬಳಕೆಯ ಕುರಿತಾದ ತಾಂತ್ರೀಕ ವರದಿಗಳಿವೆ. ಮಾಂಸ ಪರಿಷ್ಕರಣೆಯ ಉದ್ದಿಮೆಯಲ್ಲಿರುವ ಕೆಲವರು ತರ್ಕಿಸುವುದೇನಂದರೆ ಹತಿಸಲ್ಪಟ್ಟ ಪ್ರಾಣಿಗಳ ಬಹುಪ್ರಮಾಣದ ರಕ್ತವನ್ನು ರಾಸಾಯನಿಕ ಗೊಬ್ಬರ ಯಾ ಪ್ರಾಣಿ ಆಹಾರದಂತಹ ವ್ಯಾವಹಾರಿಕ ಅನ್ವಯಿಸುವಿಕೆಗಳಿಗೆ ಮತ್ತು ಲಾಭಕ್ಕಾಗಿ ಸಂಗ್ರಹಿಸಸಾಧ್ಯವಿದೆ. ಸಂಶೋಧಕರು ಅಂಥ ರಕ್ತವನ್ನು (ಯಾ ಅಂಶಗಳನ್ನು) ಪರಿಷ್ಕರಿಸಿದ ಮಾಂಸಗಳಲ್ಲಿ ಬಳಸಬಹುದೋ ಎಂಬಂತಹದ್ದನ್ನು ಅಭ್ಯಾಸಿಸಿರುತ್ತಾರೆ. ಕೆಲವು ವಾಣಿಜ್ಯದ ಯಂತ್ರಾಗಾರಗಳು ದ್ರವ, ಶೀತಲೀಕರಿಸಿದ ಯಾ ಪುಡಿಮಾಡಿದ ರಕ್ತರಸವನ್ನು (ವರ್ಣಬದಲಾಯಿಸಿದ ಕೆಂಪುಕಣ ಸಾಮಗ್ರಿ) ಸೀಮಿತ ಮೊತ್ತದಲ್ಲಿ ಉತ್ಪಾದಿಸಿರುತ್ತಾರೆ, ಅದನ್ನು ಸಾಸೆಜ್‌ನಂತಹ ಉತ್ಪಾದನೆಯಲ್ಲಿ ಯಾ ಕಣಕದಲ್ಲಿ ಮಾಂಸದ ಸ್ವಲ್ಪ ಪ್ರತಿಶತಕ್ಕಾಗಿ ಬದಲಾಯಿಸಬಹುದಾಗಿದೆ. ಪುಡಿ ಮಾಡಿದ ರಕ್ತದ ಉತ್ಪನ್ನಗಳನ್ನು ಭರತಿಮಾಡಲು ಯಾ ಅರೆದ ಮಾಂಸದಲ್ಲಿ ನೀರನ್ನು ಮತ್ತು ಕೊಬ್ಬನ್ನು ಕಟ್ಟಲು, ಬೇಯಿಸುವ ಉತ್ಪಾದನೆಗಳಲ್ಲಿ, ಯಾ ಇತರ ಆಹಾರಗಳಲ್ಲಿ ಮತ್ತು ಪಾನೀಯಗಳಲ್ಲಿ ಸಸಾರಜನಕ ಮತ್ತು ಕಬ್ಬಿಣಸ್ವತಗಳನ್ನು ಕೂಡಿಸಲು ಬಳಸಬಹುದು ಎಂಬುದರ ಮೇಲೆ ಇತರ ಅಧ್ಯಯನಗಳು ಕೇಂದ್ರೀಕರಿಸಿವೆ.

ಆದಾಗ್ಯೂ, ಅಂತಹ ಸಂಶೋಧನೆಯು ದಶಕಗಳಿಂದಲೂ ನಡೆಯುತ್ತದೆ ಎಂದು ಗಮನಿಸುವುದು ಮೂಲ್ಯತೆಯದ್ದಾಗಿದೆ. ಆದರೂ, ಅಂತಹ ಉತ್ಪಾದನೆಗಳ ಬಳಕೆ ಅತಿ ಸೀಮಿತವಾಗಿದೆ, ಯಾ ಅನೇಕ ದೇಶಗಳಲ್ಲಿ ಅದು ಅಸ್ತಿತ್ವದಲ್ಲೇ ಇಲ್ಲ ಎಂದು ಭಾಸವಾಗುತ್ತದೆ. ಕೆಲವು ಮಾದರಿಯ ವರದಿಗಳು ಯಾಕೆಂದು ತೋರಿಸಲು ಸಹಾಯಮಾಡುತ್ತವೆ:

“ರಕ್ತವು ಪೋಷಕ ಮತ್ತು ಕಾರ್ಯನಿರ್ವಾಹಕ ಸಸಾರಜನಕಗಳ ಮೂಲವಾಗಿದೆ. ಆದಾಗ್ಯೂ, ಮಾನವನ ನೇರ ಸೇವಿಸುವಿಕೆಗೆ ಗೋಮಾಂಸದ ರಕ್ತವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರವೇ ಬಳಸಲಾಗಿದೆ ಯಾಕಂದರೆ ಅದರ ತೀವ್ರವಾದ ಬಣ್ಣ ಮತ್ತು ವಿಶಿಷ್ಟವಾದ ರುಚಿಯ ಕಾರಣದಿಂದ.”—ಜರ್ನಲ್‌ ಆಫ್‌ ಫುಡ್‌ ಸೈಎನ್ಸ್‌, ಸಂಪುಟ 55, ಅಂಕೆ 2, 1990.

“ರಕ್ತ ಪ್ಲಾಸ್ಮದ ಸಸಾರಜನಕಗಳು ಉಚ್ಛಮಟ್ಟದ ಲೀನಕಾರತ್ವ, ಹಾಲಿನಂತಾಗಿರುವ ಕ್ರಿಯಾಚಟುವಟಿಕೆ ಮತ್ತು ನೀರಿನೊಂದಿಗೆ ಬೆರೆಯದಿರುವಿಕೆ ಅಂತಹ ಪ್ರಯೋಜನಕಾರಿ ವರ್ಗಗುಣಗಳಿವೆ . . . ಮತ್ತು ರಕ್ತದ ಪರಿಷ್ಕರಣೆಯಲ್ಲಿ ಅವುಗಳ ಬಳಕೆಯು ಮಹತ್ತಾದ ಪ್ರಯೋಜನಗಳನ್ನು ಒದಗಿಸುತ್ತದೆ. ಆದಾಗ್ಯೂ, ಯಾವುದೇ ರಕ್ತರಸವನ್ನು ಶುಚಿಗೊಳಿಸಲು, ವಿಶೇಷವಾಗಿ ನಿರ್ಜಲೀಕರಣದ ನಂತರ, ಯಾವುದೆ ಪರಿಣಾಮಕಾರಿ ವ್ಯವಸ್ಥೆಯಿಲ್ಲ ಎಂದು ಜಪಾನಿನಲ್ಲಿ ಸ್ಥಾಪಿಸಲ್ಪಟ್ಟಿದೆ.”—ಜರ್ನಲ್‌ ಆಫ್‌ ಫುಡ್‌ ಸೈಎನ್ಸ್‌, ಸಂಪುಟ 56, ಅಂಕೆ 1, 1991.

ಕೆಲವು ಕ್ರೈಸ್ತರು ಸಂದರ್ಭಾನುಸಾರ ಕಟ್ಟಿರುವ ಆಹಾರಗಳ ಬಿಲ್ಲೆಗಳನ್ನು ಪರೀಕ್ಷಿಸಿದ್ದಾರೆ, ಯಾಕಂದರೆ ಯಾವ ಘಟಕಾಂಶಗಳು ಸೇರಿವೆ ಎಂದು ಪಟ್ಟಿಮಾಡುವಂತೆ ಕೆಲವು ಸರಕಾರಗಳು ಅಪೇಕ್ಷಿಸುತ್ತವೆ. ಮತ್ತು ರಕ್ತವು ಸೇರಿರಬಹುದು ಎಂದು ನಂಬಲು ಕಾರಣವಿರುವ ಯಾವುದೆ ಒಂದು ಉತ್ಪಾದನೆಯನ್ನು ಕ್ರಮವಾಗಿ ಪರೀಕ್ಷಿಸಲು ಅವರು ಆಯ್ಕೆ ಮಾಡಬಹುದು. ರಕ್ತ, ರಕ್ತ ಪ್ಲಾಸ್ಮ, ರಕ್ತರಸ, ಗ್ಲೊಬಿನ್‌ (ಯಾ ಗ್ಲೊಬುಲಿನ್‌) ಸಸಾರಜನಕ, ಯಾ ಹೆಮೊಗ್ಲೊಬಿನ್‌ (ಯಾ ಗ್ಲೊಬಿನ್‌) ಕಬ್ಬಿಣಸ್ವತ ಮುಂತಾದ ವಸ್ತುಗಳು ಪಟ್ಟಿಯಲ್ಲಿರುವುದಾದರೆ, ಅಂತಹವುಗಳನ್ನು ದೂರೀಕರಿಸುವುದು ಸರಿಯಾಗಿದೆ. ಈ ಕ್ಷೇತ್ರದ ಒಂದು ಯೂರೋಪಿಯನ್‌ ಕಂಪೆನಿಯಿಂದ ಮಾರುಕಟ್ಟೆಯ ಸಮಾಚಾರವು ಒಪ್ಪಿಕೊಂಡದ್ದು: “ಘಟಕಾಂಶವಾಗಿ ಗ್ಲೋಬಿನ್‌ನನ್ನು ಬಳಸುವುದರ ಕುರಿತ ಸಮಾಚಾರವು ಆಹಾರದ ಕಟ್ಟಿನ ಮೇಲೆ ಹೇಗೆ ಗುರುತಿಸಬೇಕೆಂದರೆ ಆಹಾರದ ರಚನೆ ಮತ್ತು ಮೂಲ್ಯತೆಯ ಕುರಿತು ಗ್ರಾಹಕನು ತಪ್ಪುದಾರಿಗೊಯ್ಯಲ್ಪಡದಂತೆ ಇರಬೇಕು.”

ಆದಾಗ್ಯೂ, ಬಿಲ್ಲೆಗಳನ್ನು ಪರೀಕ್ಷಿಸುವುದರಲ್ಲಿ, ಯಾ ಕಟುಕರೊಂದಿಗೆ ವಿಚಾರಿಸುವುದರಲ್ಲಿ, ಸಮಂಜಸತೆಯು ಆವಶ್ಯಕವಾಗಿದೆ. ಎಲ್ಲಾ ಪ್ಯಾಕ್‌ ಮಾಡಿದ ಆಹಾರಗಳ ಬಿಲ್ಲೆಗಳನ್ನು ಮತ್ತು ಘಟಕಾಂಶಗಳನ್ನು ಲೋಕವ್ಯಾಪಕವಾಗಿ ಇರುವ ಪ್ರತಿಯೊಬ್ಬ ಕ್ರೈಸ್ತನು ಪರೀಕ್ಷಿಸಬೇಕು ಯಾ ಉಪಹಾರಗೃಹಗಳಲ್ಲಿ ಯಾ ಆಹಾರದ ಅಂಗಡಿಗಳಲ್ಲಿ ಇರುವ ಕಾರ್ಮಿಕರನ್ನು ವಿಚಾರಿಸತಕ್ಕದ್ದು ಎಂದಲ್ಲ. ಕ್ರೈಸ್ತನೊಬ್ಬನು ತನ್ನನ್ನು ಮೊದಲು ಹೀಗೆ ಕೇಳಕೊಳ್ಳಬಹುದು, ‘ಈ ವಠಾರದಲ್ಲಿ ಯಾ ದೇಶದಲ್ಲಿ ಸಾಮಾನ್ಯವಾಗಿರುವ ಆಹಾರದ ಉತ್ಪಾದನೆಗಳಲ್ಲಿ ರಕ್ತ ಮತ್ತು ಅದರ ಉತ್ಪನ್ನಗಳನ್ನು ಬಳಸಲಾಗಿದೆ ಎಂಬುದಕ್ಕೆ ಯಾವುದೇ ಸಾಬೀತಾದ ಪುರಾವೆಗಳಿವೆಯೇ?’ ಅನೇಕ ಸ್ಥಳಗಳಲ್ಲಿ ಉತ್ತರವು ಇಲ್ಲ ಎಂದಾಗಿದೆ. ಆದಕಾರಣ, ಯಾವುದೇ ಅಡಗಿರುವ ಸಾಧ್ಯತೆಗಳನ್ನು ಕಂಡುಹಿಡಿಯಲು ಸಮಯ ಮತ್ತು ಗಮನವನ್ನು ಬಹಳವಾಗಿ ವ್ಯಯಿಸಲು ಅವರು ವೈಯಕ್ತಿಕವಾಗಿ ಹರಿಸುವುದಿಲ್ಲ ಎಂದು ಅನೇಕ ಕ್ರೈಸ್ತರು ತೀರ್ಮಾನಿಸಿರುತ್ತಾರೆ. ಈ ರೀತಿಯ ಅನಿಸಿಕೆ ಇಲ್ಲದ ವ್ಯಕ್ತಿಯೊಬ್ಬನು, ಅವನ ಮನಸ್ಸಾಕ್ಷಿಗನುಸಾರ ವರ್ತಿಸತಕ್ಕದ್ದು, ಆದರೆ ಇತರರು ದೇವರ ಮುಂದೆ ಒಳ್ಳೆಯ ಮನಸ್ಸಾಕ್ಷಿಯಿಂದ ಬೇರೆ ರೀತಿಯಲ್ಲಿ ವಿಷಯವನ್ನು ತೀರ್ಮಾನಿಸಿರುವುದಾದರೆ ಅವನು ಅವರ ನ್ಯಾಯತೀರ್ಪುಮಾಡದೆ ಇರತಕ್ಕದ್ದು.—ರೋಮಾಪುರ 14:2-4, 12.

ರಕ್ತವು ಸೇರಿರುವ ಆಹಾರದ ಉತ್ಪಾದನೆಯು ಇದ್ದರೂ ಕೂಡ, ಬೆಲೆ, ಕಾನೂನುಗಳು, ಯಾ ಇತರ ವಾಸ್ತವಾಂಶಗಳ ಕಾರಣದಿಂದ ಇದನ್ನು ವ್ಯಾಪಕವಾಗಿ ಮಾಡಲಾಗುವುದಿಲ್ಲ. ಉದಾಹರಣೆಗೆ ಫುಡ್‌ ಪ್ರೊಸಿಸಿಂಗ್‌ (ಸೆಪ್ಟೆಂಬರ್‌ 1991) ಗಮನಿಸಿದ್ದು: “ಹದಮಿಶ್ರಣದಲ್ಲಿ ಜಲವಿಭಜನೆಯ ಗೋಮಾಂಸದ ಪ್ಲಾಸ್ಮದ (ಸಿದ್ಧವಾದ ಮಾಂಸದ ಕಡುಬುವಿನ) ಶೇಕಡ 1 ಕ್ಕಿಂತಲೂ ಕಡಿಮೆ ಯಾವುದೇ ಸಮಸ್ಯೆಗಳು ಇರುವ ಆಹಾರ ಸಂಸ್ಕರಿಸುವವರಿಗೆ, ಅದನ್ನು ಹಾಲೊಡಕು ಸಸಾರಜನಕದ ಸಾರೀಕರಿಸುವಿಕೆಯೊಂದಿಗೆ ಬದಲಿ ಮಿಶ್ರಣವು ಆಗುತ್ತದೆ ಮತ್ತು ಕೊಶೆರ್‌ ಎಂದು ಅದನ್ನು ಪ್ರಮಾಣಿಸಬಹುದು.”

ಅನೇಕ ದೇಶಗಳ ನಿಯಮ, ಸಂಪ್ರದಾಯ ಮತ್ತು ರುಚಿಗಳು ಎಂಥದ್ದು ಅಂದರೆ ಹತಿಸಲ್ಪಟ್ಟ ಪ್ರಾಣಿಗಳಿಂದ ರಕ್ತವು ಸಾಮಾನ್ಯವಾಗಿ ಸುರಿಸಲ್ಪಡುತ್ತದೆ ಮತ್ತು ಅಂತಹ ರಕ್ತವು ಇತರ ಆಹಾರದ ಉತ್ಪಾದನೆಗಳಲ್ಲಿ ಬಳಸಲ್ಪಡುವುದಿಲ್ಲ ಎಂಬುದನ್ನು ಒತ್ತಿಹೇಳುವುದಕ್ಕೆ ಅದು ಸಹಮತಿಸುತ್ತದೆ. ಸ್ಥಳೀಕವಾಗಿ ಸನ್ನಿವೇಶವು ಭಿನ್ನವಾಗಿದೆ ಯಾ ಇತ್ತೀಚೆಗೆ ಒಂದು ಪ್ರಮುಖ ಬದಲಾವಣೆ ಸಂಭವಿಸಿದೆ ಎಂದು ಯೋಚಿಸಲು ಸಾಕಷ್ಟು ಆಧಾರವಿಲದ್ಲಿರುವುದಾದರೆ, ಕ್ರೈಸ್ತರು ಅಂತಹ ಸಾಧ್ಯತೆಯ ಯಾ ಗಾಳಿಸುದ್ದಿಯ ಕಾರಣ ಕ್ಲೇಶಗೊಳ್ಳದಂತೆ ಇರಲು ಕಾದುಕೊಳ್ಳಬೇಕು. ಆದರೂ, ರಕ್ತವು—ಆಹಾರದಲ್ಲಾಗಲಿ ಯಾ ವೈದ್ಯಕೀಯ ಉಪಚಾರದಲ್ಲಾಗಲಿ—ವ್ಯಾಪಕವಾಗಿ ಉಪಯೋಗಿಸಲಾಗಿದೆ ಎಂಬ ನಿಶ್ಚಯತೆ ಯಾ ಹೆಚ್ಚಿನ ಸಂಭಾವ್ಯತೆ ಇದ್ದಾಗ, ರಕ್ತವನ್ನು ವರ್ಜಿಸಲು ಇರುವ ದೇವರ ಆಜೆಗ್ಞೆ ವಿಧೇಯರಾಗಿರಲು ನಾವು ದೃಢಮನಸ್ಕರಾಗಿರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ