-
ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!ಕಾವಲಿನಬುರುಜು (ಅಧ್ಯಯನ)—2020 | ಡಿಸೆಂಬರ್
-
-
12. ಯೇಸುವಿನ ಪುನರುತ್ಥಾನವು ಅದಕ್ಕೂ ಮುಂಚೆ ನಡೆದ ಪುನರುತ್ಥಾನಗಳಿಗಿಂತ ಭಿನ್ನವಾಗಿತ್ತು ಅನ್ನೋದನ್ನು ಅರ್ಥ ಮಾಡಿಕೊಳ್ಳೋಕೆ 1 ಪೇತ್ರ 3:18, 22 ಹೇಗೆ ಸಹಾಯ ಮಾಡುತ್ತೆ?
12 “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ” ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ “ಮರಣದಲ್ಲಿ ನಿದ್ರೆಹೋದವರಲ್ಲಿ [ಯೇಸು] ಪ್ರಥಮಫಲವಾಗಿದ್ದಾನೆ” ಅಂತ ಅವನು ಹೇಳಿದ. ಯಾವ ಅರ್ಥದಲ್ಲಿ ಯೇಸು ಪ್ರಥಮಫಲವಾಗಿದ್ದ? ಯೇಸುವಿನ ಪುನರುತ್ಥಾನ ಇದಕ್ಕೂ ಮುಂಚೆ ಭೂಮಿಯಲ್ಲಾದ ಬೇರೆಲ್ಲಾ ಪುನರುತ್ಥಾನಕ್ಕಿಂತ ಉನ್ನತವಾಗಿತ್ತು. ಯಾಕಂದ್ರೆ ಯೇಸುಗಿಂತ ಮುಂಚೆ ಪುನರುತ್ಥಾನ ಆದವ್ರು ಮತ್ತೆ ತೀರಿಹೋದ್ರು. ಆದ್ರೆ ಯೇಸುಗೆ ಪುನರುತ್ಥಾನ ಆದಾಗ ಕಣ್ಣಿಗೆ ಕಾಣದಿರೋ ದೇಹ ಸಿಗ್ತು. ಅಷ್ಟೇ ಅಲ್ಲ, ಅವನು ಸ್ವರ್ಗಕ್ಕೆ ಹೋದನು. ಈ ತರ ಆತ್ಮಜೀವಿಯಾಗಿ ಪುನರುತ್ಥಾನ ಆದವ್ರಲ್ಲಿ ಮತ್ತು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದ ಮಾನವರಲ್ಲಿ ಯೇಸುನೇ ಮೊದಲ ವ್ಯಕ್ತಿಯಾಗಿದ್ದಾನೆ. ಹಾಗಾಗಿ ಯೇಸು “ಪ್ರಥಮಫಲವಾಗಿದ್ದಾನೆ” ಅಂತ ಪೌಲ ಹೇಳಿದ್ದು ಸರಿಯಾಗೇ ಇತ್ತು.—1 ಕೊರಿಂ. 15:20; ಅ. ಕಾ. 26:23; 1 ಪೇತ್ರ 3:18, 22 ಓದಿ.
-
-
ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!ಕಾವಲಿನಬುರುಜು (ಅಧ್ಯಯನ)—2020 | ಡಿಸೆಂಬರ್
-
-
16. ಪೌಲನು ಯೇಸುವನ್ನ “ಪ್ರಥಮಫಲ” ಅಂತ ಯಾಕೆ ಕರೆದನು?
16 ಕ್ರಿಸ್ತನು “ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿ” ಎಬ್ಬಿಸಲ್ಪಟ್ಟಿದ್ದಾನೆ ಅಂತ ಪೌಲನು ಬರೆದ. ಈಗಾಗಲೇ ಭೂಮಿಯಲ್ಲಿ ಲಾಜರನನ್ನು ಮತ್ತು ಬೇರೆಯವರನ್ನು ಪುನರುತ್ಥಾನ ಮಾಡಲಾಗಿತ್ತು. ಹಾಗಿದ್ರೂ ಯೇಸುವನ್ನು “ಪ್ರಥಮಫಲ” ಅಂತ ಯಾಕೆ ಕರೆಯಲಾಯ್ತು? ಯಾಕಂದ್ರೆ ಆತ್ಮಜೀವಿಯಾಗಿ ಪುನರುತ್ಥಾನ ಆದವರಲ್ಲಿ ಮತ್ತು ಪುನರುತ್ಥಾನದ ನಂತ್ರ ಶಾಶ್ವತ ಜೀವನ ಪಡೆದವರಲ್ಲಿ ಪ್ರಥಮ ವ್ಯಕ್ತಿ ಯೇಸುನೇ ಆಗಿದ್ದನು. ಯೇಸುನ ಇಸ್ರಾಯೇಲ್ಯರು ದೇವರಿಗೆ ಅರ್ಪಿಸುತ್ತಿದ್ದ ‘ಪ್ರಥಮಫಲಕ್ಕೆ’ ಹೋಲಿಸಬಹುದು. ಇದ್ರ ಜೊತೆಗೆ ಪೌಲನು ಯೇಸುವನ್ನ “ಪ್ರಥಮಫಲ” ಅಂತ ಕರೆಯೋ ಮೂಲಕ ಅವನ ನಂತ್ರ ಬೇರೆಯವ್ರು ಸಹ ಸ್ವರ್ಗಕ್ಕೆ ಹೋಗ್ತಾರೆ ಅಂತ ಸೂಚಿಸಿದನು. ಅಪೊಸ್ತಲರು ಮತ್ತು ‘ಕ್ರಿಸ್ತನೊಂದಿಗೆ ಐಕ್ಯರಾಗಿರುವ’ ಬೇರೆಯವರು ಯೇಸು ತರನೇ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗ್ತಾರೆ.
-