ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 171
  • ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ಬೈಬಲ್‌ ಪಿಶಾಚನ ಬಗ್ಗೆ ಯಾವ ಚಿತ್ರಣ ಕೊಡುತ್ತೆ?
  • ಸೈತಾನನನ್ನು ಎದುರಿಸಿರಿ, ಅವನು ಓಡಿಹೋಗುವನು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಬೈಬಲ್‌ ಕೊಡುವ ಉತ್ತರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಪಿಶಾಚನು ಕೇವಲ ಮೂಢನಂಬಿಕೆಯ ಉತ್ಪತ್ತಿಯಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 171

ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?

ಬೈಬಲ್‌ ಕೊಡೋ ಉತ್ತರ

ಪಿಶಾಚನನ್ನ ನಾವು ನೋಡಲು ಆಗಲ್ಲ, ಏಕೆಂದ್ರೆ ಅವನೊಬ್ಬ ಆತ್ಮಜೀವಿ. ಇದರ ಅರ್ಥ ನಾವು ನೋಡಲಿಕ್ಕೆ ಆಗುವಂಥ ರೂಪ ಅವನಿಗೆ ಇಲ್ಲ.—ಎಫೆಸ 6:11, 12.

ಪಿಶಾಚ ಕವೆಗೋಲು ಹಿಡ್ಕೊಂಡಿರೋ ಪ್ರಸಿದ್ಧ ಚಿತ್ರ. ಅವನು ನೋಡಲಿಕ್ಕೆ ಆಡು ತರ ಇದ್ದಾನೆ. ಅವನಿಗೆ ಕೊಂಬುಗಳು ಇವೆ, ಬಾಲನೂ ಇದೆ.

ಪಿಶಾಚ ನೋಡಲಿಕ್ಕೆ ಆಡಿನ ತರ ಇರೋ ಒಂದು ಜೀವಿಯಂತೆ ಚಿತ್ರಕಾರರು ಬಿಡಿಸಿದ್ದಾರೆ. ಅವನಿಗೆ ಕೊಂಬುಗಳು ಬಾಲ ಇರುವಂತೆ, ಕವೆಗೋಲು ಹಿಡ್ಕೊಂಡಿರುವಂತೆ ಚಿತ್ರಿಸಿದ್ದಾರೆ. ಇಂಥ ಚಿತ್ರಗಳು ಮಧ್ಯ ಯುಗದ ಚಿತ್ರಕಾರರ ಕಲ್ಪನೆಗಳಾಗಿವೆ ಅಂತ ಕೆಲವರು ಹೇಳ್ತಾರೆ. ಆ ಚಿತ್ರಕಾರರು ಜನಪದ ಕಥೆ ಮತ್ತು ಪುರಾಣ ಕಥೆಗಳ ಪ್ರಭಾವದಿಂದ ಆ ಚಿತ್ರಗಳನ್ನ ಬಿಡಿಸಿರಬಹುದು.

  • ಬೈಬಲ್‌ ಪಿಶಾಚನ ಬಗ್ಗೆ ಯಾವ ಚಿತ್ರಣ ಕೊಡುತ್ತೆ?

  • ಪಿಶಾಚನ ಬಗ್ಗೆ ಹೇಳೋ ಬೈಬಲ್‌ ವಚನಗಳು

ಬೈಬಲ್‌ ಪಿಶಾಚನ ಬಗ್ಗೆ ಯಾವ ಚಿತ್ರಣ ಕೊಡುತ್ತೆ?

ಬೈಬಲ್‌ ಪಿಶಾಚನನ್ನ ಬೇರೆ ಬೇರೆ ರೀತಿಯಲ್ಲಿ ವರ್ಣಿಸುತ್ತೆ. ಆದ್ರೆ ಇದು ಅವನ ಅಂದಚಂದದ ಬಗ್ಗೆ ಅಲ್ಲ, ಅವನ ಗುಣ ಎಂಥದ್ದು ಅಂತ ತಿಳಿಸುತ್ತೆ. ಪಿಶಾಚನ ಬಗ್ಗೆ ಬೈಬಲ್‌ ಹೇಳೋ ಕೆಲವು ವಿಷ್ಯಗಳು ಏನಂದ್ರೆ,

  • ಬೆಳಕಿನ ದೂತ. ದೇವರು ಕಲಿಸೋ ವಿಷ್ಯಗಳನ್ನು ಜನ ಕೇಳಬಾರದು, ತಾನು ಹೇಳೋದನ್ನ ಕೇಳಬೇಕಂತ ಪಿಶಾಚ ಏನೋ ಒಳ್ಳೇದು ಮಾಡೋ ತರ ನಾಟಕ ಮಾಡ್ತಾನೆ.—2 ಕೊರಿಂಥ 11:14.

  • ಗರ್ಜಿಸೋ ಸಿಂಹ. ದೇವರನ್ನು ಆರಾಧಿಸುವವರ ಮೇಲೆ ಕ್ರೂರ ದಾಳಿ ಮಾಡ್ತಾನೆ.—1 ಪೇತ್ರ 5:8.

  • ಮಹಾ ಘಟಸರ್ಪ. ಅವನು ಭಯಾನಕ, ಬಲಿಷ್ಠ, ವಿನಾಶಕ.—ಪ್ರಕಟನೆ 12:9.

ಪಿಶಾಚನ ಬಗ್ಗೆ ಹೇಳೋ ಬೈಬಲ್‌ ವಚನಗಳು

  • 2 ಕೊರಿಂಥ 11:14: “ಸೈತಾನನು . . . ಬೆಳಕಿನ ದೂತನೆಂದು ತೋರಿಸಿಕೊಳ್ಳಲು ವೇಷಹಾಕಿಕೊಳ್ಳುತ್ತಾ ಇರುತ್ತಾನೆ.”

    ಅರ್ಥ: ದೇವರು ಕಲಿಸೋ ವಿಷ್ಯಗಳನ್ನು ಜನ ಕೇಳದೆ ತಾನು ಹೇಳೋದನ್ನೇ ಕೇಳಬೇಕಂತ ಜನ್ರನ್ನ ಮೋಸ ಮಾಡಕ್ಕೆ ಪಿಶಾಚ ಒಳ್ಳೆಯವನ ತರ ನಾಟಕ ಮಾಡ್ತಾನೆ.

  • ಎಫೆಸ 6:11: “ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲಲು ಶಕ್ತರಾಗುವಂತೆ ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ.”

    ಅರ್ಥ: ಜನ ದೇವರ ಮಾತು ಕೇಳಬಾರದು ಅಂತ ಪಿಶಾಚ ಕುತಂತ್ರಗಳನ್ನು ಮಾಡ್ತಾನೆ.

  • ಯಾಕೋಬ 4:7: “ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.”

    ಅರ್ಥ: ಪಿಶಾಚನ ಮಾತು ಕೇಳದೆ ನಾವು ದೇವರ ಕೇಳಿದ್ರೆ ಅವನನ್ನ ಸೋಲಿಸಲಿಕ್ಕೆ ಆಗುತ್ತೆ.

  • 1 ಪೇತ್ರ 5:8: “ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”

    ಅರ್ಥ: ದೇವರ ಮಾತನ್ನ ಕೇಳುವವರನ್ನ ಕಂಡರೆ ಪಿಶಾಚನಿಗೆ ಆಗಲ್ಲ. ಅವರಿಗೆ ದೇವರ ಜೊತೆ ಇರೋ ಸ್ನೇಹವನ್ನು ಹಾಳುಮಾಡೋದೇ ಅವನ ಗುರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ