-
ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’ಬೈಬಲ್ ವಚನಗಳ ವಿವರಣೆ
-
-
“ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ. ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.”—ಫಿಲಿಪ್ಪಿ 4:6, 7, ಹೊಸ ಲೋಕ ಭಾಷಾಂತರ.
“ಯಾವ ವಿಷಯವಾಗಿಯೂ ಚಿಂತೆ ಮಾಡದೆ ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು.”—ಫಿಲಿಪ್ಪಿ 4:6, 7, ಪವಿತ್ರ ಬೈಬಲ್.
-
-
ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’ಬೈಬಲ್ ವಚನಗಳ ವಿವರಣೆ
-
-
ಇಂಥ ಪ್ರಾರ್ಥನೆಗಳನ್ನು ಮಾಡುವಾಗ ದೇವರು ನಮಗೆ ಶಾಂತಿಯನ್ನು ಕೊಡುತ್ತಾನೆ. ಆತನ ಜೊತೆ ಆಪ್ತ ಸ್ನೇಹ ಇರುವುದರಿಂದ ನಮ್ಮ ಮನಸ್ಸು ಪ್ರಶಾಂತವಾಗಿ ಇರುತ್ತದೆ, ಇದೇ ‘ದೇವಶಾಂತಿ.’ (ರೋಮನ್ನರಿಗೆ 15:13; ಫಿಲಿಪ್ಪಿ 4:9) ಇದು “ತಿಳುವಳಿಕೆಗೂ ಮೀರಿದ ಶಾಂತಿ.” ಏಕೆಂದರೆ ಇದನ್ನು ಕೊಡುವುದು ದೇವರು. ನಮ್ಮಿಂದ ಊಹಿಸಲಿಕ್ಕೂ ಆಗದೇ ಇರುವಷ್ಟು ಮಟ್ಟಿಗೆ ಅದು ನಮಗೆ ಸಹಾಯ ಮಾಡುತ್ತದೆ.
ದೇವಶಾಂತಿಯು ನಮ್ಮ ಹೃದಯಗಳನ್ನು ಕಾಯುತ್ತದೆ ಎಂದು ಫಿಲಿಪ್ಪಿ 4:7 ಹೇಳುತ್ತದೆ. ‘ಕಾಯುತ್ತದೆ’ ಅನ್ನೋದಕ್ಕಿರುವ ಗ್ರೀಕ್ ಪದ ಮಿಲಿಟರಿಗೆ ಸಂಬಂಧಪಟ್ಟ ಪದವಾಗಿದೆ. ಭದ್ರಕೋಟೆಗಳಿರುವ ಒಂದು ನಗರ ಕಾಯಲು ಸೈನಿಕರು ಮಾಡುವ ಕೆಲಸಗಳನ್ನು ಆ ಪದ ವರ್ಣಿಸುತ್ತದೆ. ಅದೇ ತರ ದೇವರು ಕೊಡುವ ಶಾಂತಿಯು ನಮ್ಮ ಭಾವನೆಗಳನ್ನು, ಯೋಚನೆಗಳನ್ನು ಕಾಪಾಡುತ್ತದೆ. ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಮುಳುಗಿ ಹೋಗದಿರಲು ಅದು ನಮಗೆ ಸಹಾಯ ಮಾಡುತ್ತದೆ.
ದೇವರು ಕೊಡುವ ಶಾಂತಿ ನಮ್ಮನ್ನು “ಕ್ರಿಸ್ತ ಯೇಸುವಿನ ಮೂಲಕ” ಕಾಪಾಡುತ್ತದೆ. ಏಕೆಂದ್ರೆ ದೇವರ ಜೊತೆ ನಾವು ಒಳ್ಳೇ ಸಂಬಂಧದಲ್ಲಿ ಇರಲು ಕಾರಣನೇ ಯೇಸು. ನಾವು ಮಾಡಿದ ಪಾಪಗಳಿಗಾಗಿ ಆತನು ತನ್ನ ಜೀವವನ್ನೇ ಬಿಡುಗಡೆ ಬೆಲೆಯಾಗಿ ಕೊಟ್ಟನು. ಆತನ ಮೇಲೆ ನಂಬಿಕೆ ಇದ್ದರೆ ದೇವರು ಕೊಡುವ ಆಶೀರ್ವಾದಗಳು ನಮಗೆ ಸಿಗುತ್ತವೆ. (ಇಬ್ರಿಯ 11:6) ನಾವು ಪ್ರಾರ್ಥನೆಯನ್ನು ಯೇಸುವಿನ ಮೂಲಕ ಮಾಡಬೇಕು. ಏಕೆಂದ್ರೆ “ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ” ಎಂದು ಯೇಸು ಹೇಳಿದನು.—ಯೋಹಾನ 14:6; 16:23.
-