ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!
    ಕಾವಲಿನಬುರುಜು—2015 | ಜುಲೈ 15
    • 14, 15. (ಎ) ಮಾಗೋಗಿನ ಗೋಗನ ಆಕ್ರಮಣ ಶುರುವಾದ ಮೇಲೆ ಯಾವ ಒಟ್ಟುಗೂಡಿಸುವಿಕೆ ಕೆಲಸ ನಡೆಯಲಿದೆ? (ಬಿ) ಇದು ಹೇಗೆ ಸಂಭವಿಸಲಿದೆ?

      14 ಮಾಗೋಗಿನ ಗೋಗನು ದೇವರ ಜನರ ಮೇಲೆ ಆಕ್ರಮಣ ಮಾಡಲು ಶುರುಮಾಡಿದ ನಂತರ ಏನಾಗಲಿದೆ? ಮನುಷ್ಯಕುಮಾರನು “ದೇವದೂತರನ್ನು ಕಳುಹಿಸಿ ದೇವರು ಆಯ್ದುಕೊಂಡ ತನ್ನವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು” ಎನ್ನುತ್ತದೆ ಬೈಬಲ್‌. (ಮಾರ್ಕ 13:27; ಮತ್ತಾ. 24:31) ಈ ಒಟ್ಟುಗೂಡಿಸುವಿಕೆಯ ಕೆಲಸ ಅಭಿಷಿಕ್ತ ಕ್ರೈಸ್ತರು ಆರಂಭದಲ್ಲಿ ಒಟ್ಟುಗೂಡಿಸಲ್ಪಟ್ಟ ಸಮಯಕ್ಕೆ ಸೂಚಿಸುವುದಿಲ್ಲ. ಭೂಮಿಯಲ್ಲಿ ಇನ್ನು ಇರುವ ಅಭಿಷಿಕ್ತರ ಕೊನೆಯ ಮುದ್ರೆಯೊತ್ತುವಿಕೆಗೂ ಸೂಚಿಸುವುದಿಲ್ಲ. (ಮತ್ತಾ. 13:37, 38) ಈ ಕೊನೆಯ ಮುದ್ರೆಯೊತ್ತುವಿಕೆ ಮಹಾ ಸಂಕಟ ಆರಂಭವಾಗುವ ಸ್ವಲ್ಪ ಮುಂಚೆಯೇ ನಡೆಯಲಿದೆ. (ಪ್ರಕ. 7:1-4) ಹಾಗಾದರೆ ಈ ಒಟ್ಟುಗೂಡಿಸುವಿಕೆಯ ಕೆಲಸ ಎಂದರೇನು? ಇನ್ನು ಭೂಮಿಯಲ್ಲಿರುವ ಅಭಿಷಿಕ್ತರು ತಮ್ಮ ಬಹುಮಾನ ಪಡೆಯುತ್ತಾ ಸ್ವರ್ಗಕ್ಕೆ ಹೋಗುವ ಸಮಯಕ್ಕೆ ಸೂಚಿಸುತ್ತದೆ. (1 ಥೆಸ. 4:15-17; ಪ್ರಕ. 14:1) ಈ ಘಟನೆಯು ಮಾಗೋಗಿನ ಗೋಗನು ತನ್ನ ಆಕ್ರಮಣ ಶುರುಮಾಡಿದ ನಂತರ ಯಾವುದೋ ಒಂದು ಹಂತದಲ್ಲಿ ನಡೆಯಲಿದೆ. (ಯೆಹೆ. 38:11) ಆಗ ಯೇಸು ಹೇಳಿದ ಹಾಗೆ “ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು.”—ಮತ್ತಾ. 13:43.b (ಪಾದಟಿಪ್ಪಣಿ ನೋಡಿ.)

      15 ಯೇಸು ಬಂದು ಕ್ರೈಸ್ತರನ್ನು ದೇಹ ಸಮೇತ ಸ್ವರ್ಗಕ್ಕೆ ಕರಕೊಂಡು ಹೋಗುವನೆಂದು ಅನೇಕ ಚರ್ಚುಗಳ ಜನರು ನಂಬುತ್ತಾರೆ. ಭೂಮಿಯನ್ನು ಆಳಲು ಯೇಸು ಹಿಂದಿರುಗಿ ಬರುವುದು ಸಹ ಕಣ್ಣಿಗೆ ಕಾಣಿಸುತ್ತದೆಂದು ನೆನಸುತ್ತಾರೆ. ಆದರೆ “ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು” ಮತ್ತು ಯೇಸು “ಆಕಾಶದ ಮೇಘಗಳ ಮೇಲೆ” ಬರುವನೆಂದು ಬೈಬಲ್‌ ಹೇಳುವಾಗ ಯೇಸು ಹಿಂದಿರುಗುವುದು ಕಣ್ಣಿಗೆ ಕಾಣಿಸುವುದಿಲ್ಲವೆಂದು ಅದು ಸ್ಪಷ್ಟವಾಗಿ ತೋರಿಸುತ್ತದೆ. (ಮತ್ತಾ. 24:30) “ಮಾಂಸವೂ ರಕ್ತವೂ ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು” ಎಂದೂ ಬೈಬಲ್‌ ಹೇಳುತ್ತದೆ. ಹಾಗಾಗಿ ಸ್ವರ್ಗಕ್ಕೆ ಎತ್ತಲ್ಪಟ್ಟವರೆಲ್ಲರು ‘ಕೊನೆಯ ತುತೂರಿಯು ಊದಲ್ಪಡುವಾಗ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ’ ಮೊದಲು ‘ಮಾರ್ಪಾಡಾಗಬೇಕು.’c (ಪಾದಟಿಪ್ಪಣಿ ನೋಡಿ.) (1 ಕೊರಿಂಥ 15:50-53 ಓದಿ.) ಭೂಮಿಯಲ್ಲಿರುವ ನಂಬಿಗಸ್ತ ಅಭಿಷಿಕ್ತರೆಲ್ಲರೂ ಒಮ್ಮೆಲೆ ಕ್ಷಣಮಾತ್ರದಲ್ಲಿ ಸ್ವರ್ಗಕ್ಕೆ ಒಟ್ಟುಗೂಡಿಸಲ್ಪಡುವರು.

  • “ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!
    ಕಾವಲಿನಬುರುಜು—2015 | ಜುಲೈ 15
    • c ಆ ಸಮಯದಲ್ಲಿ ಜೀವಂತವಾಗಿರುವ ಅಭಿಷಿಕ್ತರ ಶರೀರಗಳನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗುವುದಿಲ್ಲ. (1 ಕೊರಿಂ. 15:48, 49) ಯೇಸುವಿನ ಮಾನವ ಶರೀರ ಇಲ್ಲವಾದ ರೀತಿಯಲ್ಲೇ ಇವರ ಶರೀರಗಳು ಸಹ ಬಹುಶಃ ಇಲ್ಲವಾಗುವವು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ