ಯುದ್ಧಗಳನ್ನು ಕೊನೆಗಾಣಿಸುವ ಯುದ್ಧ
ಒಂದು ದೊಡ್ಡ ಜರ್ಮನ್ ಸೆಪ್ಪಲಿನ್ ವಿಮಾನ ರಾತ್ರಿಯ ಆಕಾಶದಲ್ಲಿ ಝೇಂಕರಿಸಿತು. ಲಂಡನಿನ ಮೇಲೆ ವಿಮಾನಧಾಳಿ ಮಾಡಿ ಹಿಂದಿರುಗುತ್ತಿದ್ದ ಅದು ಈಗ ಎಪೆಕ್ಸ್ನ ಒಂದು ಹಳ್ಳಿಯ ಮೇಲೆ ಬಾಂಬು ಸುರಿಯಿತು. ಫ್ರಾನ್ಸಿನಲ್ಲಿ ನಡಿಯುತ್ತಿದ್ದ ಯುದ್ಧದಿಂದ ರಜೆಯಲ್ಲಿ ಬಂದಿದ್ದ ಒಬ್ಬ ನರ್ಸನ್ನು ಒಂದು ಬಾಂಬು ಕೊಂದಿತು.
ಇದು ಒಂದನೆಯ ಲೋಕ ಯುದ್ಧದ ಒಂದು ಚಿಕ್ಕ ಘಟನೆಯಾಗಿದ್ದರೂ ಇದರ ಪರಿಣಾಮ ದೊಡ್ಡದಾಗಿತ್ತು. 20 ನೇ ಶತಮಾನವು ಮನುಷ್ಯನು “ಯುದ್ಧಾಭ್ಯಾಸ” ಮಾಡದಿರುವ ಸಮಯವನ್ನು ತರುವ ಬದಲಿಗೆ ಶಸ್ತ್ರಮತ್ತು ಯುದ್ಧ ಕ್ಷೇತ್ರ ಗಳಲ್ಲಿ ಭಾರೀ ವಿಸ್ತಾರ ವನ್ನು ಮಾಡಿರುವದಕ್ಕೆ ಇದೊಂದು ಉದಾಹರಣೆ ಯಾಗಿದೆ. (ಯೆಶಾಯ 2:2-4) ಸಾವಿರಾರು ವರ್ಪಗಳಿಂದ ನೆಲ ಹಾಗೂ ಸಮುದ್ರದ ಮೇಲ್ಮೈಯಲ್ಲಿ ಯುದ್ಧಗಳನ್ನು ಹೋರಾಡಲಾಗಿತ್ತು. ಆದರೆ ಒಂದನೆಯ ಲೋಕಯುದ್ಧದಲ್ಲಿ ಕದನವು ಆಕಾಶ ಹಾಗೂ ಸಮುದ್ರದ ನೀರಿನಡಿಗೆ ವ್ಯಾಪಿಸಿತು. ಇದರ ಪರಿಣಾಮವಾಗಿ ರಣರಂಗದಿಂದ ನೂರಾರು ಮೈಲು ದೂರದಲ್ಲಿದ್ದ ಅಯೋಧರು ಬಾಂಬುಗಳಿಂದ ಕೊಲ್ಲಲ್ಪಟ್ಟರು. ಅನೇಕ ಹಡಗುಗಳು ಅದೃಶ್ಯವಾದ ಜಲಾಂತರ್ಗಾಮಿ ನಾವೆಗಳಿಂದ ಸಮುದ್ರದ ತಳಕ್ಕೆ ಕಳುಹಿಸಲ್ಪಟ್ಟವು.
ಒಂದನೆಯ ಭಯಂಕರ ಲೋಕಯುದ್ಧದಲ್ಲಿ 80 ಲಕ್ಷ ಸೈನಿಕರು ಸತ್ತರು ಮತ್ತು ಹಸಿವೆ ಚಳಿ ಕೂಡಿರುವ ಇತರ ಕಾರಣಗಳಿಂದ 1 ಕೋಟಿ 20 ಲಕ್ಷ ಅಯೋಧರು ಸತ್ತರೆಂದು ಅಂದಾಜು ಮಾಡಲಾಗಿದೆ. ಇತಿಹಾಸಗಾರ ಎಚ್.ಎ.ಎಲ್. ಫಿಶರ್ ಎಂಬವರಿಗನುಸಾರ, “ಮಹಾಯುದ್ಧ (1ನೇ ಲೋಕಯುದ್ಧ) ದ ದುರಂತವೇನಂದರೆ ಈ ಯುದ್ಧವು ಯುರೋಪಿನ ಅತ್ಯುನ್ನತ ಸಂಸ್ಕೃತಿಯ ಜನರ ಮಧ್ಯೆ ಕೇವಲ ಕೆಲವೇ ಸಮಮನಸ್ಕರು ಪರಿಹರಿಸಬಹುದಾಗಿದ್ದ ಒಂದು ವಿವಾದಾಂಶದ ಕಾರಣ ಹೂಡಲ್ಪಟ್ಟಿತು.” ಈ ಭಯಂಕರ ನಾಶವನ್ನು ನ್ಯಾಯೀಕರಿಸುವ ಕಾರಣದಿಂದ ಇದನ್ನು “ಯುದ್ಧಗಳನ್ನು ಕೊನೆಗಾಣಿಸುವ ಯುದ್ಧ” ವೆಂದು ಕರೆಯಲಾಯಿತು. ಆದರೆ ಈ ಹೆಸರು ಕೊಂಚ ಸಮಯದಲ್ಲಿ ಬರೀದಾಗಿ ಕೇಳತೊಡಗಿತು.
ಒಂದು ಶಾಂತಿ ಸಂಘಟನೆ
1918 ರಲ್ಲಿ ಶಾಂತಿ ಘೋಷಿಸಲ್ಪಟ್ಟೊಡನೇ, ಕೆರಳಿದ್ದ ಜನತೆಯು ಇಂತಹ ಇನ್ನೊಂದು ಯುದ್ಧವು ಪುನ: ಸಂಭವಿಸದಂತೆ ಕ್ರಮಕೈಕೊಳ್ಳಬೇಕೆಂದು ಕೇಳಿಕೊಂಡಿತು. ಹೀಗೆ, 1919 ರಲ್ಲಿ ಜನಾಂಗ ಸಂಘ ಹುಟ್ಟಿತು. ಆದರೆ ಈ ಸಂಘ ಮಹಾ ಆಶಾಭಂಗವಾಗಿ ಪರಿಣಮಿಸಿತು. 1939 ಜಗತ್ತು ಪುನ: ಇನ್ನೊಂದು ಲೋಕಯುದ್ಧಕ್ಕೆ ದುಮುಕಿತು. ಇದು ಒಂದನೆಯದಕ್ಕಿಂತ ಎಪ್ಟೋ ಹೆಚ್ಚು ಮಾರಕವಾಗಿತ್ತು.
ಎರಡನೇ ಜಾಗತಿಕ ಯುದ್ಧದಲ್ಲಿ ಅನೇಕ ನಗರಗಳು ನೆಲಸಮವಾಗಿ ಅಯೋಧ ಜನಜೀವನವು ಘೋರ ಸ್ವಪ್ನವಾಗಿ ಪರಿಣಮಿಸಿತು. ಬಳಿಕ 1945 ರಲ್ಲಿ ಹಿರೋಶಿಮ ಮತ್ತು ನಾಗಸಾಕಿ ನಗರಗಳ ಮೇಲೆ ಪರಮಾಣು ಬಾಂಬುಗಳು ಬೀಳಲಾಗಿ ಮಾನವನು ನ್ಯೂಕ್ಲಿಯರ್ ಯುಗವನ್ನು ಪ್ರವೇಶಿಸಿದನು. ಜಪಾನಿನ ಈ ಎರಡು ನಗರಗಳ ಮೇಲೆಎದ್ದ ಭಯಂಕರ ನಾಯಿಕೊಡೆಯಾಕಾರದ ಮೋಡಗಳು ಅಂದಿನಿಂದ ಮಾನವ ಸಂತತಿಯ ಮೇಲೆ ಬಂದು ನಿಂತಿರುವ ಬೆದರಿಕೆಗೆ ಮುನ್ ಸೂಚಕವಾಗಿದ್ದವು.
ಆದರೂ, ಈ ಬಾಂಬುಗಳು ಬೀಳುವ ಮೊದಲೇ ಮೃತವಾಗಿದ್ದ ಜನಾಂಗ ಸಂಘದಂತಹ ಇನ್ನೊಂದು ಸಂಘವನ್ನು ಸ್ಥಾಪಿಸುವ ಸಿದ್ಧತೆಯು ನಡಿಯುತಿತ್ತು. ಇದರ ಪರಿಣಾಮವಾಗಿ ಸಂಯುಕ್ತ ರಾಷ್ಟ ಸಂಘ ಎದ್ದು ಬಂತು. ಇದರ ಮೂಲ ಉದ್ದೇಶಗಳೂ ಇದರ ಪುರ್ವದ ಸಂಘದ ಉದ್ದೇಶದಂತೆ ಲೋಕಶಾಂತಿಯನ್ನು ಕಾಪಾಡುವದೇ ಆಗಿತ್ತು. ಆದೇನನ್ನು ಸಾಧಿಸಿದೆ? ಹೌದು, 1945 ರಿಂದ ಲೋಕಯುದ್ಧಗಳು ನಡೆದಿರುವದಿಲ್ಲವೆಂಬದು ನಿಜ. ಆದರೆ ಕೋಟಿಗಟ್ಟಲೆ ಜನರು ಸತ್ತಿರುವ ಅಸಂಖ್ಯಾತ ಚಿಕ್ಕ ಯುದ್ಧಗಳು ನಡೆದಿವೆ.
ಹಾಗಾದರೆ ದೇವರು ಯೆಶಾಯನ ಮೂಲಕ ಹೇಳಿದ ವಚನವಾದ “ಇನ್ನು ಜನರು ಯುದ್ದವನ್ನು ಕಲಿಯರು” ಎಂಬ ಮಾತುಗಳ ನೆರವೇರಿಕೆಯನ್ನು ಮಾನವ ಸಂತತಿ ಇನ್ನೆಂದಿಗೂ ನೋಡದೆಂದು ಇದರ ಅರ್ಥವೋ? ಅಲ್ಲ. ಮನುಷ್ಯನ ಮೂಲಕ ಇದು ತರಲ್ಪಡದು ಎಂದೇ ಇದರ ಅರ್ಥ. “ದಾರಿಗೆ ಬೆಳಕು” ಎಂದು ಕರೆಯಲ್ಪಟ್ಟಿರುವ ಬೈಬಲೆಂಬ ಪುಸ್ತಕದಲ್ಲಿ ಈ ಪ್ರೇರಿತ ವಚನವು ಅಡಗಿದೆ. ಮತ್ತು ದೇವರು ತಾನೇ ಅಂತಿಮವಾಗಿ ಎಲ್ಲಾ ಯುದ್ಧಗಳನ್ನು ನಿಲ್ಲಿಸುವನೆಂದು ಇನ್ನಾವದೂ ಅಲ್ಲ, ಬೈಬಲೇ ತೋರಿಸುತ್ತದೆ.—ಕೀರ್ತನೆ 119:105.
ಸರ್ವ ಯುದ್ಧಗಳ ಅಂತ್ಯ
ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಒಂದನೇ ಶತಮಾನದಲ್ಲಿ ಅಂತರಾಷ್ಟ್ರೀಯತೆಯನ್ನು ಸ್ಥಾಪಿಸಿದ್ದ ಗುಂಪೊಂದಿತ್ತು. ಅದರಲ್ಲಿ ಒಬ್ಬ ಸದಸ್ಯನು ತನ್ನ ಸಹೋದರ ಅಥವಾ ಸಹೋದರಿಯ ವಿರುದ್ದ ಯುದ್ಧ ಹೂಡುವದು ಅಚಿಂತ್ಯವಾಗಿತ್ತು. ಇದು ಕ್ರೈಸ್ತ ಸಭೆಯಾಗಿತ್ತು. ಅದರಲ್ಲಿದ್ದ ಸದಸ್ಯರು ಅಕ್ಷರಾರ್ಥವಾಗಿ “ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ” ಹೊಡೆದಿದ್ದರು. ಇಂದು ಮಾನವಕುಲವು ಒಟ್ಟಾಗಿ ಯುದ್ಧ ನಿವಾರಿಸಲು ಯಾವ ಪ್ರಗತಿಯನ್ನು ಮಾಡಿಲ್ಲವಾದರೂ ಈ ಗಮನಾರ್ಹ ಉದ್ದೇಶವನ್ನು ಸಾಧಿಸಿರುವ ಒಂದು ಗುಂಪದೆ. ಇವರಾರು?
1914 ಕ್ಕೂ ಹಿಂದೆ, ಈ ಚಿಕ್ಕ ಗುಂಪಿಗೆ ಬೈಬಲಲ್ಲಿ ಭರವಸೆಯಿತ್ತು. ಈ ಕಾರಣದಿಂದ, ಯುದ್ದ ನಿವಾರಣೆಯ ಮಾನವ ಪ್ರಯತ್ನಗಳು ಸಫಲಗೊಳ್ಳುವದಿಲ್ಲವೆಂದು ಅವರು ತಿಳಿದಿದ್ದರು. ಅವರ ಬೈಬಲ್ ಅದ್ಯಯನದಿಂದ, 1914 ನೇ ವರ್ಷವು ಮಾನವ ಇತಿಹಾಸದ ಸಂಧಿಕಾಲವೆಂದು ಅವರು ಕಲಿತು ಇದರ ಎಚ್ಚರಿಕೆಯನ್ನು 40 ವರ್ಪಗಳ ತನಕ ಕೊಟ್ಟರು. ಮತ್ತು ಬೈಬಲ್ ಪ್ರವಾದನೆ ಹೇಳಿರುವಂತೆಯೇ 1914 ನೇ ವರ್ಷವು ಬರಗಾಲ, ಅಂಟುರೋಗ, ಭೂಕಂಪ, ಹಾಗೂ ಯುದ್ಧದ ಆರಂಭಕಾಲವಾಯಿತು. (ಮತ್ತಾಯ 24:3, 7, 8; ಲೂಕ 21:10, 11) 1ನೇ ಲೋಕಯುದ್ಧದ ಕುರಿತು ಇತಿಹಾಸಕಾರ ಜೇಮ್ಸ್ ಕ್ಯಾಮರನ್ ಬರೆದದ್ದು: “1914 ರಲ್ಲಿ ಆಗ ತಿಳಿಯಲ್ಪಟ್ಟಿದ್ದ ಮತ್ತು ಅಂಗೀಕರಿಸಲ್ಪಟ್ಟಿದ್ದ ಲೋಕವು ಅಂತ್ಯಗೊಂಡಿತು.”
ಯುದ್ಧಾಂತ್ಯಕ್ಕೆ ಮೊದಲು ಫ್ಲೂ ಸಾಂಕ್ರಾಮಿಕ ರೋಗವು ಭೂವ್ಯಾಪಕವಾಗಿ ಹರಡಿ 2 ಕೋಟಿ ಜನರನ್ನು, ಅಂದರೆ ಯುದ್ಧದಲ್ಲಿ ಸತ್ತ ಸೈನಿಕರಿಗಿಂತ ಇಮ್ಮಡಿಗಿಂತಲೂ ಹೆಚ್ಚು ಜನರನ್ನು ಸಾಯಿಸಿತು. ಅಂದಿನಿಂದ ಕ್ಯಾನ್ಸರಿನಂತಹ ಮತ್ತು ಇತ್ತೀಚೆಗೆ ಎಡ್ಸ್ನಂತಹ ರೋಗಗಳು ಮಾನವ ಸಂತತಿಯನ್ನು ಭಯಕ್ಕೊಳಪಡಿಸಿವೆ.
ಈಗ ಇನ್ನೊಂದು ಬೈಬಲ್ ಭವಿಷ್ಯವಾಣಿಯನ್ನು ಗಮನಿರಿ: “ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವದು.” (ಮತ್ತಾಯ 24.12) ಇದು ನೆರವೇರುತ್ತಿದೆಯೋ? ನಿಶ್ಚಯವಾಗಿಯೂ! ಪ್ರತಿದಿನವೂ ವಾರ್ತೆಗಳು ಲೋಕವ್ಯಾಪಕವಾಗಿ ನಿಯಮರಾಹಿತ್ಯವನ್ನು ಅಂದರೆ ಕೊಲೆ, ಸುಲಿಗೆ, ಮತ್ತು ಸಾಮಾನ್ಯ ಅಂಗಹೀನಗೊಳಿಸುವಿಕೆ ಇದನ್ನು ಬಯಲುಪಡಿಸುತ್ತವೆ. ಇದಲ್ಲದೆ, 2 ನೇ ಲೋಕಯುದ್ಧದ ಕುರಿತೆಂದು ಮುನ್ ಅಂದಾಜು ಅದು “ಭಯದಿಂದ ಸ್ವಾತಂತ್ರ್ಯವನ್ನು” ತರುವುದೆಂದಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬೈಬಲಾದರೋ ಸ್ಪಷ್ಟವಾಗಿ “ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಎನು ಬರುವದೋ ಎಂದು ಎದುರುನೋಡುತ್ತಾ ಪ್ರಾಣ ಹೋದಂತಾಗುವರು” ಎಂದು ಮುಂತಿಳಿಸಿತು. (ಲೂಕ 21:26) ಮಾನವ ಭವಿಷ್ಯವಾಣಿ ಇನ್ನೊಮ್ಮೆ ತಪ್ಪಾಯಿತು. ಆದರೆ ದೇವರ ಪ್ರವಾದನಾ ನುಡಿಗಳು ಸತ್ಯವಾದವು.
ಮುಖ್ಯ ಯುದ್ಧ ಪ್ರೇರಕನು
ಯುದ್ಧ ಪ್ರೇರಕನೆಂದರೆ ಯುದ್ಧವನ್ನು ಉತ್ತೇಜಿಸುವವನೆಂದು ಅರ್ಥ. ರಾಜಕೀಯಸ್ದರು, ಪುರೋಹಿತರು, ಮತ್ತು ವ್ಯಾಪಾರಿಗಳು ಸಹಾ ಈ ಪಾತ್ರ ವಹಿಸಿದ್ದುಂಟು. ಆದರೆ ಅತ್ಯಂತ ಮಹಾ ಯುದ್ಧ ಪ್ರೇರಕನು ಪಿಶಾಚನಾದ ಸೈತಾನನಲ್ಲದೆ ಬೇರೆ ಯಾರೂ ಅಲ್ಲ. ಶಾಸ್ತ್ರದಲ್ಲಿ ಅವನನ್ನು “ಈ ಪ್ರಪಂಚದ ದೇವರು” ಎಂದು ಕರೆಯಲಾಗಿದೆ.—2 ಕೊರಿಂಥ 4:4.
ಅನೇಕ ಸಹಸ್ರ ವರ್ಷಗಳ ಹಿಂದೆ ಸೈತಾನನು ಯೆಹೋವ ದೇವರ ವಿರುದ್ಧ ದಂಗೆಯೆದ್ದು, ಆ ಬಳಿಕ ಅನೇಕಾನೇಕ ದೇವದೂತರು ಅವನ ಪಕ್ಷ ಸೇರುವಂತೆ ಪ್ರೇರಿಸಿದನು. ಆದರೆ 1914 ರಲ್ಲಿ ಅವನ ಸಮಯ ಮುಗಿಯಿತು. ಬೈಬಲ್ ಹೇಳುವದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮಿಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧ ಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧ ಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರ ಸ್ಥಾನ ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು. ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”—ಪ್ರಕಟನೆ 12:7-9.
1914 ರಿಂದ ಭೂಮಿ ಇನ್ನಷ್ಟು ಅಪಾಯಕರ ಸ್ದಳವಾಗಿ ಏಕಿದೆ ಎಂಬದನ್ನು ಇದು ವಿವರಿಸುತ್ತದೆ. ಸೈತಾನನ ಪತನದ ಪರಿಣಾಮವನ್ನು ಬೈಬಲ್ ಮುಂತಿಳಿಸಿದೆ: “ಭೂಮಿಯೇ. . .ನಿಮ್ಮ ದುರ್ಗತಿಯನ್ನು ಎನು ಹೇಳಲಿ. . .ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರಳ್ಳವನಾಗಿ ನಿಮ್ಮ ಬಳಿಗೆ ಇಳಿದು ಬಂದಿದ್ದಾನೆ.” (ಪ್ರಕಟನೆ 12:12) ಎಷ್ಟು ಸ್ವಲ್ಪ ಕಾಲ? ಯೇಸು ಹೇಳಿದ್ದು:“ ಇದೆಲ್ಲಾ ಆಗುವ ತನಕ (1914 ರಿಂದ ಹಿಡಿದು ನಡೆದ ಸಂಭವಗಳನ್ನು ನೋಡುವ) ಈ ಸಂತತಿಯು ಅಳಿದು ಹೋಗುವದೇ ಇಲ್ಲ.” (ಮತ್ತಾಯ 24:34) ಯಾವುದೆಲ್ಲಾ ಆಗುವ ತನಕ? ಯೇಸು ನಮ್ಮ ದಿನಗಳಿಗಾಗಿ ಪ್ರವಾದಿಸಿದ ವಿಪತ್ತು, ಸಂಕ್ಷೋಭೆಗಳೆಲ್ಲಾ ಆಗುವ ತನಕ.
ಆದರೆ ಜನಾಂಗ ಸಂಘದ ಪತನ ಮತ್ತು ಸಂಯುಕ್ತ ರಾಷ್ಟ್ರ ಸಂಘದ ಈಗಿನ ನಿರ್ಬಲತೆಯ ಎದುರಲ್ಲಿಯೂ ಶಾಂತಿ ತರುವ ಪ್ರಯತ್ನವನ್ನೂ ಜನಾಂಗಗಳು ನಿಲ್ಲಿಸವೆಂದು ಬೈಬಲ್ ತೋರಿಸುತ್ತದೆ. ಹೌದು, ಅವರು ಸಾಫಲ್ಯ ಪಡೆದಿದ್ದೇವೆಂದು ನೆನಸುವ ಸಮಯವೂ ಬರಲಿದೆ. “ಸಮಾಧಾನವಾಗಿಯೂ ನಿರ್ಭಯವಾಗಿಯಾ” ಇದ್ದೇವೆಂದು ಮಹಾ ಘೋಷಣೆ ಕೇಳಿಬರುವ ಕಾಲ ಬರಲಿದೆ. ಆದ್ರೆ ಅದರ ಬೆನ್ನಿಗೆ ಈ ಭ್ರಷ್ಟಲೋಕದ ಮೇಲೆ “ಶೀರ್ಘನಾಶನ” ಬರುವದು. ಈ ವಿಷಯದಲ್ಲಿ ಆಜ್ಞಾನಿಗಳಾಗಿರುವವರಿಗೆ ಈ ಸಂಭವವು “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ” ಹಾಗೆಯೇ ಅನಿರೀಕ್ಷಿತವಾಗಿ ಬರುವದು.—1 ಥೆಸಲೋನಿಕ 5:2,3.
ಇದು ಯಾವುದಕ್ಕೆ ನಡಿಸುವದು? ಯಾವುದು ನಿಜವಾಗಿಯೂ “ಯುದ್ಧಗಳನ್ನು ಕೊನೆಗಾಣಿಸುವ ಯುದ್ಧವೂ” ಅದಕ್ಕೆ ನಡಿಸುವದು. ಇದು ಬೈಬಲಲ್ಲಿ “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ವೆಂದು ಕರೆಯಲ್ಪಟ್ಟಿರುವ ಅರ್ಮಗೆದ್ದೋನ್ ಯುದ್ಧಕ್ಕೆ ನಡಿಸುವದು. ಎಲ್ಲಾ ಕೆಟ್ಟವರು ಮತ್ತು ಅವರ ಬೆಂಬಲಿಗರು ಇದರಲ್ಲಿ ನಾಶಗೊಳ್ಳುವರು. “ಕೆಡುಕರು ತೆಗೆದು ಹಾಕಲ್ಪಡುವರು.” (ಪ್ರಕಟನೆ 16:14-16; ಕೀರ್ತನೆ 37:9) ಅಂತಿಮವಾಗಿ, ಮಹಾ ಯುದ್ದಪ್ರೇರಕನಾದ ಸೈತಾನನನ್ನು ಅವನು ಇನ್ನು ಮುಂದೆ ಮಾನವರನ್ನು ಪ್ರಚೋದಿಸಲು ಅಸಾಧ್ಯವಾಗಿರುವ ಸ್ದಳದಲ್ಲಿ ಬಂಧಿಸಲಾಗುವದು. ಕ್ರಮೇಣ ಅವನನ್ನು ನಾಶಮಾಡಲಾಗುವದು.—ಪ್ರಕಟನೆ 20:1-3; 7-10.
ಆದರೂ, ಇದು ಅಪರಾಧಿ, ನಿರಪರಾಧಿಗಳಿಬ್ಬರನ್ನೂ ಅವಿವೇಕದಿಂದ ಸಂಹರಿಸುವದು ಮನರಹಿತ ನಾಶನವಲ್ಲವೆಂಬದನ್ನು ಗಮನಿಸಿರಿ. ಇದರಲ್ಲಿ ಬದುಕಿ ಉಳಿಯುವವರು ಇರುವರು ಮತ್ತು ಇವರು “ದೇವರ ಆಲಯದಲ್ಲಿ ಹಗಲಿರುಳು ಆತನ ಸೇವೆ” ಮಾಡುವವರೇ. ಹೌದು, ಈಗ ಯುದ್ಧಾಭ್ಯಾಸವನ್ನು ನಿಲ್ಲಿಸಿ ಸತ್ಕ್ರೆಸ್ತನ ಶಾಂತಿಪೂರ್ಣ ಮಾರ್ಗವನ್ನು ಅನುಸರಿಸುವರು ಈ ಕೊನೆಯ ಮಹಾ ಯುದ್ಧದಲ್ಲಿ ಪಾರಾಗುವರು. ಇವರ ಸಂಖ್ಯೆ ದೊಡ್ಡದೋ? “ಯಾರಿಂದಲೂ ಎಣಿಸಲಾರದಂತಹ ಮಹಾ ಸಮೂಹ. . .ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಎಂದು ಬೈಬಲ್ ಇವರನ್ನು ಕರೆಯುತ್ತದೆ.—ಪ್ರಕಟನೆ 7:9, 14, 15.
ಯುದ್ಧಾನಂತರ
ಇವರಿಗೆ ಎಂತಹ ನೆಮ್ಮದಿ! ಅನೇಕ ರಾಷ್ಟ್ರೀಯ ಸರಕಾರಗಳ ಬದಲಿಗೆ ದೇವರ ರಾಜ್ಯವೆಂಬ ಒಂದೇ ಸರಕಾರವಿರುವದು. (ದಾನಿಯೇಲ 2:44; ಮತ್ತಾಯ 6:9,10) ಅಹಂಕಾರಿ ಮತ್ತು ಹೆಬ್ಬಯಕೆಯ ಜನರ ಬದಲಿಗೆ ದೀನರು ಭೂಮಿಗೆ ಬಾಧ್ಯರಾಗಿ “ಮಹಾ ಸೌಖ್ಯದಿಂದ ಆನಂದಿಸುವರು” (ಕೀರ್ತನೆ 37:10, 11) “ದೇವರು ತಾನೇ. . .ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ. ಇನ್ನು ದು:ಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:3,4) ಯೆಹೋವನು “ಲೋಕದ ಎಲ್ಲಾ ಭಾಗಗಳಲ್ಲೂ ಯುದ್ಧವನ್ನು” ನಿಲ್ಲಿಸಿಬಿಡುವನು. ಖಡ್ಗಗಳು ಗುಳಗಳಾಗಿ ಮತ್ತು ಭರ್ಜಿಗಳು ಕುಡುಗೋಲುಗಳಾಗಿ ಬಡಿಯಲ್ಪಡುವವು. “ಅವರು ಇನ್ನೆಂದೂ ಯುದ್ಧವನ್ನು ಕಲಿಯರು.”—ಕೀರ್ತನೆ 46:8,9; ಯೆಶಾಯ 2:4.
ಇಂತಹ ಲೋಕದಲ್ಲಿ ನೀವು ಜೀವಿಸ ಬಯಸಲಾರಿರೇ? ನಿಶ್ಚಯವಾಗಿಯಾ ಬಯಸುವಿರಿ! ಆ ಸಾಧ್ಯತೆ ನಿಮಗಿದೆ. ಇದಕ್ಕೆ ಮೊದಲ ಹೆಜ್ಜೆಯು ದೇವರ ವಾಕ್ಯವಾದ ಬೈಬಲನ್ನು ಅಭ್ಯಸಿಸಿ ಈ ನಿರೀಕ್ಷೆ ಸತ್ಯ ಮತ್ತು ನಂಬಲರ್ಹವೆಂದು ನೀವೇ ಖಚಿತ ಮಾಡಿಕೊಳ್ಳುವದೇ. ಆ ಬಳಿಕ, ಈಗ ನಿಮಗಾಗಿರುವ ದೇವರ ಚಿತ್ತವೇನೆಂದು ಬೈಬಲಿಂದ ತಿಳಿದು ಅದರಂತೆ ವರ್ತಿಸಿರಿ. ಅಧ್ಯಯನವೆಂದರೆ ಪ್ರಯತ್ನವೆಂಬದು ನಿಜವಾದರೂ ಅದು ಸಾರ್ಥಕ. ನಿಮಗೆ ಸಿಕ್ಕುವ ಜ್ಞಾನವನ್ನು ಸದುಪಯೋಗಿಸುವಲ್ಲಿ ಅದು “ನಿತ್ಯಜೀವ” ವಾಗಿ ಪರಿಣಮಿಸುವದೆಂದು ಯೇಸು ಹೇಳಿದನು. (ಯೋಹಾನ 17:3) ಇದಕ್ಕಿಂತ ಅಧಿಕ ಪ್ರಾಮುಖ್ಯವಾದ ಇನ್ನೊಂದು ವಿಷಯವಿದೆಯೇ? (w88 11/1)