ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 6/8 ಪು. 32
  • ಸಮಯದ ಮಿಡಿತದ ಮೇಲೆ ಬೆರಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮಯದ ಮಿಡಿತದ ಮೇಲೆ ಬೆರಳು
  • ಎಚ್ಚರ!—1993
ಎಚ್ಚರ!—1993
g93 6/8 ಪು. 32

ಸಮಯದ ಮಿಡಿತದ ಮೇಲೆ ಬೆರಳು

ಯೆಹೋವನ ಸಾಕ್ಷಿಗಳ ಜರ್ಮನಿಯ ಶಾಖಾ ಕಚೇರಿಯು, ಒಬ್ಬ 77 ವರ್ಷ ವಯಸ್ಸಿನ ಕ್ಯಾತೊಲಿಕ್‌ ಸಂನ್ಯಾಸಿಯಿಂದ ಒಂದು ಪತ್ರವನ್ನು ಪಡೆಯಿತು. ಅವನು ವಿವರಿಸಿದ್ದು:

“ನನ್ನ ಕ್ರೈಸ್ತ ಸಂನ್ಯಾಸಿ ಮಠವು 25 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದರಿಂದ, ನಾನು ವೃದ್ಧರಿಗಾಗಿರುವ ಒಂದು ಮನೆಯಲ್ಲಿ ಜೀವಿಸುತ್ತಿದ್ದೇನೆ. ನಾನು ನಿಮ್ಮ ಎಲ್ಲಾ ನಂಬಿಕೆಗಳನ್ನು ಒಪ್ಪುವದಿಲ್ಲ, ಆದರೆ ನಾನಿಂದು ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದಂಥ ವಿಷಯವು ನೀವು ನಿಮ್ಮ ಬೆರಳನ್ನು ಸಮಯದ ಮಿಡಿತದ ಮೇಲೆ ಇಟ್ಟಿರುವಿರೆಂದು ನಾನು ಒಪ್ಪುವಂತೆ ಮಾಡಿದೆ. ನೀವು ನಿಜವಾಗಿಯೂ ಒಂದು ಕಾವಲಿನಬುರುಜು; ಎರಡನೆಯ ಪುಟವು ವಾಗ್ದಾನಿಸುವಂತೆ, ‘ಬೈಬಲ್‌ ಪ್ರವಾದನೆಯನ್ನು ನೆರವೇರಿಸುವ ಲೋಕ ಘಟನೆಗಳ ಮೇಲೆ ಕಾವಲಿಡುವ’ ಕಾರ್ಯವನ್ನು ಮಾಡುತ್ತಿದ್ದೀರಿ.

“ನೀವು ಧೈರ್ಯವಾಗಿಯೂ ಯುಕ್ತವಾಗಿಯೂ 1 ಥೆಸಲೊನೀಕ 5:3 ರಲ್ಲಿರುವ ಪೌಲನ ಮಾತುಗಳನ್ನು ವಿವರಿಸುತ್ತೀರಿ: ‘ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು . . . ಬರುವದು.’ ನಮ್ಮ ಚರ್ಚಿನಲ್ಲಿ ಎಲ್ಲಿಯೂ ನಾನು ಇಂತಹ ವಿವರಣೆಗಳನ್ನು ಕಾಣುವದಿಲ್ಲ. ಒಬ್ಬ ವ್ಯಕ್ತಿಯು, ಯೆಹೋವನ ಸಾಕ್ಷಿಗಳ ಮೇಲೆ ಪವಿತ್ರಾತ್ಮವು ಕೆಲಸ ನಡಿಸುವುದಿಲ್ಲವೆಂದು ವಾದಿಸಲಾರನು. . . . ನಾನು ನಿಮ್ಮ ಪತ್ರಿಕೆಗಳನ್ನು ಕ್ರಮವಾಗಿ ಓದಲು ಆನಂದಿಸುವೆನು.”

ಈ ಕ್ಯಾತೊಲಿಕ್‌ ಸಂನ್ಯಾಸಿಯ ಉದಾಹರಣೆಯನ್ನು ಅನುಕರಿಸುತ್ತಾ, ನೀವು ಕೂಡ ಲೋಕ ಘಟನೆಗಳು ಬೈಬಲ್‌ ಪ್ರವಾದನೆಯನ್ನು ಹೇಗೆ ನೆರವೇರಿಸುತ್ತವೆ ಮತ್ತು ದೇವರ ರಾಜ್ಯವು ಹೇಗೆ ಬೇಗನೆ ದುಷ್ಟತನವನ್ನು ನಾಶಮಾಡಿ ಒಂದು ಭೂವ್ಯಾಪಕ ಪ್ರಮೋದವನವನ್ನು ಸೃಷ್ಟಿಸುವುದು ಎಂಬ ಹೆಚ್ಚಿನ ವಿಷಯವನ್ನು ಕಲಿಯಬಲ್ಲಿರಿ.

ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲ್‌ಧ್ಯಯನವನ್ನು ನಡಿಸಲಿಕ್ಕಾಗಿ ಯಾರಾದರೂ ಸಂದರ್ಶಿಸುವಂತೆ ನೀವು ಬಯಸುವುದಾದರೆ ದಯವಿಟ್ಟು, Watch Tower, H-58 Old Khandala Road, Lonavla, 410 401 Mah., India ಇವರಿಗೆ, ಅಥವಾ 5 ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.

[ಪುಟ 32 ರಲ್ಲಿರುವ ಚಿತ್ರ]

ನಮ್ಮ ಮಹಾ ಸೃಷ್ಟಿಕರ್ತನಲ್ಲಿ ಉಲ್ಲಾಸಿಸುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ