ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ಒಂದು ಪ್ರಾಯಶ್ಚಿತ್ತ
ಮಾರ್ಚ್ 31, 1970 ರಲ್ಲಿ, ಜಪಾನಿನ ಮೌಂಟ್ ಫ್ಯೂಜಿಯ ಹತ್ತಿರ ಒಂದು ಜೆಟ್ವಿಮಾನವು ಅಪಹರಿಸಲ್ಪಟ್ಟಿತು. ಜಾಪನೀಸ್ ರೆಡ್ ಆರ್ಮಿ ಎಂಬ ಪಕ್ಷದ ಒಂಭತ್ತು ಮಂದಿ ಸದಸ್ಯರು ವಿಮಾನದ 120 ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಮತ್ತು ನೌಕರ ತಂಡವನ್ನು ಒತ್ತೆಯಾಳುಗಳಾಗಿ ಹಿಡಿದು, ಉತ್ತರ ಕೊರಿಯಕ್ಕೆ ಸುರಕ್ಷಿತ ಸಂಚಾರ ನೀಡುವಂತೆ ನಿರ್ಬಂಧಿಸಿದರು.
ರಿಪಬ್ಲಿಕ್ ಆಫ್ ಕೊರಿಯದ ಸೋಲ್ನಲ್ಲಿ ವಿಮಾನ ಬಂದು ತಂಗಿದಾಗ, ಸಾಗಣೆ ಸೌಕರ್ಯದ ಉಪಮಂತ್ರಿ ಶಂಜಿರೋ ಯಮಮುರ ಸೆರೆವಾಸಿಗಳ ಪರವಾಗಿ ತನ್ನ ಜೀವವನ್ನು ಸಂಚಕಾರವಾಗಿ ನೀಡಿಕೊಂಡರು. ತಮ್ಮ ಸ್ವಂತ ಸುರಕ್ಷೆಗಾಗಿ ಅವರನ್ನು ಜಾಮೀನಾಗಿ ಸ್ವೀಕರಿಸಲು ಒಪ್ಪುತ್ತಾ, ವಿಮಾನ ಸಿಬ್ಬಂದಿಗಳನ್ನು ಹೊರತು ಬೇರೆಲ್ಲಾ ಒತ್ತೆಯಳುಗಳನ್ನು ಅಪಹರಣಗಾರರು ಬಿಟ್ಟುಬಿಟ್ಟರು. ಅನಂತರ ಅವರು ವಿಮಾನದಲ್ಲಿ ಪ್ಯಾಂಗ್ಯಾಂಗ್ಗೆ ಹಾರಿ, ಅಲ್ಲಿ ತಮ್ಮನ್ನು ಉತ್ತರ ಕೊರಿಯದ ಅಧಿಕಾರಿಗಳಿಗೆ ಶರಣು ಮಾಡಿದರು. ಶ್ರೀ. ಯಮಮುರ ಮತ್ತು ಪೈಲಟ್ ಅನಂತರ ಸುರಕ್ಷಿತವಾಗಿ ಜಪಾನಿಗೆ ಹಿಂತಿರುಗಿದರು.
ಈ ಪ್ರಕರಣದಲ್ಲಿ, ಒಬ್ಬ ವ್ಯಕ್ತಿಯು 120 ಕ್ಕಿಂತಲೂ ಹೆಚ್ಚು ಒತ್ತೆಯಳುಗಳ ಜೀವವನ್ನು ಬಿಡಿಸಿಕೊಳ್ಳುವ ವಿನಿಮಯವಾಗಿ ಕಾರ್ಯನಡಿಸಿದನು. ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ಒಬ್ಬ ಮನುಷ್ಯನು ತನ್ನ ಜೀವವನ್ನು ಒಂದು ಪ್ರಾಯಶ್ಚಿತವ್ತಾಗಿ ಹೇಗೆ ಕೊಡಶಕ್ತನು ಎಂಬದನ್ನು ಕಾಣಲು ನಮಗಿದು ಸಹಾಯ ಮಾಡಬಹುದು. ಆದರೆ ಬೈಬಲಿನ ಬೋಧನೆಯಾದ ಪ್ರಾಯಶ್ಚಿತವ್ತನ್ನು ಅರ್ಥಮಾಡಿಕೊಳ್ಳಲು, ನಾವೀ ವಿಷಯವನ್ನು ಅಧಿಕ ಪೂರ್ಣವಾಗಿ ಪರೀಕ್ಷಿಸಲೇ ಬೇಕು.
ಮೊದಲನೆಯದಾಗಿ, ಪಾಪದ ಮೂಲವನ್ನು ಸವಿಸ್ತಾರವಾಗಿ ಅಧ್ಯಯನ ಮಾಡುವ ಅಗತ್ಯ ನಮಗಿದೆ. “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು. ಎಲ್ಲರು ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿ ವ್ಯಾಪಿಸಿತು,” ಎನ್ನುತ್ತದೆ ಬೈಬಲ್. (ರೋಮಾಪುರ 5:12) ಇದು ಸಂಭವಿಸಿದ್ದು ಹೇಗೆ? ಅಲ್ಲಿ ತಿಳಿಸಿದ ಆ ಮನುಷ್ಯನು ಆದಾಮನು, ಸೃಷ್ಟಿಸಲ್ಪಟ್ಟ ಮಾನವರಲ್ಲಿ ಮೊದಲಿಗನು. ಆತನ ಸೃಷ್ಟಿಯ ಚಾರಿತ್ರಿಕ ದಾಖಲೆಯನ್ನು ಮತ್ತು ದೇವರ ಮಟ್ಟವನ್ನು ತೊರೆಯುವಿಕೆಗೆ ಅವನನ್ನು ನಡಿಸಿದ್ದು ಯಾವುದು ಎಂಬದನ್ನು ನೀವು ಓದಬಲ್ಲಿರಿ. ಬೈಬಲ್ನ ಆದಿಕಾಂಡ ಪುಸ್ತಕದ ಮೊದಲ ಮೂರು ಅಧ್ಯಾಯಗಳಲ್ಲಿ ಇದು ತಿಳಿಸಲ್ಪಟ್ಟಿರುತ್ತದೆ.
ಆದಾಮನು ಪ್ರಥಮವಾಗಿ ಪಾಪಗೈದಾಗ ಆ ದೃಶ್ಯದ ಹಿಂದೆ ಒಬ್ಬ ಪ್ರೇರೇಪಕನು ಇದ್ದನು ಎಂದು ಆ ದಾಖಲೆಯು ಪ್ರಕಟಿಸುತ್ತದೆ. ತನ್ನ ಸ್ವಂತ ಅಧಿಕಾರ ಲಾಲಸೆಯನ್ನು ತೃಪ್ತಿಗೊಳಿಸುವುದಕ್ಕಾಗಿ, ಆ ಪ್ರೇರೇಪಕನು ಆದಾಮನ ಮೇಲೆ ಮತ್ತು ಅವನಿಗೆ ಹುಟ್ಟಬಹುದಾಗಿದ್ದ ಯಾವುದೇ ಸಂತಾನದ ಮೇಲೆ ಪ್ರಭುತ್ವ ನಡಿಸುವುದಕ್ಕಾಗಿ ಸಂಚು ಮಾಡಿದನು. ಆ ಪ್ರೇರೇಪಕನು ಯಾರೆಂದರೆ ಪಿಶಾಚನಾದ ಸೈತಾನನು. ಅವನನ್ನು “ಪುರಾತನ ಸರ್ಪ” ಎಂದೂ ಕರೆಯಲಾಗಿದೆ ಯಾಕೆಂದರೆ ಪಾಪ ಮಾಡುವಂತೆ ಆದಾಮನನ್ನು ನಡಿಸಿದ್ದರಲ್ಲಿ ಅವನು ಒಂದು ಸರ್ಪವನ್ನು ಉಪಯೋಗಿಸಿದನು. (ಪ್ರಕಟನೆ 12:9) ಮಾನವ ಕುಲದ ಪ್ರೀತಿಯುಳ್ಳ ನಿರ್ಮಾಣಿಕನು, ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬದನ್ನು ನಿರ್ಣಯಿಸುವ ಆತನ ಹಕ್ಕನ್ನು ಆದಾಮನು ಗೌರವಿಸುವಂತೆ ಹೇಳಿದ್ದನಾದರೂ, ದೇವರಿಗೆ ಅವಿಧೇಯಳಾಗುವಂತೆ ಆದಾಮನ ಪತ್ನಿ ಹವ್ವಳನ್ನು ಸರ್ಪವು ಸೆಳೆಯಿತು. ಅವಳು ಅನಂತರ ತನ್ನ ಗಂಡನನ್ನು ಅವಿಧೇಯನಾಗುವಂತೆ ಸೆಳೆದಳು. ಆ ಮಾರ್ಗಕ್ರಮದಿಂದಾಗಿ, ಅದಾಮನು ತನ್ನನ್ನು ದೇವರಿಂದ ಸ್ವತಂತ್ರನಾಗಿ ಘೋಷಿಸಿಕೊಂಡನು, ಬುದ್ಧಿಪೂರ್ವಕವಾಗಿ ಪಾಪಪೂರ್ಣನಾದನು, ಮತ್ತು ತನ್ನ ಸಂತತಿಗೆ ಆ ರೀತಿಯ ಜೀವವನ್ನು ಮಾತ್ರವೇ ದಾಟಿಸ ಶಕ್ತನಾದನು.
ಆ ಫಲಿತಾಂಶಗಳನ್ನು ನಾವಿನ್ನೂ ಅನುಭವಿಸುತ್ತಿದ್ದೇವೆ. ಅದು ಹೇಗೆ? ಆದಾಮ ಮತ್ತು ಹವ್ವರು ಬುದ್ಧಿಪೂರ್ವಕವಾಗಿ ಅವಿಧೇಯತೆಯನ್ನು ಆದುಕೊಂಡರೆ, ಫಲಿತಾಂಶವು ಮರಣವಾಗಿರುವುದು ಎಂದು ನಿರ್ಮಾಣಿಕನು ನ್ಯಾಯವಾಗಿ ವಿಧಿಸಿದ್ದನು. ಆದುದರಿಂದ ಪಾಪ ಮಾಡಿದ ಮೂಲಕ, ಆದಾಮನು ಮಾನವ ಕುಲವನ್ನೆಲ್ಲಾ ಪಾಪ ಮತ್ತು ಮರಣದ ದಾಸ್ಯಕ್ಕೆ ಮಾರಿದನು.—ಆದಿಕಾಂಡ 2:17; 3:1-7.
ಆ ಪಾಪಪೂರ್ಣ ಸ್ಥಿತಿಯೊಳಗಿಂದ ಮಾನವ ಕುಲವು ಹೇಗೆ ವಿಮೋಚಿಸಲ್ಪಡ ಸಾಧ್ಯವಿದೆ? ಯೇಸು ಕ್ರಿಸ್ತನು “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು [ಪ್ರಾಯಶ್ಚಿತ್ತ, NW] ಕೊಡುವದಕ್ಕೂ” ಬಂದನು, ಮತ್ತು ಇದು ಮಾನವ ಕುಲವನ್ನು ಬಿಡುಗಡೆಮಾಡಲು ದಾರಿಯನ್ನು ತೆರೆಯಿತು.—ಮತ್ತಾಯ 20:28.
ಆವರಿಸುವುದು ಮತ್ತು ಬಿಡುಗಡೆ ಮಾಡುವುದು
ಮಾನವ ಕುಲವನ್ನು ವಿಮೋಚಿಸುವ ಕಾರ್ಯಗತಿಯಲ್ಲಿ ಎರಡು ಹೆಜ್ಜೆಗಳು ಒಳಗೂಡಿವೆ ಎಂದು ಬೈಬಲ್ ತೋರಿಸುತ್ತದೆ: (1) ಹಿಂದೆ ಖರೀದಿಸುವುದು ಮತ್ತು (2) ಬಿಡುಗಡೆ ಮಾಡುವುದು. ಬೈಬಲ್ ಪಂಡಿತ ಆಲ್ಬರ್ಟ್ ಬಾನ್ಸ್, “ಪ್ರಾಯಶ್ಚಿತ್ತ” ಎಂಬದಾಗಿ ಭಾಷಾಂತರವಾದ ಗ್ರೀಕ್ ಪದವಾದ (ಲಿಟ್ರೋನ್) ಕುರಿತು ಬರೆದದ್ದು: “ಪ್ರಾಯಶ್ಚಿತ್ತ ಎಂಬದು ಅಕ್ಷರಶಃ ಸೆರೆವಾಸಿಗಳ ವಿಮೋಚನೆಗಾಗಿ ಸಲ್ಲಿಸಲ್ಪಡುವ ಒಂದು ಬೆಲೆ. ಯುದ್ಧದಲ್ಲಿ, ಕೈದಿಗಳು ಶತ್ರುವಿನಿಂದ ಒಯ್ಯಲ್ಪಡುವಾಗ, ಅವರ ಬಿಡುಗಡೆಗಾಗಿ ಕೇಳಲ್ಪಡುವ ಹಣವನ್ನು ಒಂದು ಪ್ರಾಯಶ್ಚಿತವ್ತಾಗಿ ಕರೆಯಲಾಗುತ್ತದೆ; ಅಂದರೆ ಯಾವುದರ ಮೂಲಕವಾಗಿ ಅವರು ಸ್ವತಂತ್ರಗೊಳಿಸಲ್ಪಡುತ್ತಾರೋ ಅದು. ಹೀಗೆ ಒಂದು ಶಿಕ್ಷೆಯ ಸ್ಥಿತಿಯಿಂದ, ಅಥವಾ ಕಷ್ಟಾನುಭವದಿಂದ, ಅಥವಾ ಪಾಪದಿಂದ ಯಾರನ್ನಾದರೂ ಬಿಡುಗಡೆ ಮಾಡುವ ಯಾವುದೇ ವಸ್ತುವು ಪ್ರಾಯಶ್ಚಿತವ್ತೆಂದು ಕರೆಯಲ್ಪಡುತ್ತದೆ.”
ಹೌದು, “ಯಾರನ್ನಾದರೂ ಬಿಡುಗಡೆ ಮಾಡುವ ಯಾವುದಾದರೂ ವಸ್ತುವನ್ನು” ಲಿಟ್ರೋನ್ ಎಂಬದಾಗಿ ನಿರ್ದೇಶಿಸಬಹುದು. ಹೀಗೆ ಈ ಗ್ರೀಕ್ ಪದವು ಬಿಡುಗಡೆಮಾಡುವ ಒಂದು ಕ್ರಿಯೆ ಅಥವಾ ಕಾರ್ಯಗತಿಯನ್ನು ಎತ್ತಿಹೇಳುತ್ತದೆ.a
ಪ್ರಾಯಶ್ಚಿತ್ತ ಯಜ್ಞವಾಗಿ ಸಲ್ಲಿಸಲ್ಪಟ್ಟ ಬೆಲೆಯ ಮೌಲ್ಯವನ್ನು ಒತ್ತಿಹೇಳಲು ಅಪೊಸ್ತಲ ಪೌಲನು ಸಂಬಂಧಿತ ಆಂಟಿಲಿಟ್ರೋನ್ ಪದವನ್ನು ಉಪಯೋಗಿಸಿದ್ದಾನೆ. “ಆತನು [ಯೇಸು] ಎಲ್ಲರ ವಿಮೋಚನಾರ್ಥವಾಗಿ [ಅನುರೂಪದ ಪ್ರಾಯಶ್ಚಿತವ್ತಾಗಿ, NW] ತನ್ನನ್ನು ಒಪ್ಪಿಸಿಬಿಟ್ಟನು.” ಎಂದು 1 ತಿಮೊಥಿ 2:6 ರಲ್ಲಿ ಅವನು ಬರೆದನು. ಇದರ ಕುರಿತು ಹೇಳಿಕೆ ನೀಡುತ್ತಾ, ಪಾರ್ಕ್ಹಸ್ಟ್ ಗ್ರೀಕ್ ಆ್ಯಂಡ್ ಇಂಗ್ಲಿಷ್ ಲೆಕ್ಸಿಕನ್ ಟು ದ ನ್ಯೂ ಟೆಸ್ಟಮೆಂಟ್ ಹೇಳುವುದು: “ಯಾವುದರಿಂದ ಸೆರೆವಾಸಿಗಳು ಶತ್ರುವಿನ ಕೈಯಿಂದ ಬಿಡಿಸಲ್ಪಡುತ್ತಾರೋ ಆ ಬೆಲೆ ಯಿಂದ ಮತ್ತು ಯಾವುದರಲ್ಲಿ ಒಬ್ಬನ ಜೀವವು ಇನ್ನೊಬ್ಬನ ಜೀವದಿಂದ ವಿಮೋಚಿಸಲ್ಪಡುತ್ತದೊ ಆ ರೀತಿಯ ವಿನಿಮಯ ವನ್ನು ಅದು ಯೋಗ್ಯವಾಗಿ ಸೂಚಿಸುತ್ತದೆ.” ನ್ಯಾಯದ ತಕ್ಕಡಿಯನ್ನು ಸಮತೂಗಿಸುವುದರಲ್ಲಿ ಸಲ್ಲಿಸಲ್ಪಟ್ಟ ಪ್ರಾಯಶ್ಚಿತ್ತ ಯಜ್ಞದ ಬೆಲೆಯ ಅನುರೂಪತೆ ಅಥವಾ ಸಫಲತ್ವದ ಮೇಲೆ ಇಲ್ಲಿ ಒತ್ತು ಹಾಕಲ್ಪಟ್ಟಿದೆ. ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಇಲ್ಲಿ ಹೇಗೆ “ಒಂದು ಅನುರೂಪದ ಪ್ರಾಯಶ್ಚಿತವ್ತಾಗಿ” ಪರಿಗಣಿಸಲ್ಪಡುವುದು?
ಒಂದು ಅನುರೂಪದ ಪ್ರಾಯಶ್ಚಿತ್ತ
ಆದಾಮನು ಮಾನವ ಕುಲದ ಎಲ್ಲರನ್ನು, ನಮ್ಮನ್ನು ಸಹ, ಪಾಪಕ್ಕೆ ಮತ್ತು ಮರಣಕ್ಕೆ ಮಾರಿಬಿಟ್ಟನು. ಅವನು ಅದಕ್ಕಾಗಿ ತೆತ್ತ ಬೆಲೆಯು ಅಥವಾ ಜುಲ್ಮಾನೆಯು, ಅವನ ಪರಿಪೂರ್ಣ ಮಾನವ ಜೀವ ಹಾಗೂ ಅದರ ಸದಾ ಜೀವಿಸುವ ಪ್ರತೀಕ್ಷೆಯು. ಇದನ್ನು ಆವರಿಸಲಿಕ್ಕೆ ಇನ್ನೊಂದು ಪರಿಪೂರ್ಣ ಮಾನವ ಜೀವ—ಒಂದು ಅನುರೂಪವಾದ ಪ್ರಾಯಶ್ಚಿತವ್ತನ್ನು—ಸಲ್ಲಿಸಲ್ಪಡಬೇಕಿತ್ತು. ಆದರೆ, ಅಪೂರ್ಣ ಮಾನವರಿಂದ ಜನಿಸಿದ ಯಾವನೂ, ಬೇಕಾದ ಪರಿಪೂರ್ಣ ಮಾನವ ಜೀವವನ್ನು ಒದಗಿಸಶಕ್ತನಾಗಿರಲಿಲ್ಲ. (ಯೋಬ 14:4; ಕೀರ್ತನೆ 51:5) ವಿವೇಕಪೂರ್ಣ ದೇವರಾದರೋ, ಈ ಬಿಕ್ಕಟ್ಟಿನೊಳಗಿಂದ ಒಂದು ದಾರಿಯನ್ನು ತೆರೆದನು. ಆತನು ತನ್ನ ಏಕ-ಜಾತ ಪುತ್ರನ ಪರಿಪೂರ್ಣ ಮಾನವ ಜೀವವನ್ನು ಪರಲೋಕದಿಂದ ಒಬ್ಬ ಕನ್ನಿಕೆಯ ಗರ್ಭಕ್ಕೆ ಸ್ಥಳಾಂತರಿಸಿ, ಹೀಗೆ ಅವನು ಪರಿಪೂರ್ಣ ಮನುಷ್ಯನಾಗಿ ಜನಿಸುವಂತೆ ಬಿಟ್ಟನು. (ಲೂಕ 1:30-38; ಯೋಹಾನ 3:16-18) ಯೇಸುವಿನ ಕನ್ಯಾ ಜನನದ ಈ ಬೋಧನೆಯು ಒಂದು ಧರ್ಮದ ಸ್ಥಾಪಕನನ್ನು ಉತ್ಕರ್ಷಿಸಲಿಕ್ಕಾಗಿ ಕಲ್ಪಿಸಲ್ಪಟ್ಟ ಕಥೆಯಲ್ಲ. ಬದಲಾಗಿ ಅದು ದೇವರ ಪ್ರಾಯಶ್ಚಿತದ್ತ ಒದಗಿಸುವಿಕೆಯಲ್ಲಿ ಒಂದು ನ್ಯಾಯಸಮ್ಮತ ಹೆಜ್ಜೆಯನ್ನು ವಿವರಿಸುತ್ತದೆ.
ಬಿಡುಗಡೆ ಮಾಡುವಿಕೆಯನ್ನು ಪೂರೈಸಲಿಕ್ಕಾಗಿ ಯೇಸುವಿಗೆ ತಾನು ಭೂಮಿಯಲ್ಲಿದ್ದ ಸಮಯವೆಲ್ಲಾ ಒಂದು ಶುದ್ಧವಾದ ದಾಖಲೆಯನ್ನು ಕಾಪಾಡಿಕೊಳ್ಳಬೇಕಿತ್ತು. ಅವನದನ್ನು ಮಾಡಿದನು. ಅನಂತರ ಅವನು ಒಂದು ಯಜ್ಞಾರ್ಪಣೆಯ ಮರಣವನ್ನು ಅನುಭವಿಸಿದನು. ಈ ರೀತಿಯಲ್ಲಿ ಯೇಸುವು, ಮಾನವ ಕುಲವನ್ನು ಬಿಡುಗಡೆ ಮಾಡುವುದಕ್ಕೆ ತನ್ನ ಪರಿಪೂರ್ಣ ಮಾನವ ಜೀವದ ಬೆಲೆಯನ್ನು ಪ್ರಾಯಶ್ಚಿತವ್ತಾಗಿ ಸಲ್ಲಿಸಿದನು. (1 ಪೇತ್ರ 1:19) ಹೀಗೆ “ಎಲ್ಲರಿಗೋಸ್ಕರ ಒಬ್ಬನು ಸತ್ತನು” ಎಂದು ನಾವು ನಿಷ್ಕೃಷ್ಟವಾಗಿ ಹೇಳಬಲ್ಲೆವು. (2 ಕೊರಿಂಥ 5:14) ಹೌದು, “ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.”—1 ಕೊರಿಂಥ 15:22.
ಅನೇಕರನ್ನು ಬಿಡಿಸುವುದಕ್ಕಾಗಿ ಒಬ್ಬ ಮನುಷ್ಯನು
ಆರಂಭದಲ್ಲಿ ತಿಳಿಸಿದ ಅಪಹರಣದ ಪ್ರಕರಣದಲ್ಲಿ, ಒತ್ತೆಯಳುಗಳು ಒಂದುವೇಳೆ ಐಶ್ವರ್ಯವಂತರಾಗಿದ್ದರೂ ಸಹ ಅವರಿಗೆ ತಮ್ಮನ್ನು ಬಿಡುಗಡೆ ಮಾಡಿಕೊಳ್ಳುವ ಯಾವ ದಾರಿಯೂ ಇರಲಿಲ್ಲ. ಹೊರಗಣ ಸಹಾಯವು ಬೇಕಿತ್ತು, ವಿನಿಮಯವಾಗಿ ಕಾರ್ಯನಡಿಸುವ ಮನುಷ್ಯನಿಗೆ ನಿರ್ದಿಷ್ಟ ಷರತ್ತುಗಳನ್ನು ನೆರವೇರಿಸಲಿಕ್ಕಿತ್ತು. ಮಾನವ ಕುಲವನ್ನು ಬಿಡುಗಡೆಮಾಡುವುದಕ್ಕೆ ಬೇಕಾದ ಪ್ರಾಯಶ್ಚಿತದ್ತ ಸಂಬಂಧದಲ್ಲಿ ಸಹ, ಒಂದು ಎಷ್ಟೋ ಹೆಚ್ಚು ಘನವಾದ ರೀತಿಯಲ್ಲಿ ಇದು ಸತ್ಯವಾಗಿದೆ. ಒಬ್ಬ ಕೀರ್ತನೆಗಾರನು ಬರೆದದ್ದು: “ಅವರು . . . ತಾವು ಬಹಳ ಆಸ್ತಿವಂತರೆಂದು ಉಬ್ಬಿದ್ದಾರೆ. ಆದರೆ ಯಾವನಾದರೂ ತನ್ನ ಸಹೋದರನು ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು [ಪ್ರಾಯಶ್ಚಿತವ್ತನ್ನು, NW] ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು. ಮರಣವನ್ನು ತಪ್ಪಿಸಿಕೊಳ್ಳುವದಕ್ಕೆ ಎಷ್ಟು ಹಣಕೊಟ್ಟರೂ ಸಾಲುವದೇ ಇಲ್ಲ.” (ಕೀರ್ತನೆ 49:6-8) ಮಾನವ ಕುಲಕ್ಕಾಗಿ ಹೊರಗಣ ಸಹಾಯದ ಆವಶ್ಯಕತೆ ಇತ್ತು, ನಿಶ್ಚಯ. ದೇವರ ನ್ಯಾಯದ ತಕ್ಕಡಿಯನ್ನು ಸಮತೂಕಗೊಳಿಸಲು ಆವಶ್ಯಕವಾದ ಷರತ್ತುಗಳನ್ನು ಒಬ್ಬ ಮಾನವನು ನೆರವೇರಿಸಿದ ಪಕ್ಷದಲ್ಲಿ, ಮಾನವ ಕುಲದ ಎಲ್ಲರನ್ನು ಬಿಡುಗಡೆಮಾಡಲು ಒಬ್ಬ ಮನುಷ್ಯನು ಸಾಕಾಗಲಿದ್ದನು. ಆ ಯೋಗ್ಯತೆಗಳನ್ನು ಮುಟ್ಟಲು ಒಬ್ಬನೇ ಪರಿಪೂರ್ಣ ಮನುಷ್ಯನು ಯೇಸು ಕ್ರಿಸ್ತನಾಗಿದ್ದನು.
ಯೇಸು ಕ್ರಿಸ್ತನ ಮೂಲಕ ಪ್ರಾಯಶ್ಚಿತವ್ತನ್ನು ಸಲ್ಲಿಸುವ ಮೂಲಕ ಮಾನವ ಕುಲದ ವಿಮೋಚನೆಗಾಗಿ ಯೆಹೋವ ದೇವರು ಒದಗಿಸಿದನು. ಆದರೆ ದೇವರು ಹೆಚ್ಚನ್ನು ಮಾಡಿದ್ದಾನೆ. ಮಾನವ ಕುಲವನ್ನು ಪಾಪಕ್ಕೆ ನಡಿಸಿದವನಾದ ಪಿಶಾಚ ಸೈತಾನನ ಮೇಲೆ ಅವನೊಂದು ಮರಣ ಶಿಕ್ಷೆಯನ್ನು ವಿಧಿಸಿದ್ದಾನೆ. (ಪ್ರಕಟನೆ 12:7-9) ಯೆಹೋವನು ಶೀಘ್ರದಲ್ಲೇ ಆ ಅಪರಾಧಿಯನ್ನು ಬಂಧಿಸಲಿರುವನು ಮತ್ತು ಕೊನೆಗೆ ಅವನನ್ನು ನಿತ್ಯ ನಾಶನವನ್ನು ಸೂಚಿಸುವ ‘ಬೆಂಕಿ ಗಂಧಕಗಳುರಿಯುವ ಕೆರೆಯೊಳಗೆ ದೊಬ್ಬುವ’ ಮೂಲಕ ತೀರ್ಪನ್ನು ನಿರ್ವಹಿಸುವನು. (ಪ್ರಕಟನೆ 20:1-3, 7-10, 14) ಈ ದುಷ್ಟ ಆತ್ಮ ಜೀವಿಯ ನಿರ್ಮೂಲನೆಯೊಂದಿಗೆ ಮತ್ತು ಪ್ರಾಯಶ್ಚಿತದ್ತ ಅನ್ವಯದ ಮೂಲಕವಾಗಿ, ಮಾನವ ಕುಲವು ಪಾಪ ಮತ್ತು ಮರಣದ ಹಿಡಿತದಿಂದ ಮಾತ್ರವೇ ಅಲ್ಲ, ಸೈತಾನನ ಪ್ರಭಾವದಿಂದಲೂ ಬಿಡುಗಡೆಯನ್ನು ಆನಂದಿಸಲಿರುವುದು. ಹೀಗೆ ಮುಕ್ತರಾದ ಮತ್ತು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಬೆಲೆಯನ್ನು ಪೂರ್ಣವಾಗಿ ಅನ್ವಯಿಸಲ್ಪಟ್ಟವರಾದ ವಿಧೇಯ ಮಾನವರು, ಮಾನವ ಪರಿಪೂರ್ಣತೆಯ ಕಡೆಗೆ ಪ್ರಗತಿಯನ್ನು ಮಾಡುವರು.
ಪ್ರಾಯಶ್ಚಿತದ್ತ ಏರ್ಪಾಡು ಮತ್ತು ನೀವು
ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಕುರಿತು ಕಲಿತಾದ ಮೇಲೆ, ಪೌರ್ವಾತ್ಯದ ಅನೇಕರು ದೇವರು ತಮಗಾಗಿ ಮಾಡಿರುವದನ್ನು ಆಳವಾಗಿ ಗಣ್ಯಮಾಡಿದ್ದಾರೆ. ಕಸುವೊ ಒಂದು ಉದಾಹರಣೆಯಾಗಿದ್ದಾನೆ. ಅವನ ಜೀವಿತವು ಪೆಯಿಂಟ್ ತಿನ್ನರ್ ಸೇದಿ ಅಮಲೇರಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿತ್ತು. ಅದರ ಅಮಲಿನಲ್ಲಿ ವಾಹನ ನಡಿಸುವಾಗ, ಅವನು ಪದೇ ಪದೇ ತನ್ನ ಕಾರುಗಳನ್ನು ಧ್ವಂಸಪಡಿಸುತ್ತಿದ್ದನು. ಅವನ ಮಿತ್ರರಲ್ಲಿ ಮೂವರು ತಮ್ಮ ಆರೋಗ್ಯವನ್ನು ಕೆಡಿಸಿಕೊಂಡ ನಂತರ ಆತ್ಮಹತ್ಯವನ್ನು ಮಾಡಿದ್ದರು. ಕಸುವೊ ಸಹ ಆತ್ಮಹತ್ಯ ಮಾಡಲು ಪ್ರಯತ್ನಿಸಿದ್ದನು. ತದನಂತರ, ಅವನು ಬೈಬಲಿನ ಅಧ್ಯಯನವನ್ನು ಪ್ರಾರಂಭಿಸಿದನು. ತಾನು ಕಲಿತ ಸತ್ಯದಿಂದ ಪ್ರೇರೇಪಿತನಾಗಿ, ತನ್ನ ಜೀವನವನ್ನು ಶುದ್ಧಮಾಡಿಕೊಳ್ಳಲು ನಿರ್ಣಯಿಸಿದನು. ಪೆಯಿಂಟ್ ತಿನ್ನರ್ನಿಂದ ತನ್ನ ದೇಹವನ್ನು ದುರುಪಯೋಗಿಸಿದ ತನ್ನ ದುರಭ್ಯಾಸದೊಂದಿಗೆ ಅವನು ಹೋರಾಡಿದನು, ಮತ್ತು ಅನೇಕ ಹಿಂದುವರಿಕೆಗಳು ಉಂಟಾದವು. ತನ್ನ ದೈಹಿಕ ಅಪೇಕ್ಷೆ ಮತ್ತು ಯಾವುದು ಯೋಗ್ಯವೋ ಅದನ್ನು ಮಾಡುವ ಬಯಕೆಯ ನಡುವೆ ಅವನು ಛಿದ್ರವಾಗಿ ಹೋದನು. ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಯೋಗ್ಯತೆಯ ಮೂಲಕವಾಗಿ ಪಾಪಕ್ಷಮೆಗಾಗಿ ದೇವರಿಗೆ ಪ್ರಾರ್ಥಿಸಲು ಶಕ್ತನಾದದ್ದಕ್ಕಾಗಿ ಅವನೆಷ್ಟು ಸಂತೋಪಟ್ಟನು! ಪ್ರಾರ್ಥನೆಯ ಮೂಲಕ ಮತ್ತು ಕ್ರೈಸ್ತ ಮಿತ್ರರ ಸಹಾಯದೊಂದಿಗೆ, ಕಸುವೊ ತನ್ನ ಚಟವನ್ನು ನೀಗಿಸಿಕೊಂಡನು ಮತ್ತು ಈಗ ಒಂದು ಶುದ್ಧ ಮನಸ್ಸಾಕ್ಷಿಯೊಂದಿಗೆ ಸಂತೋಷವುಳ್ಳ ಶುಶ್ರೂಷಕನಾಗಿ ಯೆಹೋವನನ್ನು ಸೇವಿಸುತ್ತಿದ್ದಾನೆ.
ಹಿಂದಿನ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಚಿಸಾಕೊ ಇವಳ ನೆನಪು ನಿಮಗಿದೆಯೇ? ಒಂದು ಬೈಬಲ್ ಅಭ್ಯಾಸದ ಮೂಲಕ ಅವಳು ಸಹ ಪ್ರಾಯಶ್ಚಿತದ್ತ ಪ್ರೀತಿಯುಳ್ಳ ಏರ್ಪಾಡನ್ನು ತಿಳುಕೊಂಡಳು. ಮಾನವ ಕುಲವನ್ನು ಪಾಪದಿಂದ ಬಿಡುಗಡೆ ಮಾಡುವುದಕ್ಕಾಗಿ ದೇವರು ತನ್ನ ಮಗನನ್ನು ಕೊಟ್ಟನು ಎಂಬದನ್ನು ಆಕೆ ಕಲಿತಾಗ, ಆಕೆ ಆಳವಾಗಿ ಪ್ರೇರೇಪಿಸಲ್ಪಟ್ಟಳು. ಚಿಸಾಕೊ ತನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಂಡಳು. ಈಗ ತನ್ನ 77 ನೆಯ ವಯಸ್ಸಿನಲ್ಲಿ ಸಹ ಅವಳು ಯೆಹೋವನ ಮಹಾ ಪ್ರೀತಿ ಮತ್ತು ಆತನು ತೋರಿಸುವ ಅಪರಿಮಿತ ದಯೆಯ ಕುರಿತು ಇತರರಿಗೆ ತಿಳಿಸುವುದರಲ್ಲಿ ಪ್ರತಿ ತಿಂಗಳು ಸುಮಾರು 90 ತಾಸುಗಳನ್ನು ಕಳೆಯುತ್ತಿದ್ದಾಳೆ.
ಪ್ರಾಯಶ್ಚಿತ್ತ ನಿಮಗೆ ಸಹ ಮಹತ್ವದ್ದಾಗಿರಬೇಕು. ಅದರ ಮೂಲಕವಾಗಿ ದೇವರು ಮಾನವ ಕುಲಕ್ಕಾಗಿ ನಿಜ ಬಿಡುಗಡೆಯ—ಪಾಪ ಮತ್ತು ಮರಣದ ಬಿಡುಗಡೆಯ ದಾರಿಯನ್ನು ತೆರೆಯುವನು. ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು ಸ್ವೀಕರಿಸುವವರಿಗಾಗಿ ಒಂದು ಪರದೈಸ ಭೂಮಿಯ ಮೇಲೆ ನಿತ್ಯ ಜೀವದ ಒಂದು ಮಹಾ ಭವಿಷ್ಯತ್ತು ಕಾದಿರುವುದು. ದಯವಿಟ್ಟು ಯೆಹೋವನ ಸಾಕ್ಷಿಗಳ ಸಂಪರ್ಕವನ್ನು ಮಾಡಿರಿ ಮತ್ತು ಪ್ರಾಯಶ್ಚಿತದ್ತ ಪ್ರೀತಿಯುಳ್ಳ ಏರ್ಪಾಡಿನ ಮೂಲಕ ಪಾಪ ಮತ್ತು ಮರಣದಿಂದ ಬಿಡುಗಡೆಯನ್ನು ನೀವು ಹೇಗೆ ಆನಂದಿಸಬಲ್ಲಿರಿ ಎಂಬದನ್ನು ನೀವಾಗಿಯೇ ಪರೀಕೆಮ್ಷಾಡಿರಿ.
[ಅಧ್ಯಯನ ಪ್ರಶ್ನೆಗಳು]
a ಹಿಬ್ರೂ ಶಾಸ್ತ್ರದಲ್ಲಿ, ಪದಾಹ್ ಮತ್ತು ಸಂಬಂಧಿಸಿದ ಶಬ್ದಗಳು “ವಿಮೋಚನೆ” ಅಥವಾ “ವಿಮೋಚನಾ ಬೆಲೆ” ಎಂದು ಭಾಷಾಂತರಿಸಲ್ಪಟ್ಟಿದ್ದು, ಒಳಗೂಡಿರುವ ಬಿಡುಗಡೆ ಮಾಡುವಿಕೆಯನ್ನು ಒತ್ತಿಹೇಳುತ್ತವೆ.—ಧರ್ಮೋಪದೇಶಕಾಂಡ 9:26.
[ಪುಟ 5 ರಲ್ಲಿರುವ ಚಿತ್ರ ಕೃಪೆ]
Courtesy of the Mainichi Shimbun