ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 2/15 ಪು. 30-31
  • “ವಿನಯಶೀಲರಲ್ಲಿ ವಿವೇಕವಿದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ವಿನಯಶೀಲರಲ್ಲಿ ವಿವೇಕವಿದೆ”
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಮುಂದೆ
  • ಜಂಬಗಾರಿಕೆ ತೋರಿಸಬೇಕಾದ ವಿಷಯ
  • ವಿನಯಶೀಲರಿಗಾಗಿ ದೇವರ ಗಣ್ಯತೆ
  • ಬರೆಯಲ್ಪಟ್ಟಿರುವ ವಿಷಯಗಳನ್ನು ಅತಿಕ್ರಮಿಸದಿರ್ರಿ
  • ಯೇಸು ಕ್ರಿಸ್ತನ ಉದಾಹರಣೆ
  • ಉಡುಪು ಮತ್ತು ಇತರ ಸ್ವತ್ತುಗಳಲ್ಲಿ
  • ವಿನಯಶೀಲತೆ—ಸಮಾಧಾನವನ್ನು ಹೆಚ್ಚಿಸುವ ಒಂದು ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • “ವಿನಯಶೀಲರಲ್ಲಿ ವಿವೇಕವಿದೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ಕಾವಲಿನಬುರುಜು—1996
w96 2/15 ಪು. 30-31

“ವಿನಯಶೀಲರಲ್ಲಿ ವಿವೇಕವಿದೆ”

ವಿನಯಶೀಲತೆಯನ್ನು, ಒಬ್ಬನ ಪರಿಮಿತಿಗಳ ಕುರಿತಾಗಿ ಅರಿವುಳ್ಳವರಾಗಿರುವುದು ಎಂಬುದಾಗಿ—ನಿಷ್ಕಳಂಕತೆ ಅಥವಾ ವೈಯಕ್ತಿಕ ಪರಿಶುದ್ಧತೆ ಎಂದೂ—ಅರ್ಥನಿರೂಪಿಸಲಾಗುತ್ತದೆ. ಹೀಬ್ರು ಭಾಷೆಯ ಮೂಲ ಕ್ರಿಯಾಪದವಾದ ಸಾನಾ, ಮೀಕ 6:8 (NW)ರಲ್ಲಿ “ವಿನಯಶೀಲರಾಗಿರ್ರಿ” ಎಂದು ಭಾಷಾಂತರಿಸಲ್ಪಟ್ಟಿದ್ದು, ಇದು ಒಂದೇ ಒಂದು ಬಾರಿ ಕಂಡುಬರುತ್ತದೆ. ಇದು ಹಿಂಜರಿಯುವ, ವಿನಯಶೀಲ, ಅಥವಾ ದೀನನಾಗಿರುವವನೊಬ್ಬನ ಕಲ್ಪನೆಯನ್ನು ಕೊಡುತ್ತದೆ, ಎಂದು ಎ ಹೀಬ್ರು ಆ್ಯಂಡ್‌ ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌ ಹೇಳುತ್ತದೆ. “ವಿನಯಶೀಲತೆ” ಎಂಬ ಪದವು, ಗ್ರೀಕ್‌ ಶಬ್ದವಾದ ಇಡಾಸ್‌ನ ಒಂದು ಭಾಷಾಂತರವಾಗಿದೆ. (1 ತಿಮೊಥೆಯ 2:9, NW) ಒಂದು ನೈತಿಕ ಅರ್ಥದಲ್ಲಿ ಉಪಯೋಗಿಸಲ್ಪಟ್ಟ ಇಡಾಸ್‌, ಇತರರ ಭಾವನೆ ಅಥವಾ ಅಭಿಪ್ರಾಯಕ್ಕಾಗಿ ಅಥವಾ ಒಬ್ಬನ ಸ್ವಂತ ಮನಸ್ಸಾಕ್ಷಿಗಾಗಿ, ಪೂಜ್ಯಭಾವನೆ, ಭಯಭಕ್ತಿ, ಗೌರವದ ಪರ್ಯಾಲೋಚನೆಯನ್ನು ವ್ಯಕ್ತಪಡಿಸುತ್ತದೆ ಮತ್ತು ಇದರಿಂದಾಗಿ ನಾಚಿಕೆ, ಸ್ವಗೌರವ, ಗೌರವದ ಪರಿಜ್ಞಾನ, ಸ್ತಿಮಿತತೆ, ಮತ್ತು ಮಿತಿಯನ್ನು ವ್ಯಕ್ತಪಡಿಸುತ್ತದೆ. ಹೀಗೆ, ಇಡಾಸ್‌ನಲ್ಲಿ ಸೂಚಿಸಲ್ಪಟ್ಟಿರುವ ನಿಗ್ರಹ ಪರಿಣಾಮದಲ್ಲಿ ಮನಸ್ಸಾಕ್ಷಿಯು ವಿಶೇಷವಾಗಿ ಒಳಗೊಂಡಿದೆ.

ದೇವರ ಮುಂದೆ

ವಿನಯಶೀಲತೆಗೆ ಸಂಬಂಧಿಸಿ, ಒಬ್ಬನ ಸ್ವಂತಿಕೆಯ ಸೂಕ್ತವಾದ ಅಂದಾಜಿನ ಅರ್ಥದಲ್ಲಿ, ಶಾಸ್ತ್ರಗಳು ತುಂಬ ಸಲಹೆಯನ್ನು ಕೊಡುತ್ತವೆ. “ವಿನಯಶೀಲರಲ್ಲಿ ವಿವೇಕವಿದೆ” ಎಂದು ಜ್ಞಾನೋಕ್ತಿಯು ಹೇಳುತ್ತದೆ. ಇದು ಯಾಕೆಂದರೆ, ವಿನಯಶೀಲತೆಯನ್ನು ಪ್ರದರ್ಶಿಸುತ್ತಿರುವ ವ್ಯಕ್ತಿಯು, ದುರಹಂಕಾರ ಅಥವಾ ಜಂಬಗಾರಿಕೆಯೊಂದಿಗೆ ಜೊತೆಗೂಡುವ ಅಗೌರವವನ್ನು ದೂರಮಾಡುತ್ತಾನೆ. (ಜ್ಞಾನೋಕ್ತಿ 11:2, NW) ಯೆಹೋವನಿಂದ ಒಪ್ಪಲ್ಪಡುವ ಮಾರ್ಗವನ್ನು ಅವನು ಅನುಸರಿಸುತ್ತಿದ್ದಾನೆ; ಆದುದರಿಂದ ಅವನು ವಿವೇಕಿಯಾಗಿದ್ದಾನೆ. (ಜ್ಞಾನೋಕ್ತಿ 3:5, 6; 8:13, 14) ಅಂತಹವನನ್ನು ಯೆಹೋವನು ಪ್ರೀತಿಸುತ್ತಾನೆ ಮತ್ತು ವಿವೇಕವನ್ನು ಒದಗಿಸುತ್ತಾನೆ. ಯೆಹೋವನ ಅನುಗ್ರಹವನ್ನು ಪಡೆದುಕೊಳ್ಳಲಿಕ್ಕಾಗಿರುವ ಅಗತ್ಯಗಳಲ್ಲಿ ಒಂದು, ‘ಆತನೊಂದಿಗೆ ನಡೆದುಕೊಳ್ಳುವ ವಿಷಯದಲ್ಲಿ ವಿನಯಶೀಲನಾಗಿರುವುದು’ ಆಗಿದೆ. (ಮೀಕ 6:8, NW) ದೇವರ ಮುಂದಿನ ಒಬ್ಬನ ನಿಲುವಿನ ಕುರಿತಾಗಿ ಸೂಕ್ತವಾದ ಗಣ್ಯತೆ, ಯೆಹೋವನ ಹಿರಿಮೆ, ಪರಿಶುದ್ಧತೆ, ಮತ್ತು ಪಾವಿತ್ರ್ಯದೊಂದಿಗೆ ವ್ಯತಿರಿಕ್ತವಾಗಿ ಒಬ್ಬನ ಪಾಪಪೂರ್ಣ ಸ್ಥಿತಿಯನ್ನು ಅಂಗೀಕರಿಸುವುದು ಇದರಲ್ಲಿ ಒಳಗೂಡಿದೆ. ವ್ಯಕ್ತಿಯೊಬ್ಬನು ಸ್ವತಃ ತನ್ನನ್ನು ಯೆಹೋವನ ಸೃಷ್ಟಿಜೀವಿಯೋಪಾದಿ—ಸಂಪೂರ್ಣವಾಗಿ ಆತನ ಮೇಲೆ ಅವಲಂಬಿಸಿರುವುದು ಮತ್ತು ಆತನ ಪರಮಾಧಿಕಾರಕ್ಕೆ ಅಧೀನಪಡಿಸಿಕೊಳ್ಳುವುದು—ಅಂಗೀಕರಿಸಬೇಕು ಎಂಬುದನ್ನೂ ಇದು ಅರ್ಥೈಸುತ್ತದೆ. ಇದನ್ನು ಗಣ್ಯಮಾಡಲು ವಿಫಲರಾದವರಲ್ಲಿ ಹವ್ವಳು ಒಬ್ಬಳಾಗಿದ್ದಳು. ಸಮಗ್ರ ಸ್ವಾತಂತ್ರ್ಯ ಮತ್ತು ಸ್ವನಿಶ್ಚಯಕ್ಕಾಗಿ ಅವಳು ಮುಂದಡಿಯಿಟ್ಟಳು. “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗು”ವ ಆಲೋಚನೆಯನ್ನು ಅವಳ ಮನಸ್ಸಿನಿಂದ ತೆಗೆದುಹಾಕುವಂತೆ ವಿನಯಶೀಲತೆಯು ಅವಳಿಗೆ ಸಹಾಯ ಮಾಡಸಾಧ್ಯವಿತ್ತು. (ಆದಿಕಾಂಡ 3:4, 5) “ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ” ಎಂದು ಹೇಳುವ ಮೂಲಕ, ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರದ ವಿರುದ್ಧವಾಗಿ ಅಪೊಸ್ತಲ ಪೌಲನು ಸಲಹೆ ನೀಡುತ್ತಾನೆ.—ಫಿಲಿಪ್ಪಿ 2:12.

ಜಂಬಗಾರಿಕೆ ತೋರಿಸಬೇಕಾದ ವಿಷಯ

ಜಂಬಗಾರಿಕೆಯು ವಿನಯಶೀಲತೆಗೆ ವಿರುದ್ಧವಾದದ್ದಾಗಿದೆ. ನಿಯಮವೇನಂದರೆ, “ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ; ಆತ್ಮಸ್ತುತಿ ಬೇಡ, ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ.” (ಜ್ಞಾನೋಕ್ತಿ 27:2) ಯೆಹೋವನ ಸ್ವಂತ ನುಡಿಗಳು ಹೀಗಿವೆ: “ಜ್ಞಾನಿಯು [“ವಿವೇಕಿಯು,” NW] ತನ್ನ ಜ್ಞಾನಕ್ಕೆ [“ವಿವೇಕಕ್ಕೆ,” NW], ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ; ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ; ಪ್ರೀತಿನೀತಿನ್ಯಾಯಗಳೇ ನನಗೆ ಆನಂದ.”—ಯೆರೆಮೀಯ 9:23, 24; ಹೋಲಿಸಿರಿ ಜ್ಞಾನೋಕ್ತಿ 12:9; 16:18, 19.

ವಿನಯಶೀಲರಿಗಾಗಿ ದೇವರ ಗಣ್ಯತೆ

ವಿನಯಶೀಲರಿಗಾಗಿರುವ ದೇವರ ಗಣ್ಯತೆಯನ್ನು ಅಪೊಸ್ತಲ ಪೌಲನು ತೋರಿಸುತ್ತಾನೆ ಮತ್ತು ಸಭೆಯಲ್ಲಿ ಅಂತಹ ವಿನಯಶೀಲ ಮನೋಭಾವದ ಆದರ್ಶಪ್ರಾಯ ಮಾದರಿಯೋಪಾದಿ ತನ್ನ ಸ್ವಂತ ನಡವಳಿಕೆಯನ್ನು ಸಹ ಉದಾಹರಿಸುತ್ತಾನೆ. ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಅವನು ಬರೆದುದು: “ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ. . . . ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂಬ ವೇದೋಕ್ತಿ ನೆರವೇರುವದಕ್ಕೆ ಇದರಿಂದ ಮಾರ್ಗವಾಯಿತು. ಸಹೋದರರೇ, ನಾನಂತೂ ದೇವರು ಹೇಳಿಕೊಟ್ಟ ಮಾತನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ. ನಾನು ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು. ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ ಭಯಪಡುವವನೂ ಬಹು ನಡುಗುವವನೂ ಆಗಿದ್ದೆನು. ನಿಮ್ಮ ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಂಡಿರಬೇಕೆಂದು ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೆ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.”—1 ಕೊರಿಂಥ 1:26–12:5.

ಬರೆಯಲ್ಪಟ್ಟಿರುವ ವಿಷಯಗಳನ್ನು ಅತಿಕ್ರಮಿಸದಿರ್ರಿ

ತದನಂತರ ಪೌಲನು ತನ್ನ ಪತ್ರದಲ್ಲಿ, ತನ್ನ ಕುರಿತಾಗಿ ಸೂಕ್ತವಾದ ಮೌಲ್ಯಮಾಪನ ಮಾಡುತ್ತಾ, ಸ್ವತಃ ತಾನು ವಿನಯಶೀಲತೆಯನ್ನು ಪ್ರದರ್ಶಿಸಿದ್ದಂತೆಯೇ, ನಮ್ಮೆಲ್ಲರ ವತಿಯಿಂದ ವಿನಯಶೀಲತೆಯ ಆವಶ್ಯಕತೆಯನ್ನು ಒತ್ತಿಹೇಳಿದನು. ಕೊರಿಂಥದವರು ಅಪೊಲ್ಲೋಸನಂತಹ ನಿರ್ದಿಷ್ಟ ವ್ಯಕ್ತಿಗಳಲ್ಲಿ—ಸ್ವತಃ ಪೌಲನಲ್ಲಿ ಸಹ—ಜಂಬಪಡುವ ಪಾಶದೊಳಕ್ಕೆ ಬಿದ್ದಿದ್ದರು. ಹೀಗೆ ಮಾಡುವುದರಲ್ಲಿ ಅವರು ಆತ್ಮಿಕ ವ್ಯಕ್ತಿಗಳಲ್ಲ, ಮಾಂಸಿಕ ವ್ಯಕ್ತಿಗಳಾಗಿದ್ದರು ಎಂದು ಅವರಿಗೆ ಹೇಳುವ ಮೂಲಕ ಪೌಲನು ಅವರನ್ನು ಸರಿಪಡಿಸಿದನು, ಮತ್ತು ಹೇಳಿದ್ದು: “ಸಹೋದರರೇ, ನಾನು ನಿಮಗೋಸ್ಕರವೇ ಹಿಂದಣ ಮಾತುಗಳನ್ನು ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. ನೀವು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದೆಂಬುದನ್ನೂ ನಿಮ್ಮಲ್ಲಿ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂಬದನ್ನೂ ಕಲಿತುಕೊಳ್ಳಬೇಕು. ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” ಇದನ್ನು ಮನಸ್ಸಿನಲ್ಲಿಡುವುದು, ಒಬ್ಬನ ಕುರಿತಾಗಿ ಅಥವಾ ಇನ್ನೊಬ್ಬನ ಕುರಿತಾಗಿ, ಕುಟುಂಬದ ಹುಟ್ಟು, ಕುಲ, ಬಣ್ಣ ಅಥವಾ ರಾಷ್ಟ್ರೀಯತೆ, ಶಾರೀರಿಕ ಸೌಂದರ್ಯ, ಸಾಮರ್ಥ್ಯ, ಜ್ಞಾನ, ಮಾನಸಿಕ ಪ್ರತಿಭೆ, ಇನ್ನು ಮುಂತಾದವುಗಳ ವಿಷಯದಲ್ಲಿ ಹಠಮಾರಿತನ ಮತ್ತು ಜಂಬಗಾರಿಕೆಯನ್ನು ತಡೆಗಟ್ಟುವುದು.—1 ಕೊರಿಂಥ 4:6, 7.

ಯೇಸು ಕ್ರಿಸ್ತನ ಉದಾಹರಣೆ

ಯೇಸು ಕ್ರಿಸ್ತನು ವಿನಯಶೀಲತೆಯ ಅತ್ಯುತ್ತಮ ಮಾದರಿಯಾಗಿದ್ದಾನೆ. ತಾನು ಒಂದೇ ಒಂದು ಕೆಲಸವನ್ನೂ ತನ್ನ ಸ್ವಂತ ಅಧಿಕಾರದಿಂದ ಮಾಡಸಾಧ್ಯವಿಲ್ಲ, ಬದಲಾಗಿ ತಾನು ತಂದೆಯು ಮಾಡುತ್ತಿರುವುದನ್ನು ನೋಡಿ ಮಾಡುತ್ತೇನೆ, ಮತ್ತು ತನಗಿಂತಲೂ ತನ್ನ ತಂದೆಯು ದೊಡ್ಡವನಾಗಿದ್ದಾನೆ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 5:19, 30; 14:28) ಯೇಸು ತನಗೆ ಅನರ್ಹವಾದ ಬಿರುದುಗಳನ್ನು ಅಂಗೀಕರಿಸಲು ನಿರಾಕರಿಸಿದನು. ಒಬ್ಬ ಅಧಿಕಾರಿಯು ಆತನನ್ನು “ಒಳ್ಳೇ ಬೋಧಕನೇ” ಎಂದು ಕರೆದಾಗ, ಯೇಸು ಉತ್ತರಿಸಿದ್ದು: “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.” (ಲೂಕ 18:18, 19) ಮತ್ತು ದೇವರ ಸೇವೆಯಲ್ಲಿ ಸಾಧಿಸಿದ ವಿಷಯಗಳ ಮೇಲಾಗಲಿ, ದೇವರಿಗೆ ಅವರ ಯೋಗ್ಯತೆಯ ಕಾರಣದಿಂದಾಗಲಿ, ಯೆಹೋವನಿಗೆ ಸೇವಕರೋಪಾದಿ ಅವರು ಗರ್ವದಿಂದ ಬೀಗುವ ಭಾವನೆಯುಳ್ಳವರಾಗಿರಬಾರದು ಎಂದು ಆತನು ತನ್ನ ಶಿಷ್ಯರಿಗೆ ಹೇಳಿದನು. ಬದಲಾಗಿ, ತಮಗೆ ನೇಮಿಸಲ್ಪಟ್ಟ ಎಲ್ಲಾ ವಿಷಯಗಳನ್ನು ಮಾಡಿದ ಬಳಿಕವೂ “ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ” ಎಂಬ ಮನೋಭಾವವನ್ನು ಅವರು ಹೊಂದಿರತಕ್ಕದ್ದು.—ಲೂಕ 17:10.

ಇದಕ್ಕೆ ಕೂಡಿಸಿ, ಭೂಮಿಯ ಮೇಲಿನ ಪರಿಪೂರ್ಣ ಮನುಷ್ಯನೋಪಾದಿ ಕರ್ತನಾದ ಯೇಸು ಕ್ರಿಸ್ತನು, ತನ್ನ ಅಪರಿಪೂರ್ಣ ಶಿಷ್ಯರಿಗಿಂತ ಶ್ರೇಷ್ಠನಾಗಿದ್ದನು ಮತ್ತು ತನ್ನ ತಂದೆಯಿಂದ ಮಹಾ ಅಧಿಕಾರವನ್ನು ಸಹ ಪಡೆದುಕೊಂಡಿದ್ದನು. ಆದರೂ, ತನ್ನ ಶಿಷ್ಯರೊಂದಿಗೆ ವ್ಯವಹರಿಸುವುದರಲ್ಲಿ, ಆತನು ಅವರ ಪರಿಮಿತಿಗಳ ಕುರಿತಾಗಿ ಪರಿಗಣನೆ ತೋರಿಸುವವನಾಗಿದ್ದನು. ಅವರನ್ನು ತರಬೇತುಗೊಳಿಸುವುದರಲ್ಲಿ ಆತನು ಸೌಜನ್ಯವನ್ನು ಪ್ರಯೋಗಿಸಿದನು ಮತ್ತು ಅವರೆಡೆಗೆ ಮಾತಿನ ಔಚಿತ್ಯವನ್ನು ಉಪಯೋಗಿಸಿದನು. ಆ ಸಮಯದಲ್ಲಿ ಅವರಿಂದ ಹೊರಲಾಗುತ್ತಿದ್ದುದಕ್ಕಿಂತ ಹೆಚ್ಚಿನದ್ದನ್ನು ಆತನು ಅವರ ಮೇಲೆ ಹೊರಿಸಲಿಲ್ಲ.—ಯೋಹಾನ 16:12; ಹೋಲಿಸಿರಿ ಮತ್ತಾಯ 11:28-30; 26:40, 41.

ಉಡುಪು ಮತ್ತು ಇತರ ಸ್ವತ್ತುಗಳಲ್ಲಿ

ಸಭೆಯಲ್ಲಿ ಯಾವ ಯೋಗ್ಯವಾದ ನಡವಳಿಕೆಯು ಪಾಲಿಸಲ್ಪಟ್ಟಿತು ಎಂಬುದನ್ನು ನೋಡಿಕೊಳ್ಳುವುದರ ಕುರಿತು, ಮೇಲ್ವಿಚಾರಕನಾದ ತಿಮೊಥೆಯನಿಗೆ ಉಪದೇಶ ನೀಡುತ್ತಾ ಪೌಲನು ಹೇಳಿದ್ದು: “ಸ್ತ್ರೀಯರು ಮಾನಸ್ಥೆ [“ವಿನಯಶೀಲ,” NW]ಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” (1 ತಿಮೊಥೆಯ 2:9, 10) ‘ಮರ್ಯಾದೆಗೆ ತಕ್ಕ ಉಡುಪ’ನ್ನು ಧರಿಸುವಂತೆ ಅಪೊಸ್ತಲನು ಶಿಫಾರಸ್ಸು ಮಾಡುವುದರಿಂದ, ಇಲ್ಲಿ ಅವನು ನೀಟುಗಾರಿಕೆ ಮತ್ತು ಒಳ್ಳೆಯ, ಹಿತಕರವಾದ ಹೊರತೋರಿಕೆಯ ವಿರುದ್ಧವಾಗಿ ಸಲಹೆ ನೀಡುವುದಿಲ್ಲ. ಆದರೆ ಇದರ ಮೂಲಕ ಸ್ವತಃ ಒಬ್ಬನಿಗೆ ಅಥವಾ ಒಬ್ಬನ ಜೀವನೋಪಾಯಕ್ಕೆ ಗಮನವನ್ನು ಸೆಳೆಯುತ್ತಾ, ಉಡುಪಿನಲ್ಲಿನ ನಿರರ್ಥಕತೆ ಮತ್ತು ಆಕರ್ಷಣೋದ್ದೇಶದ ಅನೌಚಿತ್ಯವನ್ನು ಅವನು ತೋರಿಸುತ್ತಾನೆ. ಹಾಗೂ ಇತರರ ಭಾವನೆಗಳಿಗಾಗಿರುವ ಗೌರವಕ್ಕೆ, ಸ್ವಗೌರವಕ್ಕೆ ಸಂಬಂಧಿಸಿದ ವಿನಯಶೀಲತೆ ಮತ್ತು ಗೌರವದ ಪರಿಜ್ಞಾನವು ಒಳಗೊಂಡಿದೆ. ಕ್ರೈಸ್ತರ ಉಡುಪು ತೊಡುವಿಕೆಯ ರೀತಿಯು, ಕೆಲವರಿಗೆ ಅಡಚಣೆಯನ್ನು ಉಂಟುಮಾಡುತ್ತಾ, ಸಭ್ಯತೆಗೆ, ಸಭೆಯ ನೈತಿಕ ಸ್ವಭಾವದ ಸೂಕ್ಷ್ಮತೆಗಳಿಗೆ ಆಘಾತಕರವಾಗಿರಬಾರದು. ಉಡುಪಿನ ಕುರಿತಾದ ಈ ಸಲಹೆಯು, ಒಬ್ಬ ಕ್ರೈಸ್ತನು ಹೊಂದಿರಬಹುದಾದ ಇತರ ಪ್ರಾಪಂಚಿಕ ಸ್ವತ್ತುಗಳ ಕುರಿತಾದ ಯೋಗ್ಯವಾದ ನೋಟ ಮತ್ತು ಉಪಯೋಗದ ಕಡೆಗಿನ ಯೆಹೋವನ ಮನೋಭಾವದ ಮೇಲೆ ಇನ್ನೂ ಹೆಚ್ಚಿನ ಬೆಳಕನ್ನು ಬೀರುವುದು.

ವಿನಯಶೀಲತೆಯು ನಮ್ಮನ್ನು ಅವಿವೇಕದ ಕೃತ್ಯಗಳಿಂದ ಹಾಗೂ ಮನೋಭಾವಗಳಿಂದ ಸಂರಕ್ಷಿಸುತ್ತದೆ. ಜ್ಞಾನೋಕ್ತಿಯು ಹೇಳುವಂತೆ, ವಿನಯಶೀಲತೆಯು ನಿಜವಾಗಿಯೂ ವಿವೇಕದ ಮಾರ್ಗವಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ