ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ
    ಕಾವಲಿನಬುರುಜು (ಅಧ್ಯಯನ)—2017 | ಡಿಸೆಂಬರ್‌
    • 3. (ಎ) ತಿಮೊಥೆಯನು ಹೇಗೆ ಕ್ರೈಸ್ತನಾದನು ಮತ್ತು ತಾನು ಕಲಿತದ್ದನ್ನು ಹೇಗೆ ಅನ್ವಯಿಸಿಕೊಂಡನು? (ಬಿ) ಕಲಿಯುವುದರಲ್ಲಿ ಯಾವ ಮೂರು ಅಂಶ ಮುಖ್ಯ ಎಂದು ಪೌಲನ ಮಾತಿನಿಂದ ಗೊತ್ತಾಗುತ್ತದೆ?

      3 ಕ್ರಿ.ಶ. 47​ರಲ್ಲಿ ಪೌಲನು ಲುಸ್ತ್ರಕ್ಕೆ ಮೊದಲ ಸಾರಿ ಭೇಟಿ ನೀಡಿದಾಗ ತಿಮೊಥೆಯನಿಗೆ ಯೇಸುವಿನ ಬೋಧನೆಗಳ ಪರಿಚಯವಾಗಿದ್ದಿರಬೇಕು. ಆಗ ತಿಮೊಥೆಯನು ಬಹುಶಃ ಹದಿಪ್ರಾಯದ ಹುಡುಗನಾಗಿದ್ದರೂ ಕಲಿತ ವಿಷಯಗಳನ್ನು ಅನ್ವಯಿಸಿಕೊಂಡಿರಬೇಕು. ಅವನು ಎಷ್ಟು ಚೆನ್ನಾಗಿ ಅನ್ವಯಿಸಿಕೊಂಡನೆಂದರೆ, ಎರಡು ವರ್ಷದಲ್ಲಿ ಪೌಲನ ಸಂಚರಣ ಸಂಗಡಿಗನಾದನು. ಸುಮಾರು 16 ವರ್ಷಗಳ ನಂತರ ಪೌಲನು ತಿಮೊಥೆಯನಿಗೆ ಹೀಗೆ ಬರೆದನು: “ನೀನಾದರೋ ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು; ಇವುಗಳನ್ನು ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ. ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು [ಹೀಬ್ರು ಶಾಸ್ತ್ರಗ್ರಂಥವನ್ನು] ತಿಳಿದುಕೊಂಡಿದ್ದೀ; ಇವು ನಿನ್ನನ್ನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು.” (2 ತಿಮೊ. 3:14, 15) ಪೌಲ ಹೇಳಿದ್ದನ್ನು ಗಮನಿಸಿ: ತಿಮೊಥೆಯನು (1) ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದನು, (2) ಕಲಿತ ವಿಷಯಗಳನ್ನು ನಂಬುವಂತೆ ಒಡಂಬಡಿಸಲ್ಪಟ್ಟಿದ್ದನು, (3) ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯಾಗಿದ್ದನು.

  • ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ
    ಕಾವಲಿನಬುರುಜು (ಅಧ್ಯಯನ)—2017 | ಡಿಸೆಂಬರ್‌
    • ‘ನಂಬುವಂತೆ ಒಡಂಬಡಿಸಲ್ಪಟ್ಟಿದ್ದನು’

      5. (ಎ) ‘ನಂಬುವಂತೆ ಒಡಂಬಡಿಸಲ್ಪಡುವುದು’ ಅಂದರೇನು? (ಬಿ) ಯೇಸುವಿನ ಕುರಿತ ಸುವಾರ್ತೆಯನ್ನು ತಿಮೊಥೆಯನು ನಂಬುವಂತೆ ಒಡಂಬಡಿಸಲ್ಪಟ್ಟನೆಂದು ಹೇಗೆ ಹೇಳಬಹುದು?

      5 ಮಕ್ಕಳಿಗೆ ಬೈಬಲಲ್ಲಿ ತಿಳಿಸಲಾಗಿರುವ ಜನರ ಬಗ್ಗೆ, ಘಟನೆಗಳ ಬಗ್ಗೆ ಕಲಿಸಿದರೆ ಸಾಕಾಗುವುದಿಲ್ಲ. ತಿಮೊಥೆಯನಂತೆ ಅವರು ಕಲಿತ ವಿಷಯಗಳನ್ನು ‘ನಂಬುವಂತೆ ಒಡಂಬಡಿಸಲ್ಪಡಬೇಕು.’ ಇಲ್ಲಿ ಪೌಲ ಬಳಸಿರುವ ಗ್ರೀಕ್‌ ಪದಗಳ ಅರ್ಥ “ಒಂದು ವಿಷಯ ಸತ್ಯ ಎಂದು ಮನವರಿಕೆ ಆಗಿರುವುದು, ದೃಢವಾದ ಭರವಸೆ ಇರುವುದು” ಅಥವಾ “ನಿಶ್ಚಯವಾಗಿ ತಿಳಿದಿರುವುದು.” ತಿಮೊಥೆಯನಿಗೆ “ಶೈಶವದಿಂದಲೇ” ಅಂದರೆ ತುಂಬ ಚಿಕ್ಕ ವಯಸ್ಸಿನಿಂದಲೇ ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ವಿಷಯಗಳು ತಿಳಿದಿತ್ತು. ನಂತರ ಯೇಸುವೇ ಮೆಸ್ಸೀಯನೆಂದು ಅವನಿಗೆ ಪೂರ್ತಿ ಮನವರಿಕೆ ಆಯಿತು. ಯೇಸುವಿನ ಕುರಿತ ಸುವಾರ್ತೆಯಲ್ಲಿ ಅವನಿಗೆ ಎಷ್ಟು ನಂಬಿಕೆ ಬಂತೆಂದರೆ ಅವನು ದೀಕ್ಷಾಸ್ನಾನ ಪಡೆದುಕೊಂಡು ಪೌಲನ ಜೊತೆ ಮಿಷನರಿಯಾಗಿ ಕೆಲಸಮಾಡಿದನು.

      6. ದೇವರ ವಾಕ್ಯದಲ್ಲಿ ನಂಬಿಕೆ ಬೆಳೆಸಿಕೊಳ್ಳಲು ನೀವು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?

      6 ತಿಮೊಥೆಯನಂತೆ ನಿಮ್ಮ ಮಕ್ಕಳು ಸಹ ಕಲಿತ ವಿಷಯವನ್ನು ‘ನಂಬುವಂತೆ ಒಡಂಬಡಿಸಲ್ಪಡಲು’ ನೀವು ಹೇಗೆ ಸಹಾಯ ಮಾಡಬಲ್ಲಿರಿ? ಇದಕ್ಕೆ ಮೊದಲು ತಾಳ್ಮೆ ಬೇಕು. ಬಲವಾದ ನಂಬಿಕೆ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಒಂದು ವಿಷಯವನ್ನು ನೀವು ನಂಬುತ್ತೀರಿ ಎಂದಮಾತ್ರಕ್ಕೆ ನಿಮ್ಮ ಮಕ್ಕಳೂ ಅದನ್ನು ನಂಬಿಬಿಡುತ್ತಾರೆ ಅಂತ ನೆನಸಬೇಡಿ. ಬೈಬಲಿನ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಪ್ರತಿ ಮಗು ತನ್ನ “ವಿವೇಚನಾಶಕ್ತಿ” ಬಳಸಬೇಕು. (ರೋಮನ್ನರಿಗೆ 12:1 ಓದಿ.) ನಿಮ್ಮ ಮಕ್ಕಳು ಬಲವಾದ ನಂಬಿಕೆ ಬೆಳೆಸಿಕೊಳ್ಳಲು ನೀವು ತುಂಬ ಸಹಾಯ ಮಾಡಬಹುದು. ಮುಖ್ಯವಾಗಿ ಅವರು ಪ್ರಶ್ನೆಗಳನ್ನು ಕೇಳುವಾಗ ಅವರ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸಿ. ಒಬ್ಬ ತಂದೆಯಾಗಿರುವ ಥಾಮಸ್‌ ಇದನ್ನೇ ಮಾಡುತ್ತಾರೆ.

      7, 8. (ಎ) ಒಬ್ಬ ಕ್ರೈಸ್ತ ತಂದೆ ತನ್ನ ಮಗಳಿಗೆ ಕಲಿಸುವಾಗ ಹೇಗೆ ತಾಳ್ಮೆ ತೋರಿಸುತ್ತಾರೆ? (ಬಿ) ಇದೇ ರೀತಿ ನೀವು ಯಾವಾಗ ನಿಮ್ಮ ಮಗ ಅಥವಾ ಮಗಳೊಟ್ಟಿಗೆ ತಾಳ್ಮೆ ತೋರಿಸಬೇಕಾಗಿ ಬಂತು?

      7 ಥಾಮಸ್‌ಗೆ 11 ವರ್ಷದ ಮಗಳಿದ್ದಾಳೆ. ಅವಳು ಕೆಲವೊಮ್ಮೆ, “ಭೂಮಿಯಲ್ಲಿ ಇರೋದನ್ನೆಲ್ಲಾ ಸೃಷ್ಟಿಮಾಡಲು ಯೆಹೋವ ದೇವರು ವಿಕಾಸವಾದ ಬಳಸಿರಬಹುದಾ? ಎಲ್ಲಾ ಜನ್ರಿಗೂ ಒಳ್ಳೇದಾಗಲಿಕ್ಕೋಸ್ಕರ ನಾವ್ಯಾಕೆ ವೋಟ್‌ ಹಾಕಿ ಒಳ್ಳೇ ನಾಯಕನನ್‌ ಆರಿಸಿಕೊಳ್ಳಬಾರದು?” ಎಂದು ಕೇಳುತ್ತಾಳೆ. ಆಗೆಲ್ಲ ಥಾಮಸ್‌ಗೆ ಯಾವುದು ಸರಿ, ಯಾವುದು ತಪ್ಪು ಎಂದು ನೇರವಾಗಿ ಹೇಳಿಬಿಡೋಣ ಅಂತ ಅನಿಸುತ್ತದೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ಒಂದು ವಿಷಯ ಸತ್ಯ ಎಂದು ಒಬ್ಬರನ್ನು ನಂಬಿಸಲು ಬೇಕಾಗಿರುವುದು ಒಂದು ದೊಡ್ಡ ಸತ್ಯಾಂಶ ಅಲ್ಲ, ಹಲವಾರು ಚಿಕ್ಕಚಿಕ್ಕ ಪುರಾವೆ ಎನ್ನುವುದು ಅವರಿಗೆ ಗೊತ್ತು.

      8 ತನ್ನ ಮಗಳಿಗೆ ತಾಳ್ಮೆಯಿಂದ ಕಲಿಸುವ ಅಗತ್ಯವಿದೆ ಎಂದು ಕೂಡ ಥಾಮಸ್‌ಗೆ ಗೊತ್ತು. ನಿಜ ಹೇಳಬೇಕೆಂದರೆ, ಎಲ್ಲ ಕ್ರೈಸ್ತರಿಗೂ ತಾಳ್ಮೆ ಅಥವಾ ದೀರ್ಘ ಸಹನೆ ಬೇಕು. (ಕೊಲೊ. 3:12) ತನ್ನ ಮಗಳು ಬಲವಾದ ನಂಬಿಕೆ ಬೆಳೆಸಿಕೊಳ್ಳಬೇಕಾದರೆ ಸಮಯ ಹಿಡಿಯುತ್ತದೆ ಎಂದು ಥಾಮಸ್‌ಗೆ ಅರ್ಥವಾಯಿತು. ಒಂದು ವಿಷಯದ ಬಗ್ಗೆ ಅವರು ಒಂದು ಸಾರಿ ಅಲ್ಲ ತುಂಬ ಸಲ ಕೂತು ಚರ್ಚೆ ಮಾಡಬೇಕಾಗುತ್ತದೆ. ಬೈಬಲಿನಿಂದ ಅವಳು ಕಲಿಯುತ್ತಿರುವ ವಿಷಯಗಳ ಬಗ್ಗೆ ಅವಳೊಟ್ಟಿಗೆ ತರ್ಕಬದ್ಧವಾಗಿ ಮಾತಾಡಬೇಕು. ಥಾಮಸ್‌ ಹೇಳುವುದು: “ಮುಖ್ಯವಾದ ವಿಷಯಗಳನ್ನು ಅವಳು ಕಲಿತಾಗ ಅದನ್ನು ನಿಜವಾಗಲೂ ನಂಬುತ್ತಾಳಾ, ಸರಿ ಎಂದು ಒಪ್ಪುತ್ತಾಳಾ ಅಂತ ನಾನೂ ನನ್ನ ಹೆಂಡತಿ ತಿಳಿದುಕೊಳ್ಳಲು ಇಷ್ಟಪಡುತ್ತೇವೆ. ಅವಳು ಅದರ ಬಗ್ಗೆ ಪ್ರಶ್ನೆ ಕೇಳಿದರೆ ನಮಗೆ ಸಮಾಧಾನ. ಏನೂ ಪ್ರಶ್ನೆ ಕೇಳದೆ ಸುಮ್ಮನೆ ಒಪ್ಪಿಕೊಂಡರೆ ನನಗೆ ಸಮಾಧಾನ ಆಗಲ್ಲ.”

      9. ದೇವರ ವಾಕ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಮಕ್ಕಳಿಗೆ ನೀವು ಹೇಗೆ ಸಹಾಯ ಮಾಡಬಹುದು?

      9 ಹೆತ್ತವರು ತಾಳ್ಮೆಯಿಂದ ಮಕ್ಕಳಿಗೆ ಕಲಿಸುವಾಗ, ಸಮಯ ಹೋಗುತ್ತಾ ಹೋಗುತ್ತಾ ತಮ್ಮ ನಂಬಿಕೆಯ “ಅಗಲ ಉದ್ದ ಎತ್ತರ ಮತ್ತು ಆಳ”ವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. (ಎಫೆ. 3:18) ಮಕ್ಕಳ ವಯಸ್ಸು ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಷ್ಟಿದೆಯೋ ಅದಕ್ಕೆ ತಕ್ಕ ಹಾಗೆ ಕಲಿಸಬೇಕು. ಅವರು ಕಲಿಯುವ ವಿಷಯದ ಬಗ್ಗೆ ಅವರ ನಂಬಿಕೆ ಬಲವಾಗುತ್ತಾ ಹೋದ ಹಾಗೆ ಸತ್ಯದ ಬಗ್ಗೆ ಬೇರೆಯವರೊಂದಿಗೆ, ಶಾಲೆಯಲ್ಲಿರುವ ಮಕ್ಕಳೊಂದಿಗೆ ಮಾತಾಡಲು ಸುಲಭವಾಗುತ್ತದೆ. (1 ಪೇತ್ರ 3:15) ಉದಾಹರಣೆಗೆ, ಮನುಷ್ಯ ಸತ್ತ ನಂತರ ಏನಾಗುತ್ತದೆ ಎಂದು ಬೈಬಲನ್ನು ಬಳಸಿ ಉತ್ತರ ಕೊಡಲು ನಿಮ್ಮ ಮಕ್ಕಳಿಗೆ ಆಗುತ್ತದಾ? ಬೈಬಲ್‌ ಈ ವಿಷಯದ ಬಗ್ಗೆ ಕೊಡುವ ವಿವರಣೆ ಸರಿ ಎಂದು ಅವರಿಗೆ ಅನಿಸುತ್ತದಾ?a ದೇವರ ವಾಕ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ನೀವು ಮಕ್ಕಳಿಗೆ ತಾಳ್ಮೆಯಿಂದ ಕಲಿಸಬೇಕಾಗುತ್ತದೆ ಎಂದು ನೆನಪಿಡಿ. ಈ ರೀತಿ ಮಾಡಿದರೆ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.—ಧರ್ಮೋ. 6:6, 7.

      10. ನಿಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಯಾವುದು ಪ್ರಾಮುಖ್ಯ ಪಾತ್ರ ವಹಿಸುತ್ತದೆ?

      10 ಮಕ್ಕಳು ನಂಬಿಕೆಯನ್ನು ಬೆಳೆಸಿಕೊಳ್ಳಲು ನಿಮ್ಮ ಒಳ್ಳೇ ಮಾದರಿ ಕೂಡ ಪ್ರಾಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರು ಹೆಣ್ಣು ಮಕ್ಕಳ ತಾಯಿಯಾದ ಸ್ಟೆಫನೀ ಹೇಳುವುದು: “ನನ್ನ ಮಕ್ಕಳು ತುಂಬ ಚಿಕ್ಕವರಿದ್ದಾಗಿಂದ ನಾನು ನನ್ನನ್ನೇ ಹೀಗೆ ಕೇಳಿಕೊಳ್ಳುತ್ತಿದ್ದೆ: ‘ಯೆಹೋವನಿದ್ದಾನೆ, ಆತನು ಪ್ರೀತಿ ತೋರಿಸುತ್ತಾನೆ, ಆತನು ಮಾಡುವುದೆಲ್ಲ ನ್ಯಾಯ ಅಂತ ನನಗೆ ಯಾಕೆ ಮನವರಿಕೆ ಆಗಿದೆ ಎಂದು ಮಕ್ಕಳಿಗೆ ಹೇಳುತ್ತೇನಾ? ಯೆಹೋವನನ್ನು ನಾನು ನಿಜವಾಗಲೂ ಪ್ರೀತಿಸುತ್ತೇನೆ ಅಂತ ನನ್ನ ಮಕ್ಕಳಿಗೆ ಗೊತ್ತಾಗುತ್ತಿದೆಯಾ?’ ಈ ಎಲ್ಲ ವಿಷಯಗಳಲ್ಲಿ ನಾನು ಒಡಂಬಡಿಸಲ್ಪಟ್ಟಿದ್ದರೆ ಮಾತ್ರ ನನ್ನ ಮಕ್ಕಳೂ ಒಡಂಬಡಿಸಲ್ಪಡಲು ಸಾಧ್ಯ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ