ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
    ಕಾವಲಿನಬುರುಜು—2014 | ಏಪ್ರಿಲ್‌ 15
    • 10. (ಎ) ಕ್ರಿ.ಪೂ. 1513⁠ರ ನೈಸಾನ್‌ ತಿಂಗಳಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಯಾವ ನಿರ್ದೇಶನಗಳನ್ನು ಕೊಟ್ಟನು? (ಬಿ) ಮೋಶೆ ದೇವರ ನಿರ್ದೇಶನಗಳಿಗೆ ವಿಧೇಯನಾಗಲು ಕಾರಣವೇನು?

      10 ಕ್ರಿ.ಪೂ. 1513⁠ರ ನೈಸಾನ್‌ ತಿಂಗಳಲ್ಲಿ ಯೆಹೋವನು ಮೋಶೆ ಮತ್ತು ಆರೋನನಿಗೆ ಕೆಲವು ನಿರ್ದೇಶನಗಳನ್ನು ಕೊಟ್ಟು ಅವುಗಳನ್ನು ಇಸ್ರಾಯೇಲ್ಯರಿಗೆ ತಿಳಿಸುವಂತೆ ಹೇಳಿದನು. ಏನೆಂದರೆ, ಅವರು ಯಾವುದೇ ಕುಂದಿಲ್ಲದ, ಆರೋಗ್ಯದಿಂದಿರುವ ಗಂಡು ಕುರಿಯನ್ನು ಅಥವಾ ಆಡನ್ನು ತೆಗೆದುಕೊಂಡು, ಕೊಯ್ದು ಅದರ ರಕ್ತವನ್ನು ಬಾಗಿಲ ನಿಲುವು ಪಟ್ಟಿಗಳಿಗೆ ಹಚ್ಚಬೇಕಿತ್ತು. (ವಿಮೋ. 12:3-7) ಇದಕ್ಕೆ ಮೋಶೆ ಹೇಗೆ ಪ್ರತಿಕ್ರಿಯಿಸಿದನು? ಇಂಥದ್ದನ್ನು ಇಸ್ರಾಯೇಲ್ಯರು ಹಿಂದೆಂದೂ ಮಾಡಿರಲಿಲ್ಲ. ಹಾಗಿದ್ದರೂ ಅಪೊಸ್ತಲ ಪೌಲ ಸಮಯಾನಂತರ ಬರೆದಂತೆ “ಸಂಹಾರಕನು ತಮ್ಮ ಚೊಚ್ಚಲಮಕ್ಕಳನ್ನು ಮುಟ್ಟದಂತೆ [ಮೋಶೆಯು] ಪಸ್ಕವನ್ನೂ ರಕ್ತದ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ.” (ಇಬ್ರಿ. 11:28) ಯೆಹೋವನು ಭರವಸಾರ್ಹನೆಂದು ಮೋಶೆಗೆ ಗೊತ್ತಿತ್ತು. ಐಗುಪ್ತದವರ ಚೊಚ್ಚಲ ಪುತ್ರರೆಲ್ಲರೂ ಸಂಹರಿಸಲ್ಪಡುವರೆಂದು ಯೆಹೋವನು ನುಡಿದ ಮಾತಿನಲ್ಲಿ ಮೋಶೆ ನಂಬಿಕೆಯಿಟ್ಟನು.

      11. ಮೋಶೆ ಇತರ ಇಸ್ರಾಯೇಲ್ಯರನ್ನು ಏಕೆ ಎಚ್ಚರಿಸಿದನು?

      11 ಮೋಶೆಯ ಗಂಡುಮಕ್ಕಳು ಮಿದ್ಯಾನಿನಲ್ಲಿದ್ದರೆಂಬುದು ಸುವ್ಯಕ್ತ. ಅವರು ‘ಸಂಹಾರಕನಿಂದ’ ಬಹುದೂರದಲ್ಲಿ ಸುರಕ್ಷಿತರಾಗಿದ್ದರು.b (ವಿಮೋ. 18:1-6) ಹಾಗಿದ್ದರೂ ಮೋಶೆ ವಿಧೇಯತೆಯಿಂದ ಇತರ ಇಸ್ರಾಯೇಲ್ಯ ಕುಟುಂಬಗಳಿಗೆ ಎಚ್ಚರಿಕೆ ಕೊಟ್ಟನು. ಏಕೆಂದರೆ ಅವರ ಚೊಚ್ಚಲ ಗಂಡುಮಕ್ಕಳ ಜೀವ ಅಪಾಯದಲ್ಲಿತ್ತು ಮತ್ತು ಮೋಶೆಗೆ ಜೊತೆಇಸ್ರಾಯೇಲ್ಯರ ಮೇಲೆ ಪ್ರೀತಿಯಿತ್ತು. ಆದ್ದರಿಂದ ಅವನು ಕೂಡಲೆ “ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ . . . ಕರಸಿ—ಅವರಿಗೆ ನೀವು ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಹಿಂಡಿನಿಂದ ಮರಿಗಳನ್ನು ತೆಗೆದುಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ” ಎಂದನು.—ವಿಮೋ. 12:21.

      ಯೆಹೋವನ ಸಾಕ್ಷಿಯೊಬ್ಬಳು, ವಿನಾಶದ ಗಾಳಿಗಳನ್ನು ದೇವದೂತರು ತಡೆದು ಹಿಡಿದಿರುವುದನ್ನು ಮನೋನೇತ್ರಗಳಿಂದ ನೋಡುತ್ತಾ ಸಾರುವ ಕೆಲಸಕ್ಕೆ ಹೋಗಲು ತಯಾರಾಗುತ್ತಿದ್ದಾಳೆ

      ಯೆಹೋವನ ವಾಗ್ದಾನಗಳಲ್ಲಿ ನಿಮಗೆ ನಂಬಿಕೆಯಿದ್ದರೆ ಸುವಾರ್ತೆಯನ್ನು ಸಾರುವ ನಿಮ್ಮ ಬಯಕೆ ತೀವ್ರಗೊಳ್ಳುವುದು (ಪ್ಯಾರ 13 ನೋಡಿ)

      12. ಯಾವ ಪ್ರಾಮುಖ್ಯ ಸಂದೇಶವನ್ನು ತಿಳಿಯಪಡಿಸುವಂತೆ ಯೆಹೋವನು ನಮಗೆ ಹೇಳಿದ್ದಾನೆ?

      12 ಇಂದು ದೇವದೂತರ ಮಾರ್ಗದರ್ಶನದ ಅಡಿಯಲ್ಲಿ ಯೆಹೋವನ ಜನರು ಬಹುಪ್ರಾಮುಖ್ಯವಾದ ಈ ಸಂದೇಶವನ್ನು ಪ್ರಕಟಪಡಿಸುತ್ತಿದ್ದಾರೆ: “ದೇವರಿಗೆ ಭಯಪಡಿರಿ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ, ಏಕೆಂದರೆ ಆತನ ನ್ಯಾಯತೀರ್ಪಿನ ಗಳಿಗೆಯು ಬಂದಿದೆ; ಆದುದರಿಂದ ಸ್ವರ್ಗವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ.” (ಪ್ರಕ. 14:7) ನಾವಿಂದು ಈ ಸಂದೇಶವನ್ನು ಸಾರಲೇಬೇಕು. ನಮ್ಮ ನೆರೆಯವರು ಮಹಾ ಬಾಬೆಲಿಗೆ ಆಗುವ ‘ಉಪದ್ರವಗಳಲ್ಲಿ ಪಾಲನ್ನು ಪಡೆಯದಿರಬೇಕಾದರೆ’ ಮಹಾ ಬಾಬೆಲನ್ನು ಬಿಟ್ಟು ಹೊರಬರುವಂತೆ ನಾವು ಅವರನ್ನು ಎಚ್ಚರಿಸಲೇಬೇಕು. (ಪ್ರಕ. 18:4) ಅಭಿಷಿಕ್ತ ಕ್ರೈಸ್ತರೊಂದಿಗೆ “ಬೇರೆ ಕುರಿಗಳು” ಜೊತೆಸೇರಿ ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ’ ಜನರನ್ನು ಬೇಡಿಕೊಳ್ಳುತ್ತಿದ್ದಾರೆ.—ಯೋಹಾ. 10:16; 2 ಕೊರಿಂ. 5:20.

      13. ಸುವಾರ್ತೆಯನ್ನು ಸಾರುವ ನಮ್ಮ ಇಚ್ಛೆಯನ್ನು ಯಾವುದು ಇನ್ನೂ ತೀವ್ರಗೊಳಿಸುವುದು?

      13 “ನ್ಯಾಯತೀರ್ಪಿನ ಗಳಿಗೆಯು” ಬಂದಿದೆ ಎಂಬ ಪೂರ್ಣ ನಿಶ್ಚಯ ನಮಗಿದೆ. ಮಾತ್ರವಲ್ಲ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸ ಎಷ್ಟು ತುರ್ತಿನದ್ದಾಗಿದೆ ಎನ್ನುವುದನ್ನು ಯೆಹೋವನು ಅತಿಶಯಿಸಿ ಹೇಳುತ್ತಿಲ್ಲವೆಂಬ ನಂಬಿಕೆ ಕೂಡ ನಮಗಿದೆ. ಅಪೊಸ್ತಲ ಯೋಹಾನನು ದರ್ಶನದಲ್ಲಿ “ಭೂಮಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿ ದೇವದೂತರು ನಿಂತುಕೊಂಡು . . . ಭೂಮಿಯ ನಾಲ್ಕು ಗಾಳಿಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು” ನೋಡಿದನು. (ಪ್ರಕ. 7:1) ದೇವದೂತರು ಈ ಲೋಕದ ಮೇಲೆ ಮಹಾ ಸಂಕಟದ ವಿನಾಶಕಾರಿ ಗಾಳಿಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿ ನಿಂತಿರುವುದನ್ನು ನಿಮ್ಮ ನಂಬಿಕೆಯ ಕಣ್ಣುಗಳಿಂದ ನೋಡುತ್ತಿದ್ದೀರೋ? ನೋಡುತ್ತಿರುವಲ್ಲಿ, ಸುವಾರ್ತೆಯನ್ನು ದೃಢಭರವಸೆಯಿಂದ ಸಾರಲು ಶಕ್ತರಾಗುವಿರಿ.

  • “ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
    ಕಾವಲಿನಬುರುಜು—2014 | ಏಪ್ರಿಲ್‌ 15
    • a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ