ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ತಾಳ್ಮೆ—ಕ್ರೈಸ್ತರಿಗೆ ಅತ್ಯಾವಶ್ಯಕ
    ಕಾವಲಿನಬುರುಜು—1993 | ಸೆಪ್ಟೆಂಬರ್‌ 15
    • 17. (ಎ) ಯಾವ ಸಂಕಟಗಳನ್ನು ಯೇಸು ತಾಳಿಕೊಂಡನು? (ಬಿ) ಯೇಸು ತಾಳಿಕೊಂಡ ತೀಕ್ಷೈವಾದ ಕಷ್ಟಾನುಭವವನ್ನು ಯಾವ ನಿಜತ್ವದಿಂದ ನೋಡ ಸಾಧ್ಯವಿದೆ? (ಪಾದಟಿಪ್ಪಣಿ ನೋಡಿ.)

      17 “ಯೇಸುವಿನ ಮೇಲೆ ದೃಷ್ಟಿಯಿಟ್ಟು” ಅವನನ್ನು ‘ನಿಕಟವಾಗಿ ಪರಿಗಣಿಸಿರಿ,’ ಎಂದು ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. ಯಾವ ಕಷ್ಟಗಳನ್ನು ಅವನು ತಾಳಿಕೊಂಡನು? ಅವುಗಳಲ್ಲಿ ಕೆಲವು ಇತರರ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ಫಲಿಸಿದವು. ಯೇಸು “ಪಾಪಿಗಳಿಂದ ಎಷ್ಟೋ ವಿರೋಧವನ್ನು” ಮಾತ್ರವಲ್ಲ ಅವರೊಳಗೆ ಯಾರು ಹೆಚ್ಚಿನವರು ಎಂಬ ಸತತವಾದ ಜಗಳಗಳನ್ನು ಸೇರಿಸಿ, ಅವನ ಶಿಷ್ಯರೊಳಗೆ ಎದ್ದ ಸಮಸ್ಯೆಗಳನ್ನೂ ಸಹಿಸಿಕೊಂಡನು. ಅದಕ್ಕಿಂತ ಹೆಚ್ಚಾಗಿ, ನಂಬಿಕೆಯ ಸರಿಸಾಟಿಯಿಲ್ಲದ ಒಂದು ಪರೀಕ್ಷೆಯನ್ನು ಅವನು ಎದುರಿಸಿದನು. ಅವನು “ಶಿಲುಬೆಯ ಮರಣವನ್ನು ಸಹಿಸಿಕೊಂಡ”ನು. (ಇಬ್ರಿಯ 12:1-3; ಲೂಕ 9:46; 22:24) ಶೂಲಕ್ಕೇರಿಸುವ ನೋವಿನಲ್ಲಿ ಒಳಗೊಂಡ ಮಾನಸಿಕ ಮತ್ತು ಶಾರೀರಿಕ ಕಷ್ಟಾನುಭವವನ್ನು ಮತ್ತು ಒಬ್ಬ ದೂಷಕನಂತೆ ದಂಡಿಸಲ್ಪಡುವುದರ ಅಪಮಾನವನ್ನು ಊಹಿಸುವುದೂ ಕೂಡ ಕಷ್ಟಕರವಾಗಿದೆ.a

      18. ಅಪೊಸ್ತಲ ಪೌಲನಿಗನುಸಾರ, ಯಾವ ಎರಡು ವಿಷಯಗಳು ಯೇಸುವನ್ನು ಬಲವನ್ನಿತ್ತು ಪೋಷಿಸಿದವು?

      18 ಕೊನೇತನಕ ತಾಳಿಕೊಳ್ಳಲು ಯೇಸುವನ್ನು ಯಾವುದು ಶಕ್ತನನ್ನಾಗಿ ಮಾಡಿತು? ಯೇಸುವನ್ನು ಎತ್ತಿಹಿಡಿದ ಎರಡು ವಿಷಯಗಳನ್ನು ಅಪೊಸ್ತಲ ಪೌಲನು ತಿಳಿಸುತ್ತಾನೆ: ‘ಪ್ರಾರ್ಥನೆ ವಿಜ್ಞಾಪನೆಗಳು’ ಮತ್ತು “ತನ್ನ ಮುಂದೆ ಇಟ್ಟಿದ್ದ ಸಂತೋಷ,” ಸಹ. ದೇವರ ಪರಿಪೂರ್ಣ ಮಗನಾದ ಯೇಸು, ಸಹಾಯಕ್ಕಾಗಿ ಕೇಳಲು ನಾಚಿಕೆಪಟ್ಟುಕೊಳ್ಳಲಿಲ್ಲ. “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ” ಅವನು ಪ್ರಾರ್ಥಿಸಿದನು. (ಇಬ್ರಿಯ 5:7; 12:2) ವಿಶೇಷವಾಗಿ ಅವನ ಶ್ರೇಷ್ಠವಾದ ಸಂಕಟವು ಸಮೀಪಿಸುತ್ತಿರುವಾಗ, ಬಲಕ್ಕಾಗಿ ಸತತವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದು ಅಗತ್ಯವೆಂದು ಅವನು ಕಂಡನು. (ಲೂಕ 22:39-44) ಯೇಸುವಿನ ವಿಜ್ಞಾಪನೆಯ ಪ್ರತಿಕ್ರಿಯೆಯಲ್ಲಿ, ಯೆಹೋವನು ಕಷ್ಟವನ್ನು ತೆಗೆದುಬಿಡಲಿಲ್ಲ, ಆದರೆ ಅದನ್ನು ತಾಳಿಕೊಳ್ಳಲು ಯೇಸುವನ್ನು ಬಲಗೊಳಿಸಿದನು. ಯೇಸು ಕೂಡ ತಾಳಿಕೊಂಡನು ಯಾಕಂದರೆ ಅವನು ಮರಣಕಂಬದ ಆಚೆ ಅವನ ಪ್ರತಿಫಲವನ್ನು ನೋಡಿದನು—ಯೆಹೋವನ ನಾಮದ ಪವಿತ್ರೀಕರಣಕ್ಕೆ ನೆರವಾಗುವುದರಲ್ಲಿ ಮತ್ತು ಮಾನವ ಕುಟುಂಬವನ್ನು ಮರಣದಿಂದ ವಿಮೋಚಿಸುವುದರಲ್ಲಿ ಅವನಿಗಿರುವ ಸಂತೋಷವನ್ನು ಅವನು ನೋಡಿದನು.—ಮತ್ತಾಯ 6:9; 20:28.

  • ತಾಳ್ಮೆ—ಕ್ರೈಸ್ತರಿಗೆ ಅತ್ಯಾವಶ್ಯಕ
    ಕಾವಲಿನಬುರುಜು—1993 | ಸೆಪ್ಟೆಂಬರ್‌ 15
    • 20 ಕೆಲವೊಮ್ಮೆ ನಾವು ಕಣ್ಣೀರುಗಳೊಂದಿಗೆ ತಾಳಿಕೊಳ್ಳಬೇಕು. ಯೇಸುವಿಗೆ ಮರಣಕಂಬದ ನೋವು ತಾನೇ ಹರ್ಷಿಸಲಿಕ್ಕಾಗಿ ಒಂದು ಕಾರಣವಾಗಿರಲಿಲ್ಲ. ಬದಲಾಗಿ, ಅವನ ಮುಂದೆ ಇಡಲ್ಪಟ್ಟ ಪ್ರತಿಫಲದಲ್ಲಿ ಸಂತೋಷವಿತ್ತು. ನಮ್ಮ ವಿಷಯದಲ್ಲಿ, ಕಷ್ಟದಲ್ಲಿರುವಾಗ ನಾವು ಯಾವಾಗಲೂ ಹರ್ಷಚಿತ್ತರಾಗಿ ಮತ್ತು ಉತ್ಸಾಹಭರಿತರಾಗಿ ಇರುವೆವು ಎಂದು ನಿರೀಕ್ಷಿಸುವುದು ವಾಸ್ತವವಾದ ಸಂಗತಿಯಲ್ಲ. (ಹೋಲಿಸಿ ಇಬ್ರಿಯ 12:11.) ಅತಿ ಕಷ್ಟಕರವಾದ ಸನ್ನಿವೇಶಗಳನ್ನು ನಾವು ಎದುರಿಸಿದರೂ ಕೂಡ, ಪ್ರತಿಫಲಕ್ಕೆ ಎದುರುನೋಡುವ ಮೂಲಕವಾದರೊ, ಅದು “ಕೇವಲ ಆನಂದಕರವಾದದ್ದೆಂದು ತಿಳಿದು” ಕೊಳ್ಳಲು ನಾವು ಶಕ್ತರಾಗಬಹುದು. (ಯಾಕೋಬ 1:2-4; ಅ. ಕೃತ್ಯಗಳು 5:41) ಪ್ರಾಮುಖ್ಯವಾದ ವಿಷಯವೇನಂದರೆ ನಾವು ಸ್ಥಿರಚಿತ್ತರಾಗಿರುವುದು—ಬೇಕಾದರೆ ಕಣ್ಣೀರುಗಳೊಂದಿಗೂ ಸಹ. ಅಂತೂ, ‘ಅತಿ ಕಡಿಮೆ ಪ್ರಮಾಣದ ಕಣ್ಣೀರುಗಳನ್ನು ಸುರಿಸುವವನು ರಕ್ಷಿಸಲ್ಪಡುವನು’ ಎಂಬುದಾಗಿ ಯೇಸು ಹೇಳಲಿಲ್ಲ, “ಆದರೆ ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:13.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ