ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರೀತಿಪರ ಕುರಿಪಾಲರಿಗೆ ದೈನ್ಯದ ಅಧೀನತೆ
    ಕಾವಲಿನಬುರುಜು—2007 | ಏಪ್ರಿಲ್‌ 1
    • 7 ನಮ್ಮ ಸ್ವರ್ಗೀಯ ಕುರಿಪಾಲರಾದ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಸಭೆಗಳಲ್ಲಿ ಜವಾಬ್ದಾರಿಕೆಯ ಸ್ಥಾನಗಳಲ್ಲಿ ಇಟ್ಟಿರುವ ಉಪಕುರಿಪಾಲರಿಗೆ ನಾವು ವಿಧೇಯತೆ ಮತ್ತು ಅಧೀನತೆಯನ್ನು ತೋರಿಸುವಂತೆ ಅಪೇಕ್ಷಿಸುತ್ತಾರೆ. (1 ಪೇತ್ರ 5:5) ಅಪೊಸ್ತಲ ಪೌಲನು ಪ್ರೇರಿತನಾಗಿ ಬರೆದುದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿ ನಿಮ್ಮನ್ನು ನಡೆಸಿದ ನಿಮ್ಮ ಪಾಲಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಜೀವಿಸಿದ ದಾರಿಯ ಅಂತ್ಯದ ಫಲವನ್ನು ಆಲೋಚಿಸಿ ಅವರ ನಂಬಿಕೆಯನ್ನು ಅನುಸರಿಸಿರಿ. ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರಿ, ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು [“ಪ್ರಾಣಗಳನ್ನು,” NW] ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.”​—ಇಬ್ರಿಯ 13:​7, 17, NIBV.

      8 ಹಿರಿಯರ ನಂಬಿಗಸ್ತ ನಡತೆಯ ಅಂತ್ಯ ಫಲವನ್ನು ನಾವು “ಆಲೋಚಿಸಿ” ಅಥವಾ ಜಾಗರೂಕತೆಯಿಂದ ಪರಿಗಣಿಸಿ, ಅವರ ನಂಬಿಕೆಯ ಮಾದರಿಗಳನ್ನು ಅನುಸರಿಸಲು ಪೌಲನು ಕರೆಕೊಡುವುದನ್ನು ಗಮನಿಸಿರಿ. ಅಲ್ಲದೆ, ಈ ನೇಮಿತ ಪುರುಷರ ನಿರ್ದೇಶನಗಳಿಗೆ ನಾವು ವಿಧೇಯರೂ ಅಧೀನರೂ ಆಗಬೇಕೆಂದು ಅವನು ಬುದ್ಧಿಹೇಳುತ್ತಾನೆ. ಬೈಬಲ್‌ ವಿದ್ವಾಂಸರಾದ ಆರ್‌. ಟಿ. ಫ್ರಾನ್ಸ್‌ ಎಂಬವರು ವಿವರಿಸುವುದೇನೆಂದರೆ “ವಿಧೇಯರಾಗಿ” ಎಂದು ಭಾಷಾಂತರವಾಗಿರುವ ಮೂಲ ಗ್ರೀಕ್‌ ಪದವು “ಸಾಮಾನ್ಯ ವಿಧೇಯತೆಯನ್ನು ಸೂಚಿಸುವ ಶಬ್ದವಲ್ಲ; ಅಕ್ಷರಾರ್ಥವಾಗಿ ‘ಒಡಂಬಡಿಸುವ’ ಅಂದರೆ ಅವರ ನಾಯಕತ್ವವನ್ನು ಇಷ್ಟಪೂರ್ವಕವಾಗಿ ಅಂಗೀಕರಿಸುವುದನ್ನು ಅದು ಸೂಚಿಸುತ್ತದೆ.” ನಾವು ಹಿರಿಯರಿಗೆ ವಿಧೇಯರಾಗುವುದು ದೇವರ ವಾಕ್ಯ ಹಾಗೆ ತಿಳಿಸುವುದರಿಂದ ಮಾತ್ರವಲ್ಲ ಅವರ ಹೃದಯದಲ್ಲಿ ರಾಜ್ಯಾಭಿರುಚಿಗಳೂ ನಮ್ಮ ಬಗ್ಗೆ ಹಿತಾಸಕ್ತಿಯೂ ಇದೆ ಎಂದು ನಾವು ಮನಗಂಡಿರುವುದರಿಂದಲೇ. ಅವರ ನಾಯಕತ್ವವನ್ನು ನಾವು ಇಷ್ಟಪೂರ್ವಕವಾಗಿ ಅಂಗೀಕರಿಸುವಲ್ಲಿ ನಿಶ್ಚಯವಾಗಿಯೂ ಸಂತೋಷಿಸುವೆವು.

      9 ಆದರೆ, ಒಂದು ನಿರ್ದಿಷ್ಟ ಸಂಗತಿಯ ಕುರಿತು ಹಿರಿಯರು ಕೊಡುವ ನಿರ್ದೇಶನ ಅತ್ಯುತ್ತಮವೆಂದು ನಮಗೆ ಖಾತರಿಯಾಗದಿದ್ದರೆ ಆಗೇನು? ಅಧೀನತೆಯು ಬೇಕಾಗಿರುವುದು ಇಲ್ಲಿಯೇ. ಎಲ್ಲವೂ ಸ್ಪಷ್ಟವಾಗಿದ್ದು, ನಮ್ಮಿಷ್ಟದ ಪ್ರಕಾರ ನಡೆಯುವಾಗ ವಿಧೇಯರಾಗುವುದು ಬಲು ಸುಲಭ. ಆದರೆ ನಮಗೆ ಕೊಡಲ್ಪಟ್ಟ ನಿರ್ದೇಶನವು ವೈಯಕ್ತಿಕವಾಗಿ ಸರಿಯಾಗಿ ತಿಳಿಯದೆ ಇರುವಾಗಲೂ ನಾವು ಅದಕ್ಕೆ ಮಣಿಯುವುದು ನಿಜವಾದ ಅಧೀನತೆ ಆಗಿದೆ. ಅಪೊಸ್ತಲನಾಗುವ ಮೊದಲು ಪೇತ್ರನು ತೋರಿಸಿದ್ದು ಈ ರೀತಿಯ ಅಧೀನತೆಯನ್ನೇ.​—ಲೂಕ 5:​4, 5.

  • ಪ್ರೀತಿಪರ ಕುರಿಪಾಲರಿಗೆ ದೈನ್ಯದ ಅಧೀನತೆ
    ಕಾವಲಿನಬುರುಜು—2007 | ಏಪ್ರಿಲ್‌ 1
    • 12 ಕ್ರೈಸ್ತ ಮೇಲ್ವಿಚಾರಕರೊಂದಿಗೆ ಸಹಕರಿಸುವುದಕ್ಕಿರುವ ಎರಡನೆಯ ಕಾರಣವು, ‘ಅವರು [ನಮ್ಮ] ಪ್ರಾಣಗಳನ್ನು ಕಾಯುವವರಾಗಿ’ ಇರುವುದರಿಂದಲೇ. ನಮ್ಮ ಮನೋಭಾವ ಅಥವಾ ವರ್ತನೆಯಲ್ಲಿ ನಮ್ಮ ಆಧ್ಯಾತ್ಮಿಕತೆಗೆ ಅಪಾಯ ತರಬಹುದಾದ ಏನಾದರೂ ಇದೆಯೆಂದು ಮೇಲ್ವಿಚಾರಕರಿಗೆ ತಿಳಿದಲ್ಲಿ, ನಮ್ಮನ್ನು ಸರಿಹೊಂದಿಸುವ ಉದ್ದೇಶದಿಂದ ಅಗತ್ಯವಿರುವ ಸಲಹೆಯನ್ನು ನೀಡಲು ಸಿದ್ಧರಿರುತ್ತಾರೆ. (ಗಲಾತ್ಯ 6:1) ‘ಕಾಯುವುದು’ ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದದ ಅಕ್ಷರಾರ್ಥವು, “ನಿದ್ರೆಯನ್ನು ತ್ಯಜಿಸುವುದು” ಎಂದಾಗಿದೆ. ಒಬ್ಬ ಬೈಬಲ್‌ ತಜ್ಞರಿಗನುಸಾರ, ಅದು “ಕುರುಬನು ಎಡೆಬಿಡದೆ ಎಚ್ಚರದಿಂದ ಇರುವುದನ್ನು ಸೂಚಿಸುತ್ತದೆ.” ಹೀಗೆ ಹಿರಿಯರು ತಾವೇ ಆಧ್ಯಾತ್ಮಿಕವಾಗಿ ಎಚ್ಚರದಿಂದಿರುವುದು ಮಾತ್ರವಲ್ಲದೆ, ನಮ್ಮ ಆಧ್ಯಾತ್ಮಿಕ ಕ್ಷೇಮಕ್ಕಾಗಿಯೂ ರಾತ್ರಿ ನಿದ್ರೆಗೆಡುತ್ತಾರೆ. ಪ್ರೀತಿ ತೋರಿಸುವ ಇಂಥ ಉಪಕುರಿಪಾಲರೊಂದಿಗೆ ನಾವು ಇಷ್ಟಪೂರ್ವಕವಾಗಿ ಸಹಕರಿಸಬೇಕಲ್ಲಾ. ಯಾಕೆಂದರೆ ಅವರು “ಮಹಾಪಾಲಕನಾಗಿರುವ” ಯೇಸು ಕ್ರಿಸ್ತನು ತೋರಿಸಿದ ಕೋಮಲ ಪರಾಮರಿಕೆಯನ್ನು ಅನುಸರಿಸಲು ತಮ್ಮಿಂದಾದಷ್ಟು ಪ್ರಯತ್ನಿಸುತ್ತಾರೆ.​—ಇಬ್ರಿಯ 13:20.

      13 ಮೇಲ್ವಿಚಾರಕರೊಂದಿಗೆ ನಾವು ಇಷ್ಟಪೂರ್ವಕವಾಗಿ ಸಹಕರಿಸಲಿಕ್ಕಿರುವ ಮೂರನೆಯ ಕಾರಣವು, “ಅವರು ಲೆಕ್ಕ ಒಪ್ಪಿಸಬೇಕಾದವರಾಗಿ” ನಮ್ಮನ್ನು ಕಾಯುವುದರಿಂದಲೇ. ತಾವು ಸ್ವರ್ಗೀಯ ಕುರಿಪಾಲರಾದ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕೆಳಗೆ ಸೇವೆಮಾಡುತ್ತಿರುವ ಉಪಕುರಿಪಾಲರೆಂಬುದನ್ನು ಮೇಲ್ವಿಚಾರಕರು ಜ್ಞಾಪಿಸಿಕೊಳ್ಳುತ್ತಾರೆ. (ಯೆಹೆಜ್ಕೇಲ 34:​22-24) ಕುರಿಗಳ ಒಡೆಯನು ಯೆಹೋವನೇ. ಆತನು ಅವರನ್ನು “ತನ್ನ ಸ್ವಂತ ಪುತ್ರನ ರಕ್ತದಿಂದ ಖರೀದಿಸಿ”ರುವುದರಿಂದ ನೇಮಿತ ಮೇಲ್ವಿಚಾರಕರು ಆತನ ಮಂದೆಯನ್ನು “ಕೋಮಲತೆಯಿಂದ” ಪಾಲಿಸುವ ವಿಷಯದಲ್ಲಿ ದೇವರಿಗೆ ‘ಲೆಕ್ಕ ಒಪ್ಪಿಸಬೇಕಾಗಿದೆ.’ (ಅ. ಕೃತ್ಯಗಳು 20:​28, 29, NW) ಹೀಗಿರುವುದರಿಂದ, ನಾವೆಲ್ಲರೂ ಯೆಹೋವನ ನಿರ್ದೇಶನಕ್ಕೆ ಪ್ರತಿವರ್ತಿಸುವ ವಿಧಕ್ಕಾಗಿ ಆತನಿಗೆ ಲೆಕ್ಕ ಒಪ್ಪಿಸಬೇಕು. (ರೋಮಾಪುರ 14:​10-12) ನೇಮಿತ ಹಿರಿಯರಿಗೆ ನಾವು ತೋರಿಸುವ ವಿಧೇಯತೆಯು ಸಭೆಯ ಶಿರಸ್ಸಾದ ಕ್ರಿಸ್ತನಿಗೆ ನಾವು ಅಧೀನರೆಂಬುದಕ್ಕೂ ರುಜುವಾತನ್ನು ಒದಗಿಸುತ್ತದೆ.​—ಕೊಲೊಸ್ಸೆ 2:19.

      14 ನಾವು ಕ್ರೈಸ್ತ ಮೇಲ್ವಿಚಾರಕರಿಗೆ ಏಕೆ ದೈನ್ಯದಿಂದ ಅಧೀನರಾಗಬೇಕೆಂಬುದಕ್ಕೆ ನಾಲ್ಕನೆಯ ಕಾರಣವನ್ನು ಪೌಲನು ಕೊಟ್ಟನು. ಅವನು ಬರೆದುದು: “ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ಬೋಧನೆ, ಕುರಿಪಾಲನೆ, ಸಾರುವ ಕಾರ್ಯದಲ್ಲಿ ನಾಯಕತ್ವ, ತಮ್ಮ ಕುಟುಂಬಗಳ ಪರಿಪಾಲನೆ ಮತ್ತು ಸಭಾ ಸಮಸ್ಯೆಗಳನ್ನು ನಿರ್ವಹಿಸುವುದು ಮುಂತಾದ ಮಹತ್ತ್ವದ ಜವಾಬ್ದಾರಿಗಳಿಂದಾಗಿ ಕ್ರೈಸ್ತ ಹಿರಿಯರು ಭಾರವಾದ ಹೊರೆಯನ್ನು ಹೊತ್ತವರಾಗಿದ್ದಾರೆ. (2 ಕೊರಿಂಥ 11:​28, 29) ನಾವು ಅವರೊಂದಿಗೆ ಸಹಕರಿಸದಿದ್ದರೆ ಅವರ ಹೊರೆಗೆ ಇನ್ನೂ ಹೆಚ್ಚನ್ನೇ ಕೂಡಿಸುತ್ತೇವೆ. ಇದರಿಂದಾಗಿ ಅವರು ‘ವ್ಯಸನಪಡುವರು.’ ನಮ್ಮ ಅಸಹಕಾರವು ಯೆಹೋವನನ್ನು ಅಸಮಾಧಾನ ಪಡಿಸುವುದರಿಂದ ಅದು ನಮಗೆ ಹಾನಿಕರವಾಗಿರಬಲ್ಲದು. ಇದಕ್ಕೆ ಬದಲಾಗಿ, ನಾವು ಯೋಗ್ಯ ಗೌರವ ಮತ್ತು ಸಹಕಾರವನ್ನು ತೋರಿಸುವಲ್ಲಿ ಹಿರಿಯರು ತಮ್ಮ ಕರ್ತವ್ಯಗಳನ್ನು ಸಂತೋಷದಿಂದ ನೆರವೇರಿಸುವರು. ಇದು ಐಕ್ಯಕ್ಕೆ ಮತ್ತು ರಾಜ್ಯ ಸಾರುವ ಕೆಲಸದಲ್ಲಿ ಹರ್ಷದಿಂದ ಭಾಗವಹಿಸುವುದಕ್ಕೆ ಸಹಾಯ ಮಾಡುತ್ತದೆ.​—ರೋಮಾಪುರ 15:​5, 6.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ