ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 24
  • ದೇವದೂತರು ಅಂದರೆ ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವದೂತರು ಅಂದರೆ ಯಾರು?
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ದೇವದೂತರು ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೆವ್ವಗಳಿಗಿಂತ ಯೇಸು ಶಕ್ತಿಶಾಲಿ
    ಮಹಾ ಬೋಧಕನಿಂದ ಕಲಿಯೋಣ
  • ದೇವದೂತರು ನಮ್ಮ ಮೇಲೆ ಪರಿಣಾಮಬೀರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 24
ಪಾಠ 24. ದೇವದೂತನ ಪ್ರತಿಮೆ.

ಪಾಠ 24

ದೇವದೂತರು ಅಂದರೆ ಯಾರು?

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಸ್ವರ್ಗದಲ್ಲಿರುವ ತನ್ನ ಕುಟುಂಬದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು ಅನ್ನೋದು ಯೆಹೋವನ ಇಷ್ಟ. ಆ ಕುಟುಂಬದಲ್ಲಿ ದೇವದೂತರಿದ್ದಾರೆ. ಅವರನ್ನ “ದೇವರ ಮಕ್ಕಳು” ಅಂತ ಕರೆಯುತ್ತಾರೆ. (ಯೋಬ 38:7, ಪಾದಟಿಪ್ಪಣಿ.) ಬೈಬಲ್‌ ದೇವದೂತರ ಬಗ್ಗೆ ಏನು ಹೇಳುತ್ತೆ? ಅವರು ಜನರಿಗೆ ಏನಾದ್ರೂ ಮಾಡ್ತಾರಾ? ದೇವದೂತರೆಲ್ಲರೂ ಈಗಲೂ ಯೆಹೋವ ದೇವರ ಕುಟುಂಬದ ಭಾಗವಾಗಿದ್ದಾರಾ?

1. ದೇವದೂತರು ಯಾರು? ಅವರು ಏನು ಮಾಡ್ತಾರೆ?

ಯೆಹೋವನು ಭೂಮಿಯನ್ನ ಸೃಷ್ಟಿ ಮಾಡೋಕೆ ಮುಂಚೆ ದೇವದೂತರನ್ನ ಸೃಷ್ಟಿ ಮಾಡಿದನು. ಯೆಹೋವ ದೇವರ ತರಾನೇ ಅವರನ್ನ ಕೂಡ ನಾವು ನೋಡೋಕೆ ಆಗಲ್ಲ. ಅವರು ಸ್ವರ್ಗದಲ್ಲಿದ್ದಾರೆ. (ಇಬ್ರಿಯ 1:14) ಕೋಟ್ಯಾಂತರ ದೇವದೂತರಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಭಾವ ವ್ಯಕ್ತಿತ್ವ ಇದೆ. (ಪ್ರಕಟನೆ 5:11) ಅವರು “[ಯೆಹೋವನ] ಸ್ವರಕ್ಕೆ ಅಧೀನರಾಗಿ, ಆತನ ಮಾತನ್ನ” ಪಾಲಿಸ್ತಾರೆ. (ಕೀರ್ತನೆ 103:20) ಹಿಂದಿನ ಕಾಲದಲ್ಲಿ ಯೆಹೋವನು ತನ್ನ ಜನರಿಗೆ ಸಂದೇಶವನ್ನ ತಿಳಿಸೋಕೆ, ಬೆಂಬಲ ಕೊಡೋಕೆ ಮತ್ತು ಕಾಪಾಡೋಕೆ ದೇವದೂತರನ್ನ ಉಪಯೋಗಿಸಿದ್ದಾನೆ. ಇವತ್ತು ಕೂಡ ದೇವರ ಬಗ್ಗೆ ಕಲಿಯೋಕೆ ಇಷ್ಟಪಡುವವರ ಹತ್ತಿರ, ಯೆಹೋವನ ಜನರನ್ನ ದೇವದೂತರು ಮಾರ್ಗದರ್ಶಿಸ್ತಾರೆ.

2. ಸೈತಾನ ಮತ್ತು ಕೆಟ್ಟ ದೇವದೂತರು ಯಾರು?

ಕೆಲವು ದೇವದೂತರು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲಿಲ್ಲ. ಮೊದಲು ದಂಗೆಯೆದ್ದ ದೇವದೂತನಿಗೆ ‘ಪಿಶಾಚ, ಸೈತಾನ ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.’ (ಪ್ರಕಟನೆ 12:9) ಸೈತಾನ ಎಲ್ಲರ ಮೇಲೆ ಅಧಿಕಾರ ನಡೆಸೋಕೆ ಬಯಸ್ತಾನೆ. ಹಾಗಾಗಿ ಅವನು ಮೊದಲ ಮಾನವರಾದ ಆದಾಮ ಹವ್ವರನ್ನ ನಂತರ ದೇವದೂತರನ್ನ ಯೆಹೋವನ ವಿರುದ್ಧ ದಂಗೆ ಏಳುವಂತೆ ಮಾಡಿದ. ಹೀಗೆ ದಂಗೆಯೆದ್ದ ದೇವದೂತರೇ ಕೆಟ್ಟ ದೇವದೂತರು ಅಥವಾ ಕೆಟ್ಟ ದೂತರು. ಯೆಹೋವ ದೇವರು ಅವರನ್ನ ಸ್ವರ್ಗದಿಂದ ಭೂಮಿಗೆ ತಳ್ಳಿದನು. ಆತನು ಅವರನ್ನ ಆದಷ್ಟು ಬೇಗನೇ ನಾಶಮಾಡ್ತಾನೆ.—ಪ್ರಕಟನೆ 12:9, 12 ಓದಿ.

3. ಸೈತಾನ ಮತ್ತು ಅವನ ಕೆಟ್ಟ ದೂತರು ಜನರನ್ನ ಹೇಗೆ ಮೋಸ ಮಾಡ್ತಾರೆ?

ಸೈತಾನ ಮತ್ತು ಅವನ ಕೆಟ್ಟ ದೂತರು ಜನರನ್ನ ಮೋಸ ಮಾಡೋಕೆ ಮಾಟಮಂತ್ರವನ್ನ ಮತ್ತು ಇತರ ವಿಧಾನಗಳನ್ನ ಬಳಸ್ತಾರೆ. ಉದಾಹರಣೆಗೆ ಕೆಲವು ಜನರು ಕಣಿಹೇಳುವವರ, ಜ್ಯೋತಿಷ್ಯರ, ಮಂತ್ರವಾದಿಗಳ, ಜಾತಕ ನೋಡುವವರ ಹತ್ತಿರ ಹೋಗ್ತಾರೆ. ಮಾಟಮಂತ್ರ ಮಾಡಿ ಚಿಕಿತ್ಸೆ ಮಾಡುವವರ ಹತ್ತಿರ ಹೋಗ್ತಾರೆ. ಇನ್ನೂ ಕೆಲವರು ಮಾಟಮಂತ್ರ ಒಳಗೂಡಿರುವ ಔಷಧಿಗಳನ್ನ ತೆಗೆದುಕೊಳ್ತಾರೆ, ಸತ್ತವರ ಜೊತೆ ಮಾತಾಡಬಹುದು ಅಂತ ನಂಬ್ತಾರೆ. ಆದರೆ ಸತ್ತವರಂತೆ ನಟಿಸಿ ಮಾತಾಡೋದು ಕೆಟ್ಟ ದೂತರು. ಅದಕ್ಕೆ ‘ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ ಹತ್ರ, ಭವಿಷ್ಯ ಹೇಳೋರ ಹತ್ರ ಹೋಗಬೇಡಿ‘ ಅಂತ ಯೆಹೋವನು ಎಚ್ಚರಿಸಿದ್ದಾನೆ. (ಯಾಜಕಕಾಂಡ 19:31) ಸೈತಾನ ಮತ್ತು ಅವನ ಕೆಟ್ಟ ದೂತರು ದೇವರ ವೈರಿಗಳಾಗಿದ್ದಾರೆ. ಅವರು ನಮಗೆ ಹಾನಿ ಮಾಡೋಕೆ ಬಯಸ್ತಾರೆ. ಹಾಗಾಗಿ ಅವರಿಂದ ನಮ್ಮನ್ನ ಕಾಪಾಡಲು ಯೆಹೋವನು ಈ ಎಚ್ಚರಿಕೆಯನ್ನ ಕೊಟ್ಟಿದ್ದಾನೆ.

ಹೆಚ್ಚನ್ನ ತಿಳಿಯೋಣ

ದೇವದೂತರು ನಮಗೆ ಹೇಗೆ ಸಹಾಯ ಮಾಡ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ. ಮಾಟಮಂತ್ರದಿಂದ ಆಗುವ ಅಪಾಯಗಳೇನು, ಸೈತಾನ ಮತ್ತು ಕೆಟ್ಟ ದೂತರಿಂದ ನಮ್ಮನ್ನ ಹೇಗೆ ಕಾಪಾಡಿಕೊಳ್ಳಬಹುದು ಅಂತನೂ ತಿಳಿದುಕೊಳ್ಳಿ.

ಇಬ್ಬರು ಯೆಹೋವನ ಸಾಕ್ಷಿಗಳು ಮನೆಯಿಂದ ಮನೆಗೆ ಸಾರುತ್ತಿರುವಾಗ ಒಬ್ಬ ದೇವದೂತ ಅವರನ್ನ ಮಾರ್ಗದರ್ಶಿಸ್ತಿದ್ದಾನೆ.

4. ಯೆಹೋವನ ಬಗ್ಗೆ ಕಲಿಯೋಕೆ ದೇವದೂತರು ನಮಗೆ ಸಹಾಯ ಮಾಡ್ತಾರೆ

ದೇವದೂತರು ಜನರಿಗೆ ಸಿಹಿಸುದ್ದಿಯನ್ನ ನೇರವಾಗಿ ಸಾರಲ್ಲ. ಬದಲಿಗೆ ಅವರು ದೇವರ ಬಗ್ಗೆ ಕಲಿಯೋಕೆ ಇಷ್ಟ ಇರೋ ಜನರ ಹತ್ತಿರ ಯೆಹೋವನ ಜನರನ್ನ ಮಾರ್ಗದರ್ಶಿಸ್ತಾರೆ. ಪ್ರಕಟನೆ 14:6, 7 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಸಿಹಿಸುದ್ದಿಯನ್ನ ಸಾರಲು ನಮಗೆ ದೇವದೂತರ ಸಹಾಯ ಯಾಕೆ ಬೇಕು?

  • ಬೈಬಲ್‌ ಕಲಿಯೋಕೆ ಇಷ್ಟಪಡೋ ಜನರ ಹತ್ತಿರ ದೇವದೂತರು ನಮ್ಮನ್ನ ಮಾರ್ಗದರ್ಶಿಸ್ತಾರೆ ಅಂತ ತಿಳಿಯುವಾಗ ನಿಮಗೆ ಹೇಗನಿಸುತ್ತೆ? ಯಾಕೆ?

ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳು. ಅದೃಶ್ಯ ಶಕ್ತಿಯ ಸಹಾಯ ಪಡೆಯಲು ಬಳಸುವ ಬೋರ್ಡ್‌, ಕ್ರಿಸ್ಟಲ್‌ ಬಾಲ್‌, ದೆವ್ವಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಕಾರ್ಡ್‌ಗಳು, ಗೊಂಬೆಗಳು, ಮೇಣದ ಬತ್ತಿ, ಧೂಪ, ತಾಯಿತ.

5. ಮಾಟಮಂತ್ರ ಮಾಡೋರಿಂದ ದೂರ ಇರಿ

ಸೈತಾನ ಮತ್ತು ಅವನ ಕೆಟ್ಟ ದೂತರು ಯೆಹೋವನ ವೈರಿಗಳಾಗಿದ್ದಾರೆ. ನಮ್ಮ ವೈರಿಗಳೂ ಕೂಡ. ಲೂಕ 9:38-42 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಕೆಟ್ಟ ದೂತರು ಜನರಿಗೆ ಏನು ಮಾಡ್ತಾರೆ?

ಕೆಟ್ಟ ದೂತರ ಸಹವಾಸ ಮಾಡೋಕೆ ನಾವು ಇಷ್ಟಪಡಲ್ಲ. ಧರ್ಮೋಪದೇಶಕಾಂಡ 18:10-12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಕೆಟ್ಟ ದೂತರು ನಮ್ಮ ಜೊತೆ ಮಾತಾಡೋಕೆ, ಸಹವಾಸ ಮಾಡೋಕೆ ಯಾವೆಲ್ಲಾ ಪ್ರಯತ್ನಗಳನ್ನ ಮಾಡ್ತಾರೆ? ನೀವಿರೋ ಜಾಗದಲ್ಲಿ ಇಂಥ ಯಾವೆಲ್ಲಾ ವಿಷಯಗಳನ್ನ ನೋಡಿದ್ದೀರಾ?

  • ಕೆಟ್ಟ ದೂತರ ಸಹವಾಸ ಮಾಡಬಾರದು ಅಂತ ಯೆಹೋವನು ಹೇಳೋದು ನ್ಯಾಯವಾಗಿದೆಯಾ? ನಿಮಗೆ ಯಾಕೆ ಹಾಗನಿಸುತ್ತೆ?

ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: “ಪಿಶಾಚನನ್ನು ಎದುರಿಸಿರಿ” (5:02)

  • ಪಲೇಸಾ ಅನ್ನೋ ಸ್ತ್ರೀ ತನ್ನ ಮಗಳ ಕೈಗೆ ತಾಯಿತ ಕಟ್ಟಿದ್ದು ಸರಿ ಅಂತ ನಿಮಗೆ ಅನಿಸುತ್ತಾ? ಯಾಕೆ?

  • ಕೆಟ್ಟ ದೂತರಿಂದ ದೂರ ಇರಲು ಪಲೇಸಾ ಏನು ಮಾಡಬೇಕಾಗಿತ್ತು?

ನಿಜ ಕ್ರೈಸ್ತರು ಮಾಟಮಂತ್ರಕ್ಕೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನ ತಮ್ಮ ಹತ್ತಿರ ಇಟ್ಟುಕೊಳ್ಳಲ್ಲ. ಅಪೊಸ್ತಲರ ಕಾರ್ಯ 19:19 ಮತ್ತು 1 ಕೊರಿಂಥ 10:21 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಿಮ್ಮ ಹತ್ತಿರ ಮಾಟಮಂತ್ರಕ್ಕೆ ಸಂಬಂಧಪಟ್ಟ ಯಾವುದಾದ್ರೂ ವಸ್ತುಗಳಿದ್ರೆ ಅದನ್ನೆಲ್ಲಾ ಯಾಕೆ ನಾಶಮಾಡಬೇಕು?

ಒಬ್ಬ ಸ್ತ್ರೀ ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳನ್ನ ಸುಟ್ಟುಹಾಕುತ್ತಿದ್ದಾಳೆ.

6. ಸೈತಾನ ಮತ್ತು ಅವನ ಕೆಟ್ಟ ದೂತರ ವಿರುದ್ಧ ಹೋರಾಡಿ, ಜಯಿಸಿ

ಕೆಟ್ಟ ದೂತರ ನಾಯಕ ಸೈತಾನ. ಆದ್ರೆ ನಂಬಿಗಸ್ತ ದೇವದೂತರನ್ನ ಮಾರ್ಗದರ್ಶಿಸ್ತಿರೋದು ಪ್ರಧಾನ ದೇವದೂತನಾದ ಮೀಕಾಯೇಲ. ಇದು ಯೇಸುವಿನ ಇನ್ನೊಂದು ಹೆಸರು. ಪ್ರಕಟನೆ 12:7-9 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯಾರಿಗೆ ಹೆಚ್ಚು ಶಕ್ತಿ ಇದೆ? ಮೀಕಾಯೇಲ ಮತ್ತು ಆತನ ದೇವದೂತರಿಗಾ? ಅಥವಾ ಸೈತಾನ ಮತ್ತು ಅವನ ಕೆಟ್ಟ ದೂತರಿಗಾ?

  • ಸೈತಾನ ಮತ್ತು ಅವನ ಕೆಟ್ಟ ದೂತರಿಗೆ ಯೇಸುವಿನ ಶಿಷ್ಯರು ಭಯಪಡಬೇಕಾ? ನಿಮಗೇನು ಅನಿಸುತ್ತೆ?

ಸೈತಾನ ಮತ್ತು ಅವನ ಕೆಟ್ಟ ದೂತರ ವಿರುದ್ಧ ಹೋರಾಡಿದ್ರೆ ನಿಮಗೆ ಜಯ ಸಿಗುತ್ತೆ. ಯಾಕೋಬ 4:7 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಸೈತಾನ ಮತ್ತು ಅವನ ಕೆಟ್ಟ ದೂತರಿಂದ ನಮ್ಮನ್ನ ಹೇಗೆ ಕಾಪಾಡಿಕೊಳ್ಳಬಹುದು?

ಕೆಲವರು ಹೀಗಂತಾರೆ: “ಮಾಟಮಂತ್ರ, ದೆವ್ವಗಳಿಗೆ ಸಂಬಂಧಪಟ್ಟ ಗೇಮ್‌ಗಳನ್ನ ಮತ್ತು ಸಿನಿಮಾಗಳನ್ನ ನೋಡೋದ್ರಿಂದ ಏನೂ ಆಗಲ್ಲ. ನಾನೂ ತುಂಬ ನೋಡಿದ್ದೀನಿ, ಚೆನ್ನಾಗಿರುತ್ತೆ.”

  • ಈ ತರ ಯೋಚನೆ ಮಾಡೋದು ಯಾಕೆ ತಪ್ಪು?

ನಾವೇನು ಕಲಿತ್ವಿ

ನಂಬಿಗಸ್ತ ದೇವದೂತರು ನಮಗೆ ಸಹಾಯ ಮಾಡ್ತಾರೆ. ಸೈತಾನ ಮತ್ತು ಅವನ ಕೆಟ್ಟ ದೂತರು ಯೆಹೋವನ ವೈರಿಗಳಾಗಿದ್ದಾರೆ. ಜನರನ್ನ ತಪ್ಪುದಾರಿಗೆ ನಡೆಸೋಕೆ ಮಾಟಮಂತ್ರಗಳನ್ನ ಬಳಸ್ತಾರೆ.

ನೆನಪಿದೆಯಾ

  • ಯೆಹೋವನ ಬಗ್ಗೆ ಕಲಿಯೋಕೆ ದೇವದೂತರು ಜನರಿಗೆ ಹೇಗೆ ಸಹಾಯ ಮಾಡ್ತಿದ್ದಾರೆ?

  • ಸೈತಾನ ಮತ್ತು ಅವನ ಕೆಟ್ಟ ದೂತರು ಯಾರು?

  • ಮಾಟಮಂತ್ರದ ಸಹವಾಸಕ್ಕೆ ಯಾಕೆ ಹೋಗಲೇ ಬಾರದು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಪ್ರಧಾನ ದೇವದೂತನಾಗಿರುವ ಮೀಕಾಯೇಲನೇ ಯೇಸು ಕ್ರಿಸ್ತ ಅನ್ನೋದಕ್ಕಿರೋ ಆಧಾರಗಳನ್ನ ನೋಡಿ.

“ಪ್ರಧಾನ ದೇವದೂತ ಮೀಕಾಯೇಲನು ಯಾರು?” (jw.org ಲೇಖನ)

ಸೈತಾನ ಅಂದರೆ ನಮ್ಮಲ್ಲಿರುವ ಕೆಟ್ಟ ಗುಣಗಳಲ್ಲ ಅನ್ನೋದಕ್ಕಿರುವ ಕಾರಣಗಳನ್ನ ನೋಡಿ.

“ಸೈತಾನನು ನಿಜವಾಗಲೂ ಇದ್ದಾನಾ?” (jw.org ಲೇಖನ)

ಒಬ್ಬ ಸ್ತ್ರೀ ಹೇಗೆ ಕೆಟ್ಟ ದೂತರಿಂದ ಬಿಡುಗಡೆ ಪಡೆದುಕೊಂಡಳು ಅಂತ ನೋಡಿ.

“ಆಕೆ ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು” (ಕಾವಲಿನಬುರುಜು, ಜುಲೈ 1, 1993)

ಜನರನ್ನ ದಾರಿ ತಪ್ಪಿಸಲಿಕ್ಕಾಗಿ ಸೈತಾನ ಹೇಗೆ ಮಾಟಮಂತ್ರಗಳನ್ನ ಉಪಯೋಗಿಸ್ತಿದ್ದಾನೆ ಅಂತ ನೋಡಿ.

“ಮ್ಯಾಜಿಕ್‌, ಮಾಟಮಂತ್ರ ಮತ್ತು ವಾಮಾಚಾರದ ಬಗ್ಗೆ ಇರೋ ಸತ್ಯ” (jw.org ಲೇಖನ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ