ನಿಮಗೆ ನೆನಪಿದೆಯೆ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳಿಗೆ ನೀವು ಧ್ಯಾನಪೂರ್ವಕವಾಗಿ ವಿಚಾರಮಾಡಿದ್ದೀರೋ? ಹಾಗಿರುವಲ್ಲಿ, ಈ ಮುಂದಿನದ್ದನ್ನು ನೀವು ಜ್ಞಾಪಿಸಿಕೊಳ್ಳಲು ಆಸಕ್ತಿಕರವಾದದ್ದಾಗಿ ಕಂಡುಕೊಳ್ಳುವಿರಿ:
◻ ಪೂರ್ವಾದೃಷ್ಟದ ಸಿದ್ಧಾಂತವು ಅಸಮಂಜಸವಾಗಿದೆ ಏಕೆ?
ದೇವರಿಗೆ ಇದೆಲ್ಲದ್ದರ ಕುರಿತಾಗಿ ಮುನ್ನರಿವಿರುತ್ತಿದ್ದು, ಆದಾಮನನ್ನು ಪಾಪದೊಳಕ್ಕೆ ಬೀಳುವಂತೆ ನಿರ್ಣಯಿಸುತ್ತಿದ್ದಲ್ಲಿ, ಆತನು ಮನುಷ್ಯನನ್ನು ನಿರ್ಮಿಸಿದಾಗ ಪಾಪದ ಕರ್ತೃವಾಗುತ್ತಿದ್ದನು, ಮತ್ತು ಎಲ್ಲ ಮಾನವ ದುಷ್ಟತನ ಹಾಗೂ ಕಷ್ಟಾನುಭವಕ್ಕಾಗಿ ದೇವರು ಜವಾಬ್ದಾರನಾಗುತ್ತಿದ್ದನು. ಯೆಹೋವನು ದುಷ್ಟತನವನ್ನು ದ್ವೇಷಿಸುವ ಒಬ್ಬ ಪ್ರೀತಿಯ ದೇವರಾಗಿದ್ದಾನೆ ಎಂಬ ವಾಸ್ತವಾಂಶದೊಂದಿಗೆ ಇದನ್ನು ಹೊಂದಿಸಲು ಸಾಧ್ಯವಿಲ್ಲ. (ಕೀರ್ತನೆ 33:5; ಜ್ಞಾನೋಕ್ತಿ 15:9; 1 ಯೋಹಾನ 4:8)—4/15, ಪುಟಗಳು 7, 8.
◻ ಯೆಶಾಯ 2:2-4ರ ನೆರವೇರಿಕೆಯಲ್ಲಿ, ಅನೇಕ ರಾಷ್ಟ್ರಗಳ ಜನರು ಏನನ್ನು ಮಾಡುತ್ತಿದ್ದಾರೆ?
ಆರಾಧನೆಗಾಗಿ ಯೆಹೋವನ ಮಂದಿರಕ್ಕೆ ಹೋದಂತೆ, ಅವರು ಸಹ “ಯುದ್ಧಾಭ್ಯಾಸ”ದಿಂದ ದೂರಸರಿಯುತ್ತಾರೆ ಏಕೆಂದರೆ ಅವರು ತಮ್ಮ ಭರವಸೆಯನ್ನು ದೇವರ ಸ್ವರ್ಗೀಯ ಸೈನ್ಯಗಳ ಸಂರಕ್ಷಣೆಯಲ್ಲಿರಿಸಿದ್ದಾರೆ. ಅವು ಶಾಂತಿಯ ಎಲ್ಲ ಶತ್ರುಗಳನ್ನು ನಾಶಮಾಡಲು ಸಿದ್ಧವಾಗಿರುವವು.—4/15, ಪುಟ 30.
◻ ಯೋವೇಲ 3:10-11ರಲ್ಲಿ ಹೇಳಲ್ಪಟ್ಟಿರುವ ದೇವರ ಶೂರರು ಯಾರು?
ಬೈಬಲಿನಲ್ಲಿ ಸುಮಾರು 280 ಸಲ ನಿಜ ದೇವರನ್ನು “ಸೇನಾಧೀಶ್ವರನಾದ ಯೆಹೋವನು” ಎಂದು ಕರೆಯಲಾಗಿದೆ. (2 ಅರಸು 3:14) ಈ ಸೇನೆಗಳು, ಯೆಹೋವನ ಅಪ್ಪಣೆಯನ್ನು ಪಾಲಿಸಲು ಸಿದ್ಧರಾಗಿ ನಿಲ್ಲುವ ಸ್ವರ್ಗದಲ್ಲಿನ ದೇವದೂತ ಸೈನ್ಯಗಳಾಗಿವೆ.—5/1, ಪುಟ 23.
◻ ಯೋಬನ ವಿರುದ್ಧವಾಗಿ ಪಾಪಮಾಡಿದವರ ಪರವಾಗಿ ಅವನು ಪ್ರಾರ್ಥಿಸುವಂತೆ ಯೆಹೋವನು ಅವಶ್ಯಪಡಿಸಿದ ವಿಷಯದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಯೋಬ 42:8)
ಯೋಬನು ಆರೋಗ್ಯವಂತ ಸ್ಥಿತಿಗೆ ಪುನಸ್ಸ್ಥಾಪಿಸಲ್ಪಡುವ ಮೊದಲು, ಅವನ ವಿರುದ್ಧ ಪಾಪಮಾಡಿದವರ ಪರವಾಗಿ ಪ್ರಾರ್ಥಿಸುವಂತೆ ಯೆಹೋವನು ಅವಶ್ಯಪಡಿಸಿದನು. ನಮ್ಮ ಸ್ವಂತ ಪಾಪಗಳು ಕ್ಷಮಿಸಲ್ಪಡುವ ಮೊದಲು ನಮ್ಮ ವಿರುದ್ಧ ಪಾಪಮಾಡುವವರನ್ನು ನಾವು ಕ್ಷಮಿಸಬೇಕೆಂದು ಯೆಹೋವನು ಕೇಳಿಕೊಳ್ಳುತ್ತಾನೆಂದು ಇದು ತೋರಿಸುತ್ತದೆ. (ಮತ್ತಾಯ 6:12; ಎಫೆಸ 4:32)—5/1, ಪುಟ 31.
◻ ‘ತಾಳ್ಮೆಯು ಅದರ ಕೆಲಸವನ್ನು ಪೂರ್ಣಗೊಳಿಸಲಿ’ ಎಂದು ಹೇಳುವಾಗ ಯಾಕೋಬನು ಏನನ್ನು ಅರ್ಥೈಸಿದನು? (ಯಾಕೋಬ 1:4)
ತಾಳ್ಮೆಗೆ ಒಂದು ಕಾರ್ಯವನ್ನು, ‘ಕೆಲಸವನ್ನು’ ಮಾಡಲಿಕ್ಕಿದೆ. ಅದರ ನೇಮಕವು, ನಮ್ಮನ್ನು ಎಲ್ಲ ರೀತಿಯಲ್ಲಿಯೂ ಸಂಪೂರ್ಣರನ್ನಾಗಿ ಮಾಡುವುದೇ ಆಗಿದೆ. ಹೀಗೆ ಕಷ್ಟಗಳನ್ನು ಬೇಗನೆ ಕೊನೆಗೊಳಿಸಲು ಅಶಾಸ್ತ್ರೀಯ ವಿಧಾನಗಳನ್ನು ಉಪಯೋಗಿಸುವ ಯಾವ ಪ್ರಯತ್ನಗಳನ್ನೂ ಮಾಡದೆ, ತಮ್ಮ ಅವಧಿಯನ್ನು ಅವು ಪೂರ್ಣಗೊಳಿಸುಂತೆ ಬಿಡುವ ಮೂಲಕ, ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ ಮತ್ತು ಪರಿಷ್ಕರಿಸಲ್ಪಡುತ್ತದೆ.—5/15, ಪುಟ 16.
◻ ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ದೇವರು ಏಕೆ ಇಷ್ಟು ದೀರ್ಘ ಸಮಯದ ವರೆಗೆ ಕಾದಿದ್ದಾನೆ?
ಕಾಲದ ಕುರಿತಾದ ಯೆಹೋವನ ದೃಷ್ಟಿಕೋನವು ನಮ್ಮ ದೃಷ್ಟಿಕೋನಕ್ಕಿಂತ ಭಿನ್ನವಾಗಿದೆ. ನಿತ್ಯನಾದ ದೇವರಿಗೆ, ಆದಾಮನ ಸೃಷ್ಟಿಯಿಂದ ಹಿಡಿದು ಇಂದಿನ ವರೆಗಿನ ಕಾಲಾವಧಿಯು, ಒಂದು ವಾರಕ್ಕೂ ಸರಿಸಮವಾಗುವುದಿಲ್ಲ. (2 ಪೇತ್ರ 3:8) ಆದರೆ ಕಾಲದ ಕುರಿತು ನಮಗೆ ಯಾವುದೇ ದೃಷ್ಟಿಕೋನವಿರಲಿ, ಕಳೆದು ಹೋಗುತ್ತಿರುವ ಪ್ರತಿ ದಿನವು ನಮ್ಮನ್ನು, ಯೆಹೋವನ ನಿರ್ದೋಷೀಕರಣದ ದಿನದ ಹೆಚ್ಚೆಚ್ಚು ಹತ್ತಿರಕ್ಕೆ ಕೊಂಡೊಯ್ಯುತ್ತದೆ.—6/1, ಪುಟಗಳು 5, 6.
◻ ಯೆಹೋವನ ಸಾಕ್ಷಿಗಳನ್ನು ಯಾವುದು ಪ್ರಚೋದಿಸುತ್ತದೆ?
ಯೆಹೋವನ ಬೋಧನೆಯು, ಒಬ್ಬರನ್ನೊಬ್ಬರು ಪ್ರೀತಿಸುವಂತೆ ಹಾಗೂ ತಮ್ಮಂತೆಯೇ ತಮ್ಮ ನೆರೆಯವರನ್ನು ಪ್ರೀತಿಸುವಂತೆ ಕಲಿಸಲ್ಪಟ್ಟಿರುವ ಒಂದು ಅಪೂರ್ವ ಜನರನ್ನು ಉತ್ಪಾದಿಸಿದೆ. (ಯೆಶಾಯ 54:13) ನಿರುತ್ಸಾಹ ಅಥವಾ ಹಿಂಸೆಯ ಎದುರಿನಲ್ಲೂ, ಸಾರುವುದನ್ನು ಮುಂದುವರಿಸುವಂತೆ ಯೆಹೋವನ ಸಾಕ್ಷಿಗಳನ್ನು ಪ್ರಚೋದಿಸುವಂತಹದ್ದು ಪ್ರೀತಿಯೇ ಆಗಿದೆ. (ಮತ್ತಾಯ 22:36-40; 1 ಕೊರಿಂಥ 13:1-8)—6/15, ಪುಟ 20.
◻ “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ” ಎಂಬ ಯೇಸುವಿನ ಮಾತುಗಳಿಂದ ಏನು ಸೂಚಿಸಲ್ಪಟ್ಟಿದೆ? (ಲೂಕ 13:24)
ಯೇಸುವಿನ ಮಾತುಗಳು ಪ್ರಯಾಸಪಡುವುದನ್ನು, ನಮ್ಮನ್ನೇ ಸಾಧ್ಯವಿರುವಷ್ಟು ಹೆಚ್ಚಾಗಿ ದುಡಿಸಿಕೊಳ್ಳುವುದನ್ನು ಸೂಚಿಸುತ್ತದೆ. ಕೆಲವರು ತಮ್ಮ ಸ್ವಂತ ಅನುಕೂಲತೆಗನುಸಾರ, ತಮಗೆ ಇಷ್ಟವಾಗುವ ಆರಾಮದ ಗತಿಯಲ್ಲಿ ‘ಆ ಬಾಗಲಿನಿಂದ ಹೋಗಲು’ ಪ್ರಯತ್ನಿಸುವರೆಂದು ಸಹ ಅವನ ಮಾತುಗಳು ಸೂಚಿಸುತ್ತವೆ. ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಸಾಧ್ಯವಿದೆ, ‘ಶ್ರದ್ಧೆ ಮತ್ತು ಪರಿಶ್ರಮದೊಂದಿಗೆ ನಾನು ಕೆಲಸಮಾಡುತ್ತಿದ್ದೇನೊ?—6/15, ಪುಟ 31.
◻ ಪುನರುತ್ಥಾನಗೊಂಡು ಹಿಂದಿರುಗಿ ಬರುವವರಿಗೆ, ‘ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಗುವುದು’ ಹೇಗೆ? (ಪ್ರಕಟನೆ 20:12)
ಈ ಪುಸ್ತಕಗಳು, ಅವರ ಹಿಂದಿನ ಕೃತ್ಯಗಳ ದಾಖಲೆಯಾಗಿರುವುದಿಲ್ಲ. ಅವರು ಮರಣಹೊಂದಿದಾಗ, ತಮ್ಮ ಜೀವಮಾನ ಕಾಲದಲ್ಲಿ ತಾವು ಮಾಡಿದ್ದ ಪಾಪಗಳಿಂದ ಅವರು ವಿಮುಕ್ತರಾಗಿದ್ದಾರೆ. (ರೋಮಾಪುರ 6:7, 23) ಆದರೆ, ಪುನರುತ್ಥಾನಹೊಂದಿದ ಮಾನವರು ಇನ್ನೂ ಆದಾಮಸಂಬಂಧಿತ ಪಾಪದ ಕೆಳಗಿರುವರು. ಹಾಗಾದರೆ, ಯೇಸು ಕ್ರಿಸ್ತನ ಯಜ್ಞದಿಂದ ಸಂಪೂರ್ಣವಾಗಿ ಪ್ರಯೋಜನ ಪಡೆದುಕೊಳ್ಳಲು, ಎಲ್ಲರೂ ಅನುಸರಿಸಬೇಕಾದ ದೈವಿಕ ಉಪದೇಶಗಳನ್ನು ಈ ಪುಸ್ತಕಗಳು ನಿರೂಪಿಸಬೇಕು.—7/1, ಪುಟ 22.
◻ ಒಳ್ಳೆಯ ನೆರೆಯವನಾದ ಸಮಾರ್ಯದವನ ಕುರಿತಾದ ಯೇಸುವಿನ ಸಾಮ್ಯದಲ್ಲಿ ನಮಗೆ ಯಾವ ಪಾಠವಿದೆ? (ಲೂಕ 10:30-37)
ನಿಜವಾಗಿಯೂ, ಯಥಾರ್ಥವಾಗಿರುವ ವ್ಯಕ್ತಿಯು ದೇವರ ನಿಯಮಗಳಿಗೆ ವಿಧೇಯನಾಗುತ್ತಾನೆ ಮಾತ್ರವಲ್ಲ, ಆತನ ಗುಣಗಳನ್ನೂ ಅನುಕರಿಸುತ್ತಾನೆಂಬುದನ್ನು ಯೇಸುವಿನ ಸಾಮ್ಯವು ತೋರಿಸುತ್ತದೆ. (ಎಫೆಸ 5:1) ನಮ್ಮ ನೆರೆಹೊರೆಭಾವವು, ರಾಷ್ಟ್ರೀಯ, ಸಾಂಸ್ಕೃತಿಕ, ಮತ್ತು ಧಾರ್ಮಿಕ ಗಡಿಗಳನ್ನು ಮೀರುವಂತಹದ್ದಾಗಿರಬೇಕು ಎಂಬುದನ್ನು ಸಹ ಅದು ತೋರಿಸುತ್ತದೆ. (ಗಲಾತ್ಯ 6:10)—7/1, ಪುಟ 31.
◻ ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಂಡು, ಹೆತ್ತವ ಮಾರ್ಗದರ್ಶನವನ್ನು ಒದಗಿಸಸಾಧ್ಯವಿರುವ ಮೂರು ಕ್ಷೇತ್ರಗಳು ಯಾವುವು?
(1) ಒಂದು ಸೂಕ್ತವಾದ ರೀತಿಯ ಐಹಿಕ ಉದ್ಯೋಗವನ್ನು ಆಯ್ಕೆಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ; (2) ಶಾಲೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿನ ಭಾವನಾತ್ಮಕ ಒತ್ತಡವನ್ನು ನಿಭಾಯಿಸಲಿಕ್ಕಾಗಿ ಅವರನ್ನು ಸಿದ್ಧಗೊಳಿಸಿರಿ; (3) ತಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವ ವಿಧವನ್ನು ಅವರಿಗೆ ತೋರಿಸಿರಿ.—7/15, ಪುಟ 4.
◻ ದೇವರು “ಏಳನೆಯ ದಿನ”ದಂದೇ ಏಕೆ ವಿಶ್ರಮಿಸಿದನು? (ಆದಿಕಾಂಡ 2:1-3)
ಆಯಾಸಗೊಂಡಿದ್ದರಿಂದ ದೇವರು ವಿಶ್ರಮಿಸಲಿಲ್ಲ. ಬದಲಾಗಿ, ತನ್ನ ಸ್ತುತಿ ಹಾಗೂ ಘನತೆಗಾಗಿ, ತನ್ನ ಕೈಕೆಲಸವು ವೃದ್ಧಿಯಾಗಿ, ಸಂಪೂರ್ಣವಾಗಿ ಮಹಿಮೆಗೆ ಬರುವಂತೆ ಸಮಯವನ್ನು ಕೊಡಲಿಕ್ಕಾಗಿ, ಆತನು ಭೂಸಂಬಂಧವಾದ ಸೃಷ್ಟಿಕಾರಕ ಕೆಲಸವನ್ನು ನಿಲ್ಲಿಸಿದನು.—7/15, ಪುಟ 18.
◻ ನಾವು ನ್ಯಾಯವನ್ನು ಆಚರಿಸುವ ಮೂರು ವಿಧಗಳು ಯಾವುವು?
ಪ್ರಥಮವಾಗಿ, ನಾವು ದೇವರ ನೈತಿಕ ಮಟ್ಟಗಳಿಗನುಸಾರವಾಗಿ ನಡೆಯಬೇಕು. (ಯೆಶಾಯ 1:17) ಎರಡನೆಯದಾಗಿ, ಯೆಹೋವನು ನಮ್ಮನ್ನು ಯಾವ ರೀತಿಯಲ್ಲಿ ಉಪಚರಿಸಬೇಕೆಂದು ನಾವು ಬಯಸುತ್ತೇವೊ ನಾವು ಕೂಡ ಅದೇ ರೀತಿಯಲ್ಲಿ ಇತರರನ್ನು ಉಪಚರಿಸುವಾಗ ನ್ಯಾಯವನ್ನು ಆಚರಿಸುತ್ತೇವೆ. (ಕೀರ್ತನೆ 130:3, 4) ಮೂರನೆಯದಾಗಿ, ನಾವು ಸಾರುವ ಚಟುವಟಿಕೆಯಲ್ಲಿ ಶ್ರದ್ಧಾಪೂರ್ವಕವಾಗಿ ಭಾಗವಹಿಸುವಾಗ, ನಾವು ದೈವಿಕ ನ್ಯಾಯವನ್ನು ಪ್ರದರ್ಶಿಸುತ್ತೇವೆ.(ಜ್ಞಾನೋಕ್ತಿ 3:27)—8/1, ಪುಟಗಳು 14, 15.