ಸಂಕಟದ ಸಮಯಗಳಲ್ಲಿ ನೀವು ಸಂತೈಸುವಿಕೆಯನ್ನು ಕಂಡುಕೊಳ್ಳಬಲ್ಲಿರಿ
ಸಂಕಟದ ಭಾವನೆಗಳನ್ನು ನಾವು ಹೇಗೆ ವೀಕ್ಷಿಸತಕ್ಕದ್ದು? ನಾವು ಯೆಹೋವನಿಗೆ ಸಮರ್ಪಿಸಿಕೊಂಡವರಾಗಿರುವದಾದರೆ, ನಮ್ಮ ಆಶ್ಚರ್ಯಕರವಾದ ನಿರೀಕ್ಷೆ ಮತ್ತು ನಮ್ಮ ಆತ್ಮಿಕ ಸಂಪನ್ಮೂಲಗಳ ಕಾರಣ, ಅವುಗಳನ್ನು ಸೋಜಿಗವೆಂಬಂತೆ ವೀಕ್ಷಿಸಬೇಕೊ? ಅಂಥ ಭಾವನೆಗಳ ಕಾರಣದಿಂದ ದೇವರ ಸೇವೆಗೆ ನಾವು ಆತ್ಮಿಕವಾಗಿ ಅಯೋಗ್ಯರಾಗಿದ್ದೇವೆ ಎಂದರ್ಥವೊ?
“ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು” ಎಂದು ಬರೆದನು ಶಿಷ್ಯನಾದ ಯಾಕೋಬನು. (ಯಾಕೋಬ 5:17) ದೇವರು ಎಲೀಯನನ್ನು ಅಸಾಮಾನ್ಯವಾದ ವಿಧದಲ್ಲಿ ಉಪಯೋಗಿಸಿದನಾದರೂ, ಆ ನಂಬಿಗಸ್ತ ಪ್ರವಾದಿಯೂ ಕೂಡ ಸಂಕಟ ಪಟ್ಟನು. “ಯೆಹೋವನೇ, ನನಗೆ ಸಾಕಾಯಿತು” ಎಂದು ಎಲೀಯನು ಒಂದು ಸಂದರ್ಭದಲ್ಲಿ ಉದ್ಗರಿಸಿದ್ದನು. “ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ.” (1 ಅರಸುಗಳು 19:4) ಸಮಗ್ರತೆಯನ್ನು ಕಾಪಾಡಿಕೊಂಡ ಮನುಷ್ಯನಾದ ಯೋಬನು, ನಂಬಿಗಸ್ತ ಸ್ತ್ರೀಯಾದ ಹನ್ನಳು, ಮತ್ತು ಯೆಹೋವನ ಇತರ ನಿಷ್ಠೆಯ ಸೇವಕರು ಸಂಕಟವನ್ನು ಅನುಭವಿಸಿದರು. ದೇವಭಕ್ತಿಯ ಕೀರ್ತನೆಗಾರ ದಾವೀದನು ಕೂಡ ಪ್ರಾರ್ಥಿಸಿದ್ದು: “ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು.”—ಕೀರ್ತನೆ 25:17.
ತನ್ನ ಸೇವೆಯಲ್ಲಿ ಯೆಹೋವನು ಮಾನವರನ್ನು ಬಳಸುವುದು, ಅವರನ್ನು ಪೂರ್ಣವಾಗಿ ನಿಶ್ಚಿಂತರನ್ನಾಗಿ ಮಾಡುವುದಿಲ್ಲ. ಅವರಲ್ಲಿ ಇನ್ನೂ ಮಾನವ ದುರ್ಬಲತೆಗಳು ಮತ್ತು ಭಾವನೆಗಳು ಇರುತ್ತವೆ ಮತ್ತು ಅವರು ಶೋಧನೆಯ ಕೆಳಗೆ ಸಂಕಟವನ್ನು ಅನುಭವಿಸಬಹುದು. (ಅ.ಕೃತ್ಯಗಳು 14:15) ಆದಾಗ್ಯೂ, ಭಾವನಾತ್ಮಕ ಒತ್ತರಗಳನ್ನು ನಿಭಾಯಿಸಲು ದೇವರ ಸೇವಕರಿಗೆ ಇತರರಿಗಿಂತ ಉತ್ತಮ ಸಹಾಯವು ಇದೆ. ಅವರ ಮಾನಸಿಕ ಖಿನ್ನತೆ ಮತ್ತು ಸಂಕಟದ ಭಾವನೆಗಳನ್ನು ಜಯಿಸಲು ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಯಾವುದು ಸಹಾಯ ಮಾಡಿತು ಎಂದು ನೋಡಲು ಕೆಲವೊಂದು ಬೈಬಲ್ ಉದಾಹರಣೆಗಳನ್ನು ನಾವು ಪರಿಗಣಿಸೋಣ.
ಸಂಕಟಕ್ಕೊಳಗಾದ ಅಪೊಸ್ತಲನು ಸಂತೈಸುವಿಕೆಯನ್ನು ಕಂಡುಕೊಳ್ಳುತ್ತಾನೆ
ಖಿನ್ನನಾಗುವದು ಅಂದರೇನು ಎಂದು ಅಪೊಸ್ತಲ ಪೌಲನು ಅರಿತಿದ್ದನು. ಅವನಂದದ್ದು, “ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಮನಸ್ಸಿಗೆ ಏನೂ ಉಪಶಮನವಾಗಲಿಲ್ಲ, . . . ಹೊರಗೆ ಕಲಹ, ಒಳಗೆ ಭಯ; ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.” (2 ಕೊರಿಂಥ 7:5, 6) ಏಕ ಕಾಲದಲ್ಲಿ ಸಂಭವಿಸಿದ್ದ ಅನೇಕ ಸಂಕಟಗೊಳಿಸುವ ಸನ್ನಿವೇಶಗಳಿಂದಾಗಿ ಪೌಲನು ಖಿನ್ನನಾಗಿದ್ದನು. ಅಲ್ಲಿ “ಹೊರಗೆ ಕಲಹ”—ಸ್ವತಃ ಜೀವಕ್ಕೆ ಕೇಡುತರುವ ಕಠಿಣ ಹಿಂಸೆ ಇತ್ತು. (2 ಕೊರಿಂಥ 1:8 ಹೋಲಿಸಿರಿ.) ಅದಲ್ಲದೆ, ಕೊರಿಂಥದಲ್ಲಿದ್ದಂತೆ, ಸಭೆಗಳ ಕುರಿತಾದ ಚಿಂತೆಗಳ ರೂಪದಲ್ಲಿ “ಒಳಗೆ ಭಯ” ಇತ್ತು.
ಕೆಲವು ತಿಂಗಳುಗಳ ಮೊದಲು, ಕೊರಿಂಥದ ಕ್ರೈಸ್ತರಿಗೆ ಅವನ ಮೊದಲನೆಯ ಪತ್ರವನ್ನು ಪೌಲನು ಬರೆದಿದ್ದನು. ಅದರಲ್ಲಿ ಸಭೆಯಲ್ಲಿರುವ ಅತಿ ಕೆಟ್ಟ ಸಂಗತಿಗಳನ್ನು ಅವನು ಖಂಡಿಸಿದ್ದನು ಮತ್ತು ಅವನ ಪತ್ರಕ್ಕೆ ಕೊರಿಂಥದವರು ಹೇಗೆ ಪ್ರತಿವರ್ತಿಸುವರು ಎಂಬುದರ ಕುರಿತು ಪ್ರಾಯಶಃ ಚಿಂತಿತನಾಗಿದ್ದನು. ಆದಾಗ್ಯೂ, ಅವರ ಪ್ರತಿವರ್ತನೆಯ ಕುರಿತು ಒಂದು ಶ್ಲಾಘಿಸುವ ವರದಿಯೊಂದಿಗೆ ಕೊರಿಂಥದಿಂದ ತೀತನು ಬಂದಾಗ ಪೌಲನು ಸಂತೈಸಲ್ಪಟ್ಟನು. ತದ್ರೀತಿಯಲ್ಲಿ, ನಮಗೆ ಶುಭ ವಾರ್ತೆಯನ್ನು ತರುವದಕ್ಕೆ ಆಧುನಿಕ ದಿನದ ತನ್ನ ಸೇವಕರುಗಳಲ್ಲಿ ಒಬ್ಬನನ್ನು ಯೆಹೋವನು ಬಳಸಬಹುದು ಮತ್ತು ನಮ್ಮ ಸಂಕಟವನ್ನು ಉಪಶಮನ ಮಾಡಬಹುದು.
ದೇವದತ್ತ ನೇಮಕಗಳನ್ನು ವೀಕ್ಷಿಸುವ ವಿಧ
ಅವರ ಶುಶ್ರೂಷೆಯ ಬಗ್ಗೆ ನಿರ್ದಿಷ್ಟ ಕ್ರೈಸ್ತರಿಗೆ ಸ್ವಲ್ಪ ಮಟ್ಟಿಗೆ ಸಂಕಟವಿರುತ್ತದೆ. ನಿಜವಾಗಿಯೂ, ಯೆಹೋವನ ಸೇವಕರಲ್ಲಿ ಕೆಲವರು ನೆನಸುವುದೇನಂದರೆ ದೇವದತ್ತ ನೇಮಕಗಳನ್ನು ಪೂರೈಸಲು ಅವರಿಂದ ಬಹಳಷ್ಟು ಕೇಳಲ್ಪಡುತ್ತದೆ. ಉದಾಹರಣೆಗೆ ಐಗುಪ್ತದಲ್ಲಿ ಇಸ್ರಾಯೇಲ್ಯರ ಪರವಾಗಿ ದೇವರ ಪ್ರತಿನಿಧಿಯಾಗಲು ಅಯೋಗ್ಯನು ಎಂದು ಮೋಶೆಯು ಎಣಿಸಿದನು. ಇತರ ವಿಷಯಗಳೊಂದಿಗೆ, ತಾನೊಬ್ಬ ವಾಕ್ಪಟುತೆಯ ಭಾಷಣಕರ್ತನಲ್ಲವೆಂದು ಅವನು ಹೇಳಿದನು. (ವಿಮೋಚನಕಾಂಡ 3:11; 4:10) ಆದರೆ ದೇವರಲ್ಲಿ ಭರವಸೆ ಮತ್ತು ಆರೋನನು ಅವನ ವದನಕನಾಗಿರುವ ಮೂಲಕ, ತನ್ನ ನೇಮಕವನ್ನು ಪೂರೈಸಲು ಮೋಶೆಯು ಸಿದ್ಧನಾದನು.
ಸಮಯಾನಂತರ ಮೋಶೆಯು ಆರೋನನ ಮೇಲೆ ಆತುಕೊಳ್ಳಲಿಲ್ಲ. ತದ್ರೀತಿಯಲ್ಲಿ, ಆರಂಭದಲ್ಲಿ ಕೆಲವರು ಕ್ರೈಸ್ತ ಶುಶ್ರೂಷೆಯು ಕಷ್ಟವೆಂದು ಕಂಡುಕೊಳ್ಳುವರು, ಆದರೆ ಅವರು ತರಬೇತಿಯನ್ನು ಪಡೆಯುತ್ತಾರೆ ಮತ್ತು ನಿಪುಣ ಸುವಾರ್ತಿಕರಾಗುತ್ತಾರೆ. ಉದಾಹರಣೆಗೆ, ಯೆಹೋವನ ಅನೇಕ ಎಳೆಯ ಸಾಕ್ಷಿಗಳು ಬೆಳೆದು ಪಯನೀಯರರೋಪಾದಿ ಮತ್ತು ಮಿಷನರಿಗಳೋಪಾದಿ ಪೂರ್ಣ ಸಮಯದ ಸೌವಾರ್ತಿಕರಾಗಿದ್ದಾರೆ. ಕ್ರೈಸ್ತ ಶುಶ್ರೂಷಕರಾಗಿ ಅರ್ಹರಾಗಲು ಮತ್ತು ಅವರ ದೇವದತ್ತ ನೇಮಕಗಳನ್ನು ಪೂರೈಸಲು ಯೆಹೋವನ ಮೇಲೆ ಯಾವಾಗಲೂ ಆತುಕೊಳ್ಳಬಹುದು ಎಂದು ತಿಳಿಯುವದು ಸಂತೈಸುವಿಕೆಯದ್ದಾಗಿರುತ್ತದೆ.—ಜೆಕರ್ಯ 4:6; 2 ಕೊರಿಂಥ 2:14-17; ಫಿಲಿಪ್ಪಿಯ 4:13.
ವಿಷಾದಗಳಿಂದ ಸಂಕಟಕ್ಕೊಳಗಾದಾಗ ಉಪಶಮನ
ದೇವರ ಸೇವೆಯಲ್ಲಿ ನಾವು ಹೆಚ್ಚನ್ನು ಮಾಡಲಿಲ್ಲ ಎಂದು ನಾವು ವಿಷಾದಿಸುವ ಕಾರಣ ಮನಗುಂದಿದವರಾಗಬಹುದು. ಹಲವಾರು ವರ್ಷಗಳ ತನಕ ನಿಷ್ಕ್ರಿಯನಾಗಿದ್ದ ಸಹೋದರನೊಬ್ಬನು ಕ್ಷೇತ್ರ ಸೇವೆಯಲ್ಲಿ ಭಾಗಿಯಾಗಲು ಆರಂಭಿಸಿದನು. ಕೊಂಚವೇ ಸಮಯದ ನಂತರ, ಅವನು ಗುರುತರವಾಗಿ ಅಸ್ವಸ್ಥನಾದನು ಮತ್ತು ಹಾಸಿಗೆಯ ಮೇಲೆ ಕಾಯಂ ಆಗಿ ನಿರ್ಬಂಧಿಸಲ್ಪಟ್ಟನು. ಖಿನ್ನನಾದ ಈ ಸಹೋದರನು ಅಂದದ್ದು: “ಮುಂಚೆ, ನಾನು ಕ್ರಿಯಾಶೀಲನಾಗಿ ಇರಬಹುದಾಗಿದ್ದಾಗ, ಜವಾಬ್ದಾರಿಯನ್ನು ಜಾರಿಸಿಕೊಂಡೆನು. ಈಗ, ನಾನು ಕ್ರಿಯಾಶೀಲನಾಗಿರಲು ಬಯಸುವಾಗ, ಅದನ್ನು ಮಾಡಲು ಶಕ್ಯನಾಗಿಲ್ಲ.”
ಗತಕಾಲದಲ್ಲಿ ಏನು ಸಂಭವಿಸಿತೋ ಅದರ ಮೇಲೆ ನಮ್ಮ ಭಾವನಾತ್ಮಕ ಶಕ್ತಿಯನ್ನು ವ್ಯಯಿಸುವದರ ಬದಲು ಈಗ ನಮ್ಮ ಅತ್ಯುತ್ತಮವನ್ನು ಮಾಡುವದು ವಿವೇಕದ್ದಲ್ಲವೆ? ಯೇಸುವಿನ ಮಾಂಸಿಕ ಸಹೋದರರಾದ ಯಾಕೋಬ ಮತ್ತು ಯೂದರು, ಅವನು ಮರಣಹೊಂದಿ, ಪುನರುತ್ಥಾನ ಹೊಂದುವ ತನಕ ವಿಶ್ವಾಸಿಗಳಾಗಲಿಲ್ಲ. ಈ ವಿಷಯದಲ್ಲಿ ಅವರಿಗೇನಾದರೂ ವಿಷಾದವಿದ್ದರೂ, ಅದು ದೇವರ ಸೇವಕರಾಗಲು ಮತ್ತು ಬೈಬಲಿನ ಲೇಖಕರಾಗಲೂ ಕೂಡ ಅವರನ್ನು ತಡೆಯಲಿಲ್ಲ.
ಪ್ರಾರ್ಥನೆಯನ್ನು ಎಂದೂ ಅಸಡ್ಡೆಮಾಡಬೇಡಿರಿ
ಮನಗುಂದಿದವರಾದಾಗ, ದೇವರ ಸೇವಕರು ತೀವ್ರತೆಯಿಂದ ಪ್ರಾರ್ಥಿಸತಕ್ಕದ್ದು. ವಾಸ್ತವದಲ್ಲಿ, ಸಂಕಟದ ಸಮಯಗಳಲ್ಲಿ ಹೇಳಲ್ಪಟ್ಟ ಅನೇಕ ಪ್ರಾರ್ಥನೆಗಳು ಶಾಸ್ತ್ರವಚನಗಳಲ್ಲಿ ಒಳಗೂಡಿವೆ. (1 ಸಮುವೇಲ 1:4-20; ಕೀರ್ತನೆ 42:8) ಕೆಲವರು ಯೋಚಿಸಬಹುದು: ‘ನಾನು ಎಷ್ಟೊಂದು ಖಿನ್ನನಾಗಿದ್ದೇನಂದರೆ ನಾನು ಪ್ರಾರ್ಥಿಸಲು ಶಕ್ತನಲ್ಲ.’ ಹಾಗಿದ್ದಲ್ಲಿ, ಯೋನನ ಕುರಿತು ಯಾಕೆ ಎಣಿಸಬಾರದು? ಮೀನಿನ ಹೊಟ್ಟೆಯಲ್ಲಿರುವಾಗ, ಅವನಂದದ್ದು: “ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಯೆಹೋವನಾದ ನಿನ್ನನ್ನು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ನಿನ್ನ ಪರಿಶುದ್ಧಾಲಯಕ್ಕೆ ಸೇರಿತು. . . . ನಾನಾದರೋ ಸ್ತೋತ್ರಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.” (ಯೋನ 2:4-9) ಹೌದು, ಯೋನನು ಪ್ರಾರ್ಥಿಸಿದನು, ಮತ್ತು ದೇವರು ಅವನನ್ನು ಸಂತೈಸಿದನು ಮತ್ತು ರಕ್ಷಿಸಿದನು.
ಸ್ವೀಡನ್ನಲ್ಲಿ ಸಹೋದರಿಯೊಬ್ಬಳು ಹಲವಾರು ವರ್ಷಗಳಿಂದ ಪಯನೀಯರಳಾಗಿದ್ದರೂ ಕೂಡ, ಒಮ್ಮೆಲೆ ಅವಳು ಖಿನ್ನಳಾದಳು ಮತ್ತು ಶುಶ್ರೂಷೆಯಲ್ಲಿ ಪ್ರತಿಫಲವುಳ್ಳವಳಾಗಿದ್ದಾಗ್ಯೂ, ದಣಿದಳು. ಅವಳ ಮನಗುಂದುವಿಕೆಯನ್ನು ಪ್ರಾರ್ಥನೆಯಲ್ಲಿ ಅವಳು ಯೆಹೋವನಿಗೆ ತಿಳಿಸಿದಳು. ಕೆಲವು ದಿನಗಳ ನಂತರ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಸಹೋದರನೊಬ್ಬನಿಂದ ಅವಳಿಗೊಂದು ಟೆಲಿಪೊನ್ ಕರೆಯು ಬಂತು. ಬೆತೆಲ್ ವಿಸ್ತಾರ್ಯದ ಸಂಬಂಧದಲ್ಲಿ ವಾರದಲ್ಲಿ ಒಂದು ದಿನ ಅವಳು ಅಲ್ಲಿ ಸಹಾಯ ಮಾಡಶಕ್ತಳೋ ಎಂದವನು ವಿಚಾರಿಸಿದನು. ಈ ಸಹೋದರಿ ಅನಂತರ ಹೇಳಿದ್ದು: “ಬೆತೆಲಿನ ವಾತಾವರಣ ಮತ್ತು ವಿಸ್ತಾರ್ಯದ ಕಾರ್ಯವನ್ನು ನೋಡುವದರಲ್ಲಿ ಇರುವ ಒಂದು ಸಂದರ್ಭ ಮತ್ತು ಅದರಲ್ಲಿ ಒಂದು ಪಾಲು, ನನಗೆ ಆವಶ್ಯಕವಾದ ಹೆಚ್ಚಿನ ಬಲವನ್ನು ಕೊಟ್ಟಿತು.”
ನಾವು ಮನಗುಂದಿದವರಾದರೆ, ಖಿನ್ನತೆಯ ವಿರುದ್ಧ ಹೋರಾಡುವ ಒಂದು ಮಾರ್ಗ ಪ್ರಾರ್ಥನೆ ಎಂಬುದನ್ನು ನೆನಪಿನಲ್ಲಿಡುವುದು ಉತ್ತಮ. (ಕೊಲೊಸ್ಸೆ 4:2) ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ, ಅವನ ಸೇವೆಯಲ್ಲಿ ಅಧಿಕ ಚಟುವಟಿಕೆಗೆ ನಡಿಸುವ ದ್ವಾರವೊಂದನ್ನು ಯೆಹೋವನು ತೆರೆಯಬಹುದು, ಯಾ ಅಧಿಕ ಫಲೋತ್ಪಾದಕತೆಯಿಂದ ನಮ್ಮ ಶುಶ್ರೂಷೆಯನ್ನು ಅವನು ಆಶೀರ್ವದಿಸಬಹುದು. (1 ಕೊರಿಂಥ 16:8, 9) ಯಾವುದೇ ಪಕ್ಷದಲ್ಲಿ, “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.” (ಜ್ಞಾನೋಕ್ತಿ 10:22) ಇದು ಖಂಡಿತವಾಗಿಯೂ ನಮ್ಮ ಆತ್ಮವನ್ನು ಮೇಲಕ್ಕೆತ್ತುವದು.
ಸಂದೇಹಗಳಿಂದ ಸಂಕಟಪಡುತ್ತೀರೊ?
ಕೆಲವೊಮ್ಮೆ, ಯೆಹೋವನ ಸೇವಕರಲ್ಲೊಬ್ಬನಿಗೆ ಸಂದೇಹಗಳಿರಬಹುದು. ಅದು ನಮಗೆ ಸಂಭವಿಸುವದಾದರೆ, ನಾವು ದೇವರ ಮೆಚ್ಚುಗೆಯನ್ನು ಕಳೆದುಕೊಂಡಿದ್ದೇವೆ ಎಂದು ನಾವು ತಕ್ಷಣವೇ ತೀರ್ಮಾನಕ್ಕೆ ಬರಬಾರದು. ಅವನ ಧಣಿಯ ಪುನರುತ್ಥಾನವನ್ನು ಕಣ್ಣಾರೆ ಕಂಡ ಸಾಕ್ಷಿಗಳ ವರದಿಯನ್ನು ಸಂದೇಹಿಸಿದ್ದಕ್ಕಾಗಿ ಅಪೊಸ್ತಲ ತೋಮನನ್ನು ಯೇಸುವು ನಿರಾಕರಿಸಲಿಲ್ಲ. ಬದಲಾಗಿ, ಅವನ ಸಂದೇಹಗಳನ್ನು ನಿವಾರಿಸಲು ಯೇಸುವು ಪ್ರೀತಿಪೂರ್ವಕವಾಗಿ ಸಹಾಯ ನೀಡಿದನು. ಮತ್ತು ಯೇಸುವು ಜೀವಂತನಾಗಿದ್ದಾನೆ ಎಂದು ಅವನಿಗೆ ಮನವರಿಕೆಯಾದಾಗ, ತೋಮನು ಎಷ್ಟೊಂದು ಪುಳಕಿತನಾಗಿದ್ದನು!—ಯೋಹಾನ 20:24-29.
ಮೊದಲನೆಯ ಶತಕದ ಕ್ರೈಸ್ತ ಸಭೆಯೊಳಗೆ ನುಸುಳಿದ್ದ “ಭಕ್ತಿಹೀನರು,” ಅವರ ಸುಳ್ಳು ಬೋಧನೆಗಳ, ಗುಣುಗುಟ್ಟುವಿಕೆಯ, ಮತ್ತು ಇಂಥ ಇತರ ಸಂಗತಿಗಳ ಮೂಲಕ, ಕೆಲವರ ಸಂಕಟಮಯ ಸಂದೇಹಕ್ಕೆ ಕಾರಣರಾಗುತ್ತಿದ್ದರು. ಆದಕಾರಣ, ಶಿಷ್ಯ ಯೂದನು ಬರೆದದ್ದು: “ಸಂದೇಹಪಡುವ ಕೆಲವರಿಗೆ ಕರುಣೆ ತೋರಿಸಿರಿ; ಅವರನ್ನು ಬೆಂಕಿಯ ಬಾಯೊಳಗಿಂದ ಎಳಕೊಂಡು ರಕ್ಷಿಸಿರಿ.” (ಯೂದ 3, 4, 16, 22, 23) ದೇವರ ಕರುಣಾಭರಿತ ಪರಿಗಣನೆಯನ್ನು ಪಡೆಯುವುದನ್ನು ಮುಂದರಿಸಲು, ಯೂದನ ಜತೆ ಆರಾಧಕರು—ವಿಶೇಷವಾಗಿ ಸಭೆಯ ಹಿರಿಯರು—ಅದಕ್ಕೆ ಅರ್ಹರಾಗಿರುವ ಸಂದೇಹಿಗಳಿಗೆ ಕರುಣೆಯನ್ನು ತೋರಿಸುವ ಅಗತ್ಯವಿತ್ತು. (ಯಾಕೋಬ 2:13) ಅವರ ಅನಂತ ಜೀವವು ಗಂಡಾಂತರದಲ್ಲಿತ್ತು, ಯಾಕಂದರೆ ಅವರು ನಿತ್ಯ ನಾಶನದ “ಬೆಂಕಿಯ” ಅಪಾಯದಲಿದ್ದರು. (ಮತ್ತಾಯ 18:8, 9 ಹೋಲಿಸಿರಿ; 25:31-33, 41-46.) ಮತ್ತು ಸಂದೇಹವಿರುವ ಸಹ ವಿಶ್ವಾಸಿಗಳಿಗೆ ದಯೆಯಿಂದ ಸಹಾಯ ಕೊಡಲ್ಪಡುವಾಗ ಮತ್ತು ಅವರು ಆತ್ಮಿಕವಾಗಿ ದೃಢವಾಗುವಾಗ ಎಂಥ ಆನಂದವು ಇರುತ್ತದೆ!
ದೇವರು ನಮ್ಮೊಂದಿಗೆ ಇರುವ ವಿಷಯದಲ್ಲಿ ದುಃಖಕರ ಶೋಧನೆಗಳು ನಾವು ಸಂದೇಹ ಪಡುವಂತೆ ಮಾಡುವುದಾದರೆ, ನಮ್ಮ ಪ್ರಾರ್ಥನೆಗಳಲ್ಲಿ ನಾವು ನಿರ್ದಿಷ್ಟರಾಗಿರುವ ಆವಶ್ಯಕತೆಯಿದೆ. ಅಂಥ ಪರಿಸ್ಥಿತಿಗಳಲ್ಲಿ, ವಿವೇಕಕ್ಕಾಗಿ ಯೆಹೋವನಿಗೆ ಬೇಡುವದನ್ನು ನಾವು ಪಟ್ಟುಹಿಡಿದು ಮಾಡೋಣ. ವಿವೇಕದ ಕೊರತೆಗಾಗಿ ಮತ್ತು ಅದನ್ನು ಬೇಡುವದಕ್ಕಾಗಿ ನಮ್ಮನ್ನು ಹೀಯಾಳಿಸದೆ, ಅವನು ಉದಾರವಾಗಿ ನಮಗೆ ನೀಡುವನು. ನಾವು “ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳ”ಬೇಕಾಗಿದೆ, ಯಾಕಂದರೆ ಸಂದೇಹಿಯು “ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ” ಎಲ್ಲಾ ದಿಕ್ಕುಗಳಲ್ಲಿ “ ಅಲೆಯುತ್ತಿರುವನು.” ಅಂಥ ವ್ಯಕ್ತಿಗಳು ದೇವರಿಂದ ಏನನ್ನೂ ಪಡೆಯುವದಿಲ್ಲ, ಯಾಕಂದರೆ ಅವರು ಎರಡು ಮನಸ್ಸಿನವರೂ, ಅವರ ಪ್ರಾರ್ಥನೆಯಲ್ಲಿ ಮತ್ತು ಅವರ ಎಲ್ಲಾ ರೀತಿಗಳಲ್ಲಿ “ಚಂಚಲರೂ” ಆಗಿದ್ದಾರೆ. (ಯಾಕೋಬ 1:5-8) ಆದುದರಿಂದ ನಮ್ಮ ಶೋಧನೆಗಳನ್ನು ಯೋಗ್ಯವಾಗಿ ವೀಕ್ಷಿಸಲು ಮತ್ತು ಅವುಗಳನ್ನು ತಾಳಿಕೊಳ್ಳಲು ಯೆಹೋವನು ನಮಗೆ ಸಹಾಯ ಮಾಡುವನು ಎಂಬ ನಂಬಿಕೆ ನಮ್ಮಲ್ಲಿರಲಿ. ಸಹ ವಿಶ್ವಾಸಿಗಳಿಂದ ಯಾ ಬೈಬಲ್ ಅಧ್ಯಯನದ ಸಮಯದಲ್ಲಿ ಶಾಸ್ತ್ರವಚನಗಳು ನಮ್ಮ ಗಮನಕ್ಕೆ ತರಲ್ಪಡಬಹುದು. ದೇವರ ಅನುಗ್ರಹದ ಮೂಲಕ ಘಟನೆಗಳು ನಿಯೋಜಿಸಲ್ಪಟ್ಟು, ನಾವೇನು ಮಾಡತಕ್ಕದ್ದು ಎಂಬುದನ್ನು ಕಾಣುವಂತೆ ನಮಗೆ ಸಹಾಯವಾಗಬಹುದು. ನಮ್ಮನ್ನು ಮಾರ್ಗದರ್ಶಿಸುವದರಲ್ಲಿ ದೇವದೂತರು ಪಾಲಿಗರಾಗಬಹುದು ಯಾ ಪವಿತ್ರಾತ್ಮನಿಂದ ನಾವು ಮಾರ್ಗದರ್ಶನೆಯನ್ನು ಪಡೆಯಬಹುದು. (ಇಬ್ರಿಯ 1:14) ನಮ್ಮ ಪ್ರೀತಿಯ ದೇವರಲ್ಲಿ ಪೂರ್ಣ ಭರವಸೆಯೊಂದಿಗೆ ವಿವೇಕಕ್ಕಾಗಿ ಬೇಡುವುದು ಪ್ರಾಮುಖ್ಯ ಸಂಗತಿಯಾಗಿದೆ.—ಜ್ಞಾನೋಕ್ತಿ 3:5, 6.
ಯೆಹೋವನು ಸಂತೈಸುತ್ತಾನೆಂದು ನೆನಪಿಸಿರಿ
ಪೌಲನು ಪ್ರಾರ್ಥನಾಪೂರ್ವಕವಾಗಿ ಯೆಹೋವನ ಮೇಲೆ ಆತುಕೊಂಡನು ಮತ್ತು ಅವನನ್ನು ಸಂತೈಸುವಿಕೆಯ ಮೂಲನು ಎಂದು ತಿಳಿದಿದ್ದನು. ಅಪೊಸ್ತಲನು ಬರೆದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ.”—2 ಕೊರಿಂಥ 1:3, 4.
ಸಕಲ ವಿಧವಾಗಿ ಸಂತೈಸುವ ದೇವರು ಅವನ ಸೇವಕರಿಂದ ಅನುಭವಿಸಲ್ಪಡುವ ಸಂಕಟದ ಅರಿವು ಉಳ್ಳವನಾಗಿದ್ದಾನೆ ಮತ್ತು ಅವರಿಗೆ ಉಪಶಮನವನ್ನು ಕೊಡಲು ಬಯಸುತ್ತಾನೆ. ಕೊರಿಂಥದವರ ಕುರಿತು ಪೌಲನಿಗಿದ್ದ ಚಿಂತೆಯ ವಿಚಾರದಲ್ಲಿ, ಅವನ ಕ್ರೈಸ್ತ ಸಂಗಾತಿ ತೀತನಿಂದ ಉಪಶಮನವು ಒದಗಿಬಂತು. ಇಂದು ನಾವು ಸಂತೈಸಲ್ಪಡುವ ಒಂದು ವಿಧ ಇದಾಗಿರಬಹುದು. ಆದಕಾರಣ, ನಾವು ಸಂಕಟಕ್ಕೊಳಗಾದಾಗ ನಮ್ಮನ್ನು ಸ್ವತಃ ಪ್ರತ್ಯೇಕಿಸಿಕೊಳ್ಳುವದನ್ನು ಹೋಗಲಾಡಿಸತಕ್ಕದ್ದು. (ಜ್ಞಾನೋಕ್ತಿ 18:1) ಜತೆ ಕ್ರೈಸ್ತರೊಂದಿಗಿನ ಸಹವಾಸವು, ದೇವರು ನಮ್ಮನ್ನು ಸಂತೈಸುವ ಒಂದು ವಿಧಾನವಾಗಿದೆ. ನಾವು ಯೋಚಿಸಬಹುದು: ‘ನಾನು ಎಷ್ಟೊಂದು ಮನಗುಂದಿದವನಾಗಿದ್ದೇನಂದರೆ ನನ್ನ ಕ್ರೈಸ್ತ ಮಿತ್ರರೊಂದಿಗೆ ಇರಲು ಶಕ್ಯವಾಗುವಷ್ಟು ಬಲವಿಲ್ಲದವನಾಗಿದ್ದೇನೆ.’ ಆದಾಗ್ಯೂ, ಅಂಥ ಭಾವನೆಗಳ ವಿರುದ್ಧ ನಾವು ಹೋರಾಡಬೇಕಾಗಿದೆ ಮತ್ತು ಸಹ ವಿಶ್ವಾಸಿಗಳು ನೀಡ ಸಾಧ್ಯವಿರುವ ಸಂತೈಸುವಿಕೆಯಿಂದ ನಮ್ಮನ್ನು ತಪ್ಪಿಸಿಕೊಳ್ಳಬಾರದು.
ಎಂದಿಗೂ ಬಿಟ್ಟುಕೊಡದಿರ್ರಿ!
ತೀವ್ರ ಖಿನ್ನತೆಯಿಂದ ಬಾಧಿತರಾಗುವಷ್ಟರ ಶೋಧನೆಯ ಒತ್ತರವನ್ನು ನಮ್ಮಲ್ಲಿ ಕೆಲವರು ಅನುಭವಿಸದೆ ಇರಬಹುದು. ಆದರೆ ನಿಶ್ಶಕ್ತಿಗೊಳಿಸುವ ಅನಾರೋಗ್ಯ, ವಿವಾಹ ಸಂಗಾತಿಯ ಮೃತ್ಯು, ಯಾ ಇನ್ನೊಂದು ಅತಿ ಕಷ್ಟಕರ ಸನ್ನಿವೇಶವು ಭಾವನಾತ್ಮಕ ಸಂಕಟವನ್ನು ತರಬಲ್ಲದು. ಅದು ಸಂಭವಿಸಿದ್ದಲ್ಲಿ, ನಾವು ಅನಿವಾರ್ಯವಾಗಿ ಆತ್ಮಿಕ ಅಸ್ವಸ್ಥತೆಯಲ್ಲಿದ್ದೇವೆ ಎಂದು ನಾವು ತೀರ್ಮಾನಿಸದೆ ಇರೋಣ. ಖಿನ್ನನಾಗಿರುವ ವ್ಯಕ್ತಿಯೊಬ್ಬನು ದೇವರ ಸೇವೆಗೆ ಒಳ್ಳೇ ಯೋಗ್ಯತೆಯುಳ್ಳವನಾಗಿರಬಹುದು, ಇತರರಿಗೆ ಆತ್ಮಿಕವಾಗಿ ಸಹಾಯವನ್ನು ಕೂಡ ಮಾಡಬಹುದು. “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ಪೌಲನು ಸಹೋದರರನ್ನು ಉತ್ತೇಜಿಸುತ್ತಾನೆಯೇ ಹೊರತು, ಅವರೇನೋ ತಪ್ಪನ್ನು ಮಾಡಿದ್ದಾರೆ ಮತ್ತು ಆತ್ಮಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಅನುಮಾನಾಸ್ಪದ ರೀತಿಯಲ್ಲಿ ಯೋಚಿಸಬೇಕೆಂದು ಹೇಳಲಿಲ್ಲ. (1 ಥೆಸಲೊನೀಕ 5:14) ಖಿನ್ನತೆಯು ಕೆಲವೊಮ್ಮೆ ತಪ್ಪುಮಾಡುವಿಕೆ ಮತ್ತು ಅಪರಾಧದೊಂದಿಗೆ ಕೂಡಿರುವುದಾದರೂ, ನಿರ್ಮಲ ಹೃದಯದಿಂದ ದೇವರನ್ನು ಸೇವಿಸುವವರ ಕುರಿತು ಹಾಗಿರುವದಿಲ್ಲ. ಪ್ರಾಯಶಃ ಅತಿ ಕಷ್ಟದಿಂದ ಸಲ್ಲಿಸಲ್ಪಡುವ ಅವರ ಆರಾಧನೆಯು ಯೆಹೋವನಿಗೆ ಸ್ವೀಕಾರಾರ್ಹವಾಗಿದೆ. ಅವನು ಅವರನ್ನು ಪ್ರೀತಿಸುತ್ತಾನೆ ಮತ್ತು ಆವಶ್ಯಕವಾದ ಸಹಾಯ ಮತ್ತು ಸಂತೈಸುವಿಕೆಯೊಂದಿಗೆ ಅವರ ನೆರವಿಗೆ ಬರುತ್ತಾನೆ.—ಕೀರ್ತನೆ 121:1-3.
ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರಾಗಿರುವವರು 1918 ನೆಯ ವರ್ಷದಲ್ಲಿ ಶೋಧನೆಗಳಿಂದ ದಾರುಣವಾಗಿ ಸಂಕಟಕ್ಕೊಳಗಾಗಿದ್ದರು. (ಗಲಾತ್ಯ 6:16 ಹೋಲಿಸಿರಿ.) ಅವರ ಸಾರುವ ಸಂಸ್ಥಾಪನೆಯು ಬಹುಮಟ್ಟಿಗೆ ನಾಶಗೊಂಡಿತ್ತು, ಅವರಲ್ಲಿ ಕೆಲವರು ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದರು, ಮತ್ತು ಅವರ ಹಿಂದಿನ ಸಹವಾಸಿಗಳಲ್ಲಿ ಹೆಚ್ಚಿನವರು ನಿಷ್ಠೆಯಿಲ್ಲದವರೂ, ವಿರೋಧಿಸುವ ಧರ್ಮಭ್ರಷ್ಟರೂ ಆದರು. ಅದಲ್ಲದೆ, ಇದು ಸಂಭವಿಸುವಂತೆ ದೇವರು ಯಾಕೆ ಅನುಮತಿಸಿದನು ಎಂದು ನಂಬಿಗಸ್ತ ಅಭಿಷಿಕ್ತರಿಗೆ ತಿಳಿದಿರಲಿಲ್ಲ. ಕೆಲವು ಸಮಯದ ತನಕ ‘ಅವರು ದುಃಖಿಸುತ್ತಾ ಬೀಜಗಳನ್ನು ಬಿತ್ತಿದರು’ ಆದರೆ ಅವರು ಬಿಟ್ಟುಕೊಡಲಿಲ್ಲ. ಯೆಹೋವನನ್ನು ಸೇವಿಸುವದನ್ನು ಅವರು ಮುಂದರಿಸಿದರು ಮತ್ತು ತಮ್ಮನ್ನು ಸ್ವತಃ ಅವರು ಪರೀಕ್ಷಿಸಿಕೊಂಡರು ಕೂಡ. ಫಲಿತಾಂಶ? ಅವರು ‘ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬಂದರು.’ (ಕೀರ್ತನೆ 126:5, 6) ಸಮೀಪಿಸುತ್ತಿರುವ ಅವರ ಅಂತಾರಾಷ್ಟ್ರೀಯ ಕೊಯ್ಲಿನ ಕೆಲಸಕ್ಕಾಗಿ ಶುದ್ಧಗೊಳಿಸಲು ಅಂಥ ಶೋಧನೆಗಳನ್ನು ದೇವರು ಅನುಮತಿಸಿದನು ಎಂದು ಈಗ ಅಭಿಷಿಕ್ತರು ಗ್ರಹಿಸಿಕೊಂಡಿದ್ದಾರೆ.
ನಾನಾ ವಿಧವಾದ ಶೋಧನೆಗಳಿಂದ ನಾವು ಸಂಕಟಕ್ಕೊಳಪಟ್ಟಲ್ಲಿ, ಅಭಿಷಿಕ್ತ ಉಳಿಕೆಯವರ ಅನುಭವದಿಂದ ನಾವು ಪ್ರಯೋಜನ ಪಡೆಯಬಲ್ಲೆವು. ಬಿಟ್ಟುಕೊಡುವ ಬದಲಾಗಿ, ಸರಿಯಾದದ್ದು ಏನಾಗಿದೆಯೊ ಅದನ್ನು, ಕೆಲವೊಮ್ಮೆ ನಾವದನ್ನು ಅಳುತ್ತಾ ಮಾಡಬೇಕಾದರೂ ಕೂಡ, ಮಾಡುತ್ತಾ ಇರೋಣ. ತಕ್ಕ ಸಮಯದಲ್ಲಿ, ನಮ್ಮ ಶೋಧನೆಗಳಿಗೆ ಪರಿಹಾರವೊದಗುವ ಮಾರ್ಗವೊಂದಿರುವುದು, ಮತ್ತು ನಾವು ‘ಹರ್ಷಿಸುತ್ತಾ ಬರುವೆವು.’ ಹೌದು, ನಮ್ಮ ಶೋಧನೆಗಳನ್ನು ತಾಳಿಕೊಂಡಿರುವದರಿಂದಾಗುವ ಸಂತೋಷವು—ದೇವರಾತ್ಮನ ಫಲಗಳಲ್ಲೊಂದು—ನಮ್ಮದಾಗುವದು. ಯೆಹೋವನು ನಮಗೆ ನಿಜಕ್ಕೂ “ಸಕಲ ವಿಧವಾಗಿ ಸಂತೈಸುವ ದೇವರು” ಆಗಿ ಪರಿಣಮಿಸುವನು.