ಯೆಹೋವನನ್ನು ಸೇವಿಸಲು ದೃಢರಾಗಿರುವುದು!
“ನೀನು ಸಾರಲು ಹೋಗಬೇಕಾಗಿಲ್ಲ!” “ನಿನ್ನ ಜನರು ಇಲ್ಲಿ ಭೇಟಿಮಾಡುವುದು ಬೇಡ!” ಅನೇಕ ಕ್ರೈಸ್ತ ಸ್ತ್ರೀಯರು ಇಂತಹ ಮತ್ತು ತದ್ರೀತಿಯ ಅಭಿವ್ಯಕ್ತಿಗಳನ್ನು ತಮ್ಮ ವಿರೋಧಿ ಗಂಡಂದಿರಿಂದ ಕೇಳುತ್ತಾರೆ. ಆದರೆ ಈ ಗಂಡಂದಿರು ಸೇನಾ ಪಡೆಗಳಲ್ಲಿ ಕೆಲಸ ಮಾಡುತ್ತಿರುವಾಗ, ಅವರ ಹೆಂಡತಿಯರು ಅವರ ನಂಬಿಕೆಗಾಗಿ ವಿಶೇಷವಾದ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. (ಯೆಶಾಯ 2:4; ಯೋಹಾನ 17:16) ಹಾಗಾದರೆ, ಅಂತಹ ಕ್ರೈಸ್ತ ಹೆಂಡತಿಯರು ಆತ್ಮಿಕವಾಗಿ ದೃಢಪಡಿಸಿಕೊಳ್ಳಲು ಮತ್ತು ರಾಜ್ಯದ ಸೇವೆಯಲ್ಲಿ ಸಕ್ರಿಯರಾಗಿರಿಸಿಕೊಳ್ಳಲು ಹೇಗೆ ಶಕ್ತರಾಗುತ್ತಾರೆ?
ವೈಯಕ್ತಿಕ ನಿರ್ಣಯದೊಂದಿಗೆ ಸಂಬಂಧಿಸಿ ಯೆಹೋವ ದೇವರಿಗೆ ನಿಷ್ಠೆಯು ಅವರು ಸತತವಾಗಿ ಪ್ರಯತ್ನಿಸುವಂತೆ ಸಹಾಯ ಮಾಡುತ್ತದೆ. “ಅದು ನನ್ನ ಸ್ವಂತ ನೇರವಾದ ನಿರ್ಧಾರವೆಂದು ನಾನೆಣಿಸುತ್ತೇನೆ, ನನ್ನ ಗಂಡನ ವಿರೋಧವನ್ನು ಉಪಾಯದಿಂದ ತಪ್ಪಿಸಿಕೊಳ್ಳಲು ದಾರಿಗಳಿರಲೇಬೇಕೆಂದು ನನಗೆ ತಿಳಿದದೆ,” ಎಂದು ಸೈನಿಕನೊಬ್ಬನ ಹೆಂಡತಿ, ಈವಾನ್ ವಿವರಿಸುತ್ತಾಳೆ. ವಾಸ್ತವವಾಗಿ ಇವೆ.
ಸೇನಾ ಅಧಿಕಾರಿಯೊಬ್ಬನನ್ನು ವಿವಾಹವಾದ ಇನ್ನೊಬ್ಬ ಕ್ರೈಸ್ತ ಸ್ತ್ರೀಯು, ಹೇಗೆ ಅವಳ ದೃಢ ನಿಶ್ಚಯದ ನಿಲುವು ಅವಳ ಗಂಡನಿಗೆ ಜೀವನವನ್ನು ಹೆಚ್ಚು ಸುಲಭವಾಗಿ ಮಾಡುತ್ತದೆ ಎಂಬುದನ್ನು ವಿವರಿಸುತ್ತಾಳೆ. “ನನ್ನ ಹಾಗೂ ಅವನ ಕಾರ್ಯತಖ್ತೆಯು ಅವನಿಗೆ ತಿಳಿದದೆ, ಮತ್ತು ಮಿಲಿಟರಿ ಜನರು ಅದನ್ನು ಗಣ್ಯಮಾಡುತ್ತಾರೆ,” ಎಂದು ಅವಳು ವಿವರಿಸುತ್ತಾಳೆ. ಆದರೂ, ಯೆಹೋವನಿಗೆ ಅವಳ ಸತತವಾದ ಸೇವೆಯು ಸುಲಭವಾದ ಪಥವಾಗಿಲ್ಲ.
ಒಂಟಿತನವನ್ನು ಜಯಿಸುವುದು
ಸೈನಿಕರ ಹೆಂಡತಿಯರು, ಮನೆಯಿಂದ ಬಹು ದೂರದ ಒಂದು ವರ್ಗಾವಣೆಗೆ ತಮ್ಮ ಗಂಡಂದಿರ ಜೊತೆ ಹೋಗಬೇಕಾದರೆ ಅವರು ಪ್ರಯಾಣಕ್ಕೆ ಸಿದ್ಧವಾಗಲು ಕೆಲವೇ ದಿನಗಳ ಅವಕಾಶದ ಸವಾಲನ್ನು ಎದುರಿಸುತ್ತಾರೆ. ಆಗ ಅಪರಿಚಿತ ಸುತ್ತುಗಟ್ಟಿನಲ್ಲಿ ಅವರು ಇರಿಸಲ್ಪಡುವುದರಿಂದ, ಒಂಟಿಗ ಭಾವನೆ ಬರುವುದು ಸುಲಭ. ಆದರೆ ಹಾಗಾಗುವ ಆವಶ್ಯಕತೆಯಿಲ್ಲ. ಯೆಹೋವನನ್ನು ಸೇವಿಸುವವರಿಗೆ ಒಂದು ಅನುಕೂಲವಿದೆ. ಅದೇನಾಗಿದೆ? ಕ್ರೈಸ್ತನಾದ ಅಪೊಸ್ತಲ ಪೇತ್ರನಿಗನುಸಾರ “ಸಹೋದರರ ಸಂಪೂರ್ಣ ಬಳಗ”ವೇ ಅದಾಗಿದೆ. ಇಂದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ, ಯೆಹೋವನ ಸಾಕ್ಷಿಗಳು 231 ದೇಶಗಳಲ್ಲಿ ಒಂದು ದೊಡ್ಡ ಕ್ರೈಸ್ತ ಕುಟುಂಬದೋಪಾದಿ, ಒಂದು “ಸಹೋದರತ್ವ” ದೋಪಾದಿ ಕ್ರಿಯೆಗೈಯುತ್ತಾರೆ. ಕಾಯತಃ ಎಲ್ಲೆಲ್ಲಿಯೂ ನೀವು ಅವರನ್ನು ಕಾಣುವಿರಿ.—1 ಪೇತ್ರ 2:17 NW, ಪಾದಟಿಪ್ಪಣಿ.
ಸೂಜನ್, ಅನಿರೀಕ್ಷಿತವಾಗಿ ತನ್ನ ಮನೆ ಪ್ರದೇಶದಿಂದ ಹೊರದೂಡಲ್ಪಟ್ಟು, ಎಲ್ಲಿ ಅವಳ ಗಂಡನು ನೇಮಕವನ್ನು ಹೊಂದಿದ್ದನೊ, ಆ ವಾಯುಪಡೆಯ ಕಾರ್ಯಾಚರಣೆಯ ಕೇಂದ್ರದಲ್ಲಿ ಜೀವಿಸಲು ಬಂದಳು. ನಂಬಿಕೆಯಲ್ಲಿ ಹೊಸಬಳಾಗಿದ್ದು ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ ಹೇಳಿದ ತನ್ನ ಅವಿಶ್ವಾಸಿ ಗಂಡನ ಒತ್ತಡದ ಕೆಳಗೆ, ಅವಳು ವಿವರಿಸುವುದು: “ಆ ಕೂಡಲೆ ನಾನು ಸ್ಥಳೀಯ ಕೂಟಗಳಿಗೆ ಹೋದೆ, ಮತ್ತು ಅಲ್ಲಿ ಇತರ ಸಹೋದರಿಯರೊಂದಿಗೆ ಕುಳಿತುಕೊಳ್ಳಲು ಮತ್ತು ಮಾತಾಡಲು ನಾನು ಶಕ್ತಳಾದೆ. ಈ ಸಹವಾಸವು ತಾನೆ ನನಗೆ ಮುಂದುವರಿಯುವಂತೆ ಸಾಧ್ಯಮಾಡಿತೆಂದು ನಾನು ಸತ್ಯವಾಗಿ ಹೇಳಬಲ್ಲೆ.”
ಕೆಲವೊಮ್ಮೆ ಒಂಟಿತನವು ಖಿನ್ನತೆಯನ್ನುಂಟುಮಾಡುತ್ತದೆ. ಆಗ ಕೂಡ, ಸುವಾರ್ತೆಯು ಇಷ್ಟವುಳ್ಳ ಒಂದು ಆತ್ಮೋನ್ನತಿಯನ್ನು ಒದಗಿಸುತ್ತದೆ. “ನಾನು ನಿಜವಾಗಿಯೂ ಖಿನ್ನಳಾಗಿದ್ದಾಗ, ಅನಿರೀಕ್ಷಿತವಾಗಿ, ವರುಷಗಳ ಹಿಂದೆ ನಾನು ಸ್ವತಃ ಸೇನಾವೃತ್ತಿಯಲ್ಲಿದ್ದಾಗ ನನಗೆ ಪರಿಚಯವಿದ್ದ ಒಬ್ಬಳು ಪತ್ರ ಬರೆದಿದ್ದಳು, ಅವಳು ಇತ್ತೀಚೆಗೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡಳೆಂದು ಹೇಳಿ ಪತ್ರವನ್ನು ಬರೆದಿದ್ದಳು. ಸಕಾಲದಲ್ಲಿ ಅದು ನನಗೆ ಉತ್ತೇಜನವನ್ನು ನೀಡಿತು,” ಎಂದು ತನ್ನ ಗಂಡನು ಹೊರದೇಶಕ್ಕೆ ವರ್ಗಾಯಿಸಲ್ಪಟ್ಟಾಗ ಅವನನ್ನು ಜೊತೆಗೂಡಿದ, ಇಂಗ್ಲೆಂಡಿನ ಒಬ್ಬಳು ಸಹೋದರಿ, ಗೆನ್ಲಿಸ್ ವಿವರಿಸುತ್ತಾಳೆ.
ತನ್ನ ಗಂಡನೊಂದಿಗೆ ಕೇನ್ಯಕ್ಕೆ ಪ್ರಯಾಣಿಸಿದ ಜೇನ್, ಕ್ರೈಸ್ತ ಕೂಟಗಳು ಅವಳಿಗೆ ತಿಳಿಯದ ಭಾಷೆಗಳಲ್ಲಿ ನಿರ್ವಹಿಸಲ್ಪಟ್ಟರೂ, ಅವು ಒಂದು ಜೀವರಕ್ಷಕ ದಾರವಾಗಿ ಪರಿಣಮಿಸಿದವೆಂದು ಕಂಡುಕೊಂಡಳು. “ನಾನೆಲ್ಲಿರಬೇಕೆಂದು ಯೆಹೋವನು ಬಯಸುತ್ತಾನೋ ಆ ಸ್ಥಳವು ಇದಾಗಿದೆಯೆಂದು ನನಗೆ ತಿಳಿದಿತ್ತು,” ಎಂದು ಅವಳು ವಿವರಿಸುತ್ತಾಳೆ. “ನಾನು ನನ್ನ ಆತ್ಮಿಕ ಸಹೋದರರೊಂದಿಗಿದ್ದೆ, ಮತ್ತು ಅವರು ಒಂದು ಉತ್ತೇಜಕ ಔಷಧದಂತಿದ್ದರು. ಅವರು ನನ್ನನ್ನು ಸ್ವಾಗತಿಸಿದರು, ಮತ್ತು ನಾವೊಂದು ಕುಟುಂಬವೆಂದು ನಾನು ಭಾವಿಸಿದೆ.”
ಇಂತಹ ಪರಿಸ್ಥಿತಿಗಳಲ್ಲಿರುವ ಅನೇಕರ ಮಧ್ಯೆ, ತನಗೆ ಇದ್ದಾರೆಂದು ಅವಳು ತಿಳಿದಿರದ ಆತ್ಮಿಕ ಸಂಬಂಧಿಕರನ್ನು ಕಂಡುಕೊಂಡವರಲ್ಲಿ ಜೇನ್ ಕೇವಲ ಒಬ್ಬಳಾಗಿದ್ದಾಳೆ!—ಮಾರ್ಕ 10:29, 30.
ವಿರೋಧದ ಎದುರಿನಲ್ಲಿ ನಿಶ್ಚಲರು
“ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು,” ಎಂದು ಯೇಸು ಎಚ್ಚರಿಕೆ ನೀಡಿದನು. (ಮತ್ತಾಯ 10:34) ಆತನು ಏನನ್ನು ಅರ್ಥೈಸಿದ್ದನು? ಶಾಂತಿಯನ್ನು ನಿರೀಕ್ಷಿಸಸಾಧ್ಯವಿರುವ ಒಂದು ಕುಟುಂಬದೊಳಗೆ ಸಹ, “ಒಂದು ಕತ್ತಿಯ ಅನಿರೀಕ್ಷಿತ ಎಸೆತವು” ಸಂಭವಿಸಬಹುದೆಂದು ಎ. ಟಿ. ರಾಬರ್ಟ್ಸನ್ ಹೊಸ ಒಡಂಬಡಿಕೆಯಲ್ಲಿ ಶಬ್ದ ಚಿತ್ರ (ಇಂಗ್ಲಿಷ್) ಪುಸ್ತಕದಲ್ಲಿ ಹೇಳಿಕೆಯನ್ನೀಯುತ್ತಾರೆ. “ಹೀಗೆ, ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು,” ಎಂದು ಯೇಸು ಗಮನಿಸಿದನು. (ಮತ್ತಾಯ 10:36) ಒಬ್ಬ ವಿವಾಹ ಸಂಗಾತಿಯು ಸತ್ಯಕ್ಕೆ ವಿರುದ್ಧವಾಗಿರುವಾಗ ಈ ಮಾತುಗಳು ಎಷ್ಟೊಂದು ಸತ್ಯವಾಗಿ ಪರಿಣಮಿಸುತ್ತವೆ!
ಡಾಯನ್ ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಿಸಲು ಆರಂಭಿಸಿದಾಗ, ವಾಯು ಪಡೆಯ ಅಧಿಕಾರಿಯಾದ ಅವಳ ಗಂಡನು, ತೀರ ಅಸಮಾಧಾನಗೊಂಡನು. ಇದು ಅವರ ವಿವಾಹದ ಮೇಲೆ ಯಾವ ಪರಿಣಾಮವನ್ನು ಬೀರಿತು? “ಹಿಮದ ಒಂದು ದೊಡ್ಡ ತುಂಡು ನಮ್ಮ ಮಧ್ಯೆ ಬರುವಂತಿತ್ತು,” ಎಂದು ಡಾಯನ್ ವಿವರಿಸುತ್ತಾಳೆ. “ನಾವು ಸಂತೋಷಿತ ವಿವಾಹಿತರಾಗಿದ್ದೆವು. ಅನಿರೀಕ್ಷಿತವಾಗಿ ಅದೇ ಕುಟುಂಬದಲ್ಲಿ ನಾವು ಕೇವಲ ಜೀವಿಸುತ್ತಿರುವವರಂತಿದ್ದೆವು.” ಹಾಗಾದರೆ, ಅವಳು ಹೇಗೆ ನಿಭಾಯಿಸಿದಳು? “ಯೆಹೋವನ ಮತ್ತು ಆತನ ಆತ್ಮದ ಸಹಾಯದೊಂದಿಗೆ, ವೈಯಕ್ತಿಕ ಮನವರಿಕೆ ಮತ್ತು ದೃಢತೆಗಳು ನಿಜಮಹತ್ವದ್ದಾಗಿದ್ದವು.” ಪ್ರವಾದಿ ದಾನಿಯೇಲನ ಕುರಿತಾದ ಬೈಬಲಿನ ಉದಾಹರಣೆಯನ್ನು ಡಾಯನ್ ಹೃದಯಕ್ಕೆ ತೆಗೆದುಕೊಂಡಳು.
ಬಾಬೆಲಿಗೆ ಬಂದಿವಾಸಿಯಾಗಿ ಒಯ್ಯಲ್ಪಟ್ಟಾಗ ಮತ್ತು ದೇವರ ಸೇವಕನೊಬ್ಬನಿಗೆ ಅಂಗೀಕಾರಾರ್ಹವಲ್ಲದ ಆಹಾರವು ನೀಡಲ್ಪಟ್ಟಾಗ, ದಾನಿಯೇಲನು “ತಾನು ರಾಜನ ಭೋಜನಪದಾರ್ಥಗಳನ್ನು ತಿಂದು ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು.” ಹೌದು, ದಾನಿಯೇಲನು ಒಂದು ಪ್ರಜ್ಞಾಪೂರ್ವಕವಾದ ನಿರ್ಧಾರವನ್ನು ಮಾಡಿದನು. ಆ ಆಹಾರವನ್ನು ತಿನ್ನುವ ಮೂಲಕ ಸ್ವತಃ ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು ತನ್ನ ಹೃದಯದಲ್ಲಿ ಆತನು ನಿರ್ಧರಿಸಿಕೊಂಡನು. “ಕಂಚುಕಿಯರ ಅಧ್ಯಕ್ಷನಿಗೆ—ನಾನು ಅಶುದ್ಧನಾಗಲಾರೆ, ಕ್ಷಮಿಸು ಎಂದು ಆತನು ವಿಜ್ಞಾಪಿಸುತ್ತಿದ್ದನು”! ಫಲಿತಾಂಶವೇನು? ಅವನ ದೃಢತೆಯ ನಿಲುವನ್ನು ಯೆಹೋವನು ಆಶೀರ್ವದಿಸಿದನು.—ದಾನಿಯೇಲ 1:8, 9, 17, NW.
ತದ್ರೀತಿಯಲ್ಲಿ ಇಂದು ವಿರೋಧಿ ಗಂಡನೊಬ್ಬನು ತನ್ನ ಹೆಂಡತಿಯು ಸಭಾ ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸುವಂತೆ ಒತ್ತಾಯಿಸಬಹುದು. ಅವಳು ಹೇಗೆ ಪ್ರತಿಕ್ರಿಯಿಸಬೇಕು? ಜೇನ್ ಸ್ವತಃ ತನ್ನನ್ನು ಈ ಪರಿಸ್ಥಿತಿಯಲ್ಲಿ ಕಂಡುಕೊಂಡಳು. ಅವಳು ವಿವರಿಸುವುದು: “ಒತ್ತಡದ ಕೆಳಗೆ ನಾನೆಂದೂ ಹಿಂಜರಿಯಲಿಲ್ಲ. ಒಪ್ಪಂದ ಮಾಡಿಕೊಳ್ಳಸಾಧ್ಯವಿಲ್ಲವೆಂದು ನನಗೆ ತಿಳಿದಿತ್ತು. ಕೂಟಗಳು ನನಗೆ ಎಷ್ಟೊಂದು ಅರ್ಥವತ್ತಾಗಿವೆ ಎಂಬುದನ್ನು ನಾನು ತೋರ್ಪಡಿಸಲೇ ಬೇಕಾಗಿತ್ತು.” ಅವಳು ಹಾಜರಾಗುತ್ತಾ ಮುಂದುವರಿದಂತೆ ಯೆಹೋವನು ಅವಳ ನಿರ್ಧಾರವನ್ನು ಆಶೀರ್ವದಿಸಿದನು.
“ನಾನು ಕೂಟಗಳಿಗೆ ಹೋಗುವುದರಿಂದ ನನ್ನನ್ನು ತಡೆಯಲು ನನ್ನ ಗಂಡನು ಪ್ರಯತ್ನಿಸಿದನು, ಆದರೆ ಅದು ಬಹಳ ದೀರ್ಘಕಾಲ ಉಳಿಯಲಿಲ್ಲ,” ಎಂದು ಗೆನ್ಲಿಸ್ ಒಕ್ಕಣಿಸುತ್ತಾಳೆ. “ಅದರೂ ನಾನು ಹೋದೆ. ನಾನು ಮನೆಗೆ ಹಿಂದಿರುಗಿದಾಗ, ಕೆಲವೊಮ್ಮೆ ಅವನು ನನ್ನನ್ನು ಹೊಡೆಯುತ್ತಿದ್ದನು, ಮತ್ತು ಬೇರೆ ಸಮಯಗಳಲ್ಲಿ ನಾನು ಮೌನದಿಂದ ಸ್ವಾಗತಿಸಲ್ಪಡುತ್ತಿದ್ದೆ.” ಆದರೂ, ಪುನಃ ಪುನಃ ಪ್ರಾರ್ಥಿಸುವ ಮೂಲಕ, ಅವಳು ಅದನ್ನು ನಿಭಾಯಿಸಿದಳು. ಹಾಗೂ, ಸಭೆಯ ಹಿರಿಯರಲ್ಲಿ ಇಬ್ಬರು ಕ್ರಮವಾಗಿ ಅವಳೊಂದಿಗೆ ಪ್ರಾರ್ಥಿಸಿದರು, ಇದು ಅವಳು ಹಾಜರಾಗುವಂತೆ ಬಲವಾಗಿ ಉತ್ತೇಜಿಸಿತು.—ಯಾಕೋಬ 5:13-15; 1 ಪೇತ್ರ 2:23.
ತನ್ನ ಹೆಂಡತಿಯನ್ನು ಸುವಾರ್ತೆಯನ್ನು ಸಾರುವುದರಿಂದ ನಿರುತ್ಸಾಹಗೊಳಿಸುವಂತೆ ಒಬ್ಬ ಗಂಡನ ಮೇಲಧಿಕಾರಿಗಳು ಆಗಾಗ ಆತನನ್ನು ಒತ್ತಾಯಿಸಬಹುದು. ತನ್ನ ಆದ್ಯತೆಗಳು ಯಾವುವೆಂದು ತನ್ನ ಗಂಡನಿಗೆ ಸ್ಪಷ್ಟವಾಗಿಗಿ ತಿಳಿಯಪಡಿಸಬೇಕೆಂದು ಡಾಯನ್ ಕಂಡುಕೊಂಡಳು. ಅವಳು ಹೇಳಿದ್ದು: “ನನ್ನ ಸತತವಾದ ಸಾರುವಿಕೆಯ ಪರಿಣಾಮಗಳನ್ನು ಸ್ವೀಕರಿಸಲು ನಾನು ತಯಾರಾಗಿದ್ದೆ.” ಎಂತಹ ಅಪೊಸ್ತಲರ ಸದೃಶ ನಿಲುವು ಇದಾಗಿದೆ! (ಅ. ಕೃತ್ಯಗಳು 4:29, 31) ಆದರೂ, ತನ್ನ ಸಾರುವಿಕೆಯಲ್ಲಿ ಅವಳು ಜಾಗರೂಕಳಾಗಿದಳ್ದು. ಅವಳು ವಿವರಿಸಿದ್ದು: “ಕಾಫಿ ಗೋಷ್ಠಿಗಳನ್ನು ನಾನು ಏರ್ಪಡಿಸುತ್ತಿದ್ದೆ ಮತ್ತು ಪ್ರತಿಯೊಬ್ಬರಿಗೆ ಒಂದು ಸತ್ಯ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಿದ್ದೆ.”—ಮತ್ತಾಯ 10:16; 24:14.
ಒಪ್ಪಂದರಹಿತ ಅಧೀನತೆ
ವಿವಾಹದ ಬಿಕ್ಕಟ್ಟಿನಿಂದ ಸಂಕಟಪಟ್ಟರೂ, ಕ್ರೈಸ್ತ ಹೆಂಡತಿಯರು ಭವಿಷ್ಯತ್ತಿಗಾಗಿ ಎದುರುನೋಡುತ್ತಾರೆ ಮತ್ತು ಯೆಹೋವನ ಮೇಲೆ ಆತುಕೊಳ್ಳುತ್ತಾರೆ. ಸಮತೂಕವಾದ ಒಂದು ನೋಟವನ್ನು ಇಟ್ಟುಕೊಳ್ಳುವಂತೆ ಇದು ಅವರಿಗೆ ಸಹಾಯಮಾಡುತ್ತದೆ. ತಮ್ಮ ನಂಬಿಕೆಯನ್ನು ರಾಜಿ ಮಾಡಿಕೊಳ್ಳದೆ, ಅವರಿಂದ ಸಾಧ್ಯವಿರುವ ಯಾವುದೇ ಬೆಂಬಲವನ್ನು ತಮ್ಮ ಗಂಡಂದಿರಿಗೆ ಅವರು ನೀಡುತ್ತಾರೆ. ಹೀಗೆ ಮಾಡುವ ಮೂಲಕ, ಅವರು ಪೇತ್ರನ ಪ್ರೇರಿತ ಸಲಹೆಯನ್ನು ಅನುಸರಿಸುತ್ತಾರೆ: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.” (1 ಪೇತ್ರ 3:1) ದಿ ಆ್ಯಂಪಿಫ್ಲೈಡ್ ನ್ಯೂ ಟೆಸ್ಟಮೆಂಟ್ ನಲ್ಲಿ, ಈ ಅಪೊಸ್ತಲ ಸಂಬಂಧಿತ ಬೋಧನೆಯು ಓದಲ್ಪಡುವುದು: “ಅವರಿಗೆ ದ್ವಿತೀಯರೂ ಅವರ ಮೇಲೆ ಆಶ್ರಿತರೂ ಆಗಿದ್ದು ನಿಮ್ಮನ್ನು ಅಧೀನ ಪಡಿಸಿಕೊಳ್ಳಿರಿ ಮತ್ತು ನಿಮ್ಮನ್ನು ಅವರಿಗೆ ಹೊಂದಿಸಿಕೊಳ್ಳಿರಿ.” ಜೇನ್ ಈ ಸಲಹೆಯನ್ನು ಹೇಗೆ ಅನುಸರಿಸಿದಳೆಂಬುದನ್ನು ಗಮನಿಸಿ. “ನಾನು ಏನನ್ನು ಮಾಡಲು ಬಯಸುತ್ತೇನೊ ಅದು ಅವನ ಜೀವನದ ಮಾರ್ಗಕ್ಕೆ ಅಡಬ್ಡರಬಾರದೆಂದು ನನ್ನ ಗಂಡನು ನನಗೆ ಹೇಳಿದನು,” ಅವಳು ವಿವರಿಸುತ್ತಾಳೆ. “ಆದುದರಿಂದ ಆತನಿಗೆ ಸಹಾಯಮಾಡಬಹುದಾದ ಮಾರ್ಗಗಳನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ.”
ಹೀಗೆ, ಕೆಲವು ಕ್ರೈಸ್ತ ಸ್ತ್ರೀಯರು, ತಮ್ಮ ಗಂಡಂದಿರು ಆಮಂತ್ರಿಸಲ್ಪಟ್ಟಿರುವ ಸಾಮಾಜಿಕ ಸಮಾರಂಭಗಳಿಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಆದರೂ ತಮ್ಮ ನಂಬಿಕೆಯನ್ನು ಎಂದಿಗೂ ಒಪ್ಪಂದ ಮಾಡಿಕೊಳ್ಳದಂತೆ ಅವರು ದೃಢ ನಿಶ್ಚಯಮಾಡಿದ್ದಾರೆ. ಜೇನ್ ಇದರ ಕುರಿತು ತನ್ನ ಗಂಡನೊಂದಿಗೆ ಮಾತಾಡಲು ಸಮಯವನ್ನು ತೆಗೆದುಕೊಂಡಳು. ತಾನು ಹಾಜರಾಗಲು ಇಷ್ಪಪಡುತ್ತೇನೆ ಆದರೆ ತನ್ನ ಹಾಜರಿಯಿಂದಾಗಿ ಅವನಿಗೆ ಪೇಚಾಟವನ್ನುಂಟುಮಾಡಲು ಬಯಸುವುದಿಲ್ಲ ಎಂದು ಅವಳು ವಿನಯಪೂರ್ವಕವಾಗಿ ವಿವರಿಸಿದಳು. “ಒಮ್ಮೊಮ್ಮೆ ಹಾಜರಿರುವವರೆಲ್ಲರೂ ನಿಂತುಕೊಳ್ಳುವಂತೆ ಮತ್ತು ಸ್ವಸ್ತಿಪಾನವೊಂದರಲ್ಲಿ ಪಾಲು ತೆಗೆದುಕೊಳ್ಳುವಂತೆ ನಿರೀಕ್ಷಿಸಲಾಗುತ್ತದೆ. ನಿಷ್ಠೆಯು ಯೆಹೋವನಿಗೆ ಮಾತ್ರವೇ ಸಲ್ಲತಕ್ಕದ್ದೆಂದು ನಾನು ಕಲಿತಿದ್ದೇನೆ, ಮತ್ತು ಸ್ವಸ್ತಿಪಾನ ಮಾಡುವುದು ಕೇವಲ ಗೌರವ ತೋರಿಸುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. ಪರಿಸ್ಥಿತಿಯು ಎಷ್ಟು ತೊಡಕಾಗಿರಲು ಸಾಧ್ಯವಿದೆಯೆಂದು ನನ್ನ ಗಂಡನು ಮನಗಂಡನು, ಆದುದರಿಂದ ಆತನು, ‘ಬರಬೇಡ!’ ಎಂದಷ್ಟೇ ಹೇಳಿದ. ನಾನು ವಿಧೇಯಳಾದೆ.”
ಇನ್ನೊಂದು ಕಡೆಯಲ್ಲಿ, ಗೆನ್ಲಿಸ್, ಅಂತಹ ಒಂದು ಸಮಾರಂಭಕ್ಕೆ ತನ್ನ ಗಂಡನೊಂದಿಗೆ ಹೋದಳು, ಆದರೆ ಭೋಜನ ಗೋಷ್ಠಿಯ ತಲೆಯಾಳುಗಳಾದ ಅಧಿಕಾರಿಗಳನ್ನು ಅವಳು ಗಮನಿಸಿದಳು. ಅವರು ಸ್ವಸ್ತಿಪಾನಕ್ಕೆ ತಯಾರಿಸುವುದನ್ನು ಅವಳು ಕಂಡಾಗ, ನೇರವಾಗಿ ವಿಶ್ರಾಂತಿ ಕೋಣೆಗೆ ನಡೆದಳು! ಹೌದು, ಈ ಸ್ತ್ರೀಯರು ತಮ್ಮನ್ನು ಹೊಂದಿಸಿಕೊಂಡರೂ ಎಂದಿಗೂ ಒಪ್ಪಂದವನ್ನು ಮಾಡಿಕೊಳ್ಳಲಿಲ್ಲ.
“ವಾಕ್ಯೋಪದೇಶವಿಲ್ಲದೆ ಸನ್ಮಾರ್ಗಕ್ಕೆ”
“ಹೆಂಡತಿಯೋಪಾದಿ ನನ್ನ ಸ್ವಂತ ಸಾಮರ್ಥ್ಯವನ್ನು ನಾನು ಉತ್ತಮಗೊಳಿಸುವುದಾದರೆ, ಸತ್ಯವು ನನ್ನನ್ನು ಬದಲಾಯಿಸುತ್ತಿದೆಯೆಂಬುದನ್ನು ನನ್ನ ಗಂಡನು ಕಾಣುವನು,” ಎಂದು ತರ್ಕಿಸಿದಳು ಈವಾನ್. ಹೀಗೆ ಅವಳು ಕುಟುಂಬ ಜೀವನ ಪುಸ್ತಕದಲ್ಲಿ “ಅತ್ಯಂತ ಪ್ರೀತಿಪಾತ್ರಳಾದ ಪತ್ನಿಯು” ಎಂಬ ಶಿರೋನಾಮದ ಅಧ್ಯಾಯವನ್ನು ಪುನಃ ಪುನಃ ಓದಿದಳು.a “‘ಅಳುವವರು ಮತ್ತು ಪೀಡಿಸುವವರು’ ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯಕ್ಕೆ ನಿರ್ದಿಷ್ಟ ಗಮನವನ್ನು ನಾನು ನೀಡಿದೆ! ಆದರೆ ನನ್ನ ಗಂಡನೊಂದಿಗೆ ಮಾತಾಡಲು ನಾನು ಹೆಚ್ಚು ಹೆಚ್ಚು ಪ್ರಯತ್ನಿಸಿದಂತೆ, ವಿಚಾರಗಳು ತೀರ ಕೆಟ್ಟವುಗಳಾಗಿ ಪರಿಣಮಿಸಿದ್ದನ್ನು ನಾನು ಕಂಡುಕೊಂಡೆ.” ಆದರೂ, ಕೊನೆಯದಾಗಿ, ಅವಳ ಗಂಡನು ಯೆಹೋವನನ್ನು ಸೇವಿಸುವಂತೆ ಸಹಾಯಮಾಡುವುದರಲ್ಲಿ ಅವಳು ಯಶಸ್ವಿಯಾದಳು. ಹೇಗೆ? 1 ಪೇತ್ರ 3:1 ರಲ್ಲಿ ತಿಳಿಸಲ್ಪಟ್ಟಿರುವ, ಗಂಡಂದಿರು “ವಾಕ್ಯೋಪದೇಶವಿಲ್ಲದೆ ಸನ್ಮಾರ್ಗಕ್ಕೆ” ಎಂಬ ನಿಯಮವನ್ನು ಅನ್ವಯಿಸಿದ ಮೂಲಕವೆ.
ಕ್ರೈಸ್ತ ಸ್ತ್ರೀಯರು ತಮ್ಮ ಕುಟುಂಬಗಳ ಜವಾಬ್ದಾರಿ ನೋಡಿಕೊಳ್ಳುವ ರೀತಿಯು, ಇತರರಿಗೆ ಕ್ರೈಸ್ತತ್ವವನ್ನು ಶಿಫಾರಸು ಮಾಡಲು ಅಧಿಕವಾದುದನ್ನು ಮಾಡುತ್ತದೆ. “ಸತ್ಯವನ್ನು ಸಾಧ್ಯವಾದಷ್ಟು ಆಕರ್ಷಣೀಯವಾಗಿ ಮಾಡಲು ನಾನು ಪ್ರಯತ್ನಿಸಿದೆ,” ಎಂದು ವಿವರಿಸುತ್ತಾಳೆ ಡಾಯನ್. “ನಾನು ಕೂಟಗಳಿಗೆ ಹೋದಾಗ, ನನ್ನ ಗಂಡನಿಗೆ ಬೇರ್ಪಟ್ಟ ಭಾವನೆಯುಂಟಾಗುವುದರಿಂದ, ನಾವು ಮನೆಗೆ ಆಗಮಿಸಿದಾಗ ವಿಶೇಷವಾಗಿ ಸಭ್ಯರಾಗಿ ವರ್ತಿಸುವಂತೆ ಮಕ್ಕಳಿಗೆ ಬೋಧಿಸುವುದನ್ನು ಒಂದು ಮುಖ್ಯ ವಿಷಯವಾಗಿ ಪರಿಗಣಿಸಿದೆ. ನಾವು ಹಿಂದಿರುಗಿದಾಗ ಆತನ ಕಡೆಗೆ ವಿಶೇಷ ಗಮನವನ್ನು ಕೊಡಲು ಸಹ ನಾನು ಪ್ರಯತ್ನಿಸಿದೆ.” ಕ್ರಮೇಣ ತನ್ನ ಕುಟುಂಬದ ದಯಾಪರ ಗಮನಕ್ಕೆ ಅವನು ಪ್ರತಿಕ್ರಿಯಿಸಿದಂತೆ, ಅವಳ ಗಂಡನ ಮನೋಭಾವವು ಬದಲಾಯಿತು.
ಯೆಹೋವನ ಜೊತೆ ಸೇವಕರು ಸಹ ಸಹಾಯಮಾಡಬಲ್ಲರು. ಕೇನ್ಯದಲ್ಲಿ ತಾನು ಸಂಧಿಸಿದ ಮಿಷನೆರಿ ಸಾಕ್ಷಿಗಳ ಸಹವಾಸದಲ್ಲಿ ಅವಳ ಗಂಡನು ಆನಂದಿಸಿದನೆಂದು ಜೇನ್ ತಿಳಿಸುತ್ತಾಳೆ. “ಅವರು ಆತನೊಂದಿಗೆ ಗೆಳೆತನ ಮಾಡಿದರು ಮತ್ತು ಅವರು ಕಾಲ್ಚೆಂಡಾಟದ ಕುರಿತು ಮಾತಾಡಿದರು, ಮತ್ತು ಅವರು ತುಂಬಾ ಸತ್ಕರಿಸುವವರಾಗಿದ್ದರು. ಅನೇಕ ಸಂದರ್ಭಗಳಲ್ಲಿ, ಬೇರೆಬೇರೆ ಮಿಷನೆರಿ ಗೃಹಗಳಿಗೆ ಊಟಕ್ಕಾಗಿ ನಾವು ಆಮಂತ್ರಿಸಲ್ಪಡುತ್ತಿದ್ದೆವು.” ಬಳಿಕ ಅವಳ ಗಂಡನು ವಿವರಿಸಿದ್ದು: “ನಾನು ಜೇನ್ಳ ನಂಬಿಕೆಯನ್ನು ತೀರ ಭಿನ್ನವಾದ ದೃಷ್ಟಿಕೋನದಲ್ಲಿ ನೋಡಲಾರಂಭಿಸಿದೆ. ಅವಳ ಸ್ನೇಹಿತರು ವಿವಿಧ ವಿಷಯಗಳ ಮೇಲೆ ಮಾತಾಡಶಕ್ತರಾದ ಬುದ್ಧಿಶಕ್ತಿಯುಳ್ಳ ಜನರಾಗಿದ್ದರು.” ತದ್ರೀತಿಯಲ್ಲಿ, ಡಾಯನ್ಳ ಗಂಡನು ಸತ್ಯದ ಕುರಿತಾದ ತನ್ನ ನೋಟವನ್ನು ಬದಲಾಯಿಸಿದನು. ಅವನು ಡ್ರೈವ್ ಮಾಡುತ್ತಿದ್ದ ಕಾರು ನಿಂತುಹೋದಾಗ, ಯುವ ಸಾಕ್ಷಿಯೊಬ್ಬನು ಅವನ ರಕ್ಷಣೆಗಾಗಿ ಬಂದನು. “ಅದು ನಿಜವಾಗಿಯೂ ನನ್ನನ್ನು ಪ್ರಭಾವಿಸಿತು,” ಎಂದು ಅವನನ್ನುತ್ತಾನೆ.
ಎಲ್ಲ ವಿವಾಹ ಸಂಗಾತಿಗಳು ಸತ್ಯವನ್ನು ಸ್ವೀಕರಿಸುವುದಿಲ್ಲವೆಂಬುದು ನಿಶ್ಚಯ. ಆಗ ಏನು? ನಂಬಿಗಸ್ತರೆಲ್ಲರು ಸಹಿಸುವಂತೆ ಶಕ್ತರನ್ನಾಗಿ ಮಾಡಲು ಯೆಹೋವನು ಸಹಾಯವನ್ನು ಒದಗಿಸುತ್ತಾನೆ. (1 ಕೊರಿಂಥ 10:13) ಗೆನ್ಲಿಸ್ನ ಪರಿಸ್ಥಿತಿಗೆ ಸಮಾನವಾದ ಪರಿಸ್ಥಿತಿಗಳಲ್ಲಿರುವವರಿಗೆ ಅವಳ ಉತ್ತೇಜನವನ್ನು ಪರಿಗಣಿಸಿ: “ವಿವಾಹವನ್ನು ಆರಂಭಿಸಿದಾತನು ಯೆಹೋವನಾಗಿದ್ದಾನೆ ಮತ್ತು ದಂಪತಿಗಳು ಒಟ್ಟಿಗೆ ಜೀವಿಸುವುದನ್ನು ಆತನು ಬಯಸುತ್ತಾನೆಂಬುದನ್ನು ಎಂದೆಂದಿಗೂ ಅನುಮಾನಿಸಬೇಡಿ. ಆದುದರಿಂದ ಗಂಡನು ಏನೇ ಮಾಡಲಿ ಅಥವಾ ನಿಮ್ಮ ಸುತ್ತಲಿರುವವರಿಂದ ನೀವು ಯಾವುದೇ ವಿರೋಧವನ್ನು ಎದುರಿಸಿದರೂ, ನೀವು ತತ್ತರಿಸುವಂತೆ ಯೆಹೋವನು ಎಂದಿಗೂ ಅನುಮತಿಸುವುದಿಲ್ಲ.” ಅವಳ ಗಂಡನು ಇನ್ನೂ ಯೆಹೋವನನ್ನು ಆರಾಧಿಸುತ್ತಿಲ್ಲವಾದರೂ, ಅವಳ ಮತ್ತು ಸತ್ಯದ ಕಡೆಗಿನ ಅವನ ಮನೋಭಾವವು ಮೃದುವಾಗಿದೆ.
‘ಅಳುತ್ತಾ ಬಿತ್ತಿರಿ; ಹರ್ಷದಿಂದ ಕೊಯ್ಯಿರಿ’
ನಿಜವಾಗಿಯೂ, ಈ ಕ್ರೈಸ್ತ ಸ್ತ್ರೀಯರು ಯೆಹೋವನನ್ನು ಸೇವಿಸಲು ನಿರ್ಧರಿಸಿದ್ದಾರೆ. ನೀವು ತದ್ರೀತಿಯ ಪರಿಸ್ಥಿತಿಗಳಲ್ಲಿರುವುದಾದರೆ, ಇದನ್ನು ನಿಮ್ಮ ನಿರ್ಧಾರವನ್ನಾಗಿ ಸಹ ಮಾಡಿಕೊಳ್ಳಿರಿ. “ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು ಆತನ ಹೆಸರಿನ ಮೇಲೆಯೇ ಪ್ರಮಾಣ ಮಾಡಬೇಕು,” ಎಂಬ ಎಚ್ಚರಿಕೆಯನ್ನು ಜ್ಞಾಪಿಸಿಕೊಳ್ಳಿರಿ.—ಧರ್ಮೋಪದೇಶಕಾಂಡ 10:20.
“ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು,” ಎಂದು ಕೀರ್ತನೆಗಾರನು ಪ್ರಕಟಿಸುತ್ತಾನೆ. (ಕೀರ್ತನೆ 126:6) “ನಿಮ್ಮ ವಿವಾಹ ಸಂಗಾತಿಗೆ ಸತ್ಯವನ್ನು ತೋರಿಸಲು ನೀವು ಪ್ರಯತ್ನಿಸುವಾಗ, ಮೌನವಾಗಿ ಅಥವಾ ಮಾತುಗಳ ಮೂಲಕ ಎಷ್ಟೊಂದು ಕಣ್ಣೀರನ್ನು ನೀವು ಸುರಿಸುತ್ತೀರಿ,” ಎಂದು ಸಾಕ್ಷಿಯೊಬ್ಬಳು ಒಪ್ಪಿಕೊಳ್ಳುತ್ತಾಳೆ. “ಆದರೆ ಅಂತ್ಯದಲ್ಲಿ ನೀವು ಹರ್ಷದಿಂದ ಧ್ವನಿಗೈಯುತ್ತೀರಿ ಯಾಕಂದರೆ ಅವನು ಸತ್ಯವನ್ನು ಅಂಗೀಕರಿಸದಿರುವುದಾದರೂ, ನೀವು ಮಾಡುವಂತಹ ಪ್ರಯತ್ನಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸುತ್ತಾನೆ.”
ಮನೆಯಲ್ಲಿ ವಿರೋಧದ ನಡುವೆಯೂ ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸುವವರೆಲ್ಲರು ನಿಜವಾದ ಶ್ಲಾಘನೆಯನ್ನು ಸಂಪಾದಿಸುತ್ತಾರೆ. ಪ್ರೀತಿ ಮತ್ತು ಬೆಂಬಲಕ್ಕೆ ಅವರು ಅರ್ಹರಾಗಿದ್ದಾರೆ. ಯೆಹೋವನನ್ನು ಸೇವಿಸಲು ದೃಢವಾಗಿ ನಿಶ್ಚಯಿಸುವ ಮೂಲಕ, ತಮ್ಮ ಒಪ್ಪಂದರಹಿತ ನಿಲುವನ್ನು ಅವರು ಕಾಪಾಡಿಕೊಳ್ಳುವಂತಾಗಲಿ!
[ಅಧ್ಯಯನ ಪ್ರಶ್ನೆಗಳು]
a ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. (1978) ನಿಂದ ಪ್ರಕಾಶಿಸಲ್ಪಟ್ಟಿತು.
[ಪುಟ 28 ರಲ್ಲಿರುವ ಚಿತ್ರ]
ಕ್ರೈಸ್ತ ದೃಢತೆಯನ್ನು ಪ್ರಾರ್ಥನಾಪೂರ್ವಕವಾದ ಆಭ್ಯಾಸವು ಬಲಗೊಳಿಸುತ್ತದೆ