ನಂಬಿಕೆಯಲ್ಲಿ ದೃಢವಾಗಿ ಇರ್ರಿ
ಪೇತ್ರನ ಮೊದಲನೆಯ ಪತ್ರದಿಂದ ಅತ್ಯುಜ್ವಲ ಭಾಗಗಳು
ಯೆಹೋವನ ಸಾಕ್ಷಿಗಳು ಅವರ ನಂಬಿಕೆಯ ವಿವಿಧ ಪರಿಶೋಧನೆಗಳನ್ನು ಮತ್ತು ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ದೇಶಗಳಲ್ಲಿ, ಕಡು ಹಿಂಸೆಯ ಎದುರಿನಲ್ಲಿಯೂ ರಾಜ್ಯ-ಸಾರುವಿಕೆಯ ಕೆಲಸವು ಮಾಡಲ್ಪಡುತ್ತಿದೆ. ಇವುಗಳ ಮತ್ತು ದೇವರೊಂದಿಗಿನ ಅವರ ಸಂಬಂಧವನ್ನು ನಾಶಗೊಳಿಸಲು ಮಾಡುವ ಇತರ ಪ್ರಯತ್ನಗಳ ಹಿಂದೆ ಇರುವವನು ಪಿಶಾಚನಾದ ಸೈತಾನನು. ಆದರೆ ಅವನು ಯಶಸ್ವಿಯಾಗುವುದಿಲ್ಲ, ಯಾಕಂದರೆ ಯೆಹೋವನು ತನ್ನ ಸೇವಕರನ್ನು ಸ್ಥಿರಗೊಳಿಸುತ್ತಾನೆ—ಹೌದು, ನಂಬಿಕೆಯಲ್ಲಿ ದೃಢಗೊಳಿಸುತ್ತಾನೆ.
“ನಾನಾ ಕಷ್ಟಗಳಲ್ಲಿದ್ದು ದುಃಖಿಸು”ತ್ತಿರುವ ‘ತನ್ನ ಸಹೋದರರನ್ನು ಬಲಗೊಳಿಸುವಂತೆ ಅಪೊಸ್ತಲ ಪೇತ್ರನಿಗೆ ಸುಯೋಗವು ದೊರಕಿತ್ತು. (ಲೂಕ 22:32; 1 ಪೇತ್ರ 1:6, 7) ಬೆಬಿಲೋನಿನಿಂದ ಸುಮಾರು ಸಾ.ಶ. 62-64 ರಲ್ಲಿ ಬರೆದ ತನ್ನ ಮೊದಲ ಪತ್ರದ ಮುಖೇನ ಅವನದನ್ನು ಮಾಡಿದನು. ಅದರಲ್ಲಿ ಪೇತ್ರನು ಯೆಹೂದ್ಯ ಮತ್ತು ಅನ್ಯಜನಾಂಗದ ಕ್ರೈಸ್ತರಿಗೆ ಬುದ್ಧಿವಾದವನ್ನಿತ್ತನು, ಸಂತೈಸಿದನು, ಮತ್ತು ಪ್ರೋತ್ಸಾಹಿಸಿದನು ಮತ್ತು ಸೈತಾನನ ಆಕ್ರಮಣಗಳನ್ನು ಎದುರಿಸುವಂತೆ ಮತ್ತು “ನಂಬಿಕೆಯಲ್ಲಿ ದೃಢವಾಗಿ” ಇರುವಂತೆ ಅವರಿಗೆ ಸಹಾಯವನ್ನಿತ್ತನು. (1 ಪೇತ್ರ 1:1, 2; 5:8, 9) ಈಗ ಸೈತಾನನಿಗಿರುವ ಸಮಯವು ಕೊಂಚವಾಗಿರುವುದರಿಂದ ಮತ್ತು ಅವನ ಆಕ್ರಮಣಗಳು ಬಹಳ ಕ್ರೂರತೆಯದ್ದಾಗಿರುವುದರಿಂದ, ಖಂಡಿತವಾಗಿಯೂ ಪೇತ್ರನ ಪ್ರೇರಿತ ಮಾತುಗಳಿಂದ ಯೆಹೋವನ ಜನರು ಪ್ರಯೋಜನ ಪಡೆಯ ಸಾಧ್ಯವಿದೆ.
ದೈವಿಕ ತತ್ವಗಳ ಮೇಲೆ ಆಧರಿತ ನಡತೆ
ನಮ್ಮ ನಿರೀಕ್ಷೆಯು ಪರಲೋಕದ್ದಾಗಿರಲಿ, ಇಹಲೋಕದ್ದಾಗಿರಲಿ, ನಾವು ಪರಿಶೋಧನೆಗಳನ್ನು ಸಹಿಸುವಂತೆ ಮತ್ತು ದೈವಿಕ ರೀತಿಯಲ್ಲಿ ವರ್ತಿಸುವಂತೆ ನಮಗೆ ಅದು ಸಹಾಯ ನೀಡತಕ್ಕದ್ದು. (1:1-2:12) ಪರಲೋಕದ ಬಾಧ್ಯತೆಯ ನಿರೀಕ್ಷೆಯು ಅಭಿಷಿಕ್ತರನ್ನು ಪರಿಶೋಧನೆಗಳ ಎದುರಲ್ಲಿ ಸಂತೋಷಿಸುವಂತೆ ಕಾರಣವಾಗುತ್ತದೆ, ಅದು ವಾಸ್ತವದಲ್ಲಿ ಅವರ ನಂಬಿಕೆಯನ್ನು ಪುಟಾಹಾಕಿ ಶೋಧಿಸುತ್ತದೆ. ಕ್ರಿಸ್ತನ ಅಸ್ತಿವಾರದ ಮೇಲೆ ಕಟ್ಟಲ್ಪಟ್ಟ ಆತ್ಮಿಕ ಮನೆಯೋಪಾದಿ, ಅವರು ದೇವರಿಗೆ ಸ್ವೀಕಾರಾರ್ಹವಾದ ಯಜ್ಞಗಳನ್ನು ಅರ್ಪಿಸುತ್ತಾರೆ ಮತ್ತು ಅವರ ಸ್ವತಃ ಉತ್ತಮ ರೀತಿಯ ನಡತೆಯ ಮೂಲಕ ಅವನಿಗೆ ಮಹಿಮೆಯನ್ನು ತರುತ್ತಾರೆ.
ಎಲ್ಲಾ ಸಹ ಮಾನವರೊಂದಿಗೆ ನಮ್ಮ ವ್ಯವಹಾರವು ದೈವಿಕ ತತ್ವಗಳಿಂದ ಆಳಲ್ಪಡಬೇಕು. (2:13-3:12) ಮಾನವ ಅಧಿಪತಿಗಳಿಗೆ ನಾವು ಅಧೀನರಾಗಿರತಕ್ಕದ್ದು ಎಂದು ಪೇತ್ರನು ತೋರಿಸಿದನು. ಯಜಮಾನರಿಗೆ ಅವರ ಮನೇ ದಾಸರು ಮತ್ತು ಗಂಡಂದಿರಿಗೆ ಹೆಂಡತಿಯರು ಅಧೀನರಾಗಿರತಕ್ಕದ್ದು. ಒಬ್ಬ ಕ್ರೈಸ್ತ ಹೆಂಡತಿಯ ದೈವಿಕ ನಡತೆಯು ಅವಿಶ್ವಾಸಿ ಗಂಡನನ್ನು ನಿಜವಿಶ್ವಾಸದ ಕಡೆಗೆ ಸೆಳೆಯಬಹುದು. ಮತ್ತು ಒಬ್ಬ ವಿಶ್ವಾಸಿ ಗಂಡನು ‘ತನ್ನ ಹೆಂಡತಿಯನ್ನು ನಿರ್ಬಲ ಪಾತ್ರೆಯೆಂದು ಪರಿಗಣಿಸಿ ಆಕೆಗೆ ಮಾನವನ್ನು ಸಲ್ಲಿಸ” ತಕ್ಕದ್ದು. ಎಲ್ಲಾ ಕ್ರೈಸ್ತರೂ ಸ್ವಾನುಕಂಪ ತೋರಿಸಬೇಕು, ಸಹೋದರ ವಾತ್ಸಲ್ಯ ಇರಬೇಕು, ಒಳ್ಳೆಯದನ್ನು ಮಾಡುತ್ತಾ, ಸಮಾಧಾನವನ್ನು ಬೆನ್ನಟ್ಟಬೇಕು.
ಸೈರಣೆಯು ಆಶೀರ್ವಾದಗಳನ್ನು ತರುತ್ತದೆ
ನಿಜ ಕ್ರೈಸ್ತರ ನಂಬಿಗಸ್ತಿಕೆಯ ಬಾಧೆಗಳ ಸೈರಣೆಯು ಆಶೀರ್ವಾದಗಳಾಗಿ ಫಲಿತಾಂಶ ತರುತ್ತದೆ. (3:13-4:19) ನೀತಿಯ ನಿಮಿತ್ತ ನಾವು ಬಾಧೆ ಪಡುವುದಾದರೆ ನಾವು ಧನ್ಯರೇ ಸರಿ. ಅದಲ್ಲದೇ, ದೇವರ ಬಳಿಗೆ ನಮ್ಮನ್ನು ಸೇರಿಸುವದಕ್ಕಾಗಿ, ಕ್ರಿಸ್ತನು ಶರೀರದಲ್ಲಿ ಬಾಧೆ ಪಟ್ಟದರ್ದಿಂದ, ಇನ್ನೂ ನಾವು ಶರೀರದ ಅಭಿಲಾಷೆಗಳ ಪ್ರಕಾರ ಜೀವಿಸಕೂಡದು. ನಾವು ಪರಿಶೋಧನೆಗಳನ್ನು ನಂಬಿಗಸ್ತತೆಯಿಂದ ತಾಳಿಕೊಳ್ಳುವುದಾದರೆ, ಯೇಸುವಿನ ಪ್ರಕಟನೆಯಲ್ಲಿನ ಮಹಾ ಆನಂದದಲ್ಲಿ ನಾವು ಪಾಲಿಗರಾಗುವೆವು. ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾಗಿ ಸಹಿಸಿಕೊಳ್ಳುವುದಾದರೆ, ಅದು ನಮ್ಮನ್ನು ಆನಂದಿತರನ್ನಾಗಿ ಮಾಡತಕ್ಕದ್ದು, ಯಾಕಂದರೆ ಅದು ನಮ್ಮಲ್ಲಿ ಯೆಹೋವನ ಆತ್ಮನು ನೆಲೆಗೊಂಡಿದ್ದಾನೆಂದು ರುಜುಪಡಿಸುತ್ತದೆ. ಆದುದರಿಂದ, ದೇವರ ಚಿತ್ತಾನುಸಾರ ನಾವು ಬಾಧೆ ಪಡುವುದಾದರೆ, ನಾವು ನಮ್ಮನ್ನೇ ಅವನಿಗೆ ಶಿಫಾರಸು ಮಾಡಿಕೊಡೋಣ ಮತ್ತು ಒಳ್ಳೆಯದನ್ನು ಮಾಡುವುದನ್ನು ಮುಂದುವರಿಸೋಣ.
ಕ್ರೈಸ್ತರೋಪಾದಿ, ನಾವು ನಮ್ಮ ಕರ್ತವ್ಯಗಳನ್ನು ನಂಬಿಗಸ್ತಿಕೆಯಿಂದ ಪೂರೈಸತಕ್ಕದ್ದು ಮತ್ತು ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳತಕ್ಕದ್ದು. (5:1-14) ಇಷ್ಟಪೂರ್ವಕವಾಗಿ ಹಿರಿಯರು ದೇವರ ಮಂದೆಯ ಕುರಿಪಾಲನಾ ಕೆಲಸ ಮಾಡಬೇಕು ಮತ್ತು ಅವನು ನಿಜವಾಗಿ ನಮ್ಮ ಲಕ್ಷ್ಯ ವಹಿಸುತ್ತಾನೆ ಎಂದು ಗ್ರಹಿಸಿಕೊಂಡು, ಯೆಹೋವನ ಮೇಲೆ ನಾವೆಲ್ಲರೂ ನಮ್ಮ ಚಿಂತೆಯನ್ನು ಎಸೆಯತಕ್ಕದ್ದು. ಪಿಶಾಚನ ವಿರುದ್ಧವಾಗಿ ನಮ್ಮ ನಿಲುವನ್ನು ನಾವು ತೆಗೆದುಕೊಳ್ಳಬೇಕಾಗಿದೆ ಮತ್ತು ಎಂದಿಗೂ ಎದೆಗುಂದಿದವರಾಗಬಾರದು, ನಾವು ಬಾಧೆಪಡುವಂತೆ ನಮ್ಮ ಸಹೋದರರೂ ತದ್ರೀತಿಯ ಬಾಧೆ ಅನುಭವಿಸುತ್ತಾರೆ. ಯೆಹೋವ ದೇವರು ನಮ್ಮನ್ನು ಸ್ಥಿರಗೊಳಿಸುತ್ತಾನೆ ಮತ್ತು ನಂಬಿಕೆಯಲ್ಲಿ ದೃಢವಾಗಿರಲು ಸಾಧ್ಯಮಾಡುತ್ತಾನೆ ಎಂದು ಯಾವಾಗಲು ನೆನಪಿನಲ್ಲಿಡಿರಿ. (w91 3/15)
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಸ್ತ್ರೀ ಸಹಜ ಅಲಂಕಾರ: ಕ್ರೈಸ್ತ ಸ್ತ್ರೀಯರಿಗೆ ಕೊಟ್ಟ ಬುದ್ಧಿವಾದದಲ್ಲಿ ಪೇತ್ರನು ಅಂದದ್ದು: “ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ಹೊರಗಣ ವಸ್ತ್ರ ಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತ ಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.” (1 ಪೇತ್ರ 3:3, 4) ಸಾ.ಶ. ಒಂದನೆಯ ಶತಮಾನದಲ್ಲಿ ವಿಧರ್ಮಿ ಸ್ತ್ರೀಯರಲ್ಲಿ ಒಮ್ಮೊಮ್ಮೆ ಅಲಂಕಾರಿಕ ತಲೇಗೂದಲುಗಳನ್ನು ಅಂದಗೊಳಿಸುವವರು ಇದ್ದರು, ಅವರ ಉದ್ದ ಕೂದಲುಗಳನ್ನು ಆಕರ್ಷಣೋದ್ದೇಶದ ವಿನ್ಯಾಸಗಳಿಂದ ಜಡೆಹೆಣೆದುಕೊಳ್ಳುತ್ತಿದ್ದರು ಮತ್ತು ಚಿನ್ನದ ಆಭರಣಗಳನ್ನು ಈ ಜಡೆಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಪ್ರಾಯಶಃ, ಹೆಚ್ಚಿನವರು ಒಂದು ಡಾಂಭಿಕ ಪ್ರದರ್ಶನಕ್ಕಾಗಿ ಹೀಗೆ ಮಾಡಿಕೊಳ್ಳುತ್ತಿದ್ದರು—ಇದು ಕ್ರೈಸ್ತರಿಗೆ ತಕ್ಕದ್ದು ಆಗಿರುವದಿಲ್ಲ. (1 ತಿಮೊಥಿ 2:9, 10) ಆದರೂ, ಎಲ್ಲಾ ಅಲಂಕಾರಗಳು ತಪ್ಪಲ್ಲ, ಯಾಕಂದರೆ ಪೇತ್ರನು “ಹೊರಗಣ ವಸ್ತ್ರ ಗಳನ್ನು ಧರಿಸಿಕೊಳ್ಳುವದನ್ನು” ಕೂಡಿಸಿದ್ದು,—ಸ್ಪಷ್ಟವಾಗಿ ಅದೊಂದು ಆವಶ್ಯಕತೆಯಾಗಿರುತ್ತದೆ. ಪುರಾತನ ಸಮಯಗಳಲ್ಲಿ ದೇವರ ಸೇವಕರುಗಳಿಂದ ಆಭರಣಗಳ ಬಳಕೆ ಮಾಡಲ್ಪಟ್ಟಿತ್ತು. (ಆದಿಕಾಂಡ 24:53; ವಿಮೋಚನಕಾಂಡ 3:22; 2 ಸಮುವೇಲ 1:24; ಯೆರೆಮೀಯ 2:32; ಲೂಕ 15:22) ಆದಾಗ್ಯೂ, ಕ್ರೈಸ್ತ ಸ್ತ್ರೀಯೊಬ್ಬಳು ಥಳುಕಿನ ಆಭರಣಗಳಿಂದ ಮತ್ತು ವಿಷಯಲಂಪಟತ್ವದ ಉಡುಪುಗಳಿಂದ ದೂರವಿರುತ್ತಾಳೆ ಮತ್ತು ಯಾವುದೇ ಕಾಂತಿವರ್ಧಕಗಳ ಬಳಕೆಯು ಸದಭಿರುಚಿಯದ್ದಾಗಿರುವಂತೆ ಜಾಗ್ರತೆ ವಹಿಸುತ್ತಾಳೆ. ಅಪೊಸ್ತಲಿಕ ಬುದ್ಧಿವಾದದ ವಿಷಯವೇನಂದರೆ ಅವಳು ಹೊರಗಣದ್ದಲ್ಲ, ಬದಲು ಆಂತರಿಕ ಅಲಂಕಾರದ ಮೇಲೆ ಒತ್ತರ ಹಾಕಬೇಕು. ನಿಜವಾಗಿಯೂ ಆಕರ್ಷಕಳಾಗಿರಬೇಕಾದರೆ, ಮಿತಸಭ್ಯತೆಯಿಂದ ಅವಳು ಉಡುಪು ಧರಿಸಬೇಕು ಮತ್ತು ದೇವರಿಗೆ ಭಯಪಡುವವಳಿಗೆ ತಕ್ಕಂಥಾ ಪ್ರವೃತಿಯುಳ್ಳವಳಾಗಿರಬೇಕು.—ಜ್ಞಾನೋಕ್ತಿ 31:30; ಮೀಕ 6:8.
[ಕೃಪೆ]
Israel Department of Antiquities and Museums; Israel Museum/David Harris