ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
    ಎಚ್ಚರಿಕೆಯಿಂದಿರಿ!
    • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”

      “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; . . . ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ.”​—1 ಪೇತ್ರ 4:7, 8, NW.

      ತನ್ನ ಅಪೊಸ್ತಲರೊಂದಿಗೆ ಕಳೆಯಲಿಕ್ಕಿರುವ ಕೊನೆಯ ಕೆಲವು ತಾಸುಗಳು ತುಂಬ ಅಮೂಲ್ಯವಾಗಿವೆ ಎಂಬುದು ಯೇಸುವಿಗೆ ಗೊತ್ತಿತ್ತು. ಅವರಿಗೆ ಮುಂದೆ ಏನು ಕಾದಿದೆ ಎಂಬುದು ಅವನಿಗೆ ತಿಳಿದಿತ್ತು. ಅವರಿಗೆ ಒಂದು ಮಹಾನ್‌ ಕೆಲಸವನ್ನು ಪೂರೈಸಲಿಕ್ಕಿತ್ತಾದರೂ, ಯೇಸುವಿನಂತೆಯೇ ಅವರು ಸಹ ದ್ವೇಷ ಮತ್ತು ಹಿಂಸೆಗೆ ಒಳಗಾಗಲಿದ್ದರು. (ಯೋಹಾನ 15:​18-20) ಆ ಅಂತಿಮ ರಾತ್ರಿಯಂದು ಅವನು ಒಂದಕ್ಕಿಂತಲೂ ಹೆಚ್ಚು ಬಾರಿ ಅವರಿಗೆ ‘ಒಬ್ಬರನ್ನೊಬ್ಬರು ಪ್ರೀತಿಸುವ’ ಆವಶ್ಯಕತೆಯ ಕುರಿತು ನೆನಪು ಹುಟ್ಟಿಸಿದನು.​—ಯೋಹಾನ 13:34, 35; 15:12, 13, 17.

      2 ಆ ರಾತ್ರಿ ಅಲ್ಲಿ ಹಾಜರಿದ್ದ ಅಪೊಸ್ತಲ ಪೇತ್ರನು ಯೇಸುವಿನ ಮಾತುಗಳ ಪ್ರಮುಖತೆಯನ್ನು ಮನಗಂಡನು. ವರ್ಷಗಳಾನಂತರ, ಯೆರೂಸಲೇಮಿನ ನಾಶನಕ್ಕೆ ಸ್ವಲ್ಪ ಮುಂಚೆ ತನ್ನ ಬರವಣಿಗೆಯಲ್ಲಿ ಪೇತ್ರನು ಪ್ರೀತಿಯ ಪ್ರಮುಖತೆಯನ್ನು ಒತ್ತಿಹೇಳಿದನು. ಅವನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; . . . ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ.” (1 ಪೇತ್ರ 4:7, 8, NW) ಸದ್ಯದ ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವವರಿಗೆ ಪೇತ್ರನ ಮಾತುಗಳು ತುಂಬ ಅರ್ಥಭರಿತವಾದವುಗಳಾಗಿವೆ. (2 ತಿಮೊಥೆಯ 3:1) “ತೀವ್ರವಾದ ಪ್ರೀತಿ” ಎಂದರೇನು? ಇತರರ ಕಡೆಗೆ ನಮಗೆ ಇಂಥ ಪ್ರೀತಿಯಿರುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? ಮತ್ತು ನಮಗೆ ಇಂಥ ಪ್ರೀತಿಯಿದೆ ಎಂಬುದನ್ನು ನಾವು ಹೇಗೆ ರುಜುಪಡಿಸಬಲ್ಲೆವು?

      “ತೀವ್ರವಾದ ಪ್ರೀತಿ” ಎಂದರೇನು?

      3 ಪ್ರೀತಿಯು ತಾನಾಗಿಯೇ ಉದ್ಭವಿಸಬೇಕಾದ ಒಂದು ಭಾವನೆಯಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೆ ಪೇತ್ರನು ಯಾವುದೋ ಒಂದು ವಿಧದ ಪ್ರೀತಿಯ ಕುರಿತು ಮಾತಾಡಲಿಲ್ಲ; ಅತ್ಯಂತ ಶ್ರೇಷ್ಠ ರೀತಿಯ ಪ್ರೀತಿಯ ಕುರಿತು ಮಾತಾಡಿದನು. ಒಂದನೆಯ ಪೇತ್ರ 4:8ರಲ್ಲಿರುವ “ಪ್ರೀತಿ” ಎಂಬ ಪದವು, ಆಘಾಪೀ ಎಂಬ ಗ್ರೀಕ್‌ ಶಬ್ದದ ಭಾಷಾಂತರವಾಗಿದೆ. ಈ ಪದವು, ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವ ಅಥವಾ ನಿಯಂತ್ರಿಸಲ್ಪಡುವ ನಿಸ್ವಾರ್ಥ ಪ್ರೀತಿಯನ್ನು ಸೂಚಿಸುತ್ತದೆ. ಪರಾಮರ್ಶೆಯ ಕೃತಿಯೊಂದಕ್ಕನುಸಾರ, ಈ ರೀತಿಯ ಪ್ರೀತಿಯನ್ನು ನಿಯಂತ್ರಿಸಸಾಧ್ಯವಿದೆ, ಏಕೆಂದರೆ ಪ್ರಧಾನವಾಗಿ ಇದೊಂದು ಭಾವಾವೇಶವಾಗಿರದೆ, ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ನಡೆಸುವ ಭಾವನಿರ್ಣಯವಾಗಿದೆ. ಸ್ವಾರ್ಥಭಾವವನ್ನೇ ತೋರಿಸುವ ಪ್ರವೃತ್ತಿಯನ್ನು ನಾವು ಬಾಧ್ಯತೆಯಾಗಿ ಪಡೆದಿರುವುದರಿಂದ, ಪರಸ್ಪರ ಪ್ರೀತಿಯನ್ನು ತೋರಿಸಲು ಅಂದರೆ ದೈವಿಕ ಮೂಲತತ್ತ್ವಗಳು ಮಾರ್ಗದರ್ಶಿಸುವಂಥ ವಿಧಗಳಲ್ಲಿ ಅದನ್ನು ತೋರಿಸಲು ನಮಗೆ ಮರುಜ್ಞಾಪನಗಳ ಅಗತ್ಯವಿದೆ.​—ಆದಿಕಾಂಡ 8:21; ರೋಮಾಪುರ 5:12.

      4 ಆದರೆ ಕೇವಲ ಕರ್ತವ್ಯಪ್ರಜ್ಞೆಯಿಂದ ನಾವು ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕು ಎಂಬುದು ಇದರ ಅರ್ಥವಲ್ಲ. ಆಘಾಪೀ ಪ್ರೀತಿಯು ಆದರಣೆಯಿಲ್ಲದ್ದೂ ಅಥವಾ ಭಾವರಹಿತವಾದದ್ದೇನೂ ಅಲ್ಲ. ನಮ್ಮನಮ್ಮೊಳಗೆ ನಾವು ‘ತೀವ್ರವಾದ [ಅಕ್ಷರಾರ್ಥವಾಗಿ, “ಎಲ್ಲೆಯನ್ನು ಮೀರಿದ”] ಪ್ರೀತಿಯನ್ನು’ ಹೊಂದಿರಬೇಕು ಎಂದು ಪೇತ್ರನು ಹೇಳಿದನು.a (ಕಿಂಗ್‌ಡಮ್‌ ಇಂಟರ್‌ಲಿನಿಯರ್‌) ಆದರೂ, ಇಂಥ ಪ್ರೀತಿಯು ಪ್ರಯತ್ನವನ್ನು ಅಗತ್ಯಪಡಿಸುತ್ತದೆ. “ತೀವ್ರ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್‌ ಪದದ ಕುರಿತು ಒಬ್ಬ ವಿದ್ವಾಂಸನು ಹೇಳುವುದು: “ಇದು, ಓಟದ ಕೊನೆಯನ್ನು ತಲಪುವಾಗ ಒಬ್ಬ ಕ್ರೀಡಾಪಟುವು ತನ್ನಲ್ಲಿ ಉಳಿದಿರುವ ಅಲ್ಪಸ್ವಲ್ಪ ಬಲವನ್ನು ಉಪಯೋಗಿಸಿ ಅತ್ಯಂತ ಪ್ರಬಲವಾದ ರೀತಿಯಲ್ಲಿ ತನ್ನ ಮಾಂಸಖಂಡಗಳನ್ನು ಮುಂಚಾಚುವಂಥ ಚಿತ್ರಣವನ್ನು ನೀಡುತ್ತದೆ.”

      5 ಹಾಗಾದರೆ, ನಮ್ಮ ಪ್ರೀತಿಯು ಯಾವುದು ಅನುಕೂಲಕರವಾಗಿದೆಯೋ ಅದನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿರಬಾರದು ಅಥವಾ ಆಯ್ದ ಕೆಲವರಿಗೆ ಮಾತ್ರ ತೋರಿಸಲ್ಪಡುವಂಥದ್ದಾಗಿರಬಾರದು. ಪ್ರೀತಿಯನ್ನು ತೋರಿಸುವುದು ತುಂಬ ಕಷ್ಟಕರವಾಗಿರಬಹುದಾದ ಸಂದರ್ಭಗಳಲ್ಲಿಯೂ ಅದನ್ನು ತೋರಿಸುವಂತೆ ಕ್ರೈಸ್ತ ಪ್ರೀತಿಯು ಅಗತ್ಯಪಡಿಸುತ್ತದೆ. (2 ಕೊರಿಂಥ 6:​11-13) ಒಬ್ಬ ಕ್ರೀಡಾಪಟುವು ತನ್ನ ಕೌಶಲಗಳನ್ನು ಉತ್ತಮಗೊಳಿಸಲಿಕ್ಕಾಗಿ ತರಬೇತಿಯನ್ನು ಪಡೆದುಕೊಂಡು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವಂತೆಯೇ, ನಾವು ಈ ರೀತಿಯ ಪ್ರೀತಿಯನ್ನು ಬೆಳೆಸಿಕೊಳ್ಳುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬುದಂತೂ ಸುಸ್ಪಷ್ಟ. ನಮ್ಮನಮ್ಮೊಳಗೆ ಇಂಥ ಪ್ರೀತಿಯಿರುವುದು ಅತ್ಯಾವಶ್ಯಕ. ಏಕೆ? ಕಡಿಮೆಪಕ್ಷ ಮೂರು ಕಾರಣಗಳಿಗಾಗಿ.

  • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
    ಎಚ್ಚರಿಕೆಯಿಂದಿರಿ!
    • 7 ಎರಡನೆಯದಾಗಿ, “ಎಲ್ಲವುಗಳ ಅಂತ್ಯವು ಹತ್ತಿರವಾಗಿ”ರುವುದರಿಂದ, ಅಗತ್ಯದಲ್ಲಿರುವ ನಮ್ಮ ಸಹೋದರರಿಗೆ ಸಹಾಯವನ್ನು ನೀಡಲಿಕ್ಕೋಸ್ಕರ ನಾವು ಈಗ ಪರಸ್ಪರ ಇನ್ನಷ್ಟು ಹೆಚ್ಚು ಪ್ರೀತಿಸುವುದು ವಿಶೇಷವಾಗಿ ಅತ್ಯಾವಶ್ಯಕವಾಗಿದೆ. (1 ಪೇತ್ರ 4:7) ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಲೋಕದ ಪರಿಸ್ಥಿತಿಗಳು, ನೈಸರ್ಗಿಕ ವಿಪತ್ತುಗಳು, ಮತ್ತು ವಿರೋಧವು ನಮ್ಮ ಮೇಲೆ ಸಂಕಷ್ಟಗಳನ್ನು ತರುತ್ತದೆ. ಪರೀಕ್ಷೆಗೊಳಪಡಿಸುವಂಥ ಸನ್ನಿವೇಶಗಳ ಕೆಳಗೆ ನಾವು ಒಬ್ಬರು ಇನ್ನೊಬ್ಬರಿಗೆ ಇನ್ನಷ್ಟು ಸಮೀಪವಾಗುವ ಅಗತ್ಯವಿದೆ. ತೀವ್ರವಾದ ಪ್ರೀತಿಯು ನಮ್ಮನ್ನು ಐಕ್ಯಗೊಳಿಸುವುದು ಮತ್ತು ‘ಒಬ್ಬರು ಇನ್ನೊಬ್ಬರ ಹಿತವನ್ನು ಚಿಂತಿಸುವಂತೆ’ ನಮ್ಮನ್ನು ಪ್ರಚೋದಿಸುವುದು.​—1 ಕೊರಿಂಥ 12:​24-26.

      8 ಮೂರನೆಯದಾಗಿ, ನಮ್ಮನ್ನು ಶೋಷಣೆಗೊಳಪಡಿಸುವಂತೆ ನಾವು ‘ಸೈತಾನನಿಗೆ ಅವಕಾಶಕೊಡಲು’ ಬಯಸದಿರುವುದರಿಂದಲೂ ನಾವು ಪರಸ್ಪರ ಪ್ರೀತಿಸುವ ಅಗತ್ಯವಿದೆ. (ಎಫೆಸ 4:27) ನಮ್ಮನ್ನು ಎಡವಿಬೀಳಿಸಲಿಕ್ಕಾಗಿ ಸೈತಾನನು, ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳನ್ನು ಅಂದರೆ ಅವರ ಕುಂದುಕೊರತೆಗಳು, ಲೋಪದೋಷಗಳು, ಮತ್ತು ತಪ್ಪುಗಳನ್ನು ಉಪಯೋಗಿಸಲು ಸದಾ ಜಾಗೃತನಾಗಿರುತ್ತಾನೆ. ಜೊತೆ ವಿಶ್ವಾಸಿಗಳ ಒಂದು ಅವಿಚಾರಭರಿತ ಹೇಳಿಕೆ ಅಥವಾ ನಿರ್ದಯ ಕೃತ್ಯವು ನಮ್ಮನ್ನು ಸಭೆಗೆ ಹೋಗದಿರುವಂತೆ ಮಾಡುತ್ತದೋ? (ಜ್ಞಾನೋಕ್ತಿ 12:18) ಒಂದುವೇಳೆ ನಮ್ಮಲ್ಲಿ ಪರಸ್ಪರರಿಗಾಗಿ ತೀವ್ರವಾದ ಪ್ರೀತಿಯಿರುವಲ್ಲಿ ನಾವು ಖಂಡಿತವಾಗಿಯೂ ಹೀಗೆ ಮಾಡುವುದಿಲ್ಲ! ಇಂಥ ಪ್ರೀತಿಯು ನಾವು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ‘ಒಂದೇ ಮನಸ್ಸಿನಿಂದ’ ಐಕ್ಯವಾಗಿ ದೇವರ ಸೇವೆಮಾಡಲು ಸಹಾಯಮಾಡುತ್ತದೆ.​—ಚೆಫನ್ಯ 3:9.

  • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
    ಎಚ್ಚರಿಕೆಯಿಂದಿರಿ!
    • 13 ಪ್ರೀತಿಯು ಇತರರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸದಿರುವಂತೆ ನಮ್ಮನ್ನು ಪ್ರಚೋದಿಸುತ್ತದೆ. “ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ” ಎಂದು ಪೇತ್ರನು ತನ್ನ ವಾಚಕರಿಗೆ ಬುದ್ಧಿಹೇಳುತ್ತಿರುವಾಗ, ಇದು ಏಕೆ ಪ್ರಾಮುಖ್ಯವಾಗಿದೆ ಎಂಬ ಕಾರಣವನ್ನೂ ಅವನು ಕೊಟ್ಟನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಅದೇನೆಂದರೆ, “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ಪಾಪಗಳನ್ನು ‘ಮುಚ್ಚುವುದು,’ ಗಂಭೀರವಾದ ಪಾಪಗಳನ್ನು ‘ಮುಚ್ಚಿಹಾಕುವುದನ್ನು’ ಅರ್ಥೈಸುವುದಿಲ್ಲ. ಗಂಭೀರವಾದ ಪಾಪಗಳಂಥ ವಿಚಾರವನ್ನು ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ತಿಳಿಸಬೇಕು ಮತ್ತು ಅವರು ಈ ವಿಚಾರವನ್ನು ನಿರ್ವಹಿಸಬೇಕು. (ಯಾಜಕಕಾಂಡ 5:1; ಜ್ಞಾನೋಕ್ತಿ 29:24) ಗಂಭೀರವಾದ ಪಾಪಗಳನ್ನು ಮಾಡುವವರು ಮುಗ್ಧ ಜನರನ್ನು ನೋಯಿಸುತ್ತಾ ಅಥವಾ ಅವರನ್ನು ಬಲಿಪಶುಗಳನ್ನಾಗಿ ಮಾಡುತ್ತಾ ಮುಂದುವರಿಯುವಂತೆ ಅನುಮತಿಸುವುದು ಅತ್ಯಂತ ಪ್ರೀತಿರಹಿತ ಹಾಗೂ ಅಶಾಸ್ತ್ರೀಯ ಕೃತ್ಯವಾಗಿರುವುದು.​—1 ಕೊರಿಂಥ 5:​9-13.

      14 ಹೆಚ್ಚಿನ ವಿದ್ಯಮಾನಗಳಲ್ಲಿ, ಜೊತೆ ವಿಶ್ವಾಸಿಗಳ ದೋಷಗಳು ಮತ್ತು ತಪ್ಪುಗಳು ಸಾಮಾನ್ಯವಾಗಿ ಸಣ್ಣಪುಟ್ಟವುಗಳಾಗಿರುತ್ತವೆ. ಕೆಲವೊಮ್ಮೆ ನಾವೆಲ್ಲರೂ ನಡೆನುಡಿಗಳಲ್ಲಿ ತಪ್ಪಿಬೀಳುತ್ತೇವೆ, ಹಾಗೂ ಒಬ್ಬರು ಇನ್ನೊಬ್ಬರಿಗೆ ನಿರಾಶೆಯನ್ನು ಅಥವಾ ನೋವನ್ನು ಸಹ ಉಂಟುಮಾಡುತ್ತೇವೆ. (ಯಾಕೋಬ 3:2) ಹೀಗಿರುವಾಗ, ನಾವು ಇತರರ ಕುಂದುಕೊರತೆಗಳನ್ನು ಆದಷ್ಟು ಬೇಗನೆ ಎಲ್ಲರಿಗೂ ಪ್ರಚಾರಮಾಡಿಬಿಡುತ್ತೇವೊ? ಹೀಗೆ ಮಾಡುವುದು ಸಭೆಯಲ್ಲಿನ ತಿಕ್ಕಾಟಕ್ಕೆ ದಾರಿಮಾಡಿಕೊಡುತ್ತದೇ ಹೊರತು ಮತ್ತೇನನ್ನೂ ಸಾಧಿಸುವುದಿಲ್ಲ. (ಎಫೆಸ 4:​1-3) ಒಂದುವೇಳೆ ನಾವು ಪ್ರೀತಿಯಿಂದ ನಿಯಂತ್ರಿಸಲ್ಪಡುವಲ್ಲಿ, ಒಬ್ಬ ಜೊತೆ ಆರಾಧಕನ “ಒಂದು ತಪ್ಪನ್ನು” ನಾವು “ಬಯಲು”ಪಡಿಸುವುದಿಲ್ಲ. (ಕೀರ್ತನೆ 50:​20, NW) ಗಾರೆ ಹಾಗೂ ಪೆಯಿಂಟ್‌ ಒಂದು ಗೋಡೆಯ ಮೇಲಿನ ತೂತುಗಳು ಮತ್ತು ಗುರುತುಗಳನ್ನು ಹೇಗೆ ಮುಚ್ಚಿಹಾಕುತ್ತವೋ ಹಾಗೆಯೇ ಪ್ರೀತಿಯು ಇತರರ ಅಪರಿಪೂರ್ಣತೆಗಳನ್ನು ಮುಚ್ಚಿಹಾಕುತ್ತದೆ.​—ಜ್ಞಾನೋಕ್ತಿ 17:9.

  • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
    ಎಚ್ಚರಿಕೆಯಿಂದಿರಿ!
    • a ಒಂದನೆಯ ಪೇತ್ರ 4:8ರಲ್ಲಿ, ನಾವು ಒಬ್ಬರು ಇನ್ನೊಬ್ಬರನ್ನು “ಯಥಾರ್ಥವಾಗಿ,” “ಆಳವಾಗಿ,” ಅಥವಾ “ಶ್ರದ್ಧಾಪೂರ್ವಕವಾಗಿ” ಪ್ರೀತಿಸಬೇಕು ಎಂದು ಇತರ ಬೈಬಲ್‌ ಭಾಷಾಂತರಗಳು ಹೇಳುತ್ತವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ