ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
    ಕಾವಲಿನಬುರುಜು—2013 | ನವೆಂಬರ್‌ 15
    • 4. ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

      4 ಹಾಗಾದರೆ ಕ್ರೈಸ್ತ ಕುರುಬರು ಕುರಿಗಳನ್ನು ಹೇಗೆ ಉಪಚರಿಸಬೇಕು? “ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿ” ಎಂದು ಸಭೆಯ ಸದಸ್ಯರನ್ನು ಪ್ರೋತ್ಸಾಹಿಸಲಾಗಿದೆ. ಹಾಗಿದ್ದರೂ ‘ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರಬಾರದು’ ಎಂದು ಮುಂದಾಳತ್ವ ವಹಿಸುವ ಹಿರಿಯರಿಗೂ ಬುದ್ಧಿಹೇಳಲಾಗಿದೆ. (ಇಬ್ರಿ. 13:17; 1 ಪೇತ್ರ 5:2, 3 ಓದಿ.) ಹಾಗಾದರೆ ನೇಮಿತ ಹಿರಿಯರು ಮಂದೆಯ ಮೇಲೆ ದೊರೆತನ ಮಾಡದೆ ಮುಂದಾಳತ್ವ ವಹಿಸುವುದು ಹೇಗೆ? ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ದೇವರು ತಮಗೆ ಕೊಟ್ಟಿರುವ ಅಧಿಕಾರದ ಚೌಕಟ್ಟನ್ನು ಮೀರದೆ ಮೇಲ್ವಿಚಾರಕರು ಕುರಿಗಳ ಅಗತ್ಯಗಳನ್ನು ಹೇಗೆ ಪೂರೈಸಬಲ್ಲರು?

  • ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
    ಕಾವಲಿನಬುರುಜು—2013 | ನವೆಂಬರ್‌ 15
    • 9. ಯೇಸು ತನ್ನ ಶಿಷ್ಯರಲ್ಲಿ ಯಾವ ಮನೋಭಾವ ಇರಬೇಕೆಂದು ಹೇಳಿದನು?

      9 ಆಧ್ಯಾತ್ಮಿಕ ಕುರುಬನೊಬ್ಬನು ದೀನನಾಗಿರಬೇಕು ಎಂಬುದು ಯೇಸುವಿನ ನೋಟವಾಗಿತ್ತು. ಆದರೆ ಯಾಕೋಬ ಯೋಹಾನರು ನೆನಸಿದ್ದೇ ಬೇರೆ. ಆ ಇಬ್ಬರು ಅಪೊಸ್ತಲರು ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಯೇಸು ಅವರ ಮನೋಭಾವವನ್ನು ತಿದ್ದುತ್ತಾ ಹೇಳಿದ್ದು: “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಛಿಸುವವನು ಸೇವಕನಂತೆ ಸೇವೆಮಾಡಬೇಕು.” (ಮತ್ತಾ. 20:25, 26, ಪರಿಶುದ್ಧ ಬೈಬಲ್‌a) ಅಪೊಸ್ತಲರು ತಮ್ಮ ಸಂಗಡಿಗರ ಮೇಲೆ ‘ದಬ್ಬಾಳಿಕೆ ನಡೆಸುವ’ ಇಲ್ಲವೆ ‘ಅಧಿಕಾರ ತೋರಿಸುವ’ ಪ್ರವೃತಿಯನ್ನು ಕಿತ್ತೊಗೆಯಬೇಕಿತ್ತು.

      10. (1) ಹಿರಿಯರು ಮಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂದು ಯೇಸು ಬಯಸುತ್ತಾನೆ? (2) ಈ ವಿಷಯದಲ್ಲಿ ಪೌಲ ಯಾವ ಮಾದರಿಯಿಟ್ಟನು?

      10 ಮಂದೆಯನ್ನು ತಾನು ನೋಡಿಕೊಂಡಂತೆಯೇ ಕ್ರೈಸ್ತ ಹಿರಿಯರೂ ನೋಡಿಕೊಳ್ಳಬೇಕೆಂದು ಯೇಸು ಅಪೇಕ್ಷಿಸುತ್ತಾನೆ. ಅವರು ತಮ್ಮ ಜೊತೆ ವಿಶ್ವಾಸಿಗಳ ಸೇವಕರಂತೆ ಇರಲು ಸಿದ್ಧರಿರಬೇಕು, ಅವರ ಒಡೆಯರಂತಲ್ಲ. ಅಪೊಸ್ತಲ ಪೌಲನಿಗೆ ಆ ದೀನ ಮನೋಭಾವವಿತ್ತು. ಆದ್ದರಿಂದ ಎಫೆಸ ಸಭೆಯಲ್ಲಿನ ಹಿರೀಪುರುಷರಿಗೆ ಹೀಗಂದನು: ‘ನಾನು ಏಷ್ಯಾ ಪ್ರಾಂತದಲ್ಲಿ ಕಾಲಿಟ್ಟ ಮೊದಲ ದಿವಸದಿಂದ ಯಾವಾಗಲೂ ನಿಮ್ಮೊಂದಿಗಿದ್ದು ಅತಿ ದೀನಮನಸ್ಸಿನಿಂದ ಕರ್ತನಿಗೆ ಸೇವೆಮಾಡುತ್ತಾ ಇದ್ದೆನು.’ ಅಲ್ಲಿನ ಹಿರಿಯರು ದೀನಭಾವದಿಂದಿದ್ದು ಇತರರಿಗೆ ಸಹಾಯಮಾಡಲು ಶ್ರಮ ಹಾಕಬೇಕೆಂದು ಪೌಲ ಬಯಸಿದನು. ಅವನು ಹೇಳಿದ್ದು: “ಕಷ್ಟಪಟ್ಟು ದುಡಿಯುವ ಮೂಲಕ ನೀವು ಬಲಹೀನರಿಗೆ ನೆರವು ನೀಡಬೇಕೆಂಬುದನ್ನು ನಾನು ಎಲ್ಲ ವಿಷಯಗಳಲ್ಲಿ ನಿಮಗೆ ತೋರಿಸಿಕೊಟ್ಟಿದ್ದೇನೆ.” (ಅ.ಕಾ. 20:18, 19, 35) ತಾನು ಅವರ ನಂಬಿಕೆಯ ಒಡೆಯನಲ್ಲ, ಬದಲಾಗಿ ಅವರ ಸಂತೋಷಕ್ಕಾಗಿರುವ ದೀನ ಜೊತೆ ಕೆಲಸಗಾರನು ಎಂದು ಪೌಲ ಕೊರಿಂಥದವರಿಗೆ ಹೇಳಿದನು. (2 ಕೊರಿಂ. 1:24) ದೀನತೆ ಮತ್ತು ಶ್ರಮಶೀಲತೆಯ ವಿಷಯದಲ್ಲಿ ಪೌಲ ಹಿರಿಯರಿಗೆ ಉತ್ತಮ ಮಾದರಿಯಾಗಿದ್ದಾನೆ.

  • ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
    ಕಾವಲಿನಬುರುಜು—2013 | ನವೆಂಬರ್‌ 15
    • “ಮಂದೆಗೆ ಮಾದರಿಗಳಾಗಿರಿ”

      13, 14. ಹಿರಿಯರು ಯಾವ ಕ್ಷೇತ್ರಗಳಲ್ಲಿ ಮಂದೆಗೆ ಮಾದರಿಯಾಗಿರಬೇಕು?

      13 ಸಭಾ ಹಿರಿಯರು ತಮ್ಮ ವಶಕ್ಕೆ ಕೊಡಲಾಗಿರುವವರ ಮೇಲೆ ದೊರೆತನ ಮಾಡಬಾರದೆಂದು ಅಪೊಸ್ತಲ ಪೇತ್ರನು ಬುದ್ಧಿವಾದ ಕೊಟ್ಟ ಬಳಿಕ “ಮಂದೆಗೆ ಮಾದರಿಗಳಾಗಿರಿ” ಎಂದು ಅವರನ್ನು ಪ್ರೋತ್ಸಾಹಿಸಿದನು. (1 ಪೇತ್ರ 5:3) ಒಬ್ಬ ಹಿರಿಯನು ಮಂದೆಗೆ ಹೇಗೆ ಮಾದರಿಯಾಗಿರಬಲ್ಲನು? ಇದಕ್ಕಾಗಿ ನಾವು ‘ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವವನಲ್ಲಿ’ ಇರಬೇಕಾದ ಅರ್ಹತೆಗಳಲ್ಲಿ ಎರಡನ್ನು ಪರಿಗಣಿಸೋಣ. ಒಂದನೇದಾಗಿ ಅವನು ‘ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನು’ ಆಗಿರಬೇಕು. ಹಿರಿಯನು ಕುಟುಂಬಸ್ಥನಾಗಿರುವಲ್ಲಿ ಅವನು ಆದರ್ಶಪ್ರಾಯ ವಿಧದಲ್ಲಿ ತನ್ನ ಕುಟುಂಬದ ಮೇಲೆ ಮೇಲ್ವಿಚಾರಣೆ ಮಾಡತಕ್ಕದ್ದು. ಏಕೆಂದರೆ “ತನ್ನ ಸ್ವಂತ ಮನೆವಾರ್ತೆಯನ್ನು ಹೇಗೆ ಮೇಲ್ವಿಚಾರಣೆಮಾಡಬೇಕೆಂದು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ನೋಡಿಕೊಳ್ಳುವನು?” (1 ತಿಮೊ. 3:1, 2, 4, 5) ಎರಡನೇದಾಗಿ ಮೇಲ್ವಿಚಾರಕನ ಸ್ಥಾನಕ್ಕೆ ಅರ್ಹನಾಗಲು ಪ್ರಯತ್ನಿಸುವವನು ‘ಸ್ವಸ್ಥಬುದ್ಧಿಯುಳ್ಳವನಾಗಿರಬೇಕು.’ ಅಂದರೆ ಬೈಬಲ್‌ ತತ್ವಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಅವುಗಳನ್ನು ತನ್ನ ಸ್ವಂತ ಜೀವನದಲ್ಲಿ ಅನ್ವಯಿಸುವುದು ಹೇಗೆಂದು ತಿಳಿದವನಾಗಿರಬೇಕು. ಅವನು ದುಡುಕಿ ನಿರ್ಣಯ ಮಾಡದವನೂ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಶಾಂತಚಿತ್ತನೂ ಆಗಿರುತ್ತಾನೆ. ಹಿರಿಯರಲ್ಲಿ ಈ ಗುಣಗಳಿರುವುದನ್ನು ನೋಡುವಾಗ ಸಭಾ ಸದಸ್ಯರಿಗೆ ಅವರ ಮೇಲೆ ಭರವಸೆ ಮೂಡುತ್ತದೆ.

      14 ಹಿರಿಯನು ಒಳ್ಳೇ ಮಾದರಿಯನ್ನಿಡಬೇಕಾದ ಇನ್ನೊಂದು ಕ್ಷೇತ್ರವು ಸೇವೆಯಲ್ಲಿ ಮುಂದಾಳತ್ವ ವಹಿಸುವುದಾಗಿದೆ. ಈ ವಿಷಯದಲ್ಲಿ ಯೇಸು ಮೇಲ್ವಿಚಾರಕರಿಗಾಗಿ ಮಾದರಿಯನ್ನಿಟ್ಟನು. ದೇವರ ರಾಜ್ಯದ ಸುವಾರ್ತೆ ಸಾರುವುದು ಯೇಸುವಿನ ಭೂಜೀವನದ ಮುಖ್ಯ ಭಾಗವಾಗಿತ್ತು. ಈ ಕೆಲಸವನ್ನು ಹೇಗೆ ಮಾಡಬೇಕೆಂದು ಆತನು ತನ್ನ ಶಿಷ್ಯರಿಗೆ ತೋರಿಸಿದನು. (ಮಾರ್ಕ 1:38; ಲೂಕ 8:1) ಇಂದು ಪ್ರಚಾರಕರು ಹಿರಿಯರ ಜೊತೆ ಸುವಾರ್ತೆ ಸಾರುವಾಗ ತುಂಬ ಪ್ರೋತ್ಸಾಹ ಪಡೆದುಕೊಳ್ಳುತ್ತಾರೆ. ಇದರಿಂದ ಈ ಜೀವರಕ್ಷಕ ಕೆಲಸದಲ್ಲಿ ಹಿರಿಯರಿಗಿರುವ ಹುರುಪನ್ನು ಪ್ರಚಾರಕರು ನೋಡಲು ಸಾಧ್ಯವಾಗುತ್ತದೆ. ಹಿರಿಯರು ಬಳಸುವ ಬೋಧನಾ ವಿಧಾನಗಳಿಂದ ಕಲಿಯಲಿಕ್ಕಾಗುತ್ತದೆ. ಹಿರಿಯರು ಕಾರ್ಯಮಗ್ನರಾಗಿರುವುದಾದರೂ ಸುವಾರ್ತೆ ಸಾರಲು ತಮ್ಮ ಸಮಯ, ಶಕ್ತಿ ವ್ಯಯಿಸಲು ದೃಢಮನಸ್ಸುಳ್ಳವರಾಗಿ ಇರುವಾಗ ಅದೇ ರೀತಿಯ ಹುರುಪನ್ನು ತೋರಿಸಲು ಇಡೀ ಸಭೆಗೆ ಪ್ರೋತ್ಸಾಹ ಸಿಗುತ್ತದೆ. ಹಿರಿಯರು ಕೂಟಗಳಿಗಾಗಿ ತಯಾರಿ ಮಾಡಿ, ಭಾಗವಹಿಸುವ ಮೂಲಕ ಮತ್ತು ರಾಜ್ಯ ಸಭಾಗೃಹದ ಶುಚಿಕಾರ್ಯ, ದುರಸ್ತಿಕಾರ್ಯ ಇನ್ನಿತರ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಹ ಸಹೋದರರಿಗೆ ಒಳ್ಳೇ ಮಾದರಿಯನ್ನಿಡಬಲ್ಲರು.​—ಎಫೆ. 5:15, 16; ಇಬ್ರಿಯ 13:7 ಓದಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ