ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮೇ 6-12
ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 4–6
“ನಾವು ಕೈಚೆಲ್ಲಿ ಕೂರುವುದಿಲ್ಲ”
it-1 ಪುಟ 724-725
ತಾಳ್ಮೆ
ಯಾವುದೇ ಪಾಪ ಇಲ್ಲದೆ, ಸದಾಕಾಲ ಜೀವಿಸುವ ನಮ್ಮ ಕ್ರೈಸ್ತ ನಿರೀಕ್ಷೆಯನ್ನು ನಾವು ಯಾವತ್ತಿಗೂ ಕಳಕೊಳ್ಳಬಾರದು. ಹಿಂಸಕರಿಂದ ನಮ್ಮ ಜೀವ ಹೋದರೂ ಈ ನಿರೀಕ್ಷೆಯನ್ನು ನಾವು ಬಿಡಬಾರದು. (ರೋಮ 5:4, 5; 1ಥೆಸ 1:3; ಪ್ರಕ 2:10) ಈ ಮಹಾ ನಿರೀಕ್ಷೆಯ ನೆರವೇರಿಕೆಗೆ ಹೋಲಿಸುವಾಗ ಈಗಿನ ಕಷ್ಟಗಳು ಮೊಬ್ಬಾಗಿ ಹೋಗಿ ಏನೂ ಇಲ್ಲದಂತಿರುವವು. (ರೋಮ 8:18-25) ಶಾಶ್ವತವಾದ ಪರಿಹಾರಗಳಿಗೆ ಹೋಲಿಸುವಾಗ ಈಗಿನ ಅತೀ ಘೋರ ಕಷ್ಟಗಳು ಸಹ “ಕ್ಷಣಮಾತ್ರದ್ದೂ ಹಗುರವಾದದ್ದೂ” ಆಗಿರುತ್ತವೆ. (2ಕೊರಿಂ 4:16-18) ಹಾಗಾಗಿ ಒಬ್ಬ ವ್ಯಕ್ತಿ ‘ಈಗಿರುವ ಕಷ್ಟಗಳು ತಾತ್ಕಾಲಿಕ’ ಮತ್ತು ‘ಮುಂದೆ ತನಗೆ ಅದ್ಭುತಕರವಾದ ಜೀವನವಿದೆ’ ಎಂಬ ಕ್ರೈಸ್ತ ನಿರೀಕ್ಷೆಯನ್ನು ದೃಢವಾಗಿ ಇಟ್ಟುಕೊಂಡರೆ ಅವನಿಗೆ ಜೀವನದಲ್ಲಿ ನಿರಾಶೆ ಇರುವುದಿಲ್ಲ ಮತ್ತು ಯೆಹೋವನಲ್ಲಿ ತನಗಿರುವ ನಂಬಿಕೆಯನ್ನು ಯಾವತ್ತಿಗೂ ಕಳಕೊಳ್ಳುವುದಿಲ್ಲ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w12 2/1 ಪುಟ 28-29
“ಯೆಹೋವನನ್ನು ಸಂತೋಷಪಡಿಸಿ”
ಬೈಬಲಾಧಾರಿತವಾದ ಈ ಮುಖ್ಯ ವಿಷಯದ ಕುರಿತು ಆಡಳಿತ ಮಂಡಲಿಯ ಸದಸ್ಯರಾದ ಡೇವಿಡ್ ಸ್ಪ್ಲೇನ್ ಮಾತಾಡಿದರು. (2 ಕೊರಿಂಥ 4:7) “ಇಲ್ಲಿ ತಿಳಿಸಿರುವ ನಿಕ್ಷೇಪ ಏನಾಗಿದೆ? ಜ್ಞಾನ ಅಥವಾ ವಿವೇಕವೋ? ಅಲ್ಲ. ಅಪೊಸ್ತಲ ಪೌಲನು ಹೇಳಿದ ಈ ನಿಕ್ಷೇಪವು ‘ಸತ್ಯವನ್ನು ಪ್ರಕಟಪಡಿಸುವ’ ‘ಶುಶ್ರೂಷೆಯೇ’ ಆಗಿದೆ” ಎಂದು ಅವರು ವಿವರಿಸಿದರು. (2 ಕೊರಿಂಥ 4:1, 2, 5) ಈ ಐದು ತಿಂಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಕಳೆದ ಸಮಯವು ಮುಂದೆ ಸಿಗಲಿರುವ ಅವರ ವಿಶೇಷ ನೇಮಕಗಳಿಗೆ ಸಿದ್ಧರಾಗಲು ಸಹಾಯ ಮಾಡುತ್ತದೆ ಎಂದು ಸಹೋದರ ಸ್ಪ್ಲೇನ್ ವಿದ್ಯಾರ್ಥಿಗಳಿಗೆ ನೆನಪಿಸಿದರು. ಅವರಿಗೆ ಸಿಗುವ ನೇಮಕವು ತುಂಬ ಮಹತ್ವವಾದದ್ದು ಎಂದು ಹೇಳಿದರು.
“ಮಣ್ಣಿನ ಪಾತ್ರೆಗಳು” ನಮ್ಮ ಮಾಂಸಿಕ ದೇಹಗಳನ್ನು ಸೂಚಿಸುತ್ತವೆ ಎಂದು ಭಾಷಣಕಾರರು ವಿವರಿಸಿದರು. ನಂತರ ಅವರು ಮಣ್ಣಿನ ಪಾತ್ರೆ ಮತ್ತು ಬಂಗಾರದ ಪಾತ್ರೆಗಳ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸಿದರು. ಬಂಗಾರದಿಂದ ಮಾಡಿದ ಪಾತ್ರೆಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಯಾವಾಗಲೂ ಬಳಸಲಾಗುತ್ತದೆ. ಒಂದುವೇಳೆ ನಿಕ್ಷೇಪವನ್ನು ಬಂಗಾರದ ಪಾತ್ರೆಯಲ್ಲಿ ಇಡುವುದಾದರೆ ನಾವು ನಿಕ್ಷೇಪಕ್ಕೆ ಕೊಡುವಷ್ಟೇ ಗಮನವನ್ನು ಬಂಗಾರದ ಪಾತ್ರೆಗೂ ಕೊಟ್ಟುಬಿಡುತ್ತೇವೆ. ಹೀಗೆ ಹೇಳಿ “ಆದುದರಿಂದ ವಿದ್ಯಾರ್ಥಿಗಳೇ ನೀವು ನಿಮ್ಮ ಮೇಲೆ ಗಮನ ಸೆಳೆಯಲು ಬಯಸಬಾರದು. ಮಿಷನರಿಗಳಾಗಿರುವ ನೀವು ಜನರನ್ನು ಯೆಹೋವನ ಕಡೆಗೆ ನಡೆಸಬೇಕು. ಯಾಕೆಂದರೆ ನೀವು ವಿನಮ್ರರಾದ ಮಣ್ಣಿನ ಪಾತ್ರೆಗಳಾಗಿದ್ದೀರಿ” ಎಂದರು ಸಹೋದರ ಸ್ಪ್ಲೇನ್.
ಮೇ 13-19
ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 7–10
“ಪರಿಹಾರಕಾರ್ಯನೂ ಒಂದು ಶುಶ್ರೂಷೆ”
kr ಪುಟ 209 ಪ್ಯಾರ 1
ಪರಿಹಾರಕಾರ್ಯವೆಂಬ ಶುಶ್ರೂಷೆ
ಅದು ಕ್ರಿ.ಶ.46 ಇರಬಹುದು. ಯೂದಾಯಕ್ಕೆ ಬರಗಾಲ ಬಡಿದಿತ್ತು. ದವಸಧಾನ್ಯಗಳ ಕೊರತೆಯಿಂದ ಬೆಲೆ ಗಗನಕ್ಕೇರಿತ್ತು. ಅಲ್ಲಿದ್ದ ಯೆಹೂದಿ ಕ್ರೈಸ್ತರಿಗೆ ಅಷ್ಟು ಹಣ ಕೊಟ್ಟು ಅವುಗಳನ್ನು ಕೊಂಡುಕೊಳ್ಳುವುದು ಅಸಾಧ್ಯವಾದ ಮಾತಾಗಿತ್ತು. ಹಸಿವಿನಿಂದ ನರಳುತ್ತಿದ್ದರು, ಮುಖದಲ್ಲಿ ಗೆಲುವೇ ಇರಲಿಲ್ಲ. ಆದರೆ ಯೆಹೋವನ ರಕ್ಷಣಾ ಹಸ್ತವನ್ನು ಅವರು ಸದ್ಯದಲ್ಲೇ ನೋಡಲಿದ್ದರು. ಅಂಥ ಒಂದು ರಕ್ಷಣೆ ಬೇರೆ ಯಾವ ಕ್ರೈಸ್ತರಿಗೂ ಈ ಹಿಂದೆ ಸಿಕ್ಕಿರಲಿಲ್ಲ. ಅದೇನಾಗಿತ್ತು?
kr ಪುಟ 209-210 ಪ್ಯಾರ 4-6
ಪರಿಹಾರಕಾರ್ಯವೆಂಬ ಶುಶ್ರೂಷೆ
4 ಕ್ರೈಸ್ತರು ಎರಡು ವಿಧದ ಸೇವೆಯನ್ನು ಮಾಡಬೇಕು ಎಂದು ಕೊರಿಂಥದವರಿಗೆ ಬರೆದ ಎರಡನೇ ಪತ್ರದಲ್ಲಿ ಪೌಲನು ವಿವರಿಸಿದನು. ಪೌಲನ ಈ ಪತ್ರವು ಅಭಿಷಿಕ್ತ ಕ್ರೈಸ್ತರಿಗೆ ಬರೆಯಲಾಗಿತ್ತಾದರೂ ಇಂದು ಆ ಮಾತುಗಳು ಕ್ರಿಸ್ತನ “ಬೇರೆ ಕುರಿಗಳಿಗೂ” ಅನ್ವಯಿಸುತ್ತದೆ. (ಯೋಹಾ. 10:16) ನಮ್ಮ ಸೇವೆಯ ಒಂದು ವಿಧ “ಸಮಾಧಾನ ಸಂಬಂಧದ ಶುಶ್ರೂಷೆ” ಅಂದರೆ ಸಾರುವ ಮತ್ತು ಕಲಿಸುವ ಕೆಲಸ. (2 ಕೊರಿಂ. 5:18-20; 1 ತಿಮೊ. 2:3-6) ಇನ್ನೊಂದು ವಿಧ ನಮ್ಮ ಜೊತೆ ವಿಶ್ವಾಸಿಗಳ ಪರವಾಗಿ ಮಾಡುವ ಸೇವೆ. ಇದನ್ನು ಪೌಲನು ನಿರ್ದಿಷ್ಟವಾಗಿ “ಪರಿಹಾರ ಶುಶ್ರೂಷೆ” ಎಂದು ಕರೆದನು. (2 ಕೊರಿಂ. 8:4, NW) “ಸಮಾಧಾನ ಸಂಬಂಧದ ಶುಶ್ರೂಷೆ” ಮತ್ತು “ಪರಿಹಾರ ಶುಶ್ರೂಷೆ” ಎಂಬ ಎರಡೂ ಅಭಿವ್ಯಕ್ತಿಗಳಲ್ಲಿ “ಶುಶ್ರೂಷೆ” ಪದವು, ಗ್ರೀಕ್ ಪದವಾದ ಡಯಕೋನಿಯದ ಭಾಷಾಂತರವಾಗಿದೆ. ಯಾಕೆ ಈ ಪದ ತುಂಬ ಪ್ರಾಮುಖ್ಯವಾಗಿದೆ?
5 ಎರಡೂ ವಿಧದ ಸೇವೆಗಳಿಗೆ ಒಂದೇ ಗ್ರೀಕ್ ಪದವನ್ನು ಬಳಸಿದ ಮೂಲಕ ಪೌಲನು ಪರಿಹಾರಕಾರ್ಯವನ್ನು ಕ್ರೈಸ್ತ ಸಭೆಯಲ್ಲಿ ನಿರ್ವಹಿಸಲಾಗುವ ಶುಶ್ರೂಷೆಯ ಇತರ ಕೆಲಸಗಳೊಂದಿಗೆ ಸೇರಿಸಿದನು. ಆತನು ಈ ಮೊದಲು ಹೀಗಂದಿದ್ದನು: “ಬೇರೆ ಬೇರೆ ರೀತಿಯ ಶುಶ್ರೂಷೆಗಳಿವೆಯಾದರೂ ಕರ್ತನು ಒಬ್ಬನೇ. ಬೇರೆ ಬೇರೆ ರೀತಿಯ ಕಾರ್ಯಗಳಿವೆಯಾದರೂ . . . ಒಂದೇ ಪವಿತ್ರಾತ್ಮ” ಅವನ್ನು ಮಾಡುತ್ತದೆ. (1 ಕೊರಿಂ. 12:4-6, 11) ಸತ್ಯಾಂಶವೇನೆಂದರೆ ಸಭೆಯಲ್ಲಿ ಮಾಡುವ ಬೇರೆ ಬೇರೆ ವಿಧದ ಸೇವೆಗಳನ್ನು ಪೌಲನು ‘ಪವಿತ್ರಸೇವೆಗೆ’ ಸೂಚಿಸಿದ್ದಾನೆ. (ರೋಮ. 12:1, 6-8) ಹಾಗಾಗಿ “ಪವಿತ್ರಜನರಿಗೆ ಸೇವೆಮಾಡಲು” ತನ್ನ ಸಮಯ ಕೊಡುವುದು ತಕ್ಕದಾಗಿದೆ ಎಂದು ಅವನು ಭಾವಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!—ರೋಮ. 15:25, 26.
6 ಈ ವಿಪತ್ತು ಪರಿಹಾರಕಾರ್ಯವು, ಶುಶ್ರೂಷೆಯ ಮತ್ತು ಯೆಹೋವನ ಆರಾಧನೆಯ ಭಾಗವಾಗಿದೆ ಎಂದು ಕೊರಿಂಥದವರಿಗೆ ಪೌಲನು ಅರ್ಥಮಾಡಿಸಿದನು. ಆತನು ಹೇಳಿದ್ದು: ಕ್ರೈಸ್ತರು ‘ಕ್ರಿಸ್ತನ ಕುರಿತಾದ ಸುವಾರ್ತೆಗೆ ಅಧೀನರಾಗಿರುವುದರಿಂದ’ ವಿಪತ್ತು ಪರಿಹಾರಕಾರ್ಯದಲ್ಲಿ ಭಾಗವಹಿಸುತ್ತಾರೆ. (2 ಕೊರಿಂ. 9:13) ಅವರು ಕ್ರಿಸ್ತನ ಬೋಧನೆಗಳನ್ನು ಅನ್ವಯಿಸಿಕೊಳ್ಳಲು ಬಯಸುವುದರಿಂದ ಜೊತೆ ವಿಶ್ವಾಸಿಗಳಿಗೆ ಸಹಾಯ ಮಾಡುತ್ತಾರೆ. ತಮ್ಮ ಸಹೋದರರ ಪರವಾಗಿ ಅವರು ಮಾಡುವ ಈ ಕಾರ್ಯಗಳು ‘ದೇವರ ಹೇರಳವಾದ ಅಪಾತ್ರದಯೆಗಿಂತ’ ಕಡಿಮೆ ಏನಿಲ್ಲ. (2 ಕೊರಿಂ. 9:14; 1 ಪೇತ್ರ 4:10) ಕೊರತೆಯಲ್ಲಿರುವ ಸಹೋದರರಿಗೆ ವಿಪತ್ತು ಪರಿಹಾರಕಾರ್ಯವನ್ನೂ ಸೇರಿಸಿ ಬೇರೆ ರೀತಿಯ ಸಹಾಯ ನೀಡುವ ಬಗ್ಗೆ ಡಿಸೆಂಬರ್ 1, 1975 ರ ಕಾವಲಿನಬುರುಜು ಹೀಗೆ ಹೇಳಿತ್ತು: “ಈ ರೀತಿಯ ಸೇವೆಯನ್ನು ಯೆಹೋವನು ಮತ್ತು ಆತನ ಪುತ್ರ ಯೇಸುಕ್ರಿಸ್ತನು ತುಂಬ ಮಾನ್ಯ ಮಾಡುತ್ತಾರೆ ಅನ್ನುವುದರಲ್ಲಿ ಸಂಶಯವೇ ಇಲ್ಲ.” ನಿಜವಾಗಲೂ, ವಿಪತ್ತು ಪರಿಹಾರಕಾರ್ಯವು ಪವಿತ್ರಸೇವೆಯ ಒಂದು ಪ್ರಾಮುಖ್ಯ ಭಾಗವಾಗಿದೆ.—ರೋಮ.12:1, 7; 2 ಕೊರಿಂ. 8:7; ಇಬ್ರಿ. 13:16.
kr ಪುಟ 196 ಪ್ಯಾರ 10
ರಾಜ್ಯದ ಕೆಲಸಗಳಿಗೆ ಹಣದ ಸಹಾಯ ಹೇಗೆ ಸಿಗುತ್ತಿದೆ?
10 ಪ್ರಥಮವಾಗಿ, ನಾವು ಸ್ವಯಂ ಪ್ರೇರಿತ ಕಾಣಿಕೆಗಳನ್ನು ಕೊಡುತ್ತೇವೆ. ಯಾಕೆಂದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ‘ಆತನ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರುವ ವಿಷಯಗಳನ್ನು’ ಮಾಡಲು ಬಯಸುತ್ತೇವೆ. (1 ಯೋಹಾ. 3:22) ಮನಪೂರ್ವಕವಾಗಿ ಯಾರು ಕಾಣಿಕೆಯನ್ನು ಕೊಡುತ್ತಾರೋ ಅಂಥವರನ್ನು ಯೆಹೋವನು ಖಂಡಿತ ಮೆಚ್ಚುತ್ತಾನೆ. ಕೊಡುವುದರ ಬಗ್ಗೆ ಅಪೊಸ್ತಲ ಪೌಲನು ಹೇಳಿರುವ ಮಾತುಗಳನ್ನು ನೋಡಿ. (2 ಕೊರಿಂಥ 9:7 ಓದಿ.) ಒಬ್ಬ ನಿಜ ಕ್ರೈಸ್ತನು ಒಲ್ಲದ ಮನಸ್ಸಿನಿಂದಾಗಲಿ, ಒತ್ತಾಯದಿಂದಾಗಲಿ ಕೊಡುವುದಿಲ್ಲ. ಬದಲಿಗೆ ‘ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವುದರಿಂದ’ ಅವನು ಕೊಡುತ್ತಾನೆ. ಅಂದರೆ ಅಗತ್ಯ ಇದೆ ಅನ್ನುವುದನ್ನು ಕಂಡುಕೊಂಡು, ಆ ಅಗತ್ಯವನ್ನು ತಾನು ಹೇಗೆ ಪೂರೈಸಬಹುದೆಂದು ಯೋಚಿಸಿದ ಬಳಿಕ ಅವನು ಕೊಡುತ್ತಾನೆ. ಇಂಥ ದಾನಿಯು ಯೆಹೋವನಿಗೆ ಪ್ರಿಯನು. ಯಾಕೆಂದರೆ “ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” ಇನ್ನೊಂದು ಭಾಷಾಂತರವು “ಕೊಡಲು ಯಾರು ಇಷ್ಟಪಡುತ್ತಾರೋ ಅಂಥವರನ್ನು ದೇವರು ಪ್ರೀತಿಸುತ್ತಾನೆ” ಎಂದು ಹೇಳುತ್ತದೆ.
ಮೇ 20-26
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 177
ಮುತ್ತು
“ಪವಿತ್ರವಾದ ಮುದ್ದು.” ಆರಂಭದ ಕ್ರೈಸ್ತರಲ್ಲಿ “ಪವಿತ್ರವಾದ ಮುದ್ದು” (ರೋಮ 16:16; 1ಕೊರಿಂ 16:20; 2ಕೊರಿಂ 13:12; 1ಥೆಸ 5:26) ಅಥವಾ “ಪ್ರೀತಿಯ ಮುದ್ದಿನಿಂದ” (1ಪೇತ್ರ 5:14) ವಂದಿಸುವ ಪದ್ಧತಿಯಿತ್ತು. ಮುದ್ದಿಡುವ ಈ ಪದ್ಧತಿ ಒಂದೇ ಲಿಂಗದ ವ್ಯಕ್ತಿಗಳ ಮಧ್ಯೆ ನಡೆಯುತ್ತಿದ್ದಿರಬಹುದು. ಆರಂಭದ ಕ್ರೈಸ್ತರು ವಂದಿಸುತ್ತಿದ್ದ ಈ ರೀತಿಯು, ಮುತ್ತುನೀಡಿ ವಂದಿಸುತ್ತಿದ್ದ ಪುರಾತನ ಹೀಬ್ರೂ ಪದ್ಧತಿಗೆ ಅನುರೂಪವಾಗಿದ್ದಿರಬಹುದು. ಶಾಸ್ತ್ರಗ್ರಂಥಗಳು ಈ ಬಗ್ಗೆ ವಿವರಗಳನ್ನು ಕೊಟ್ಟಿಲ್ಲವಾದರೂ, “ಪವಿತ್ರವಾದ ಮುದ್ದು” ಅಥವಾ “ಪ್ರೀತಿಯ ಮುದ್ದು” ಕ್ರೈಸ್ತ ಸಭೆಯಲ್ಲಿ ಹಿತಕರವಾದ ಪ್ರೀತಿ ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುತ್ತಿತ್ತು ಅನ್ನುವುದಂತೂ ನಿಜ.—ಯೋಹಾ 13;34, 35.
ಮೇ 27–ಜೂನ್ 2
ಬೈಬಲಿನಲ್ಲಿರುವ ರತ್ನಗಳು | ಗಲಾತ್ಯ 1–3
“ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”
it-2 ಪುಟ 587 ಪ್ಯಾರ 3
ಇದಾದ ಸ್ವಲ್ಪ ಸಮಯದ ನಂತರ ಸ್ವತಃ ಪೇತ್ರನು ಸಿರಿಯದ ಅಂತಿಯೋಕ್ಯಕ್ಕೆ ಬಂದನು. ಅಲ್ಲಿನ ಅನ್ಯಜನಾಂಗದ ಕ್ರೈಸ್ತರ ಜೊತೆ ಸಹವಾಸ ಮಾಡಿದನು. ಆದರೆ ಯೆರೂಸಲೇಮಿನಿಂದ ಕೆಲವು ಯೆಹೂದ್ಯರು ಬಂದಾಗ ಆತನು ಮನುಷ್ಯನ ಭಯಕ್ಕೆ ಒಳಗಾಗಿ ಯೆಹೂದ್ಯರಲ್ಲದ ಜನರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು. ಹೀಗೆ ಮಾಡುವ ಮೂಲಕ ಬೇಧಭಾವ ಮಾಡುವುದು ದೇವರ ದೃಷ್ಟಿಯಲ್ಲಿ ಸರಿಯಲ್ಲ ಎಂಬ ಪವಿತ್ರಾತ್ಮದ ನಿರ್ದೇಶನಕ್ಕೆ ವಿರುದ್ಧವಾಗಿ ನಡೆದುಕೊಂಡನು. ಬಾರ್ನಬನು ಕೂಡ ಈ ತಪ್ಪನ್ನು ಮಾಡಿದನು. ಇದನ್ನು ಗಮನಿಸಿದ ಪೌಲನು ಧೈರ್ಯದಿಂದ ಪೇತ್ರನನ್ನು ಬಹಿರಂಗವಾಗಿ ಖಂಡಿಸಿದನು. ಯಾಕೆಂದರೆ ಆತನ ನಡವಳಿಕೆಯು ಕ್ರೈಸ್ತತ್ವದ ಪ್ರಗತಿಗೆ ಹಾನಿಕರವಾಗಿತ್ತು.—ಗಲಾ 2:11-14.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 ಪುಟ 880
ಗಲಾತ್ಯದವರಿಗೆ ಬರೆದ ಪತ್ರ
“ಎಲೈ, ಬುದ್ಧಿಹೀನರಾದ ಗಲಾತ್ಯದವರೇ” ಎಂದು ಪೌಲನು ಹೇಳಿದ್ದು ಗಲಾತ್ಯದ ಉತ್ತರ ಭಾಗದಲ್ಲಿದ್ದ ಗಾಲ್ ಬುಡಕಟ್ಟಿನ ನಿರ್ದಿಷ್ಟ ಜನರಿಗೆ ಮಾತ್ರ ಅನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. (ಗಲಾ 3:1) ಬದಲಿಗೆ ಪೌಲನು ಅಲ್ಲಿನ ಸಭೆಗಳಲ್ಲಿದ್ದ ಕೆಲವು ನಿರ್ದಿಷ್ಟ ಜನರನ್ನು ಗದರಿಸುತ್ತಿದ್ದನು. ಯಾಕಂದರೆ ಅವರು ತಮ್ಮ ಮಧ್ಯೆ ಇದ್ದ ಯೆಹೂದಿಗಳು ಮಾಡಿಕೊಂಡ ತತ್ವಗಳನ್ನು ನಂಬಲು ಆರಂಭಿಸಿದ್ದರು. ಆ ಯೆಹೂದಿಗಳು ಹೊಸ ಒಡಂಬಡಿಕೆ ಒದಗಿಸಿದ ‘ನಂಬಿಕೆಯಿಂದಾಗಿ ಬರುವ ನೀತಿಗೆ’ ಬದಲಾಗಿ ಮೋಶೆಯ ಧರ್ಮಶಾಸ್ತ್ರದ ಏರ್ಪಾಡನ್ನು ಬಳಸಿ ಸ್ವನೀತಿಯನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. (2:15–3:14; 4:9, 10) ಪೌಲನು ಯಾರಿಗೆ ಈ ಪತ್ರ ಬರೆದನೋ ಆ “ಗಲಾತ್ಯದಲ್ಲಿರುವ ಸಭೆಗಳಲ್ಲಿ” (1:2) ಯೆಹೂದ್ಯರು ಮತ್ತು ಯೆಹೂದ್ಯರಲ್ಲದವರು ಇಬ್ಬರೂ ಇದ್ದರು. ಯೆಹೂದ್ಯರಲ್ಲದವರಲ್ಲಿ ಸುನ್ನತಿಯಾದ ಯೆಹೂದಿ ಮತಾವಲಂಬಿಗಳು ಮತ್ತು ಸುನ್ನತಿಯಾಗದ ಅನ್ಯಜನರು ಇದ್ದರು. ಅವರಲ್ಲಿ ಕೆಲವರು ಸೆಲ್ಟಿಕ್ ವಂಶಸ್ಥರೂ ಅನ್ನುವುದರಲ್ಲಿ ಸಂಶಯವಿಲ್ಲ. (ಅಕಾ 13:14, 43; 16:1; ಗಲಾ 5:2) ಇವರು ಗಲಾತ್ಯದಲ್ಲಿ ವಾಸಿಸುತ್ತಿದ್ದುದರಿಂದ ಇವರೆಲ್ಲರನ್ನು ಸೇರಿಸಿ ಗಲಾತ್ಯದ ಕ್ರೈಸ್ತರೆಂದು ಕರೆಯಲಾಯಿತು. ಪೌಲನು ಪತ್ರ ಬರೆದ ರೀತಿ ನೋಡಿದರೆ ಆತನು ಬರೆದದ್ದು ತನಗೆ ಚೆನ್ನಾಗಿ ಪರಿಚಯವಿದ್ದ ರೋಮನ್ ಪ್ರಾಂತ್ಯದ ದಕ್ಷಿಣ ಭಾಗದಲ್ಲಿದ್ದ ಜನರಿಗೆಂದು ಗೊತ್ತಾಗುತ್ತದೆ. ಉತ್ತರ ಭಾಗದಲ್ಲಿದ್ದ ಜನರಿಗೆ ಇದನ್ನು ಬರೆಯಲಿಲ್ಲ. ಯಾಕೆಂದರೆ ಆತನು ಅಲ್ಲಿಗೆ ಯಾವತ್ತಿಗೂ ಹೋಗಿರಲಿಲ್ಲ ಮತ್ತು ಅಲ್ಲಿನ ಯಾವ ಜನರ ಪರಿಚಯವೂ ಆತನಿಗಿರಲಿಲ್ಲ.