ಬೈಬಲಿನಲ್ಲಿರುವ ರತ್ನಗಳು | 2 ಪೇತ್ರ 1-3
‘ಯೆಹೋವನ ದಿನದ ಸಾನ್ನಿಧ್ಯವನ್ನು ಎದುರು ನೋಡುತ್ತಾ ಇರಿ’
ಯೆಹೋವನು ತಾನು ನೇಮಿಸಿರುವ ಸಮಯದಲ್ಲಿ ನ್ಯಾಯ ತೀರಿಸುವನು. ಆದರೆ ನಮ್ಮ ನಡೆ-ನುಡಿ, ನಾವು ಯೆಹೋವನ ದಿನಕ್ಕಾಗಿ ಸಿದ್ಧರಿದ್ದೇವೆಂದು ತೋರಿಸುವ ರೀತಿಯಲ್ಲಿ ಇದೆಯಾ?
“ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ” ಆಗಿರುವುದರಲ್ಲಿ ಏನೆಲ್ಲಾ ಒಳಗೂಡಿದೆ?
ನಾವು ನೈತಿಕವಾಗಿ ಶುದ್ಧರಾಗಿರಬೇಕು, ಎಷ್ಟೇ ಕಷ್ಟ ಬಂದರೂ ಯೆಹೋವನ ಮಟ್ಟಗಳನ್ನು ಬಿಟ್ಟುಕೊಡದೆ ಅದರ ಪ್ರಕಾರ ಜೀವಿಸಬೇಕು
ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕ್ರಮವಾಗಿ ಒಳಗೂಡಬೇಕು