ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಬಹಳ ಪ್ರಕಾಶಮಾನವಾದ ಪಟ್ಟಣ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 6. (ಎ) ನಗರದ ಅಳೆಯುವಿಕೆಯನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ, ಮತ್ತು ಈ ಅಳೆಯುವಿಕೆಯು ಏನನ್ನು ಸೂಚಿಸುತ್ತದೆ? (ಬಿ) “ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ” ಎಂಬ ಅಳತೆಯು ಬಳಸಲ್ಪಟ್ಟದ್ದನ್ನು ಯಾವುದು ವಿವರಿಸಬಹುದು? (ಪಾದಟಿಪ್ಪಣಿ ನೋಡಿರಿ.)

      6 ತನ್ನ ದಾಖಲೆಯನ್ನು ಯೋಹಾನನು ಮುಂದರಿಸುತ್ತಾನೆ: “ಈಗ ನನ್ನ ಸಂಗಡ ಮಾತಾಡುತ್ತಿದವ್ದನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಪ್ರಾಕಾರವನ್ನೂ ಅಳತೆಮಾಡುವುದಕ್ಕಾಗಿ ತನ್ನ ಕೈಯಲ್ಲಿ ಅಳತೇಕೋಲಾಗಿ ಒಂದು ಚಿನ್ನದ ಕೋಲನ್ನು ಹಿಡಿದಿದ್ದನು. ಮತ್ತು ನಗರವು ಚಚ್ಚೌಕವಾಗಿದೆ, ಮತ್ತು ಅದರ ಉದ್ದವು ಅದರ ಅಗಲದಷ್ಟಿದೆ. ಮತ್ತು ಅವನು ಆ ನಗರವನ್ನು ಕೋಲಿನಿಂದ ಅಳತೆಮಾಡಿದನು, ಹನ್ನೆರಡು ಸಾವಿರ ಫರ್ಲಾಂಗುಗಳು; ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ. ಅವನು ಅದರ ಪ್ರಾಕಾರವನ್ನು ಸಹ ಅಳತೆಮಾಡಿದನು, ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ ಅವು ನೂರನಲವತ್ತನಾಲ್ಕು ಕ್ಯೂಬಿಟ್‌ಗಳಾದವು.” (ಪ್ರಕಟನೆ 21:15-17, NW) ದೇವಾಲಯವು ಅಳೆಯಲ್ಪಟ್ಟಾಗ, ಅದರ ಕುರಿತಾದ ಯೆಹೋವನ ಉದ್ದೇಶಗಳ ನೆರವೇರಿಕೆಗೆ ಇದು ಖಾತರಿಯನ್ನಿತಿತ್ತು. (ಪ್ರಕಟನೆ 11:1) ಈಗ, ದೇವದೂತನಿಂದ ಹೊಸ ಯೆರೂಸಲೇಮಿನ ಅಳೆಯುವಿಕೆಯು, ಯೆಹೋವನ ಈ ಮಹಿಮಾಭರಿತ ನಗರದ ಸಂಬಂಧದಲ್ಲಿ ಅವನ ಉದ್ದೇಶಗಳು ಹೇಗೆ ಮಾರ್ಪಡಲಾರವು ಎಂದು ತೋರಿಸುತ್ತದೆ.a

      7. ನಗರದ ಅಳತೆಯಲ್ಲಿ ವಿಶೇಷತೆಯೇನು?

      7 ಎಂತಹ ಒಂದು ವೈಶಿಷ್ಟ್ಯಮಯ ನಗರ ಇದಾಗಿದೆ! ಸುತ್ತಳತೆಯಲ್ಲಿ ಒಂದು ಪರಿಪೂರ್ಣ ಚಚ್ಚೌಕವು 12,000 ಫರ್ಲಾಂಗುಗಳು (ಸುಮಾರು 2,220 ಕಿಲೊಮೀಟರುಗಳು), ಎತ್ತರದಲ್ಲಿ 144 ಮೊಳಗಳ ಯಾ 64 ಮೀಟರುಗಳ ಪ್ರಾಕಾರದಿಂದ ಸುತ್ತುವರಿಯಲ್ಪಟ್ಟಿದೆ. ಯಾವುದೇ ಅಕ್ಷರಾರ್ಥಕ ನಗರಕ್ಕೆ ಆ ಅಳತೆ ಇರಸಾಧ್ಯವಿಲ್ಲ. ಇದು ಆಧುನಿಕ ಇಸ್ರಾಯೇಲಿನ 14 ಪಟ್ಟು ದೊಡ್ಡ ಕ್ಷೇತ್ರವನ್ನು ಆವರಿಸುವುದು, ಮತ್ತು ಅದು ಹೊರಾಂತರಾಳದಲ್ಲಿ ಬಹುಮಟ್ಟಿಗೆ 560 ಕಿಲೊಮೀಟರುಗಳಷ್ಟು ಹೊರಗೆ ಚಾಚುವುದು! ಪ್ರಕಟನೆಯು ಸಂಕೇತಗಳಲ್ಲಿ ಕೊಡಲಾಗಿದೆ. ಆದುದರಿಂದ, ಸ್ವರ್ಗೀಯ ಹೊಸ ಯೆರೂಸಲೇಮಿನ ಕುರಿತು ಈ ಅಳತೆಗಳು ನಮಗೇನನ್ನು ತಿಳಿಸುತ್ತವೆ?

      8. ಇದರಿಂದ ಏನು ಸೂಚಿಸಲ್ಪಟ್ಟಿದೆ (ಎ) ನಗರದ 144-ಮೊಳ ಎತ್ತರದ ಪ್ರಾಕಾರಗಳು? (ಬಿ) ನಗರದ 12,000-ಫರ್ಲಾಂಗು ಅಳತೆಯು? (ಸಿ) ವಿನ್ಯಾಸದಲ್ಲಿ ನಗರವು ಪರಿಪೂರ್ಣ ಚಚ್ಚೌಕವಾಗಿರುವುದು?

      8 ನಗರವು ದೇವರ 1,44,000 ಆತ್ಮಿಕ ದತ್ತು ಪುತ್ರರಿಂದ ಮಾಡಲ್ಪಟ್ಟಿದೆ ಎಂದು 144-ಮೊಳ ಎತ್ತರದ ಪ್ರಾಕಾರಗಳು ನಮಗೆ ನೆನಪು ಮಾಡುತ್ತವೆ. ನಗರದ 12,000 ಫರ್ಲಾಂಗುಗಳ ಅಳತೆಯಲ್ಲಿ—ಅದರ ಉದ್ದ, ಅಗಲ, ಮತ್ತು ಎತ್ತರ ಏಕಸಮಾನವಿರುವುದರೊಂದಿಗೆ—ಕಾಣಬರುವ ಅಂಕೆ 12 ಬೈಬಲ್‌ ಪ್ರವಾದನೆಯಲ್ಲಿ ಸಂಘಟನಾ ಅಳವಡಿಸುವಿಕೆಗಳಲ್ಲಿ ಸಾಂಕೇತಿಕವಾಗಿ ಬಳಸಲ್ಪಟ್ಟಿದೆ. ಆದಕಾರಣ, ಹೊಸ ಯೆರೂಸಲೇಮ್‌ ದೇವರ ನಿತ್ಯ ಉದ್ದೇಶವನ್ನು ಪೂರೈಸುವುದರಲ್ಲಿ ಅತ್ಯುತ್ಕೃಷ್ಟವಾದ ಸಂಘಟನಾ ಏರ್ಪಾಡು ಆಗಿ ರಚಿಸಲ್ಪಟ್ಟಿದೆ. ಹೊಸ ಯೆರೂಸಲೇಮ್‌, ರಾಜನಾದ ಯೇಸು ಕ್ರಿಸ್ತನೊಂದಿಗೆ, ಯೆಹೋವನ ರಾಜ್ಯ ಸಂಸ್ಥೆಯಾಗಿದೆ. ಅನಂತರ ನಗರದ ವಿನ್ಯಾಸ ಹೀಗಿದೆ: ಪರಿಪೂರ್ಣ ಚಚ್ಚೌಕ. ಸೊಲೊಮೋನನ ದೇವಾಲಯದಲ್ಲಿ, ಯೆಹೋವನ ಸಾನ್ನಿಧ್ಯದ ಸಾಂಕೇತಿಕ ಪ್ರತಿನಿಧಿತ್ವವು ಇದ್ದ ಮಹಾ ಪವಿತ್ರ ಸ್ಥಾನವು, ಒಂದು ಪರಿಪೂರ್ಣ ಚಚ್ಚೌಕವಾಗಿತ್ತು. (1 ಅರಸುಗಳು 6:19, 20) ಹಾಗಾದರೆ, ಸ್ವತಃ ಯೆಹೋವನ ಮಹಿಮೆಯಿಂದ ಪ್ರಜ್ವಲಿಸುವ ಹೊಸ ಯೆರೂಸಲೇಮ್‌ ಒಂದು ಪರಿಪೂರ್ಣ, ಮಹಾ ಮಟ್ಟದ ಚಚ್ಚೌಕದಲ್ಲಿ ಕಾಣಲ್ಪಡುವುದು ಎಷ್ಟೊಂದು ತಕ್ಕದಾಗಿದೆ! ಅದರ ಎಲ್ಲಾ ಅಳತೆಗಳು ಪರಿಪೂರ್ಣವಾಗಿ ಸಮತೂಕದಲ್ಲಿವೆ. ಯಾವುದೇ ಅಕ್ರಮಗಳು ಯಾ ನ್ಯೂನತೆಗಳು ಇಲ್ಲದ ಒಂದು ನಗರ ಅದಾಗಿದೆ.—ಪ್ರಕಟನೆ 21:22.

  • ಬಹಳ ಪ್ರಕಾಶಮಾನವಾದ ಪಟ್ಟಣ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • a  ಇಲ್ಲಿ ಉಪಯೋಗಿಸಲ್ಪಟ್ಟ ಅಳತೆಯು “ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ” ಎಂಬ ವಾಸ್ತವಾಂಶವು ನಗರವು, ಮೂಲತಃ ಮಾನವರಾಗಿದ್ದ ಆದರೆ ದೇವದೂತರ ನಡುವೆ ಆತ್ಮ ಜೀವಿಗಳಾಗುವ 1,44,000 ಮಂದಿಯಿಂದ ಮಾಡಲ್ಪಟ್ಟಿದೆ ಎಂಬ ವಾಸ್ತವಾಂಶದೊಂದಿಗೆ ಸೇರಿರಬಹುದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ