ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜಯಶಾಲಿಗಳಾಗಲು ಹೆಣಗಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 3. (ಎ) ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಯೇಸುವು ಯಾವ ಪ್ರೋತ್ಸಾಹವನ್ನು ಕೊಟ್ಟನು? (ಬಿ) ಸ್ಮುರ್ನದಲ್ಲಿರುವ ಕ್ರೈಸ್ತರು ಬಡವರಾದರೂ, ಅವರು “ಐಶ್ವರ್ಯವಂತರು” ಎಂದು ಯೇಸು ಹೇಳಿದ್ದು ಯಾಕೆ?

      3 “ನಾನು ನಿನ್ನ ಸಂಕಟವನ್ನು ಮತ್ತು ಬಡತನವನ್ನು—ಆದರೆ ನೀನು ಐಶ್ವರ್ಯವಂತನು—ಮತ್ತು ಯೆಹೂದ್ಯರು ತಾವೇ ಎಂದು ಹೇಳಿಕೊಳ್ಳುವವರ ದೇವದೂಷಣೆಯನ್ನು ಬಲ್ಲೆನು, ಆದರೂ ಅವರು ಹಾಗಲ್ಲ, ಅವರು ಸೈತಾನನ ಸಭಾಮಂದಿರವಾಗಿದ್ದಾರೆ.” (ಪ್ರಕಟನೆ 2:9, NW) ಸ್ಮುರ್ನದಲ್ಲಿರುವ ತನ್ನ ಸಹೋದರರಿಗಾಗಿ ಯೇಸುವಿನಲ್ಲಿ ಕೇವಲ ಉತ್ಸಾಹದ ಶ್ಲಾಘನೆಯಿತ್ತೇ ಹೊರತು ಟೀಕೆ ಇರಲಿಲ್ಲ. ಅವರ ನಂಬಿಕೆಯ ಕಾರಣ ಅವರು ಅಧಿಕವಾದ ಸಂಕಟದ ಬಾಧೆಗೊಳಗಾಗಿದ್ದರು. ಪ್ರಾಪಂಚಿಕವಾಗಿ ಅವರು ಬಡವರಾಗಿದ್ದಾರೆ, ಪ್ರಾಯಶಃ ಅವರ ನಂಬಿಗಸ್ತಿಕೆಯ ಕಾರಣದಿಂದ. (ಇಬ್ರಿಯ 10:34) ಆದಾಗ್ಯೂ, ಅವರ ಮುಖ್ಯ ಆಸಕ್ತಿಯು ಆತ್ಮಿಕ ಸಂಗತಿಗಳಾಗಿದ್ದವು, ಮತ್ತು ಯೇಸುವು ಸಲಹೆಯನ್ನಿತ್ತಂತೆ, ಅವರು ಪರಲೋಕದಲ್ಲಿ ತಮ್ಮ ಐಶ್ವರ್ಯವನ್ನು ಶೇಖರಿಸಿದ್ದರು. (ಮತ್ತಾಯ 6:19, 20) ಆದಕಾರಣ, ಮುಖ್ಯ ಕುರುಬನು ಅವರನ್ನು “ಐಶ್ವರ್ಯವಂತ” ರಾಗಿ ವೀಕ್ಷಿಸುತ್ತಾನೆ.—ಹೋಲಿಸಿರಿ ಯಾಕೋಬ 2:5.

      4. ಸ್ಮುರ್ನದ ಕ್ರೈಸ್ತರು ಯಾರಿಂದ ಹೆಚ್ಚಾಗಿ ವಿರೋಧವನ್ನು ಪಡೆದರು, ಮತ್ತು ಆ ವಿರೋಧಕರನ್ನು ಯೇಸುವು ಹೇಗೆ ವೀಕ್ಷಿಸಿದನು?

      4 ಮಾಂಸಿಕ ಯೆಹೂದ್ಯರ ಹಸ್ತಗಳಿಂದ ಸ್ಮುರ್ನದಲ್ಲಿರುವ ಕ್ರೈಸ್ತರು ಬಹಳಷ್ಟು ವಿರೋಧವನ್ನು ಸಹಿಸಿಕೊಳ್ಳಬೇಕಾಯಿತು ಎಂಬುದನ್ನು ಯೇಸುವು ವಿಶೇಷವಾಗಿ ಗಮನಿಸುತ್ತಾನೆ. ಮುಂಚಿನ ದಿನಗಳಲ್ಲಿ ಕ್ರೈಸ್ತತ್ವದ ಹಬ್ಬುವಿಕೆಯನ್ನು ಈ ಧರ್ಮದ ಅನೇಕರು ದೃಢತೆಯಿಂದ ವಿರೋಧಿಸಿದರು. (ಅ. ಕೃತ್ಯಗಳು 13:44, 45; 14:19) ಈಗ, ಯೆರೂಸಲೇಮಿನ ಪತನದ ಕೆಲವೇ ದಶಕಗಳಾನಂತರ, ಸ್ಮುರ್ನದಲ್ಲಿನ ಈ ಯೆಹೂದ್ಯರು ಅದೇ ರೀತಿಯ ಸೈತಾನನ ಆತ್ಮವನ್ನು ತೋರಿಸುತ್ತಿದ್ದಾರೆ. ಅವರನ್ನು “ಸೈತಾನನ ಸಭಾಮಂದಿರ” ಎಂದು ಯೇಸುವು ವೀಕ್ಷಿಸುವುದರಲ್ಲಿ ಅಚ್ಚರಿಯೇನೂ ಇಲ್ಲ!a

  • ಜಯಶಾಲಿಗಳಾಗಲು ಹೆಣಗಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • a  ಯೋಹಾನನು ಮೃತನಾಗಿ ಸುಮಾರು 60 ವರ್ಷಗಳಾನಂತರ, 86 ವರ್ಷ ಪ್ರಾಯದ ಪಾಲಿಕಾರ್ಪನು ಸ್ಮುರ್ನದಲ್ಲಿ ಬೆಂಕಿಯಲ್ಲಿ ಸುಡಲ್ಪಟ್ಟು ಕೊಲ್ಲಲ್ಪಟ್ಟನು ಯಾಕಂದರೆ ಅವನು ಯೇಸುವಿನ ಮೇಲಿನ ಅವನ ನಂಬಿಕೆಯನ್ನು ನಿರಾಕರಿಸಲು ಒಪ್ಪಲಿಲ್ಲ. ಈ ಘಟನೆಯೊಂದಿಗೆ ಸಮಕಾಲೀನವಾಗಿದ್ದ ಕೃತಿಯೆಂದು ಎಣಿಸಲ್ಪಡುವ ದ ಮಾರ್ಟರ್‌ಡಮ್‌ ಆಫ್‌ ಪಾಲಿಕಾರ್ಪ್‌ (ಪಾಲಿಕಾರ್ಪನ ಧರ್ಮಬಲಿ) ಎಂಬುದರಲ್ಲಿ ಹೇಳುವದೇನಂದರೆ ಸುಡಲು ಕಟ್ಟಿಗೆಯನ್ನು ಒಟ್ಟುಗೂಡಿಸುತ್ತಾ ಇರುವಾಗ, ಈ ಹತಿಸುವಿಕೆಯು “ಒಂದು ಮಹಾ ಸಬ್ಬತ್‌ ದಿನದಲ್ಲಿ” ನಡೆಯಿತಾದರೂ ಕೂಡ, “ಇದರಲ್ಲಿ ಸಹಾಯ ಕೊಡುವುದರಲ್ಲಿ ಯೆಹೂದ್ಯರು, ಅವರ ಅಭ್ಯಾಸದ ಪ್ರಕಾರ, ಬಹಳ ಉತ್ಸುಕರಾಗಿದ್ದರು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ