ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 73
  • ಹೃದಯದಾಳದಿಂದ ಪ್ರೀತಿಸಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೃದಯದಾಳದಿಂದ ಪ್ರೀತಿಸಿರಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • “ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
    ಎಚ್ಚರಿಕೆಯಿಂದಿರಿ!
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • “ಪ್ರೀತಿಯಲ್ಲಿ ನಡೆದುಕೊಳ್ಳಿರಿ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 73

ಗೀತೆ 73

ಹೃದಯದಾಳದಿಂದ ಪ್ರೀತಿಸಿರಿ

(1 ಪೇತ್ರ 1:22)

1. ಪ್ರೀತಿಯ ಉಗಮ ಸ್ಥಾನ

ಅದೆಮ್ಮ ಹೃದಯದಾಳ;

ತೋರಿಸುತೆ ಅನುತಾಪ

ಸೋದರರಿಗೆಲ್ಲ.

ನಮ್ಮಲ್ಲಿರುವ ಪ್ರೀತಿಯ

ಸುವ್ಯಕ್ತಪಡಿಸುವಾಗ,

ತೋರಿಸುತ್ತೇವೆ ದೇವರ

ದಾನಶೀಲತೆಯ.

ನಡೆನುಡೀಲಿ ಪ್ರೀತಿ

ತೋರಿಸುತ್ತ ದಾನಿಗಳಾಗಿ,

ಸಜ್ಜನಿಕೆಗೆ ಅತಿ

ಮಹತ್ವ ಕೊಡುವೆವು.

ಸನ್ಮಾನ, ಪರಚಿಂತನೆ

ಇವನ್ನು ತೋರಿಸುವೆವು.

ಸೋದರ ದ್ರೋಹ ಮಾಡದೆ

ನಿಷ್ಠೆ, ಐಕ್ಯಗಳನ್ನು

ಕಾಪಾಡಿಕೊಳ್ಳುವೆವು.

2. ಶುದ್ಧ ಪ್ರೀತಿ ನಮ್ಮಲ್ಲಿರೆ

ನೊಂದುಕೊಳ್ಳೆವು ಬೇಗನೆ,

ನಮಗಿದೆ ಭರವಸೆ

ಸಹೋದರರಲ್ಲಿ.

ನಿಷ್ಠಾ ಸ್ನೇಹವ ಬೆಳೆಸಿ

ಇತರರ ಮಾನ್ಯ ಮಾಡಿ,

ಕೂಟವಾಗಿ ಕೂಡುತ್ತಿದ್ದು

ಬಲಗೊಳ್ಳುವೆವು.

ನಾವೂ ತಪ್ಪಿ ಬೀಳುತ್ತ

ಮನನೋಯಿಸುವುದ ಬಿಟ್ಟು,

ದೇವರ ಪ್ರಿಯರಿಗೆ

ತೋರಿಸುವೆವು ಪ್ರೀತಿ.

ನಿಜ ಸಂಗಾತಿಗಳಾಗಿ

ಜೀವಿಸುವೆವು ಐಕ್ಯದಿ.

ಪ್ರೀತಿಯೇ ನಿಮ್ಮ ಗುರುತು,

ಯೆಹೋವನ ಪ್ರೀತಿಯ

ಅನುಕರಿಸಿ ಸದಾ.

(1 ಪೇತ್ರ 2:17; 3:8; 4:8; 1 ಯೋಹಾ. 3:11 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ