-
ತೋಟದಲ್ಲಿ ಸಂಕಟಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 117
ತೋಟದಲ್ಲಿ ಸಂಕಟ
ಯೇಸುವು ಪ್ರಾರ್ಥನೆಯನ್ನು ಮುಗಿಸಿದ ನಂತರ, ಅವನೂ, ಅವನ 11 ಮಂದಿ ನಂಬಿಗಸ್ತ ಅಪೊಸ್ತಲರೂ ಯೆಹೋವನಿಗೆ ಕೀರ್ತನೆಗಳನ್ನು ಹಾಡುತ್ತಾರೆ. ಅನಂತರ ಅವರು ಮೇಲಂತಸ್ತಿನ ಕೋಣೆಯಿಂದ ಇಳಿದು, ರಾತ್ರಿಯ ತಣ್ಣಗಿನ ಕತ್ತಲಲ್ಲಿ ಸೇರುತ್ತಾರೆ ಮತ್ತು ಬೇಥಾನ್ಯಕ್ಕೆ ಹೋಗಲು ಕಿದ್ರೋನ್ ಹಳ್ಳದ ಆಚೆಗೆ ಹೊರಟು ಹೋಗುತ್ತಾರೆ. ಆದರೆ ದಾರಿಯಲ್ಲಿ ಅವರು ಒಂದು ಮೆಚ್ಚಿನ ಸ್ಥಳವಾದ, ಗೆತ್ಸೇಮನೆ ತೋಟದಲ್ಲಿ ತಂಗುತ್ತಾರೆ. ಇದು ಎಣ್ಣೇಮರಗಳ ಗುಡ್ಡದ ಮೇಲೆ ಯಾ ಅದರ ಪರಿಸರದಲ್ಲಿ ಇತ್ತು. ಯೇಸುವು ತನ್ನ ಅಪೊಸ್ತಲರೊಂದಿಗೆ ಆಗಾಗ್ಯೆ ಇಲ್ಲಿ ಎಣ್ಣೇಮರಗಳ ನಡುವೆ ಒಟ್ಟು ಸೇರುತ್ತಿದ್ದನು.
ಅಪೊಸ್ತಲರಲ್ಲಿ ಎಂಟು ಮಂದಿಯನ್ನು—ಪ್ರಾಯಶಃ ತೋಟದ ಪ್ರವೇಶ ದ್ವಾರದ ಹತ್ತಿರ—ಬಿಟ್ಟು, ಅವರಿಗೆ ಹೀಗೆ ಹೇಳುತ್ತಾನೆ: “ಇಲ್ಲೇ ಕೂತುಕೊಳ್ಳಿರಿ, ನಾನು ಅತಲ್ತಾಗಿ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇನೆ.” ಅನಂತರ ಅವನು ಉಳಿದ ಮೂವರನ್ನು—ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತೆಗೆದು ಕೊಂಡು ತೋಟದಲ್ಲಿ ಇನ್ನಷ್ಟು ಒಳಗೆ ಹೋಗುತ್ತಾನೆ. ಯೇಸುವು ದುಃಖ ಪಟ್ಟು ಮನಗುಂದಿದವನಾದನು. “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ,” ಎಂದು ಅವನು ಅವರಿಗೆ ಹೇಳುತ್ತಾನೆ, “ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ.”
ಇನ್ನು ಸ್ವಲ್ಪ ಮುಂದೆ ಹೋಗಿ, ಯೇಸುವು ನೆಲದ ಮೇಲೆ ಬೋರಲ ಬಿದ್ದು, ತೀವ್ರಾಸಕಿಯ್ತಿಂದ ಪ್ರಾರ್ಥಿಸಲು ಆರಂಭಿಸುತ್ತಾನೆ: “ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” ಅವನ ಅರ್ಥವೇನು? ಅವನ “ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾದದ್ದು” ಯಾಕೆ? ಮರಣ ಪಡುವ ಮತ್ತು ವಿಮೋಚನೆಯನ್ನು ಒದಗಿಸುವ ತನ್ನ ನಿರ್ಧಾರದಲ್ಲಿ ಅವನು ಹಿಮ್ಮೆಟ್ಟುತ್ತಾನೋ?
ಎಂದೆಂದಿಗೂ ಇಲ್ಲ! ಮರಣದಿಂದ ತನ್ನನ್ನು ಉಳಿಸಲು ಯೇಸುವು ಇಲ್ಲಿ ಭಿನ್ನಹ ಮಾಡುವದಲ್ಲ. ಒಮ್ಮೆ ಪೇತ್ರನಿಂದ ಸೂಚಿಸಲ್ಪಟ್ಟ, ಒಂದು ಯಜ್ಞಾರ್ಪಿತ ಮರಣವನ್ನು ಹೋಗಲಾಡಿಸುವ ಯೋಚನೆಯು ಕೂಡ, ಅವನಿಗೆ ಹೇಯಕರವಾಗಿತ್ತು. ಬದಲಾಗಿ ಅವನು ಸಂಕಟದಲ್ಲಿದ್ದನು, ಯಾಕಂದರೆ ಅವನು ಬೇಗನೆ ಸಾಯಲಿರುವ ವಿಧವು—ಒಬ್ಬ ಅಧಮನಾದ ಪಾತಕಿಯಂತೆ—ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುತ್ತದೋ ಎಂದು ಅವನು ಭಯಪಟ್ಟನು. ಮನುಷ್ಯರಲ್ಲಿ ಒಬ್ಬ ಅತೀ ಕೆಡುಕನೋಪಾದಿ—ದೇವರ ವಿರುದ್ಧ ದೇವನಿಂದಕನೋಪಾದಿ ಇನ್ನು ಕೆಲವೇ ತಾಸುಗಳಲ್ಲಿ ಅವನು ವಧಾಸ್ತಂಭದ ಮೇಲೆ ತೂಗಲ್ಪಡಲಿದ್ದನು ಎಂಬುದನ್ನು ಅವನು ಈಗ ತಿಳಿಯುತ್ತಾನೆ! ಅದು ಅವನನ್ನು ಬಹಳಷ್ಟು ಕಠಿಣವಾಗಿ ದುಃಖಕ್ಕೀಡುಮಾಡುತ್ತದೆ.
ದೀರ್ಘ ಸಮಯ ಪ್ರಾರ್ಥಿಸಿದ ನಂತರ, ಯೇಸುವು ಹಿಂತೆರಳಿದಾಗ ತನ್ನ ಮೂವರು ಅಪೊಸ್ತಲರು ನಿದ್ರಿಸುವುದನ್ನು ಕಾಣುತ್ತಾನೆ. ಪೇತ್ರನನ್ನು ಸಂಬೋಧಿಸುತ್ತಾ, ಅವನನ್ನುವದು: “ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ.” ಆದಾಗ್ಯೂ, ಒತ್ತಡದ ಕೆಳಗೆ ಅವರಿರುವದನ್ನು ಮತ್ತು ರಾತ್ರಿ ಬಹಳ ಕಳೆದಿರುವದನ್ನು ಅಂಗೀಕರಿಸುತ್ತಾ, ಅವನು ಹೇಳುವದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.”
ಅನಂತರ ಯೇಸುವು ಎರಡನೆಯ ಬಾರಿ ಹೋಗುತ್ತಾನೆ ಮತ್ತು “ಈ ಪಾತ್ರೆ” ಯನ್ನು ಅಂದರೆ ಅವನಿಗಾಗಿ ಯೆಹೋವನಿಂದ ನೇಮಿತವಾದ ಪಾಲನ್ನು ಅಥವಾ ಚಿತ್ತವನ್ನು, ಅವನಿಂದ ದೇವರು ತೆಗೆಯುವಂತೆ ವಿಜ್ಞಾಪಿಸುತ್ತಾನೆ. ಅವನು ಹಿಂತೆರಳಿದಾಗ, ಈ ಮೂವರು, ತಾವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸುವ ಬದಲಿಗೆ ಪುನಃ ನಿದ್ರಿಸುವದನ್ನು ಕಾಣುತ್ತಾನೆ. ಯೇಸುವು ಅವರಿಗೆ ಮಾತಾಡಿದಾಗ, ಏನು ಉತ್ತರ ಕೊಡುವದೆಂದು ಅವರು ತಿಳಿಯದಾದರು.
ಕಟ್ಟಕಡೆಗೆ, ಮೂರನೆಯ ಬಾರಿ, ಅವನು ಕಲ್ಲೆಸುಗೆಯಷ್ಟು ದೂರ ಹೋಗಿ, ಮೊಣಕಾಲೂರಿ, ಬಲವಾಗಿ ಕೂಗುತ್ತಾ, ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥಿಸುತ್ತಾನೆ: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಒಬ್ಬ ಪಾತಕಿಯೋಪಾದಿ ಅವನ ಮರಣವು ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುವ ಕಾರಣ ಯೇಸುವು ತೀವ್ರವಾದ ನೋವನ್ನು ಅನುಭವಿಸಿದನು. ಯಾಕೆ, ದೇವದೂಷಕನು—ದೇವರನ್ನು ಶಪಿಸುವವನು—ಎಂಬ ಆಪಾದನೆಯನ್ನು ತಾಳಿಕೊಳ್ಳಲು ಬಹಳ ಹೆಚ್ಚಾಗಿತ್ತು!
ಆದಾಗ್ಯೂ, ಯೇಸುವು ಪ್ರಾರ್ಥಿಸುವದನ್ನು ಮುಂದರಿಸುತ್ತಾನೆ: “ಹೇಗೂ ನನ್ನ ಚಿತ್ತವಲ್ಲ. ನಿನ್ನ ಚಿತ್ತವೇ ಆಗಲಿ.” ದೇವರ ಚಿತ್ತಕ್ಕೆ ಯೇಸುವು ವಿಧೇಯತೆಯಿಂದ ಅಧೀನನಾಗುತ್ತಾನೆ. ಈ ಸಮಯದಲ್ಲಿ ಪರಲೋಕದಿಂದ ದೇವದೂತನೊಬ್ಬನು ಕಾಣಿಸಿಕೊಳ್ಳುತ್ತಾನೆ ಮತ್ತು ಕೆಲವು ಧೈರ್ಯದಾಯಕ ಮಾತುಗಳಿಂದ ಅವನನ್ನು ಬಲಪಡಿಸುತ್ತಾನೆ. ಅವನ ತಂದೆಯ ಪ್ರಸನ್ನತೆಯ ಸಮ್ಮತಿ ಇದೆ ಎಂದು ಯೇಸುವಿಗೆ ದೇವದೂತನು ಪ್ರಾಯಶಃ ಹೇಳಿರಬಹುದು.
ಆದರೂ, ಯೇಸುವಿನ ಭುಜಗಳ ಮೇಲೆ ಎಂಥ ಭಾರವಿತ್ತು! ಅವನ ಸ್ವಂತ ನಿತ್ಯ ಜೀವ ಮತ್ತು ಇಡೀ ಮಾನವ ಕುಲದ ನಿತ್ಯ ಜೀವವು ಅನಿಶ್ಚಿತ ಸ್ಥಿತಿಯಲ್ಲಿತ್ತು. ಭಾವನಾತ್ಮಕ ಒತ್ತಡವು ಭಾರೀ ಪ್ರಮಾಣದ್ದಾಗಿತ್ತು. ಆದುದರಿಂದ ಯೇಸು ತೀವ್ರ ಆಸಕ್ತಿಯಿಂದ ಪ್ರಾರ್ಥಿಸುತ್ತಿರುವದನ್ನು ಮುಂದರಿಸುತ್ತಾನೆ ಮತ್ತು ಅವನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿ ಇತ್ತು. “ಇದು ಒಂದು ಬಹಳ ವಿರಳವಾದ ಪ್ರಕೃತಿ ಘಟನೆಯಾಗಿರುವದಾದರೂ,” ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಎಸೋಸಿಯೇಶನ್ ಅವಲೋಕಿಸುವದು, “ರಕ್ತದ ಬೆವರು . . . ಉಚ್ಛಮಟ್ಟದ ಭಾವನಾವೇಶದ ಸ್ಥಿತಿಯಲ್ಲಿ ಸಂಭವಿಸಬಹುದು.”
ಅನಂತರ ಯೇಸುವು ಮೂರನೆಯ ಸಲ ಅಪೊಸ್ತಲರ ಬಳಿಗೆ ಹಿಂತೆರಳಿದಾಗ, ಅವರು ಪುನಃ ನಿದ್ದೆ ಮಾಡುವದನ್ನು ಕಂಡನು. ಅವರು ಬಹಳ ವ್ಯಥೆಯಿಂದ ಬಳಲಿದ್ದರು. “ಇಂಥಹ ಸಮಯದಲ್ಲಿ, ನೀವು ಇನ್ನೂ ನಿದ್ದೆ ಮಾಡಿ ದಣುವಾರಿಸಿಕೊಳ್ಳುತ್ತೀರಿ!” ಎಂದು ಅವನು ಹೇಳುತ್ತಾನೆ. “ಸಾಕು! ಆ ಗಳಿಗೆ ಬಂತು! ಇಗೋ, ಮನುಷ್ಯ ಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ. ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ, ನೋಡಿರಿ.”
ಅವನು ಇನ್ನೂ ಮಾತಾಡುತ್ತಿರುವಾಗಲೇ, ಇಸ್ಕರಿಯೋತ ಯೂದನು ಸಮೀಪಿಸುತ್ತಾನೆ, ಅವನೊಂದಿಗೆ ದೀವಿಟಿಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದಿರುವ ಒಂದು ದೊಡ್ಡ ಜನರ ಗುಂಪು ಇತ್ತು. ಮತ್ತಾಯ 26:30, 36-47; 16:21-23; ಮಾರ್ಕ 14:26, 32-43; ಲೂಕ 22:39-47; ಯೋಹಾನ 18:1-3; ಇಬ್ರಿಯ 5:7.
▪ ಮೇಲಂತಸ್ತಿನ ಕೋಣೆಯನ್ನು ಬಿಟ್ಟು ಹೊರಟು ಬಂದ ನಂತರ ಯೇಸುವು ಅಪೊಸ್ತಲರನ್ನು ಎಲ್ಲಿಗೆ ನಡಿಸುತ್ತಾನೆ, ಮತ್ತು ಅಲ್ಲಿ ಅವನು ಏನು ಮಾಡುತ್ತಾನೆ?
▪ ಯೇಸುವು ಪ್ರಾರ್ಥಿಸುತ್ತಿರುವಾಗ, ಅಪೊಸ್ತಲರು ಏನು ಮಾಡುತ್ತಾರೆ?
▪ ಯೇಸುವು ಸಂಕಟ ಪಡುವದು ಯಾಕೆ, ಮತ್ತು ಅವನು ದೇವರಿಗೆ ಯಾವ ಭಿನ್ನಹವನ್ನು ಮಾಡುತ್ತಾನೆ?
▪ ಯೇಸುವಿನ ಬೆವರು ರಕ್ತದ ಹನಿಗಳೋಪಾದಿ ಆಗುವದು ಏನನ್ನು ಸೂಚಿಸುತ್ತದೆ?
-
-
ಹಿಡುಕೊಡುವಿಕೆ ಮತ್ತು ಕೈದುಮಾಡುವಿಕೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 118
ಹಿಡುಕೊಡುವಿಕೆ ಮತ್ತು ಕೈದುಮಾಡುವಿಕೆ
ಯೂದನು ಸೈನಿಕರ, ಮಹಾ ಯಾಜಕರ, ಫರಿಸಾಯರ ಮತ್ತು ಇತರರ ಒಂದು ದೊಡ್ಡ ಗುಂಪನ್ನು ಗೆತ್ಸೇಮನೆ ತೋಟದೊಳಗೆ ನಡಿಸಿದಾಗ, ಮಧ್ಯ ರಾತ್ರಿ ಕಳೆದಿತ್ತು. ಯೇಸುವನ್ನು ಹಿಡುಕೊಡಲು ಯೂದನಿಗೆ 30 ಬೇಳ್ಳಿ ನಾಣ್ಯಗಳನ್ನು ಕೊಡುತ್ತೇವೆಂದು ಯಾಜಕರು ಒಪ್ಪಿದ್ದರು.
ಈ ಮುಂಚೆ ಪಸ್ಕ ಹಬ್ಬದ ಊಟದ ನಂತರ ಯೂದನನ್ನು ಬಿಟ್ಟುಹೋಗುವಂತೆ ಹೇಳಿದ ಮೇಲೆ, ಅವನು ನೇರವಾಗಿ ಮಹಾ ಯಾಜಕರ ಬಳಿಗೆ ಹೋಗಿದ್ದನು ಎಂದು ತಿಳಿಯುತ್ತದೆ. ಇವರು ಬಲುಬೇಗನೇ ತಮ್ಮ ಸ್ವಂತ ಅಧಿಕಾರಿಗಳನ್ನು ಮತ್ತು ಸೈನಿಕರ ಒಂದು ದಳವನ್ನು ಒಟ್ಟುಗೂಡಿಸಿದರು. ಬಹುಶಃ ಯೂದನು ಮೊದಲು ಅವರನ್ನು ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸುವ ಸ್ಥಳಕ್ಕೆ ನಡಿಸಿದಿರ್ದಬಹುದು. ಅವರು ಅಲ್ಲಿಂದ ತೆರಳಿದ್ದಾರೆಂದು ಕಂಡುಕೊಂಡಾದ ನಂತರ, ಆಯುಧಗಳನ್ನು, ದೀವಟಿಗಳನ್ನು ಮತ್ತು ಪಂಜುಗಳನ್ನು ಹಿಡಿದುಕೊಂಡು ಬರುತ್ತಿದ್ದ ಈ ದೊಡ್ಡ ಗುಂಪು, ಯೂದನನ್ನು ಯೆರೂಸಲೇಮ್‌ನಿಂದ ಹೊರಗಡೆ, ಕಿದ್ರೋನ್ ಹಳ್ಳದ ಆಚೆಗೆ ಹಿಂಬಾಲಿಸಿತು.
ಯೇಸುವನ್ನು ಎಲ್ಲಿ ಕಂಡುಕೊಳ್ಳಬಹುದು ಎಂಬ ನಿಶ್ಚಿತ ಭಾವದಿಂದ, ಯೂದನು ಎಣ್ಣೇಮರಗಳ ಗುಡ್ಡದ ಮೇಲೆ ತಂಡವನ್ನು ಕೊಂಡೊಯ್ಯುತ್ತಿದ್ದನು. ಕಳೆದ ವಾರದಲ್ಲಿ ಯೇಸುವು ಮತ್ತು ಅಪೊಸ್ತಲರು ಬೇಥಾನ್ಯ ಮತ್ತು ಯೆರೂಸಲೇಮಿನ ನಡುವೆ ಹಿಂದೆ ಮುಂದೆ ಸಂಚರಿಸುತ್ತಿದ್ದರಿಂದ, ಅವರು ವಿಶ್ರಾಂತಿ ಪಡೆಯಲು ಮತ್ತು ಸಂಭಾಷಣೆ ನಡಿಸಲು ಆಗಾಗ್ಯೆ ಗೆತ್ಸೇಮನೆ ತೋಟದಲ್ಲಿ ತಂಗುತ್ತಿದ್ದರು. ಆದರೆ, ಈಗ, ಎಣ್ಣೇಮರಗಳ ಕೆಳಗೆ ಕತ್ತಲೆಯಲ್ಲಿ ಯೇಸುವು ಪ್ರಾಯಶಃ ಮರೆಯಾಗಿದ್ದುದರಿಂದ, ಸೈನಿಕರು ಅವನ ಗುರುತನ್ನು ಮಾಡುವದು ಹೇಗೆ? ಅವರು ಅವನನ್ನು ಈ ಮುಂಚೆ ಎಂದೂ ನೋಡಿರಲಿಕ್ಕಿಲ್ಲ. ಆದುದರಿಂದ ಯೂದನು ಒಂದು ಸಂಕೇತವನ್ನು ಕೊಡುತ್ತಾ, ಹೇಳುವದು: “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ.”
ಯೂದನು ದೊಡ್ಡ ಗುಂಪನ್ನು ತೋಟದೊಳಗೆ ನಡಿಸುತ್ತಾನೆ, ಅಲ್ಲಿ ಯೇಸುವನ್ನು ಅವನ ಅಪೊಸ್ತಲರೊಂದಿಗೆ ಕಂಡುಕೊಳ್ಳುತ್ತಾನೆ ಮತ್ತು ನೇರವಾಗಿ ಅವನ ಬಳಿಗೆ ಹೋಗುತ್ತಾನೆ. “ಗುರುವೇ, ನಮಸ್ಕಾರ,” ಎಂದವನು ಹೇಳುತ್ತಾನೆ ಮತ್ತು ಅವನನ್ನು ಮೃದುವಾಗಿ ಮುದ್ದಿಡುತ್ತಾನೆ.
“ಗೆಳೆಯನೇ, ನೀನು ಬಂದ ಕೆಲಸ ಇದೇಯೋ?” ಯೇಸುವು ಎದುರುತ್ತರ ಕೊಡುತ್ತಾನೆ. ಅನಂತರ, ಅವನ ಸ್ವಂತ ಪ್ರಶ್ನೆಗೆ ಉತ್ತರವನ್ನೀಯುತ್ತಾ, ಅವನಂದದ್ದು: “ಯೂದನೇ, ಮುದ್ದಿಟ್ಟು ಮನುಷ್ಯ ಕುಮಾರನನ್ನು ಹಿಡುಕೊಡುತ್ತೀಯಾ?” ಆದರೆ ಅವನನ್ನು ಹಿಡುಕೊಟ್ಟವನ ಕುರಿತು ಅಷ್ಟೇ ಸಾಕು! ಯೇಸುವು ಈಗ ಉರಿಯುತ್ತಿರುವ ಪಂಜುಗಳ ಮತ್ತು ದೀವಟಿಗಳ ಪ್ರಕಾಶಕ್ಕೆ ಬರಲು ಮುಂದಡಿಯಿಡುತ್ತಾನೆ ಮತ್ತು ಕೇಳುತ್ತಾನೆ: “ನೀವು ಯಾರನ್ನು ಹುಡುಕುತ್ತೀರಿ?”
“ನಜರೇತಿನ ಯೇಸುವನ್ನು ಹುಡುಕುತ್ತೇವೆ,” ಎಂದು ಉತ್ತರ ಬರುತ್ತದೆ.
“ನಾನೇ ಅವನು,” ಯೇಸುವು ಉತ್ತರಿಸುತ್ತಾ, ಅವರೆಲ್ಲರ ಮುಂದೆ ಧೈರ್ಯದಿಂದ ನಿಲ್ಲುತ್ತಾನೆ. ಅವನ ಧೈರ್ಯದಿಂದ ಬೆರಗಾಗಿ, ಏನು ನಿರೀಕ್ಷಿಸಬಹುದು ಎಂದು ತಿಳಿಯದೆ, ಅವರು ಹಿಂದಕ್ಕೆ ಸರಿದು, ನೆಲದ ಮೇಲೆ ಬಿದ್ದರು.
“ನಾನೇ ಅವನೆಂದು ನಿಮಗೆ ಹೇಳಿದೆನಲ್ಲಾ,” ಯೇಸುವು ಶಾಂತತೆಯಿಂದ ಮುಂದುವರಿಸುತ್ತಾನೆ. “ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ.” ಸ್ವಲ್ಪ ಸಮಯದ ಮೊದಲು, ಮೇಲಂತಸ್ತಿನ ಕೋಣೆಯಲ್ಲಿ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ, ಅವನು ತನ್ನ ನಂಬಿಗಸ್ತ ಅಪೊಸ್ತಲರನ್ನು ಕಾಪಾಡಿದ್ದಾನೆಂದೂ, “ನಾಶಕ್ಕೆ ಗುರಿಯಾದ ಮನುಷ್ಯನ ಹೊರತಾಗಿ” ಮತ್ತಾರೂ ನಾಶವಾಗಲಿಲ್ಲ ಎಂದೂ ಅವನು ಹೇಳಿದ್ದನು. ಆದುದರಿಂದ, ಅವನ ಮಾತು ನೆರವೇರುವಂತೆ, ಅವನ ಹಿಂಬಾಲಕರನ್ನು ಹೋಗಗೊಡುವಂತೆ ಅವನು ಕೇಳುತ್ತಾನೆ.
ಈಗ ಸೈನಿಕರು ತಮ್ಮ ಚಿತ್ತಸ್ವ್ಯಾಸ್ಥವನ್ನು ಮರಳಿ ಪಡೆದರು, ಎದ್ದು ನಿಂತರು ಮತ್ತು ಯೇಸುವನ್ನು ಬಂಧಿಸಿದರು, ಆಗ ಅಪೊಸ್ತಲರಿಗೆ ಸಂಭವಿಸುತ್ತಿರುವದೇನು ಎಂಬ ಅರಿವಾಯಿತು. “ಸ್ವಾಮೀ, ನಾವು ಕತ್ತಿಯಿಂದ ಹೊಡೆಯೋಣೋವೂ?” ಅವರು ಕೇಳುತ್ತಾರೆ. ಯೇಸುವು ಉತ್ತರಿಸುವ ಮೊದಲೇ, ಅಪೊಸ್ತಲರು ತಂದಿದ್ದ ಎರಡು ಕತ್ತಿಗಳಲ್ಲಿ ಒಂದನ್ನು ಹಿಡಿದುಕೊಂಡಿದ್ದ ಪೇತ್ರನು, ಮಲ್ಕನೆಂಬ ಮಹಾ ಯಾಜಕನ ಆಳನ್ನು ಹೊಡೆಯುತ್ತಾನೆ. ಪೇತ್ರನ ಹೊಡೆತವು ಆಳಿನ ತಲೆಯನ್ನು ತಪ್ಪುತ್ತದಾದರೂ, ಅವನ ಬಲಗಿವಿಯನ್ನು ಕತ್ತರಿಸಿ ಹಾಕುತ್ತದೆ.
“ಇಷ್ಟಕ್ಕೇ ಬಿಡಿರಿ,” ಎಂದು ಯೇಸುವು ಹೇಳುತ್ತಾ, ಮಧ್ಯ ಪ್ರವೇಶಿಸುತ್ತಾನೆ. ಮಲ್ಕನ ಕಿವಿಯನ್ನು ಮುಟ್ಟಿ ಅವನ ಗಾಯವನ್ನು ವಾಸಿಮಾಡುತ್ತಾನೆ. ತದನಂತರ ಒಂದು ಪ್ರಾಮುಖ್ಯ ಪಾಠವನ್ನು ಅವನು ಕಲಿಸುತ್ತಾ, ಪೇತ್ರನಿಗೆ ಅಂದದ್ದು: “ನಿನ್ನ ಕತ್ತಿಯನ್ನು ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?”
ಯೇಸುವು ಬಂಧಿಸಲ್ಪಡಲು ಇಚ್ಛೆಯುಳ್ಳವನಾಗಿದ್ದನು, ಏಕಂದರೆ ಅವನು ವಿವರಿಸುವದು: “ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ?” ಮತ್ತು ಅವನು ಕೂಡಿಸುವದು: “ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಿಂದ ಇದ್ದನು!
ಅನಂತರ ಯೇಸುವು ಜನರ ಗುಂಪಿಗೆ ಹೇಳುವದು: “ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ?” ಅವನು ಕೇಳುತ್ತಾನೆ. “ನಾನು ದಿನಾಲು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ; ಆದರೆ ಶಾಸ್ತ್ರವಚನಗಳು ನೆರವೇರುವಂತೆ ಇದೆಲ್ಲಾ ಆಯಿತು.”
ಆಗ ಸೈನಿಕರ ದಳ, ಮಿಲಿಟರಿ ಅಧಿಪತಿ ಮತ್ತು ಯೆಹೂದ್ಯರ ಅಧಿಕಾರಿಗಳು ಯೇಸುವನ್ನು ಹಿಡಿದು ಕಟ್ಟುತ್ತಾರೆ. ಇದನ್ನು ನೋಡಿದ ಅಪೊಸ್ತಲರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡುತ್ತಾರೆ. ಆದಾಗ್ಯೂ, ಒಬ್ಬಾನೊಬ್ಬ ಯೌವನಸ್ಥನು—ಶಿಷ್ಯನಾಗಿದ್ದ ಮಾರ್ಕನು—ಅಲ್ಲಿಯೇ ಜನರ ಗುಂಪಿನೊಟ್ಟಿಗೆ ಉಳಿಯುತ್ತಾನೆ. ಪಸ್ಕ ಹಬ್ಬವನ್ನು ಯೇಸುವು ಆಚರಿಸಿದ ಮನೆಯಲ್ಲಿ ಅವನು ಇದ್ದಿರಬಹುದು ಮತ್ತು ಅನಂತರ ಅಲ್ಲಿಂದ ಗುಂಪನ್ನು ಹಿಂಬಾಲಿಸಿರಬಹುದು. ಆದಾಗ್ಯೂ, ಈಗ ಅವನ ಪರಿಚಯ ಹಿಡಿಯಲ್ಪಟ್ಟಿತು ಮತ್ತು ಅವನನ್ನು ಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಅವನು ತನ್ನ ನಾರುಮಡಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗುತ್ತಾನೆ. ಮತ್ತಾಯ 26:47-56; ಮಾರ್ಕ 14:43-52; ಲೂಕ 22:47-53; ಯೋಹಾನ 17:12; 18:3-12.
▪ ಗೆತ್ಸೇಮನೆ ತೋಟದಲ್ಲಿ ಯೇಸುವನ್ನು ತಾನು ಕಂಡುಕೊಳ್ಳುವನೆಂದು ಯೂದನು ನಿಶ್ಚಯವುಳ್ಳವನಾಗಿದ್ದದು ಯಾಕೆ?
▪ ಅವನ ಅಪೊಸ್ತಲರಿಗಾಗಿ ಯೇಸುವು ಚಿಂತೆಯನ್ನು ಪ್ರದರ್ಶಿಸಿದ್ದು ಹೇಗೆ?
▪ ಯೇಸುವಿನ ರಕ್ಷಣೆಗಾಗಿ ಪೇತ್ರನು ಯಾವ ಕ್ರಿಯೆಯನ್ನು ಕೈಗೊಂಡನು, ಆದರೆ ಅದರ ಕುರಿತು ಪೇತ್ರನಿಗೆ ಯೇಸುವು ಏನಂದನು?
▪ ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಲ್ಲಿದ್ದನು ಎಂದು ಯೇಸುವು ಪ್ರಕಟಿಸಿದ್ದು ಹೇಗೆ?
▪ ಯೇಸುವನ್ನು ಅಪೊಸ್ತಲರು ತೊರೆದು ಓಡಿದಾಗ, ಯಾರು ಉಳಿಯುತ್ತಾನೆ, ಮತ್ತು ಅವನಿಗೆ ಏನು ಸಂಭವಿಸುತ್ತದೆ?
-
-
ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 119
ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ
ಯೇಸುವನ್ನು ಒಬ್ಬ ಸಾಮಾನ್ಯ ಪಾತಕಿಯಂತೆ, ಪ್ರಭಾವಶಾಲಿಯಾಗಿದ್ದ ಮಾಜೀ ಮಹಾ ಯಾಜಕನಾಗಿದ್ದ ಅನ್ನನ ಬಳಿಗೆ ಕೊಂಡೊಯುತ್ತಾರೆ. ಯೇಸುವು 12-ವರ್ಷದ ಬಾಲಕನಾಗಿದ್ದಾಗ ದೇವಾಲಯದಲ್ಲಿದ್ದ ಬೋಧಕರನ್ನು ಬೆರಗುಗೊಳಿಸಿದ ಸಮಯದಲ್ಲಿ ಅನ್ನನು ಮಹಾ ಯಾಜಕನಾಗಿದ್ದನು. ಅನಂತರ ಅನ್ನನ ಕೆಲವಾರು ಪುತ್ರರು ಮಹಾ ಯಾಜಕರುಗಳಾಗಿ ಸೇವೆ ಸಲ್ಲಿಸಿದ್ದರು, ಮತ್ತು ಪ್ರಚಲಿತದಲ್ಲಿ ಅವನ ಅಳಿಯನಾದ ಕಾಯಫನು ಆ ಸ್ಥಾನದಲ್ಲಿದ್ದನು.
ಯೆಹೂದ್ಯರ ಧಾರ್ಮಿಕ ಜೀವನದಲ್ಲಿ ಈ ಮಹಾ ಯಾಜಕನ ದೀರ್ಘಕಾಲದ ಪ್ರತಿಷ್ಠೆಯಿಂದಾಗಿ, ಯೇಸುವನ್ನು ಪ್ರಾಯಶಃ ಮೊದಲು ಅನ್ನನ ಮನೆಗೆ ಕೊಂಡೊಯ್ದಿರಬಹುದು, ಅನ್ನನು ನೋಡಲು ಮಾಡಿದ ಈ ನಿಲುಗಡೆಯು, ಮಹಾ ಯಾಜಕನಾದ ಕಾಯಫನಿಗೆ 71-ಸದಸ್ಯರುಗಳ ಯೆಹೂದ್ಯ ಮುಖ್ಯ ನ್ಯಾಯಾಲಯವಾದ ಸನ್ಹೇದ್ರಿನ್‌ನನ್ನೂ, ಸುಳ್ಳು ಸಾಕ್ಷಿಗಳನ್ನೂ ಒಟ್ಟುಗೂಡಿಸಲು ಸಾಕಷ್ಟು ಸಮಯವನ್ನಿತಿತ್ತು.
ಮಹಾ ಯಾಜಕನಾದ ಅನ್ನನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಉಪದೇಶದ ವಿಷಯವಾಗಿಯೂ ಈಗ ಪ್ರಶ್ನಿಸುತ್ತಾನೆ. ಆದಾಗ್ಯೂ, ಉತ್ತರವಾಗಿ ಯೇಸುವು ಹೇಳುವದು: “ನಾನು ಧಾರಾಳವಾಗಿ ಲೋಕದ ಮುಂದೆ ಮಾತಾಡಿದ್ದೇನೆ; ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶ ಮಾಡುತ್ತಾ ಬಂದೆನು; ಮರೆಯಾಗಿ ಯಾವದನ್ನೂ ಮಾಡಲಿಲ್ಲ. ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದ್ದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದದೆಯಲ್ಲಾ.”
ಆಗ ಹತ್ತರ ನಿಂತಿದ್ದ ಒಲೇಕಾರರಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಏಟುಹಾಕುತ್ತಾ, ಹೇಳುವದು: “ಮಹಾ ಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯಾ?”
“ನಾನು ಮಾತಾಡಿದರ್ದಲ್ಲಿ ಏನಾದರೂ ದೋಷವಿದ್ದರೆ,” ಯೇಸುವು ಉತ್ತರಿಸುವದು, “ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ?” ಇದರ ನಂತರ, ಅನ್ನನು ಯೇಸುವನ್ನು ಕಟ್ಟಿಸಿ ಕಾಯಫನ ಬಳಿಗೆ ಕಳುಹಿಸಿದನು.
ಇಷ್ಟರೊಳಗೆ ಎಲ್ಲಾ ಮಹಾ ಯಾಜಕರುಗಳೂ, ಹಿರೀ ಪುರುಷರೂ ಮತ್ತು ಶಾಸ್ತ್ರಿಗಳೂ, ಹೌದು ಇಡೀ ಸನ್ಹೇದ್ರಿನ್, ಒಟ್ಟು ಸೇರಲು ಆರಂಭಿಸಿದರು. ಅವರ ಕೂಟದ ಸ್ಥಳವು ಕಾಯಫನ ಮನೆಯಾಗಿತ್ತೆಂದು ತೋಚುತ್ತದೆ. ಪಸ್ಕ ಹಬ್ಬದ ರಾತ್ರಿಯಲ್ಲಿ ಅಂಥ ಒಂದು ವಿಚಾರಣೆಯನ್ನು ನಡಿಸುವದು ಯೆಹೂದ್ಯರ ನಿಯಮಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿತ್ತು. ಆದರೆ ಇದು ಅವರ ದುಷ್ಟ ಉದ್ದೇಶದಿಂದ ಧಾರ್ಮಿಕ ಮುಖಂಡರನ್ನು ತಡೆಯುವದಿಲ್ಲ.
ಲಾಜರನನ್ನು ಯೇಸುವು ಪುನರುತ್ಥಾನಗೊಳಿಸಿದಾಗ, ವಾರಗಳ ಹಿಂದೆಯೇ, ಅವನನ್ನು ಕೊಲ್ಲಬೇಕೆಂದು ಆಗಲೇ ಸನ್ಹೇದ್ರಿನ್ ತಮ್ಮೊಳಗೆ ನಿರ್ಧರಿಸಿತ್ತು. ಮತ್ತು ಕೇವಲ ಎರಡು ದಿನಗಳ ಹಿಂದೆ, ಬುಧವಾರ ದಿನ, ಯೇಸುವನ್ನು ಕೊಲ್ಲುವದಕ್ಕಾಗಿ ಅವನನ್ನು ಕುತಂತ್ರದಿಂದ ಹಿಡಿಯುಲು ಧಾರ್ಮಿಕ ಮುಖಂಡರುಗಳು ಒಟ್ಟಿಗೆ ಸಮಾಲೋಚನೆ ನಡಿಸಿದ್ದರು. ನೆನಸಿರಿ, ಅವನ ವಿಚಾರಣೆಯ ಮೊದಲೇ ಅವನಿಗೆ ವಾಸ್ತವದಲ್ಲಿ ನ್ಯಾಯತೀರ್ಪು ಕೊಡಲ್ಪಟ್ಟಿತ್ತು!
ಯೇಸುವಿನ ವಿರುದ್ಧ ಒಂದು ಆಪಾದನೆ ಹೊರಿಸಲ್ಪಡುವಂತೆ, ಸುಳ್ಳು ರುಜುವಾತುಗಳನ್ನು ಒದಗಿಸಲು ಸಾಕ್ಷಿಗಳಿಗಾಗಿ ಹುಡುಕಾಟದ ಪ್ರಯತ್ನಗಳು ನಡೆಯುತ್ತಿದ್ದವು. ಆದಾಗ್ಯೂ, ಬಹುಮಂದಿ ಸಾಕ್ಷಿಗಳು ಅವರ ಸಾಕ್ಷ್ಯಗಳಲ್ಲಿ ಒಂದಕ್ಕೊಂದು ಸಹಮತದಲ್ಲಿರಲಿಲ್ಲ. ಕಟ್ಟಕಡೆಗೆ, ಇಬ್ಬರು ಮುಂದೆ ಬಂದು, ಹೀಗೆಂದು ಸಮರ್ಥಿಸಿದರು: “ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಇವನು ಹೇಳಿದ್ದನ್ನು ನಾವು ಕೇಳಿದ್ದೇವೆ.”
“ನೀನೇನೂ ಉತ್ತರ ಹೇಳುವದಿಲ್ಲವೋ?” ಕಾಯಫನು ಕೇಳುತ್ತಾನೆ. “ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಆದರೆ ಯೇಸುವು ಸುಮ್ಮನಿದ್ದು ಏನೂ ಉತ್ತರ ಹೇಳಲಿಲ್ಲ. ಇಲ್ಲಿಯೂ ಈ ಸುಳ್ಳು ಆಪಾದನೆಯಲ್ಲಿ ಸನ್ಹೇದ್ರಿನ್‌ಗೆ ನಾಚಿಕೆಯಾಗುವಂಥ ರೀತಿಯಲ್ಲಿ, ಅವರ ಕಥೆಗಳನ್ನು ಸಾಕ್ಷಿಗಳು ಒಂದಕ್ಕೊಂದು ಸರಿಬೀಳುವ ರೀತಿಯಲ್ಲಿ ಹೇಳಶಕ್ತರಾಗಿರಲಿಲ್ಲ. ಆದುದರಿಂದ ಮಹಾ ಯಾಜಕನು ಇನ್ನೊಂದು ತಂತ್ರವನ್ನು ಬಳಸಿದನು.
ಯಾರಾದರೊಬ್ಬರು ತಾನು ದೇವರ ಮಗನು ಎಂದು ಹೇಳಿಕೊಂಡರೆ, ಯೆಹೂದ್ಯರು ಎಷ್ಟೊಂದು ಸೂಕ್ಷ್ಮವೇದಿಗಳಾಗಿದ್ದರೆಂದು ಕಾಯಫನಿಗೆ ತಿಳಿದಿತ್ತು. ಈ ಮೊದಲಿನ ಎರಡು ಸಂದರ್ಭಗಳಲ್ಲಿ, ಅವಸರದಿಂದ ಯೇಸುವು ಮರಣ ದಂಡನೆಗೆ ಯೋಗ್ಯನಾದ ದೇವದೂಷಕನು ಎಂದು ಆಪಾದಿಸಿದ್ದರು, ಒಮ್ಮೆ ತಪ್ಪಾಗಿ, ದೇವರಿಗೆ ಅವನನ್ನು ಸರಿಗಟ್ಟಿಸುವ ವಾದವನ್ನು ಮಾಡುತ್ತಾನೆಂದು ಊಹಿಸಿದ್ದರು. ಈಗ ಕಾಯಫನು ಕುತಂತ್ರದಿಂದ ಕೇಳುವದು: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು!”
ಯೆಹೂದ್ಯರು ಏನನ್ನೇ ಚಿಂತಿಸಲಿ, ಯೇಸುವು ನಿಜವಾಗಿ ದೇವರ ಕುಮಾರನಾಗಿದ್ದನು. ಮತ್ತು ಸುಮ್ಮನೆ ಇರುವದು, ಅವನ ಕ್ರಿಸ್ತನೆಂಬುದರ ನಿರಾಕರಣೆ ಎಂದು ಪರಿಗಣಿಸಸಾಧ್ಯವಿತ್ತು. ಆದುದರಿಂದ ಯೇಸುವು ಧೈರ್ಯದಿಂದ ಉತ್ತರಿಸುವದು: “ನಾನೇ; ಇದಲ್ಲದೆ ಮನುಷ್ಯ ಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನು ನೋಡುವಿರಿ.”
ಆಗ ಕಾಯಫನು, ಒಂದು ನಾಟಕೀಯ ಪ್ರದರ್ಶನದಲ್ಲಿ, ತನ್ನ ಅಂಗಿಗಳನ್ನು ಹರಕೊಂಡು, ಒದರಿಕೊಳ್ಳುವದು: “ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರ್ದಲ್ಲಾ; ನಿಮಗೆ ಹೇಗೆ ತೋರುತ್ತದೆ?”
“ಇವನು ಮರಣ ದಂಡನೆ ಹೊಂದತಕ್ಕವನು,” ಸನ್ಹೇದ್ರಿನ್ ತೀರ್ಪು ಮಾಡುತ್ತದೆ. ಅನಂತರ ಅವರು ಅವನನ್ನು ಅಪಹಾಸ್ಯ ಮಾಡಲು ಆರಂಭಿಸಿದರು ಮತ್ತು ಅವನಿಗೆ ಅನೇಕ ದೂಷಣೆಯ ಮಾತುಗಳನ್ನು ಹೇಳಿದರು. ಅವರು ಅವನ ಮುಖಕ್ಕೆ ಗುದ್ದಿದರು ಮತ್ತು ಅದರ ಮೇಲೆ ಉಗುಳಿದರು. ಇತರರು ಅವನ ಇಡೀ ಮುಖಕ್ಕೆ ಮುಸುಕುಹಾಕಿ ಅವರ ಮುಷ್ಟಿಯಿಂದ ಹೊಡೆದು, ಅವಮಾನಿಸುವ ರೀತಿಯಲ್ಲಿ ಹೇಳುವದು: “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು.” ಈ ದೂಷಣೀಯ, ಕಾನೂನು ಬಾಹಿರವರ್ತನೆಯು ರಾತ್ರಿ ಸಮಯದ ವಿಚಾರಣೆಯಲ್ಲಿ ನಡಿಸಲ್ಪಟ್ಟಿತು. ಮತ್ತಾಯ 26:57-68; 26:3, 4; ಮಾರ್ಕ 14:53-65; ಲೂಕ 22:54, 63-65; ಯೋಹಾನ 18:13-24; 11:45-53; 10:31-39; 5:16-18.
▪ ಮೊದಲು ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಅಲ್ಲಿ ಏನು ಸಂಭವಿಸುತ್ತದೆ?
▪ ಅನಂತರ ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಯಾವ ಉದ್ದೇಶಕ್ಕಾಗಿ?
▪ ಯೇಸುವು ಮರಣ ದಂಡನೆಗೆ ಯೋಗ್ಯನು ಎಂದು ಸನ್ಹೇದ್ರಿನ್ ತೀರ್ಪು ಮಾಡುವಂತೆ ಕಾಯಫನು ಮಾಡಶಕ್ತನಾದದ್ದು ಹೇಗೆ?
▪ ವಿಚಾರಣೆಯ ಸಮಯದಲ್ಲಿ ಯಾವ ದೂಷಣೀಯ, ಕಾನೂನುಬಾಹಿರ ವರ್ತನೆಯು ನಡಿಸಲ್ಪಡುತ್ತದೆ?
-
-
ಅಂಗಳದಲ್ಲಿ ನಿರಾಕರಣೆಗಳುಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 120
ಅಂಗಳದಲ್ಲಿ ನಿರಾಕರಣೆಗಳು
ಯೇಸುವನ್ನು ಗೆತ್ಸೇಮನೆ ತೋಟದಲ್ಲಿ ತೊರೆದು, ಹೆದರಿಕೆಯಿಂದ ಇತರ ಎಲ್ಲಾ ಅಪೊಸ್ತಲರೊಂದಿಗೆ ಪಲಾಯನ ಮಾಡಿದ ನಂತರ, ಪೇತ್ರ ಮತ್ತು ಯೋಹಾನರು ತಮ್ಮ ಪಲಾಯನವನ್ನು ನಿಲ್ಲಿಸುತ್ತಾರೆ. ಯೇಸುವನ್ನು ಅನ್ನನ ಮನೆಗೆ ಕೊಂಡು ಹೋದಾಗ, ಪ್ರಾಯಶಃ ಅವರು ನಡೆದು ಅಲ್ಲಿಗೆ ತಲುಪುತ್ತಾರೆ. ಅನ್ನನು ಅವನನ್ನು ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದಾಗ, ಅವರ ಸ್ವಂತ ಜೀವಗಳ ಹೆದರಿಕೆ ಮತ್ತು ತಮ್ಮ ಪ್ರಭುವಿಗೆ ಏನು ಸಂಭವಿಸುತ್ತದೋ ಎಂಬ ಅವರ ಗಾಢವಾದ ಕಾತರದ ನಡುವೆ ಪ್ರಾಯಶಃ ತೊಯ್ದಾಡುತ್ತಾ, ಪೇತ್ರ, ಯೋಹಾನರು ಅವನನ್ನು ದೂರದಿಂದ ಹಿಂಬಾಲಿಸುತ್ತಿರಬೇಕು.
ಕಾಯಫನ ವಿಶಾಲ ನಿವಾಸದ ಬಳಿಗೆ ಬಂದಾಗ, ಯೋಹಾನನಿಗೆ ಮಹಾ ಯಾಜಕನ ಪರಿಚಿತಿ ಇದ್ದದರಿಂದ, ಅಂಗಳದೊಳಕ್ಕೆ ಪ್ರವೇಶವನ್ನು ಪಡೆಯಲು ಶಕ್ತನಾಗುತ್ತಾನೆ. ಆದರೆ ಪೇತ್ರನಾದರೋ ಹೊರಗೆ ಬಾಗಲ ಹತ್ತರ ನಿಂತಿದ್ದನು. ಆದರೆ ಕೂಡಲೇ ಯೋಹಾನನು ಹಿಂತೆರಳಿ ಬಂದು, ದಾಸಿಯಾಗಿದ್ದ ಬಾಗಲು ಕಾಯುವವಳ ಸಂಗಡ ಮಾತಾಡುತ್ತಾನೆ ಮತ್ತು ಪೇತ್ರನಿಗೆ ಒಳಕ್ಕೆ ಹೋಗಲು ಅನುಮತಿಸಲಾಗುತ್ತದೆ.
ಈಗ ಚಳಿಯಾಗಿತ್ತು ಮತ್ತು ಮಹಾ ಯಾಜಕನ ಆಳುಗಳೂ ಒಲೇಕಾರರೂ ಇದ್ದಲಿನ ಬೆಂಕಿಯನ್ನು ಮಾಡಿದ್ದರು. ಯೇಸುವಿನ ವಿಚಾರಣೆಯ ಫಲಿತಾಂಶವೇನು ಎಂದು ಕಾಯುತ್ತಾ, ಪೇತ್ರನು ಅವರೊಂದಿಗೆ ಸೇರಿ ಚಳಿಕಾಸಿಕೊಳ್ಳುತ್ತಿದ್ದನು. ಅಲ್ಲಿ, ಬೆಂಕಿಯ ಬೆಳಕಿನ ಪ್ರಕಾಶದಲ್ಲಿ ಪೇತ್ರನನ್ನು ಒಳಗೆ ಬಿಟ್ಟ ಬಾಗಲು ಕಾಯುವವಳು ಅವನನ್ನು ಚೆನ್ನಾಗಿ ದೃಷ್ಟಿಸಿ ನೋಡಿದಳು. “ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು!” ಎಂದು ಆಕೆ ಉದ್ಗರಿಸುತ್ತಾಳೆ.
ಗುರುತು ಹಿಡಿಯಲ್ಪಟ್ಟದರ್ದಿಂದ ಕ್ಷೋಭೆಗೊಂಡವನಾಗಿ, ಪೇತ್ರನು ಎಲ್ಲರ ಮುಂದೆ ತಾನು ಯೇಸುವನ್ನು ಅರಿಯನೆಂದು ನಿರಾಕರಿಸುತ್ತಾನೆ: “ಅಲ್ಲ; ಅವನು ಯಾರೆಂದು ನಾನು ಗೊತ್ತಿಲ್ಲ, ಹಾಗೂ ನೀನು ಏನನ್ನುತೀಯ್ತೋ ನನಗೆ ತಿಳಿಯುವದಿಲ್ಲ,” ಎಂದನು ಅವನು.
ಆಗ, ಪೇತ್ರನು ಅಲ್ಲಿಂದ ಬಾಗಲಿನ ಕಡೆಗೆ ಹೊರಟುಹೋದನು. ಅಲ್ಲಿ ಇನ್ನೊಬ್ಬ ಹುಡುಗಿಯು ಅವನನ್ನು ಕಂಡು ಅಲ್ಲಿ ನಿಂತಿದ್ದವರಿಗೆ ಅವಳು ಕೂಡ ಹೇಳುವದು: “ಇವನೂ ನಜರೇತಿನ ಯೇಸುವಿನ ಕೂಡ ಇದ್ದನು.” ಪುನೊಮ್ಮೆ ಪೇತ್ರನು ಅದನ್ನು ನಿರಾಕರಿಸುತ್ತಾ, ಆಣೆಯಿಡಲಾರಂಭಿಸಿದನು: “ಅಲ್ಲ, ಆ ಮನುಷ್ಯನನ್ನು ನಾನರಿಯೆನು!”
ಪೇತ್ರನು ಹೊರಂಗಳದಲ್ಲಿ ನಿಂತುಕೊಂಡು, ಸಾಧ್ಯವಾದಷ್ಟು ಮರೆಯಾಗಿರಲು ಪ್ರಯತ್ನಿಸುತ್ತಿದ್ದಿರಬೇಕು. ಇಷ್ಟರೊಳಗೆ ಪ್ರಾಯಶಃ ಬೆಳಗ್ಗಿನ ಜಾವದ ಕತ್ತಲೆಯಲ್ಲಿ ಕೋಳಿಯ ಕೂಗಿನಿಂದ ಅವನು ಬೆಚ್ಚಿಬಿದ್ದಿರಬೇಕು. ತನ್ಮಧ್ಯೆ, ಯೇಸುವಿನ ವಿಚಾರಣೆಯು ಅಂಗಳದ ಮೇಲ್ಭಾಗದಲ್ಲಿರುವ ಮನೆಯಲ್ಲಿ ನಡೆಯುತ್ತಿದ್ದಿರಬೇಕೆಂದು ತೋರುತ್ತದೆ. ಸಾಕ್ಷ್ಯ ನುಡಿಯಲು ತರಲ್ಪಟ್ಟ ಬೇರೆ ಬೇರೆ ಸಾಕ್ಷಿಗಳು ಬರುವದನ್ನು ಮತ್ತು ಹೋಗುವದನ್ನು ಕೆಳಗಡೆ ಇದ್ದ ಪೇತ್ರನೂ, ಇತರರೂ ಕಾದುಕೊಂಡು ನೋಡುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ.
ಯೇಸುವಿನ ಸಂಗಡಿಗನೆಂದು ಪೇತ್ರನನ್ನು ಗುರುತಿಸಿ ಈಗ ಸುಮಾರು ಒಂದು ತಾಸು ಕಳೆದಿರಬೇಕು. ಅಲ್ಲಿ ನಿಂತಿದ್ದವರಲ್ಲಿ ಅನೇಕರು ಈಗ ಪೇತ್ರನ ಬಳಿಗೆ ಬಂದು, ಹೀಗೆ ಹೇಳಿದರು: “ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು, ನಿನ್ನ ಭಾಪಷೆಯೇ ನಿನ್ನನ್ನು ತೋರಿಸಿ ಕೊಡುತ್ತದೆ.” ಪೇತ್ರನು ಕಿವಿ ಕತ್ತರಿಸಿದವನಾಗಿದ್ದ ಮಲ್ಕನ ಬಂಧುವಾಗಿದ್ದ ಒಬ್ಬನು ಆ ಗುಂಪಿನಲ್ಲಿ ಇದ್ದನು. “ನಾನು ನಿನ್ನನ್ನು ತೋಟದಲ್ಲಿ ಅವನ ಸಂಗಡ ಕಂಡೆನಲ್ಲವೇ?” ಅಂದನು ಅವನು.
“ನೀನು ಹೇಳುವ ಆ ಮನುಷ್ಯನನ್ನು ನಾನರಿಯೆನು!” ಎಂದು ದೃಢವಾಗಿ ನಿರಾಕರಿಸಿದನು ಪೇತ್ರನು. ವಾಸ್ತವದಲ್ಲಿ ಅವರೆಲ್ಲರೂ ತಪ್ಪು ಮಾಡಿದ್ದಾರೆಂದು ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ಆ ವಿಷಯವಾಗಿ ಅವನು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು, ಆ ಮೂಲಕ ಅವನು ಸತ್ಯವನ್ನು ಹೇಳದಿದ್ದರೆ ಕೆಡುಕು ಅವನ ಮೇಲೆ ಬರಲಿ ಎಂದು ಸ್ವತಃ ಹೇಳಿಕೊಳ್ಳುವದಾಗಿದೆ.
ಪೇತ್ರನು ಈ ಮೂರನೆಯ ನಿರಾಕರಣೆಯ ಮಾಡಿದ ಕೂಡಲೆ ಕೋಳಿ ಕೂಗಿತು. ಮತ್ತು ಆ ಕ್ಷಣದಲ್ಲಿ ಅಂಗಳದ ಮೇಲಿರುವ ಕೈಸಾಲೆಗೆ ಬಂದಿರಬಹುದಾದ ಯೇಸು, ತಿರಿಗಿಕೊಂಡು ಅವನನ್ನು ದೃಷ್ಟಿಸುತ್ತಾನೆ. ತಕ್ಷಣವೇ, ಮೇಲಂತಸ್ತಿನ ಕೋಣೆಯಲ್ಲಿ ಕೇವಲ ಕೆಲವು ತಾಸುಗಳ ಹಿಂದೆ ಯೇಸುವು ಹೇಳಿದ್ದನ್ನು ಪೇತ್ರನು ನೆನಪಿಸಿಕೊಳ್ಳುತ್ತಾನೆ: “ಕೋಳಿ ಎರಡು ಸಾರಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅರಿಯೆನು ಎಂದು ಹೇಳುವಿ.” ತನ್ನ ಪಾಪದ ಭಾರದಿಂದ ಜಜ್ಜಲ್ಪಟ್ಟು, ಪೇತ್ರನು ಹೊರಗೆ ಹೋಗಿ ಬಹು ವ್ಯಥೆ ಪಟ್ಟು ಅತನ್ತು.
ಇದು ಹೇಗೆ ಸಂಭವಿಸಸಾಧ್ಯವಿದೆ? ತನ್ನ ಆತ್ಮಿಕ ಬಲದ ಕುರಿತು ಅಷ್ಟೊಂದು ನಿಶ್ಚಿತನಾಗಿದ್ದ ಮೇಲೆ, ಬೇಗ ಬೇಗನೆ ಮೂರು ಬಾರಿ ಪೇತ್ರನು ಅವನ ಪ್ರಭುವನ್ನು ಹೇಗೆ ನಿರಾಕರಿಸಸಾಧ್ಯವಿದೆ? ಪೇತ್ರನನ್ನು ಪರಿಸ್ಥಿತಿಗಳು ಅವನಿಗರಿವಿಲ್ಲದೆ ಮುತ್ತಿದವು ಎನ್ನುವದರಲ್ಲಿ ಸಂದೇಹವಿಲ್ಲ. ಸತ್ಯವು ತಿರಿಚಲ್ಪಟ್ಟಿತು ಮತ್ತು ಯೇಸುವು ಒಬ್ಬ ಅಧಮನಾದ ಪಾತಕಿಯಂತೆ ಚಿತ್ರಿಸಲ್ಪಟ್ಟನು. ಸರಿಯಾದದ್ದು ಯಾವುದಾಗಿತ್ತೋ ಅದನ್ನು ತಪ್ಪು ಎಂದೂ, ನಿರಪರಾಧಿಯು ತಪ್ಪಿತಸ್ಥನೆಂದೂ ತೋರಿಸಲ್ಪಟ್ಟಿತು. ಆದುದರಿಂದ, ಸಂದರ್ಭದ ಒತ್ತಡಗಳ ಕೆಳಗೆ, ಪೇತ್ರನ ಸಮತೂಕವು ತಪ್ಪಿಹೋಯಿತು. ನಿಷ್ಠೆಯ ಯೋಗ್ಯ ಚಿತ್ತವು ಫಕ್ಕನೇ ಬುಡಮೇಲಾಯಿತು; ಅವನ ದುಃಖಕ್ಕೆ ಮನುಷ್ಯರ ಭಯವು ಅವನನ್ನು ನಿಷ್ಕ್ರಿಯನನ್ನಾಗಿ ಮಾಡಿತು. ಅದು ನಮಗೆಂದಿಗೂ ಸಂಭವಿಸದಿರಲಿ! ಮತ್ತಾಯ 26:57, 58, 69-75; ಮಾರ್ಕ 14:30, 53,54, 66-72; ಲೂಕ 22:54-62; ಯೋಹಾನ 18:15-18, 25-27.
▪ ಮಹಾ ಯಾಜಕನ ಅಂಗಳದೊಳಗೆ ಪೇತ್ರ , ಯೋಹಾನರು ಪ್ರವೇಶವನ್ನು ಪಡೆದದ್ದು ಹೇಗೆ?
▪ ಪೇತ್ರ , ಯೋಹಾನರು ಅಂಗಳದಲ್ಲಿದ್ದಾಗ, ಮನೆಯಲ್ಲಿ ಏನು ನಡೆಯುತ್ತಾ ಇತ್ತು?
▪ ಕೋಳಿಯು ಎಷ್ಟು ಸಾರಿ ಕೂಗಿತು, ಮತ್ತು ಕ್ರಿಸ್ತನನ್ನು ಅರಿಯನೆಂದು ಎಷ್ಟು ಬಾರಿ ಪೇತ್ರನು ನಿರಾಕರಿಸಿದನು?
▪ ಪೇತ್ರನು ಶಪಿಸುವದೂ, ಆಣೆಯಿಡುವದೂ, ಅದರ ಅರ್ಥವೇನು?
▪ ಯೇಸುವನ್ನು ತಾನು ತಿಳಿದಿರುವದನ್ನು ನಿರಾಕರಿಸಲು ಪೇತ್ರನಿಗೆ ಕಾರಣವಾದದ್ದು ಯಾವುದು?
-