ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕುಟುಂಬ ಸಂತೋಷದ ರಹಸ್ಯವೊಂದಿದೆಯೆ?
    ಕುಟುಂಬ ಸಂತೋಷದ ರಹಸ್ಯ
    • ಪುಟ 4ರಲ್ಲಿ ಇಡೀ ಪುಟದ ಚಿತ್ರ

      ಅಧ್ಯಾಯ ಒಂದು

      ಕುಟುಂಬ ಸಂತೋಷದ ರಹಸ್ಯವೊಂದಿದೆಯೆ?

      ಪುಟ 5ರಲ್ಲಿ ಇಡೀ ಪುಟದ ಚಿತ್ರ

      1. ಮಾನವ ಸಮಾಜದಲ್ಲಿ ಪ್ರಬಲವಾದ ಕುಟುಂಬಗಳು ಪ್ರಾಮುಖ್ಯವೇಕೆ?

      ಕುಟುಂಬವು ಭೂಮಿಯ ಮೇಲಿರುವ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು ಅದು ಮಾನವ ಸಮಾಜದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇತಿಹಾಸದಾದ್ಯಂತ, ಪ್ರಬಲವಾದ ಕುಟುಂಬಗಳು ಪ್ರಬಲವಾದ ಸಮಾಜಗಳನ್ನು ನಿರ್ಮಿಸಲು ಸಹಾಯ ಮಾಡಿವೆ. ಮಕ್ಕಳನ್ನು, ಪಕ್ವತೆಯ ವಯಸ್ಕರನ್ನಾಗಿ ಬೆಳೆಸಲಿಕ್ಕಾಗಿ ಕುಟುಂಬವು ಅತ್ಯುತ್ತಮವಾದ ಏರ್ಪಾಡಾಗಿದೆ.

      2-5. (ಎ) ಒಂದು ಸಂತೋಷದ ಕುಟುಂಬದಲ್ಲಿ ಒಬ್ಬ ಮಗನು ಅನುಭವಿಸುವ ಭದ್ರತೆಯನ್ನು ವರ್ಣಿಸಿರಿ. (ಬಿ) ಕೆಲವು ಕುಟುಂಬಗಳಲ್ಲಿ ಯಾವ ಸಮಸ್ಯೆಗಳು ವರದಿಸಲ್ಪಡುತ್ತವೆ?

      2 ಸಂತೋಷದ ಕುಟುಂಬವು ಸುರಕ್ಷಿತತ್ವ ಮತ್ತು ಭದ್ರತೆಯ ಒಂದು ಆಶ್ರಯಸ್ಥಾನ. ಆದರ್ಶಪ್ರಾಯವಾಗಿರುವ ಕುಟುಂಬವನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿರಿ. ಸಂಧ್ಯಾ ಭೋಜನದ ಸಮಯ, ಚಿಂತೆ ವಹಿಸುವ ಹೆತ್ತವರು ತಮ್ಮ ಮಕ್ಕಳೊಂದಿಗೆ ಕುಳಿತು ದಿನದ ಆಗುಹೋಗುಗಳನ್ನು ಚರ್ಚಿಸುತ್ತಾರೆ. ಮಕ್ಕಳು, ಶಾಲೆಯಲ್ಲಿ ನಡೆದುದರ ಕುರಿತು ತಮ್ಮ ತಂದೆತಾಯಿಗಳಿಗೆ ತಿಳಿಸುವಾಗ ಉದ್ರೇಕದಿಂದ ಹರಟುತ್ತಾರೆ. ಹಾಗೆ ಕೂಡಿ ಕಳೆದ ವಿಶ್ರಾಂತಿಕರವಾದ ಸಮಯವು ಬಾಹ್ಯ ಜಗತ್ತಿನಲ್ಲಿ ಇನ್ನೊಂದು ದಿವಸಕ್ಕಾಗಿ ಪ್ರತಿಯೊಬ್ಬರಿಗೂ ನವಚೈತನ್ಯವನ್ನುಂಟುಮಾಡುತ್ತದೆ.

      3 ಸಂತೋಷದ ಕುಟುಂಬವೊಂದರಲ್ಲಿ, ಒಬ್ಬ ಮಗನು, ತಾನು ಅಸ್ವಸ್ಥನಾಗುವಾಗ ತನ್ನ ತಂದೆತಾಯಿ ತನ್ನನ್ನು ಪರಾಮರಿಸುವರೆಂದು, ಪ್ರಾಯಶಃ ರಾತ್ರಿಯೆಲ್ಲ ತನ್ನ ಹಾಸಿಗೆಯ ಬಳಿ ಸರದಿಯನ್ನು ತೆಗೆದುಕೊಳ್ಳುವರೆಂದು ತಿಳಿದಿರುತ್ತಾನೆ. ತನ್ನ ಎಳೆಯ ಜೀವನದ ಸಮಸ್ಯೆಗಳೊಂದಿಗೆ ತಾನು ತಾಯಿ ಅಥವಾ ತಂದೆಯ ಬಳಿ ಹೋಗಿ ಬುದ್ಧಿವಾದ ಮತ್ತು ಬೆಂಬಲವನ್ನು ಪಡೆಯಬಲ್ಲೆನೆಂದು ಅವನಿಗೆ ತಿಳಿದಿರುತ್ತದೆ. ಹೌದು, ಬಾಹ್ಯ ಜಗತ್ತು ಎಷ್ಟೇ ಉಪದ್ರವ ತುಂಬಿದ್ದಾಗಿರಲಿ, ಮಗನು ಸುರಕ್ಷಿತನಾಗಿರುವ ಅನಿಸಿಕೆಯಲ್ಲಿರುತ್ತಾನೆ.

      4 ಮಕ್ಕಳು ಬೆಳೆದಾಗ ಸಾಮಾನ್ಯವಾಗಿ ವಿವಾಹಿತರಾಗಿ ಅವರ ಸ್ವಂತ ಕುಟುಂಬವುಳ್ಳವರಾಗುತ್ತಾರೆ. “ಒಬ್ಬನಿಗೆ ತನ್ನ ಸ್ವಂತ ಮಗುವಿರುವಾಗ ಆ ವ್ಯಕ್ತಿಯು ತನ್ನ ಹೆತ್ತವರಿಗೆ ತಾನು ಎಷ್ಟು ಋಣಿಯಾಗಿದ್ದೇನೆಂಬುದನ್ನು ಗ್ರಹಿಸಿಕೊಳ್ಳುತ್ತಾನೆ,” ಎನ್ನುತ್ತದೆ ಒಂದು ಪ್ರಾಚ್ಯ ನಾಣ್ಣುಡಿ. ಕೃತಜ್ಞತೆ ಮತ್ತು ಪ್ರೀತಿಯ ಆಳವಾದ ಭಾವನೆಯಿಂದ, ಬೆಳೆದಿರುವ ಮಕ್ಕಳು ತಮ್ಮ ಸ್ವಂತ ಕುಟುಂಬಗಳನ್ನು ಸಂತುಷ್ಟರಾಗಿಸಲು ಪ್ರಯತ್ನಿಸುತ್ತಾರೆ ಮತ್ತು ಮೊಮ್ಮಕ್ಕಳೊಂದಿಗೆ ಉಲ್ಲಾಸಿಸುವ, ಈಗ ವೃದ್ಧರಾಗುತ್ತಿರುವ ತಮ್ಮ ಹೆತ್ತವರನ್ನೂ ಅವರು ಪರಾಮರಿಸುತ್ತಾರೆ.

      5 ಪ್ರಾಯಶಃ ಈ ಹಂತದಲ್ಲಿ ನೀವು ಹೀಗೆ ಯೋಚಿಸುತ್ತಿದ್ದೀರಿ: ‘ಸರಿ, ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ, ಆದರೆ ಅದು ಇದೀಗ ವರ್ಣಿಸಲ್ಪಟ್ಟಂತಿಲ್ಲ. ನನ್ನ ಜೊತೆಗಾರನು ಮತ್ತು ನಾನು ವಿಭಿನ್ನ ಕಾಲಪಟ್ಟಿಗಳಲ್ಲಿ ಕೆಲಸಮಾಡುತ್ತೇವೆ ಮತ್ತು ಒಬ್ಬರನ್ನೊಬ್ಬರು ನೋಡುವುದೇ ವಿರಳ. ನಾವು ಬಹುಮಟ್ಟಿಗೆ ಹಣದ ಸಮಸ್ಯೆಗಳ ಕುರಿತಾಗಿ ಮಾತನಾಡುತ್ತೇವೆ.’ ಅಥವಾ ‘ನನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಇನ್ನೊಂದು ಪಟ್ಟಣದಲ್ಲಿ ಜೀವಿಸುತ್ತಾರೆ ಮತ್ತು ನಾನು ಅವರನ್ನು ನೋಡಲಾಗುವುದೇ ಇಲ್ಲ’ ಎಂದು ನೀವು ಹೇಳುತ್ತೀರೊ? ಹೌದು, ಅನೇಕ ವೇಳೆ ಒಳಗೂಡಿರುವವರ ನಿಯಂತ್ರಣವನ್ನು ಮೀರುವ ಕಾರಣಗಳಿಗಾಗಿ, ಹೆಚ್ಚಿನ ಕುಟುಂಬ ಜೀವನವು ಆದರ್ಶಪ್ರಾಯವಾಗಿಲ್ಲ. ಆದರೂ, ಕೆಲವರು ಸಂತೋಷವುಳ್ಳ ಕುಟುಂಬ ಜೀವನಗಳನ್ನು ನಡೆಸುತ್ತಾರೆ. ಹೇಗೆ? ಕುಟುಂಬ ಸಂತೋಷದ ರಹಸ್ಯವೊಂದಿದೆಯೆ? ಉತ್ತರವು ಹೌದಾಗಿದೆ. ಆದರೆ ಅದಾವುದೆಂದು ಚರ್ಚಿಸುವುದಕ್ಕೆ ಮುನ್ನ ನಾವು ಒಂದು ಪ್ರಾಮುಖ್ಯವಾದ ಪ್ರಶ್ನೆಗೆ ಉತ್ತರ ಕೊಡಬೇಕು.

      ಒಂದು ಕುಟುಂಬವೆಂದರೇನು?

      6. ಯಾವ ತೆರದ ಕುಟುಂಬಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗುವುದು?

      6 ಪಾಶ್ಚಾತ್ಯ ದೇಶಗಳಲ್ಲಿ, ಅಧಿಕಾಂಶ ಕುಟುಂಬಗಳು ತಂದೆ, ತಾಯಿ ಮತ್ತು ಮಕ್ಕಳನ್ನು ಒಳಗೂಡಿರುತ್ತವೆ. ಅಜ್ಜಅಜ್ಜಿಯರು ತಮಗೆ ಸಾಧ್ಯವಾಗುವಷ್ಟರ ತನಕ ತಮ್ಮ ಸ್ವಂತ ಮನೆವಾರ್ತೆಗಳಲ್ಲಿ ಜೀವಿಸಬಹುದು. ಹೆಚ್ಚು ದೂರದ ಸಂಬಂಧಿಗಳೊಂದಿಗೆ ಸಂಪರ್ಕವು ಇಡಲ್ಪಡುತ್ತದಾದರೂ, ಅವರ ಕಡೆಗಿರುವ ಕರ್ತವ್ಯಗಳು ಸೀಮಿತವಾಗಿರುತ್ತವೆ. ಮೂಲಭೂತವಾಗಿ, ಈ ಪುಸ್ತಕದಲ್ಲಿ ನಾವು ಚರ್ಚಿಸುವ ಕುಟುಂಬವು ಇದೇ. ಆದರೂ, ಇತ್ತೀಚಿನ ವರುಷಗಳಲ್ಲಿ ಬೇರೆ ಕುಟುಂಬಗಳು—ಒಂಟಿ ಹೆತ್ತವರಿರುವ ಕುಟುಂಬಗಳು, ಮಲಕುಟುಂಬ, ಮತ್ತು ಯಾವುದರ ಹೆತ್ತವರು ಕಾರಣಾಂತರಗಳಿಂದ ಒಟ್ಟಿಗೆ ಜೀವಿಸುವುದಿಲ್ಲವೊ ಆ ಕುಟುಂಬ—ಹೆಚ್ಚೆಚ್ಚು ಸಾಮಾನ್ಯವಾಗಿವೆ.

      7. ವಿಸ್ತರಿತ ಕುಟುಂಬವೆಂದರೇನು?

      7 ಕೆಲವು ಸಂಸ್ಕೃತಿಗಳಲ್ಲಿ ವಿಸ್ತರಿತ ಕುಟುಂಬವು ಸಾಮಾನ್ಯ. ಈ ಏರ್ಪಾಡಿನಲ್ಲಿ ಸಾಧ್ಯವಿರುವಲ್ಲಿ, ಅಜ್ಜಅಜ್ಜಿಯರನ್ನು ಅವರ ಮಕ್ಕಳು ನಿಯತ ಕ್ರಮವಾಗಿ ನೋಡಿಕೊಳ್ಳುತ್ತಾರೆ ಮತ್ತು ಆಪ್ತ ಸಂಬಂಧಗಳು ಮತ್ತು ಜವಾಬ್ದಾರಿಗಳು ದೂರದ ಸಂಬಂಧಿಗಳಿಗೂ ವ್ಯಾಪಿಸುತ್ತವೆ. ದೃಷ್ಟಾಂತಕ್ಕೆ, ಕುಟುಂಬದ ಸದಸ್ಯರು ತಮ್ಮ ಸೋದರ ಸೊಸೆಯರು, ಸೋದರಳಿಯರು, ಅಥವಾ ಹೆಚ್ಚು ದೂರದ ಸಂಬಂಧಿಗಳನ್ನು ಬೆಂಬಲಿಸಿ, ಬೆಳೆಸಲು ಸಹಾಯ ಮಾಡಿ, ಅವರ ವಿದ್ಯಾಭ್ಯಾಸಕ್ಕೂ ಹಣ ತೆರಬಹುದು. ಈ ಪ್ರಕಾಶನದಲ್ಲಿ ಚರ್ಚಿಸಲ್ಪಡಲಿರುವ ಮೂಲತತ್ವಗಳು ವಿಸ್ತರಿತ ಕುಟುಂಬಗಳಿಗೆ ಸಹ ಅನ್ವಯಿಸುತ್ತವೆ.

      ಒತ್ತಡದ ಕೆಳಗಿರುವ ಕುಟುಂಬ

      8, 9. ಕುಟುಂಬವು ಬದಲಾಗುತ್ತಿದೆಯೆಂದು ಕೆಲವು ದೇಶಗಳ ಯಾವ ಸಮಸ್ಯೆಗಳು ತೋರಿಸುತ್ತವೆ?

      8 ಇಂದು ಕುಟುಂಬವು ಬದಲಾವಣೆ ಹೊಂದುತ್ತಿದೆ. ಆದರೆ ದುಃಖಕರವಾಗಿ ಒಳಿತಿಗಾಗಿ ಅಲ್ಲ. ಒಂದು ದೃಷ್ಟಾಂತವು ಭಾರತದಲ್ಲಿ ಕಾಣಸಿಗುತ್ತದೆ. ಇಲ್ಲಿ ಒಬ್ಬ ಹೆಂಡತಿಯು ತನ್ನ ಗಂಡನ ಕುಟುಂಬದೊಂದಿಗೆ ಜೀವಿಸಿ ತನ್ನ ವಿವಾಹ ಸಂಬಂಧಿಗಳ ನಿರ್ದೇಶಕ್ಕೆ ಅನುಸಾರವಾಗಿ ಮನೆಯಲ್ಲಿ ಕೆಲಸಮಾಡಬಹುದು. ಈಗಿನ ಕಾಲದಲ್ಲಾದರೊ ಭಾರತೀಯ ಹೆಂಡತಿಯರು ಮನೆಯ ಹೊರಗೆ ಉದ್ಯೋಗವನ್ನು ಹುಡುಕುವುದು ಅಸಾಮಾನ್ಯವಲ್ಲ. ಆದರೂ ಅವರಿನ್ನೂ ಮನೆಯಲ್ಲಿ ತಮ್ಮ ಸಾಂಪ್ರದಾಯಿಕ ಪಾತ್ರಗಳನ್ನು ಪೂರೈಸಬೇಕೆಂದು ನಿರೀಕ್ಷಿಸಲಾಗುತ್ತದೆಂಬುದು ವ್ಯಕ್ತ. ಅನೇಕ ದೇಶಗಳಲ್ಲಿ ಹಾಕಲ್ಪಡುವ ಪ್ರಶ್ನೆಯು, ಕುಟುಂಬದ ಇತರ ಸದಸ್ಯರಿಗೆ ಹೋಲಿಸುವಾಗ, ಹೊರಗಣ ಉದ್ಯೋಗವಿರುವ ಒಬ್ಬ ಸ್ತ್ರೀಯು, ಮನೆಯಲ್ಲಿ ಎಷ್ಟು ಕೆಲಸವನ್ನು ಮಾಡುವಂತೆ ನಿರೀಕ್ಷಿಸಲ್ಪಡಬೇಕು? ಎಂಬುದೇ.

      9 ಪ್ರಾಚ್ಯ ಸಮಾಜಗಳಲ್ಲಿ, ಪ್ರಬಲವಾದ ವಿಸ್ತರಿತ ಕುಟುಂಬ ಸಂಬಂಧಗಳು ಸಾಂಪ್ರದಾಯಿಕ. ಆದರೂ ಪಾಶ್ಚಾತ್ಯ ಶೈಲಿಯ ವ್ಯಕ್ತಿವಾದದ ಪ್ರಭಾವದಲ್ಲಿ ಮತ್ತು ಆರ್ಥಿಕ ಸಮಸ್ಯೆಗಳ ಒತ್ತಡದಲ್ಲಿ, ಸಾಂಪ್ರದಾಯಿಕ ವಿಸ್ತರಿತ ಕುಟುಂಬವು ಬಲಹೀನಗೊಳ್ಳುತ್ತಿದೆ. ಆದುದರಿಂದ ಅನೇಕರು ಕುಟುಂಬದಲ್ಲಿರುವ ವೃದ್ಧ ಸದಸ್ಯರ ಪರಾಮರಿಕೆಯನ್ನು ಒಂದು ಅವಶ್ಯ ಕರ್ತವ್ಯ ಅಥವಾ ಒಂದು ಸುಯೋಗವಾಗಿ ವೀಕ್ಷಿಸುವ ಬದಲಾಗಿ ಒಂದು ಹೊರೆಯಾಗಿ ವೀಕ್ಷಿಸುತ್ತಾರೆ. ಕೆಲವು ವೃದ್ಧ ಹೆತ್ತವರನ್ನು ಅಪಪ್ರಯೋಗಿಸಲಾಗುತ್ತದೆ. ವೃದ್ಧ ವ್ಯಕ್ತಿಗಳ ಅಪಪ್ರಯೋಗ ಮತ್ತು ಅಲಕ್ಷ್ಯವನ್ನು ಇಂದು ಅನೇಕ ದೇಶಗಳಲ್ಲಿ ಕಂಡುಕೊಳ್ಳಲಾಗುತ್ತಿದೆ ನಿಜ.

      10, 11. ಕುಟುಂಬವು ಯೂರೋಪಿಯನ್‌ ದೇಶಗಳಲ್ಲಿ ಬದಲಾವಣೆಗೊಳ್ಳುತ್ತಿದೆಯೆಂದು ಯಾವ ವಾಸ್ತವಾಂಶಗಳು ತೋರಿಸುತ್ತವೆ?

      10 ವಿವಾಹ ವಿಚ್ಛೇದವು ಹೆಚ್ಚೆಚ್ಚು ಸಾಮಾನ್ಯವಾಗುತ್ತ ಬರುತ್ತಿದೆ. ಸ್ಪೆಯ್ನ್‌ನಲ್ಲಿ, 20ನೆಯ ಶತಮಾನದ ಕೊನೆಯ ದಶಕದ ಆರಂಭದೊಳಗೆ, ವಿವಾಹ ವಿಚ್ಛೇದದ ಪ್ರಮಾಣವು 8 ವಿವಾಹಗಳಲ್ಲಿ 1ಕ್ಕೆ ಏರಿತು. ಕೇವಲ 25 ವರುಷಗಳ ಹಿಂದೆ ಇದ್ದ 100ರಲ್ಲಿ 1ರಿಂದ ಇದು ಒಂದು ದೊಡ್ಡ ನೆಗೆತವೇ ಸರಿ. ಯೂರೋಪ್‌ನಲ್ಲಿ ಅತ್ಯುನ್ನತ ವಿವಾಹ ವಿಚ್ಛೇದದ ಪ್ರಮಾಣ (10ರಲ್ಲಿ 4 ವಿವಾಹಗಳು ವಿಫಲಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗುತ್ತದೆ) ಇದೆಯೆಂದು ವದಂತಿಯಿರುವ ಬ್ರಿಟನ್‌, ಒಂಟಿ ಹೆತ್ತವರ ಕುಟುಂಬಗಳ ಸಂಖ್ಯೆಯಲ್ಲಿ ಉಕ್ಕೇರುವಿಕೆಯನ್ನು ಕಂಡಿದೆ.

      11 ಜರ್ಮನಿಯಲ್ಲಿ ಅನೇಕರು ಸಾಂಪ್ರದಾಯಿಕ ಕುಟುಂಬವನ್ನು ಪೂರ್ತಿಯಾಗಿ ತ್ಯಜಿಸಿ ಬಿಡುತ್ತಿರುವಂತೆ ಕಾಣುತ್ತದೆ. ಎಲ್ಲ ಜರ್ಮನ್‌ ಮನೆವಾರ್ತೆಗಳಲ್ಲಿ 35 ಪ್ರತಿಶತ, ಒಬ್ಬ ವ್ಯಕ್ತಿಯನ್ನೂ 31 ಪ್ರತಿಶತ ಬರೇ ಇಬ್ಬರನ್ನು ಒಳಗೂಡಿರುವುದನ್ನೂ 1990ಗಳು ನೋಡಿದವು. ಫ್ರೆಂಚರು ಸಹ ಕಡಮೆ ವಿವಾಹ ಮಾಡಿಕೊಳ್ಳುತ್ತಿದ್ದಾರೆ ಮತ್ತು ವಿವಾಹವಾಗುವವರು ಹೆಚ್ಚು ಬಾರಿ ಮತ್ತು ಹಿಂದಿಗಿಂತಲೂ ಬೇಗನೆ ವಿವಾಹ ವಿಚ್ಛೇದ ಮಾಡುತ್ತಾರೆ. ಹೆಚ್ಚುತ್ತಿರುವ ಸಂಖ್ಯೆಗಳು ವಿವಾಹದ ಜವಾಬ್ದಾರಿಗಳಿಲ್ಲದೆ ಒಟ್ಟುಗೂಡಿ ಜೀವಿಸಲು ಇಷ್ಟಪಡುತ್ತವೆ. ಇದಕ್ಕೆ ತುಲನೆಯಾಗುವ ಪ್ರವೃತ್ತಿಗಳನ್ನು ಲೋಕವ್ಯಾಪಕವಾಗಿ ನೋಡಲಾಗುತ್ತದೆ.

      12. ಆಧುನಿಕ ಕುಟುಂಬದಲ್ಲಿನ ಬದಲಾವಣೆಗಳ ಕಾರಣ ಮಕ್ಕಳು ಹೇಗೆ ಕಷ್ಟಾನುಭವಿಸುತ್ತಾರೆ?

      12 ಮಕ್ಕಳ ವಿಷಯದಲ್ಲೇನು? ಅಮೆರಿಕದಲ್ಲಿ ಮತ್ತು ಇತರ ಅನೇಕ ದೇಶಗಳಲ್ಲಿ, ದಾಂಪತ್ಯದ ಹೊರಗೆ ಹೆಚ್ಚೆಚ್ಚು ಶಿಶುಗಳು, ಕೆಲವು ಎಳೆಯರಾದ ಹದಿಹರೆಯದವರಿಗೆ ಹುಟ್ಟುತ್ತವೆ. ಅನೇಕ ಹದಿಹರೆಯದ ಹುಡುಗಿಯರಿಗೆ, ವಿಭಿನ್ನ ತಂದೆಗಳಿಂದ ಹುಟ್ಟಿದ ಅನೇಕ ಮಕ್ಕಳಿವೆ. ಲೋಕದ ಸುತ್ತಲಿನ ವರದಿಗಳು, ಲಕ್ಷಗಟ್ಟಲೆ ಮಂದಿ ಮನೆಯಿಲ್ಲದ ಮಕ್ಕಳು ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆಂದು ತಿಳಿಸುತ್ತವೆ; ಅನೇಕರು ಅಪಪ್ರಯೋಗಿಸಲ್ಪಡುವ ಮನೆಗಳಿಂದ ಪಲಾಯನ ಮಾಡುತ್ತಿದ್ದಾರೆ ಅಥವಾ ತಮ್ಮನ್ನು ಇನ್ನೆಂದಿಗೂ ಪೋಷಿಸಸಾಧ್ಯವಿಲ್ಲದ ಮನೆಗಳಿಂದ ಹೊರದಬ್ಬಲ್ಪಡುತ್ತಾರೆ.

      13. ಯಾವ ವ್ಯಾಪಕವಾದ ಸಮಸ್ಯೆಗಳು ಕುಟುಂಬಗಳಿಂದ ಸಂತೋಷವನ್ನು ಕಸಿದುಕೊಳ್ಳುತ್ತವೆ?

      13 ಹೌದು, ಕುಟುಂಬವು ಉತ್ಕಟ ಸ್ಥಿತಿಯಲ್ಲಿದೆ. ಆಗಲೆ ಹೇಳಲ್ಪಟ್ಟಿರುವುದಕ್ಕೆ ಕೂಡಿಕೆಯಾಗಿ, ಹದಿಹರೆಯದವರ ದಂಗೆ, ಮಗುವಿನ ಅಪಪ್ರಯೋಗ, ವಿವಾಹಜೊತೆಯ ಬಲಾತ್ಕಾರ, ಮದ್ಯರೋಗಾವಸ್ಥೆ ಮತ್ತು ಇತರ ಧ್ವಂಸಕಾರಕ ಸಮಸ್ಯೆಗಳು ಅನೇಕ ಕುಟುಂಬಗಳಿಂದ ಸಂತೋಷವನ್ನು ಕಸಿದುಕೊಳ್ಳುತ್ತವೆ. ದೊಡ್ಡ ಸಂಖ್ಯೆಯ ಮಕ್ಕಳಿಗೆ ಮತ್ತು ವಯಸ್ಕರಿಗೆ ಕುಟುಂಬವು ನಿಶ್ಚಯವಾಗಿಯೂ ಒಂದು ಆಶ್ರಯಸ್ಥಾನವಾಗಿರುವುದಿಲ್ಲ.

      14. (ಎ) ಕೆಲವರಿಗನುಸಾರ, ಕುಟುಂಬದ ಉತ್ಕಟ ಸ್ಥಿತಿಗೆ ಕಾರಣಗಳಾವುವು? (ಬಿ) ಇಂದಿನ ಲೋಕವನ್ನು ಒಂದನೆಯ ಶತಮಾನದ ನ್ಯಾಯವಾದಿಯೊಬ್ಬನು ಹೇಗೆ ವರ್ಣಿಸಿದನು ಮತ್ತು ಅವನ ಮಾತುಗಳ ನೆರವೇರಿಕೆಯು ಕುಟುಂಬ ಜೀವನದ ಮೇಲೆ ಯಾವ ಪ್ರಭಾವವನ್ನು ಬೀರಿದೆ?

      14 ಕುಟುಂಬದಲ್ಲಿ ಏಕೆ ಈ ಉತ್ಕಟ ಸ್ಥಿತಿ? ಕೆಲವರು ಪ್ರಸಕ್ತ ದಿನದ ಈ ಕುಟುಂಬ ಉತ್ಕಟ ಸ್ಥಿತಿಗೆ ಕಾರಣವನ್ನು ಕೆಲಸಸ್ಥಳಕ್ಕೆ ಮಹಿಳೆಯರ ಪ್ರವೇಶದ ಮೇಲೆ ಹೊರಿಸುತ್ತಾರೆ. ಇತರರು ಇಂದಿನ ನೈತಿಕ ಕುಸಿತಕ್ಕೆ ಕೈತೋರಿಸುತ್ತಾರೆ. ಮತ್ತು ಹೆಚ್ಚಿಗೆಯ ಕಾರಣಗಳು ಉದಾಹರಿಸಲ್ಪಡುತ್ತವೆ. ಬಹುಪಾಲು ಎರಡು ಸಾವಿರ ವರ್ಷಗಳಿಗೆ ಹಿಂದೆ, “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ . . . ಆಗಿರುವರು” ಎಂದು ಒಬ್ಬ ಪ್ರಸಿದ್ಧ ನ್ಯಾಯವಾದಿಯು ಬರೆದಾಗ, ಅನೇಕ ಒತ್ತಡಗಳು ಕುಟುಂಬವನ್ನು ಬಾಧಿಸುವವು ಎಂಬುದಾಗಿ ಮುಂತಿಳಿಸಿದನು. (2 ತಿಮೊಥೆಯ 3:1-5) ಈ ಮಾತುಗಳು ಇಂದು ನೆರವೇರುತ್ತಿರುವುದನ್ನು ಯಾವನು ಸಂಶಯಿಸುವನು? ಇಂತಹ ಪರಿಸ್ಥಿತಿಗಳಿರುವ ಒಂದು ಲೋಕದಲ್ಲಿ, ಅನೇಕ ಕುಟುಂಬಗಳು ಉತ್ಕಟ ಸ್ಥಿತಿಯಲ್ಲಿರುವುದು ಆಶ್ಚರ್ಯಕರವೊ?

      ಕುಟುಂಬ ಸಂತೋಷದ ರಹಸ್ಯ

      15-17. ಈ ಪುಸ್ತಕದಲ್ಲಿ, ಕುಟುಂಬ ಸಂತೋಷದ ರಹಸ್ಯವನ್ನು ಯಾವ ಪ್ರಮಾಣ ಗ್ರಂಥವು ಹಿಡಿದುಕೊಂಡಿದೆಯೆಂದು ತೋರಿಸಲಾಗುವುದು?

      15 ಕುಟುಂಬದಲ್ಲಿ ಸಂತೋಷವನ್ನು ಸಾಧಿಸುವುದು ಹೇಗೆಂಬ ವಿಷಯದಲ್ಲಿ ಸಕಲ ಪಕ್ಕಗಳಿಂದಲೂ ಸಲಹೆಯು ನೀಡಲ್ಪಡುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ವಸಹಾಯ ಪುಸ್ತಕಗಳ ಮತ್ತು ಪತ್ರಿಕೆಗಳ ಅನಂತ ಪ್ರವಾಹವು ಬುದ್ಧಿವಾದವನ್ನು ನೀಡುತ್ತವೆ. ಸಮಸ್ಯೆಯೇನಂದರೆ ಮಾನವ ಸಲಹೆಗಾರರು ಒಬ್ಬರಿಗೊಬ್ಬರು ವಿರೋಧವಾದ ಹೇಳಿಕೆಗಳನ್ನು ನುಡಿಯುತ್ತಾರೆ, ಮತ್ತು ಇಂದು ಜನಪ್ರಿಯವಾಗಿರುವ ಸಲಹೆಯು ನಾಳೆ ಕಾರ್ಯಸಾಧ್ಯವಲ್ಲದ್ದಾಗಿ ಕಂಡುಬಂದೀತು.

      16 ಹಾಗಾದರೆ, ಭರವಸಾರ್ಹ ಕುಟುಂಬ ಮಾರ್ಗದರ್ಶನಕ್ಕಾಗಿ ನಾವೆತ್ತ ನೋಡಬಲ್ಲೆವು? ಒಳ್ಳೆಯದು, ಸುಮಾರು 1,900 ವರ್ಷಗಳ ಹಿಂದೆ ಮುಗಿಸಿದ ಒಂದು ಪುಸ್ತಕವನ್ನು ನೀವು ನೋಡುವಿರೊ? ಅಥವಾ ಇಂತಹ ಒಂದು ಪುಸ್ತಕವು ನಿರೀಕ್ಷಾರಹಿತವಾಗಿ ಚಾಲ್ತಿಯಲ್ಲಿ ಇಲ್ಲದ್ದು ಎಂದು ನಿಮಗೆ ಅನಿಸುವುದೊ? ಸತ್ಯವೇನಂದರೆ, ಕುಟುಂಬ ಸಂತೋಷದ ನಿಜ ರಹಸ್ಯವು ಇಂತಹ ಒಂದು ಮೂಲದಲ್ಲಿಯೇ ದೊರೆಯುತ್ತದೆ.

      17 ಆ ಮೂಲವು ಬೈಬಲಾಗಿದೆ. ಸಕಲ ಸಾಕ್ಷ್ಯಕ್ಕನುಸಾರವಾಗಿ, ಅದು ಸ್ವತಃ ದೇವರಿಂದ ಪ್ರೇರಿಸಲ್ಪಟ್ಟಿತು. ಬೈಬಲಿನಲ್ಲಿ ನಾವು ಮುಂದಿನ ಹೇಳಿಕೆಯನ್ನು ಕಂಡುಕೊಳ್ಳುತ್ತೇವೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಈ ಪ್ರಕಾಶನದಲ್ಲಿ, ಇಂದು ಕುಟುಂಬಗಳನ್ನು ಎದುರಿಸುವ ಒತ್ತಡಗಳು ಮತ್ತು ಸಮಸ್ಯೆಗಳನ್ನು ನಿರ್ವಹಿಸುವಾಗ ‘ತಿದ್ದುಪಾಟು ಮಾಡಲು’ ಬೈಬಲು ನಿಮಗೆ ಹೇಗೆ ಸಹಾಯ ಮಾಡಬಲ್ಲದೆಂದು ಪರಿಗಣಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುವೆವು.

      18. ವಿವಾಹ ಸಲಹೆ ನೀಡುವಿಕೆಯಲ್ಲಿ ಬೈಬಲನ್ನು ಪ್ರಮಾಣ ಗ್ರಂಥವೆಂದು ಅಂಗೀಕರಿಸುವುದು ನ್ಯಾಯಸಮ್ಮತವೇಕೆ?

      18 ಬೈಬಲು ಕುಟುಂಬಗಳನ್ನು ಸಂತೋಷದಲ್ಲಿರುವಂತೆ ಸಹಾಯ ಮಾಡಬಲ್ಲದೆಂಬ ಸಾಧ್ಯತೆಯನ್ನು ನೀವು ವಿಸರ್ಜಿಸುವ ಪ್ರವೃತ್ತಿಯುಳ್ಳವರಾದರೆ, ಇದನ್ನು ಪರ್ಯಾಲೋಚಿಸಿರಿ: ಬೈಬಲನ್ನು ಪ್ರೇರಿಸಿದಾತನು ವಿವಾಹದ ಏರ್ಪಾಡಿನ ಮೂಲಕರ್ತನು. (ಆದಿಕಾಂಡ 2:18-25) ಆತನ ಹೆಸರು ಯೆಹೋವ ಎಂದು ಬೈಬಲು ಅನ್ನುತ್ತದೆ. (ಕೀರ್ತನೆ 83:18) ಆತನು ಸೃಷ್ಟಿಕರ್ತನೂ ‘ಯಾವ ತಂದೆಯಿಂದ . . . ಪ್ರತಿ ಜನ [“ಕುಟುಂಬ,” NW]ವೂ ಹೆಸರು ತೆಗೆದುಕೊಳ್ಳುತ್ತದೋ’ ಆತನೂ ಆಗಿದ್ದಾನೆ. (ಎಫೆಸ 3:14, 15) ಮಾನವಕುಲದ ಆದಿಯಿಂದ ಯೆಹೋವನು ಕುಟುಂಬ ಜೀವನವನ್ನು ಅವಲೋಕಿಸಿದ್ದಾನೆ. ಏಳಬಲ್ಲ ಸಮಸ್ಯೆಗಳನ್ನು ಆತನು ಬಲ್ಲನು ಮತ್ತು ಅವುಗಳನ್ನು ಬಗೆಹರಿಸಲಿಕ್ಕಾಗಿ ಆತನು ಸಲಹೆಯನ್ನು ಕೊಟ್ಟಿದ್ದಾನೆ. ಇತಿಹಾಸದಾದ್ಯಂತ, ಯಾರು ಬೈಬಲಿನ ಮೂಲತತ್ವಗಳನ್ನು ತಮ್ಮ ಕುಟುಂಬ ಜೀವನದಲ್ಲಿ ಯಥಾರ್ಥವಾಗಿ ಅನ್ವಯಿಸಿದರೊ ಅವರು, ಅಧಿಕ ಸಂತೋಷವನ್ನು ಕಂಡುಕೊಂಡರು.

      19-21. ವಿವಾಹದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಬೈಬಲಿನ ಶಕ್ತಿಯನ್ನು ಯಾವ ಆಧುನಿಕ ಅನುಭವಗಳು ತೋರಿಸುತ್ತವೆ?

      19 ದೃಷ್ಟಾಂತಕ್ಕೆ, ಇಂಡೊನೇಷ್ಯದ ಒಬ್ಬ ಗೃಹಿಣಿಯು ಆಂತರಿಕ ಪ್ರಚೋದನೆಯ ಜೂಜುಗಾರ್ತಿಯಾಗಿದ್ದಳು. ಅನೇಕ ವರ್ಷಗಳ ವರೆಗೆ ಆಕೆ ತನ್ನ ಮೂವರು ಮಕ್ಕಳನ್ನು ಅಸಡ್ಡೆಮಾಡಿ, ತನ್ನ ಗಂಡನೊಡನೆ ಕ್ರಮವಾಗಿ ಜಗಳಾಡುತ್ತಿದ್ದಳು. ತರುವಾಯ ಆಕೆ ಬೈಬಲನ್ನು ಅಭ್ಯಸಿಸತೊಡಗಿದಳು. ಕ್ರಮೇಣ ಆ ಸ್ತ್ರೀ ಬೈಬಲು ಹೇಳಿದ್ದನ್ನು ನಂಬುವವಳಾದಳು. ಆಕೆ ಅದರ ಸಲಹೆಯನ್ನು ಅನ್ವಯಿಸಿದಾಗ ಆಕೆ ಹೆಚ್ಚು ಉತ್ತಮ ಹೆಂಡತಿಯಾದಳು. ಬೈಬಲ್‌ ಮೂಲತತ್ವಗಳ ಮೇಲೆ ಆಧರಿಸಿದ ಆಕೆಯ ಪ್ರಯತ್ನಗಳು ಆಕೆಯ ಇಡೀ ಕುಟುಂಬಕ್ಕೆ ಸಂತೋಷವನ್ನು ತಂದಿತು.

      20 ಸ್ಪೆಯ್ನ್‌ನ ಒಬ್ಬ ಗೃಹಿಣಿ ಹೇಳುವುದು: “ನಮ್ಮಲ್ಲಿ ಗಂಭೀರ ಸಮಸ್ಯೆಗಳು ಆರಂಭವಾಗಲು ತೊಡಗಿದಾಗ ನಮಗೆ ವಿವಾಹವಾಗಿ ಕೇವಲ ಒಂದು ವರುಷವಾಗಿತ್ತು.” ಆಕೆಗೂ ಆಕೆಯ ಗಂಡನಿಗೂ ಸಮಾನಾಸಕ್ತಿಗಳು ತೀರ ಕಡಮೆಯಾಗಿದ್ದವು, ಮತ್ತು ವಾದಿಸುವಾಗ ಬಿಟ್ಟರೆ ಅವರ ಮಾತುಕತೆ ಕೊಂಚವಾಗಿತ್ತು. ಒಬ್ಬ ಚಿಕ್ಕ ಮಗಳಿದ್ದರೂ, ಅವರು ಶಾಸನಬದ್ಧವಾದ ಪ್ರತ್ಯೇಕವಾಸ ಪಡೆಯಲು ನಿರ್ಣಯಿಸಿದರು. ಆದರೆ ಅದಾಗುವ ಮೊದಲು, ಬೈಬಲನ್ನು ಪರೀಕ್ಷಿಸುವಂತೆ ಅವರನ್ನು ಪ್ರೋತ್ಸಾಹಿಸಲಾಯಿತು. ವಿವಾಹಿತ ಪುರುಷರಿಗೆ ಮತ್ತು ಸ್ತ್ರೀಯರಿಗೆ ಅದು ಕೊಡುವ ಸಲಹೆಯನ್ನು ಅವರು ಅಭ್ಯಸಿಸಿ, ಅದನ್ನು ಅನ್ವಯಿಸತೊಡಗಿದರು. ಸ್ವಲ್ಪದರಲ್ಲಿ, ಅವರು ಸಮಾಧಾನದಿಂದ ಸಂವಾದಿಸಶಕ್ತರಾದರು, ಮತ್ತು ಅವರ ಚಿಕ್ಕ ಕುಟುಂಬವು ಸಂತೋಷದಿಂದ ಐಕ್ಯಗೊಂಡಿತು.

      21 ಬೈಬಲು ವಯಸ್ಸಾದವರಿಗೂ ಸಹಾಯ ಮಾಡುತ್ತದೆ. ದೃಷ್ಟಾಂತಕ್ಕೆ, ಒಂದು ಜ್ಯಾಪನೀಸ್‌ ದಂಪತಿಗಳ ಅನುಭವವನ್ನು ಪರಿಗಣಿಸಿರಿ. ಗಂಡನು ಮುಂಗೋಪಿ ಮತ್ತು ಕೆಲವು ಬಾರಿ ಹಿಂಸಾಚಾರಿಯಾಗಿದ್ದನು. ಪ್ರಥಮವಾಗಿ, ಆ ದಂಪತಿಗಳ ಪುತ್ರಿಯರು, ತಮ್ಮ ಹೆತ್ತವರ ವಿರೋಧದ ಹೊರತೂ, ಬೈಬಲನ್ನು ಅಭ್ಯಸಿಸತೊಡಗಿದರು. ತರುವಾಯ ಗಂಡನು ತನ್ನ ಪುತ್ರಿಯರ ಜೊತೆಸೇರಿದರೂ, ಹೆಂಡತಿಯು ಆಕ್ಷೇಪಣೆಯನ್ನೊಡ್ಡುತ್ತ ಹೋದಳು. ಆದರೆ ವರುಷಗಳು ಗತಿಸಿದಂತೆ, ತನ್ನ ಕುಟುಂಬದ ಮೇಲೆ ಬೈಬಲ್‌ ಮೂಲತತ್ವಗಳ ಒಳ್ಳೆಯ ಪರಿಣಾಮವನ್ನು ಆಕೆ ಗಮನಿಸಿದಳು. ಆಕೆಯ ಪುತ್ರಿಯರು ಆಕೆಯ ಉತ್ತಮ ಆರೈಕೆಯನ್ನು ಮಾಡಿದರು, ಮತ್ತು ಆಕೆಯ ಗಂಡನು ಹೆಚ್ಚು ಸೌಮ್ಯಭಾವದವನಾದನು. ಇಂತಹ ಬದಲಾವಣೆಗಳು ಆ ಸ್ತ್ರೀಯು ತಾನೇ ಬೈಬಲನ್ನು ಪರೀಕ್ಷಿಸುವಂತೆ ಪ್ರಚೋದಿಸಿತು, ಮತ್ತು ಅದು ಆಕೆಯ ಮೇಲೆಯೂ ತದ್ರೀತಿಯ ಉತ್ತಮ ಪರಿಣಾಮವನ್ನು ಬೀರಿತು. ಈ ವೃದ್ಧೆಯು ಮತ್ತೆ ಮತ್ತೆ, “ನಾವು ನಿಜವಾದ ವಿವಾಹಿತ ದಂಪತಿಗಳಾದೆವು,” ಎಂದು ಹೇಳಿದಳು.

      22, 23. ಸಕಲ ರಾಷ್ಟ್ರೀಯ ಹಿನ್ನೆಲೆಗಳ ಜನರು ತಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ಕಂಡುಹಿಡಿಯಲು ಬೈಬಲು ಹೇಗೆ ಸಹಾಯ ಮಾಡುತ್ತದೆ?

      22 ಕುಟುಂಬ ಸಂತೋಷದ ರಹಸ್ಯವನ್ನು ಕಲಿತಿರುವ ಅನೇಕಾನೇಕ ಜನರ ಮಧ್ಯೆ ಈ ವ್ಯಕ್ತಿಗಳಿದ್ದಾರೆ. ಅವರು ಬೈಬಲಿನ ಸಲಹೆಯನ್ನು ಅಂಗೀಕರಿಸಿ ಅದನ್ನು ಅನ್ವಯಿಸಿಕೊಂಡಿದ್ದಾರೆ. ನಿಜ, ಅವರು ಇತರರಂತೆ ಅದೇ ಹಿಂಸಾಚಾರದ, ಅನೈತಿಕ, ಆರ್ಥಿಕವಾಗಿ ಒತ್ತಡಕ್ಕೊಳಗಾದ ಲೋಕದಲ್ಲಿ ಜೀವಿಸುತ್ತಾರೆ. ಅದಲ್ಲದೆ, ಅವರು ಅಪರಿಪೂರ್ಣರಾಗಿದ್ದಾರೆ, ಆದರೆ ಅವರು ಕುಟುಂಬ ಏರ್ಪಾಡಿನ ಮೂಲಕರ್ತನ ಇಷ್ಟವನ್ನು ಮಾಡಲು ಪ್ರಯತ್ನಿಸುವುದರಲ್ಲಿ ಸಂತೋಷವನ್ನು ಕಂಡುಹಿಡಿಯುತ್ತಾರೆ. ಬೈಬಲು ಹೇಳುವಂತೆ, ಯೆಹೋವ ದೇವರು “ನೀನು ಪ್ರಯೋಜನ ಪಡೆಯುವಂತೆ ಕಲಿಸುವಾತನು, ನೀನು ನಡೆಯಬೇಕಾದ ಮಾರ್ಗದಲ್ಲಿ ಹೆಜ್ಜೆಯಿಡುವಂತೆ ಮಾಡುವಾತನು” ಆಗಿದ್ದಾನೆ.—ಯೆಶಾಯ 48:17, NW.

      23 ಬೈಬಲನ್ನು ಬಹುಪಾಲು ಎರಡು ಸಾವಿರ ವರುಷಗಳ ಹಿಂದೆ ಮುಗಿಸಲಾಯಿತಾದರೂ ಅದರ ಸಲಹೆಯು ನಿಜವಾಗಿಯೂ ಸದ್ಯೋಚಿತವಾಗಿದೆ. ಅಲ್ಲದೆ, ಅದು ಸಕಲ ಜನರಿಗಾಗಿ ಬರೆಯಲ್ಪಟ್ಟಿತು. ಬೈಬಲು ಒಂದು ಅಮೆರಿಕನ್‌ ಗ್ರಂಥವಾಗಲಿ ಒಂದು ಪಾಶ್ಚಾತ್ಯ ಗ್ರಂಥವಾಗಲಿ ಆಗಿರುವುದಿಲ್ಲ. ಯೆಹೋವನು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ”ದನು ಮತ್ತು ಸರ್ವತ್ರ ಇರುವ ಜನರ ಪ್ರಕೃತಿಯನ್ನು ಆತನು ಬಲ್ಲನು. (ಅ. ಕೃತ್ಯಗಳು 17:26) ಬೈಬಲ್‌ ಮೂಲತತ್ವಗಳು ಎಲ್ಲರಿಗೂ ಕಾರ್ಯಸಾಧಕವಾಗುತ್ತವೆ. ಅವನ್ನು ನೀವು ಅನ್ವಯಿಸುವುದಾದರೆ, ನೀವೂ ಕುಟುಂಬ ಸಂತೋಷದ ರಹಸ್ಯವನ್ನು ತಿಳಿದವರಾಗುವಿರಿ.

      ನೀವು ಈ ಪ್ರಶ್ನೆಗಳನ್ನು ಉತ್ತರಿಸಬಲ್ಲಿರೊ?

      ಇಂದು ಕುಟುಂಬಕ್ಕೆ ಏನು ಸಂಭವಿಸುತ್ತಿದೆ?—2 ತಿಮೊಥೆಯ 3:1-4.

      ಕುಟುಂಬ ಏರ್ಪಾಡನ್ನು ಯಾರು ಆರಂಭಿಸಿದನು?—ಎಫೆಸ 3:14, 15.

      ಕುಟುಂಬ ಸಂತೋಷದ ರಹಸ್ಯವೇನು?—ಯೆಶಾಯ 48:17.

  • ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಮೂರು

      ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು

      1, 2. (ಎ) ವಿವಾಹವು ಎಷ್ಟು ದೀರ್ಘಕಾಲ ಚಿರಸ್ಥಾಯಿಯಾಗಿರುವಂತೆ ರಚಿಸಲ್ಪಟ್ಟಿತು? (ಬಿ) ಇದು ಹೇಗೆ ಸಾಧ್ಯವಿದೆ?

      ದೇವರು ಪ್ರಥಮ ಪುರುಷನನ್ನೂ ಸ್ತ್ರೀಯನ್ನೂ ವಿವಾಹದಲ್ಲಿ ಒಂದುಗೂಡಿಸಿದಾಗ, ಆ ಸಾಂಗತ್ಯವು ಕೇವಲ ತಾತ್ಕಾಲಿಕವಾಗಿರುವುದೆಂಬ ಯಾವ ಸೂಚನೆಯೂ ಇರಲಿಲ್ಲ. ಆದಾಮಹವ್ವರು, ಜೀವಮಾನ ಪರ್ಯಂತರವಾಗಿ ಒಟ್ಟಿಗಿರಬೇಕಾಗಿತ್ತು. (ಆದಿಕಾಂಡ 2:24) ಒಂದು ಗೌರವಾರ್ಹ ವಿವಾಹಕ್ಕಿರುವ ದೇವರ ಮಟ್ಟವು ಒಂದು ಗಂಡು ಮತ್ತು ಒಂದು ಹೆಣ್ಣಿನ ಒಂದಾಗುವಿಕೆಯೇ. ಒಬ್ಬ ಅಥವಾ ಇಬ್ಬರು ಸಂಗಾತಿಗಳಿಂದ ಗಂಭೀರವಾದ ಲೈಂಗಿಕ ದುರಾಚಾರವು ಮಾತ್ರ ಪುನರ್ವಿವಾಹಕ್ಕೆ ಸಾಧ್ಯತೆಯಿರುವ ವಿವಾಹ ವಿಚ್ಛೇದಕ್ಕೆ ಶಾಸ್ತ್ರೀಯ ಆಧಾರಗಳನ್ನು ಒದಗಿಸುತ್ತದೆ.—ಮತ್ತಾಯ 5:32.

      2 ಇಬ್ಬರು ವ್ಯಕ್ತಿಗಳಿಗೆ ಅನಿಶ್ಚಿತ ದೀರ್ಘಕಾಲದ ವರೆಗೆ ಸಂತೋಷದಿಂದ ಕೂಡಿ ಜೀವಿಸುವ ಸಾಧ್ಯತೆ ಇದೆಯೆ? ಹೌದು, ಮತ್ತು ಬೈಬಲು, ಇದು ಸಾಧ್ಯವಾಗುವಂತೆ ಮಾಡಲು ಸಹಾಯಕವಾಗಿ ಎರಡು ಮಹತ್ವದ ಅಂಶಗಳನ್ನು ಅಥವಾ ಕೀಲಿ ಕೈಗಳನ್ನು ಗುರುತಿಸುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಇವನ್ನು ಉಪಯೋಗಕ್ಕೆ ಹಾಕುವಲ್ಲಿ, ಅವರು ಸಂತೋಷ ಮತ್ತು ಅನೇಕ ಆಶೀರ್ವಾದಗಳ ದ್ವಾರದ ಬೀಗವನ್ನು ಬಿಚ್ಚುವರು. ಈ ಕೀಲಿ ಕೈಗಳಾವುವು?

      ಒಂದನೆಯ ಕೀಲಿ ಕೈ

      [ಪುಟ 28ರಲ್ಲಿರುವ ಚಿತ್ರ]

      ಪರಸ್ಪರ ಪ್ರೀತಿ ಮತ್ತು ಗೌರವವು ವಿವಾಹದಲ್ಲಿ ಯಶಸ್ಸಿಗೆ ನಡೆಸುತ್ತದೆ

      3. ವಿವಾಹಿತ ಸಂಗಾತಿಗಳಿಂದ ಯಾವ ಮೂರು ತೆರದ ಪ್ರೀತಿಯು ಬೆಳೆಸಲ್ಪಡಬೇಕು?

      3 ಪ್ರೀತಿಯೇ ಒಂದನೆಯ ಕೀಲಿ ಕೈ. ರಸಕರವಾಗಿ, ಬೈಬಲಿನಲ್ಲಿ ವಿಭಿನ್ನ ರೀತಿಗಳ ಪ್ರೀತಿಯನ್ನು ಗುರುತಿಸಲಾಗುತ್ತದೆ. ಆತ್ಮೀಯ ಸ್ನೇಹಿತರ ಮಧ್ಯೆ ಇರುವ ರೀತಿಯ ಪ್ರೀತಿ, ಒಬ್ಬನ ಕಡೆಗಿರುವ ಹೃದಯೋಲ್ಲಾಸದ, ವೈಯಕ್ತಿಕ ಮಮತೆಯು ಒಂದಾಗಿದೆ. (ಯೋಹಾನ 11:3) ಕುಟುಂಬ ಸದಸ್ಯರ ಮಧ್ಯೆ ಬೆಳೆಯುವ ಪ್ರೀತಿ ಇನ್ನೊಂದಾಗಿದೆ. (ರೋಮಾಪುರ 12:10) ಮೂರನೆಯದ್ದು, ಒಬ್ಬನಿಗೆ ವಿರುದ್ಧ ಲಿಂಗದ ವ್ಯಕ್ತಿಯ ಕಡೆಗೆ ಇರಬಲ್ಲ ಪ್ರಣಯ ಸಂಬಂಧವಾದ ಪ್ರೀತಿಯೇ. (ಜ್ಞಾನೋಕ್ತಿ 5:15-20) ಇವುಗಳೆಲ್ಲವನ್ನು ಗಂಡ ಮತ್ತು ಹೆಂಡತಿಯು ಬೆಳೆಸಿಕೊಳ್ಳಬೇಕು ನಿಶ್ಚಯ. ಆದರೆ, ಇವುಗಳಿಗಿಂತ ಹೆಚ್ಚು ಪ್ರಾಮುಖ್ಯವಾದ ನಾಲ್ಕನೆಯ ರೀತಿಯ ಪ್ರೀತಿಯೊಂದಿದೆ.

      4. ನಾಲ್ಕನೆಯ ತೆರದ ಪ್ರೀತಿಯು ಯಾವುದು?

      4 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಮೂಲಭಾಷೆಯಲ್ಲಿ, ಈ ನಾಲ್ಕನೆಯ ರೀತಿಯ ಪ್ರೀತಿಗಿರುವ ಪದವು ಅಗಾಪೆಯಾಗಿದೆ. ಆ ಪದವು 1 ಯೋಹಾನ 4:8, (NW)ರಲ್ಲಿ ಉಪಯೋಗಿಸಲ್ಪಟ್ಟಿದೆ. ಅಲ್ಲಿ ನಮಗೆ ಹೇಳಲ್ಪಡುವುದು: “ದೇವರು ಪ್ರೀತಿಯಾಗಿದ್ದಾನೆ.” “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ” ನಿಶ್ಚಯ. (1 ಯೋಹಾನ 4:19) ಒಬ್ಬ ಕ್ರೈಸ್ತನು ಇಂತಹ ಪ್ರೀತಿಯನ್ನು ಪ್ರಥಮವಾಗಿ ಯೆಹೋವ ದೇವರಿಗಾಗಿ ಮತ್ತು ಬಳಿಕ ತನ್ನ ಜೊತೆ ಮಾನವರಿಗಾಗಿ ವಿಕಸಿಸುತ್ತಾನೆ. (ಮಾರ್ಕ 12:29-31) ಆ ಅಗಾಪೆ ಪದವು ಎಫೆಸ 5:2ರಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅಲ್ಲಿ ಹೇಳುವುದು: “ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ . . . ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.” ಈ ರೀತಿಯ ಪ್ರೀತಿಯು ತನ್ನ ನಿಜ ಹಿಂಬಾಲಕರನ್ನು ಗುರುತಿಸುವುದೆಂದು ಯೇಸು ಹೇಳಿದನು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ [ಅಗಾಪೆ]ಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) 1 ಕೊರಿಂಥ 13:13ರಲ್ಲಿಯೂ ಅಗಾಪೆಯ ಉಪಯೋಗವನ್ನು ಗಮನಿಸಿರಿ: “ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿ [ಅಗಾಪೆ]ಯೇ.”

      5, 6. (ಎ) ಪ್ರೀತಿಯು ನಂಬಿಕೆ ಮತ್ತು ನಿರೀಕ್ಷೆಗಿಂತ ಏಕೆ ಹೆಚ್ಚು ಮಹತ್ವದ್ದಾಗಿದೆ? (ಬಿ) ಪ್ರೀತಿಯು ಒಂದು ವಿವಾಹವನ್ನು ಚಿರಸ್ಥಾಯಿಯಾಗಿರಿಸಲು ಸಹಾಯ ಮಾಡುವುದೆಂಬುದಕ್ಕಿರುವ ಕೆಲವು ಕಾರಣಗಳಾವುವು?

      5 ಈ ಅಗಾಪೆ ಪ್ರೀತಿಯನ್ನು ಯಾವುದು ನಂಬಿಕೆ ಮತ್ತು ನಿರೀಕ್ಷೆಗಿಂತ ಹೆಚ್ಚು ಮಹತ್ವವುಳ್ಳದ್ದಾಗಿ ಮಾಡುತ್ತದೆ? ಅದು ದೇವರ ವಾಕ್ಯದಲ್ಲಿ ಕಂಡುಕೊಳ್ಳಲ್ಪಡುವ ಮೂಲತತ್ವಗಳಿಂದ—ತಕ್ಕದಾದ ಮೂಲತತ್ವಗಳಿಂದ—ನಿಯಂತ್ರಿಸಲ್ಪಡುತ್ತದೆ. (ಕೀರ್ತನೆ 119:105) ದೇವರ ದೃಷ್ಟಿಕೋನದಲ್ಲಿ ಯಾವುದು ಸಮರ್ಪಕವೊ ಮತ್ತು ಒಳ್ಳೆಯದೊ ಅದನ್ನು ಇತರರಿಗೆ—ಗ್ರಾಹಕನು ಅದಕ್ಕೆ ಯೋಗ್ಯನಾಗಿ ಕಂಡುಬರಲಿ, ಇಲ್ಲದಿರಲಿ—ಮಾಡುವ ನಿಸ್ವಾರ್ಥ ಚಿಂತೆಯೇ ಅದಾಗಿದೆ. ಅಂತಹ ಪ್ರೀತಿಯು, “ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ,” ಎಂಬ ಬೈಬಲಿನ ಸಲಹೆಯನ್ನು ವಿವಾಹ ಸಹಭಾಗಿಗಳು ಅನುಸರಿಸುವಂತೆ ಶಕ್ತರನ್ನಾಗಿಸುತ್ತದೆ. (ಕೊಲೊಸ್ಸೆ 3:13) ಪ್ರೀತಿಪರ ವಿವಾಹಿತ ದಂಪತಿಗಳಲ್ಲಿ, “[ಪರಸ್ಪರವಾಗಿ] ಯಥಾರ್ಥವಾದ ಪ್ರೀತಿ [ಅಗಾಪೆ]” ಇರುತ್ತದೆ ಮತ್ತು ಅವರು ಅದನ್ನು ಬೆಳೆಸುತ್ತಾರೆ, ಏಕೆಂದರೆ “ಪ್ರೀತಿಯು ಬಹುಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ಪ್ರೀತಿಯು ತಪ್ಪುಗಳನ್ನು ಮುಚ್ಚುತ್ತದೆಂಬುದನ್ನು ಗಮನಿಸಿರಿ. ಅದು ಅವನ್ನು ನಿವಾರಿಸುವುದಿಲ್ಲ; ಏಕೆಂದರೆ ಯಾವ ಅಪರಿಪೂರ್ಣ ಮಾನವನೂ ದೋಷಮುಕ್ತನಾಗಿರಸಾಧ್ಯವಿಲ್ಲ.—ಕೀರ್ತನೆ 130:3, 4; ಯಾಕೋಬ 3:2.

      6 ವಿವಾಹಿತ ದಂಪತಿಗಳು ದೇವರಿಗೆ ಮತ್ತು ಪರಸ್ಪರವಾಗಿ ಇಂತಹ ಪ್ರೀತಿಯನ್ನು ಬೆಳೆಸುವಾಗ, ಅವರ ವಿವಾಹವು ಚಿರಸ್ಥಾಯಿಯಾಗಿ ಸಂತೋಷದ್ದಾಗಿರುವುದು, ಏಕೆಂದರೆ “ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲ್ಲ.” (1 ಕೊರಿಂಥ 13:8) ಪ್ರೀತಿಯು “ಐಕ್ಯದ ಒಂದು ಪರಿಪೂರ್ಣ ಬಂಧವಾಗಿದೆ.” (ಕೊಲೊಸ್ಸೆ 3:14, NW) ನೀವು ವಿವಾಹಿತರಾಗಿರುವಲ್ಲಿ, ನೀವೂ ನಿಮ್ಮ ಸಂಗಾತಿಯೂ ಈ ರೀತಿಯ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? ದೇವರ ವಾಕ್ಯವನ್ನು ಒಟ್ಟುಗೂಡಿ ಓದಿರಿ ಮತ್ತು ಅದರ ಕುರಿತು ಮಾತಾಡಿರಿ. ಯೇಸುವಿನ ಪ್ರೀತಿಯ ಮಾದರಿಯನ್ನು ಅಭ್ಯಸಿಸಿ, ಅವನನ್ನು ಅನುಕರಿಸಲು, ಅವನಂತೆ ಯೋಚಿಸಿ ವರ್ತಿಸಲು ಪ್ರಯತ್ನಿಸಿರಿ. ಕೂಡಿಕೆಯಾಗಿ, ಎಲ್ಲಿ ದೇವರ ವಾಕ್ಯವು ಕಲಿಸಲ್ಪಡುತ್ತದೆಯೊ ಆ ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗಿರಿ. ಮತ್ತು ದೇವರ ಪವಿತ್ರಾತ್ಮದ ಒಂದು ಫಲವಾಗಿರುವ ಈ ಉನ್ನತ ರೀತಿಯ ಪ್ರೀತಿಯನ್ನು ವಿಕಸಿಸಿಕೊಳ್ಳಲು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ.—ಜ್ಞಾನೋಕ್ತಿ 3:5, 6; ಯೋಹಾನ 17:3; ಗಲಾತ್ಯ 5:22; ಇಬ್ರಿಯ 10:24, 25.

      ಎರಡನೆಯ ಕೀಲಿ ಕೈ

      7. ಗೌರವವೆಂದರೇನು, ಮತ್ತು ವಿವಾಹದಲ್ಲಿ ಯಾರು ಗೌರವವನ್ನು ತೋರಿಸಬೇಕು?

      7 ಇಬ್ಬರು ವಿವಾಹಿತರು ನಿಜವಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುವಲ್ಲಿ, ಅವರಲ್ಲಿ ಒಬ್ಬರ ಮೇಲೊಬ್ಬರಿಗೆ ಗೌರವವೂ ಇರುವುದು, ಮತ್ತು ಗೌರವವು ಒಂದು ಸಂತೋಷದ ವಿವಾಹಕ್ಕಿರುವ ಎರಡನೆಯ ಕೀಲಿ ಕೈಯಾಗಿದೆ. ಗೌರವವನ್ನು, “ಇತರರಿಗೆ ಪರಿಗಣನೆಯನ್ನು ಕೊಡುವುದು, ಅವರನ್ನು ಸನ್ಮಾನಿಸುವುದು,” ಎಂದು ನಿರೂಪಿಸಲಾಗುತ್ತದೆ. ದೇವರ ವಾಕ್ಯವು ಗಂಡಹೆಂಡತಿಯರನ್ನು ಒಳಗೊಂಡು ಸಕಲ ಕ್ರೈಸ್ತರಿಗೆ, “ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂದು ಸಲಹೆ ನೀಡುತ್ತದೆ. (ರೋಮಾಪುರ 12:10) ಅಪೊಸ್ತಲ ಪೇತ್ರನು ಬರೆದುದು: “ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ.” (1 ಪೇತ್ರ 3:7) ಹೆಂಡತಿಯು “ಗಂಡನೊಂದಿಗೆ ಗಾಢವಾದ ಗೌರವದಿಂದ ನಡೆದುಕೊಳ್ಳಬೇಕು” ಎಂದು ಸಲಹೆಯು ನೀಡಲ್ಪಟ್ಟಿದೆ. (ಎಫೆಸ 5:33, NW) ನೀವು ಒಬ್ಬ ವ್ಯಕ್ತಿಯನ್ನು ಸನ್ಮಾನಿಸಬಯಸುವಲ್ಲಿ, ನೀವು ಆ ವ್ಯಕ್ತಿಗೆ ದಯೆ ತೋರಿಸುತ್ತೀರಿ, ಅವನ ಘನತೆಯನ್ನು ಮತ್ತು ವ್ಯಕ್ತಪಡಿಸಿದ ಅಭಿಪ್ರಾಯಗಳ ಕುರಿತು ಗೌರವಭರಿತರಾಗಿ, ನಿಮ್ಮಿಂದ ಕೇಳಿಕೊಳ್ಳಲ್ಪಡುವ ಯಾವುದೇ ನ್ಯಾಯಸಮ್ಮತವಾದ ಕೇಳಿಕೆಯನ್ನು ಪೂರೈಸಲು ಸಿದ್ಧರಾಗಿರುತ್ತೀರಿ.

      8-10. ಗೌರವವು ಒಂದು ವಿವಾಹ ಸಾಂಗತ್ಯವನ್ನು ಸ್ಥಿರವಾದದ್ದೂ ಸಂತೋಷಕರವೂ ಆದದ್ದಾಗಿ ಮಾಡಲು ಸಹಾಯ ಮಾಡುವ ಕೆಲವು ವಿಧಗಳಾವುವು?

      8 ಸಂತೋಷದ ವಿವಾಹವನ್ನು ಅನುಭವಿಸಬಯಸುವವರು, “[ತಮ್ಮ] ಸ್ವಹಿತವನ್ನು ಮಾತ್ರ ನೋಡದೆ [ತಮ್ಮ ಸಂಗಾತಿಗಳ] ಪರಹಿತವನ್ನು ಸಹ” ನೋಡುವ ಮೂಲಕ ತಮ್ಮ ಸಂಗಾತಿಗಳಿಗೆ ಗೌರವವನ್ನು ತೋರಿಸುತ್ತಾರೆ. (ಫಿಲಿಪ್ಪಿ 2:4) ತಮಗೆ ಮಾತ್ರ ಒಳಿತಾಗಿರುವ ಯಾವುದನ್ನಾದರೂ ಅವರು ಪರಿಗಣಿಸುವುದಿಲ್ಲ—ಅದು ಸ್ವಾರ್ಥವಾಗಿರುವುದು. ಬದಲಿಗೆ, ಅವರು ತಮ್ಮ ಸಂಗಾತಿಗಳಿಗೆ ಸಹ ಯಾವುದು ಅತ್ಯುತ್ತಮವಾಗಿದೆಯೊ ಅದನ್ನು ಪರಿಗಣಿಸುತ್ತಾರೆ. ವಾಸ್ತವವಾಗಿ, ಅವರು ಅದಕ್ಕೆ ಆದ್ಯತೆಯನ್ನು ಕೊಡುತ್ತಾರೆ.

      9 ವಿವಾಹ ಸಹಭಾಗಿಗಳು ತಮ್ಮ ದೃಷ್ಟಿಕೋನದಲ್ಲಿರುವ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವಂತೆ ಗೌರವವು ಸಹಾಯ ಮಾಡುವುದು. ಇಬ್ಬರು ವ್ಯಕ್ತಿಗಳು ಪ್ರತಿಯೊಂದು ವಿಷಯದಲ್ಲೂ ಏಕರೀತಿಯ ಅಭಿಪ್ರಾಯವುಳ್ಳವರಾಗಿರುವಂತೆ ನಿರೀಕ್ಷಿಸುವುದು ನ್ಯಾಯಸಮ್ಮತವಲ್ಲ. ಒಬ್ಬ ಗಂಡನಿಗೆ ಪ್ರಾಮುಖ್ಯವಾಗಿರುವ ಒಂದು ವಿಷಯವು ಒಬ್ಬ ಹೆಂಡತಿಗೆ ಅಷ್ಟೇ ಪ್ರಾಮುಖ್ಯವಾಗಿಲ್ಲದಿರಬಹುದು, ಮತ್ತು ಒಬ್ಬ ಹೆಂಡತಿಯು ಇಷ್ಟಪಡುವ ವಿಷಯವು ಗಂಡನು ಇಷ್ಟಪಡುವ ವಿಷಯವಾಗಿಲ್ಲದಿರಬಹುದು. ಆದರೆ ಎಷ್ಟರ ವರೆಗೆ ಅವು ಯೆಹೋವನ ನಿಯಮ ಮತ್ತು ಮೂಲತತ್ವಗಳ ಮೇರೆಗಳೊಳಗೆ ಇರುತ್ತವೆಯೊ ಅಷ್ಟರ ವರೆಗೆ, ಪ್ರತಿಯೊಬ್ಬರು ಇನ್ನೊಬ್ಬರ ಅಭಿಪ್ರಾಯಗಳನ್ನೂ ಆಯ್ಕೆಗಳನ್ನೂ ಗೌರವಿಸಬೇಕು. (1 ಪೇತ್ರ 2:16; ಹೋಲಿಸಿ ಫಿಲೆಮೋನ 14.) ಅಲ್ಲದೆ, ಬಹಿರಂಗವಾಗಿಯಾಗಲಿ ಖಾಸಗಿಯಾಗಿಯಾಗಲಿ, ಇನ್ನೊಬ್ಬನನ್ನು ಹೀನೈಸುವ ಹೇಳಿಕೆಗಳ ಅಥವಾ ಚೇಷ್ಟೆಗಳ ಗುರಿಯನ್ನಾಗಿ ಮಾಡದಿರುವ ಮೂಲಕ, ಒಬ್ಬರು ಇನ್ನೊಬ್ಬರ ಘನತೆಯನ್ನು ಗೌರವಿಸಬೇಕು.

      10 ಹೌದು, ದೇವರ ಹಾಗೂ ಒಬ್ಬರಿಗೆ ಇನ್ನೊಬ್ಬರ ಮೇಲಿನ ಪ್ರೀತಿ ಮತ್ತು ಪರಸ್ಪರ ಗೌರವ—ಇವು ಒಂದು ಯಶಸ್ವೀ ವಿವಾಹಕ್ಕಿರುವ ಎರಡು ಮಹತ್ವದ ಕೀಲಿ ಕೈಗಳಾಗಿವೆ. ಇವನ್ನು ವಿವಾಹಿತ ಜೀವನದ ಹೆಚ್ಚು ಪ್ರಾಮುಖ್ಯವಾದ ಕೆಲವು ಕ್ಷೇತ್ರಗಳಲ್ಲಿ ಹೇಗೆ ಅನ್ವಯಿಸಸಾಧ್ಯವಿದೆ?

      ಕ್ರಿಸ್ತಸದೃಶ ತಲೆತನ

      11. ಶಾಸ್ತ್ರೀಯವಾಗಿ, ವಿವಾಹದಲ್ಲಿ ತಲೆಯು ಯಾರು?

      11 ಯಾವುದು ಪುರುಷನನ್ನು ಕುಟುಂಬದ ಯಶಸ್ವೀ ತಲೆಯಾಗಿ ಮಾಡಲಿತ್ತೊ ಅಂತಹ ಗುಣಗಳಿಂದ ಅವನನ್ನು ಸೃಷ್ಟಿಸಲಾಯಿತೆಂದು ಬೈಬಲು ನಮಗೆ ಹೇಳುತ್ತದೆ. ಈ ಕಾರಣದಿಂದ, ತನ್ನ ಹೆಂಡತಿ ಮತ್ತು ಮಕ್ಕಳ ಆತ್ಮಿಕ ಹಾಗೂ ಶಾರೀರಿಕ ಸುಸ್ಥಿತಿಗಾಗಿ ಪುರುಷನು ಯೆಹೋವನ ಮುಂದೆ ಹೊಣೆಗಾರನಾಗಲಿದ್ದನು. ಅವನಿಗೆ ಯೆಹೋವನ ಚಿತ್ತವನ್ನು ಪ್ರತಿಬಿಂಬಿಸುವ ಸಮತೆಯ ನಿರ್ಣಯಗಳನ್ನು ಮಾಡಲಿಕ್ಕಿತ್ತು ಮತ್ತು ದಿವ್ಯ ನಡತೆಯ ಉತ್ತಮ ಮಾದರಿಯನ್ನಿಡಲಿಕ್ಕಿತ್ತು. “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆಸ 5:22, 23) ಆದರೂ, ಗಂಡನಿಗೂ ಒಬ್ಬ ತಲೆಯಾಗಿ, ಅವನ ಮೇಲೆ ಅಧಿಕಾರವಿರುವ ಒಬ್ಬನು ಇದ್ದಾನೆಂದು ಬೈಬಲು ಹೇಳುತ್ತದೆ. ಅಪೊಸ್ತಲ ಪೌಲನು ಬರೆದುದು: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಆ ವಿವೇಕಿಯಾದ ಗಂಡನು ತನ್ನ ಸ್ವಂತ ತಲೆಯಾದ ಕ್ರಿಸ್ತ ಯೇಸುವನ್ನು ಅನುಕರಿಸುವ ಮೂಲಕ ತಲೆತನವನ್ನು ನಿರ್ವಹಿಸುವ ವಿಧವನ್ನು ಕಲಿಯುತ್ತಾನೆ.

      12. ಯೇಸುವು ಅಧೀನತೆ ತೋರಿಸುವ ಮತ್ತು ತಲೆತನವನ್ನು ನಿರ್ವಹಿಸುವ ಕುರಿತು ಯಾವ ಉತ್ತಮ ತೆರದ ಮಾದರಿಯನ್ನು ಇಟ್ಟನು?

      12 ಯೇಸುವಿಗೂ ಯೆಹೋವನೆಂಬ ಒಬ್ಬ ತಲೆಯಿದ್ದಾನೆ ಮತ್ತು ಅವನು ಆತನಿಗೆ ಸಮಂಜಸವಾಗಿ ಅಧೀನನಾಗಿದ್ದಾನೆ. ಯೇಸು ಹೇಳಿದ್ದು: “ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸು”ತ್ತೇನೆ. (ಯೋಹಾನ 5:30) ಎಂತಹ ಉತ್ಕೃಷ್ಟವಾದೊಂದು ಮಾದರಿ! ಯೇಸುವು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. (ಕೊಲೊಸ್ಸೆ 1:15) ಅವನು ಮೆಸ್ಸೀಯನಾದನು. ಅವನು ಅಭಿಷಿಕ್ತ ಕ್ರೈಸ್ತರ ಸಭೆಯ ತಲೆಯೂ ಸಕಲ ದೇವದೂತರ ಮೇಲೆ ದೇವರ ರಾಜ್ಯದ ನಿಯಮಿತ ಅರಸನೂ ಆಗಲಿದ್ದನು. (ಫಿಲಿಪ್ಪಿ 2:9-11; ಇಬ್ರಿಯ 1:4) ಇಂತಹ ಒಂದು ಘನತೆಯ ಸ್ಥಾನ ಮತ್ತು ಇಂತಹ ಉನ್ನತ ಪ್ರತೀಕ್ಷೆಗಳ ಹೊರತೂ, ಮನುಷ್ಯನಾದ ಯೇಸುವು ನಿರ್ದಯಿಯೂ ಮಣಿಯದವನೂ ಅಥವಾ ವಿಪರೀತ ಹಕ್ಕುಕೇಳಿಕೆಗಳನ್ನು ಮಾಡುವವನೂ ಆಗಿರಲಿಲ್ಲ. ಅವನು ತನ್ನ ಶಿಷ್ಯರಿಗೆ ಸತತವಾಗಿ, ಅವರು ಅವನಿಗೆ ವಿಧೇಯರಾಗಲೇಬೇಕೆಂದು ಜ್ಞಾಪಕ ಹುಟ್ಟಿಸುತ್ತಿದ್ದ ಕ್ರೂರ ಪ್ರಭುವಾಗಿರಲಿಲ್ಲ. ಯೇಸುವು, ವಿಶೇಷವಾಗಿ ಮನಗುಂದಿದವರ ಕಡೆಗೆ, ಪ್ರೀತಿಯುಳ್ಳವನೂ ಸಹಾನುಭೂತಿಯುಳ್ಳವನೂ ಆಗಿದ್ದನು. ಅವನು ಹೇಳಿದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮ [“ಪ್ರಾಣ,” NW]ಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಅವನ ಸಹವಾಸದಲ್ಲಿರುವುದು ಆನಂದಕಾರಕವಾಗಿತ್ತು.

      13, 14. ಪ್ರೀತಿಸುವ ಒಬ್ಬ ಗಂಡನು ತನ್ನ ತಲೆತನವನ್ನು, ಯೇಸುವಿನ ಅನುಕರಣೆಯಲ್ಲಿ ಹೇಗೆ ನಿರ್ವಹಿಸುವನು?

      13 ಒಂದು ಸಂತೋಷದ ಕುಟುಂಬ ಜೀವಿತವನ್ನು ಬಯಸುವ ಗಂಡನು ಯೇಸುವಿನ ಉತ್ತಮ ತೆರದ ಸ್ವಭಾವ ಲಕ್ಷಣಗಳನ್ನು ಪರಿಗಣಿಸುವುದು ಸಮರ್ಪಕವಾಗಿದೆ. ಒಬ್ಬ ಒಳ್ಳೆಯ ಗಂಡನು ನಿರ್ದಯನೂ ಸರ್ವಾಧಿಕಾರಿಯೂ ಆಗಿದ್ದು, ತನ್ನ ತಲೆತನವನ್ನು ತನ್ನ ಹೆಂಡತಿಯನ್ನು ಹೊಡೆಯಲು ಒಂದು ದೊಣ್ಣೆಯಂತೆ ತಪ್ಪಾಗಿ ಬಳಸುವುದಿಲ್ಲ. ಬದಲಾಗಿ, ಅವನು ಆಕೆಯನ್ನು ಪ್ರೀತಿಸಿ, ಮಾನಸಲ್ಲಿಸುತ್ತಾನೆ. ಯೇಸುವು “ದೀನ ಮನಸ್ಸುಳ್ಳವನು” ಆಗಿದ್ದರೆ, ಗಂಡನು ಹಾಗಿರಲು ಇನ್ನೂ ಹೆಚ್ಚಿನ ಕಾರಣಗಳಿವೆ, ಏಕೆಂದರೆ ಯೇಸುವಿಗೆ ಅಸದೃಶವಾಗಿ, ಅವನು ತಪ್ಪುಗಳನ್ನು ಮಾಡುತ್ತಾನೆ. ಅವನು ಹಾಗೆ ಮಾಡುವಾಗ ಅವನಿಗೆ ತನ್ನ ಹೆಂಡತಿಯ ಅರ್ಥೈಸುವಿಕೆಯು ಬೇಕು. ಆ ಕಾರಣದಿಂದ, ನಮ್ರನಾಗಿರುವ ಗಂಡನು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೆ—“ನಾನು ವಿಷಾದಿಸುತ್ತೇನೆ; ನೀನೇ ಸರಿ,” ಎಂಬ ಮಾತುಗಳನ್ನು ಹೇಳುವುದು ಕಷ್ಟವಾಗಬಹುದಾದರೂ ಕೂಡ. ಹೆಮ್ಮೆಯ ಮತ್ತು ಹಟಮಾರಿ ಗಂಡನಿಗಿಂತ ಅಭಿಮಾನ ಮಿತಿಯವನೂ ನಮ್ರನೂ ಆದ ಗಂಡನ ತಲೆತನವನ್ನು ಗೌರವಿಸುವುದನ್ನು ಒಬ್ಬ ಹೆಂಡತಿ ಹೆಚ್ಚು ಸುಲಭವಾಗಿ ಕಂಡುಕೊಳ್ಳುವಳು. ಪ್ರತಿಯಾಗಿ, ಗೌರವಶೀಲವುಳ್ಳ ಹೆಂಡತಿಯು ಸಹ ತಾನು ತಪ್ಪುಮಾಡುವಾಗ ಕ್ಷಮೆ ಯಾಚಿಸುತ್ತಾಳೆ.

      14 ದೇವರು ಸ್ತ್ರೀಯನ್ನು, ಸಂತೋಷದ ವಿವಾಹಕ್ಕೆ ಸಹಾಯ ನೀಡಲು ಬಳಸಸಾಧ್ಯವಿರುವ ಉತ್ತಮ ತೆರದ ಗುಣಲಕ್ಷಣಗಳುಳ್ಳವಳಾಗಿ ಸೃಷ್ಟಿಸಿದನು. ವಿವೇಕಿಯಾದ ಗಂಡನು ಇದನ್ನು ಗುರುತಿಸಿ ಆಕೆಯನ್ನು ಅದುಮಿಡನು. ಅನೇಕ ಸ್ತ್ರೀಯರಿಗೆ, ಒಂದು ಕುಟುಂಬವನ್ನು ಪರಾಮರಿಸಲು ಮತ್ತು ಮಾನವ ಸಂಬಂಧಗಳನ್ನು ಪೋಷಿಸಲು ಅಗತ್ಯವಾಗಿರುವ ಸಹಾನುಭೂತಿ ಮತ್ತು ಸೂಕ್ಷ್ಮಸಂವೇದನೆಯು ಹೆಚ್ಚಿನ ಪ್ರಮಾಣದಲ್ಲಿರುವ ಪ್ರವೃತ್ತಿಯಿದೆ. ಸಾಮಾನ್ಯವಾಗಿ, ಸ್ತ್ರೀಯು ಮನೆಯನ್ನು ಜೀವಿಸಲು ಒಂದು ಆಹ್ಲಾದಕರವಾದ ಸ್ಥಳವಾಗಿ ಮಾಡುವುದರಲ್ಲಿ ತುಂಬ ಚತುರೆ. ಜ್ಞಾನೋಕ್ತಿ 31ನೆಯ ಅಧ್ಯಾಯದಲ್ಲಿ ವರ್ಣಿಸಲಾಗಿರುವ “ಸಮರ್ಥೆಯಾದ ಸತಿ” (NW)ಯಲ್ಲಿ ಅನೇಕ ಅದ್ಭುತಕರವಾದ ಗುಣಗಳೂ ಉತ್ಕೃಷ್ಟ ಸಾಮರ್ಥ್ಯಗಳೂ ಇದ್ದವು, ಮತ್ತು ಆಕೆಯ ಕುಟುಂಬವು ಅವುಗಳಿಂದ ಪೂರ್ಣ ಪ್ರಯೋಜನವನ್ನು ಪಡೆಯಿತು. ಏಕೆ? ಏಕೆಂದರೆ ಆಕೆಯ ಗಂಡನ ಹೃದಯವು ಆಕೆಯಲ್ಲಿ “ಭರವಸಪಡುವುದು.”—ಜ್ಞಾನೋಕ್ತಿ 31:10, 11.

      15. ಒಬ್ಬ ಗಂಡನು ತನ್ನ ಹೆಂಡತಿಗಾಗಿ ಕ್ರಿಸ್ತಸದೃಶ ಪ್ರೀತಿ ಮತ್ತು ಗೌರವವನ್ನು ಹೇಗೆ ತೋರಿಸಬಲ್ಲನು?

      15 ಕೆಲವು ಸಂಸ್ಕೃತಿಗಳಲ್ಲಿ ಗಂಡನ ಅಧಿಕಾರಕ್ಕೆ ವಿಪರೀತ ಪ್ರಾಶಸ್ತ್ಯಕೊಡಲಾಗುತ್ತದೆ, ಎಷ್ಟೆಂದರೆ ಅವನೊಂದಿಗೆ ಒಂದು ಪ್ರಶ್ನೆಯನ್ನು ಕೇಳುವುದು ಕೂಡ ಅಗೌರವವಾಗಿ ಪರಿಗಣಿಸಲ್ಪಡುತ್ತದೆ. ಅವನು ತನ್ನ ಹೆಂಡತಿಯನ್ನು ಅಧಿಕಾಂಶ ಒಬ್ಬ ದಾಸಿಯೋಪಾದಿ ಉಪಚರಿಸಬಹುದು. ತಲೆತನದ ಇಂತಹ ತಪ್ಪು ನಿರ್ವಹಣೆಯು ತನ್ನ ಹೆಂಡತಿಯೊಂದಿಗೆ ಮಾತ್ರವಲ್ಲ, ದೇವರೊಂದಿಗೂ ನ್ಯೂನ ಸಂಬಂಧವನ್ನು ಫಲಿಸುತ್ತದೆ. (1 ಯೋಹಾನ 4:20, 21ನ್ನು ಹೋಲಿಸಿರಿ.) ಇನ್ನೊಂದು ಪಕ್ಕದಲ್ಲಿ, ಕೆಲವು ಗಂಡಂದಿರು ಮುಂದಾಳುತ್ವವನ್ನು ತೆಗೆದುಕೊಳ್ಳುವುದನ್ನು ಅಸಡ್ಡೆಮಾಡಿ, ತಮ್ಮ ಹೆಂಡತಿಯರು ಮನೆವಾರ್ತೆಯ ಮೇಲೆ ದೊರೆತನ ಮಾಡುವಂತೆ ಬಿಡುತ್ತಾರೆ. ಕ್ರಿಸ್ತನಿಗೆ ಸಮಂಜಸವಾಗಿ ಅಧೀನನಾಗಿರುವ ಗಂಡನು ತನ್ನ ಹೆಂಡತಿಯನ್ನು ಶೋಷಿಸುವುದೂ ಇಲ್ಲ, ಆಕೆಯ ಘನತೆಯನ್ನು ಕಸಿದುಕೊಳ್ಳುವುದೂ ಇಲ್ಲ. ಬದಲಾಗಿ, ಅವನು ಯೇಸುವಿನ ಆತ್ಮತ್ಯಾಗಾತ್ಮಕ ಪ್ರೀತಿಯನ್ನು ಅನುಕರಿಸಿ, ಪೌಲನು ಸಲಹೆ ಕೊಟ್ಟಂತೆ ಮಾಡುತ್ತಾನೆ: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ, ನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತ ಮುಂದುವರಿಯಿರಿ.” (ಎಫೆಸ 5:25, NW) ಕ್ರಿಸ್ತ ಯೇಸು ತನ್ನ ಶಿಷ್ಯರನ್ನು ಎಷ್ಟು ಪ್ರೀತಿಸಿದನೆಂದರೆ, ಅವನು ಅವರಿಗಾಗಿ ಸತ್ತನು. ಒಬ್ಬ ಒಳ್ಳೆಯ ಗಂಡನು ಆ ಸ್ವಾರ್ಥರಹಿತ ಮನೋಭಾವವನ್ನು ಅನುಕರಿಸಲು ಪ್ರಯತ್ನಿಸುತ್ತಾ, ತನ್ನ ಹೆಂಡತಿಯಿಂದ ಹಕ್ಕುಕೇಳಿಕೆಯನ್ನು ಮಾಡುವ ಬದಲಿಗೆ ಅವಳ ಒಳಿತನ್ನು ಹುಡುಕುವನು. ಒಬ್ಬ ಗಂಡನು ಕ್ರಿಸ್ತನಿಗೆ ಅಧೀನನಾಗಿ, ಕ್ರಿಸ್ತಸದೃಶ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುವಾಗ, ಅವನ ಹೆಂಡತಿಯು ಅವನಿಗೆ ತನ್ನನ್ನು ಅಧೀನಮಾಡಿಕೊಳ್ಳುವಂತೆ ಪ್ರಚೋದಿಸಲ್ಪಡುವಳು.—ಎಫೆಸ 5:28, 29, 33.

      ಹೆಂಡತಿಸದೃಶ ಅಧೀನತೆ

      16. ತನ್ನ ಗಂಡನೊಂದಿಗಿನ ಸಂಬಂಧದಲ್ಲಿ ಹೆಂಡತಿಯು ಯಾವ ಗುಣಗಳನ್ನು ಪ್ರದರ್ಶಿಸಬೇಕು?

      16 ಆದಾಮನ ಸೃಷ್ಟಿಯಾಗಿ ಸ್ವಲ್ಪದರಲ್ಲಿ, “ಯೆಹೋವದೇವರು—ಮನುಷ್ಯನು ಒಂಟಿಗನಾಗಿರುವದು ಒಳ್ಳೆಯದಲ್ಲ; ಅವನಿಗೆ ಸರಿಬೀಳುವ ಸಹಕಾರಿ [“ಪರಿಪೂರಕ,” NW]ಯನ್ನು ಉಂಟುಮಾಡುವೆನು ಅಂದನು.” (ಆದಿಕಾಂಡ 2:18) ದೇವರು ಹವ್ವಳನ್ನು ಸ್ಪರ್ಧಿಯಾಗಿಯಲ್ಲ, “ಪರಿಪೂರಕ”ಳಾಗಿ ಸೃಷ್ಟಿಸಿದನು. ವಿವಾಹವು ಸ್ಪರ್ಧಿಗಳಾದ ಇಬ್ಬರು ಕ್ಯಾಪ್ಟನರು ಇರುವ ಒಂದು ಹಡಗಿನಂತಿರಬಾರದಿತ್ತು. ಗಂಡನು ಪ್ರೀತಿಪೂರ್ಣವಾದ ತಲೆತನವನ್ನು ನಿರ್ವಹಿಸಬೇಕಾಗಿತ್ತು, ಮತ್ತು ಹೆಂಡತಿಯು ಪ್ರೀತಿ, ಗೌರವ ಮತ್ತು ಮನಃಪೂರ್ವಕವಾದ ಅಧೀನತೆಯನ್ನು ತೋರಿಸಬೇಕಾಗಿತ್ತು.

      17, 18. ಒಬ್ಬ ಹೆಂಡತಿಯು ತನ್ನ ಗಂಡನಿಗೆ ನಿಜವಾದ ಸಹಾಯಕಿಯಾಗಿರಸಾಧ್ಯವಿರುವ ಕೆಲವು ವಿಧಗಳಾವುವು?

      17 ಆದರೂ ಒಬ್ಬ ಒಳ್ಳೆಯ ಹೆಂಡತಿಯು ಕೇವಲ ಅಧೀನಳಾಗಿರುವುದಷ್ಟೇಯಲ್ಲ. ಆಕೆ ನಿಜವಾದ ಸಹಾಯಕಳು, ತನ್ನ ಗಂಡನು ಮಾಡುವ ನಿರ್ಣಯಗಳನ್ನು ಬೆಂಬಲಿಸುವವಳಾಗಿರಲು ಪ್ರಯತ್ನಿಸುತ್ತಾಳೆ. ಅವನ ನಿರ್ಣಯಗಳೊಂದಿಗೆ ಆಕೆ ಸಮ್ಮತಿಸುವಾಗ ಅದು ಆಕೆಗೆ ಸುಲಭವೆಂಬುದು ನಿಶ್ಚಯ. ಆದರೆ, ಆಕೆ ಸಮ್ಮತಿಸದಿರುವಾಗಲೂ, ಆಕೆಯ ಕ್ರಿಯಾಶೀಲ ಬೆಂಬಲವು ಅವನ ನಿರ್ಣಯವು ಹೆಚ್ಚು ಯಶಸ್ವಿಕರವಾದ ಫಲಿತಾಂಶವನ್ನು ತರಲು ಸಹಾಯ ಮಾಡಬಲ್ಲದು.

      18 ತನ್ನ ಗಂಡನು ಇತರ ವಿಧಗಳಲ್ಲಿಯೂ ಉತ್ತಮ ತಲೆಯಾಗಿರುವಂತೆ ಒಬ್ಬ ಹೆಂಡತಿಯು ಸಹಾಯ ಮಾಡಬಲ್ಲಳು. ಮುಂದಾಳುತ್ವವನ್ನು ತೆಗೆದುಕೊಳ್ಳುವ ಅವನ ಪ್ರಯತ್ನಗಳಲ್ಲಿ, ಅವನನ್ನು ಟೀಕಿಸುವ ಬದಲು ಅಥವಾ ಅವನು ಆಕೆಯನ್ನು ಎಂದಿಗೂ ತೃಪ್ತಿಪಡಿಸನು ಎಂದು ಅವನಿಗನಿಸುವಂತೆ ಮಾಡುವ ಬದಲು, ಆಕೆ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲಳು. ತನ್ನ ಗಂಡನೊಂದಿಗೆ ಸಕಾರಾತ್ಮಕ ವಿಧದಲ್ಲಿ ವ್ಯವಹರಿಸುವಾಗ, “ಸಾತ್ವಿಕವಾದ ಶಾಂತಮನಸ್ಸು . . . ದೇವರ ದೃಷ್ಟಿ”—ತನ್ನ ಗಂಡನ ದೃಷ್ಟಿಯಲ್ಲಿ ಮಾತ್ರವಲ್ಲ—“ಬಹು ಬೆಲೆಯುಳ್ಳದ್ದು,” ಎಂದು ಆಕೆ ನೆನಪಿನಲ್ಲಿಡಬೇಕು. (1 ಪೇತ್ರ 3:3, 4; ಕೊಲೊಸ್ಸೆ 3:12) ಗಂಡನು ವಿಶ್ವಾಸಿಯಾಗಿಲ್ಲದಿರುವುದಾದರೆ ಆಗೇನು? ಅವನು ವಿಶ್ವಾಸಿಯಾಗಿರಲಿ, ಇಲ್ಲದಿರಲಿ, ಶಾಸ್ತ್ರಗಳು ಹೆಂಡತಿಯರನ್ನು, “ನಿಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನೀವು ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೇ ಕೆಲಸಮಾಡುವವರೂ ಸುಶೀಲೆಯರೂ ನಿಮ್ಮ ಗಂಡಂದಿರಿಗೆ ಅಧೀನರೂ ಆಗಿರ”ಲು ಪ್ರೋತ್ಸಾಹಿಸುತ್ತವೆ. (ತೀತ 2:4, 5) ಮನಸ್ಸಾಕ್ಷಿಯ ವಿಷಯಗಳು ಏಳುವಲ್ಲಿ, ಅದು “ಸಾತ್ವಿಕತ್ವದಿಂದಲೂ ಮನೋಭೀತಿ [“ಆಳವಾದ ಗೌರವ,” NW]ಯಿಂದಲೂ ನೀಡಲ್ಪಡುವಲ್ಲಿ, ಒಬ್ಬ ಅವಿಶ್ವಾಸಿ ಗಂಡನು ತನ್ನ ಹೆಂಡತಿಯ ಸ್ಥಾನವನ್ನು ಗೌರವಿಸುವುದು ಹೆಚ್ಚು ಸಂಭವನೀಯ. ಕೆಲವು ಅವಿಶ್ವಾಸಿ ಗಂಡಂದಿರು, “[ಹೆಂಡತಿಯರು] ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು . . . ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ [ಅವರ] ನಡತೆಯಿಂದಲೇ ಸನ್ಮಾರ್ಗಕ್ಕೆ” ಬಂದಿದ್ದಾರೆ.—1 ಪೇತ್ರ 3:1, 2, 15; 1 ಕೊರಿಂಥ 7:13-16.

      19. ದೇವರ ನಿಯಮವನ್ನು ಉಲ್ಲಂಘಿಸುವಂತೆ ಗಂಡನು ತನ್ನ ಹೆಂಡತಿಯನ್ನು ಕೇಳಿಕೊಳ್ಳುವುದಾದರೆ ಆಗೇನು?

      19 ದೇವರಿಂದ ನಿಷೇಧಿಸಲ್ಪಟ್ಟಿರುವ ಯಾವುದೋ ವಿಷಯವನ್ನು ಮಾಡುವಂತೆ ಒಬ್ಬ ಗಂಡನು ತನ್ನ ಹೆಂಡತಿಗೆ ಕೇಳಿಕೊಳ್ಳುವುದಾದರೆ ಆಗೇನು? ಹಾಗಾಗುವಲ್ಲಿ, ದೇವರು ತನ್ನ ಪ್ರಧಾನ ಪ್ರಭು ಎಂಬುದನ್ನು ಆಕೆ ಜ್ಞಾಪಿಸಿಕೊಳ್ಳತಕ್ಕದ್ದು. ದೇವರ ನಿಯಮವನ್ನು ಉಲ್ಲಂಘಿಸುವಂತೆ ಅಧಿಕಾರಿಗಳು ಕೇಳಿಕೊಂಡಾಗ ಅಪೊಸ್ತಲರು ಏನು ಮಾಡಿದರೊ ಅದನ್ನು ಆಕೆ ಒಂದು ಮಾದರಿಯಾಗಿ ತೆಗೆದುಕೊಳ್ಳುತ್ತಾಳೆ. ಅ. ಕೃತ್ಯಗಳು 5:29 ಹೇಳುವುದು: “ಪೇತ್ರನೂ ಉಳಿದ ಅಪೊಸ್ತಲರೂ—ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಬೇಕಲ್ಲಾ” ಎಂದು ಹೇಳಿದರು.

      ಒಳ್ಳೆಯ ಸಂವಾದ

      20. ಪ್ರೀತಿ ಮತ್ತು ಗೌರವವು ಅತ್ಯಗತ್ಯವಾಗಿರುವ ಒಂದು ಪ್ರಧಾನ ಕ್ಷೇತ್ರವು ಯಾವುದು?

      20 ಪ್ರೀತಿ ಮತ್ತು ಗೌರವವು ವಿವಾಹದ ಇನ್ನೊಂದು ಕ್ಷೇತ್ರ—ಸಂವಾದ—ದಲ್ಲಿ ಅಗತ್ಯ. ಪ್ರೀತಿಸುವ ಗಂಡನು ತನ್ನ ಹೆಂಡತಿಯೊಂದಿಗೆ ಆಕೆಯ ಚಟುವಟಿಕೆಗಳು, ಆಕೆಯ ಸಮಸ್ಯೆಗಳು, ವಿವಿಧ ವಿಷಯಗಳ ಕುರಿತಾದ ಆಕೆಯ ಅಭಿಪ್ರಾಯಗಳ—ಬಗೆಗೆ ಸಂಭಾಷಿಸುವನು. ಆಕೆಗೆ ಇದರ ಅಗತ್ಯವಿದೆ. ತನ್ನ ಹೆಂಡತಿಯೊಂದಿಗೆ ಮಾತನಾಡಲು ಸಮಯವನ್ನು ತೆಗೆದುಕೊಂಡು, ಆಕೆ ಹೇಳುವುದಕ್ಕೆ ನಿಜವಾಗಿ ಕಿವಿಗೊಡುವ ಗಂಡನು ಆಕೆಗಾಗಿ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುತ್ತಾನೆ. (ಯಾಕೋಬ 1:19) ತಮ್ಮ ಗಂಡಂದಿರು ತಮ್ಮೊಂದಿಗೆ ಸಂಭಾಷಿಸುವುದರಲ್ಲಿ ತೀರ ಕೊಂಚ ಸಮಯವನ್ನು ಕಳೆಯುತ್ತಾರೆಂದು ಕೆಲವು ಹೆಂಡತಿಯರು ಆಪಾದಿಸುತ್ತಾರೆ. ಅದು ವಿಷಾದಕರ. ಈ ಬಿಡುವಿಲ್ಲದ ಸಮಯಗಳಲ್ಲಿ, ಗಂಡಂದಿರು ಮನೆಯ ಹೊರಗೆ ದೀರ್ಘ ತಾಸುಗಳ ವರೆಗೆ ಕೆಲಸವನ್ನು ಮಾಡಬಹುದೆಂಬುದು ನಿಜ, ಮತ್ತು ಆರ್ಥಿಕ ಪರಿಸ್ಥಿತಿಗಳ ಫಲವಾಗಿ ಕೆಲವು ಹೆಂಡತಿಯರೂ ಉದ್ಯೋಗದಲ್ಲಿರಬಹುದು. ಆದರೆ ವಿವಾಹಿತ ದಂಪತಿಗಳು ಒಬ್ಬರು ಇನ್ನೊಬ್ಬರಿಗೆ ಸಮಯವನ್ನು ಮೀಸಲಾಗಿಡಬೇಕು. ಇಲ್ಲದಿರುವಲ್ಲಿ ಅವರು ಪರಸ್ಪರ ಸ್ವತಂತ್ರರಾಗಿ ಪರಿಣಮಿಸಬಹುದು. ಅವರು ವಿವಾಹದ ಏರ್ಪಾಡಿನ ಹೊರಗೆ ಸಹಾನುಭೂತಿಯ ಒಡನಾಟವನ್ನು ಹುಡುಕುವಂತೆ ನಿರ್ಬಂಧಕ್ಕೊಳಗಾಗಿದ್ದೇವೆಂದು ಭಾವಿಸುವಲ್ಲಿ, ಅದು ಗಂಭೀರವಾದ ಸಮಸ್ಯೆಗಳಿಗೆ ನಡೆಸಬಲ್ಲದು.

      21. ಸಮಂಜಸವಾದ ಮಾತು ಒಂದು ವಿವಾಹವನ್ನು ಸಂತೋಷವಾಗಿಡಲು ಹೇಗೆ ಸಹಾಯ ಮಾಡುವುದು?

      21 ಹೆಂಡತಿಯರೂ ಗಂಡಂದಿರೂ ಸಂವಾದ ಮಾಡುವ ವಿಧವು ಪ್ರಾಮುಖ್ಯ. “ಸವಿನುಡಿಯು . . . ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.” (ಜ್ಞಾನೋಕ್ತಿ 16:24) ಒಬ್ಬ ಸಂಗಾತಿಯು ವಿಶ್ವಾಸಿಯಾಗಿರಲಿ, ಇಲ್ಲದಿರಲಿ, “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ,” ಅಂದರೆ, ಉತ್ತಮ ರುಚಿಯದ್ದಾಗಿರಲಿ ಎಂಬ ಬೈಬಲ್‌ ಸಲಹೆಯು ಅನ್ವಯಿಸುತ್ತದೆ. (ಕೊಲೊಸ್ಸೆ 4:6) ಒಬ್ಬನು ಕಷ್ಟಕರವಾದ ದಿನವೊಂದನ್ನು ಕಳೆದಿರುವಾಗ, ಒಬ್ಬನ ಸಂಗಾತಿಯಿಂದ ದಯೆಯ, ಸಹಾನುಭೂತಿಯ ಕೆಲವು ಮಾತುಗಳು ತುಂಬ ಒಳಿತನ್ನು ಮಾಡಬಲ್ಲವು. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋಕ್ತಿ 25:11) ಸ್ವರದ ನಾದ ಮತ್ತು ಪದಗಳ ಆಯ್ಕೆ ಅತಿ ಪ್ರಾಮುಖ್ಯ. ಉದಾಹರಣೆಗಾಗಿ, ಕೋಪಗೊಂಡ, ಹಕ್ಕುಕೇಳಿಕೆಯ ಧ್ವನಿಯಲ್ಲಿ ಒಬ್ಬರು ಇನ್ನೊಬ್ಬರಿಗೆ, “ಬಾಗಿಲು ಮುಚ್ಚು!” ಎಂದು ಹೇಳಬಹುದು. ಆದರೆ, “ದಯವಿಟ್ಟು ಬಾಗಿಲು ಮುಚ್ಚುವಿಯಾ?” ಎಂದು ಶಾಂತವಾದ, ಅರ್ಥೈಸುವ ಸ್ವರದಲ್ಲಿ ಹೇಳಿರುವ ಮಾತುಗಳು ಅವೆಷ್ಟು ಹೆಚ್ಚು “ರಸವತ್ತಾಗಿ” ಇರುತ್ತವೆ.

      22. ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲು ದಂಪತಿಗಳಿಗೆ ಯಾವ ಮನೋಭಾವಗಳು ಅಗತ್ಯ?

      22 ನಯವಾಗಿ ನುಡಿಯಲ್ಪಟ್ಟ ಮಾತುಗಳು, ವಿನಯಶೀಲ ಮುಖಭಾವಗಳು ಮತ್ತು ಹಾವಭಾವಗಳು, ದಯೆ, ಅರ್ಥಮಾಡಿಕೊಳ್ಳುವಿಕೆ ಮತ್ತು ಸೌಮ್ಯತೆಯಿರುವಲ್ಲಿ, ಒಳ್ಳೆಯ ಸಂವಾದವು ಏಳಿಗೆ ಹೊಂದುತ್ತದೆ. ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲು ಕಠಿನವಾಗಿ ಶ್ರಮಿಸುವುದರಿಂದಾಗಿ, ಗಂಡಹೆಂಡತಿಯರಿಬ್ಬರೂ ತಮ್ಮ ಅಗತ್ಯಗಳನ್ನು ತಿಳಿಯಪಡಿಸುವುದರಲ್ಲಿ ತಡೆಯಿಲ್ಲದವರಾಗಿರುವರು, ಮತ್ತು ನಿರಾಶೆ ಅಥವಾ ಒತ್ತಡದ ಸಮಯಗಳಲ್ಲಿ ಅವರು ಪರಸ್ಪರವಾಗಿ ದುಃಖಶಮನ ಮತ್ತು ಸಹಾಯದ ಉಗಮಗಳಾಗಿರಬಲ್ಲರು. “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ದೇವರ ವಾಕ್ಯವು ಪ್ರೋತ್ಸಾಹಿಸುತ್ತದೆ. (1 ಥೆಸಲೊನೀಕ 5:14) ಗಂಡನು ಮನಗುಂದಿರುವ ಮತ್ತು ಹೆಂಡತಿಯೂ ಮನಗುಂದಿರುವ ಸಮಯಗಳಿರುವುವು. ಅವರು ಪರಸ್ಪರವಾಗಿ ಆತ್ಮೋನ್ನತಿ ಮಾಡಿಕೊಳ್ಳುತ್ತ ತಮ್ಮನ್ನು “ಧೈರ್ಯಪಡಿಸಿ”ಕೊಳ್ಳಬಲ್ಲರು.—ರೋಮಾಪುರ 15:2.

      23, 24. ಭಿನ್ನಾಭಿಪ್ರಾಯಗಳಿರುವಾಗ ಪ್ರೀತಿ ಮತ್ತು ಗೌರವಗಳು ಹೇಗೆ ಸಹಾಯ ಮಾಡುವುವು? ಒಂದು ಉದಾಹರಣೆಯನ್ನು ಕೊಡಿರಿ.

      23 ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಿರುವ ವಿವಾಹ ಸಹಭಾಗಿಗಳು, ಪ್ರತಿಯೊಂದು ಭಿನ್ನಾಭಿಪ್ರಾಯವನ್ನು ಒಂದು ಪಂಥಾಹ್ವಾನವೆಂಬಂತೆ ಕಾಣರು. ಅವರು ಒಬ್ಬರು ಇನ್ನೊಬ್ಬರೊಡನೆ “ಕಟುವಾಗಿ ಕೋಪಿಸಿ”ಕೊಳ್ಳದವರಾಗಿರಲು ಕಠಿನವಾಗಿ ಕೆಲಸಮಾಡುವರು. (ಕೊಲೊಸ್ಸೆ 3:19, NW) “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು,” ಎಂಬುದನ್ನು ಇಬ್ಬರೂ ಜ್ಞಾಪಿಸಿಕೊಳ್ಳಬೇಕು. (ಜ್ಞಾನೋಕ್ತಿ 15:1) ತನ್ನ ಹೃತ್ಪೂರ್ವಕ ಅನಿಸಿಕೆಗಳನ್ನು ತೋಡಿಕೊಳ್ಳುವ ಒಬ್ಬ ಸಂಗಾತಿಯನ್ನು ಕೀಳ್ಮಾಡದಿರಲು ಅಥವಾ ಖಂಡಿಸದಿರಲು ಜಾಗ್ರತೆವಹಿಸಿರಿ. ಬದಲಾಗಿ, ಅಂತಹ ಅಭಿವ್ಯಕ್ತಿಗಳನ್ನು ಇತರರ ದೃಷ್ಟಿಕೋನದೊಳಗೆ ಅಂತರ್‌ದೃಷ್ಟಿಯನ್ನು ಪಡೆಯುವ ಒಂದು ಸಂದರ್ಭವನ್ನಾಗಿ ನೋಡಿರಿ. ಒಟ್ಟುಗೂಡಿ, ಭಿನ್ನತೆಗಳನ್ನು ಸರಿಪಡಿಸಲು ಮತ್ತು ಒಂದು ಸಾಮರಸ್ಯವುಳ್ಳ ಸಮಾಪ್ತಿಗೆ ಬರಲು ಪ್ರಯತ್ನಿಸಿರಿ.

      24 ಸಾರಳು ತನ್ನ ಗಂಡನಾದ ಅಬ್ರಹಾಮನಿಗೆ, ಒಂದು ನಿರ್ದಿಷ್ಟ ಸಮಸ್ಯೆಗೆ ಪರಿಹಾರವನ್ನು ಶಿಫಾರಸ್ಸು ಮಾಡಿದ ಮತ್ತು ಅದು ಅವನ ಅನಿಸಿಕೆಗಳಿಗೆ ಸರಿಹೊಂದದಿದ್ದ ಸಂದರ್ಭವನ್ನು ಜ್ಞಾಪಿಸಿಕೊಳ್ಳಿರಿ. ಆದರೂ ದೇವರು ಅಬ್ರಹಾಮನಿಗೆ, “ಸಾರಳು ಹೇಳಿದಂತೆಯೇ ಮಾಡು” ಎಂದನು. (ಆದಿಕಾಂಡ 21:9-12) ಅಬ್ರಹಾಮನು ಮಾಡಿದನು ಮತ್ತು ಆಶೀರ್ವದಿತನಾದನು. ತತ್ಸಮಾನವಾಗಿ, ಒಬ್ಬ ಹೆಂಡತಿಯು ತನ್ನ ಗಂಡನ ಮನಸ್ಸಿನಲ್ಲಿರುವುದಕ್ಕಿಂತ ಭಿನ್ನವಾದುದನ್ನು ಸೂಚಿಸುವುದಾದರೆ, ಕಡಿಮೆಪಕ್ಷ ಅವನು ಕಿವಿಗೊಡಬೇಕು. ಅದೇ ಸಮಯದಲ್ಲಿ, ಒಬ್ಬ ಹೆಂಡತಿಯು ಸಂಭಾಷಣೆಯಲ್ಲಿ ಮೇಲುಗೈ ಹೊಂದಿರದೆ ತನ್ನ ಗಂಡನು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಬೇಕು. (ಜ್ಞಾನೋಕ್ತಿ 25:24) ಗಂಡನಾಗಲಿ ಹೆಂಡತಿಯಾಗಲಿ ಎಲ್ಲ ಸಮಯಗಳಲ್ಲಿ ಅವನ ಅಥವಾ ಅವಳ ಸ್ವಂತ ಮಾರ್ಗವೇ ಆಗಬೇಕೆಂದು ಪಟ್ಟುಹಿಡಿಯುವುದು ಪ್ರೀತಿಯಿಲ್ಲದ್ದೂ ಅಗೌರವವುಳ್ಳದ್ದೂ ಆಗಿದೆ.

      25. ವಿವಾಹಿತ ಜೀವಿತದ ಆಪ್ತ ಸಂಬಂಧಗಳಲ್ಲಿ ಒಳ್ಳೆಯ ಸಂವಾದವು ಸಂತೋಷಕ್ಕೆ ಹೇಗೆ ಸಹಾಯ ಮಾಡುವುದು?

      25 ಒಬ್ಬ ದಂಪತಿಗಳ ಲೈಂಗಿಕ ಸಂಬಂಧದಲ್ಲಿ ಸಹ ಒಳ್ಳೆಯ ಸಂವಾದವು ಪ್ರಾಮುಖ್ಯ. ಸ್ವಾರ್ಥ ಮತ್ತು ಆತ್ಮಸಂಯಮದ ಕೊರತೆಯು ವಿವಾಹದಲ್ಲಿನ ಈ ಅತಿ ಆಪ್ತ ಸಂಬಂಧವನ್ನು ಗುರುತರವಾಗಿ ಹಾನಿಗೊಳಿಸಬಲ್ಲದು. ತಾಳ್ಮೆಯೊಂದಿಗೆ, ಮುಚ್ಚುಮರೆಯಿಲ್ಲದ ಸಂವಾದವು ಅತ್ಯಾವಶ್ಯಕ. ಪ್ರತಿಯೊಬ್ಬರು ನಿಸ್ವಾರ್ಥಭಾವದಿಂದ ಬೇರೆಯವರ ಹಿತವನ್ನು ಹುಡುಕುವಲ್ಲಿ, ಲೈಂಗಿಕ ಸಂಭೋಗವು ಗಂಭೀರವಾದ ಒಂದು ಸಮಸ್ಯೆಯಾಗಿರುವುದು ವಿರಳ. ಇತರ ವಿಷಯಗಳಂತೆಯೇ ಇದರಲ್ಲಿಯೂ, “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”—1 ಕೊರಿಂಥ 7:3-5; 10:24.

      26. ಪ್ರತಿಯೊಂದು ವಿವಾಹದಲ್ಲಿ ಏಳುಬೀಳುಗಳು ಇರುವುದಾದರೂ, ದೇವರ ವಾಕ್ಯಕ್ಕೆ ಕಿವಿಗೊಡುವುದು ವಿವಾಹಿತ ದಂಪತಿಗಳು ಸಂತೋಷವನ್ನು ಕಂಡುಕೊಳ್ಳುವಂತೆ ಹೇಗೆ ಸಹಾಯ ಮಾಡುವುದು?

      26 ದೇವರ ವಾಕ್ಯವು ಎಷ್ಟು ಉತ್ತಮ ತೆರದ ಸಲಹೆಯನ್ನು ನೀಡುತ್ತದೆ! ಪ್ರತಿಯೊಂದು ವಿವಾಹದಲ್ಲಿ ಅದರದ್ದೇ ಆದ ಏಳುಬೀಳುಗಳಿವೆಯೆಂಬುದು ನಿಜ. ಆದರೆ ಜೊತೆಗಾರರು, ಬೈಬಲಿನಲ್ಲಿ ತಿಳಿಸಿರುವಂತೆ, ಯೆಹೋವನ ಆಲೋಚನೆಗೆ ಅಧೀನರಾಗುವುದಾದರೆ ಮತ್ತು ತಮ್ಮ ಸಂಬಂಧವನ್ನು ತಾತ್ವಿಕ ಪ್ರೀತಿ ಮತ್ತು ಗೌರವದ ಮೇಲೆ ಆಧಾರಿಸುವುದಾದರೆ, ಅವರು ತಮ್ಮ ವಿವಾಹವು ಚಿರಸ್ಥಾಯಿಯೂ ಸಂತೋಷಕರವೂ ಆಗಿರುವುದೆಂಬ ಭರವಸೆಯಿಂದಿರಸಾಧ್ಯವಿದೆ. ಹೀಗೆ ಅವರು ಪರಸ್ಪರವಾಗಿ ಮಾತ್ರವಲ್ಲ, ವಿವಾಹದ ಮೂಲಕರ್ತನಾದ ಯೆಹೋವ ದೇವರನ್ನೂ ಗೌರವಿಸುವರು.

      ಒಂದು ಚಿರಸ್ಥಾಯಿಯಾದ, ಸಂತೋಷವುಳ್ಳ ವಿವಾಹವನ್ನು ಒಬ್ಬ ದಂಪತಿಗಳು ಅನುಭವಿಸುವಂತೆ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡುವವು?

      ಸತ್ಯ ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ.—ಯೋಹಾನ 13:35.

      ಕ್ರೈಸ್ತರು ಒಬ್ಬರನ್ನೊಬ್ಬರು ಕ್ಷಮಿಸಲು ಸಿದ್ಧರು.—ಕೊಲೊಸ್ಸೆ 3:13.

      ತಲೆತನದ ಯೋಗ್ಯ ಕ್ರಮವೊಂದಿದೆ.—1 ಕೊರಿಂಥ 11:3.

      ಸಮರ್ಪಕವಾದ ವಿಷಯವನ್ನು ಸಮರ್ಪಕವಾದ ರೀತಿಯಲ್ಲಿ ಹೇಳುವುದು ಪ್ರಾಮುಖ್ಯ.—ಜ್ಞಾನೋಕ್ತಿ 25:11.

  • ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹನ್ನೊಂದು

      ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ

      1. ಕುಟುಂಬಗಳಲ್ಲಿ ವಿಭಾಗಗಳನ್ನು ಉಂಟುಮಾಡಬಹುದಾದ ಕೆಲವು ವಿಷಯಗಳು ಯಾವುವು?

      ಯಾವ ಕುಟುಂಬಗಳಲ್ಲಿ ಪ್ರೀತಿ, ತಿಳಿವಳಿಕೆ, ಮತ್ತು ಶಾಂತಿಯು ಇದೆಯೊ ಅವುಗಳಿಗೆ ಸೇರಿರುವವರು ಧನ್ಯರು. ಅಪೇಕ್ಷಿತವಾಗಿ, ನಿಮ್ಮದು ಅಂತಹ ಒಂದು ಕುಟುಂಬವಾಗಿದೆ. ಶೋಚನೀಯವಾಗಿ ಅಗಣಿತ ಕುಟುಂಬಗಳು ಆ ವರ್ಣನೆಯನ್ನು ತಲಪಲು ತಪ್ಪಿಬಿದ್ದು, ಒಂದಲ್ಲಾ ಒಂದು ಕಾರಣದಿಂದಾಗಿ ವಿಭಾಗವಾಗಿವೆ. ಮನೆವಾರ್ತೆಗಳನ್ನು ಯಾವುದು ವಿಭಾಗಿಸುತ್ತದೆ? ಈ ಅಧ್ಯಾಯದಲ್ಲಿ ನಾವು ಮೂರು ವಿಷಯಗಳನ್ನು ಚರ್ಚಿಸುವೆವು. ಕೆಲವು ಕುಟುಂಬಗಳಲ್ಲಿ ಸದಸ್ಯರೆಲ್ಲರು ಒಂದೇ ಧರ್ಮದಲ್ಲಿ ಪಾಲಿಗರಾಗಿರುವುದಿಲ್ಲ. ಬೇರೆಯವುಗಳಲ್ಲಿ, ಮಕ್ಕಳಿಗೆ ಒಂದೇ ಸ್ವಾಭಾವಿಕ ಹೆತ್ತವರು ಇಲ್ಲದಿರಬಹುದು. ಇನ್ನು ಕೆಲವಲ್ಲಿ ಜೀವನೋಪಾಯವನ್ನು ಮಾಡುವ ಹೋರಾಟ ಅಥವಾ ಹೆಚ್ಚಿನ ಭೌತಿಕ ವಸ್ತುಗಳ ಅಭಿಲಾಷೆಯು ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗುವಂತೆ ಒತ್ತಾಯಿಸುತ್ತದೆ. ಆದರೂ, ಒಂದು ಮನೆವಾರ್ತೆಯನ್ನು ವಿಭಾಗಿಸುವ ಪರಿಸ್ಥಿತಿಗಳು ಇನ್ನೊಂದನ್ನು ಪ್ರಭಾವಿಸದಿರಬಹುದು. ಯಾವುದು ವ್ಯತ್ಯಾಸವನ್ನುಂಟುಮಾಡುತ್ತದೆ?

      2. ಕುಟುಂಬ ಜೀವನದಲ್ಲಿ ಮಾರ್ಗದರ್ಶನಕ್ಕಾಗಿ ಕೆಲವರು ಎಲ್ಲಿ ನೋಡುತ್ತಾರೆ, ಆದರೆ ಅಂತಹ ಮಾರ್ಗದರ್ಶನದ ಅತ್ಯುತ್ತಮ ಮೂಲವು ಯಾವುದು?

      2 ದೃಷ್ಟಿಕೋನವು ಒಂದು ಕಾರಣಾಂಶ. ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ತಿಳಿದುಕೊಳ್ಳಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾದರೆ, ಒಂದು ಐಕಮತ್ಯದ ಮನೆವಾರ್ತೆಯನ್ನು ಉಳಿಸಿಕೊಳ್ಳುವ ವಿಧವನ್ನು ನೀವು ಹೆಚ್ಚು ಸಂಭವನೀಯವಾಗಿ ಗ್ರಹಿಸಿಕೊಳ್ಳುವಿರಿ. ಎರಡನೆಯ ಕಾರಣಾಂಶವು, ನಿಮ್ಮ ಮಾರ್ಗದರ್ಶನೆಯ ಮೂಲವಾಗಿದೆ. ಅನೇಕ ಜನರು ತಮ್ಮ ಸಹಕರ್ಮಿಗಳ, ನೆರೆಯವರ, ವಾರ್ತಾ ಅಂಕಣಗಾರರ, ಅಥವಾ ಇತರ ಮಾನವ ಮಾರ್ಗದರ್ಶಿಗಳ ಬುದ್ಧಿವಾದವನ್ನು ಅನುಸರಿಸುತ್ತಾರೆ. ಕೆಲವರಾದರೊ ದೇವರ ವಾಕ್ಯವು ತಮ್ಮ ಸನ್ನಿವೇಶದ ಕುರಿತು ಏನನ್ನುತ್ತದೆಂದು ಕಂಡುಹಿಡಿದು, ಅನಂತರ ತಾವು ಕಲಿತ ವಿಷಯಗಳನ್ನು ಅನ್ವಯಿಸಿಕೊಂಡಿದ್ದಾರೆ. ಇದನ್ನು ಮಾಡುವುದು ಒಂದು ಕುಟುಂಬಕ್ಕೆ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡಬಲ್ಲದು?—2 ತಿಮೊಥೆಯ 3:16, 17.

      ನಿಮ್ಮ ಗಂಡನು ಒಬ್ಬ ವಿಭಿನ್ನ ನಂಬಿಕೆಯವನಾಗಿದ್ದರೆ

      [ಪುಟ 130ರಲ್ಲಿರುವ ಚಿತ್ರ]

      ಇತರ ವ್ಯಕ್ತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ

      3. (ಎ) ವಿಭಿನ್ನ ನಂಬಿಕೆಯ ಒಬ್ಬನನ್ನು ವಿವಾಹವಾಗುವ ವಿಷಯದಲ್ಲಿ ಬೈಬಲಿನ ಸಲಹೆಯೇನು? (ಬಿ) ಒಬ್ಬ ಜೊತೆಗಾರ್ತಿಯು ವಿಶ್ವಾಸದಲ್ಲಿದ್ದು ಇನ್ನೊಬ್ಬನು ಇಲ್ಲದಿರುವಲ್ಲಿ ಅನ್ವಯಿಸುವ ಕೆಲವು ಮೂಲಭೂತ ತತ್ವಗಳು ಯಾವುವು?

      3 ಒಂದು ವಿಭಿನ್ನ ಧಾರ್ಮಿಕ ನಂಬಿಕೆಯ ಒಬ್ಬರೊಂದಿಗೆ ವಿವಾಹವಾಗುವ ವಿರುದ್ಧವಾಗಿ ಬೈಬಲು ಬಲವಾದ ಸಲಹೆಯನ್ನು ನೀಡುತ್ತದೆ. (ಧರ್ಮೋಪದೇಶಕಾಂಡ 7:3, 4; 1 ಕೊರಿಂಥ 7:39) ಆದರೂ, ನಿಮ್ಮ ವಿವಾಹದ ಅನಂತರ ನೀವು ಬೈಬಲಿನಿಂದ ಸತ್ಯವನ್ನು ಕಲಿತಿರಬಹುದು, ಆದರೆ ನಿಮ್ಮ ಗಂಡನು ಕಲಿಯಲಿಲ್ಲ. ಆಗೇನು? ನಿಶ್ಚಯವಾಗಿಯೂ ವಿವಾಹ ಪ್ರತಿಜ್ಞೆಗಳು ಇನ್ನೂ ಬಂಧಕವಾಗಿರುತ್ತವೆ. (1 ಕೊರಿಂಥ 7:10) ವಿವಾಹ ಬಂಧನದ ಶಾಶ್ವತತೆಯನ್ನು ಬೈಬಲು ಒತ್ತಿಹೇಳುತ್ತದೆ ಮತ್ತು ವಿವಾಹಿತ ಜನರು ತಮ್ಮ ಭಿನ್ನತೆಗಳಿಂದ ಪಲಾಯನಗೈಯುವ ಬದಲಿಗೆ ಅವನ್ನು ನೀಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. (ಎಫೆಸ 5:28-31; ತೀತ 2:4, 5) ಬೈಬಲಿನ ಧರ್ಮವನ್ನು ನೀವು ಅನುಸರಿಸುವುದನ್ನು ನಿಮ್ಮ ಗಂಡನು ಬಲವಾಗಿ ಆಕ್ಷೇಪಿಸುವುದಾದರೆ ಆಗೇನು? ಸಭಾ ಕೂಟಗಳಿಗೆ ಹೋಗುವುದರಿಂದ ಅವನು ನಿಮ್ಮನ್ನು ತಡೆಯಲು ಪ್ರಯತ್ನಿಸಬಹುದು, ಅಥವಾ ತನ್ನ ಹೆಂಡತಿಯು ಧರ್ಮದ ಕುರಿತು ಮಾತಾಡುತ್ತಾ, ಮನೆಯಿಂದ ಮನೆಗೆ ಹೋಗುವುದು ತನಗೆ ಮನಸ್ಸಿಲ್ಲ ಎಂದವನು ಹೇಳಬಹುದು. ನೀವೇನು ಮಾಡುವಿರಿ?

      4. ತನ್ನ ಗಂಡನು ತನ್ನ ನಂಬಿಕೆಯಲ್ಲಿ ಪಾಲಿಗನಾಗದಿರುವಾಗ ಹೆಂಡತಿಯು ಯಾವ ವಿಧದಲ್ಲಿ ಸಹಾನುಭೂತಿಯನ್ನು ತೋರಿಸಬಹುದು?

      4 ನಿಮ್ಮನ್ನು ಕೇಳಿಕೊಳ್ಳಿ, ‘ನನ್ನ ಗಂಡನು ಆ ರೀತಿಯಾಗಿ ಭಾವಿಸುವುದೇಕೆ?’ (ಜ್ಞಾನೋಕ್ತಿ 16:20, 23) ನೀವು ಮಾಡುತ್ತಿರುವುದನ್ನು ಅವನು ನಿಜವಾಗಿಯೂ ತಿಳಿದುಕೊಳ್ಳದಿರುವಲ್ಲಿ, ಅವನು ನಿಮ್ಮ ವಿಷಯದಲ್ಲಿ ಚಿಂತಿಸಬಹುದು. ಅಥವಾ ನೀವೀಗ ಅವರಿಗೆ ಪ್ರಾಮುಖ್ಯವಾದ ನಿರ್ದಿಷ್ಟ ಪದ್ಧತಿಗಳಲ್ಲಿ ಪಾಲಿಗರಾಗದಿರುವ ಕಾರಣ ಸಂಬಂಧಿಕರಿಂದ ಅವನು ಒತ್ತಡಕ್ಕೆ ಒಳಗಾಗಿರಬಹುದು. “ಮನೆಯಲ್ಲಿ ಒಬ್ಬಂಟಿಗನಾಗಿ, ನನಗೆ ತೊರೆಯಲ್ಪಟ್ಟ ಅನಿಸಿಕೆಯಾಯಿತು,” ಎಂದು ಒಬ್ಬ ಗಂಡನು ಹೇಳಿದನು. ತನ್ನ ಹೆಂಡತಿಯನ್ನು ಒಂದು ಧರ್ಮಕ್ಕೆ ಕಳೆದುಕೊಳ್ಳುತ್ತಿರುವ ಅನಿಸಿಕೆ ಈ ಮನುಷ್ಯನಿಗಾಯಿತು. ಆದರೂ ತಾನು ಒಂಟಿಗನಾಗಿದ್ದೇನೆಂದು ಅಂಗೀಕರಿಸಲು ಹೆಮ್ಮೆಯು ಅವನನ್ನು ತಡೆಯಿತು. ಯೆಹೋವನಿಗಾಗಿ ನಿಮ್ಮ ಪ್ರೀತಿಯು, ನೀವೀಗ ನಿಮ್ಮ ಗಂಡನನ್ನು ಮುಂಚಿಗಿಂತ ಕಡಿಮೆ ಪ್ರೀತಿಸುತ್ತೀರಿ ಎಂಬರ್ಥವಲ್ಲವೆಂಬ ಆಶ್ವಾಸನೆಯು ನಿಮ್ಮ ಗಂಡನಿಗೆ ಬೇಕಾಗಬಹುದು. ಅವನೊಂದಿಗೆ ಸಮಯ ಕಳೆಯಲು ಖಾತರಿಯಿಂದಿರ್ರಿ.

      5. ಯಾರ ಗಂಡನು ಒಂದು ವಿಭಿನ್ನ ನಂಬಿಕೆಯವನಾಗಿದ್ದಾನೊ ಆ ಹೆಂಡತಿಯು ಯಾವ ಸಮತೆಯನ್ನು ಇಟ್ಟುಕೊಳ್ಳಬೇಕು?

      5 ಆದರೂ, ಈ ಸನ್ನಿವೇಶವನ್ನು ನೀವು ವಿವೇಕದಿಂದ ನಿರ್ವಹಿಸಲಿರುವುದಾದರೆ ಇದಕ್ಕಿಂತಲೂ ಹೆಚ್ಚು ಪ್ರಮುಖವಾದ ವಿಷಯವು ಪರಿಗಣಿಸಲ್ಪಡಲೇಬೇಕು. ದೇವರ ವಾಕ್ಯವು ಹೆಂಡತಿಯರನ್ನು ಪ್ರೇರಿಸುವುದು: “ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ.” (ಕೊಲೊಸ್ಸೆ 3:18) ಹೀಗೆ, ಸ್ವತಂತ್ರ ಭಾವದ ವಿರುದ್ಧ ಅದು ಎಚ್ಚರಿಸುತ್ತದೆ. ಅದಲ್ಲದೆ, “ಕರ್ತನಲ್ಲಿರುವವರಿಗೆ ಯೋಗ್ಯ”ವಾಗಿದೆ ಎಂದು ಹೇಳುವ ಮೂಲಕ, ಗಂಡನಿಗೆ ತೋರಿಸುವ ಅಧೀನತೆಯು, ಕರ್ತನಿಗೆ ಅಧೀನತೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಈ ವಚನವು ಸೂಚಿಸುತ್ತದೆ. ಒಂದು ಸಮತೆಯು ಇರಲೇಬೇಕಾಗಿದೆ.

      6. ಒಬ್ಬ ಕ್ರೈಸ್ತ ಹೆಂಡತಿಯು ಯಾವ ಮೂಲತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

      6 ಒಬ್ಬ ಕ್ರೈಸ್ತನಿಗಾದರೊ, ಸಭಾ ಕೂಟಗಳನ್ನು ಹಾಜರಾಗುವುದು ಮತ್ತು ಒಬ್ಬನ ಬೈಬಲಾಧರಿತ ನಂಬಿಕೆಯ ಕುರಿತು ಇತರರಿಗೆ ಸಾಕ್ಷಿಕೊಡುವುದು, ಅಲಕ್ಷ್ಯ ಮಾಡಬಾರದಾಗಿರುವಂತಹ ಸತ್ಯಾರಾಧನೆಯ ಪ್ರಾಮುಖ್ಯ ಅಂಶಗಳಾಗಿವೆ. (ರೋಮಾಪುರ 10:9, 10, 14; ಇಬ್ರಿಯ 10:24, 25) ಹಾಗಾದರೆ, ಒಬ್ಬ ಮಾನವನು ದೇವರ ಒಂದು ವಿಶಿಷ್ಟ ಆವಶ್ಯಕತೆಯೊಂದಿಗೆ ಸಮ್ಮತಿಸದಂತೆ ನೇರವಾಗಿ ಆಜ್ಞಾಪಿಸುವುದಾದರೆ ನೀವೇನು ಮಾಡುವಿರಿ? ಯೇಸು ಕ್ರಿಸ್ತನ ಅಪೊಸ್ತಲರು ಘೋಷಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಅವರ ಮಾದರಿಯು ಜೀವಿತದಲ್ಲಿನ ಅನೇಕ ಸನ್ನಿವೇಶಗಳಿಗೆ ಅನ್ವಯವಾಗುವ ಒಂದು ಪೂರ್ವನಿದರ್ಶನವನ್ನು ಒದಗಿಸುತ್ತದೆ. ಯೆಹೋವನಿಗಾಗಿ ಪ್ರೀತಿಯು ಆತನಿಗೆ ನ್ಯಾಯವಾಗಿ ಸಲ್ಲತಕ್ಕ ಭಕ್ತಿಯನ್ನು ಸಲ್ಲಿಸುವಂತೆ ನಿಮ್ಮನ್ನು ಪ್ರೇರಿಸುವುದೊ? ಅದೇ ಸಮಯದಲ್ಲಿ, ನಿಮ್ಮ ಗಂಡನೆಡೆಗೆ ನಿಮಗಿರುವ ಪ್ರೀತಿ ಮತ್ತು ಗೌರವವು ಅವನಿಗೆ ಸ್ವೀಕರಣೀಯವಾಗಿರುವಂತಹ ರೀತಿಯಲ್ಲಿ ಅದನ್ನು ಸಲ್ಲಿಸಲು ಪ್ರಯತ್ನಿಸುವಂತೆ ನಿಮ್ಮನ್ನು ಪ್ರಚೋದಿಸುವುದೊ?—ಮತ್ತಾಯ 4:10; 1 ಯೋಹಾನ 5:3.

      7. ಯಾವ ದೃಢನಿಶ್ಚಯವು ಒಬ್ಬ ಕ್ರೈಸ್ತ ಹೆಂಡತಿಯಲ್ಲಿರಬೇಕು?

      7 ಇದು ಯಾವಾಗಲೂ ಸಾಧ್ಯವಿರುವುದಿಲ್ಲವೆಂಬುದನ್ನು ಯೇಸು ಗಮನಿಸಿದನು. ಸತ್ಯಾರಾಧನೆಗೆ ವಿರೋಧದ ಕಾರಣ, ಕೆಲವು ಕುಟುಂಬಗಳ ವಿಶ್ವಾಸಿಗಳಾದ ಸದಸ್ಯರು, ತಮ್ಮ ಮತ್ತು ಕುಟುಂಬದ ಉಳಿದವರ ನಡುವೆ ಒಂದು ಖಡ್ಗವು ಬಂದಿರುತ್ತದೋ ಎಂಬಂತೆ ಪ್ರತ್ಯೇಕತೆಯ ಅನಿಸಿಕೆಯನ್ನು ಅನುಭವಿಸುವರು ಎಂದು ಅವನು ಎಚ್ಚರಿಸಿದ್ದನು. (ಮತ್ತಾಯ 10:34-36) ಜಪಾನಿನ ಒಬ್ಬ ಮಹಿಳೆಯು ಇದನ್ನು ಅನುಭವಿಸಿದಳು. ಅವಳು ತನ್ನ ಗಂಡನಿಂದ 11 ವರ್ಷ ವಿರೋಧಿಸಲ್ಪಟ್ಟಳು. ಅವನು ಅವಳೊಂದಿಗೆ ಕಠೋರವಾಗಿ ವರ್ತಿಸಿದನು ಮತ್ತು ಆಗಾಗ ಮನೆಗೆ ಬೀಗಹಾಕಿ ಅವಳನ್ನು ಹೊರಗಿರುವಂತೆ ಮಾಡಿದನು. ಆದರೆ ಅವಳು ತಾಳಿಕೊಂಡಳು. ಕ್ರೈಸ್ತ ಸಭೆಯಲ್ಲಿನ ಮಿತ್ರರು ಅವಳಿಗೆ ಸಹಾಯ ಮಾಡಿದರು. ಅವಳು ಎಡೆಬಿಡದೆ ಪ್ರಾರ್ಥಿಸಿ, 1 ಪೇತ್ರ 2:20ರಿಂದ ಬಹಳವಾಗಿ ಪ್ರೋತ್ಸಾಹವನ್ನು ಪಡೆದುಕೊಂಡಳು. ತಾನು ದೃಢವಾಗಿ ಉಳಿದಲ್ಲಿ ತನ್ನ ಗಂಡನು ಒಂದಾನೊಂದು ದಿನ ಯೆಹೋವನ ಸೇವೆಯಲ್ಲಿ ತನ್ನನ್ನು ಜೊತೆಗೂಡುವನೆಂಬ ಮನವರಿಕೆಯು ಈ ಕ್ರೈಸ್ತ ಮಹಿಳೆಗಾಯಿತು. ಮತ್ತು ಅವನು ಜೊತೆಗೂಡಿದನು ನಿಶ್ಚಯ.

      8, 9. ತನ್ನ ಗಂಡನ ಮುಂದೆ ಅನಾವಶ್ಯಕ ಅಡ್ಡಿಗಳನ್ನು ಹಾಕುವುದನ್ನು ತಡೆಯಲು ಒಬ್ಬ ಹೆಂಡತಿಯು ಹೇಗೆ ಕ್ರಿಯೆಗೈಯಬೇಕು?

      8 ನಿಮ್ಮ ಸಂಗಾತಿಯ ಮನೋಭಾವವನ್ನು ಪ್ರಭಾವಿಸಲಿಕ್ಕೆ ನೀವು ಮಾಡಬಲ್ಲ ಅನೇಕ ಪ್ರಾಯೋಗಿಕ ವಿಷಯಗಳಿವೆ. ಉದಾಹರಣೆಗಾಗಿ, ನಿಮ್ಮ ಗಂಡನು ನಿಮ್ಮ ಧರ್ಮಕ್ಕೆ ಆಕ್ಷೇಪಮಾಡಿದರೆ, ಬೇರೆ ಕ್ಷೇತ್ರಗಳಲ್ಲಿ ಅವನು ಆಕ್ಷೇಪಣೆಮಾಡಲು ಅವನಿಗೆ ಸಕಾರಣಗಳನ್ನು ಕೊಡಬೇಡಿರಿ. ಮನೆಯನ್ನು ಶುಚಿಯಾಗಿಡಿರಿ. ನಿಮ್ಮ ವೈಯಕ್ತಿಕ ತೋರಿಕೆಗೆ ಗಮನಕೊಡಿರಿ. ಪ್ರೀತಿ ಮತ್ತು ಗಣ್ಯತೆಯ ಅಭಿವ್ಯಕ್ತಿಗಳಲ್ಲಿ ಉದಾರವಾಗಿರ್ರಿ. ಟೀಕಿಸುವ ಬದಲಿಗೆ ಬೆಂಬಲವನ್ನು ಕೊಡುವವರಾಗಿರಿ. ಅವನ ತಲೆತನಕ್ಕಾಗಿ ನೀವು ಅವನೆಡೆಗೆ ನೋಡುತ್ತೀರೆಂಬುದನ್ನು ತೋರಿಸಿರಿ. ನಿಮಗೆ ತಪ್ಪುಮಾಡಲ್ಪಟ್ಟಿದೆಯೆಂದು ನೀವು ಭಾವಿಸಿದರೆ ಪ್ರತೀಕಾರ ನೀಡಬೇಡಿ. (1 ಪೇತ್ರ 2:21, 23) ಮಾನವ ಅಪರಿಪೂರ್ಣತೆಗಾಗಿ ರಿಯಾಯಿತಿಗಳನ್ನು ತೋರಿಸಿರಿ, ಮತ್ತು ಒಂದು ವಾಗ್ವಾದವು ಏಳುವಲ್ಲಿ ನಮ್ರತೆಯಿಂದ ಕ್ಷಮೆಬೇಡುವುದರಲ್ಲಿ ಮೊದಲಿಗರಾಗಿರಿ.—ಎಫೆಸ 4:26.

      9 ಕೂಟಗಳಲ್ಲಿ ನಿಮ್ಮ ಉಪಸ್ಥಿತಿಯು ಅವನ ಊಟಗಳು ತಡವಾಗುವುದಕ್ಕೆ ಒಂದು ಕಾರಣವಾಗುವಂತೆ ಬಿಡಬೇಡಿರಿ. ನಿಮ್ಮ ಗಂಡನು ಮನೆಯಲ್ಲಿರದ ಸಮಯಗಳಲ್ಲಿ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ಸಹ ನೀವು ಆರಿಸಿಕೊಳ್ಳಬಹುದು. ತನ್ನ ಗಂಡನಿಗೆ ಅದು ಅಸ್ವೀಕರಣೀಯವಾಗಿರುವಾಗ ಅವನಿಗೆ ಸಾರುವ ಗೊಡವೆಗೆ ಹೋಗದಿರುವುದು ಒಬ್ಬ ಕ್ರೈಸ್ತ ಹೆಂಡತಿಗೆ ವಿವೇಕಪ್ರದವಾಗಿದೆ. ಬದಲಾಗಿ, ಅವಳು ಅಪೊಸ್ತಲ ಪೇತ್ರನ ಸಲಹೆಯನ್ನು ಅನುಸರಿಸುತ್ತಾಳೆ: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 3:1, 2) ದೇವರಾತ್ಮದ ಫಲಗಳನ್ನು ಹೆಚ್ಚು ಪೂರ್ಣವಾಗಿ ಪ್ರದರ್ಶಿಸಲು ಕ್ರೈಸ್ತ ಹೆಂಡತಿಯರು ಶ್ರಮಿಸುತ್ತಾರೆ.—ಗಲಾತ್ಯ 5:22, 23.

      ಹೆಂಡತಿಯು ಅನುಸಾರಿಣಿಯಾದ ಕ್ರೈಸ್ತಳಾಗಿಲ್ಲದಿರುವಾಗ

      10. ತನ್ನ ಹೆಂಡತಿಯು ಒಂದು ವಿಭಿನ್ನ ನಂಬಿಕೆಯವಳಾಗಿರುವಲ್ಲಿ ವಿಶ್ವಾಸಿಯಾದ ಗಂಡನು ಅವಳ ಕಡೆಗೆ ಹೇಗೆ ಕ್ರಿಯೆಗೈಯಬೇಕು?

      10 ಗಂಡನು ಅನುಸರಿಸುವ ಕ್ರೈಸ್ತನಾಗಿದ್ದು, ಹೆಂಡತಿಯು ಅನುಸಾರಿಣಿಯಾಗಿರದಿರುವಲ್ಲಿ ಏನು? ಅಂತಹ ಸನ್ನಿವೇಶಗಳಿಗಾಗಿ ಬೈಬಲು ನಿರ್ದೇಶನವನ್ನು ಕೊಡುತ್ತದೆ. ಅದು ಹೇಳುವುದು: “ಒಬ್ಬ ಸಹೋದರನಿಗೆ ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.” (1 ಕೊರಿಂಥ 7:12) ಅದು ಗಂಡಂದಿರಿಗೆ ಸಹ ಪ್ರಬೋಧಿಸುವುದು: “ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.”—ಕೊಲೊಸ್ಸೆ 3:19.

      11. ತನ್ನ ಹೆಂಡತಿಯು ಒಬ್ಬ ಅನುಸರಿಸುವ ಕ್ರೈಸ್ತಳಾಗಿರದಿದ್ದರೆ, ಗಂಡನು ಹೇಗೆ ವಿವೇಚನಾಶಕ್ತಿಯನ್ನು ತೋರಿಸಿ, ಅವಳ ಮೇಲೆ ಜಾಣತನದಿಂದ ತಲೆತನವನ್ನು ನಡಿಸಬಲ್ಲನು?

      11 ನಿಮಗಿಂತ ವಿಭಿನ್ನವಾದ ನಂಬಿಕೆಯುಳ್ಳ ಹೆಂಡತಿಯ ಗಂಡನು ನೀವಾಗಿರುವಲ್ಲಿ, ನಿಮ್ಮ ಹೆಂಡತಿಗೆ ಗೌರವ ತೋರಿಸುವುದಕ್ಕೆ ಮತ್ತು ಅವಳ ಭಾವನೆಗಳನ್ನು ಪರಿಗಣಿಸುವುದಕ್ಕೆ ವಿಶೇಷವಾಗಿ ಎಚ್ಚರವುಳ್ಳವರಾಗಿರಿ. ನೀವು ಅವುಗಳನ್ನು ಒಪ್ಪದಿದ್ದರೂ, ವಯಸ್ಕಳೋಪಾದಿ ತನ್ನ ಧಾರ್ಮಿಕ ನಂಬಿಕೆಗಳನ್ನು ಅನುಸರಿಸಲು ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯಕ್ಕೆ ಅವಳು ಅರ್ಹಳು. ನಿಮ್ಮ ನಂಬಿಕೆಯ ಕುರಿತಾಗಿ ಅವಳೊಂದಿಗೆ ಮೊದಲ ಬಾರಿ ಮಾತಾಡುವಾಗಲೇ, ಅವಳು ದೀರ್ಘ ಸಮಯದಿಂದ ಹಿಡಿದ ನಂಬಿಕೆಯನ್ನು ಒಂದು ಹೊಸ ನಂಬಿಕೆಯ ಸಲುವಾಗಿ ತ್ಯಜಿಸಿಬಿಡುವಂತೆ ನಿರೀಕ್ಷಿಸಬೇಡಿ. ಅವಳೂ ಅವಳ ಕುಟುಂಬದವರೂ ದೀರ್ಘಾವಧಿಯಿಂದ ನೆಚ್ಚಿರುವ ಧಾರ್ಮಿಕ ಪದ್ಧತಿಗಳು ಸುಳ್ಳೆಂದು ಥಟ್ಟನೆ ಹೇಳಿಬಿಡುವ ಬದಲಿಗೆ, ಶಾಸ್ತ್ರಗಳಿಂದ ಅವಳೊಡನೆ ತಾಳ್ಮೆಯಿಂದ ವಿವೇಚಿಸಲು ಪ್ರಯತ್ನಮಾಡಿರಿ. ಸಭೆಯ ಚಟುವಟಿಕೆಗಳಿಗಾಗಿ ನೀವು ಬಹಳ ಹೆಚ್ಚು ಸಮಯವನ್ನು ಕೊಡುವುದಾದರೆ, ಅಲಕ್ಷಿಸಲ್ಪಡುವ ಭಾವನೆಯು ಅವಳಿಗಾದೀತು. ಯೆಹೋವನನ್ನು ಸೇವಿಸುವ ನಿಮ್ಮ ಪ್ರಯತ್ನಗಳನ್ನು ಅವಳು ವಿರೋಧಿಸಬಹುದು, ಆದರೂ ಮೂಲಸಂದೇಶವು ಕೇವಲ ಹೀಗಿರಬಹುದು: “ನನಗೆ ನಿಮ್ಮ ಹೆಚ್ಚಿನ ಸಮಯದ ಅಗತ್ಯವಿದೆ!” ತಾಳ್ಮೆಯಿಂದಿರಿ. ನಿಮ್ಮ ಪ್ರೀತಿಪೂರ್ವಕ ಪರಿಗಣನೆಯಿಂದ ಸಕಾಲದಲ್ಲಿ ಅವಳು ಸತ್ಯಾರಾಧನೆಯನ್ನು ಸ್ವೀಕರಿಸುವಂತೆ ಸಹಾಯ ಮಾಡಲ್ಪಡಬಹುದು.—ಕೊಲೊಸ್ಸೆ 3:12-14; 1 ಪೇತ್ರ 3:8, 9.

      ಮಕ್ಕಳನ್ನು ತರಬೇತು ಮಾಡುವುದು

      12. ಗಂಡಹೆಂಡತಿಯರು ವಿಭಿನ್ನ ನಂಬಿಕೆಗಳವರಾಗಿರುವುದಾದರೂ, ತಮ್ಮ ಮಕ್ಕಳನ್ನು ತರಬೇತು ಮಾಡುವುದರಲ್ಲಿ ಶಾಸ್ತ್ರೀಯ ಮೂಲತತ್ವಗಳನ್ನು ಹೇಗೆ ಅನ್ವಯಿಸಬೇಕಾಗಿದೆ?

      12 ಆರಾಧನೆಯಲ್ಲಿ ಐಕ್ಯವಾಗಿರದ ಒಂದು ಮನೆವಾರ್ತೆಯಲ್ಲಿ, ಮಕ್ಕಳ ಧಾರ್ಮಿಕ ಉಪದೇಶವು ಕೆಲವು ಸಾರಿ ಒಂದು ವಾದಾಂಶವಾಗುತ್ತದೆ. ಶಾಸ್ತ್ರೀಯ ಮೂಲತತ್ವಗಳು ಹೇಗೆ ಅನ್ವಯಿಸಲ್ಪಡಬೇಕು? ಮಕ್ಕಳಿಗೆ ಉಪದೇಶಮಾಡುವ ಪ್ರಧಾನ ಜವಾಬ್ದಾರಿಯನ್ನು ಬೈಬಲು ತಂದೆಗೆ ನೇಮಿಸುತ್ತದೆ, ಆದರೆ ತಾಯಿಗೆ ಸಹ ಒಂದು ಮಹತ್ವದ ಪಾತ್ರವಹಿಸಲಿಕ್ಕದೆ. (ಜ್ಞಾನೋಕ್ತಿ 1:8; ಹೋಲಿಸಿ ಆದಿಕಾಂಡ 18:19; ಧರ್ಮೋಪದೇಶಕಾಂಡ 11:18, 19.) ತಂದೆಯು ಕ್ರಿಸ್ತನ ತಲೆತನವನ್ನು ಸ್ವೀಕರಿಸದಿದ್ದರೂ, ಅವನು ಇನ್ನೂ ಕುಟುಂಬದ ತಲೆಯಾಗಿದ್ದಾನೆ.

      13, 14. ತನ್ನ ಹೆಂಡತಿಯು ಮಕ್ಕಳನ್ನು ಕ್ರೈಸ್ತ ಕೂಟಗಳಿಗೆ ಒಯ್ಯುವುದನ್ನು ಅಥವಾ ಅವರೊಂದಿಗೆ ಅಭ್ಯಾಸ ಮಾಡುವುದನ್ನು ಗಂಡನು ನಿಷೇಧಿಸಿದರೆ ಅವಳೇನು ಮಾಡಬಲ್ಲಳು?

      13 ಕೆಲವು ಅವಿಶ್ವಾಸಿ ತಂದೆಗಳು ಧಾರ್ಮಿಕ ವಿಷಯಗಳಲ್ಲಿ ತಾಯಿಯು ಮಕ್ಕಳಿಗೆ ಉಪದೇಶ ಮಾಡುವುದನ್ನು ಆಕ್ಷೇಪಿಸುವುದಿಲ್ಲ. ಇನ್ನಿತರರು ಆಕ್ಷೇಪಿಸುತ್ತಾರೆ. ಮಕ್ಕಳನ್ನು ಸಭಾ ಕೂಟಗಳಿಗೆ ಒಯ್ಯುವುದಕ್ಕೆ ನಿಮ್ಮ ಗಂಡನು ಪರವಾನಗಿಕೊಡಲು ನಿರಾಕರಿಸುವುದಾದರೆ ಮತ್ತು ಮನೆಯಲ್ಲಿ ನೀವು ಅವರೊಂದಿಗೆ ಬೈಬಲನ್ನು ಅಭ್ಯಾಸಿಸುವುದನ್ನು ಸಹ ನಿಷೇಧಿಸುವುದಾದರೆ ಏನು? ಈಗ ಅನೇಕ ಹಂಗುಗಳನ್ನು ನೀವು ಸಮತೆಯಲ್ಲಿಡಬೇಕಾಗುತ್ತದೆ—ಯೆಹೋವ ದೇವರೆಡೆಗಿನ ನಿಮ್ಮ ಹಂಗು, ನಿಮ್ಮ ತಲೆಯಾದ ಗಂಡನೆಡೆಗೆ ಮತ್ತು ನಿಮ್ಮ ಪ್ರಿಯ ಮಕ್ಕಳೆಡೆಗಿನ ನಿಮ್ಮ ಹಂಗು. ಇವನ್ನು ನೀವು ಹೇಗೆ ಸರಿಹೊಂದಿಸಬಲ್ಲಿರಿ?

      14 ನಿಶ್ಚಯವಾಗಿಯೂ ಆ ವಿಷಯದ ಕುರಿತು ನೀವು ಪ್ರಾರ್ಥನೆ ಮಾಡುವಿರಿ. (ಫಿಲಿಪ್ಪಿ 4:6, 7; 1 ಯೋಹಾನ 5:14) ಆದರೆ ಕೊನೆಯಲ್ಲಿ ಯಾವ ಮಾರ್ಗವನ್ನು ತೆಗೆದುಕೊಳ್ಳುವುದೆಂದು ನಿರ್ಣಯಿಸಬೇಕಾದವರು ನೀವೇ. ನಿಮ್ಮ ಗಂಡನ ತಲೆತನವನ್ನು ನೀವು ಧಿಕ್ಕರಿಸುತ್ತಿಲ್ಲವೆಂಬುದನ್ನು ಅವನಿಗೆ ಸ್ಪಷ್ಟಪಡಿಸುತ್ತಾ ಜಾಣತನದಿಂದ ನೀವು ಮುಂದರಿಯುವುದಾದರೆ, ಕ್ರಮೇಣ ಅವನ ವಿರೋಧವು ಕಡಿಮೆಯಾಗಬಹುದು. ನಿಮ್ಮ ಮಕ್ಕಳನ್ನು ಕೂಟಗಳಿಗೆ ಒಯ್ಯಲು ಅಥವಾ ಅವರೊಂದಿಗೆ ಒಂದು ವಿಧಿವಿಹಿತ ಬೈಬಲಧ್ಯಯನ ಮಾಡಲು ನಿಮ್ಮ ಗಂಡನು ನಿಷೇಧಿಸಿದರೂ, ನೀವು ಮತ್ತೂ ಅವರಿಗೆ ಕಲಿಸಸಾಧ್ಯವಿದೆ. ನಿಮ್ಮ ದೈನಂದಿನ ಸಂಭಾಷಣೆಯ ಮೂಲಕ ಮತ್ತು ನಿಮ್ಮ ಉತ್ತಮ ಮಾದರಿಯ ಮೂಲಕ, ಯೆಹೋವನೆಡೆಗೆ ಪ್ರೀತಿ, ಆತನ ವಾಕ್ಯದಲ್ಲಿ ನಂಬಿಕೆ, ಹೆತ್ತವರಿಗೆ—ಅವರ ತಂದೆಯನ್ನೂ ಸೇರಿಸಿ—ಗೌರವ, ಬೇರೆಯವರೆಡೆಗೆ ಪ್ರೀತಿಯ ಹಿತಾಸಕ್ತಿ, ಮತ್ತು ಶುದ್ಧಾಂತಃಕರಣದ ಕೆಲಸ ಅಭ್ಯಾಸಗಳಿಗಾಗಿ ಗಣ್ಯತೆಯನ್ನು ಸ್ವಲ್ಪಮಟ್ಟಿಗೆ ಬೇರೂರಿಸಲು ಪ್ರಯತ್ನಿಸಿರಿ. ಕಟ್ಟಕಡೆಗೆ, ತಂದೆಯು ಆ ಸುಪರಿಣಾಮಗಳನ್ನು ಗಮನಿಸಿ ನಿಮ್ಮ ಪ್ರಯತ್ನಗಳ ಮೌಲ್ಯವನ್ನು ಗಣ್ಯಮಾಡಾನು.—ಜ್ಞಾನೋಕ್ತಿ 23:24.

      15. ಮಕ್ಕಳ ಶಿಕ್ಷಣದಲ್ಲಿ ಒಬ್ಬ ವಿಶ್ವಾಸಿಯಾದ ತಂದೆಯ ಜವಾಬ್ದಾರಿಯೇನು?

      15 ನೀವು ವಿಶ್ವಾಸಿಯಾಗಿರುವ ಒಬ್ಬ ಗಂಡನಾಗಿದ್ದರೆ ಮತ್ತು ನಿಮ್ಮ ಹೆಂಡತಿಯು ವಿಶ್ವಾಸಿಯಲ್ಲದಿದ್ದರೆ, “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ನಿಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ನೀವು ಹೊರಬೇಕು. (ಎಫೆಸ 6:4, NW) ಹಾಗೆ ಮಾಡುವಾಗ, ನಿಶ್ಚಯವಾಗಿಯೂ ನೀವು ನಿಮ್ಮ ಹೆಂಡತಿಯೊಂದಿಗೆ ದಯೆ, ಪ್ರೀತಿ ಮತ್ತು ವಿವೇಚನೆಯಿಂದ ವ್ಯವಹರಿಸಬೇಕು.

      ನಿಮ್ಮ ಧರ್ಮವು ನಿಮ್ಮ ಹೆತ್ತವರ ಧರ್ಮವಾಗಿರದಿರುವಲ್ಲಿ

      16, 17. ತಮ್ಮ ಹೆತ್ತವರದಕ್ಕಿಂತ ವಿಭಿನ್ನವಾದ ಒಂದು ನಂಬಿಕೆಯನ್ನು ಮಕ್ಕಳು ಸ್ವೀಕರಿಸುವಲ್ಲಿ, ಬೈಬಲಿನ ಯಾವ ಮೂಲತತ್ವಗಳನ್ನು ಅವರು ನೆನಪಿನಲ್ಲಿಡಬೇಕು?

      16 ಚಿಕ್ಕ ಮಕ್ಕಳು ಸಹ ತಮ್ಮ ಹೆತ್ತವರಿಗಿಂತ ವಿಭಿನ್ನವಾದ ಧಾರ್ಮಿಕ ನೋಟಗಳನ್ನು ಸ್ವೀಕರಿಸುವುದೇನೂ ಈಗ ಅಪೂರ್ವವಲ್ಲ. ನೀವು ಹಾಗೆ ಮಾಡಿದ್ದೀರೊ? ಹಾಗಿರುವಲ್ಲಿ, ಬೈಬಲಿನಲ್ಲಿ ನಿಮಗೆ ಸಲಹೆಯಿದೆ.

      17 ದೇವರ ವಾಕ್ಯವು ಹೇಳುವುದು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. . . . ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು.” (ಎಫೆಸ 6:1, 2) ಹೆತ್ತವರಿಗೆ ಹಿತಕರವಾದ ಗೌರವವನ್ನು ಇದು ಒಳಗೊಳ್ಳುತ್ತದೆ. ಹೆತ್ತವರಿಗೆ ವಿಧೇಯತೆಯು ಪ್ರಾಮುಖ್ಯವಾಗಿರುವಾಗ, ಸತ್ಯ ದೇವರ ಪರಿಗಣನೆಯಿಲ್ಲದೆ ಅದು ಸಲ್ಲಿಸಲ್ಪಡಬಾರದು. ಮಗನು ನಿರ್ಣಯಗಳನ್ನು ಮಾಡಲಾರಂಭಿಸಲು ಸಾಕಷ್ಟು ದೊಡ್ಡವನಾಗುವಾಗ, ಅವನು ತನ್ನ ಕೃತ್ಯಗಳಿಗಾಗಿ ಒಂದು ಹೆಚ್ಚು ಪ್ರಮಾಣದ ಜವಾಬ್ದಾರಿಯನ್ನು ಹೊರುತ್ತಾನೆ. ಇದು ಭೌತಿಕ ನಿಯಮದ ಸಂಬಂಧದಲ್ಲಿ ಮಾತ್ರವಲ್ಲ, ವಿಶೇಷವಾಗಿ ದೈವಿಕ ನಿಯಮದ ಸಂಬಂಧದಲ್ಲಿ ಸತ್ಯವಾಗಿದೆ. “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು,” ಎಂದು ಹೇಳುತ್ತದೆ ಬೈಬಲು.—ರೋಮಾಪುರ 14:12.

      18, 19. ತಮ್ಮ ಹೆತ್ತವರದಕ್ಕಿಂತ ವಿಭಿನ್ನವಾದ ಒಂದು ಧರ್ಮವು ಮಕ್ಕಳಿಗಿರುವುದಾದರೆ, ಅವರು ತಮ್ಮ ಹೆತ್ತವರಿಗೆ ತಮ್ಮ ನಂಬಿಕೆಯನ್ನು ಉತ್ತಮವಾಗಿ ತಿಳಿಯಲು ಹೇಗೆ ಸಹಾಯ ಮಾಡಬಲ್ಲರು?

      18 ನಿಮ್ಮ ನಂಬಿಕೆಗಳು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಉಂಟುಮಾಡುವುದಾದರೆ, ನಿಮ್ಮ ಹೆತ್ತವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಬೈಬಲ್‌ ಬೋಧನೆಗಳನ್ನು ನೀವು ಕಲಿತು ಅನ್ವಯಿಸಿಕೊಳ್ಳುವ ಪರಿಣಾಮವಾಗಿ, ನೀವು ಹೆಚ್ಚು ಗೌರವತೋರಿಸುವವರೂ, ಹೆಚ್ಚು ವಿಧೇಯರೂ, ನಿಮ್ಮಿಂದ ಅವರು ಅವಶ್ಯಪಡಿಸುವ ವಿಷಯದಲ್ಲಿ ಹೆಚ್ಚು ಶ್ರದ್ಧೆಯುಳ್ಳವರೂ ಆಗುವಲ್ಲಿ, ಅವರು ಸಂತೋಷಪಡುವ ಸಂಭವನೀಯತೆ ಇರುವುದು. ಆದರೆ ನಿಮ್ಮ ಹೊಸ ನಂಬಿಕೆಯು, ಅವರು ವೈಯಕ್ತಿಕವಾಗಿ ನೆಚ್ಚುವ ನಂಬಿಕೆಗಳನ್ನು ಮತ್ತು ಪದ್ಧತಿಗಳನ್ನು ನೀವು ತಿರಸ್ಕರಿಸುವಂತೆ ಮಾಡುವಲ್ಲಿ, ಅವರು ನಿಮಗೆ ಕೊಡುವಂತೆ ಅಪೇಕ್ಷಿಸಿದ ಒಂದು ಪರಂಪರೆಯನ್ನು ನೀವು ಧಿಕ್ಕರಿಸುತ್ತೀರೆಂಬ ಭಾವನೆಯನ್ನು ಅವರು ತಾಳಾರು. ನೀವು ಮಾಡುತ್ತಿರುವ ವಿಷಯವು ಸಮಾಜದಲ್ಲಿ ಜನಪ್ರಿಯವಾಗಿಲ್ಲದಿದ್ದರೆ ಅಥವಾ ಅದು ನಿಮ್ಮನ್ನು ಪ್ರಾಪಂಚಿಕವಾಗಿ ಸಮೃದ್ಧರಾಗಲು ನೆರವಾಗಸಾಧ್ಯವಿರುವ ಬೆನ್ನಟ್ಟುವಿಕೆಗಳಿಂದ ನಿಮ್ಮ ಗಮನವನ್ನು ತಿರುಗಿಸುವುದಾದರೆ, ಅವರು ನಿಮ್ಮ ಹಿತಾಸಕ್ತಿಗಾಗಿ ಭಯಪಡಲೂಬಹುದು. ಹೆಮ್ಮೆಯು ಸಹ ಒಂದು ಅಡಚಣೆಯಾಗಿರಬಲ್ಲದು. ನೀವು ಸರಿ ಮತ್ತು ತಾವು ತಪ್ಪು ಎಂದು ನೀವು ಕಾರ್ಯತಃ ಹೇಳುತ್ತಿದ್ದೀರಿ ಎಂದು ಅವರು ಭಾವಿಸಬಹುದು.

      19 ಆದುದರಿಂದ, ಸಾಧ್ಯವಾದಷ್ಟು ಬೇಗ ನಿಮ್ಮ ಹೆತ್ತವರು ಸ್ಥಳಿಕ ಸಭೆಯ ಕೆಲವು ಹಿರಿಯರನ್ನು ಅಥವಾ ಪಕ್ವತೆಯುಳ್ಳ ಇತರ ಸಾಕ್ಷಿಗಳನ್ನು ಭೇಟಿಯಾಗುವಂತೆ ಏರ್ಪಡಿಸಲು ಪ್ರಯತ್ನಿಸಿರಿ. ನಿಮ್ಮ ಹೆತ್ತವರು ರಾಜ್ಯ ಸಭಾಗೃಹವನ್ನು ಭೇಟಿಮಾಡಿ ಅಲ್ಲಿ ಚರ್ಚಿಸಲ್ಪಡುವುದನ್ನು ತಾವಾಗಿಯೆ ಕೇಳುವಂತೆ ಮತ್ತು ಯೆಹೋವನ ಸಾಕ್ಷಿಗಳು ಯಾವ ತೆರದ ಜನರು ಎಂದು ಸಾಕ್ಷಾತ್ತಾಗಿ ನೋಡುವಂತೆ ಪ್ರೋತ್ಸಾಹಿಸಿರಿ. ಸಕಾಲದಲ್ಲಿ ನಿಮ್ಮ ಹೆತ್ತವರ ಮನೋಭಾವವು ಮೃದುವಾಗಬಹುದು. ಹೆತ್ತವರು ಕಠಿನ ವಿರೋಧವನ್ನು ತೋರಿಸುತ್ತಾ, ಬೈಬಲ್‌ ಸಾಹಿತ್ಯವನ್ನು ನಾಶಪಡಿಸಿ, ಮಕ್ಕಳನ್ನು ಕ್ರೈಸ್ತ ಕೂಟಗಳಿಗೆ ಉಪಸ್ಥಿತರಾಗಲು ನಿಷೇಧಿಸುವಾಗಲೂ, ಬೇರೆ ಕಡೆಗಳಲ್ಲಿ ಓದಲಿಕ್ಕೆ, ಜೊತೆ ಕ್ರೈಸ್ತರೊಂದಿಗೆ ಮಾತಾಡಲಿಕ್ಕೆ ಮತ್ತು ಅನೌಪಚಾರಿಕವಾಗಿ ಇತರರಿಗೆ ಸಾಕ್ಷಿಕೊಡಲಿಕ್ಕೆ ಮತ್ತು ನೆರವಾಗಲಿಕ್ಕೆ ಸಾಮಾನ್ಯವಾಗಿ ಅವಕಾಶಗಳಿರುತ್ತವೆ. ನೀವು ಯೆಹೋವನಿಗೆ ಪ್ರಾರ್ಥನೆಯನ್ನೂ ಮಾಡಬಲ್ಲಿರಿ. ಕೆಲವು ಯುವಕರಿಗೆ ತಾವು ಹೆಚ್ಚನ್ನು ಮಾಡುವ ಮುಂಚೆ, ತಮ್ಮ ಕುಟುಂಬದ ಹೊರಗೆ ಜೀವಿಸುವುದಕ್ಕೆ ಸಾಕಷ್ಟು ದೊಡ್ಡವರಾಗುವ ತನಕ ಕಾಯಬೇಕಾಗುತ್ತದೆ. ಆದರೂ ಮನೆಯಲ್ಲಿನ ಸನ್ನಿವೇಶವು ಯಾವುದೇ ಇರಲಿ, “ನಿಮ್ಮ ತಂದೆತಾಯಿಗಳನ್ನೂ ಸನ್ಮಾನಿಸು”ವುದನ್ನು ಮರೆಯಬೇಡಿರಿ. ಮನೆಯಲ್ಲಿನ ಶಾಂತಿಗೆ ನೆರವಾಗುವುದಕ್ಕೆ ನಿಮ್ಮ ಪಾಲನ್ನು ಮಾಡಿರಿ. (ರೋಮಾಪುರ 12:17, 18) ಎಲ್ಲದಕ್ಕಿಂತ ಹೆಚ್ಚಾಗಿ, ದೇವರೊಂದಿಗೆ ಶಾಂತಿಯನ್ನು ಬೆನ್ನಟ್ಟಿರಿ.

      ಒಬ್ಬ ಮಲಹೆತ್ತವರಾಗಿರುವ ಪಂಥಾಹ್ವಾನ

      20. ತಮ್ಮ ತಂದೆಯಾಗಲಿ ತಾಯಿಯಾಗಲಿ ಮಲಹೆತ್ತವರಲ್ಲೊಬ್ಬರಾಗಿರುವಲ್ಲಿ, ಮಕ್ಕಳಿಗೆ ಯಾವ ಭಾವನೆಗಳು ಇರಬಹುದು?

      20 ಅನೇಕ ಮನೆಗಳಲ್ಲಿ ಅತಿ ಮಹತ್ತಾದ ಪಂಥಾಹ್ವಾನವನ್ನು ಒಡ್ಡುವ ಸನ್ನಿವೇಶವು ಧಾರ್ಮಿಕ ವಾಗ್ವಾದಗಳಲ್ಲ, ಮಲಕುಟುಂಬದ ಸಮಸ್ಯೆಗಳೇ. ಇಂದು ಅನೇಕ ಮನೆವಾರ್ತೆಗಳು ಒಬ್ಬರು ಅಥವಾ ಇಬ್ಬರೂ ಹೆತ್ತವರ ಹಿಂದಿನ ವಿವಾಹದಿಂದ ಬಂದ ಮಕ್ಕಳನ್ನು ಒಳಗೂಡುತ್ತವೆ. ಅಂತಹ ಒಂದು ಕುಟುಂಬದಲ್ಲಿ, ಮಕ್ಕಳು ದ್ವೇಷವನ್ನು, ತೀವ್ರ ಅಸಮಾಧಾನವನ್ನು ಅಥವಾ ಪ್ರಾಯಶಃ ನಿಷ್ಠೆಗಳ ಹೋರಾಟವನ್ನು ಅನುಭವಿಸಬಹುದು. ಪರಿಣಾಮವಾಗಿ, ಒಳ್ಳೇ ತಂದೆ ಅಥವಾ ತಾಯಿಯಾಗಿರಲು ಮಲಹೆತ್ತವರಲ್ಲೊಬ್ಬರು ಮಾಡುವ ಪ್ರಾಮಾಣಿಕ ಪ್ರಯತ್ನಗಳನ್ನು ಅವರು ಧಿಕ್ಕರಿಸಬಹುದು. ಒಂದು ಮಲಕುಟುಂಬವು ಯಶಸ್ವಿಯಾಗುವಂತೆ ಮಾಡಲಿಕ್ಕೆ ಯಾವುದು ಸಹಾಯ ಮಾಡಬಲ್ಲದು?

      [ಪುಟ 138ರಲ್ಲಿರುವ ಚಿತ್ರ]

      ಸ್ವಂತ ಹೆತ್ತವರಾಗಿರಲಿ ಮಲಹೆತ್ತವರಾಗಿರಲಿ, ಮಾರ್ಗದರ್ಶನಕ್ಕಾಗಿ ಬೈಬಲಿನ ಮೇಲೆ ಆತುಕೊಳ್ಳಿರಿ

      21. ತಮ್ಮ ವಿಶೇಷ ಪರಿಸ್ಥಿತಿಗಳ ಮಧ್ಯೆಯೂ, ಮಲಹೆತ್ತವರು ಸಹಾಯಕ್ಕಾಗಿ ಬೈಬಲಿನ ಮೂಲತತ್ವಗಳಿಗೆ ಯಾಕೆ ನೋಡಬೇಕು?

      21 ಈ ವಿಶೇಷ ಪರಿಸ್ಥಿತಿಗಳಲ್ಲೂ, ಬೇರೆ ಮನೆವಾರ್ತೆಗಳಲ್ಲಿ ಯಶಸ್ಸನ್ನು ತರುವ ಬೈಬಲ್‌ ಮೂಲತತ್ವಗಳು ಇಲ್ಲಿ ಸಹ ಅನ್ವಯಿಸುತ್ತವೆಂಬುದನ್ನು ತಿಳಿದುಕೊಳ್ಳಿರಿ. ಆ ಮೂಲತತ್ವಗಳನ್ನು ಅಸಡ್ಡೆಮಾಡುವುದು ತಾತ್ಕಾಲಿಕವಾಗಿ ಒಂದು ಸಮಸ್ಯೆಯನ್ನು ನೀಗಿಸುವಂತೆ ಕಾಣಬಹುದಾದರೂ, ತರುವಾಯ ಹೃದಯವೇದನೆಗೆ ನಡಿಸುವ ಸಂಭವನೀಯತೆಯು ಇರುವುದು. (ಕೀರ್ತನೆ 127:1; ಜ್ಞಾನೋಕ್ತಿ 29:15) ವಿವೇಕ ಮತ್ತು ವಿವೇಚನಾಶಕ್ತಿಯನ್ನು—ದೀರ್ಘಾವಧಿಯ ಪ್ರಯೋಜನಗಳನ್ನು ಮನಸ್ಸಿನಲ್ಲಿಟ್ಟವರಾಗಿ ದೈವಿಕ ತತ್ವಗಳನ್ನು ಅನ್ವಯಿಸಲು ವಿವೇಚನೆಯನ್ನು, ಮತ್ತು ಕುಟುಂಬ ಸದಸ್ಯರು ನಿರ್ದಿಷ್ಟ ವಿಷಯಗಳನ್ನು ಹೇಳುವುದೂ ಮಾಡುವುದೂ ಏಕೆಂದು ಗುರುತಿಸಲು ವಿವೇಚನಾಶಕ್ತಿಯನ್ನು, ಬೆಳೆಸಿಕೊಳ್ಳಿರಿ. ಸಹಾನುಭೂತಿಯ ಒಂದು ಅಗತ್ಯ ಸಹ ಅಲ್ಲಿದೆ.—ಜ್ಞಾನೋಕ್ತಿ 16:21; 24:3; 1 ಪೇತ್ರ 3:8.

      22. ಮಲಹೆತ್ತವರನ್ನು ಸ್ವೀಕರಿಸುವುದಕ್ಕೆ ಮಕ್ಕಳಿಗೆ ಏಕೆ ಕಷ್ಟವಾಗಬಹುದು?

      22 ನೀವು ಮಲಹೆತ್ತವರಲ್ಲಿ ಒಬ್ಬರಾಗಿದ್ದರೆ, ಕುಟುಂಬದ ಸ್ನೇಹಿತರೋಪಾದಿ, ಮಕ್ಕಳಿಂದ ಪ್ರಾಯಶಃ ಸ್ವೀಕರಿಸಲ್ಪಟ್ಟದ್ದನ್ನು ನೀವು ನೆನಪಿಸಿಕೊಳ್ಳಬಹುದು. ಆದರೆ ನೀವು ಅವರ ಮಲಹೆತ್ತವರಾದಾಗ, ಅವರ ಮನೋಭಾವವು ಬದಲಾಗಿರಬಹುದು. ಮಕ್ಕಳು ತಮ್ಮೊಂದಿಗೆ ಇನ್ನುಮೇಲೆ ಜೀವಿಸದ ಆ ಸ್ವಾಭಾವಿಕ ಹೆತ್ತವರಲ್ಲೊಬ್ಬನನ್ನು ನೆನಪಿಸುತ್ತಾ, ಗೈರುಹಾಜರಿರುವ ಹೆತ್ತವನೆಡೆಗೆ ತಮಗಿರುವ ಮಮತೆಯನ್ನು ನೀವು ಕಿತ್ತುಕೊಳ್ಳಲು ಬಯಸುತ್ತೀರೆಂಬ ಭಾವನೆಯುಳ್ಳವರಾಗಿ, ನಿಷ್ಠೆಗಳ ತಿಕ್ಕಾಟದೊಂದಿಗೆ ಒದ್ದಾಡುತ್ತಿರಬಹುದು. ನೀವು ಅವರ ತಂದೆಯಲ್ಲ ಅಥವಾ ಅವರ ತಾಯಿಯಲ್ಲ ಎಂದು ಕೆಲವೊಮ್ಮೆ ಅವರು ನಿರ್ದಯೆಯಿಂದ ನಿಮಗೆ ಜ್ಞಾಪಕಹುಟ್ಟಿಸಲೂಬಹುದು. ಅಂತಹ ಹೇಳಿಕೆಗಳು ನೋಯಿಸುತ್ತವೆ. ಆದರೂ, “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ.” (ಪ್ರಸಂಗಿ 7:9) ಮಕ್ಕಳ ಭಾವನೆಗಳೊಂದಿಗೆ ವ್ಯವಹರಿಸಲಿಕ್ಕಾಗಿ, ವಿವೇಚನಾಶಕ್ತಿ ಮತ್ತು ಸಹಾನುಭೂತಿಗಳು ಅಗತ್ಯ.

      23. ಮಲಮಕ್ಕಳಿರುವ ಕುಟುಂಬದಲ್ಲಿ ಶಿಸ್ತನ್ನು ಹೇಗೆ ನಿರ್ವಹಿಸಬಹುದು?

      23 ಒಬ್ಬನು ಶಿಸ್ತನ್ನು ನಿರ್ವಹಿಸುತ್ತಿರುವಾಗ ಆ ಗುಣಗಳು ನಿರ್ಣಾಯಕವಾಗಿವೆ. ಹೊಂದಿಕೆಯುಳ್ಳ ಶಿಸ್ತು ಅತ್ಯಾವಶ್ಯಕ. (ಜ್ಞಾನೋಕ್ತಿ 6:20; 13:1) ಮತ್ತು ಮಕ್ಕಳೆಲ್ಲರೂ ಒಂದೇ ರೀತಿ ಇರುವುದಿಲ್ಲವಾದುದರಿಂದ ಶಿಸ್ತು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರಬಹುದು. ಕಡಿಮೆಪಕ್ಷ ಆರಂಭದಲ್ಲಿ ಹೆತ್ತವರಿಗಿರುವ ಈ ಅಂಶವನ್ನು ಸ್ವಾಭಾವಿಕ ಹೆತ್ತವರಲ್ಲೊಬ್ಬನೇ ನಿರ್ವಹಿಸುವುದು ಹೆಚ್ಚು ಒಳ್ಳೆಯದೆಂದು ಕೆಲವು ಮಲಹೆತ್ತವರು ಕಂಡುಕೊಳ್ಳುತ್ತಾರೆ. ಆದರೂ ಶಿಸ್ತಿನ ವಿಷಯದಲ್ಲಿ, ಮಲಮಗುವಿಗಿಂತ ತಮ್ಮ ಸ್ವಂತ ಮಗುವಿಗೆ ಹೆಚ್ಚು ಅನುಗ್ರಹ ತೋರಿಸದೆ ಇದ್ದು, ಹೆತ್ತವರಿಬ್ಬರೂ ಸಮ್ಮತಿಯಿಂದ ಅದನ್ನು ಸಮರ್ಥಿಸುವುದು ಅತ್ಯಾವಶ್ಯಕ. (ಜ್ಞಾನೋಕ್ತಿ 24:23) ವಿಧೇಯತೆಯು ಪ್ರಾಮುಖ್ಯ, ಆದರೆ ಅಸಂಪೂರ್ಣತೆಗಾಗಿ ರಿಯಾಯಿತಿಗಳು ನೀಡಲ್ಪಡಬೇಕು. ಅತಿರೇಕ ಪ್ರತಿವರ್ತನೆ ತೋರಿಸಬೇಡಿ. ಪ್ರೀತಿಯಿಂದ ಶಿಸ್ತುಗೊಳಿಸಿರಿ.—ಕೊಲೊಸ್ಸೆ 3:21.

      24. ಒಂದು ಮಲಕುಟುಂಬದಲ್ಲಿ ವಿರುದ್ಧಲಿಂಗದ ಸದಸ್ಯರ ನಡುವೆ ನೈತಿಕ ಸಮಸ್ಯೆಗಳನ್ನು ತಡೆಯಲಿಕ್ಕೆ ಯಾವುದು ಸಹಾಯ ಮಾಡಬಲ್ಲದು?

      24 ತೊಂದರೆಯನ್ನು ತಡೆಯಲು ಕುಟುಂಬ ಚರ್ಚೆಗಳು ಹೆಚ್ಚನ್ನು ಮಾಡಬಲ್ಲವು. ಇದು ಕುಟುಂಬಕ್ಕೆ ಜೀವನದಲ್ಲಿ ಅತಿ ಪ್ರಮುಖವಾದ ವಿಷಯಗಳನ್ನು ಕೇಂದ್ರಬಿಂದುವಾಗಿಡುವಂತೆ ನೆರವಾಗಬಲ್ಲದು. (ಹೋಲಿಸಿ ಫಿಲಿಪ್ಪಿ 1:9-11.) ಕುಟುಂಬದ ಗುರಿಗಳನ್ನು ಮುಟ್ಟುವ ವಿಷಯದಲ್ಲಿ ಅವನು ಹೇಗೆ ನೆರವಾಗಬಲ್ಲನು ಎಂದು ನೋಡುವುದಕ್ಕೆ ಅವರು ಪ್ರತಿಯೊಬ್ಬನಿಗೆ ಸಹಾಯವನ್ನು ಸಹ ಕೊಡಸಾಧ್ಯವಿದೆ. ಇದಕ್ಕೆ ಕೂಡಿಸಿ, ಬಿಚ್ಚುಮನಸ್ಸಿನ ಕುಟುಂಬ ಚರ್ಚೆಗಳು ನೈತಿಕ ಸಮಸ್ಯೆಗಳನ್ನು ತಡೆಯಬಲ್ಲವು. ಹುಡುಗಿಯರಿಗೆ ಉಡುಪನ್ನು ತೊಡುವ ಮತ್ತು ಮಲತಂದೆಯ ಮತ್ತು ಮಲಸೋದರರ ಮುಂದೆ ಸಭ್ಯತೆಯಿಂದ ವರ್ತಿಸುವ ವಿಧಾನವು ತಿಳಿದಿರುವ ಅಗತ್ಯವಿದೆ, ಮತ್ತು ಹುಡುಗರಿಗೆ ಮಲತಾಯಿ ಮತ್ತು ಮಲಸೋದರಿಯರ ಕಡೆಗೆ ಯೋಗ್ಯ ನಡವಳಿಕೆಯ ಕುರಿತು ಸಲಹೆಯ ಅಗತ್ಯವಿದೆ.—1 ಥೆಸಲೊನೀಕ 4:3-8.

      25. ಒಂದು ಮಲಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಯಾವ ಗುಣಗಳು ಸಹಾಯ ಮಾಡಬಲ್ಲವು?

      25 ಮಲಹೆತ್ತವರಲ್ಲಿ ಒಬ್ಬರಾಗಿರುವ ವಿಶೇಷ ಪಂಥಾಹ್ವಾನವನ್ನು ಸಂಧಿಸುವುದರಲ್ಲಿ, ತಾಳ್ಮೆಯುಳ್ಳವರಾಗಿರಿ. ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಮಯ ತಗಲುತ್ತದೆ. ದೈಹಿಕವಾಗಿ ನಿಮಗೆ ಯಾವ ಸಂಬಂಧವೂ ಇರದ ಮಕ್ಕಳ ಪ್ರೀತಿ ಮತ್ತು ಗೌರವವನ್ನು ಗಳಿಸುವುದು ಒಂದು ದುರ್ದಮ ಕೆಲಸವಾಗಿರಸಾಧ್ಯವಿದೆ. ಆದರೆ ಅದು ಶಕ್ಯ. ಯೆಹೋವನನ್ನು ಸಂತೋಷಗೊಳಿಸುವ ಬಲವಾದ ಅಪೇಕ್ಷೆಯಿಂದ ಕೂಡಿದ, ವಿವೇಕವುಳ್ಳ ಮತ್ತು ವಿವೇಚಿಸುವ ಒಂದು ಹೃದಯವು, ಮಲಕುಟುಂಬದಲ್ಲಿ ಶಾಂತಿಗೆ ಕೀಲಿ ಕೈಯಾಗಿದೆ. (ಜ್ಞಾನೋಕ್ತಿ 16:20) ಅಂತಹ ಗುಣಗಳು ನಿಮಗೆ ಇತರ ಸನ್ನಿವೇಶಗಳನ್ನು ನಿಭಾಯಿಸಲು ಸಹ ನೆರವಾಗಬಲ್ಲವು.

      ಭೌತಿಕ ಬೆನ್ನಟ್ಟುವಿಕೆಗಳು ನಿಮ್ಮ ಮನೆಯನ್ನು ವಿಭಾಗಿಸುತ್ತವೊ?

      26. ಭೌತಿಕ ವಸ್ತುಗಳ ವಿಷಯದಲ್ಲಿ ಸಮಸ್ಯೆಗಳು ಮತ್ತು ಮನೋಭಾವಗಳು ಒಂದು ಕುಟುಂಬವನ್ನು ಯಾವ ವಿಧಗಳಲ್ಲಿ ವಿಭಾಗಿಸಬಹುದು?

      26 ಭೌತಿಕ ವಸ್ತುಗಳ ಕುರಿತಾದ ಸಮಸ್ಯೆಗಳು ಮತ್ತು ಮನೋಭಾವಗಳು ಕುಟುಂಬಗಳನ್ನು ಅನೇಕ ವಿಧಗಳಲ್ಲಿ ವಿಭಾಗಿಸಬಲ್ಲವು. ವಿಷಾದಕರವಾಗಿ, ಕೆಲವು ಕುಟುಂಬಗಳು ಹಣಕಾಸಿನ ವಿಷಯ ವಾಗ್ವಾದದಿಂದ ಮತ್ತು ಐಶ್ವರ್ಯವಂತರಾಗಿರುವ—ಕಡಿಮೆಪಕ್ಷ ಸ್ವಲ್ಪ ಹೆಚ್ಚು ಐಶ್ವರ್ಯವಂತರಾಗುವ—ಅಪೇಕ್ಷೆಯಿಂದ ಭಂಗಗೊಳಿಸಲ್ಪಡುತ್ತವೆ. ಇಬ್ಬರೂ ಸಂಗಾತಿಗಳು ಹೊರಗೆ ಉದ್ಯೋಗ ಮಾಡುವಾಗ ಮತ್ತು “ನನ್ನ ಹಣ, ನಿನ್ನ ಹಣ” ಎಂಬ ಮನೋಭಾವವನ್ನು ಬೆಳೆಸಿಕೊಳ್ಳುವಾಗ, ವಿಭಾಗಗಳು ವಿಕಸಿಸಬಹುದು. ವಾಗ್ವಾದಗಳನ್ನು ದೂರಸರಿಸಿದರೂ, ಸಂಗಾತಿಗಳಿಬ್ಬರೂ ಕೆಲಸಮಾಡುವಾಗ ಒಬ್ಬರಿಗೊಬ್ಬರು ಸ್ವಲ್ಪ ಸಮಯವನ್ನೂ ಕೊಡಲಾಗದ ಒಂದು ಕಾಲತಖ್ತೆಯೊಳಗೆ ಅವರು ತಮ್ಮನ್ನು ಕಂಡುಕೊಳ್ಳಬಹುದು. ತಂದೆಗಳು ತಾವು ಮನೆಯಲ್ಲಿ ಎಂದೂ ಸಂಪಾದಿಸಸಾಧ್ಯವಾಗುವುದಕ್ಕಿಂತ ಹೆಚ್ಚು ಹಣವನ್ನು ಗಳಿಸುವುದಕ್ಕೋಸ್ಕರ ತಮ್ಮ ಕುಟುಂಬಗಳಿಂದ ಒಂದು ದೀರ್ಘ ಕಾಲಾವಧಿಯ ತನಕ—ತಿಂಗಳುಗಳು ಅಥವಾ ವರ್ಷಗಳ ವರೆಗೂ—ದೂರ ಜೀವಿಸುವುದು ಲೋಕದಲ್ಲಿ ಬೆಳೆಯುತ್ತಿರುವ ಒಂದು ಪ್ರವೃತ್ತಿ. ಇದು ಅತಿ ಗಂಭೀರವಾದ ಸಮಸ್ಯೆಗಳಿಗೆ ನಡಿಸಬಲ್ಲದು.

      27. ಹಣಕಾಸಿನ ಒತ್ತಡದ ಕೆಳಗೆ ಒಂದು ಕುಟುಂಬಕ್ಕೆ ನೆರವಾಗಬಲ್ಲ ಕೆಲವು ಮೂಲತತ್ವಗಳು ಯಾವುವು?

      27 ಈ ಸನ್ನಿವೇಶಗಳನ್ನು ನಿರ್ವಹಿಸಲಿಕ್ಕಾಗಿ, ಯಾವ ನಿಯಮಗಳನ್ನೂ ಸ್ಥಾಪಿಸಲು ಸಾಧ್ಯವಿಲ್ಲ, ಯಾಕಂದರೆ ವಿವಿಧ ಕುಟುಂಬಗಳು ವಿವಿಧ ಒತ್ತಡಗಳು ಮತ್ತು ಅಗತ್ಯಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆದರೂ ಬೈಬಲಿನ ಸಲಹೆಯು ಸಹಾಯ ಮಾಡಬಲ್ಲದು. ಉದಾಹರಣೆಗಾಗಿ, ಅನಾವಶ್ಯಕ ತೊಂದರೆಯನ್ನು ಕೆಲವು ಸಾರಿ “ಕೂಡಿ ಮಾತಾಡು”ವುದರಿಂದ ವರ್ಜಿಸಸಾಧ್ಯವಿದೆಯೆಂದು ಜ್ಞಾನೋಕ್ತಿ 13:10 (NW) ಸೂಚಿಸುತ್ತದೆ. ಇದರಲ್ಲಿ ಬರೇ ತನ್ನ ಸ್ವಂತ ನೋಟಗಳನ್ನು ಒಬ್ಬನು ಹೇಳುವುದಲ್ಲ, ಬದಲಾಗಿ ಬುದ್ಧಿವಾದವನ್ನು ಕೇಳುವುದು ಮತ್ತು ಬೇರೊಬ್ಬನ ಅಭಿಪ್ರಾಯಗಳೇನೆಂದು ಕಂಡುಹಿಡಿಯುವುದು ಒಳಗೂಡಿಸುತ್ತದೆ. ಅದಲ್ಲದೆ, ಒಂದು ವಾಸ್ತವಿಕ ಆಯವ್ಯಯದ ಅಂದಾಜುಪಟ್ಟಿಯನ್ನು ಮಾಡುವುದು ಕುಟುಂಬ ಪ್ರಯತ್ನಗಳ ಐಕ್ಯತೆಗೆ ನೆರವಾಗಬಲ್ಲದು. ವಿಶೇಷವಾಗಿ ಮಕ್ಕಳು ಮತ್ತು ಇತರ ಅವಲಂಬಿಗಳಿರುವಾಗ ಹೆಚ್ಚಿನ ಖರ್ಚನ್ನು ನಿರ್ವಹಿಸಲಿಕ್ಕಾಗಿ ಸಂಗಾತಿಗಳಿಬ್ಬರಿಗೂ—ಪ್ರಾಯಶಃ ತಾತ್ಕಾಲಿಕವಾಗಿ—ಹೊರಗೆ ಕೆಲಸ ಮಾಡುವುದು ಅವಶ್ಯವಾಗಿರುತ್ತದೆ. ವಿದ್ಯಮಾನವು ಹೀಗಿರುವಾಗ, ತನ್ನ ಹೆಂಡತಿಗಾಗಿ ತಾನು ಇನ್ನೂ ಸಮಯವನ್ನು ಬದಿಗಿರಿಸಿದ್ದೇನೆ ಎಂಬ ಆಶ್ವಾಸನೆಯನ್ನು ಗಂಡನು ಅವಳಿಗೆ ಕೊಡಬಲ್ಲನು. ಅವಳು ಸಾಮಾನ್ಯವಾಗಿ ಒಬ್ಬಳೇ ನಿರ್ವಹಿಸುತ್ತಿರಬಹುದಾದ ಕೆಲವು ಕೆಲಸಗಳಲ್ಲಿ ಅವನು ಮಕ್ಕಳೊಂದಿಗೆ ಪ್ರೀತಿಯಿಂದ ಸಹಾಯ ನೀಡಬಹುದು.—ಫಿಲಿಪ್ಪಿ 2:1-4.

      28. ಆಚರಣೆಗೆ ತರಲ್ಪಡುವಲ್ಲಿ, ಒಂದು ಕುಟುಂಬವು ಐಕ್ಯದ ಕಡೆಗೆ ಕಾರ್ಯನಡಿಸುವಂತೆ ಯಾವ ಮರುಜ್ಞಾಪನಗಳು ಸಹಾಯ ಮಾಡುವವು?

      28 ಆದರೂ, ಈ ವಿಷಯಗಳ ವ್ಯವಸ್ಥೆಯಲ್ಲಿ ಹಣವು ಒಂದು ಆವಶ್ಯಕತೆಯಾಗಿರುವಾಗ, ಅದು ಸಂತೋಷವನ್ನು ತರುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿರಿ. ಅದು ಖಂಡಿತವಾಗಿಯೂ ಜೀವವನ್ನು ಕೊಡುವುದಿಲ್ಲ. (ಪ್ರಸಂಗಿ 7:12) ವಾಸ್ತವವಾಗಿ, ಭೌತಿಕ ವಿಷಯಗಳ ಮೇಲೆ ಅತಿರೇಕ ಒತ್ತು, ಆತ್ಮಿಕ ಮತ್ತು ನೈತಿಕ ಹಾನಿಯನ್ನು ಉಂಟುಮಾಡಬಲ್ಲದು. (1 ತಿಮೊಥೆಯ 6:9-12) ಜೀವಿತದ ಆವಶ್ಯಕತೆಗಳನ್ನು ಪಡೆಯುವ ನಮ್ಮ ಪ್ರಯತ್ನಗಳ ಮೇಲೆ ದೇವರ ಆಶೀರ್ವಾದವನ್ನು ಹೊಂದಿರುವ ಆಶ್ವಾಸನೆಯೊಂದಿಗೆ, ಆತನ ರಾಜ್ಯವನ್ನೂ ಆತನ ನೀತಿಯನ್ನೂ ಪ್ರಥಮವಾಗಿ ಹುಡುಕುವುದು ಎಷ್ಟು ಹೆಚ್ಚು ಉತ್ತಮವಾಗಿದೆ! (ಮತ್ತಾಯ 6:25-33; ಇಬ್ರಿಯ 13:5) ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡುವ ಮೂಲಕ ಮತ್ತು ಎಲ್ಲದಕ್ಕಿಂತ ಮೊದಲಾಗಿ ದೇವರೊಂದಿಗೆ ಶಾಂತಿಯನ್ನು ಬೆನ್ನಟ್ಟುವ ಮೂಲಕ, ನಿಮ್ಮ ಮನೆವಾರ್ತೆಯು, ನಿರ್ದಿಷ್ಟ ಸನ್ನಿವೇಶಗಳಿಂದಾಗಿ ಪ್ರಾಯಶಃ ಅದು ವಿಭಾಗಗೊಂಡಿರುವುದಾದರೂ, ಅತ್ಯಂತ ಪ್ರಾಮುಖ್ಯ ವಿಧಗಳಲ್ಲಿ ನಿಜವಾಗಿಯೂ ಐಕ್ಯವುಳ್ಳದ್ದಾಗಿ ಪರಿಣಮಿಸುವುದನ್ನು ನೀವು ಕಾಣಬಹುದು.

      ಕುಟುಂಬ ಸದಸ್ಯರು ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತೆ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ಕ್ರೈಸ್ತರು ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ.—ಜ್ಞಾನೋಕ್ತಿ 16:21; 24:3.

      ವಿವಾಹದಲ್ಲಿ ದಂಪತಿಗಳ ಪ್ರೀತಿ ಮತ್ತು ಗೌರವ ತೋರಿಸುವಿಕೆಯು, ಅವರು ಒಂದೇ ಧರ್ಮದವರಾಗಿರುವುದರ ಮೇಲೆ ಆತುಕೊಳ್ಳುವುದಿಲ್ಲ.—ಎಫೆಸ 5:23, 25.

      ಒಬ್ಬ ಕ್ರೈಸ್ತನು ಎಂದೂ ಬುದ್ಧಿಪೂರ್ವಕವಾಗಿ ದೇವರ ನಿಯಮವನ್ನು ಉಲ್ಲಂಘಿಸುವುದಿಲ್ಲ.—ಅ. ಕೃತ್ಯಗಳು 5:29.

      ಕ್ರೈಸ್ತರು ಶಾಂತಿಕರ್ತರು.—ರೋಮಾಪುರ 12:18.

      ಬಹು ಬೇಗ ತಪ್ಪುತಿಳಿದುಕೊಳ್ಳಬೇಡಿ.—ಪ್ರಸಂಗಿ 7:9.

      ಯೋಗ್ಯವಾದ ವಿವಾಹಗಳು ಘನತೆ ಮತ್ತು ಶಾಂತಿಯನ್ನು ತರುತ್ತವೆ

      ನಮ್ಮ ದಿನಗಳಲ್ಲಿ, ಅನೇಕ ಪುರುಷರು ಮತ್ತು ಸ್ತ್ರೀಯರು ಯಾವುದೇ ಕಾನೂನುಬದ್ಧವಾದ ಬದ್ಧತೆಯಿಲ್ಲದೆ, ಗಂಡಹೆಂಡತಿಯರೋಪಾದಿ ಒಟ್ಟಿಗೆ ಜೀವಿಸುತ್ತಾರೆ. ಒಬ್ಬ ಹೊಸ ವಿಶ್ವಾಸಿಯು ವ್ಯವಹರಿಸಬೇಕಾದ ಒಂದು ಪರಿಸ್ಥಿತಿಯು ಇದಾಗಿರಬಹುದು. ಕೆಲವು ಸಂದರ್ಭಗಳಲ್ಲಿ, ಅವರ ಒಡಜೀವನವು ಸಮುದಾಯದಿಂದ ಅಥವಾ ಕುಲಸಂಬಂಧವಾದ ಸಂಪ್ರದಾಯದಿಂದ ಅಂಗೀಕರಿಸಲ್ಪಟ್ಟಿರಬಹುದಾದರೂ, ಅದು ಕಾನೂನುಬದ್ಧವಾಗಿರುವುದಿಲ್ಲ. ಹಾಗಿದ್ದರೂ, ಒಂದು ಯೋಗ್ಯವಾದ ನೋಂದಣಿಮಾಡಲ್ಪಟ್ಟ ವಿವಾಹವನ್ನು ಬೈಬಲಿನ ಮಟ್ಟವು ಕೇಳಿಕೊಳ್ಳುತ್ತದೆ. (ತೀತ 3:1; ಇಬ್ರಿಯ 13:4) ಕ್ರೈಸ್ತ ಸಭೆಯೊಳಗಿರುವ ಜನರಿಗಾಗಿ, ವಿವಾಹದ ಒಕ್ಕೂಟವೊಂದರಲ್ಲಿ ಕೇವಲ ಒಬ್ಬ ಗಂಡನೂ ಒಬ್ಬ ಹೆಂಡತಿಯೂ ಇರಬೇಕೆಂದು ಸಹ ಬೈಬಲು ಕರಾರುಮಾಡುತ್ತದೆ. (1 ಕೊರಿಂಥ 7:2; 1 ತಿಮೊಥೆಯ 3:2, 12) ಈ ಮಟ್ಟಕ್ಕನುಸಾರ ಅನುವರ್ತಿಸುವುದು, ನಿಮ್ಮ ಮನೆಯಲ್ಲಿ ಶಾಂತಿಯನ್ನು ಹೊಂದಿರುವುದಕ್ಕೆ ಪ್ರಥಮ ಹೆಜ್ಜೆಯಾಗಿದೆ. (ಕೀರ್ತನೆ 119:165) ಯೆಹೋವನ ಆವಶ್ಯಕತೆಗಳು ಅವಾಸ್ತವಿಕ ಅಥವಾ ಹೊರೆಯಾಗಿರುವುದಿಲ್ಲ. ಆತನು ನಮಗೆ ಕಲಿಸುವ ವಿಷಯವು ನಮ್ಮ ಪ್ರಯೋಜನಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ.—ಯೆಶಾಯ 48:17, 18.

  • ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹನ್ನೆರಡು

      ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ

      1. ಕೆಲವು ಕುಟುಂಬಗಳಲ್ಲಿ ಯಾವ ಮರೆಯಾದ ಸಮಸ್ಯೆಗಳು ಅಸ್ತಿತ್ವದಲ್ಲಿವೆ?

      ಒಂದು ಹಳೆಯ ಕಾರನ್ನು ಈಗತಾನೇ ತೊಳೆದು ಮೇಣಹಚ್ಚಿ ಶುಭ್ರಗೊಳಿಸಲಾಗಿದೆ. ದಾರಿಹೋಕರಿಗೆ ಅದು ಮಿರುಗುವ, ಬಹುಮಟ್ಟಿಗೆ ಹೊಸದೇ ಆಗಿರುವ ಕಾರಿನಂತೆ ತೋರುತ್ತದೆ. ಆದರೆ ಮೇಲ್ಮೈಯ ಕೆಳಗೆ, ನಾಶಕಾರಿ ತುಕ್ಕು ಆ ವಾಹನದ ಒಡಲನ್ನು ತಿಂದುಹಾಕುತ್ತಿದೆ. ಕೆಲವು ಕುಟುಂಬಗಳು ಇದೇ ರೀತಿಯಲ್ಲಿವೆ. ಹೊರಗಿನ ತೋರ್ಕೆಗೆ ಎಲ್ಲವು ಒಳ್ಳೇದಾಗಿ ಕಾಣುತ್ತದಾದರೂ, ನಗು ಮುಖಗಳು ಭಯ ಮತ್ತು ವೇದನೆಯನ್ನು ಮರೆಮಾಡುತ್ತವೆ. ಮುಚ್ಚಿದ ಬಾಗಿಲುಗಳ ಮರೆಯಲ್ಲಿ ತುಕ್ಕುಹಿಡಿಸುವ ಘಟಕಾಂಶಗಳು ಕುಟುಂಬದ ಶಾಂತಿಯನ್ನು ತಿಂದುಹಾಕುತ್ತಿವೆ. ಈ ಪರಿಣಾಮವನ್ನು ತರಬಲ್ಲ ಎರಡು ಸಮಸ್ಯೆಗಳು ಮದ್ಯರೋಗಾವಸ್ಥೆ ಮತ್ತು ಹಿಂಸಾಚಾರ ಇವೇ.

      ಮದ್ಯರೋಗಾವಸ್ಥೆಯಿಂದ ಆಗುವ ಭಂಗ

      2. (ಎ) ಮದ್ಯಸಾರ ಪಾನೀಯಗಳ ಕುರಿತು ಬೈಬಲಿನ ವೀಕ್ಷಣೆಯೇನು? (ಬಿ) ಮದ್ಯರೋಗಾವಸ್ಥೆ ಎಂದರೇನು?

      2 ಮದ್ಯಸಾರ ಪಾನೀಯಗಳ ಮಿತವಾದ ಉಪಯೋಗವನ್ನು ಬೈಬಲು ಖಂಡಿಸುವುದಿಲ್ಲ, ಆದರೆ ಕುಡುಕತನವನ್ನು ಅದು ಖಂಡಿಸುತ್ತದೆ ನಿಶ್ಚಯ. (ಜ್ಞಾನೋಕ್ತಿ 23:20, 21; 1 ಕೊರಿಂಥ 6:9, 10; 1 ತಿಮೊಥೆಯ 5:23; ತೀತ 2:2, 3) ಮದ್ಯರೋಗಾವಸ್ಥೆಯಾದರೋ ಕುಡುಕತನಕ್ಕಿಂತಲೂ ಹೆಚ್ಚಿನದ್ದು; ಮದ್ಯಪಾನಗಳಲ್ಲಿ ಮಗ್ನರಾಗಿರುವ ಮತ್ತು ಅವುಗಳ ಸೇವನೆಯ ಮೇಲೆ ಅಂಕೆಯಿಲ್ಲದಿರುವ ಅಸ್ಥಿಗತವಾದ ವ್ಯಸನವು ಅದಾಗಿದೆ. ಮದ್ಯರೋಗಿಗಳು ವಯಸ್ಕರಾಗಿರಸಾಧ್ಯವಿದೆ. ವಿಷಾದಕರವಾಗಿ, ಅವರು ಯುವ ಜನರೂ ಆಗಿರಬಲ್ಲರು.

      3, 4. ಮದ್ಯರೋಗಿಯ ಜೊತೆಗಾರ್ತಿಯ ಮೇಲೆ ಮತ್ತು ಮಕ್ಕಳ ಮೇಲೆ ಮದ್ಯರೋಗಾವಸ್ಥೆಯ ಪರಿಣಾಮಗಳನ್ನು ವರ್ಣಿಸಿರಿ.

      3 ಮದ್ಯಸಾರದ ದುರುಪಯೋಗವು ಕುಟುಂಬ ಶಾಂತಿಯನ್ನು ಕೆಡಿಸಬಲ್ಲದೆಂದು ಬೈಬಲು ಬಹಳ ಪೂರ್ವದಲ್ಲೆ ಸೂಚಿಸಿತು. (ಧರ್ಮೋಪದೇಶಕಾಂಡ 21:18-21) ಮದ್ಯರೋಗಾವಸ್ಥೆಯ ನಾಶಕಾರಕ ಪರಿಣಾಮಗಳು ಇಡೀ ಕುಟುಂಬದಿಂದ ಅನುಭವಿಸಲ್ಪಡುತ್ತವೆ. ಜೊತೆಗಾರ್ತಿಯು ಮದ್ಯರೋಗಿಯ ಕುಡಿತವನ್ನು ನಿಲ್ಲಿಸುವ ಪ್ರಯತ್ನಗಳಲ್ಲಿ ಅಥವಾ ಅವನ ಮುಂತಿಳಿಯದ ವರ್ತನೆಗಳನ್ನು ನಿಭಾಯಿಸುವುದರಲ್ಲಿ ತಲ್ಲೀನಳಾಗಿ ಹೋಗಬಹುದು.a ಅವಳು ಮದ್ಯವನ್ನು ಅಡಗಿಸಿಡಲು ಪ್ರಯತ್ನಿಸುತ್ತಾಳೆ, ಹೊರಗೆಸೆದುಬಿಡುತ್ತಾಳೆ, ಅವನ ಹಣವನ್ನು ಬಚ್ಚಿಡುತ್ತಾಳೆ, ಕುಟುಂಬಕ್ಕಾಗಿ, ಜೀವಕ್ಕಾಗಿ, ದೇವರಿಗಾಗಿಯೂ ಅವನಿಗಿರುವ ಪ್ರೀತಿಗೆ ಆಕೆ ಮೊರೆಯಿಡುತ್ತಾಳೆ—ಆದರೆ ಮದ್ಯರೋಗಿ ಇನ್ನೂ ಕುಡಿಯುತ್ತಾ ಇರುತ್ತಾನೆ. ಅವನ ಕುಡಿಯುವ ಹವ್ಯಾಸವನ್ನು ನಿಯಂತ್ರಿಸುವ ಆಕೆಯ ಪ್ರಯತ್ನಗಳು ಪದೇಪದೇ ಸೋಲುವಾಗ, ಆಕೆಗೆ ಹತಾಶೆಯ ಮತ್ತು ಕೊರತೆಯುಳ್ಳ ಭಾವನೆ ಬರುತ್ತದೆ. ಭಯ, ಕೋಪ, ದೋಷಿಭಾವನೆ, ಗಾಬರಿ, ಚಿಂತೆ ಮತ್ತು ಆತ್ಮಗೌರವದ ಕೊರತೆಯನ್ನು ಆಕೆ ಅನುಭವಿಸಲಾರಂಭಿಸಬಹುದು.

      4 ಹೆತ್ತವರೊಬ್ಬರ ಮದ್ಯರೋಗಾವಸ್ಥೆಯ ಪರಿಣಾಮಗಳನ್ನು ಮಕ್ಕಳು ಪಾರಾಗುವುದಿಲ್ಲ. ಕೆಲವರು ಶಾರೀರಿಕವಾಗಿ ಆಕ್ರಮಿಸಲ್ಪಡುತ್ತಾರೆ. ಇತರರು ಲೈಂಗಿಕವಾಗಿ ಪೀಡಿಸಲ್ಪಡುತ್ತಾರೆ. ಹೆತ್ತವರ ಮದ್ಯರೋಗಾವಸ್ಥೆಗಾಗಿ ಅವರು ತಮ್ಮನ್ನೇ ದೂರಿಕೊಳ್ಳಲೂಬಹುದು. ಇತರರ ಮೇಲೆ ಭರವಸೆಯಿಡುವ ಅವರ ಸಾಮರ್ಥ್ಯವು, ಮದ್ಯರೋಗಿಯ ಅಸಂಗತವಾದ ವರ್ತನೆಯಿಂದಾಗಿ ಆಗಿಂದಾಗ್ಗೆ ನುಚ್ಚುನೂರಾಗುತ್ತದೆ. ಮನೆಯಲ್ಲಿ ಸಂಭವಿಸುತ್ತಿರುವ ವಿಷಯದ ಕುರಿತು ಅವರು ಹಾಯಾಗಿ ಮಾತಾಡಲಾರದ ಕಾರಣ, ಮಕ್ಕಳು ತಮ್ಮ ಭಾವನೆಗಳನ್ನು ನಿಗ್ರಹಿಸಿಕೊಳ್ಳಲು ಕಲಿಯಬಹುದು, ಇದು ಅನೇಕವೇಳೆ ಹಾನಿಕರವಾದ ಶಾರೀರಿಕ ಪರಿಣಾಮಗಳನ್ನು ತರುತ್ತದೆ. (ಜ್ಞಾನೋಕ್ತಿ 17:22) ಅಂತಹ ಮಕ್ಕಳು ಈ ಆತ್ಮವಿಶ್ವಾಸ ಅಥವಾ ಆತ್ಮಗೌರವದ ಕೊರತೆಯನ್ನು ವಯಸ್ಕತನಕ್ಕೂ ಒಯ್ಯಬಹುದು.

      ಕುಟುಂಬವು ಏನು ಮಾಡಸಾಧ್ಯವಿದೆ?

      5. ಮದ್ಯರೋಗಾವಸ್ಥೆಯನ್ನು ಹೇಗೆ ನಿರ್ವಹಿಸಸಾಧ್ಯವಿದೆ, ಮತ್ತು ಇದು ಕಷ್ಟಕರವೇಕೆ?

      5 ಮದ್ಯರೋಗಾವಸ್ಥೆಯನ್ನು ವಾಸಿಮಾಡಸಾಧ್ಯವಿಲ್ಲವೆಂದು ಅನೇಕ ಅಧಿಕಾರಿಗಳು ಹೇಳುತ್ತಾರಾದರೂ, ಪೂರ್ಣ ವರ್ಜನೆಯ ಕಾರ್ಯಕ್ರಮದಿಂದ ಸ್ವಲ್ಪಮಟ್ಟಿಗಿನ ವಾಸಿಯು ಶಕ್ಯವೆಂದು ಹೆಚ್ಚಿನವರು ಒಪ್ಪುತ್ತಾರೆ. (ಹೋಲಿಸಿ ಮತ್ತಾಯ 5:29.) ಆದರೂ, ಮದ್ಯರೋಗಿಯೊಬ್ಬನು ಸಹಾಯವನ್ನು ಸ್ವೀಕರಿಸುವಂತೆ ಮಾಡುವುದಕ್ಕಿಂತ ಹೇಳುವುದು ಹೆಚ್ಚು ಸುಲಭ, ಯಾಕೆಂದರೆ ಅವನು ಸಾಮಾನ್ಯವಾಗಿ ತನಗೊಂದು ಸಮಸ್ಯೆಯಿದೆಯೆಂಬುದನ್ನು ಅಲ್ಲಗಳೆಯುತ್ತಾನೆ. ಆದಾಗ್ಯೂ, ಮದ್ಯರೋಗಾವಸ್ಥೆಯು ತಮ್ಮನ್ನು ಬಾಧಿಸಿರುವ ರೀತಿಯೊಂದಿಗೆ ವ್ಯವಹರಿಸಲು ಕುಟುಂಬ ಸದಸ್ಯರು ಕ್ರಿಯೆ ಕೈಕೊಳ್ಳುವಾಗ, ಮದ್ಯರೋಗಿಯು ತನಗೊಂದು ಸಮಸ್ಯೆಯಿದೆಯೆಂದು ಗ್ರಹಿಸಲಾರಂಭಿಸಬಹುದು. ಮದ್ಯರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನೆರವಾಗುವುದರಲ್ಲಿ ಅನುಭವಿಯಾದ ಒಬ್ಬ ವೈದ್ಯನು ಹೇಳಿದ್ದು: “ಕುಟುಂಬಕ್ಕೆ ಅತ್ಯಂತ ಮಹತ್ವದ ವಿಷಯವೇನಂದರೆ ತಮ್ಮ ಜೀವನದ ದಿನಚರ್ಯೆಯನ್ನು ತಮ್ಮಿಂದಾದಷ್ಟು ಅತ್ಯಂತ ಉಪಯುಕ್ತವಾದ ರೀತಿಯಲ್ಲಿ ಕೇವಲ ನಡೆಸಿಕೊಂಡು ಹೋಗುವುದೆಂದು ನನ್ನ ಯೋಚನೆ. ಮದ್ಯರೋಗಿಯು ತನ್ನ ಮತ್ತು ಕುಟುಂಬದ ಇತರರ ನಡುವೆ ಎಷ್ಟು ದೊಡ್ಡ ವ್ಯತ್ಯಾಸವಿದೆಯೆಂಬ ಸಂಗತಿಯಿಂದ ಅಧಿಕಾಧಿಕವಾಗಿ ಎದುರಿಸಲ್ಪಡುತ್ತಾ ಇರುತ್ತಾನೆ.”

      6. ಮದ್ಯರೋಗಾವಸ್ಥೆಯ ಸದಸ್ಯನಿರುವ ಕುಟುಂಬಕ್ಕೆ ಸಲಹೆಯ ಅತ್ಯುತ್ತಮ ಮೂಲವು ಯಾವುದು?

      6 ನಿಮ್ಮ ಕುಟುಂಬದಲ್ಲಿ ಒಬ್ಬ ಮದ್ಯರೋಗಿಯು ಇರುವುದಾದರೆ, ಬೈಬಲಿನ ಪ್ರೇರಿತ ಸಲಹೆಯು ಶಕ್ಯವಾದ ಅತ್ಯಂತ ಉಪಯುಕ್ತಕರ ಜೀವನವನ್ನು ಜೀವಿಸಲು ನಿಮಗೆ ನೆರವಾಗಬಲ್ಲದು. (ಯೆಶಾಯ 48:17; 2 ತಿಮೊಥೆಯ 3:16, 17) ಮದ್ಯರೋಗಾವಸ್ಥೆಯೊಂದಿಗೆ ಯಶಸ್ವಿಕರವಾಗಿ ವ್ಯವಹರಿಸಲು ಕುಟುಂಬಗಳಿಗೆ ಸಹಾಯ ಮಾಡಿರುವ ಕೆಲವು ಮೂಲತತ್ವಗಳನ್ನು ಪರಿಗಣಿಸಿರಿ.

      7. ಒಂದು ಕುಟುಂಬದ ಸದಸ್ಯನು ಮದ್ಯರೋಗಿಯಾಗಿದ್ದರೆ ಅದಕ್ಕೆ ಜವಾಬ್ದಾರನು ಯಾರು?

      7 ತಪ್ಪಿಗೆ ಎಲ್ಲ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿರಿ. ಬೈಬಲು ಹೇಳುವುದು: “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಮತ್ತು “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ಗಲಾತ್ಯ 6:5; ರೋಮಾಪುರ 14:12) ಕುಟುಂಬ ಸದಸ್ಯರು ಜವಾಬ್ದಾರರೆಂದು ಸೂಚಿಸಲು ಮದ್ಯರೋಗಿಯು ಪ್ರಯತ್ನಿಸಬಹುದು. ಉದಾಹರಣೆಗಾಗಿ, ಅವನು ಹೀಗನ್ನಬಹುದು: “ನೀವು ನನ್ನನ್ನು ಹೆಚ್ಚು ಉತ್ತಮವಾಗಿ ಉಪಚರಿಸುತ್ತಿದ್ದರೆ ನಾನು ಕುಡಿಯುತ್ತಿರಲಿಲ್ಲ.” ಇತರರು ಅವನೊಂದಿಗೆ ಸಮ್ಮತಿಸುವಂತೆ ಕಂಡರೆ, ಅವರು ಅವನಿಗೆ ಕುಡಿಯುವುದನ್ನು ಮುಂದುವರಿಸಲು ಉತ್ತೇಜನ ಕೊಡುತ್ತಾರೆ. ಆದರೆ ನಾವು ಪರಿಸ್ಥಿತಿಗಳಿಂದ ಅಥವಾ ಬೇರೆ ಜನರಿಂದ ಬಲಿಪಶುಗಳಾಗಿಸಲ್ಪಡುವಲ್ಲಿಯೂ, ನಾವೆಲ್ಲರೂ—ಮದ್ಯರೋಗಿಗಳನ್ನು ಒಳಗೊಂಡು—ನಾವೇನು ಮಾಡುತ್ತೇವೊ ಅದಕ್ಕೆ ಜವಾಬ್ದಾರರು.—ಹೋಲಿಸಿ ಫಿಲಿಪ್ಪಿ 2:12.

      8. ಮದ್ಯರೋಗಿಗೆ ಅವನ ಸಮಸ್ಯೆಯ ಫಲಿತಾಂಶಗಳನ್ನು ಎದುರಿಸಲು ಸಹಾಯ ನೀಡಬಹುದಾದ ಕೆಲವು ಮಾರ್ಗಗಳು ಯಾವುವು?

      8 ಮದ್ಯರೋಗಿಯನ್ನು ಅವನ ಕುಡಿತದ ಪರಿಣಾಮಗಳಿಂದ ನೀವು ಯಾವಾಗಲೂ ರಕ್ಷಿಸಲೇಬೇಕೆಂದು ಭಾವಿಸಬೇಡಿರಿ. ಕೋಪಿಷ್ಠ ವ್ಯಕ್ತಿಯೊಬ್ಬನ ಕುರಿತ ಬೈಬಲಿನ ಒಂದು ಜ್ಞಾನೋಕ್ತಿಯನ್ನು ಮದ್ಯರೋಗಿಗೂ ಸರಿಸಮವಾಗಿ ಅನ್ವಯಿಸಸಾಧ್ಯವಿದೆ: “ಬಿಡಿಸಿದರೆ ಬಾರಿಬಾರಿಗೆ ಬಿಡಿಸಬೇಕಾಗುವದು.” (ಜ್ಞಾನೋಕ್ತಿ 19:19) ಮದ್ಯರೋಗಿಯು ತನ್ನ ಕುಡುಕತನದ ಫಲವನ್ನು ಅನುಭವಿಸಲಿ. ಅವನು ತನ್ನ ಕೊಳಕನ್ನು ಶುಚಿಮಾಡಲಿ ಅಥವಾ ಕುಡಿತದ ಘಟನಾವಳಿಯ ಮಾರನೆಯ ಬೆಳಗಾತ ತಾನೇ ಧಣಿಗೆ ಫೋನ್‌ಮಾಡಿ ತಿಳಿಸಲಿ.

      [ಪುಟ 146ರಲ್ಲಿರುವ ಚಿತ್ರ]

      ಕುಟುಂಬ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಕ್ರೈಸ್ತ ಹಿರಿಯರು ಸಹಾಯದ ಒಂದು ಮಹಾ ಮೂಲವಾಗಿರಬಲ್ಲರು

      9, 10. ಮದ್ಯರೋಗಿಗಳ ಕುಟುಂಬಗಳು ಯಾಕೆ ಸಹಾಯವನ್ನು ಸ್ವೀಕರಿಸಬೇಕು, ಮತ್ತು ವಿಶೇಷವಾಗಿ ಯಾರ ಸಹಾಯವನ್ನು ಅವರು ಹುಡುಕಬೇಕು?

      9 ಇತರರಿಂದ ಸಹಾಯವನ್ನು ಸ್ವೀಕರಿಸಿರಿ. ಜ್ಞಾನೋಕ್ತಿ 17:17 ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” ನಿಮ್ಮ ಕುಟುಂಬದಲ್ಲಿ ಒಬ್ಬ ಮದ್ಯರೋಗಿಯು ಇರುವಾಗ, ಅಲ್ಲಿ ಆಪತ್ತಿರುತ್ತದೆ. ನಿಮಗೆ ಸಹಾಯದ ಅಗತ್ಯವಿದೆ. ಬೆಂಬಲಕ್ಕಾಗಿ ‘ನಿಜ ಮಿತ್ರರ’ ಮೇಲೆ ಆತುಕೊಳ್ಳುವುದಕ್ಕೆ ಹಿಂಜರಿಯದಿರಿ. (ಜ್ಞಾನೋಕ್ತಿ 18:24) ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಅಥವಾ ತದ್ರೀತಿಯ ಪರಿಸ್ಥಿತಿಯನ್ನು ಎದುರಿಸಿರುವ ಇತರರೊಂದಿಗೆ ಮಾತಾಡುವುದರಿಂದ ನೀವು ಮಾಡುವ ಅಥವಾ ಮಾಡಬಾರದ ವಿಷಯಗಳ ಮೇಲೆ ಪ್ರಾಯೋಗಿಕ ಸಲಹೆಗಳನ್ನು ಅವರು ನಿಮಗೆ ಒದಗಿಸಬಹುದು. ಆದರೆ ಸಮತೆಯಿಂದಿರಿ. ನೀವು ಭರವಸೆಯಿಡಬಲ್ಲವರೊಂದಿಗೆ, ನಿಮ್ಮ ‘ಗುಟ್ಟಿನ’ ಮಾತನ್ನು ಕಾಪಾಡುವವರೊಂದಿಗೆ ಮಾತಾಡಿರಿ.—ಜ್ಞಾನೋಕ್ತಿ 11:13.

      10 ಕ್ರೈಸ್ತ ಹಿರಿಯರಲ್ಲಿ ಭರವಸೆಯಿಡಲು ಕಲಿಯಿರಿ. ಕ್ರೈಸ್ತ ಸಭೆಯಲ್ಲಿರುವ ಹಿರಿಯರು ಸಹಾಯದ ಒಂದು ಮಹಾ ಉಗಮವಾಗಿರಬಲ್ಲರು. ಈ ಪಕ್ವತೆಯ ಪುರುಷರು ದೇವರ ವಾಕ್ಯದಲ್ಲಿ ಶಿಕ್ಷಿತರೂ ಅದರ ಮೂಲತತ್ವಗಳ ಅನ್ವಯಿಸುವಿಕೆಯಲ್ಲಿ ಅನುಭವಸ್ಥರೂ ಆಗಿದ್ದಾರೆ. ಅವರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿ” ಆಗಿ ಪರಿಣಮಿಸಬಲ್ಲರು. (ಯೆಶಾಯ 32:2) ಕ್ರೈಸ್ತ ಹಿರಿಯರು ಇಡೀ ಸಭೆಯನ್ನು ಹಾನಿಕರವಾದ ಪ್ರಭಾವಗಳಿಂದ ರಕ್ಷಿಸುತ್ತಾರೆ ಮಾತ್ರವಲ್ಲ, ಸಮಸ್ಯೆಗಳಿರುವ ವ್ಯಕ್ತಿಗಳನ್ನು ಸಂತೈಸಿ, ಚೈತನ್ಯಗೊಳಿಸಿ, ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳುತ್ತಾರೆ. ಅವರ ಸಹಾಯದ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳಿರಿ.

      11, 12. ಮದ್ಯರೋಗಿಗಳ ಕುಟುಂಬಗಳಿಗೆ ಅತ್ಯಂತ ದೊಡ್ಡ ಸಹಾಯವನ್ನು ಯಾರು ಒದಗಿಸುತ್ತಾರೆ, ಮತ್ತು ಆ ಬೆಂಬಲವು ಹೇಗೆ ಕೊಡಲ್ಪಡುತ್ತದೆ?

      11 ಎಲ್ಲದಕ್ಕಿಂತ ಹೆಚ್ಚಾಗಿ ಯೆಹೋವನಿಂದ ಬಲವನ್ನು ಸೆಳೆದುಕೊಳ್ಳಿರಿ. ಬೈಬಲು ನಮಗೆ ಹೃತ್ಪೂರ್ವಕವಾಗಿ ಆಶ್ವಾಸನೆಯನ್ನೀಯುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ [“ಹತ್ತಿರವಿದ್ದಾನೆ,” NW]; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) ಮದ್ಯರೋಗಿಯಾದ ಕುಟುಂಬ ಸದಸ್ಯನೊಬ್ಬನೊಂದಿಗೆ ಜೀವಿಸುವ ಒತ್ತಡಗಳ ಕಾರಣ, ಮನಮುರಿದವರೂ ಕುಗ್ಗಿಹೋದವರೂ ಆಗಿರುವ ಅನಿಸಿಕೆ ನಿಮಗಾಗುವುದಾದರೆ, “ಯೆಹೋವನು ಹತ್ತಿರವಿದ್ದಾನೆ” ಎಂಬುದನ್ನು ನೆನಪಿನಲ್ಲಿಡಿರಿ. ನಿಮ್ಮ ಕುಟುಂಬ ಸನ್ನಿವೇಶವು ಎಷ್ಟು ಕಷ್ಟಕರವಾಗಿದೆಯೆಂಬುದನ್ನು ಆತನು ತಿಳಿದುಕೊಳ್ಳುತ್ತಾನೆ.—1 ಪೇತ್ರ 5:6, 7.

      12 ಯೆಹೋವನು ತನ್ನ ವಾಕ್ಯದಲ್ಲಿ ಏನು ಹೇಳುತ್ತಾನೊ ಅದರಲ್ಲಿ ನಂಬಿಕೆಯಿಡುವುದು ಚಿಂತೆಯನ್ನು ನಿಭಾಯಿಸುವುದಕ್ಕೆ ನಿಮಗೆ ಸಹಾಯ ಮಾಡಬಲ್ಲದು. (ಕೀರ್ತನೆ 130:3, 4; ಮತ್ತಾಯ 6:25-34; 1 ಯೋಹಾನ 3:19, 20) ದೇವರ ವಾಕ್ಯವನ್ನು ಅಭ್ಯಸಿಸುವುದು ಮತ್ತು ಅದರ ಮೂಲತತ್ವಕ್ಕನುಸಾರ ಜೀವಿಸುವುದು ನಿಮ್ಮನ್ನು ದೇವರ ಪವಿತ್ರಾತ್ಮದ ಸಹಾಯವನ್ನು ಪಡೆಯಲು ಶಕ್ಯರನ್ನಾಗಿ ಮಾಡುವುದು, ಅದು ನಿಮಗೆ ಒಂದೊಂದು ದಿನವನ್ನು ನಿಭಾಯಿಸಲು “ಬಲಾಧಿಕ್ಯ”ದೊಂದಿಗೆ ಸನ್ನದ್ಧಗೊಳಿಸಬಲ್ಲದು.—2 ಕೊರಿಂಥ 4:7.b

      13. ಅನೇಕ ಕುಟುಂಬಗಳನ್ನು ಭಂಗಗೊಳಿಸುವ ಎರಡನೆಯ ಸಮಸ್ಯೆಯು ಯಾವುದು?

      13 ಮದ್ಯಸಾರದ ದುರುಪಯೋಗವು ಅನೇಕ ಕುಟುಂಬಗಳನ್ನು ಭಂಗಗೊಳಿಸುವ ಇನ್ನೊಂದು ಸಮಸ್ಯೆಯಾದ ಗೃಹ್ಯ ಹಿಂಸಾಚಾರಕ್ಕೆ ನಡೆಸಬಲ್ಲದು.

      ಗೃಹ್ಯ ಹಿಂಸಾಚಾರದಿಂದಾಗುವ ಭಂಗ

      14. ಗೃಹ್ಯ ಹಿಂಸಾಚಾರವು ಪ್ರಾರಂಭಿಸಿದ್ದು ಯಾವಾಗ, ಮತ್ತು ಇಂದಿನ ಸನ್ನಿವೇಶವು ಏನಾಗಿದೆ?

      14 ಮಾನವ ಇತಿಹಾಸದಲ್ಲಿ ಮೊದಲನೆ ಹಿಂಸಾತ್ಮಕ ಕೃತ್ಯವು ಗೃಹ್ಯ ಹಿಂಸಾಚಾರದ ಒಂದು ಘಟನಾವಳಿಯಾಗಿದ್ದು ಕಾಯಿನ ಮತ್ತು ಹೇಬೆಲನೆಂಬ ಇಬ್ಬರು ಸೋದರರನ್ನು ಒಳಗೊಂಡಿತ್ತು. (ಆದಿಕಾಂಡ 4:8) ಅಂದಿನಿಂದ ಹಿಡಿದು ಮಾನವಕುಲವು ಎಲ್ಲಾ ತೆರದ ಗೃಹ್ಯ ಹಿಂಸಾಚಾರದಿಂದ ಬಾಧಿಸಲ್ಪಟ್ಟಿದೆ. ಹೆಂಡತಿಯರನ್ನು ಜಜ್ಜುಬಡಿಯುವ ಗಂಡಂದಿರು, ಗಂಡಂದಿರನ್ನು ಆಕ್ರಮಿಸುವ ಹೆಂಡತಿಯರು, ತಮ್ಮ ಎಳೆಯ ಮಕ್ಕಳನ್ನು ಕ್ರೂರವಾಗಿ ಹೊಡೆಯುವ ಹೆತ್ತವರು, ಮತ್ತು ತಮ್ಮ ವೃದ್ಧ ಹೆತ್ತವರನ್ನು ಅಪಪ್ರಯೋಗಿಸುವ ಬೆಳೆದ ಮಕ್ಕಳು ಇದ್ದಾರೆ.

      15. ಗೃಹ್ಯ ಹಿಂಸಾಚಾರದಿಂದ ಕುಟುಂಬ ಸದಸ್ಯರು ಭಾವಾತ್ಮಕವಾಗಿ ಹೇಗೆ ಬಾಧಿತರಾಗುತ್ತಾರೆ?

      15 ಗೃಹ್ಯ ಹಿಂಸಾಚಾರದಿಂದ ಉಂಟಾಗುವ ಭಂಗ, ಶಾರೀರಿಕ ಕಲೆಗಳನ್ನು ಬಹಳ ಮೀರಿ ಹೋಗುತ್ತದೆ. ಜಜ್ಜುಬಡಿಯಲ್ಪಟ್ಟ ಒಬ್ಬಾಕೆ ಹೆಂಡತಿಯು ಅಂದದ್ದು: “ಬಹಳ ದೋಷಿಭಾವನೆ ಮತ್ತು ನಾಚಿಕೆಯನ್ನು ನಿಮಗೆ ಅನುಭವಿಸಲಿರುತ್ತದೆ. ಹೆಚ್ಚಿನ ಬೆಳಗಾತಗಳಲ್ಲಿ ಅದು ಬರೇ ಒಂದು ಕೆಟ್ಟ ಕನಸು ಎಂದು ನಿರೀಕ್ಷಿಸುತ್ತಾ ಹಾಸಿಗೆಯಲ್ಲೇ ಬಿದ್ದಿರಲು ಬಯಸುತ್ತೇನೆ.” ಗೃಹ್ಯ ಹಿಂಸಾಚಾರವನ್ನು ವೀಕ್ಷಿಸುವ, ಅಥವಾ ಅನುಭವಿಸುವ ಮಕ್ಕಳು ಬೆಳೆದು ದೊಡ್ಡವರಾಗಿ ಸ್ವಂತ ಕುಟುಂಬಗಳನ್ನು ಹೊಂದುವಾಗ ತಾವೇ ಹಿಂಸಾಚಾರಿಗಳಾಗಬಹುದು.

      16, 17. ಭಾವಾತ್ಮಕ ಅಪಪ್ರಯೋಗ ಎಂದರೇನು, ಮತ್ತು ಕುಟುಂಬ ಸದಸ್ಯರು ಅದರಿಂದ ಹೇಗೆ ಬಾಧಿತರಾಗುತ್ತಾರೆ?

      16 ಗೃಹ್ಯ ಹಿಂಸಾಚಾರವು ಶಾರೀರಿಕ ಅಪಪ್ರಯೋಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅನೇಕವೇಳೆ ಆಕ್ರಮಣವು ಮೌಖಿಕವಾಗಿರುತ್ತದೆ. ಜ್ಞಾನೋಕ್ತಿ 12:18 ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.” ಗೃಹ್ಯ ಹಿಂಸಾಚಾರದ ವೈಲಕ್ಷಣ್ಯವಾಗಿರುವ ಈ “ಕತ್ತಿತಿವಿದ” ಹಾಗಿನ ಗಾಯಗಳಲ್ಲಿ, ಬಯ್ಯುವಿಕೆ, ಚೀರಾಟ, ಹಾಗೂ ಎಡೆಬಿಡದ ಟೀಕೆ, ಹೀನೈಸುವ ಮುಖಭಂಗಗಳು, ಮತ್ತು ದೈಹಿಕ ಹಿಂಸಾಚಾರದ ಬೆದರಿಕೆಗಳು ಸೇರುತ್ತವೆ. ಭಾವಾತ್ಮಕ ಹಿಂಸಾಚಾರದ ಗಾಯಗಳು ಅದೃಶ್ಯವಾಗಿದ್ದು ಅನೇಕವೇಳೆ ಇತರರಿಗೆ ಅಗೋಚರವಾಗಿರುತ್ತವೆ.

      17 ಒಂದು ಮಗುವಿಗೆ ಭಾವಾತ್ಮಕವಾಗಿ ಜಜ್ಜುಬಡಿಯುವುದು—ಮಗುವಿನ ಸಾಮರ್ಥ್ಯಗಳನ್ನು, ಬುದ್ಧಿಶಕ್ತಿಯನ್ನು, ಅಥವಾ ಒಬ್ಬ ವ್ಯಕ್ತಿಯೋಪಾದಿ ಅದರ ಮೌಲ್ಯವನ್ನು ಎಡೆಬಿಡದೆ ಟೀಕಿಸುತ್ತಾ ತೃಣೀಕರಿಸುತ್ತಾ ಇರುವುದು ವಿಶೇಷವಾಗಿ ವಿಷಾದಕರ. ಅಂತಹ ಮೌಖಿಕ ಅಪಪ್ರಯೋಗವು ಒಂದು ಮಗುವಿನ ಮನೋಭಾವವನ್ನು ನಷ್ಟಗೊಳಿಸಬಲ್ಲದು. ನಿಜ, ಮಕ್ಕಳೆಲ್ಲರಿಗೆ ಶಿಸ್ತಿನ ಅಗತ್ಯವಿದೆ. ಆದರೆ ಬೈಬಲು ತಂದೆಗಳಿಗೆ ಉಪದೇಶಿಸುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”—ಕೊಲೊಸ್ಸೆ 3:21.

      ಗೃಹ್ಯ ಹಿಂಸಾಚಾರವನ್ನು ವರ್ಜಿಸುವ ವಿಧ

      [ಪುಟ 151ರಲ್ಲಿರುವ ಚಿತ್ರ]

      ಪರಸ್ಪರವಾಗಿ ಪ್ರೀತಿಸುವ ಹಾಗೂ ಗೌರವವನ್ನು ತೋರಿಸುವ ಕ್ರೈಸ್ತ ಸಂಗಾತಿಗಳು, ತೊಂದರೆಗಳನ್ನು ಸರಿಪಡಿಸಲು ತ್ವರಿತಗತಿಯಲ್ಲಿ ಕ್ರಿಯೆಗೈಯುವರು

      18. ಗೃಹ್ಯ ಹಿಂಸಾಚಾರವು ಎಲ್ಲಿ ಆರಂಭಿಸುತ್ತದೆ, ಮತ್ತು ಅದನ್ನು ನಿಲ್ಲಿಸುವ ಮಾರ್ಗವು ಯಾವುದೆಂದು ಬೈಬಲು ತೋರಿಸುತ್ತದೆ?

      18 ಗೃಹ್ಯ ಹಿಂಸಾಚಾರವು ಹೃದಯ ಮತ್ತು ಮನಸ್ಸಿನಲ್ಲಿ ಪ್ರಾರಂಭಿಸುತ್ತದೆ; ನಾವು ಕ್ರಿಯೆನಡಿಸುವ ರೀತಿಯು, ನಾವು ಹೇಗೆ ಯೋಚಿಸುತ್ತೇವೊ ಅದರಿಂದ ಆರಂಭಗೊಳ್ಳುತ್ತದೆ. (ಯಾಕೋಬ 1:14, 15) ಹಿಂಸಾಚಾರವನ್ನು ನಿಲ್ಲಿಸಲು, ದುರುಪಯೋಗಿಗೆ ತನ್ನ ಯೋಚನಾ ವಿಧಾನವನ್ನು ಬದಲಾಯಿಸುವ ಅಗತ್ಯವಿದೆ. (ರೋಮಾಪುರ 12:2) ಅದು ಸಾಧ್ಯವೊ? ಹೌದು. ದೇವರ ವಾಕ್ಯಕ್ಕೆ ಜನರನ್ನು ಬದಲಾಯಿಸುವ ಶಕ್ತಿ ಇದೆ. ನಾಶಕಾರಕ ವೀಕ್ಷಣಗಳ ‘ಬಲವಾದ ಕೋಟೆಗಳನ್ನು’ ಸಹ ಅದು ಕೆಡವಿಹಾಕಬಲ್ಲದು. (2 ಕೊರಿಂಥ 10:4; ಇಬ್ರಿಯ 4:12) ಬೈಬಲಿನ ನಿಷ್ಕೃಷ್ಟ ಜ್ಞಾನವು ಜನರಲ್ಲಿ ಎಷ್ಟು ಸಂಪೂರ್ಣವಾದ ಬದಲಾವಣೆಯನ್ನು ಉತ್ಪಾದಿಸಬಲ್ಲದೆಂದರೆ, ಅವರು ಒಂದು ಹೊಸ ವ್ಯಕ್ತಿತ್ವವನ್ನು ಧರಿಸಿದವರೆಂದು ಹೇಳಲಾಗುತ್ತದೆ.—ಎಫೆಸ 4:22-24; ಕೊಲೊಸ್ಸೆ 3:8-10.

      19. ಒಬ್ಬ ವಿವಾಹ ಸಂಗಾತಿಯನ್ನು ಒಬ್ಬ ಕ್ರೈಸ್ತನು ಹೇಗೆ ವೀಕ್ಷಿಸಬೇಕು ಮತ್ತು ಉಪಚರಿಸಬೇಕು?

      19 ವಿವಾಹ ಸಂಗಾತಿಯ ಕುರಿತಾದ ನೋಟ. ದೇವರ ವಾಕ್ಯವು ಹೇಳುವುದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.” (ಎಫೆಸ 5:28) ಗಂಡನು ತನ್ನ ಹೆಂಡತಿಯನ್ನು “ಬಲಹೀನಳೆಂಬುದನ್ನು ಜ್ಞಾಪಕಮಾಡಿಕೊಂಡು” ಆಕೆಯನ್ನು ಗೌರವಿಸಬೇಕೆಂದೂ ಬೈಬಲು ಹೇಳುತ್ತದೆ. (1 ಪೇತ್ರ 3:7) ಹೆಂಡತಿಯರು ತಮ್ಮ “ಗಂಡಂದಿರನ್ನೂ . . . ಪ್ರೀತಿಸುವವರೂ” ಅವರಿಗೆ “ಆಳವಾದ ಗೌರವ” ತೋರಿಸುವವರೂ ಆಗಿರಬೇಕೆಂದು ಉಪದೇಶಿಸಲಾಗಿದೆ. (ತೀತ 2:4; ಎಫೆಸ 5:33, NW) ದೈವಭಯವುಳ್ಳವನಾದ ಯಾವ ಗಂಡನೂ ತನ್ನ ಹೆಂಡತಿಯನ್ನು ಶಾರೀರಿಕವಾಗಿ ಅಥವಾ ಮೌಖಿಕವಾಗಿ ಆಕ್ರಮಿಸುವುದಾದರೆ, ನಿಜವಾಗಿಯೂ ತಾನು ತನ್ನ ಹೆಂಡತಿಗೆ ಗೌರವವನ್ನು ತೋರಿಸುತ್ತೇನೆಂದು ಸತ್ಯವಾಗಿ ವಾದಿಸಲಾರನು. ಮತ್ತು ತನ್ನ ಗಂಡನೆಡೆಗೆ ಚೀರಾಡುವ, ಅವನನ್ನು ಕೆಣಕುತ್ತಾ ಸಂಬೋಧಿಸುವ ಅಥವಾ ಸತತವಾಗಿ ಅವನನ್ನು ಬಯ್ಯುವ ಯಾವ ಹೆಂಡತಿಯೂ ತಾನು ನಿಜವಾಗಿ ಅವನಿಗೆ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತೇನೆಂದು ಹೇಳಲಾರಳು.

      20. ತಮ್ಮ ಮಕ್ಕಳಿಗಾಗಿ ಹೆತ್ತವರು ಯಾರ ಮುಂದೆ ಜವಾಬ್ದಾರರಾಗಿದ್ದಾರೆ, ಮತ್ತು ಹೆತ್ತವರು ತಮ್ಮ ಮಕ್ಕಳಿಂದ ಅವಾಸ್ತವಿಕ ನಿರೀಕ್ಷಣೆಗಳನ್ನು ಮಾಡಬಾರದೇಕೆ?

      20 ಮಕ್ಕಳೆಡೆಗೆ ಯೋಗ್ಯ ನೋಟ. ಮಕ್ಕಳು ತಮ್ಮ ಹೆತ್ತವರ ಪ್ರೀತಿ ಮತ್ತು ಗಮನಕ್ಕೆ ಅರ್ಹರು, ಹೌದು, ಅವರಿಗೆ ಅದರ ಅಗತ್ಯವಿದೆ. ದೇವರ ವಾಕ್ಯವು ಮಕ್ಕಳನ್ನು “ಯೆಹೋವನಿಂದ ಬಂದ ಸ್ವಾಸ್ತ್ಯ” ಮತ್ತು “ಬಹುಮಾನ,” ಎಂದು ಕರೆಯುತ್ತದೆ. (ಕೀರ್ತನೆ 127:3) ಆ ಸ್ವಾಸ್ತ್ಯದ ಪರಾಮರಿಕೆಯನ್ನು ಮಾಡುವುದಕ್ಕೆ ಹೆತ್ತವರು ಯೆಹೋವನ ಮುಂದೆ ಜವಾಬ್ದಾರರಾಗಿದ್ದಾರೆ. ಬೈಬಲು “ಹಸುಳೆಯ ಸ್ವಭಾವಲಕ್ಷಣಗಳ” ಕುರಿತು ಮತ್ತು ಹುಡುಗತನದ “ಮೂರ್ಖತನ”ದ ಕುರಿತು ಮಾತಾಡುತ್ತದೆ. (1 ಕೊರಿಂಥ 13:11, NW; ಜ್ಞಾನೋಕ್ತಿ 22:15) ತಮ್ಮ ಮಕ್ಕಳಲ್ಲಿ ಮೂರ್ಖತನವನ್ನು ಎದುರಿಸುವಲ್ಲಿ ಹೆತ್ತವರು ಆಶ್ಚರ್ಯಪಡಬಾರದು. ಎಳೆಯರು ವಯಸ್ಕರಲ್ಲ. ಮಗುವಿನ ಪ್ರಾಯ, ಕುಟುಂಬ ಹಿನ್ನೆಲೆ, ಮತ್ತು ಸಾಮರ್ಥ್ಯಕ್ಕೆ ತಕ್ಕದಾದುದಕ್ಕಿಂತ ಹೆಚ್ಚನ್ನು ಹೆತ್ತವರು ನಿರ್ಬಂಧಿಸಿ ಕೇಳಬಾರದು.—ಆದಿಕಾಂಡ 33:12-14 ನೋಡಿ.

      21. ವೃದ್ಧ ಹೆತ್ತವರನ್ನು ವೀಕ್ಷಿಸುವ ಮತ್ತು ಅವರೊಂದಿಗೆ ವ್ಯವಹರಿಸುವ ದೈವಿಕ ವಿಧಾನವು ಯಾವುದು?

      21 ವೃದ್ಧರಾದ ಹೆತ್ತವರೆಡೆಗಿನ ನೋಟ. ಯಾಜಕಕಾಂಡ 19:32 ಹೇಳುವುದು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” ಹೀಗೆ ದೇವರ ನಿಯಮವು ವೃದ್ಧರಿಗಾಗಿ ಗೌರವ ಮತ್ತು ಅತಿ ಆದರವನ್ನು ಪ್ರೋತ್ಸಾಹಿಸಿತು. ವೃದ್ಧ ಹೆತ್ತವರಲ್ಲೊಬ್ಬರು ಅತಿಯಾಗಿ ಹಕ್ಕೊತ್ತಾಯ ಮಾಡುವಂತೆ ತೋರುವಾಗ ಅಥವಾ ಅಸ್ವಸ್ಥನೂ, ಪ್ರಾಯಶಃ ಬೇಗನೆ ಚಲಿಸಲು ಅಥವಾ ಯೋಚಿಸಲು ಶಕ್ತನಾಗದವನೂ ಆದಾಗ ಇದೊಂದು ಪಂಥಾಹ್ವಾನವಾಗಿರಬಹುದು. ಆದರೂ, “ತಮ್ಮ ತಂದೆತಾಯಿಗಳಿಗೆ ತಕ್ಕದ್ದಾದ ಪರಿಹಾರವನ್ನು ಸಲ್ಲಿಸುತ್ತಾ ಇರುವ” ಮರುಜ್ಞಾಪನವನ್ನು ಮಕ್ಕಳಿಗೆ ಕೊಡಲಾಗಿದೆ. (1 ತಿಮೊಥೆಯ 5:4, NW) ಅವರನ್ನು ಘನತೆ ಮತ್ತು ಗೌರವದಿಂದ ಉಪಚರಿಸುತ್ತಾ, ಪ್ರಾಯಶಃ ಆರ್ಥಿಕವಾಗಿ ಒದಗಿಸುವಿಕೆಯನ್ನು ಮಾಡುವುದೆಂದೂ ಇದು ಅರ್ಥೈಸುವುದು. ಶಾರೀರಿಕವಾಗಿ ಅಥವಾ ಬೇರೆ ರೀತಿಯಲ್ಲಿ ವೃದ್ಧ ಹೆತ್ತವರನ್ನು ಕೆಟ್ಟದಾಗಿ ಉಪಚರಿಸುವುದು, ಬೈಬಲು ನಮಗೆ ಕ್ರಿಯೆಗೈಯುವಂತೆ ಹೇಳುವ ರೀತಿಗೆ ಪೂರ್ತಿ ಪ್ರತಿವಿರುದ್ಧವಾಗಿದೆ.

      22. ಗೃಹ್ಯ ಹಿಂಸಾಚಾರವನ್ನು ಜಯಿಸುವ ಮುಖ್ಯ ಗುಣವು ಯಾವುದು, ಮತ್ತು ಅದನ್ನು ಹೇಗೆ ನಿರ್ವಹಿಸಸಾಧ್ಯವಿದೆ?

      22 ಆತ್ಮಸಂಯಮವನ್ನು ಬೆಳೆಸಿಕೊಳ್ಳಿರಿ. ಜ್ಞಾನೋಕ್ತಿ 29:11 ಹೇಳುವುದು: “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು. ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.” ನೀವು ನಿಮ್ಮ ಕೋಪವನ್ನು ಹೇಗೆ ನಿಯಂತ್ರಿಸಿಕೊಳ್ಳಬಲ್ಲಿರಿ? ಹತಾಶೆಯು ಒಳಗೆ ತುಂಬಿಕೊಂಡುಬರುವಂತೆ ಬಿಡುವ ಬದಲಿಗೆ, ಏಳುವ ಕಷ್ಟಗಳನ್ನು ಬಗೆಹರಿಸಲು ಶೀಘ್ರವಾಗಿ ಕ್ರಿಯೆಗೈಯಿರಿ. (ಎಫೆಸ 4:26, 27) ಸಂಯಮವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನಿಮಗೆ ಅನಿಸುವಲ್ಲಿ ಆ ರಂಗವನ್ನು ಬಿಟ್ಟುಹೋಗಿರಿ. ನಿಮ್ಮಲ್ಲಿ ಆತ್ಮಸಂಯಮವನ್ನು ಉತ್ಪಾದಿಸುವಂತೆ ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ. (ಗಲಾತ್ಯ 5:22, 23) ನಡೆದಾಡುವುದು ಅಥವಾ ಯಾವುದಾದರೂ ದೈಹಿಕ ವ್ಯಾಯಾಮದಲ್ಲಿ ತೊಡಗಿರುವುದು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡಬಹುದು. (ಜ್ಞಾನೋಕ್ತಿ 17:14, 27) “ಕೋಪಕ್ಕೆ ನಿಧಾನಿ”ಗಳಾಗಿರಲು ಪ್ರಯಾಸಪಡಿರಿ.—ಜ್ಞಾನೋಕ್ತಿ 14:29, NW.

      ಪ್ರತ್ಯೇಕಿಸಿಕೊಳ್ಳುವುದೊ ಅಥವಾ ಒಂದುಗೂಡಿ ಇರುವುದೊ?

      23. ಕ್ರೈಸ್ತ ಸಭೆಯ ಸದಸ್ಯನೊಬ್ಬನು ಪದೇಪದೇ ಮತ್ತು ಪಶ್ಚಾತ್ತಾಪರಹಿತವಾಗಿ ತನ್ನನ್ನು ತೀಕ್ಷ್ಣ ಕೋಪಾವೇಶಗಳಿಗೆ, ಪ್ರಾಯಶಃ ತನ್ನ ಕುಟುಂಬದ ಶಾರೀರಿಕ ಅಪಪ್ರಯೋಗದ ಸಹಿತ, ಬಿಟ್ಟುಕೊಡುತ್ತಾನಾದರೆ, ಏನು ಸಂಭವಿಸಬಹುದು?

      23 ದೇವರಿಂದ ಖಂಡಿಸಲ್ಪಟ್ಟ ಕೃತ್ಯಗಳಲ್ಲಿ “ಹಗೆತನ, ಜಗಳ, . . . ಸಿಟ್ಟು” ಇವುಗಳನ್ನು ಬೈಬಲು ಸೇರಿಸುತ್ತದೆ ಮತ್ತು “ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ,” ಎಂದು ಹೇಳುತ್ತದೆ. (ಗಲಾತ್ಯ 5:19-21) ಆದುದರಿಂದ, ಕ್ರೈಸ್ತನೆಂದು ಹೇಳಿಕೊಳ್ಳುವ ಯಾವನಾದರೂ ಪದೇ ಪದೇ ಮತ್ತು ಪಶ್ಚಾತ್ತಾಪವಿಲ್ಲದೆ ಹಿಂಸಾತ್ಮಕ ಕೋಪಾವೇಶಕ್ಕೆ, ಪ್ರಾಯಶಃ ಜೊತೆಗಾರ್ತಿಯ ಅಥವಾ ಮಕ್ಕಳ ಶಾರೀರಿಕ ಅಪಪ್ರಯೋಗ ಸಹಿತವಾಗಿ, ಬಲಿಬೀಳುತ್ತಾನಾದರೆ, ಅವನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡಬಲ್ಲನು. (ಹೋಲಿಸಿ 2 ಯೋಹಾನ 9, 10.) ಈ ರೀತಿಯಲ್ಲಿ ದುರಾಚಾರಿ ವ್ಯಕ್ತಿಗಳಿಂದ ಸಭೆಯನ್ನು ಶುದ್ಧವಾಗಿಡಲಾಗುತ್ತದೆ.—1 ಕೊರಿಂಥ 5:6, 7; ಗಲಾತ್ಯ 5:9.

      24. (ಎ) ಅಪಪ್ರಯೋಗಿಸಲ್ಪಟ್ಟ ಜೊತೆಗಾರರು ಹೇಗೆ ಕ್ರಿಯೆಗೈಯಲು ಆಯ್ದುಕೊಳ್ಳಬಹುದು? (ಬಿ) ಚಿಂತಿತ ಮಿತ್ರರು ಮತ್ತು ಹಿರಿಯರು ಅಪಪ್ರಯೋಗಿಸಲ್ಪಟ್ಟ ಜೊತೆಗಾರರನ್ನು ಹೇಗೆ ಬೆಂಬಲಿಸಬಹುದು, ಆದರೆ ಅವರೇನು ಮಾಡಬಾರದು?

      24 ಬದಲಾಗುವ ಯಾವ ಸುಳಿವನ್ನೂ ತೋರಿಸದ ದುರಾಚಾರಿ ಜೊತೆಗಾರನಿಂದ ಸದ್ಯ ಜಜ್ಜುಬಡಿಯಲ್ಪಡುತ್ತಿರುವ ಕ್ರೈಸ್ತರ ಕುರಿತೇನು? ಕೆಲವರು ದುರಾಚಾರಿ ಜೊತೆಗಾರನೊಂದಿಗೆ ಒಂದಲ್ಲ ಒಂದು ಕಾರಣಕ್ಕಾಗಿ ಜೀವಿಸಲು ಆಯ್ದುಕೊಂಡಿದ್ದಾರೆ. ಇನ್ನಿತರರು ತಮ್ಮ ಶಾರೀರಿಕ, ಮಾನಸಿಕ, ಮತ್ತು ಆತ್ಮಿಕ ಕ್ಷೇಮವು—ಪ್ರಾಯಶಃ ಅವರ ಜೀವವು ಸಹ—ಅಪಾಯದಲ್ಲಿದೆಯೆಂದು ಭಾವಿಸಿದವರಾಗಿ ಬಿಟ್ಟುಹೋಗಲು ಆರಿಸಿಕೊಂಡಿದ್ದಾರೆ. ಈ ಸನ್ನಿವೇಶಗಳಲ್ಲಿ ಗೃಹ್ಯ ಹಿಂಸಾಚಾರದ ಬಲಿಪಶುವು ಏನು ಮಾಡಲು ಆರಿಸಿಕೊಳ್ಳುತ್ತಾನೆಂಬುದು ಯೆಹೋವನ ಮುಂದೆ ಒಂದು ವ್ಯಕ್ತಿಪರ ನಿರ್ಣಯವಾಗಿದೆ. (1 ಕೊರಿಂಥ 7:10, 11) ಸದುದ್ದೇಶವುಳ್ಳ ಮಿತ್ರರು, ಸಂಬಂಧಿಕರು, ಅಥವಾ ಕ್ರೈಸ್ತ ಹಿರಿಯರು ಸಹಾಯ ಮತ್ತು ಸಲಹೆಯನ್ನು ನೀಡಲು ಇಚ್ಛಿಸಬಹುದು, ಆದರೆ ಯಾವುದೇ ನಿರ್ದಿಷ್ಟ ಮಾರ್ಗಕ್ರಮವನ್ನು ಕೈಕೊಳ್ಳುವಂತೆ ಅವರು ಬಾಧಿತನ ಮೇಲೆ ಒತ್ತಡವನ್ನು ಹಾಕಬಾರದು. ಅದು ಅವನು ಅಥವಾ ಅವಳು ಮಾಡುವ ಸ್ವಂತ ನಿರ್ಣಯವಾಗಿದೆ.—ರೋಮಾಪುರ 14:4; ಗಲಾತ್ಯ 6:5.

      ಭಂಗಗೊಳಿಸುವಂತಹ ಸಮಸ್ಯೆಗಳಿಗೆ ಅಂತ್ಯ

      25. ಕುಟುಂಬಕ್ಕಾಗಿ ಯೆಹೋವನ ಉದ್ದೇಶವು ಏನು?

      25 ಯೆಹೋವನು ಆದಾಮ ಮತ್ತು ಹವ್ವರನ್ನು ವಿವಾಹದಲ್ಲಿ ಒಟ್ಟುಗೂಡಿಸಿದಾಗ, ಕುಟುಂಬಗಳು ಮದ್ಯರೋಗಾವಸ್ಥೆ ಅಥವಾ ಹಿಂಸಾಚಾರಗಳಂತಹ ಭಂಗಗೊಳಿಸುವ ಸಮಸ್ಯೆಗಳಿಂದ ನಶಿಸಿಹೋಗಬೇಕೆಂದು ಆತನು ಎಂದೂ ಉದ್ದೇಶಿಸಲಿಲ್ಲ. (ಎಫೆಸ 3:14, 15) ಕುಟುಂಬವು ಪ್ರೀತಿ ಮತ್ತು ಶಾಂತಿಯು ಸಮೃದ್ಧಗೊಳ್ಳುವ ಮತ್ತು ಪ್ರತಿಯೊಬ್ಬ ಸದಸ್ಯನ ಮಾನಸಿಕ, ಭಾವಾತ್ಮಕ, ಮತ್ತು ಆತ್ಮಿಕ ಅಗತ್ಯಗಳು ಪರಾಮರಿಸಲ್ಪಡುವ ಒಂದು ಸ್ಥಳವಾಗಿರಲಿತ್ತು. ಆದರೆ ಪಾಪದ ಒಳಸೇರಿಕೆಯಿಂದಾಗಿ ಕುಟುಂಬ ಜೀವನವು ಬೇಗನೆ ಅವನತಿಗಿಳಿಯಿತು.—ಹೋಲಿಸಿ ಪ್ರಸಂಗಿ 8:9.

      26. ಯೆಹೋವನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುವವರಿಗೆ ಯಾವ ಭವಿಷ್ಯತ್ತು ಕಾದಿದೆ?

      26 ಸಂತೋಷಕರವಾಗಿ, ಕುಟುಂಬಕ್ಕಾಗಿರುವ ತನ್ನ ಉದ್ದೇಶವನ್ನು ಯೆಹೋವನು ತ್ಯಜಿಸಿಬಿಟ್ಟಿಲ್ಲ. ಯಾವುದರಲ್ಲಿ ಜನರು “ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸು”ವರೊ ಆ ಶಾಂತಿಭರಿತ ನೂತನ ಲೋಕವೊಂದನ್ನು ಬರಮಾಡುವನೆಂದು ಆತನು ವಾಗ್ದಾನಿಸುತ್ತಾನೆ. (ಯೆಹೆಜ್ಕೇಲ 34:28) ಆ ಸಮಯದಲ್ಲಿ ಮದ್ಯರೋಗಾವಸ್ಥೆ, ಗೃಹ್ಯ ಹಿಂಸಾಚಾರ, ಮತ್ತು ಇಂದು ಕುಟುಂಬವನ್ನು ಭಂಗಗೊಳಿಸುವ ಬೇರೆ ಎಲ್ಲಾ ಸಮಸ್ಯೆಗಳು ಗತಕಾಲದ ವಿಷಯಗಳಾಗಿರುವವು. ಜನರು ಭಯವನ್ನಾಗಲಿ ನೋವನ್ನಾಗಲಿ ಅಡಗಿಸಲಿಕ್ಕಾಗಿ ಅಲ್ಲ, ಬದಲಾಗಿ, “ಶಾಂತಿಯ ಸಮೃದ್ಧಿಯಲ್ಲಿ ಉತ್ಕೃಷ್ಟ ಆನಂದವನ್ನು” ಕಂಡುಕೊಳ್ಳುತ್ತಿರುವ ಕಾರಣದಿಂದ ನಸುನಗುವರು.—ಕೀರ್ತನೆ 37:11, NW.

      a ಮದ್ಯರೋಗಿಯನ್ನು ನಾವು ಒಬ್ಬ ಗಂಡಾಗಿ ಸೂಚಿಸುವುದಾದರೂ, ಈ ಮೂಲತತ್ವಗಳು ಮದ್ಯರೋಗಿಯು ಒಬ್ಬ ಹೆಣ್ಣಾಗಿರುವಾಗಲೂ ಸರಿಸಮವಾಗಿ ಅನ್ವಯಿಸುತ್ತವೆ.

      b ಮದ್ಯರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವಿಶೇಷ ನೆರವನ್ನೀಯುವುದಕ್ಕಾಗಿ ಕೆಲವು ದೇಶಗಳಲ್ಲಿ ಔಷಧೋಪಚಾರ ಕೇಂದ್ರಗಳು, ಆಸ್ಪತ್ರೆಗಳು, ಮತ್ತು ವಾಸಿಗೊಳಿಸುವ ಕಾರ್ಯಕ್ರಮಗಳಿವೆ. ಇಂತಹ ಸಹಾಯವನ್ನು ಹುಡುಕಬೇಕೊ ಬಾರದೊ ಎಂಬುದು ಒಂದು ವೈಯಕ್ತಿಕ ನಿರ್ಣಯ. ವಾಚ್‌ ಟವರ್‌ ಸೊಸೈಟಿಯು ಯಾವುದೇ ವಿಶಿಷ್ಟ ಔಷಧೋಪಚಾರವನ್ನು ಅನುಮೋದಿಸುವುದಿಲ್ಲ. ಆದರೂ, ಸಹಾಯವನ್ನು ಹುಡುಕುವಲ್ಲಿ, ಒಬ್ಬನು ಶಾಸ್ತ್ರೀಯ ಮೂಲತತ್ವಗಳಲ್ಲಿ ಸಂಧಾನಮಾಡಿಕೊಳ್ಳುವ ಚಟುವಟಿಕೆಗಳಲ್ಲಿ ಒಳಗೊಳ್ಳದಂತೆ ಜಾಗ್ರತೆವಹಿಸಬೇಕು.

      ಕುಟುಂಬಗಳಿಗೆ, ಗಂಭೀರವಾದ ಭಂಗವನ್ನು ಉಂಟುಮಾಡುವ ಸಮಸ್ಯೆಗಳನ್ನು ದೂರಮಾಡಲು . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ಮದ್ಯಸಾರದ ದುರುಪಯೋಗವನ್ನು ಯೆಹೋವನು ಖಂಡಿಸುತ್ತಾನೆ.—ಜ್ಞಾನೋಕ್ತಿ 23:20, 21.

      ಪ್ರತಿಯೊಬ್ಬ ವ್ಯಕ್ತಿಯು ತನ್ನ ಕೃತ್ಯಗಳಿಗಾಗಿ ಜವಾಬ್ದಾರನು.—ರೋಮಾಪುರ 14:12.

      ಆತ್ಮಸಂಯಮವಿಲ್ಲದೆ ನಾವು ದೇವರನ್ನು ಸ್ವೀಕರಣೀಯವಾಗಿ ಸೇವಿಸಲಾರೆವು.—ಜ್ಞಾನೋಕ್ತಿ 29:11.

      ಯಥಾರ್ಥ ಕ್ರೈಸ್ತರು ತಮ್ಮ ವೃದ್ಧ ಹೆತ್ತವರಿಗೆ ಮಾನಸಲ್ಲಿಸುತ್ತಾರೆ.—ಯಾಜಕಕಾಂಡ 19:32.

  • ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹದಿಮೂರು

      ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ

      1, 2. ಒಂದು ವಿವಾಹವು ಒತ್ತಡದ ಕೆಳಗಿರುವಾಗ, ಯಾವ ಪ್ರಶ್ನೆಯು ಕೇಳಲ್ಪಡಬೇಕು?

      ಇಟಲಿಯ ಲೂಚೀಯ ಎಂಬ ಒಬ್ಬ ಸ್ತ್ರೀಯು 1988ರಲ್ಲಿ ಅತಿ ಖಿನ್ನಳಾಗಿದ್ದಳು.a ಅವಳ ವಿವಾಹವು ಹತ್ತು ವರ್ಷಗಳ ಬಳಿಕ ಈಗ ಕೊನೆಗೊಳ್ಳುವುದರಲ್ಲಿತ್ತು. ತನ್ನ ಗಂಡನೊಡನೆ ರಾಜಿಮಾಡಿಕೊಳ್ಳಲು ಅವಳು ಅನೇಕ ಸಲ ಪ್ರಯತ್ನಿಸಿದ್ದಳು, ಆದರೆ ಅದು ಕಾರ್ಯಸಾಧಕವಾಗಲಿಲ್ಲ. ಹೀಗೆ ಅಸಂಗತತೆಯ ಕಾರಣ ಅವಳು ಪ್ರತ್ಯೇಕವಾಸವನ್ನು ತೆಗೆದುಕೊಂಡು, ಈಗ ತನ್ನ ಇಬ್ಬರು ಪುತ್ರಿಯರನ್ನು ತಾನಾಗಿಯೇ ಬೆಳೆಸುವುದನ್ನು ಎದುರಿಸಿದಳು. ಆ ಸಮಯದೆಡೆಗೆ ಹಿನ್ನೋಡುತ್ತಾ, ಲೂಚೀಯ ನೆನಪಿಸಿಕೊಳ್ಳುವುದು: “ನಮ್ಮ ವಿವಾಹವನ್ನು ಯಾವುದೂ ರಕ್ಷಿಸಸಾಧ್ಯವಿರಲಿಲ್ಲವೆಂಬುದು ನನಗೆ ಖಂಡಿತ ಗೊತ್ತಿತ್ತು.”

      2 ನಿಮಗೆ ವಿವಾಹದ ಸಮಸ್ಯೆಗಳಿರುವುದಾದರೆ, ನೀವು ಲೂಚೀಯಳನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿರಬಹುದು. ನಿಮ್ಮ ವಿವಾಹವು ತೊಂದರೆಗೊಳಗಾಗಿರಬಹುದು ಮತ್ತು ಅದನ್ನು ಇನ್ನೂ ಕಾಪಾಡಸಾಧ್ಯವಿದೆಯೇ ಎಂದು ನೀವು ಕುತೂಹಲಪಡುತ್ತಿರಬಹುದು. ವಿದ್ಯಮಾನವು ಹಾಗಿರುವಲ್ಲಿ, ವಿವಾಹವನ್ನು ಸಫಲಗೊಳಿಸಲು ಸಹಾಯಕ್ಕಾಗಿ ದೇವರು ಬೈಬಲಿನಲ್ಲಿ ಕೊಟ್ಟಿರುವ ಒಳ್ಳೆಯ ಬುದ್ಧಿವಾದವೆಲ್ಲವನ್ನು ನಾನು ಪಾಲಿಸಿದ್ದೇನೊ? ಎಂಬ ಈ ಪ್ರಶ್ನೆಯನ್ನು ಪರಿಗಣಿಸುವುದು ಸಹಾಯಕವಾಗುವುದನ್ನು ನೀವು ಕಾಣುವಿರಿ.—ಕೀರ್ತನೆ 119:105.

      3. ವಿವಾಹ ವಿಚ್ಛೇದವು ಜನಪ್ರಿಯವಾಗಿರುವುದಾದರೂ, ವಿಚ್ಛೇದಗೊಂಡ ಅನೇಕ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ನಡುವೆ ಯಾವ ಪ್ರತಿಕ್ರಿಯೆಯು ವರದಿಸಲ್ಪಡುತ್ತದೆ?

      3 ಗಂಡ ಮತ್ತು ಹೆಂಡತಿಯ ಮಧ್ಯೆ ಬಿಕ್ಕಟ್ಟುಗಳು ತೀವ್ರವಾಗುತ್ತಿರುವಾಗ, ವಿವಾಹವನ್ನು ಅಂತ್ಯಗೊಳಿಸುವುದೇ ಅತಿ ಸುಲಭ ಮಾರ್ಗಕ್ರಮವಾಗಿ ಕಂಡೀತು. ಆದರೆ, ಅನೇಕ ದೇಶಗಳು ಒಡೆದ ಕುಟುಂಬಗಳಲ್ಲಿ ತಲ್ಲಣಗೊಳಿಸುವ ವೃದ್ಧಿಯನ್ನು ಅನುಭವಿಸಿರುವಾಗ, ವಿಚ್ಛೇದಿತ ಪುರುಷ ಮತ್ತು ಸ್ತ್ರೀಯರ ಒಂದು ದೊಡ್ಡ ಪ್ರತಿಶತವು ಆ ಒಡೆತಕ್ಕಾಗಿ ವಿಷಾದಿಸುತ್ತದೆಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ. ಇವರಲ್ಲಿ ಅನೇಕರು, ದೈಹಿಕ ಮತ್ತು ಮಾನಸಿಕ ಇವೆರಡೂ ಆರೋಗ್ಯ ಸಮಸ್ಯೆಗಳನ್ನು, ತಮ್ಮ ವಿವಾಹದಲ್ಲಿ ಉಳಿಯುವವರಿಗಿಂತ ಅಧಿಕವಾಗಿ ಅನುಭವಿಸುತ್ತಾರೆ. ವಿಚ್ಛೇದದ ಮಕ್ಕಳ ಗೊಂದಲ ಮತ್ತು ಅಸಂತೋಷವು ಅನೇಕವೇಳೆ ಅನೇಕ ವರ್ಷಗಳ ವರೆಗೆ ಉಳಿಯುತ್ತದೆ. ಒಡೆದ ಕುಟುಂಬದ ಹೆತ್ತವರು ಮತ್ತು ಸ್ನೇಹಿತರು ಸಹ ಕಷ್ಟವನ್ನು ಅನುಭವಿಸುತ್ತಾರೆ. ಮತ್ತು ವಿವಾಹದ ಮೂಲಕರ್ತನಾದ ದೇವರು ಈ ಸನ್ನಿವೇಶವನ್ನು ವೀಕ್ಷಿಸುವ ವಿಧದ ಕುರಿತೇನು?

      4. ಒಂದು ವಿವಾಹದಲ್ಲಿನ ಸಮಸ್ಯೆಗಳು ಹೇಗೆ ನಿರ್ವಹಿಸಲ್ಪಡಬೇಕು?

      4 ಹಿಂದಿನ ಅಧ್ಯಾಯಗಳಲ್ಲಿ ಗಮನಿಸಿರುವಂತೆ, ವಿವಾಹವು ಒಂದು ಜೀವಾವಧಿಯ ಬಂಧವಾಗಿರಬೇಕೆಂದು ದೇವರು ಉದ್ದೇಶಿಸಿದನು. (ಆದಿಕಾಂಡ 2:24) ಹೀಗಿರಲಾಗಿ, ಅಷ್ಟೊಂದು ವಿವಾಹಗಳು ಮುರಿಯುವುದೇಕೆ? ಅದು ರಾತ್ರಿಬೆಳಗಾಗುವಷ್ಟರಲ್ಲಿ ಸಂಭವಿಸಲಿಕ್ಕಿಲ್ಲ. ಸಾಮಾನ್ಯವಾಗಿ ಎಚ್ಚರಿಕೆಯ ಸೂಚನೆಗಳು ಇರುತ್ತವೆ. ಒಂದು ವಿವಾಹದಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳು ಕೊನೆಗೆ ದುಸ್ತರವಾಗಿ ತೋರುವ ತನಕ ಹೆಚ್ಚೆಚ್ಚು ದೊಡ್ಡದಾಗಿ ಬೆಳೆಯಬಲ್ಲವು. ಆದರೆ ಈ ಸಮಸ್ಯೆಗಳು ಬೈಬಲಿನ ಸಹಾಯದಿಂದ ತಕ್ಕ ಸಮಯದಲ್ಲಿ ನಿರ್ವಹಿಸಲ್ಪಡುವಲ್ಲಿ, ಅನೇಕ ದಾಂಪತ್ಯದ ಒಡೆತಗಳನ್ನು ತಪ್ಪಿಸಸಾಧ್ಯವಿದೆ.

      ವಾಸ್ತವಿಕತೆಯುಳ್ಳವರಾಗಿರಿ

      5. ಯಾವುದೇ ವಿವಾಹದಲ್ಲಿ ಯಾವ ವಾಸ್ತವಿಕ ಸನ್ನಿವೇಶವು ಎದುರಿಸಲ್ಪಡಬೇಕು?

      5 ಕೆಲವು ಸಲ ಸಮಸ್ಯೆಗಳಿಗೆ ನಡೆಸುವ ಒಂದು ಕಾರಣವು, ವಿವಾಹ ಸಹಭಾಗಿಗಳಲ್ಲಿ ಒಬ್ಬರಲ್ಲಿ ಅಥವಾ ಇಬ್ಬರಲ್ಲೂ ಇರಬಹುದಾದ ಅವಾಸ್ತವಿಕವಾದ ನಿರೀಕ್ಷಣೆಗಳೇ. ಪ್ರಣಯ ಕಥೆಗಳು, ಜನಪ್ರಿಯ ಪತ್ರಿಕೆಗಳು, ಟೆಲಿವಿಷನ್‌ ಕಾರ್ಯಕ್ರಮಗಳು, ಮತ್ತು ಚಲನ ಚಿತ್ರಗಳು, ನಿಜ ಜೀವನದಿಂದ ತೀರ ಬೇರೆಯಾದ ನಿರೀಕ್ಷೆಗಳನ್ನು ಮತ್ತು ಸ್ವಪ್ನಗಳನ್ನು ನಿರ್ಮಿಸಬಲ್ಲವು. ಈ ಸ್ವಪ್ನಗಳು ಸತ್ಯವಾಗಿ ಪರಿಣಮಿಸದಾಗ, ವಂಚಿತವಾದ, ಅಸಂತುಷ್ಟವಾದ, ಹಾಗೂ ಕಹಿಯಾದ ಭಾವನೆಯನ್ನೂ ಒಬ್ಬ ವ್ಯಕ್ತಿಯು ತಾಳಸಾಧ್ಯವಿದೆ. ಆದರೂ ಇಬ್ಬರು ಅಪರಿಪೂರ್ಣ ವ್ಯಕ್ತಿಗಳು ವಿವಾಹದಲ್ಲಿ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲರು? ಒಂದು ಯಶಸ್ವಿಯಾದ ಸಂಬಂಧವನ್ನು ಸಾಧಿಸುವುದಕ್ಕೆ ಪ್ರಯತ್ನದ ಅಗತ್ಯವಿದೆ.

      6. (ಎ) ವಿವಾಹದ ಯಾವ ಸಮತೂಕದ ನೋಟವನ್ನು ಬೈಬಲು ನೀಡುತ್ತದೆ? (ಬಿ) ವಿವಾಹದಲ್ಲಿ ಭಿನ್ನಾಭಿಪ್ರಾಯಗಳಿಗೆ ಕೆಲವು ಕಾರಣಗಳು ಯಾವುವು?

      6 ಬೈಬಲು ಪ್ರಾಯೋಗಿಕವಾಗಿದೆ. ಅದು ವಿವಾಹದ ಆನಂದಗಳನ್ನು ಅಂಗೀಕರಿಸುತ್ತದೆ, ಆದರೆ ವಿವಾಹವಾಗುವವರಿಗೆ “ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು,” ಎಂದು ಸಹ ಅದು ಎಚ್ಚರಿಸುತ್ತದೆ. (1 ಕೊರಿಂಥ 7:28) ಈಗಾಗಲೇ ಗಮನಿಸಿರುವಂತೆ, ಇಬ್ಬರು ಸಹಭಾಗಿಗಳು ಅಪರಿಪೂರ್ಣರಾಗಿ ಪಾಪ ಪ್ರವೃತ್ತಿಯವರಾಗಿರುತ್ತಾರೆ. ಪ್ರತಿಯೊಬ್ಬ ಸಹಭಾಗಿಯ ಮಾನಸಿಕ ಮತ್ತು ಭಾವನಾತ್ಮಕ ರಚನೆ ಮತ್ತು ಪಾಲನೆ ಪೋಷಣೆಯು ಬೇರೆ ಬೇರೆಯಾಗಿರುತ್ತದೆ. ದಂಪತಿಗಳು ಕೆಲವೊಮ್ಮೆ ಹಣಕಾಸು, ಮಕ್ಕಳು, ಮತ್ತು ವಿವಾಹ ಸಂಬಂಧಿಗಳ ಕುರಿತಾಗಿ ಅಸಮ್ಮತಿಸುತ್ತಾರೆ. ಒಂದುಗೂಡಿ ಕೆಲಸಮಾಡಲಿಕ್ಕೆ ಇರುವ ಸಮಯದ ಅಭಾವ, ಮತ್ತು ಲೈಂಗಿಕ ಸಮಸ್ಯೆಗಳು ಸಹ ಕಲಹದ ಒಂದು ಮೂಲವಾಗಿರಸಾಧ್ಯವಿದೆ.b ಅಂತಹ ವಿಷಯಗಳೊಂದಿಗೆ ವ್ಯವಹರಿಸಲು ಸಮಯ ತಗಲುತ್ತದಾದರೂ ಧೈರ್ಯತೆಗೆದುಕೊಳ್ಳಿರಿ! ಹೆಚ್ಚಿನ ವಿವಾಹಿತ ದಂಪತಿಗಳು ಅಂತಹ ಸಮಸ್ಯೆಗಳನ್ನು ಎದುರಿಸಶಕ್ತರಾಗಿ ಪರಸ್ಪರ ಸ್ವೀಕರಣೀಯ ಪರಿಹಾರಗಳನ್ನು ಅಣಿಗೊಳಿಸಲು ಶಕ್ತರಾಗುತ್ತಾರೆ.

      ಭಿನ್ನಾಭಿಪ್ರಾಯಗಳನ್ನು ಚರ್ಚಿಸಿರಿ

      [ಪುಟ 154ರಲ್ಲಿರುವ ಚಿತ್ರ]

      ಸಮಸ್ಯೆಗಳನ್ನು ತೀವ್ರಗತಿಯಲ್ಲಿ ನಿರ್ವಹಿಸಿರಿ. ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ

      7, 8. ವಿವಾಹ ಸಹಭಾಗಿಗಳ ನಡುವೆ ಮನಸ್ತಾಪಗಳು ಅಥವಾ ತಪ್ಪಭಿಪ್ರಾಯಗಳು ಇದ್ದಲ್ಲಿ, ಅವನ್ನು ನಿರ್ವಹಿಸುವ ಶಾಸ್ತ್ರೀಯ ವಿಧಾನವು ಯಾವುದು?

      7 ಮನಸ್ತಾಪಗಳನ್ನು, ತಪ್ಪಭಿಪ್ರಾಯಗಳನ್ನು, ಅಥವಾ ವೈಯಕ್ತಿಕ ಕುಂದುಕೊರತೆಗಳನ್ನು ಚರ್ಚಿಸುವಾಗ ಶಾಂತರಾಗಿ ಉಳಿಯಲು ಅನೇಕರಿಗೆ ಕಷ್ಟವಾಗಿ ಕಾಣುತ್ತದೆ. “ನನ್ನನ್ನು ತಪ್ಪುತಿಳಿದುಕೊಳ್ಳಲಾಗುತ್ತದೆ ಎಂಬ ಭಾವನೆ ನನಗಿದೆ,” ಎಂದು ಮುಚ್ಚುಮರೆಯಿಲ್ಲದೆ ಹೇಳುವ ಬದಲಾಗಿ, ಒಬ್ಬ ಜೊತೆಗಾರನು ಭಾವಪರವಶನಾಗಿ ಸಮಸ್ಯೆಯನ್ನು ಅತಿರೇಕಿಸಬಹುದು. ಅನೇಕರು ಹೀಗನ್ನುವರು: “ನೀನು ನಿನ್ನ ಚಿಂತೆಯನ್ನೇ ಮಾಡುವವನು,” ಅಥವಾ “ನೀನು ನನ್ನನ್ನು ಪ್ರೀತಿಸುವುದಿಲ್ಲ.” ಒಂದು ವಿವಾದದಲ್ಲಿ ಒಡಗೂಡಲು ಮನಸ್ಸಿಲ್ಲದವಳಾಗಿ, ಆ ಇನ್ನೊಬ್ಬ ಜೊತೆಗಾರ್ತಿಯು ಪ್ರತಿಕ್ರಿಯಿಸಲು ನಿರಾಕರಿಸಬಹುದು.

      8 ಒಂದು ಹೆಚ್ಚು ಉತ್ತಮ ಮಾರ್ಗವು ಬೈಬಲಿನ ಸಲಹೆಗೆ ಲಕ್ಷ್ಯಕೊಡುವುದೇ: “ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಒಂದು ಸಂತೋಷಿತ ವಿವಾಹ ದಂಪತಿಗಳು, ತಮ್ಮ 60ನೆಯ ವಿವಾಹ ವಾರ್ಷಿಕೋತ್ಸವವನ್ನು ತಲಪಿದಾಗ, ಅವರ ಸಫಲ ವಿವಾಹದ ರಹಸ್ಯವೇನೆಂದು ಕೇಳಲ್ಪಟ್ಟರು. ಗಂಡನು ಹೇಳಿದ್ದು: “ಭಿನ್ನಾಭಿಪ್ರಾಯಗಳು ಅವೆಷ್ಟೇ ಚಿಕ್ಕದಾಗಿದ್ದಿರಲಿ, ಅವನ್ನು ನಿದ್ರೆಗೆ ಮುಂಚೆಯೆ ನಿವಾರಿಸಿಕೊಳ್ಳುವುದನ್ನು ನಾವು ಕಲಿತೆವು.”

      9. (ಎ) ಶಾಸ್ತ್ರಗಳಲ್ಲಿ ಯಾವುದು ಸಂವಾದದ ಒಂದು ಆವಶ್ಯಕ ಭಾಗವಾಗಿ ಗುರುತಿಸಲ್ಪಡುತ್ತದೆ? (ಬಿ) ಅದಕ್ಕೆ ಧೈರ್ಯ ಮತ್ತು ನಮ್ರತೆಯು ಬೇಕಾದರೂ ವಿವಾಹ ಸಂಗಾತಿಗಳು ಆಗಾಗ ಏನು ಮಾಡುವ ಅಗತ್ಯವಿದೆ?

      9 ಒಬ್ಬ ಗಂಡ ಮತ್ತು ಹೆಂಡತಿಯು ಭಿನ್ನಾಭಿಪ್ರಾಯಪಡುವಾಗ, ಅವರಲ್ಲಿ ಪ್ರತಿಯೊಬ್ಬನು “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರುವ ಅಗತ್ಯವಿದೆ. (ಯಾಕೋಬ 1:19) ಜಾಗ್ರತೆಯಿಂದ ಕಿವಿಗೊಟ್ಟ ಬಳಿಕ ಇಬ್ಬರೂ ಸಹಭಾಗಿಗಳು ತಪ್ಪಾಯಿತೆಂದು ಹೇಳುವ ಅಗತ್ಯವನ್ನು ಕಂಡಾರು. (ಯಾಕೋಬ 5:16) “ನಿನ್ನನ್ನು ನೋಯಿಸಿದುದಕ್ಕಾಗಿ ವಿಷಾದಿಸುತ್ತೇನೆ” ಎಂದು ಯಥಾರ್ಥವಾಗಿ ಹೇಳುವುದಕ್ಕೆ ನಮ್ರತೆ ಮತ್ತು ಧೈರ್ಯವು ಬೇಕು. ಆದರೆ ಈ ರೀತಿಯಲ್ಲಿ ಭಿನ್ನತೆಗಳನ್ನು ನಿರ್ವಹಿಸುವುದು, ವಿವಾಹಿತ ದಂಪತಿಗಳಿಗೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಮಾತ್ರವಲ್ಲ, ಅವರು ಪರಸ್ಪರ ಸಾಂಗತ್ಯದಲ್ಲಿ ಹೆಚ್ಚು ಆನಂದವನ್ನು ಕಂಡುಕೊಳ್ಳುವಂತೆ ಮಾಡುವ ಒಂದು ಹೃದಯೋಲ್ಲಾಸ ಮತ್ತು ಆಪ್ತತೆಯನ್ನು ವಿಕಸಿಸುವಂತೆಯೂ ಸಹಾಯ ಮಾಡುವುದರಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವುದು.

      ವಿವಾಹದಲ್ಲಿ ಸಲ್ಲತಕ್ಕದ್ದನ್ನು ಸಲ್ಲಿಸುವುದು

      10. ಕೊರಿಂಥದ ಕ್ರೈಸ್ತರಿಗೆ ಪೌಲನು ಶಿಫಾರಸ್ಸು ಮಾಡಿದ ಯಾವ ಸಂರಕ್ಷಣೆಯು ಇಂದು ಒಬ್ಬ ಕ್ರೈಸ್ತನಿಗೆ ಅನ್ವಯಿಸಬಹುದಾಗಿದೆ?

      10 ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದಾಗ, ಅವನು ವಿವಾಹವನ್ನು ಶಿಫಾರಸ್ಸು ಮಾಡಿದ್ದು ‘ಜಾರತ್ವವು ಪ್ರಬಲವಾಗಿದ್ದ ಕಾರಣ’ದಿಂದಾಗಿ. (1 ಕೊರಿಂಥ 7:2) ಇಂದು ಲೋಕವು ಪುರಾತನ ಕೊರಿಂಥದಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿದೆ. ಲೋಕದ ಜನರು ಬಹಿರಂಗವಾಗಿ ಚರ್ಚಿಸುವ ಅನೈತಿಕ ವಿಷಯಗಳು, ಅವರು ಉಡುಪು ತೊಡುವ ಅಸಭ್ಯ ರೀತಿ, ಹಾಗೂ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ, ಟಿವಿ ಮತ್ತು ಚಲನ ಚಿತ್ರಗಳಲ್ಲಿ ತೋರಿಸಲಾಗುವ ವಿಷಯಲಂಪಟ ಕಥೆಗಳೆಲ್ಲವೂ ಕೂಡಿ ಅನೈತಿಕ ಕಾಮಾಭಿಲಾಷೆಗಳನ್ನು ಪ್ರಚೋದಿಸುತ್ತವೆ. ತದ್ರೀತಿಯ ಪರಿಸರದಲ್ಲಿ ಜೀವಿಸುತ್ತಿದ್ದ ಕೊರಿಂಥದವರಿಗೆ ಅಪೊಸ್ತಲ ಪೌಲನು ಹೇಳಿದ್ದು: “ಕಾಮತಾಪಪಡುವದಕ್ಕಿಂತ ಮದುವೆ [“ವಿವಾಹ,” NW]ಮಾಡಿಕೊಳ್ಳುವದು ಉತ್ತಮವಷ್ಟೆ.”—1 ಕೊರಿಂಥ 7:9.

      11, 12. (ಎ) ಗಂಡ ಮತ್ತು ಹೆಂಡತಿಯರು ಒಬ್ಬರಿಗೊಬ್ಬರು ಏನನ್ನು ಸಲ್ಲಿಸಲಿಕ್ಕಿದೆ, ಮತ್ತು ಯಾವ ಮನೋಭಾವದಿಂದ ಅದನ್ನು ಸಲ್ಲಿಸಬೇಕು? (ಬಿ) ವಿವಾಹದ ಸಲ್ಲಿಸುವಿಕೆಯು ತಾತ್ಕಾಲಿಕವಾಗಿ ಪ್ರತಿಬಂಧಿಸಲ್ಪಡಬೇಕಾಗುವಲ್ಲಿ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು?

      11 ಆದುದರಿಂದ, ಬೈಬಲು ವಿವಾಹಿತ ಕ್ರೈಸ್ತರಿಗೆ ಆಜ್ಞಾಪಿಸುವುದು: “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.” (1 ಕೊರಿಂಥ 7:3) ಕೊಡುವಿಕೆಯ ಮೇಲೆ ಒತ್ತುಹಾಕಿರುವುದನ್ನು ಗಮನಿಸಿರಿ—ಹಕ್ಕೊತ್ತಾಯದ ಮೇಲಲ್ಲ. ಪ್ರತಿಯೊಬ್ಬ ಸಹಭಾಗಿಯು ಇನ್ನೊಬ್ಬನ ಒಳಿತನ್ನು ಕುರಿತು ಚಿಂತಿಸುವುದಾದರೆ ಮಾತ್ರ ವಿವಾಹದಲ್ಲಿನ ಶಾರೀರಿಕ ಆಪ್ತತೆಯು ನಿಜವಾಗಿಯೂ ತೃಪ್ತಿಕರವಾಗಿರುತ್ತದೆ. ಉದಾಹರಣೆಗಾಗಿ, ತಮ್ಮ ಹೆಂಡತಿಯರೊಂದಿಗೆ “ವಿವೇಕದಿಂದ” ಒಗತನಮಾಡುವಂತೆ ಬೈಬಲು ಗಂಡಂದಿರಿಗೆ ಆಜ್ಞಾಪಿಸುತ್ತದೆ. (1 ಪೇತ್ರ 3:7) ಇದು ವಿಶೇಷವಾಗಿ ವಿವಾಹದಲ್ಲಿ ಸಲ್ಲತಕ್ಕದ್ದನ್ನು ಸಲ್ಲಿಸುವ ಮತ್ತು ಪಡೆದುಕೊಳ್ಳುವ ವಿಷಯದಲ್ಲಿ ಸತ್ಯವಾಗಿದೆ. ಒಬ್ಬ ಹೆಂಡತಿಯನ್ನು ಕೋಮಲವಾಗಿ ಉಪಚರಿಸದಿದ್ದಲ್ಲಿ, ವಿವಾಹದ ಈ ಅಂಶದಲ್ಲಿ ಆನಂದಿಸುವುದು ಆಕೆಗೆ ಕಷ್ಟಕರವಾಗಿ ಕಂಡೀತು.

      12 ವಿವಾಹ ಸಂಗಾತಿಗಳು ವಿವಾಹದ ಸಲ್ಲಿಸುವಿಕೆಯನ್ನು ಒಬ್ಬರಿಗೊಬ್ಬರು ಕೊಡಲು ತಪ್ಪಬಹುದಾದ ಸಂದರ್ಭಗಳಿವೆ. ಹೆಂಡತಿಯ ವಿಷಯದಲ್ಲಿ, ತಿಂಗಳ ನಿರ್ದಿಷ್ಟವಾದ ಸಮಯಗಳಲ್ಲಿ ಅಥವಾ ಅವಳು ತುಂಬ ದಣಿದಿರುವಾಗ ಇದು ನಿಜವಾಗಿರಬಹುದು. (ಹೋಲಿಸಿ ಯಾಜಕಕಾಂಡ 18:19.) ಗಂಡನ ವಿಷಯದಲ್ಲೂ, ಅವನು ಕೆಲಸದಲ್ಲಿ ಒಂದು ಗಂಭೀರವಾದ ಸಮಸ್ಯೆಯನ್ನು ನಿರ್ವಹಿಸುತ್ತಿರುವಾಗ ಮತ್ತು ಭಾವನಾತ್ಮಕವಾಗಿ ದಣಿದಿರುವಾಗ ಇದು ನಿಜವಾಗಿರಬಹುದು. ಆ ಸನ್ನಿವೇಶವನ್ನು ಸಹಭಾಗಿಗಳಿಬ್ಬರೂ ಮುಚ್ಚುಮರೆಯಿಲ್ಲದೆ ಚರ್ಚಿಸಿ “ಪರಸ್ಪರ ಸಮ್ಮತಿ”ಯಿಂದ ಒಪ್ಪುವಲ್ಲಿ, ವಿವಾಹದ ಸಲ್ಲಿಸುವಿಕೆಯನ್ನು ಸಲ್ಲಿಸುವುದರಲ್ಲಿ ಇಂತಹ ತಾತ್ಕಾಲಿಕ ಪ್ರತಿಬಂಧದ ವಿದ್ಯಮಾನಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. (1 ಕೊರಿಂಥ 7:5) ಸಹಭಾಗಿಗಳಲ್ಲಿ ಯಾರಾದರೊಬ್ಬರು ತಪ್ಪು ತೀರ್ಮಾನಕ್ಕೆ ಹಾರಿಬಿಡುವುದನ್ನು ಇದು ತಡೆಯುವುದು. ಆದರೂ, ಹೆಂಡತಿಯು ಬುದ್ಧಿಪೂರ್ವಕವಾಗಿ ಗಂಡನಿಗೆ ಅದನ್ನು ತಪ್ಪಿಸುವುದಾದರೆ ಅಥವಾ ಗಂಡನು ಪ್ರೀತಿಯ ರೀತಿಯಲ್ಲಿ ವಿವಾಹದ ಸಲ್ಲಿಸುವಿಕೆಯನ್ನು ಸಲ್ಲಿಸಲು ಬೇಕುಬೇಕೆಂದು ತಪ್ಪುವುದಾದರೆ, ಸಹಭಾಗಿಯು ಶೋಧನೆಗೆ ಒಳಗಾಗುವಂತೆ ಬಿಡಲ್ಪಟ್ಟಾನು. ಅಂತಹ ಒಂದು ಸನ್ನಿವೇಶದಲ್ಲಿ, ಒಂದು ವಿವಾಹದಲ್ಲಿ ಸಮಸ್ಯೆಗಳು ಏಳಬಹುದು.

      13. ತಮ್ಮ ಯೋಚನೆಯನ್ನು ಶುದ್ಧವಾಗಿಡಲು ಕ್ರೈಸ್ತರು ಹೇಗೆ ಕೆಲಸಮಾಡಬಲ್ಲರು?

      13 ಎಲ್ಲ ಕ್ರೈಸ್ತರಂತೆ, ದೇವರ ವಿವಾಹಿತ ಸೇವಕರು ಅಶುದ್ಧವೂ ಅಸ್ವಾಭಾವಿಕವೂ ಆದ ಕಾಮಾಭಿಲಾಷೆಗಳನ್ನು ಉಂಟುಮಾಡಬಲ್ಲ ಲಂಪಟ ಸಾಹಿತ್ಯವನ್ನು ವರ್ಜಿಸಲೇಬೇಕು. (ಕೊಲೊಸ್ಸೆ 3:5) ವಿರುದ್ಧಲಿಂಗದ ಸದಸ್ಯರೆಲ್ಲರೊಂದಿಗೆ ವ್ಯವಹರಿಸುವಾಗ ತಮ್ಮ ಆಲೋಚನೆ ಮತ್ತು ಕ್ರಿಯೆಗಳನ್ನು ಸಹ ಅವರು ಕಾಯಬೇಕು. ಯೇಸು ಎಚ್ಚರಿಸಿದ್ದು: “ಒಬ್ಬ ಸ್ತ್ರೀಗಾಗಿ ಕಾಮೋದ್ರೇಕವುಳ್ಳವನಾಗುವಂತೆ ಆಕೆಯನ್ನು ನೋಡುತ್ತಾ ಇರುವ ಪ್ರತಿಯೊಬ್ಬನು ಆಕೆಯೊಂದಿಗೆ ತನ್ನ ಹೃದಯದಲ್ಲಿ ಆಗಲೇ ವ್ಯಭಿಚಾರವನ್ನು ಮಾಡಿದ್ದಾನೆ.” (ಮತ್ತಾಯ 5:28, NW) ಕಾಮದ ಕುರಿತ ಬೈಬಲಿನ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ದಂಪತಿಗಳು ಶೋಧನೆಗೆ ಬೀಳುವುದನ್ನು ಮತ್ತು ವ್ಯಭಿಚಾರಗೈಯುವುದನ್ನು ವರ್ಜಿಸಲು ಶಕ್ತರಾಗಿರಬೇಕು. ಯಾವುದರಲ್ಲಿ ಕಾಮ ಸುಖವು ವಿವಾಹದ ಮೂಲಕರ್ತನಾದ ಯೆಹೋವನಿಂದ ಒಂದು ಹಿತಕರವಾದ ಕೊಡುಗೆಯಾಗಿ ಅಮೂಲ್ಯವೆಂದೆಣಿಸಲ್ಪಡುತ್ತದೊ ಆ ವಿವಾಹದಲ್ಲಿ, ಅವರು ಆನಂದಕರವಾದ ಆಪ್ತತೆಯನ್ನು ಅನುಭವಿಸುತ್ತಾ ಮುಂದರಿಯಬಲ್ಲರು.—ಜ್ಞಾನೋಕ್ತಿ 5:15-19.

      ವಿವಾಹ ವಿಚ್ಛೇದಕ್ಕಿರುವ ಬೈಬಲ್‌ ಸಂಬಂಧಿತ ಆಧಾರಗಳು

      14. ಯಾವ ದುಃಖದ ಸನ್ನಿವೇಶವು ತಾನೇ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ? ಏಕೆ?

      14 ಸಂತೋಷಕರವಾಗಿ, ಹೆಚ್ಚಿನ ಕ್ರೈಸ್ತ ವಿವಾಹಗಳಲ್ಲಿ ಏಳುವ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲಿಕ್ಕೆ ಸಾಧ್ಯವಿದೆ. ಕೆಲವೊಮ್ಮೆಯಾದರೊ, ವಿದ್ಯಮಾನವು ಹೀಗಿರುವುದಿಲ್ಲ. ಮನುಷ್ಯರು ಅಪರಿಪೂರ್ಣರೂ ಸೈತಾನನ ನಿಯಂತ್ರಣದ ಕೆಳಗಿರುವ ಪಾಪಮಯ ಲೋಕದಲ್ಲಿ ಜೀವಿಸುವವರೂ ಆಗಿರುವುದರಿಂದ, ಕೆಲವು ವಿವಾಹಗಳು ಒಡೆದುಹೋಗುವ ಹಂತವನ್ನು ತಲಪುತ್ತವೆಂಬುದು ನಿಶ್ಚಯ. (1 ಯೋಹಾನ 5:19) ಅಂತಹ ಒಂದು ಕ್ಲೇಶಕರ ಸನ್ನಿವೇಶವನ್ನು ಕ್ರೈಸ್ತರು ಹೇಗೆ ನಿಭಾಯಿಸಬೇಕು?

      15. (ಎ) ಪುನರ್ವಿವಾಹವು ಸಾಧ್ಯವಾಗಿರುವ ವಿಚ್ಛೇದಕ್ಕಾಗಿರುವ ಏಕಮಾತ್ರ ಶಾಸ್ತ್ರೀಯ ಆಧಾರವು ಯಾವುದು? (ಬಿ) ಅಪನಂಬಿಗಸ್ತ ವಿವಾಹ ಸಂಗಾತಿಯನ್ನು ವಿಚ್ಛೇದಿಸುವ ವಿರುದ್ಧವಾಗಿ ಕೆಲವರು ನಿರ್ಣಯಿಸಿದ್ದಾರೆ ಏಕೆ?

      15 ಈ ಪುಸ್ತಕದ ಅಧ್ಯಾಯ 2ರಲ್ಲಿ ತಿಳಿಸಲ್ಪಟ್ಟ ಪ್ರಕಾರ, ಪುನರ್ವಿವಾಹವು ಶಕ್ಯವಿರುವ ವಿಚ್ಛೇದಕ್ಕೆ ಏಕಮಾತ್ರ ಶಾಸ್ತ್ರೀಯ ಆಧಾರವು ಜಾರತ್ವವಾಗಿದೆ.c (ಮತ್ತಾಯ 19:9) ನಿಮ್ಮ ವಿವಾಹ ಸಂಗಾತಿಯು ಅಪನಂಬಿಗಸ್ತನಾಗಿದ್ದಾನೆಂಬ ನಿಶ್ಚಿತ ಪುರಾವೆಯು ನಿಮಗಿರುವಲ್ಲಿ, ಆಗ ಒಂದು ಕಷ್ಟದ ನಿರ್ಣಯವನ್ನು ನೀವು ಎದುರಿಸುತ್ತೀರಿ. ಆ ವಿವಾಹದಲ್ಲಿ ನೀವು ಮುಂದರಿಯುವಿರೊ ಇಲ್ಲವೆ ವಿಚ್ಛೇದವನ್ನು ಪಡೆಯುವಿರೊ? ಅದಕ್ಕೆ ನಿಯಮಗಳಿಲ್ಲ. ಕೆಲವು ಕ್ರೈಸ್ತರು ನಿಜವಾಗಿ ಪಶ್ಚಾತ್ತಾಪಿಯಾದ ಒಬ್ಬ ಸಹಭಾಗಿಯನ್ನು ಪೂರ್ತಿಯಾಗಿ ಕ್ಷಮಿಸಿದ್ದಾರೆ, ಮತ್ತು ಉಳಿಸಲ್ಪಟ್ಟ ವಿವಾಹವು ಒಳ್ಳೇದಾಗಿ ಪರಿಣಮಿಸಿದೆ. ಇತರರು ಮಕ್ಕಳ ಸಲುವಾಗಿ ವಿಚ್ಛೇದದ ವಿರುದ್ಧವಾಗಿ ನಿರ್ಣಯ ಮಾಡಿರುತ್ತಾರೆ.

      16. (ಎ) ತಮ್ಮ ತಪ್ಪಿತಸ್ಥ ವಿವಾಹ ಸಂಗಾತಿಯನ್ನು ವಿಚ್ಛೇದಿಸಲಿಕ್ಕೆ ಕೆಲವರನ್ನು ಪ್ರಚೋದಿಸಿರುವ ಕೆಲವು ಕಾರಣಾಂಶಗಳು ಯಾವುವು? (ಬಿ) ಒಬ್ಬ ನಿರ್ದೋಷಿ ವಿವಾಹ ಸಂಗಾತಿಯು ವಿಚ್ಛೇದಿಸುವುದಕ್ಕೆ ಅಥವಾ ವಿಚ್ಛೇದಿಸದಿರುವುದಕ್ಕೆ ನಿರ್ಣಯವನ್ನು ಮಾಡುವಾಗ, ಅವರ ನಿರ್ಣಯವನ್ನು ಯಾರೂ ಟೀಕಿಸಬಾರದೇಕೆ?

      16 ಮತ್ತೊಂದು ಕಡೆ, ಆ ಪಾಪಮಯ ಕೃತ್ಯವು ಗರ್ಭಧಾರಣೆಯಲ್ಲಿ, ಇಲ್ಲವೆ ಒಂದು ರತಿರವಾನಿತ ರೋಗದಲ್ಲಿ ಪರಿಣಮಿಸಿರಬಹುದು. ಅಥವಾ ಮಕ್ಕಳನ್ನು ಲೈಂಗಿಕವಾಗಿ ಅಪಪ್ರಯೋಗಿಸುವ ಒಬ್ಬ ಹೆತ್ತವನಿಂದ ರಕ್ಷಿಸುವ ಅಗತ್ಯವಿರಬಹುದು. ಸ್ಪಷ್ಟವಾಗಿ, ಒಂದು ನಿರ್ಣಯವನ್ನು ಮಾಡುವ ಮುಂಚೆ ಗಮನಿಸಬೇಕಾದ ಹೆಚ್ಚಿನ ವಿಷಯವಿದೆ. ಆದರೂ, ನಿಮ್ಮ ವಿವಾಹ ಸಹಭಾಗಿಯ ದಾಂಪತ್ಯ ದ್ರೋಹವನ್ನು ತಿಳಿದಾದ ಮೇಲೆ ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗವನ್ನು ನೀವು ಪುನರಾರಂಭಿಸುವಲ್ಲಿ, ನೀವು ನಿಮ್ಮ ಸಂಗಾತಿಯನ್ನು ಕ್ಷಮಿಸಿದ್ದೀರಿ ಮತ್ತು ವಿವಾಹದಲ್ಲಿ ಮುಂದುವರಿಯಲು ಅಪೇಕ್ಷಿಸುತ್ತೀರಿ ಎಂಬುದನ್ನು ಹೀಗೆ ನೀವು ಸೂಚಿಸುತ್ತೀರಿ. ಪುನರ್ವಿವಾಹಕ್ಕೆ ಶಾಸ್ತ್ರೀಯ ಸಾಧ್ಯತೆಯಿರುವ ವಿಚ್ಛೇದಕ್ಕೆ ಆಧಾರವು ಇನ್ನುಮುಂದೆ ಇರುವುದಿಲ್ಲ. ಯಾವನೂ ಅದರಲ್ಲಿ ತಲೆಹಾಕಿ ನಿಮ್ಮ ನಿರ್ಣಯವನ್ನು ಪ್ರಭಾವಿಸಲು ಪ್ರಯತ್ನಿಸಲೂಬಾರದು, ನೀವು ನಿರ್ಣಯವನ್ನು ಮಾಡುವಾಗ ಅದನ್ನು ಯಾವನೂ ಟೀಕಿಸಲೂಬಾರದು. ನೀವು ಏನು ನಿರ್ಣಯಿಸುತ್ತೀರೊ ಅದರ ಫಲಿತಾಂಶಗಳೊಂದಿಗೆ ನೀವು ಜೀವಿಸಬೇಕಾಗುವುದು. “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾತ್ಯ 6:5.

      ಪ್ರತ್ಯೇಕವಾಸಕ್ಕೆ ಆಧಾರಗಳು

      17. ಯಾವ ಜಾರತ್ವವೂ ಇರದಿದ್ದಲ್ಲಿ, ಪ್ರತ್ಯೇಕವಾಸ ಅಥವಾ ವಿಚ್ಛೇದದ ಮೇಲೆ ಯಾವ ಪರಿಮಿತಿಗಳನ್ನು ಶಾಸ್ತ್ರಗಳು ಇಡುತ್ತವೆ?

      17 ವಿವಾಹ ಸಂಗಾತಿಯೊಬ್ಬನು ಜಾರತ್ವವನ್ನು ಗೈಯದಿದ್ದರೂ ಅವನಿಂದ ಪ್ರತ್ಯೇಕವಾಸವನ್ನು ಅಥವಾ ಒಂದುವೇಳೆ ವಿಚ್ಛೇದವನ್ನು ತೆಗೆದುಕೊಳ್ಳುವುದನ್ನು ಸಮರ್ಥಿಸಬಹುದಾದ ಸನ್ನಿವೇಶಗಳು ಇವೆಯೊ? ಹೌದು, ಆದರೆ ಅಂತಹ ಒಂದು ವಿದ್ಯಮಾನದಲ್ಲಿ, ಕ್ರೈಸ್ತನೊಬ್ಬನು ಪುನರ್ವಿವಾಹದ ನೋಟದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಬೆನ್ನಟ್ಟಲು ಸ್ವತಂತ್ರನಾಗಿರುವುದಿಲ್ಲ. (ಮತ್ತಾಯ 5:32) ಇಂತಹ ಪ್ರತ್ಯೇಕವಾಸವನ್ನು ಬೈಬಲು ಪರಿಗಣನೆಗೆ ತೆಗೆದುಕೊಳ್ಳುತ್ತದಾದರೂ, ಅಗಲುವವನು “ಅವಿವಾಹಿತನಾಗಿರಬೇಕು ಇಲ್ಲವೆ ಪುನಃ ಸಮಾಧಾನಮಾಡಿಕೊಳ್ಳಬೇಕು” ಎಂದು ವಿಧಿಸುತ್ತದೆ. (1 ಕೊರಿಂಥ 7:11) ಪ್ರತ್ಯೇಕವಾಸವನ್ನು ಸೂಕ್ತವಾಗಿ ತೋರುವಂತೆ ಮಾಡಬಹುದಾದ ಕೆಲವು ವಿಪರೀತ ಸನ್ನಿವೇಶಗಳು ಯಾವುವು?

      18, 19. ಪುನರ್ವಿವಾಹವು ಸಾಧ್ಯವಿಲ್ಲದಿದ್ದರೂ, ನ್ಯಾಯಬದ್ಧ ಪ್ರತ್ಯೇಕವಾಸ ಅಥವಾ ವಿಚ್ಛೇದದ ಸೂಕ್ತತೆಯನ್ನು ತೂಗಿನೋಡಲು ಜೊತೆಗಾರರನ್ನು ನಡೆಸುವ ಕೆಲವು ವಿಪರೀತ ಸನ್ನಿವೇಶಗಳು ಯಾವುವು?

      18 ಒಳ್ಳೇದು, ಗಂಡನ ಪಕ್ಕಾ ಸೋಮಾರಿತನ ಮತ್ತು ದುರಭ್ಯಾಸಗಳಿಂದಾಗಿ ಒಂದು ಕುಟುಂಬವು ನಿರ್ಗತಿಕವಾಗಬಹುದು.d ಅವನು ಕುಟುಂಬದ ಆದಾಯವನ್ನು ಜೂಜಾಡಿ ಕಳೆದುಕೊಳ್ಳಬಹುದು, ಇಲ್ಲವೆ ಅಮಲೌಷಧ ಅಥವಾ ಮದ್ಯ ವ್ಯಸನಗಳನ್ನು ಪೂರೈಸಲು ಅದನ್ನು ಬಳಸಬಹುದು. ಬೈಬಲು ಅನ್ನುವುದು: “ಯಾವನಾದರೂ . . . ತನ್ನ ಮನೆವಾರ್ತೆಯ ಸದಸ್ಯರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8, NW) ಅಂಥ ಒಬ್ಬ ಮನುಷ್ಯನು ತನ್ನ ಮಾರ್ಗಗಳನ್ನು ಬದಲಾಯಿಸಲು ನಿರಾಕರಿಸುವುದಾದರೆ, ತನ್ನ ವ್ಯಸನಗಳ ಖರ್ಚಿಗೋಸ್ಕರ ಬಹುಶಃ ತನ್ನ ಹೆಂಡತಿಯು ಸಂಪಾದಿಸುವ ಹಣವನ್ನೂ ತೆಗೆದುಕೊಳ್ಳುವುದಾದರೆ, ಹೆಂಡತಿಯು ಒಂದು ನ್ಯಾಯಬದ್ಧ ಪ್ರತ್ಯೇಕವಾಸವನ್ನು ಪಡೆಯುವ ಮೂಲಕ, ತನ್ನ ಮತ್ತು ತನ್ನ ಮಕ್ಕಳ ಹಿತಾಸಕ್ತಿಯನ್ನು ಸಂರಕ್ಷಿಸಲು ಆಯ್ದುಕೊಳ್ಳಬಹುದು.

      19 ಒಬ್ಬ ಜೊತೆಗಾರನು ತನ್ನ ಸಹಭಾಗಿಯ ಕಡೆಗೆ ಅತಿರೇಕವಾಗಿ ಹಿಂಸಾಚಾರಿಯಾಗಿ ಪ್ರಾಯಶಃ ಅವಳ ಆರೋಗ್ಯ ಮತ್ತು ಅವಳ ಜೀವಕ್ಕೂ ಅಪಾಯವಾಗುವಷ್ಟರ ಮಟ್ಟಿಗೆ ಪದೇ ಪದೇ ಹೊಡೆಯುವಲ್ಲಿ ಸಹ ಅಂತಹ ನ್ಯಾಯಬದ್ಧ ಕ್ರಮವು ಪರಿಗಣಿಸಲ್ಪಡಬಹುದು. ಅಷ್ಟಲ್ಲದೆ, ಒಬ್ಬ ಜೊತೆಗಾರನು ತನ್ನ ವಿವಾಹ ಸಂಗಾತಿಯನ್ನು ಅವಳು ಯಾವುದಾದರೊಂದು ವಿಧದಲ್ಲಿ ದೇವರ ಆಜ್ಞೆಗಳನ್ನು ಮುರಿಯುವಂತೆ ಸದಾ ಒತ್ತಾಯಿಸಲು ಪ್ರಯತ್ನಿಸುವುದಾದರೆ, ವಿಶೇಷವಾಗಿ ಈ ವಿಷಯಗಳು ಆತ್ಮಿಕ ಜೀವಿತಕ್ಕೆ ಅಪಾಯವಾಗುವ ಹಂತವನ್ನು ಮುಟ್ಟುವಲ್ಲಿ, ಬೆದರಿಕೆಗೆ ಗುರಿಯಾದ ಸಂಗಾತಿಯು ಪ್ರತ್ಯೇಕವಾಸವನ್ನು ಪರಿಗಣಿಸಬಹುದು. “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾ”ಗುವ ಒಂದೇ ಮಾರ್ಗವು ಒಂದು ನ್ಯಾಯಬದ್ಧ ಪ್ರತ್ಯೇಕವಾಸವನ್ನು ಪಡೆದುಕೊಳ್ಳುವುದು ಎಂದು ಅಪಾಯದಲ್ಲಿರುವ ಜೊತೆಗಾರ್ತಿಯು ತೀರ್ಮಾನಿಸಬಹುದು.—ಅ. ಕೃತ್ಯಗಳು 5:29.

      20. (ಎ) ಒಂದು ಕುಟುಂಬದ ಮುರಿತದ ವಿದ್ಯಮಾನದಲ್ಲಿ, ಪಕ್ವತೆಯ ಸ್ನೇಹಿತರು ಮತ್ತು ಹಿರಿಯರು ಏನನ್ನು ನೀಡಬಹುದು, ಮತ್ತು ಅವರು ಏನನ್ನು ನೀಡಬಾರದು? (ಬಿ) ವಿವಾಹಿತ ವ್ಯಕ್ತಿಗಳು ಪ್ರತ್ಯೇಕವಾಸ ಮತ್ತು ವಿಚ್ಛೇದಕ್ಕಿರುವ ಬೈಬಲ್‌ ನಿರ್ದೇಶಗಳನ್ನು ಏನು ಮಾಡಲು ಒಂದು ನೆವವಾಗಿ ಉಪಯೋಗಿಸಬಾರದು?

      20 ಜೊತೆಗಾರರ ವಿಪರೀತ ದುರುಪಯೋಗದ ಎಲ್ಲ ವಿದ್ಯಮಾನಗಳಲ್ಲಿ, ಪ್ರತ್ಯೇಕವಾಸವನ್ನು ಪಡೆಯಲು ಅಥವಾ ಅವರೊಂದಿಗೆ ಉಳಿಯಲು ನಿರ್ದೋಷಿ ಸಂಗಾತಿಯ ಮೇಲೆ ಯಾರೂ ಒತ್ತಡವನ್ನು ಹಾಕಬಾರದು. ಪಕ್ವತೆಯ ಸ್ನೇಹಿತರು ಮತ್ತು ಹಿರಿಯರು ಬೆಂಬಲವನ್ನೂ ಬೈಬಲಾಧಾರಿತ ಸಲಹೆಯನ್ನೂ ಕೊಡಬಹುದಾದರೂ, ಒಬ್ಬ ಗಂಡ ಮತ್ತು ಹೆಂಡತಿಯ ಮಧ್ಯೆ ಏನು ನಡೆಯುತ್ತದೆಂಬ ಎಲ್ಲ ವಿವರಗಳನ್ನು ಇವರು ತಿಳಿಯಸಾಧ್ಯವಿಲ್ಲ. ಅದನ್ನು ಯೆಹೋವನು ಮಾತ್ರ ಕಾಣಶಕ್ತನು. ಕ್ರೈಸ್ತ ಹೆಂಡತಿಯೊಬ್ಬಳು ಒಂದು ವಿವಾಹದಿಂದ ಹೊರಬರಲು ಕ್ಷುಲ್ಲಕ ನೆವಗಳನ್ನು ಬಳಸಿದಲ್ಲಿ ದೇವರ ವಿವಾಹದೇರ್ಪಾಡನ್ನು ಆಕೆಯು ಗೌರವಿಸುವವಳಾಗುವುದಿಲ್ಲ ಎಂಬುದು ನಿಶ್ಚಯ. ಆದರೆ ಒಂದು ಅತ್ಯಂತ ಅಪಾಯಕರ ಸನ್ನಿವೇಶವು ಪಟ್ಟುಹಿಡಿಯುವುದಾದರೆ, ಅವಳು ಪ್ರತ್ಯೇಕವಾಸವನ್ನು ಆರಿಸಿಕೊಂಡಲ್ಲಿ ಯಾರೂ ಆಕೆಯನ್ನು ಟೀಕಿಸಬಾರದು. ಪ್ರತ್ಯೇಕವಾಸವನ್ನು ಹುಡುಕುವ ಒಬ್ಬ ಕ್ರೈಸ್ತ ಗಂಡನ ವಿಷಯದಲ್ಲೂ ನಿಖರವಾಗಿ ಇದೇ ವಿಷಯಗಳನ್ನು ಹೇಳಸಾಧ್ಯವಿದೆ. “ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ.”—ರೋಮಾಪುರ 14:10.

      ಮುರಿದ ವಿವಾಹವು ಉಳಿಸಲ್ಪಟ್ಟ ವಿಧ

      21. ವಿವಾಹದ ಕುರಿತ ಬೈಬಲ್‌ ಸಲಹೆಯು ಕಾರ್ಯಸಾಧಕವೆಂದು ಯಾವ ಅನುಭವವು ತೋರಿಸುತ್ತದೆ?

      21 ಆರಂಭದಲ್ಲಿ ತಿಳಿಸಲ್ಪಟ್ಟ ಲೂಚೀಯಳು ತನ್ನ ಗಂಡನಿಂದ ಪ್ರತ್ಯೇಕವಾದ ಮೂರು ತಿಂಗಳುಗಳ ಬಳಿಕ, ಅವಳು ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಿ ಅವರೊಂದಿಗೆ ಬೈಬಲನ್ನು ಅಭ್ಯಾಸಿಸಲು ಪ್ರಾರಂಭಿಸಿದಳು. “ನನ್ನ ಅತ್ಯಾಶ್ಚರ್ಯಕ್ಕೆ,” ಅವಳು ವಿವರಿಸಿದ್ದು, “ಬೈಬಲು ನನ್ನ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಿತು. ಕೇವಲ ಒಂದು ವಾರದ ಅಧ್ಯಯನದ ಅನಂತರ ನಾನು ಕೂಡಲೆ ನನ್ನ ಗಂಡನೊಂದಿಗೆ ರಾಜಿಯಾಗಲು ಬಯಸಿದೆ. ಬಿಕ್ಕಟ್ಟಿನಲ್ಲಿರುವ ವಿವಾಹಗಳನ್ನು ಉಳಿಸುವ ವಿಧವು ಯೆಹೋವನಿಗೆ ತಿಳಿದಿದೆ, ಯಾಕಂದರೆ ಆತನ ಬೋಧನೆಗಳು ಸಂಗಾತಿಗಳಿಗೆ ಒಬ್ಬರನ್ನೊಬ್ಬರು ಗೌರವದಿಂದ ಕಾಣುವುದು ಹೇಗೆಂಬುದನ್ನು ಕಲಿಸಲು ಸಹಾಯ ಮಾಡುತ್ತವೆ ಎಂದು ನಾನು ಇಂದು ಹೇಳಬಲ್ಲೆ. ಕೆಲವರು ಪ್ರತಿಪಾದಿಸುವಂತೆ, ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ವಿಭಾಗಿಸುತ್ತಾರೆಂಬುದು ಸತ್ಯವಲ್ಲ. ನನ್ನ ವಿದ್ಯಮಾನದಲ್ಲಿ, ಸರಿ ವಿರುದ್ಧವಾದುದು ಸತ್ಯವಾಯಿತು.” ಲೂಚೀಯ ಬೈಬಲ್‌ ಮೂಲತತ್ವಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಲು ಕಲಿತುಕೊಂಡಳು.

      22. ವಿವಾಹಿತ ದಂಪತಿಗಳೆಲ್ಲರೂ ಯಾವುದರಲ್ಲಿ ಭರವಸೆಯಿಡಬೇಕು?

      22 ಲೂಚೀಯ ಒಂದು ಅಪವಾದವಲ್ಲ. ವಿವಾಹವು ಒಂದು ಆಶೀರ್ವಾದವಾಗಿರಬೇಕು, ಹೊರೆಯಲ್ಲ. ಇದಕ್ಕಾಗಿಯೆ ಬರೆದಿರುವವುಗಳಲ್ಲೇ ಅತ್ಯುತ್ತಮವಾದ ವಿವಾಹ ಸಲಹೆಯ ಮೂಲವನ್ನು—ತನ್ನ ಅಮೂಲ್ಯ ವಾಕ್ಯವನ್ನು ಯೆಹೋವನು ಒದಗಿಸಿದ್ದಾನೆ. ಬೈಬಲು “ಬುದ್ಧಿಹೀನರಿಗೆ ವಿವೇಕಪ್ರದ”ವಾಗಿರಬಲ್ಲದು. (ಕೀರ್ತನೆ 19:7-11) ಮುರಿಯುವ ಹಂತದಲ್ಲಿದ್ದ ಅನೇಕ ವಿವಾಹಗಳನ್ನು ಅದು ಉಳಿಸಿದೆ ಮತ್ತು ಗಂಭೀರ ಸಮಸ್ಯೆಗಳಿದ್ದ ಬೇರೆ ಅನೇಕ ವಿವಾಹಗಳನ್ನು ಸುಧಾರಿಸಿದೆ. ಯೆಹೋವ ದೇವರು ಒದಗಿಸುವ ವಿವಾಹ ಸಲಹೆಯಲ್ಲಿ ವಿವಾಹಿತ ದಂಪತಿಗಳೆಲ್ಲರೂ ಪೂರ್ಣ ಭರವಸವಿಡುವಂತಾಗಲಿ. ಅದು ನಿಜವಾಗಿಯೂ ಕಾರ್ಯಸಾಧಕವಾಗಿದೆ!

      a ಹೆಸರನ್ನು ಬದಲಾಯಿಸಲಾಗಿದೆ.

      b ಈ ಕ್ಷೇತ್ರಗಳಲ್ಲಿ ಕೆಲವು ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಲ್ಪಟ್ಟಿವೆ.

      c “ಜಾರತ್ವ” ಎಂದು ತರ್ಜುಮೆಯಾದ ಬೈಬಲಿನ ಪದದಲ್ಲಿ, ವ್ಯಭಿಚಾರ, ಸಲಿಂಗೀಕಾಮ, ಪಶು ಸಂಭೋಗ ಮತ್ತು ಜನನೇಂದ್ರಿಯಗಳ ಉಪಯೋಗವನ್ನು ಒಳಗೊಂಡಿರುವ ಉದ್ದೇಶಪೂರ್ವಕವಾದ ಇತರ ನಿಷಿದ್ಧ ಕೃತ್ಯಗಳು ಸೇರಿರುತ್ತವೆ.

      d ಒಬ್ಬ ಗಂಡನು ಸದುದ್ದೇಶವುಳ್ಳವನಾಗಿದ್ದರೂ, ಅನಾರೋಗ್ಯ ಅಥವಾ ಉದ್ಯೋಗ ಅವಕಾಶಗಳ ಅಭಾವದಂತಹ, ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ತನ್ನ ಕುಟುಂಬಕ್ಕಾಗಿ ಒದಗಿಸಲು ಅಶಕ್ತನಾಗುವ ಸನ್ನಿವೇಶಗಳನ್ನು ಇದು ಒಳಗೊಳ್ಳುವುದಿಲ್ಲ.

      ಒಂದು ವಿವಾಹದ ಮುರಿತವನ್ನು ತಡೆಯಲಿಕ್ಕಾಗಿ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ವಿವಾಹವು ಆನಂದ ಮತ್ತು ಕಷ್ಟ ಇವೆರಡರ ಮೂಲವಾಗಿದೆ.—ಜ್ಞಾನೋಕ್ತಿ 5:18, 19; 1 ಕೊರಿಂಥ 7:28.

      ಭಿನ್ನಾಭಿಪ್ರಾಯಗಳನ್ನು ತತ್‌ಕ್ಷಣವೇ ನಿರ್ವಹಿಸಬೇಕು.—ಎಫೆಸ 4:26.

      ಒಂದು ಚರ್ಚೆಯಲ್ಲಿ, ಕಿವಿಗೊಡುವುದು ಮಾತನಾಡುವಷ್ಟೇ ಪ್ರಾಮುಖ್ಯವಾಗಿದೆ.—ಯಾಕೋಬ 1:19.

      ವಿವಾಹದ ಸಲ್ಲಿಸುವಿಕೆಯು ನಿಸ್ವಾರ್ಥತೆ ಮತ್ತು ಕೋಮಲತೆಯಿಂದ ಸಲ್ಲಿಸಲ್ಪಡಬೇಕು.—1 ಕೊರಿಂಥ 7:3-5.

  • ಜೊತೆಯಾಗಿ ವಯಸ್ಸಾದವರಾಗುತ್ತಾ ಹೋಗುವುದು
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹದಿನಾಲ್ಕು

      ಜೊತೆಯಾಗಿ ವಯಸ್ಸಾದವರಾಗುತ್ತಾ ಹೋಗುವುದು

      1, 2. (ಎ) ವಯಸ್ಸಾಗುತ್ತಾ ಹೋದಂತೆ ಯಾವ ಬದಲಾವಣೆಗಳು ಸಂಭವಿಸುತ್ತವೆ? (ಬಿ) ಬೈಬಲಿನ ಸಮಯಗಳ ದೇವಭಕ್ತ ಪುರುಷರು ಮುಪ್ಪಿನಲ್ಲಿ ಹೇಗೆ ಸಂತೃಪ್ತಿಯನ್ನು ಕಂಡುಕೊಂಡರು?

      ನಮಗೆ ವಯಸ್ಸಾಗುತ್ತಾ ಹೋದಂತೆ, ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಶಾರೀರಿಕ ಬಲಹೀನತೆಗಳು ನಮ್ಮ ಓಜಸ್ಸನ್ನು ಹೀರಿಹಾಕುತ್ತವೆ. ಕನ್ನಡಿಯಲ್ಲಿನ ಒಂದು ನೋಟವು, ಹೊಸ ಸುಕ್ಕುಗಳನ್ನು ಮತ್ತು ತಲೆಗೂದಲಿನ ಕ್ರಮೇಣ ಬಣ್ಣ ನಷ್ಟವನ್ನು—ಹಾಗೂ ಕೂದಲು ನಷ್ಟವನ್ನೂ ಹೊರಗೆಡಹುತ್ತದೆ. ನಾವು ತುಸು ಸ್ಮರಣಶಕ್ತಿಯ ನಷ್ಟವನ್ನೂ ಅನುಭವಿಸಬಹುದು. ಮಕ್ಕಳು ವಿವಾಹವಾಗುವಾಗ ಮತ್ತು ಪುನಃ ಮೊಮ್ಮಕ್ಕಳು ಆಗಮಿಸುವಾಗ ಹೊಸ ಸಂಬಂಧಗಳು ವಿಕಸಿಸುತ್ತವೆ. ಕೆಲವರಿಗಾದರೋ ಐಹಿಕ ಉದ್ಯೋಗದಿಂದ ನಿವೃತ್ತಿಯು ಒಂದು ಭಿನ್ನವಾದ ಜೀವನ ಕ್ರಮದಲ್ಲಿ ಫಲಿಸುತ್ತದೆ.

      2 ವಾಸ್ತವವಾಗಿ, ಮುಪ್ಪಿನ ವರ್ಷಗಳು ಕಷ್ಟಕರವಾಗಿರಬಲ್ಲವು. (ಪ್ರಸಂಗಿ 12:1-8) ಆದರೂ, ಬೈಬಲಿನ ಸಮಯಗಳಲ್ಲಿನ ದೇವರ ಸೇವಕರನ್ನು ಪರಿಗಣಿಸಿರಿ. ಅವರು ಕಟ್ಟಕಡೆಗೆ ಸಾವನ್ನಪ್ಪಿದರೂ, ವೃದ್ಧಾಪ್ಯದಲ್ಲಿ ಅವರಿಗೆ ಮಹಾ ಸಂತೃಪ್ತಿಯನ್ನು ತಂದ ವಿವೇಕ ಮತ್ತು ತಿಳಿವಳಿಕೆ ಇವೆರಡನ್ನೂ ಅವರು ಗಳಿಸಿಕೊಂಡರು. (ಆದಿಕಾಂಡ 25:8; 35:29; ಯೋಬ 12:12; 42:17) ಸಂತೋಷದಿಂದ ವಯಸ್ಸಾಗುತ್ತಾ ಹೋಗುವುದರಲ್ಲಿ ಅವರು ಯಶಸ್ವಿಗಳಾದದ್ದು ಹೇಗೆ? ನಿಶ್ಚಯವಾಗಿ, ನಾವಿಂದು ಬೈಬಲಿನಲ್ಲಿ ದಾಖಲೆಯಾಗಿರುವುದೆಂದು ಕಾಣುವ ಮೂಲತತ್ವಗಳಿಗೆ ಅವರು ಹೊಂದಿಕೆಯಲ್ಲಿ ಜೀವಿಸಿದುದರಿಂದಲೆ.—ಕೀರ್ತನೆ 119:105; 2 ತಿಮೊಥೆಯ 3:16, 17.

      3. ವಯಸ್ಸಾದ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪೌಲನು ಯಾವ ಸಲಹೆಯನ್ನಿತ್ತನು?

      3 ತೀತನಿಗೆ ಬರೆದ ತನ್ನ ಪತ್ರದಲ್ಲಿ, ವಯಸ್ಸಾಗುತ್ತಾ ಬರುತ್ತಿರುವವರಿಗೆ ಸ್ವಸ್ಥವಾದ ಮಾರ್ಗದರ್ಶನವನ್ನು ಅಪೊಸ್ತಲ ಪೌಲನು ನೀಡಿದ್ದಾನೆ. ಅವನು ಬರೆದುದು: “ವೃದ್ಧ ಪುರುಷರು ಮಿತಸ್ವಭಾವಿಗಳೂ ಗಂಭೀರ ಬುದ್ಧಿಯವರೂ ಸ್ವಸ್ಥಮನಸ್ಕರೂ, ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ಸಹನೆಯಲ್ಲಿ ಸ್ವಸ್ಥರೂ ಆಗಿರಲಿ. ತದ್ರೀತಿ ವೃದ್ಧ ಸ್ತ್ರೀಯರು ವರ್ತನೆಯಲ್ಲಿ ಪೂಜ್ಯತೆಯುಳ್ಳವರೂ ಚಾಡಿಹೇಳದಿರುವವರೂ ಆಗಿರಬೇಕಲ್ಲದೆ, ಬಹಳ ದ್ರಾಕ್ಷಾಮದ್ಯಕ್ಕೆ ಅಡಿಯಾಳುಗಳಾಗಿರದೆ ಒಳ್ಳೆಯದರ ಶಿಕ್ಷಕಿಯರಾಗಿರಲಿ.” (ತೀತ 2:2, 3, NW) ಈ ಮಾತುಗಳನ್ನು ಲಕ್ಷಿಸುವುದರಿಂದ ವಯಸ್ಸಾಗುತ್ತಾ ಬರುವ ಪಂಥಾಹ್ವಾನಗಳನ್ನು ಎದುರಿಸಲಿಕ್ಕೆ ನಿಮಗೆ ಸಹಾಯವಾಗಬಲ್ಲದು.

      ನಿಮ್ಮ ಮಕ್ಕಳ ಸ್ವಾವಲಂಬನೆಗೆ ಹೊಂದಿಸಿಕೊಳ್ಳಿರಿ

      4, 5. ಅನೇಕ ಹೆತ್ತವರು ತಮ್ಮ ಮಕ್ಕಳು ಮನೆಬಿಟ್ಟು ಹೋಗುವಾಗ ಹೇಗೆ ಪ್ರತಿಕ್ರಿಯಿಸುತ್ತಾರೆ, ಮತ್ತು ಕೆಲವರು ಹೊಸ ಸನ್ನಿವೇಶಕ್ಕೆ ಹೇಗೆ ಹೊಂದಿಸಿಕೊಳ್ಳುತ್ತಾರೆ?

      4 ಪಾತ್ರಗಳ ಬದಲಾವಣೆಯು ಹೊಂದಿಸಿಕೊಳ್ಳುವಿಕೆಯನ್ನು ಕೇಳಿಕೊಳ್ಳುತ್ತದೆ. ವಯಸ್ಕ ಮಕ್ಕಳು ವಿವಾಹವಾಗಿ ಮನೆಯನ್ನು ಬಿಟ್ಟುಹೋಗುವಾಗ ಇದೆಷ್ಟು ನಿಜವಾಗಿ ಪರಿಣಮಿಸುತ್ತದೆ! ಹೆಚ್ಚಿನ ಹೆತ್ತವರಿಗಾದರೋ ತಾವು ವೃದ್ಧರಾಗುತ್ತಿದ್ದೇವೆಂಬುದಕ್ಕೆ ಇದು ಪ್ರಥಮ ಮರುಜ್ಞಾಪನವಾಗಿದೆ. ತಮ್ಮ ಮಕ್ಕಳು ಪ್ರಾಪ್ತ ವಯಸ್ಕರಾದುದಕ್ಕಾಗಿ ಅವರು ಆನಂದಿಸುತ್ತಾರಾದರೂ, ತಮ್ಮ ಮಕ್ಕಳನ್ನು ಸ್ವಾವಲಂಬನೆಗಾಗಿ ತಯಾರಿಸಲು ತಾವು ಕೈಲಾದುದೆಲ್ಲವನ್ನು ಮಾಡಿದ್ದೇವೊ ಇಲ್ಲವೊ ಎಂಬುದರ ಕುರಿತು ಹೆತ್ತವರು ಆಗಾಗ ಚಿಂತಿಸುತ್ತಾರೆ. ಮತ್ತು ಮನೆಯಲ್ಲಿ ಅವರ ಅನುಪಸ್ಥಿತಿಯ ಅನಿಸಿಕೆಯೂ ಅವರಿಗಾಗಬಹುದು.

      5 ಮಕ್ಕಳು ಮನೆಬಿಟ್ಟು ಹೋದಮೇಲೂ ಹೆತ್ತವರು ತಮ್ಮ ಮಕ್ಕಳ ಹಿತಚಿಂತನೆಯಲ್ಲಿ ಆಸಕ್ತರಾಗಿ ಮುಂದುವರಿಯುವುದು ಗ್ರಾಹ್ಯವೇ. “ಅವರು ಕ್ಷೇಮವಾಗಿದ್ದಾರೆಂಬ ಆಶ್ವಾಸನೆಗಾಗಿ ಅವರಿಂದ ಆಗಿಂದಾಗ್ಗೆ ಸುದ್ದಿ ಕೇಳುವ ಸಾಧ್ಯತೆ ನನಗಿದ್ದರೆ ಅದು ನನ್ನನ್ನು ಆನಂದಪಡಿಸುವುದು,” ಎಂದು ಹೇಳಿದಳು ಒಬ್ಬ ತಾಯಿ. ಒಬ್ಬ ತಂದೆಯು ಹೇಳುವುದು: “ನಮ್ಮ ಮಗಳು ಮನೆಬಿಟ್ಟು ಹೋದಾಗ, ಅದು ಅತಿ ಕಷ್ಟದ ಸಮಯವಾಗಿತ್ತು. ಅದು ನಮ್ಮ ಕುಟುಂಬದಲ್ಲಿ ಬಹಳ ದೊಡ್ಡ ತೆರಪನ್ನು ಬಿಟ್ಟುಹೋಯಿತು, ಯಾಕಂದರೆ ನಾವು ಯಾವಾಗಲೂ ಎಲ್ಲವನ್ನೂ ಒಂದುಗೂಡಿ ನಡೆಸುತ್ತಿದ್ದೆವು.” ತಮ್ಮ ಮಕ್ಕಳ ಅನುಪಸ್ಥಿತಿಯನ್ನು ಈ ಹೆತ್ತವರು ಹೇಗೆ ನಿಭಾಯಿಸಿದ್ದಾರೆ? ಅನೇಕ ವಿದ್ಯಮಾನಗಳಲ್ಲಿ, ಬೇರೆ ಜನರ ಕಡೆಗೆ ಚಿಂತನೆಯನ್ನು ತೋರಿಸುತ್ತಾ ಅವರಿಗೆ ಸಹಾಯ ಮಾಡುವ ಮೂಲಕವೇ.

      6. ಕುಟುಂಬ ಸಂಬಂಧಗಳನ್ನು ಅದರ ಯೋಗ್ಯ ನೋಟದಲ್ಲಿಡಲು ಯಾವುದು ಸಹಾಯ ಮಾಡುತ್ತದೆ?

      6 ಮಕ್ಕಳು ವಿವಾಹವಾಗುವಾಗ, ಹೆತ್ತವರ ಪಾತ್ರವು ಬದಲಾಗುತ್ತದೆ. ಆದಿಕಾಂಡ 2:24 ಹೇಳುವುದು: “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು.” (ಓರೆಅಕ್ಷರಗಳು ನಮ್ಮವು.) ತಲೆತನದ ದೈವಿಕ ಮೂಲತತ್ವಗಳ ಒಂದು ಗ್ರಹಿಕೆ, ಮತ್ತು ಒಳ್ಳೆಯ ಕ್ರಮವು ವಿಷಯಗಳನ್ನು ಯೋಗ್ಯ ನೋಟದಲ್ಲಿಡಲು ಹೆತ್ತವರಿಗೆ ನೆರವಾಗುವುದು.—1 ಕೊರಿಂಥ 11:3; 14:33, 40.

      7. ಒಬ್ಬ ತಂದೆಯು ತನ್ನ ಪುತ್ರಿಯರು ವಿವಾಹವಾಗಿ ಮನೆಬಿಟ್ಟಾಗ ಯಾವ ಉತ್ತಮ ಮನೋಭಾವವನ್ನು ಬೆಳೆಸಿಕೊಂಡನು?

      7 ಒಬ್ಬ ದಂಪತಿಗಳ ಇಬ್ಬರು ಪುತ್ರಿಯರು ವಿವಾಹವಾಗಿ ದೂರಹೋದ ಮೇಲೆ, ದಂಪತಿಗಳಿಗೆ ತಮ್ಮ ಜೀವನದಲ್ಲಿ ಶೂನ್ಯತೆಯ ಅನಿಸಿಕೆಯಾಯಿತು. ಮೊದಮೊದಲು ಗಂಡನು ತನ್ನ ಅಳಿಯಂದಿರನ್ನು ತೀವ್ರ ಅಸಮಾಧಾನದಿಂದ ನೋಡಿದನು. ಆದರೆ ತಲೆತನದ ಮೂಲತತ್ವದ ಮೇಲೆ ಅವನು ಯೋಚಿಸಿದಂತೆ, ತನ್ನ ಪುತ್ರಿಯರ ಗಂಡಂದಿರು ಅವರವರ ಮನೆವಾರ್ತೆಗಳಿಗೆ ಈಗ ಜವಾಬ್ದಾರರಾಗಿದ್ದಾರೆಂಬುದನ್ನು ಗ್ರಹಿಸಿಕೊಂಡನು. ಆದುದರಿಂದ, ಅವನ ಪುತ್ರಿಯರು ಬುದ್ಧಿವಾದಕ್ಕಾಗಿ ಕೇಳಿದಾಗ, ಅವರ ಗಂಡಂದಿರು ಏನು ಯೋಚಿಸಿದರೆಂದು ಅವನು ಕೇಳಿದನು, ಮತ್ತು ಅನಂತರ ತಾನು ಆದಷ್ಟು ಬೆಂಬಲವನ್ನು ಕೊಡಲು ನಿಶ್ಚೈಸಿದನು. ಅವನ ಅಳಿಯಂದಿರು ಈಗ ಅವನನ್ನು ಒಬ್ಬ ಸ್ನೇಹಿತನೋಪಾದಿ ವೀಕ್ಷಿಸಿ ಅವನ ಸಲಹೆಯನ್ನು ಸ್ವಾಗತಿಸುತ್ತಾರೆ.

      8, 9. ಕೆಲವು ಹೆತ್ತವರು ತಮ್ಮ ಬೆಳೆದ ಮಕ್ಕಳ ಸ್ವಾವಲಂಬನೆಗೆ ಹೇಗೆ ಹೊಂದಿಕೊಂಡಿದ್ದಾರೆ?

      8 ನವವಿವಾಹಿತರು, ಅಶಾಸ್ತ್ರೀಯವಾದದ್ದೇನನ್ನೂ ಮಾಡದಿದ್ದರೂ, ಹೆತ್ತವರು ಅತ್ಯುತ್ತಮವೆಂದೆಣಿಸುವ ಸಂಗತಿಯನ್ನು ಮಾಡದೆ ಹೋದರೆ ಆಗೇನು? “ಯೆಹೋವನ ದೃಷ್ಟಿಕೋನವನ್ನು ಕಾಣುವಂತೆ ನಾವು ಯಾವಾಗಲೂ ಅವರಿಗೆ ಸಹಾಯ ಮಾಡುತ್ತೇವೆ,” ಎಂದು ವಿವರಿಸುತ್ತಾರೆ ವಿವಾಹಿತ ಮಕ್ಕಳಿರುವ ಒಬ್ಬ ದಂಪತಿಗಳು, “ಆದರೆ ಅವರ ನಿರ್ಣಯಗಳಲ್ಲೊಂದನ್ನು ನಾವು ಒಪ್ಪದಿದ್ದರೆ, ಅದನ್ನು ಸ್ವೀಕರಿಸಿ ಅವರಿಗೆ ನಮ್ಮ ಬೆಂಬಲವನ್ನೂ ಉತ್ತೇಜನವನ್ನೂ ನೀಡುತ್ತೇವೆ.”

      9 ಏಷಿಯಾದ ಕೆಲವು ದೇಶಗಳಲ್ಲಿ, ತಮ್ಮ ಪುತ್ರರ ಸ್ವಾವಲಂಬನೆಯನ್ನು ಸ್ವೀಕರಿಸಲು ಕೆಲವು ತಾಯಂದಿರಿಗೆ ವಿಶೇಷವಾಗಿ ಕಷ್ಟಕರವಾಗಿ ಕಾಣುತ್ತದೆ. ಆದರೂ ಅವರು ಕ್ರಿಸ್ತೀಯ ಕ್ರಮವನ್ನು ಮತ್ತು ತಲೆತನವನ್ನು ಗೌರವಿಸುವುದಾದರೆ, ತಮ್ಮ ಸೊಸೆಯಂದಿರೊಂದಿಗೆ ಘರ್ಷಣೆಯು ಬಹಳಷ್ಟು ಕಡಿಮೆಯಾಗುವುದನ್ನು ಕಾಣುತ್ತಾರೆ. ಕುಟುಂಬ ಗೃಹದಿಂದ ಪುತ್ರರ ನಿರ್ಗಮನವು “ಸದಾ ವೃದ್ಧಿಯಾಗುತ್ತಿರುವ ಕೃತಜ್ಞತೆಯ ಮೂಲ”ವಾಗಿರುತ್ತದೆ ಎಂದು ಒಬ್ಬ ಕ್ರೈಸ್ತ ಸ್ತ್ರೀಯು ಕಂಡುಕೊಳ್ಳುತ್ತಾಳೆ. ತಮ್ಮ ಹೊಸ ಮನೆವಾರ್ತೆಗಳನ್ನು ನಿಭಾಯಿಸುವ ಅವರ ಕುಶಲತೆಯನ್ನು ಕಾಣುವುದು ಅವಳನ್ನು ಪುಳಕಿತಗೊಳಿಸುತ್ತದೆ. ಪ್ರತಿಯಾಗಿ ಇದು, ಅವಳೂ ಅವಳ ಗಂಡನೂ ವಯಸ್ಸಾಗುತ್ತಾ ಬರುವಾಗ ಹೊರಬೇಕಾಗಿರುವ ಶಾರೀರಿಕ ಮತ್ತು ಮಾನಸಿಕ ಭಾರದ ಹಗುರಗೊಳಿಸುವಿಕೆಯ ಅರ್ಥದಲ್ಲಿರುವಂತಾಗಿದೆ.

      ನಿಮ್ಮ ವಿವಾಹ ಬಂಧವನ್ನು ಮರುಚೇತರಿಸುವುದು

      [ಪುಟ 166ರಲ್ಲಿರುವ ಚಿತ್ರ]

      ನೀವು ಹೆಚ್ಚು ವಯಸ್ಸಾದವರಾಗುತ್ತಾ ಹೋದಂತೆ, ಒಬ್ಬರಿಗೊಬ್ಬರು ನಿಮ್ಮ ಪ್ರೀತಿಯನ್ನು ಪುನಃ ದೃಢೀಕರಿಸಿರಿ

      10, 11. ನಡುಪ್ರಾಯದ ಕೆಲವು ಪಾಶಗಳನ್ನು ವರ್ಜಿಸಲು ಯಾವ ಶಾಸ್ತ್ರೀಯ ಸಲಹೆಯು ಜನರಿಗೆ ಸಹಾಯ ಮಾಡುವುದು?

      10 ನಡು ಪ್ರಾಯವನ್ನು ತಲಪುವುದನ್ನು ಜನರು ಅನೇಕ ವಿಧಗಳಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವು ಪುರುಷರು ಯುವಕರಾಗಿ ತೋರಿಬರುವ ಪ್ರಯತ್ನದಲ್ಲಿ ವಿಭಿನ್ನವಾಗಿ ಉಡುಪನ್ನು ಉಡುತ್ತಾರೆ. ಅನೇಕ ಹೆಂಗಸರು ಋತುಬಂಧವು ತರುವಂತಹ ಬದಲಾವಣೆಗಳ ಕುರಿತು ಚಿಂತಿಸುತ್ತಾರೆ. ಶೋಚನೀಯವಾಗಿ, ಕೆಲವು ನಡುಪ್ರಾಯದ ವ್ಯಕ್ತಿಗಳು, ವಿರುದ್ಧ ಲಿಂಗದ ಯುವ ಸದಸ್ಯರೊಂದಿಗೆ ಲಲ್ಲೆಹೊಡೆಯುವ ಮೂಲಕ ತಮ್ಮ ಸಂಗಾತಿಗಳನ್ನು ತೀವ್ರ ಅಸಮಾಧಾನಕ್ಕೆ ಮತ್ತು ಈರ್ಷ್ಯೆಗೆ ಪ್ರಚೋದಿಸುತ್ತಾರೆ. ದೈವಭಕ್ತಿಯ ಹಿರಿಯ ಪುರುಷರಾದರೊ “ಸ್ವಸ್ಥಚಿತ್ತರಾಗಿ” ಇದ್ದು, ಅಯುಕ್ತವಾದ ಅಭಿಲಾಷೆಗಳನ್ನು ನಿಗ್ರಹಿಸುತ್ತಾರೆ. (1 ಪೇತ್ರ 4:7) ತದ್ರೀತಿ ಪಕ್ವತೆಯ ಸ್ತ್ರೀಯರು, ತಮ್ಮ ಗಂಡಂದಿರಿಗಾಗಿರುವ ಪ್ರೀತಿಯಿಂದಾಗಿ ಮತ್ತು ಯೆಹೋವನನ್ನು ಮೆಚ್ಚಿಸುವ ಅಪೇಕ್ಷೆಯಿಂದಾಗಿ ತಮ್ಮ ವಿವಾಹಗಳ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾರ್ಯನಡಿಸುತ್ತಾರೆ.

      11 “ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ ಹಿತವನ್ನೇ ಮಾಡುತ್ತಾ” ತನ್ನ ಗಂಡನಿಗಾಗಿ ಪ್ರತಿಫಲವನ್ನೀಯುವ “ಗುಣವತಿ [“ಸಮರ್ಥೆ,” NW]ಯಾದ ಸತಿ”ಯ ಸ್ತುತಿಯನ್ನು ಅರಸನಾದ ಲೆಮೂವೇಲನು ಪ್ರೇರಿತನಾಗಿ ದಾಖಲಿಸಿದನು. ನಡು ವಯಸ್ಸಿನಲ್ಲಿ ಅನುಭವಿಸುವ ಯಾವುದೇ ಮಾನಸಿಕ ಕ್ಷೋಭೆಯನ್ನು ನಿಭಾಯಿಸಲು ತನ್ನ ಹೆಂಡತಿಯು ಹೇಗೆ ಪರಿಶ್ರಮಿಸುತ್ತಾಳೆಂಬುದನ್ನು ಗಣ್ಯಮಾಡಲು ಒಬ್ಬ ಕ್ರೈಸ್ತ ಗಂಡನು ತಪ್ಪಲಾರನು. ಅವನ ಪ್ರೀತಿಯು ಆಕೆಯನ್ನು “ಕೊಂಡಾಡು”ವುದಕ್ಕೆ ಅವನನ್ನು ಪ್ರೇರೇಪಿಸುವುದು. (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 31:10, 12, 28.

      12. ವರ್ಷಗಳು ಸಂದಂತೆ ದಂಪತಿಗಳು ಹೇಗೆ ಒಂದುಗೂಡಿ ಒತ್ತಾಗಿ ಬೆಳೆಯಬಲ್ಲರು?

      12 ಮಕ್ಕಳ ಪಾಲನೆ ಪೋಷಣೆಯ ಕಾರ್ಯಮಗ್ನ ವರ್ಷಗಳಲ್ಲಿ, ನಿಮ್ಮ ಮಕ್ಕಳ ಅಗತ್ಯಗಳನ್ನು ನೋಡಿಕೊಳ್ಳಲು ನೀವಿಬ್ಬರೂ ಸಂತೋಷದಿಂದ ನಿಮ್ಮ ವೈಯಕ್ತಿಕ ಅಪೇಕ್ಷೆಗಳನ್ನು ಬದಿಗೊತ್ತಿರಬಹುದು. ಅವರ ನಿರ್ಗಮನದ ಬಳಿಕ ನಿಮ್ಮ ವಿವಾಹಿತ ಜೀವನಕ್ಕೆ ಪುನಃ ಕೇಂದ್ರೀಕರಿಸುವ ಸಮಯವು ಅದಾಗಿದೆ. “ನನ್ನ ಪುತ್ರಿಯರು ಮನೆಬಿಟ್ಟಾಗ,” ಒಬ್ಬ ಗಂಡನು ಹೇಳುವುದು, “ನಾನು ನನ್ನ ಹೆಂಡತಿಯೊಂದಿಗೆ ತಿರುಗೊಮ್ಮೆ ಪ್ರಣಯಾಚರಣೆ ಆರಂಭಿಸಿದೆ.” ಮತ್ತೊಬ್ಬ ಗಂಡನು ಹೇಳುವುದು: “ನಾವು ಪರಸ್ಪರ ಆರೋಗ್ಯಕ್ಕೆ ಗಮನಕೊಡುತ್ತೇವೆ ಮತ್ತು ವ್ಯಾಯಾಮ ಮಾಡುವ ಅಗತ್ಯವನ್ನು ಒಬ್ಬರಿಗೊಬ್ಬರು ನೆನಪಿಸುತ್ತೇವೆ.” ಒಂಟಿತನ ಭಾಸವಾಗದಂತೆ ಅವನೂ ಅವನ ಹೆಂಡತಿಯೂ ಸಭೆಯ ಇತರ ಸದಸ್ಯರಿಗೆ ಅತಿಥಿಸತ್ಕಾರ ತೋರಿಸುತ್ತಾರೆ. ಹೌದು, ಇತರರಲ್ಲಿ ಆಸಕ್ತಿಯನ್ನು ತೋರಿಸುವುದು, ಆಶೀರ್ವಾದಗಳನ್ನು ತರುತ್ತದೆ. ಅಷ್ಟಲ್ಲದೆ, ಅದು ಯೆಹೋವನನ್ನು ಮೆಚ್ಚಿಸುತ್ತದೆ.—ಫಿಲಿಪ್ಪಿ 2:4; ಇಬ್ರಿಯ 13:2, 16.

      13. ಒಬ್ಬ ದಂಪತಿಗಳು ಒಟ್ಟಾಗಿ ಹೆಚ್ಚು ಮುಪ್ಪಿಗೆ ಬೆಳೆಯುವಾಗ, ಬಿಚ್ಚುಮನ ಮತ್ತು ಪ್ರಾಮಾಣಿಕತೆಯು ಯಾವ ಪಾತ್ರವನ್ನು ವಹಿಸುತ್ತವೆ?

      13 ನಿಮ್ಮ ಮತ್ತು ನಿಮ್ಮ ಜೊತೆಗಾರರ ಮಧ್ಯೆ ಒಂದು ಸಂವಾದದ ತೆರಪು ವಿಕಸಿಸುವಂತೆ ಬಿಡಬೇಡಿರಿ. ಮುಚ್ಚುಮರೆಯಿಲ್ಲದೆ ಮಾತನಾಡಿರಿ. (ಜ್ಞಾನೋಕ್ತಿ 17:27) “ಒಬ್ಬರನ್ನೊಬ್ಬರು ಲಕ್ಷಿಸುವ ಮೂಲಕ ಮತ್ತು ಪರಿಗಣನೆಯಿಂದಿರುವ ಮೂಲಕ ನಾವು ಪರಸ್ಪರ ಸಾಮರಸ್ಯವನ್ನು ಆಳಗೊಳಿಸುತ್ತೇವೆ,” ಎಂದು ಹೇಳುತ್ತಾನೆ ಒಬ್ಬ ಗಂಡ. ಅವನ ಹೆಂಡತಿಯು ಒಪ್ಪುತ್ತಾ ಹೇಳುವುದು: “ನಮಗೆ ಹೆಚ್ಚು ವಯಸ್ಸಾದ ಹಾಗೆ, ಒಂದುಗೂಡಿ ಚಹಾ ಕುಡಿಯುವುದರಲ್ಲಿ, ಸಂಭಾಷಿಸುವುದರಲ್ಲಿ, ಮತ್ತು ಒಬ್ಬರೊಂದಿಗೊಬ್ಬರು ಸಹಕರಿಸುವುದರಲ್ಲಿ ನಾವು ಆನಂದಿಸಲು ತೊಡಗಿದ್ದೇವೆ.” ನಿಮ್ಮ ಬಿಚ್ಚು ಮನಸ್ಸು ಮತ್ತು ಯಥಾರ್ಥತೆಯು ನಿಮ್ಮ ವಿವಾಹ ಬಂಧವನ್ನು ಬಿಗಿಮಾಡಲು ಸಹಾಯ ಮಾಡುತ್ತದೆ, ವಿವಾಹ ಭಂಜಕನಾದ ಸೈತಾನನ ಆಕ್ರಮಣಗಳನ್ನು ಮುರಿಯುವಂತೆ ಮಾಡುವ ದೃಢತೆಯನ್ನು ಅದಕ್ಕೆ ಕೊಡುತ್ತದೆ.

      ನಿಮ್ಮ ಮೊಮ್ಮಕ್ಕಳಲ್ಲಿ ಆನಂದಿಸಿರಿ

      14. ತಿಮೊಥೆಯನು ಒಬ್ಬ ಕ್ರೈಸ್ತನಾಗಿ ಬೆಳೆಯುವುದರಲ್ಲಿ ಅವನ ಅಜ್ಜಿಯು ಯಾವ ಪಾತ್ರವಹಿಸಿದಳೆಂಬುದು ಸ್ಫುಟ?

      14 ಮೊಮ್ಮಕ್ಕಳು ವೃದ್ಧರ “ಕಿರೀಟ”ವಾಗಿದ್ದಾರೆ. (ಜ್ಞಾನೋಕ್ತಿ 17:6) ಮೊಮ್ಮಕ್ಕಳ ಸಾಹಚರ್ಯವು ನಿಜವಾಗಿಯೂ ಉಲ್ಲಾಸಕರ—ಸಜೀವಭರಿತ ಮತ್ತು ಚೈತನ್ಯಕರ—ವಾಗಿರಬಲ್ಲದು. ತನ್ನ ಮಗಳಾದ ಯೂನೀಕೆಯ ಜೊತೆಗೂಡಿಕೊಂಡು, ಶಿಶುವಾಗಿದ್ದ ತನ್ನ ಮೊಮ್ಮಗ ತಿಮೊಥೆಯನೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಂಡ ಒಬ್ಬ ಅಜ್ಜಿಯಾದ ಲೋವಿಯ ಕುರಿತಾಗಿ ಬೈಬಲು ಸದಭಿಪ್ರಾಯದಿಂದ ಮಾತಾಡುತ್ತದೆ. ತನ್ನ ತಾಯಿ ಮತ್ತು ತನ್ನ ಅಜ್ಜಿ ಇಬ್ಬರೂ ಬೈಬಲ್‌ ಸತ್ಯವನ್ನು ಅಮೂಲ್ಯವೆಂದೆಣಿಸಿದರೆಂಬ ಅರಿವಿನೊಂದಿಗೆ ಈ ಬಾಲಕನು ಬೆಳೆದನು.—2 ತಿಮೊಥೆಯ 1:5; 3:14, 15.

      15. ಮೊಮ್ಮಕ್ಕಳ ಸಂಬಂಧದಲ್ಲಿ ಅಜ್ಜಅಜ್ಜಿಯರು ಯಾವ ಬೆಲೆಯುಳ್ಳ ಸಹಾಯವನ್ನು ಕೊಡಬಲ್ಲರು, ಆದರೆ ಅವರು ಏನನ್ನು ವರ್ಜಿಸಬೇಕು?

      15 ಹೀಗಿರುವಾಗ ಅಜ್ಜಅಜ್ಜಿಯರು ಒಂದು ಅತ್ಯಂತ ಬೆಲೆಯುಳ್ಳ ಸಹಾಯವನ್ನು ಕೊಡಸಾಧ್ಯವಿರುವ ಒಂದು ವಿಶೇಷ ಕ್ಷೇತ್ರವು ಇಲ್ಲಿದೆ. ಅಜ್ಜಅಜ್ಜಿಯರೇ, ಯೆಹೋವನ ಉದ್ದೇಶಗಳ ನಿಮ್ಮ ಜ್ಞಾನವನ್ನು ಈಗಾಗಲೇ ನೀವು ನಿಮ್ಮ ಮಕ್ಕಳೊಂದಿಗೆ ಹಂಚಿಕೊಂಡಿದ್ದೀರಿ. ತಿರುಗಿ ಈಗ ಇನ್ನೊಂದು ಸಂತತಿಯೊಂದಿಗೆ ನೀವು ಅದೇ ರೀತಿ ಮಾಡಬಲ್ಲಿರಿ! ಹೆಚ್ಚಿನ ಎಳೆಯ ಮಕ್ಕಳು ತಮ್ಮ ಅಜ್ಜಅಜ್ಜಿಯರು ವಿವರಿಸುವ ಬೈಬಲ್‌ ಕಥೆಗಳನ್ನು ಕೇಳಲು ರೋಮಾಂಚಗೊಳ್ಳುತ್ತಾರೆ. ನಿಶ್ಚಯವಾಗಿಯೂ, ತನ್ನ ಮಕ್ಕಳಲ್ಲಿ ಬೈಬಲ್‌ ಸತ್ಯತೆಗಳನ್ನು ಬೇರೂರಿಸುವುದಕ್ಕೆ ತಂದೆಗಿರುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳುವುದಿಲ್ಲ. (ಧರ್ಮೋಪದೇಶಕಾಂಡ 6:7) ಬದಲಿಗೆ ಅದಕ್ಕೆ ಭರ್ತಿಮಾಡುತ್ತೀರಿ. ನಿಮ್ಮ ಪ್ರಾರ್ಥನೆಯು ಆ ಕೀರ್ತನೆಗಾರನಂತಹದ್ದಾಗಿರಲಿ: “ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”—ಕೀರ್ತನೆ 71:18; 78:5, 6.

      16. ತಮ್ಮ ಕುಟುಂಬದಲ್ಲಿ ಬೆಳೆಯುತ್ತಿರುವ ಮನಸ್ತಾಪದ ಕಾರಣವಾಗುವುದನ್ನು ಅಜ್ಜಅಜ್ಜಿಯರು ಹೇಗೆ ತಡೆಯಬಲ್ಲರು?

      16 ಶೋಚನೀಯವಾಗಿ, ಕೆಲವು ಅಜ್ಜಅಜ್ಜಿಯರು ಎಳೆಯರನ್ನು ಎಷ್ಟು ಮುದ್ದಿಸುತ್ತಾರೆಂದರೆ, ಅಜ್ಜಅಜ್ಜಿಯರು ಮತ್ತು ಅವರ ಬೆಳೆದ ಮಕ್ಕಳ ನಡುವೆ ಬಿಗುಪುಗಳು ವಿಕಸಿಸುತ್ತವೆ. ಆದರೂ, ನಿಮ್ಮ ಪ್ರಾಮಾಣಿಕ ದಯೆಯು, ಪ್ರಾಯಶಃ ನಿಮ್ಮ ಮೊಮ್ಮಕ್ಕಳಿಗೆ, ತಮ್ಮ ಹೆತ್ತವರಿಗೆ ತಿಳಿಸಲು ಒಲ್ಲದ ವಿಷಯಗಳನ್ನು ನಿಮಗೆ ಗುಟ್ಟಿನಲ್ಲಿ ಹೇಳಿಬಿಡುವುದನ್ನು ಸುಲಭವನ್ನಾಗಿ ಮಾಡಬಹುದು. ತಮ್ಮ ಲೋಲುಪ ಅಜ್ಜಅಜ್ಜಿಯರು ತಮ್ಮ ಹೆತ್ತವರ ವಿರುದ್ಧ ತಮ್ಮ ಪಕ್ಷವಹಿಸುವರೆಂದು ಕೆಲವು ಸಲ ಎಳೆಯರು ನಿರೀಕ್ಷಿಸುತ್ತಾರೆ. ಆಗ ಏನು? ವಿವೇಕವನ್ನುಪಯೋಗಿಸಿರಿ, ಮತ್ತು ನಿಮ್ಮ ಮೊಮ್ಮಕ್ಕಳು ತಮ್ಮ ಹೆತ್ತವರೊಂದಿಗೆ ಮುಚ್ಚುಮರೆಯಿಲ್ಲದೆ ಇರುವಂತೆ ಪ್ರೋತ್ಸಾಹಿಸಿರಿ. ಇದು ಯೆಹೋವನನ್ನು ಮೆಚ್ಚಿಸುತ್ತದೆಂದು ನೀವು ವಿವರಿಸಸಾಧ್ಯವಿದೆ. (ಎಫೆಸ 6:1-3) ಅವಶ್ಯವಿದ್ದರೆ, ನೀವಾಗಿಯೇ ಅವರ ಹೆತ್ತವರೊಂದಿಗೆ ಮುಂಚಿತವಾಗಿ ಮಾತನಾಡುವ ಮೂಲಕ ಎಳೆಯರು ಅವರನ್ನು ಸಮೀಪಿಸುವಂತೆ ದಾರಿಸಿದ್ಧಮಾಡಿಕೊಳ್ಳಲು ನೀಡಿಕೊಳ್ಳಬಹುದು. ವರುಷಗಳುದ್ದಕ್ಕೂ ನೀವು ಕಲಿತಿರುವ ವಿಷಯಗಳ ಕುರಿತು ನಿಮ್ಮ ಮೊಮ್ಮಕ್ಕಳಿಗೆ ಮುಚ್ಚುಮರೆಯಿಲ್ಲದೆ ತಿಳಿಸಿರಿ. ನಿಮ್ಮ ಪ್ರಾಮಾಣಿಕತೆ ಮತ್ತು ನಿಷ್ಕಪಟತೆಯು ಅವರಿಗೆ ಪ್ರಯೋಜನಕರವಾಗಿರಸಾಧ್ಯ.

      ವಯಸ್ಸಾದಂತೆ ಹೊಂದಿಸಿಕೊಳ್ಳಿರಿ

      17. ವೃದ್ಧರಾಗುತ್ತಿರುವ ಕ್ರೈಸ್ತರು ಕೀರ್ತನೆಗಾರನ ಯಾವ ದೃಢನಿಶ್ಚಯವನ್ನು ಅನುಕರಿಸಬೇಕು?

      17 ವಯಸ್ಸು ಸಂದಷ್ಟಕ್ಕೆ ನೀವು ಹಿಂದೆ ಮಾಡಿದುದೆಲ್ಲವನ್ನು ಅಥವಾ ಮಾಡಬಯಸುವುದೆಲ್ಲವನ್ನು ಮಾಡಲಾರಿರೆಂದು ಕಂಡುಕೊಳ್ಳುವಿರಿ. ಮುಪ್ಪಿನ ಕಾರ್ಯಗತಿಯನ್ನು ಒಬ್ಬನು ಸ್ವೀಕರಿಸುವುದೂ ಅದರೊಂದಿಗೆ ವ್ಯವಹರಿಸುವವನಾಗುವುದೂ ಹೇಗೆ? ನಿಮ್ಮ ಮನಸ್ಸಿನಲ್ಲಿ ನೀವು 30 ವರ್ಷ ವಯಸ್ಸಿನವರೆಂಬ ಭಾವನೆ ನಿಮಗಾಗಬಹುದು, ಆದರೆ ಕನ್ನಡಿಯಲ್ಲಿನ ಒಂದು ನಸುನೋಟವು, ವಿಭಿನ್ನವಾದ ವಾಸ್ತವಿಕತೆಯನ್ನು ಹೊರಗೆಡಹುತ್ತದೆ. ಧೈರ್ಯಗೆಡದಿರ್ರಿ. ಕೀರ್ತನೆಗಾರನು ಯೆಹೋವನಿಗೆ ವಿಜ್ಞಾಪಿಸಿದ್ದು: “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.” ಕೀರ್ತನೆಗಾರನನ್ನು ಅನುಕರಿಸುವುದನ್ನು ನಿಮ್ಮ ನಿರ್ಧಾರವನ್ನಾಗಿ ಮಾಡಿರಿ. ಅವನಂದದ್ದು: “ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು.”—ಕೀರ್ತನೆ 71:9, 14.

      18. ಒಬ್ಬ ಪಕ್ವತೆಯ ಕ್ರೈಸ್ತನು ಉದ್ಯೋಗ ನಿವೃತ್ತಿಯ ಅಮೂಲ್ಯ ಉಪಯೋಗವನ್ನು ಹೇಗೆ ಮಾಡಬಲ್ಲನು?

      18 ಅನೇಕರು ಐಹಿಕ ಉದ್ಯೋಗದಿಂದ ನಿವೃತ್ತಿಪಡೆದ ಮೇಲೆ ಯೆಹೋವನಿಗೆ ತಮ್ಮ ಸ್ತುತಿಯನ್ನು ಹೆಚ್ಚಿಸಲು ಮೊದಲೇ ಸಿದ್ಧತೆಯನ್ನು ಮಾಡಿದ್ದಾರೆ. “ನಮ್ಮ ಮಗಳು ಶಾಲೆಬಿಟ್ಟಾಗ ನಾನು ಏನು ಮಾಡುವೆನೆಂದು ಮುಂಚೆಯೇ ಯೋಜಿಸಿಟ್ಟಿದ್ದೆ,” ಎಂದು ವಿವರಿಸುತ್ತಾನೆ, ಈಗ ನಿವೃತ್ತಿ ಹೊಂದಿರುವ ಒಬ್ಬ ತಂದೆ. “ಪೂರ್ಣ ಸಮಯದ ಸಾರುವ ಶುಶ್ರೂಷೆಯನ್ನು ಆರಂಭಿಸುವೆನೆಂದು ನಾನು ನಿಶ್ಚಯಿಸಿದೆ, ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ಮುಕ್ತನಾಗಿರುವಂತೆ ನಾನು ನನ್ನ ವ್ಯಾಪಾರವನ್ನು ಮಾರಿಬಿಟ್ಟೆ. ನಾನು ದೇವರ ನಿರ್ದೇಶನಕ್ಕಾಗಿ ಪ್ರಾರ್ಥಿಸಿದೆ.” ನಿವೃತ್ತಿಹೊಂದುವ ವಯಸ್ಸನ್ನು ನೀವು ಸಮೀಪಿಸುತ್ತಿದ್ದೀರಾದರೆ, ನಮ್ಮ ಮಹಾ ನಿರ್ಮಾಣಿಕನ ಘೋಷಣೆಯಿಂದ ಸಾಂತ್ವನವನ್ನು ಪಡೆದುಕೊಳ್ಳಿರಿ: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.”—ಯೆಶಾಯ 46:4.

      19. ವಯಸ್ಸಾಗುತ್ತಾ ಬರುತ್ತಿರುವವರಿಗೆ ಯಾವ ಸಲಹೆಯನ್ನು ನೀಡಲಾಗಿದೆ?

      19 ಐಹಿಕ ಉದ್ಯೋಗದಿಂದ ನಿವೃತ್ತಿಯ ಸ್ಥಿತಿಗೆ ಹೊಂದಿಸಿಕೊಳ್ಳುವುದು ಸುಲಭವಾಗದೆ ಇದ್ದೀತು. ವಯಸ್ಸಾದ ಪುರುಷರು “ಮಿತ ಸ್ವಭಾವಿ”ಗಳಾಗಿರಬೇಕೆಂದು ಪೌಲನು ಸಲಹೆ ನೀಡಿದನು. ಇದು ಸಾಮಾನ್ಯ ನಿಗ್ರಹವನ್ನು ಕೇಳಿಕೊಳ್ಳುತ್ತದೆ, ಆರಾಮದ ಜೀವನವನ್ನು ಹುಡುಕುವ ಪ್ರವೃತ್ತಿಗೆ ಆಸ್ಪದಕೊಡುವುದನ್ನಲ್ಲ. ನಿವೃತ್ತಿಯ ಅನಂತರ ಮುಂಚಿಗಿಂತಲೂ ಹೆಚ್ಚಾಗಿ ಕ್ರಮಬದ್ಧತೆ ಮತ್ತು ಸ್ವಶಿಸ್ತಿನ ಒಂದು ಅಗತ್ಯವು ಇದ್ದೀತು. ಆದುದರಿಂದ, ಕಾರ್ಯಮಗ್ನರಾಗಿರ್ರಿ, “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” (1 ಕೊರಿಂಥ 15:58) ಇತರರಿಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ ಚಟುವಟಿಕೆಗಳನ್ನು ವಿಶಾಲಗೊಳಿಸಿರಿ. (2 ಕೊರಿಂಥ 6:13) ವೃದ್ಧಾಪ್ಯಕ್ಕೆ ಹೊಂದಿಕೆಯಾದ ಗತಿಯಲ್ಲಿ ಸುವಾರ್ತೆಯನ್ನು ಹುರುಪಿನಿಂದ ಸಾರುವ ಮೂಲಕ ಅನೇಕ ಕ್ರೈಸ್ತರು ಇದನ್ನು ಮಾಡುತ್ತಾರೆ. ನೀವು ಹೆಚ್ಚು ಮುಪ್ಪಿನವರಾಗುತ್ತಾ ಹೋದಷ್ಟಕ್ಕೆ, “ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ಸಹನೆಯಲ್ಲಿ ಸ್ವಸ್ಥ”ರಾಗಿರಿ.—ತೀತ 2:2, NW.

      ನಿಮ್ಮ ಜೊತೆಗಾರರ ನಷ್ಟವನ್ನು ನಿಭಾಯಿಸುವುದು

      20, 21. (ಎ) ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ, ವಿವಾಹಿತ ದಂಪತಿಗಳನ್ನು ಕಟ್ಟಕಡೆಗೆ ಯಾವುದು ಪ್ರತ್ಯೇಕಿಸಲೇಬೇಕು? (ಬಿ) ಅನ್ನಳು ವಿಯೋಗಿಗಳಾದ ಜೊತೆಗಾರರಿಗೆ ಒಂದು ಉತ್ತಮ ಮಾದರಿಯನ್ನು ಹೇಗೆ ಒದಗಿಸುತ್ತಾಳೆ?

      20 ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ವಿವಾಹಿತ ದಂಪತಿಗಳು ಕಟ್ಟಕಡೆಗೆ ಮರಣದಲ್ಲಿ ಪ್ರತ್ಯೇಕಿಸಲ್ಪಡುತ್ತಾರೆಂಬುದು ದುಃಖಕರ, ಆದರೆ ಸತ್ಯಸಂಗತಿಯಾಗಿದೆ. ತಮ್ಮ ಪ್ರಿಯರು ಈಗ ನಿದ್ರಿಸುತ್ತಿದ್ದಾರೆಂದು, ವಿಯೋಗಿಗಳಾದ ಕ್ರೈಸ್ತ ಜೊತೆಗಾರರಿಗೆ ತಿಳಿದಿದೆ ಮತ್ತು ತಾವು ಅವರನ್ನು ಪುನಃ ನೋಡುವೆವೆಂಬ ಭರವಸೆ ಅವರಿಗಿದೆ. (ಯೋಹಾನ 11:11, 25) ಆದರೆ ಆ ನಷ್ಟವು, ಇನ್ನೂ ದುಃಖಕರವಾಗಿದೆ. ಬದುಕಿರುವ ವ್ಯಕ್ತಿಯು ಅದರೊಂದಿಗೆ ಹೇಗೆ ವ್ಯವಹರಿಸಬಲ್ಲನು?a

      21 ಒಬ್ಬ ನಿರ್ದಿಷ್ಟ ಬೈಬಲ್‌ ವ್ಯಕ್ತಿಯು ಮಾಡಿದ ವಿಷಯವನ್ನು ಮನಸ್ಸಿನಲ್ಲಿಡುವುದು ಸಹಾಯಕರ. ಅನ್ನಳು, ವಿವಾಹವಾದ ಏಳು ವರ್ಷಗಳಲ್ಲೇ ವಿಧವೆಯಾದಳು, ಮತ್ತು ನಾವು ಅವಳ ಕುರಿತು ಓದುವಾಗ, ಅವಳು 84 ವರ್ಷ ವಯಸ್ಸಿನವಳಾಗಿದ್ದಳು. ತನ್ನ ಗಂಡನನ್ನು ಕಳೆದುಕೊಂಡಾಗ ಅವಳು ದುಃಖಪಟ್ಟಳೆಂಬುದು ನಮಗೆ ಖಚಿತವಾಗಿರಬಲ್ಲದು. ಅವಳು ನಿಭಾಯಿಸಿದ್ದು ಹೇಗೆ? ಅವಳು ಹಗಲಿರುಳು ಆಲಯದಲ್ಲಿ ಯೆಹೋವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದಳು. (ಲೂಕ 2:36-38) ಅನ್ನಳ ಪ್ರಾರ್ಥನಾಪೂರ್ವಕ ಸೇವೆಯ ಜೀವಿತವು, ವಿಧವೆಯಾಗಿ ಆಕೆ ಅನುಭವಿಸಿದ ದುಃಖ ಅಥವಾ ಒಂಟಿತನಕ್ಕೆ ಒಂದು ಮಹಾ ಸಿದ್ಧೌಷಧವಾಗಿತ್ತೆಂಬುದು ನಿಸ್ಸಂಶಯ.

      22. ಕೆಲವು ವಿಧವೆಯರು ಮತ್ತು ವಿಧುರರು ಏಕಾಂತತೆಯನ್ನು ಹೇಗೆ ನಿಭಾಯಿಸಿದ್ದಾರೆ?

      22 “ಮಾತನಾಡಲು ಯಾರೂ ಜೊತೆಗಾರರು ಇರದಿರುವುದು ನನ್ನ ದೊಡ್ಡ ಪಂಥಾಹ್ವಾನ,” ಎಂದು, ಹತ್ತು ವರ್ಷದ ಹಿಂದೆ ವಿಧವೆಯಾದ 72 ವರ್ಷ ವಯಸ್ಸಿನ ಒಬ್ಬ ಹೆಂಗಸು ವಿವರಿಸುತ್ತಾಳೆ. “ನನ್ನ ಗಂಡ ಒಬ್ಬ ಒಳ್ಳೆಯ ಕೇಳುಗನಾಗಿದ್ದನು. ನಾವು ಸಭೆಯ ಕುರಿತು ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಪಾಲಿನ ಕುರಿತು ಮಾತಾಡುತ್ತಿದ್ದೆವು.” ಇನ್ನೊಬ್ಬ ವಿಧವೆಯು ಹೇಳುವುದು: “ಕಾಲವು ವಾಸಿಮಾಡುತ್ತದಾದರೂ, ಒಬ್ಬನು ತನ್ನ ಸಮಯದೊಂದಿಗೆ ಏನು ಮಾಡುತ್ತಾನೋ ಅದು ವಾಸಿಯಾಗಲು ಒಬ್ಬನಿಗೆ ಸಹಾಯ ಮಾಡುತ್ತದೆಂದು ಹೇಳುವುದು ಹೆಚ್ಚು ಸರಿಯೆಂದು ನಾನು ಕಂಡುಕೊಂಡಿದ್ದೇನೆ. ಇತರರಿಗೆ ಸಹಾಯ ಮಾಡುವುದಕ್ಕೆ ನೀವು ಒಂದು ಹೆಚ್ಚು ಉತ್ತಮ ಸ್ಥಾನದಲ್ಲಿರುತ್ತೀರಿ.” 67 ವರ್ಷ ವಯಸ್ಸಿನ ವಿಧುರನೊಬ್ಬನು ಒಪ್ಪಿಕೊಳ್ಳುತ್ತಾ ಹೇಳುವುದು: “ಸಾವಿನಿಂದಾದ ಅಗಲಿಕೆಯನ್ನು ನಿಭಾಯಿಸುವ ಸೋಜಿಗದ ವಿಧಾನವು ಇತರರನ್ನು ಸಂತೈಸುವುದಕ್ಕೆ ನಮ್ಮನ್ನು ಕೊಟ್ಟುಕೊಳ್ಳುವುದೇ.”

      ಮುಪ್ಪಿನಲ್ಲಿ ದೇವರಿಂದ ಅಮೂಲ್ಯವೆಂದೆಣಿಸಲ್ಪಡುವುದು

      23, 24. ವೃದ್ಧರಿಗೆ, ವಿಶೇಷವಾಗಿ ವಿಧವೆಯರಿಗೆ ಅಥವಾ ವಿಧುರರಿಗೆ, ಬೈಬಲು ಯಾವ ಮಹಾ ಸಾಂತ್ವನವನ್ನು ಕೊಡುತ್ತದೆ?

      23 ಒಬ್ಬ ಪ್ರಿಯನಾದ ಸಂಗಾತಿಯನ್ನು ಸಾವು ಅಗಲಿಸುತ್ತದಾದರೂ, ಯೆಹೋವನು ಸದಾ ನಂಬಿಗಸ್ತನೂ ಭರವಸಯೋಗ್ಯನೂ ಆಗಿರುತ್ತಾನೆ. ಪುರಾತನ ಅರಸನಾದ ದಾವೀದನು ಹಾಡಿದ್ದು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.”—ಕೀರ್ತನೆ 27:4.

      24 “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು [“ಸನ್ಮಾನಿಸು,” NW]” ಎಂದು ಪ್ರೋತ್ಸಾಹಿಸುತ್ತಾನೆ ಅಪೊಸ್ತಲ ಪೌಲನು. (1 ತಿಮೊಥೆಯ 5:3) ಈ ಉಪದೇಶವನ್ನು ಹಿಂಬಾಲಿಸುವ ಸಲಹೆಯು, ಹತ್ತಿರ ಸಂಬಂಧಿಕರಿಲ್ಲದ ಅರ್ಹರಾದ ವಿಧವೆಯರಿಗೆ, ಸಭೆಯಿಂದ ಭೌತಿಕ ಬೆಂಬಲದ ಅಗತ್ಯವಿದ್ದಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. ಆದರೂ, “ಸನ್ಮಾನಿಸು” ಎಂಬ ಉಪದೇಶದ ಅರ್ಥವು, ಅವರನ್ನು ಅಮೂಲ್ಯರಾಗಿ ಎಣಿಸುವುದನ್ನು ಒಳಗೂಡುತ್ತದೆ. ಯೆಹೋವನು ತಮ್ಮನ್ನು ಅಮೂಲ್ಯರೆಂದೆಣಿಸುತ್ತಾನೆ ಮತ್ತು ಬೆಂಬಲಿಸುವನು ಎಂಬ ಅರಿವಿನಿಂದ ದೇವಭಕ್ತ ವಿಧವೆಯರು ಮತ್ತು ವಿಧುರರು ಎಂತಹ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು!—ಯಾಕೋಬ 1:27.

      25. ವೃದ್ಧರಿಗಾಗಿ ಇನ್ನೂ ಯಾವ ಗುರಿಯು ಉಳಿದಿರುತ್ತದೆ?

      25 “ಮುದುಕರಿಗೆ ನರೆಯು ಒಡವೆ,” ಎಂದು ಘೋಷಿಸುತ್ತದೆ ದೇವರ ಪ್ರೇರಿತ ವಾಕ್ಯ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31; 20:29) ಆದುದರಿಂದ, ವಿವಾಹಿತರಾಗಿದ್ದರೂ ಅಥವಾ ಪುನಃ ಒಂಟಿಗರಾದರೂ, ಯೆಹೋವನ ಸೇವೆಯನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡುವುದನ್ನು ಮುಂದುವರಿಸಿರಿ. ಹೀಗೆ ದೇವರೊಂದಿಗೆ ಈಗ ನಿಮಗೆ ಒಂದು ಒಳ್ಳೆಯ ಹೆಸರನ್ನು ನೀವು ಪಡೆದಿರುವಿರಿ ಮತ್ತು ಎಲ್ಲಿ ವೃದ್ಧಾಪ್ಯದ ವೇದನೆಗಳು ಇನ್ನಿರಲಾರವೊ ಆ ಒಂದು ಲೋಕದಲ್ಲಿ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗುವಿರಿ.—ಕೀರ್ತನೆ 37:3-5; ಯೆಶಾಯ 65:20.

      a ಈ ವಿಷಯದ ಕುರಿತಾದ ಇನ್ನೂ ಹೆಚ್ಚಿನ ಸವಿಸ್ತಾರ ಚರ್ಚೆಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯದಿಂದ ಪ್ರಕಾಶಿಸಲ್ಪಟ್ಟಿರುವ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರನ್ನು ನೋಡಿರಿ.

      ವಯಸ್ಸಾಗುತ್ತಾ ಹೋಗುವಾಗ, ದಂಪತಿಗಳಿಗೆ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ಮೊಮ್ಮಕ್ಕಳು ವೃದ್ಧ ಜನರಿಗಾಗಿ ಒಂದು “ಕಿರೀಟ”ವಾಗಿದ್ದಾರೆ.—ಜ್ಞಾನೋಕ್ತಿ 17:6.

      ವೃದ್ಧಾಪ್ಯವು ಯೆಹೋವನನ್ನು ಸೇವಿಸಲು ಹೆಚ್ಚಿನ ಸಂದರ್ಭಗಳನ್ನು ತರಬಹುದು.—ಕೀರ್ತನೆ 71:9, 14.

      ವೃದ್ಧರು “ಮಿತಸ್ವಭಾವಿ”ಗಳಾಗಿರುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ.—ತೀತ 2:2, NW.

      ವಿಯೋಗಿಗಳಾದ ಜೊತೆಗಾರರು ಕಡು ದುಃಖಿತರಾಗಿದ್ದಾಗ್ಯೂ, ಬೈಬಲಿನಲ್ಲಿ ಸಾಂತ್ವನವನ್ನು ಕಂಡುಕೊಳ್ಳಬಲ್ಲರು.—ಯೋಹಾನ 11:11, 25.

      ಯೆಹೋವನು ನಂಬಿಗಸ್ತ ವೃದ್ಧರನ್ನು ಅಮೂಲ್ಯರೆಂದೆಣಿಸುತ್ತಾನೆ.—ಜ್ಞಾನೋಕ್ತಿ 16:31.

  • ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹದಿನೈದು

      ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು

      1. ನಾವು ನಮ್ಮ ಹೆತ್ತವರಿಗೆ ಯಾವ ಋಣವನ್ನು ಸಲ್ಲಿಸುವ ಹಂಗಿಗರಾಗಿದ್ದೇವೆ, ಆದುದರಿಂದ ಅವರೆಡೆಗೆ ಯಾವ ಭಾವನೆ ಮತ್ತು ಕ್ರಿಯೆಯನ್ನು ನಾವು ತೋರಿಸಬೇಕು?

      “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ,” ಎಂದು ಸಲಹೆಯಿತ್ತನು ಪುರಾತನ ಕಾಲದ ವಿವೇಕಿಯು. (ಜ್ಞಾನೋಕ್ತಿ 23:22) ‘ನಾನದನ್ನು ಎಂದೂ ಮಾಡೆನು!’ ಎಂದು ನೀವನ್ನಬಹುದು. ನಮ್ಮ ತಾಯಂದಿರನ್ನು—ಅಥವಾ ನಮ್ಮ ತಂದೆಯರನ್ನು ಅಸಡ್ಡೆಮಾಡುವ ಬದಲಾಗಿ—ನಮ್ಮಲ್ಲಿ ಹೆಚ್ಚಿನವರಿಗೆ ಅವರ ಕಡೆಗೆ ಆಳವಾದ ಪ್ರೀತಿಯ ಅನಿಸಿಕೆಯಿದೆ. ಅವರಿಗೆ ಅತಿಯಾಗಿ ಋಣಿಯಾಗಿರುವ ಗ್ರಹಿಕೆಯು ನಮಗಿದೆ. ಮೊತ್ತಮೊದಲಾಗಿ, ನಮ್ಮ ಹೆತ್ತವರು ನಮಗೆ ಜೀವ ಕೊಟ್ಟರು. ಯೆಹೋವನು ಜೀವದ ಬುಗ್ಗೆಯಾಗಿರುವುದಾದರೂ, ನಮ್ಮ ಹೆತ್ತವರ ಹೊರತು ನಾವು ಅಸ್ತಿತ್ವಕ್ಕೇ ಬರುತ್ತಿರಲಿಲ್ಲ. ನಾವು ನಮ್ಮ ಹೆತ್ತವರಿಗೆ ಕೊಡಸಾಧ್ಯವಿರುವ ಯಾವುದೇ ವಿಷಯವು ಸ್ವತಃ ಜೀವದಷ್ಟು ಅಮೂಲ್ಯವಾಗಿರುವುದಿಲ್ಲ. ಅದಲ್ಲದೆ, ಶೈಶವಾವಸ್ಥೆಯಿಂದ ವಯಸ್ಕತನದ ಪಥದುದ್ದಕ್ಕೂ ಒಂದು ಮಗುವಿಗೆ ನೆರವಾಗುವುದರಲ್ಲಿ ಒಳಗೂಡಿರುವ ಸ್ವತ್ಯಾಗ, ಚಿಂತಾಭರಿತ ಆರೈಕೆ, ಖರ್ಚು, ಮತ್ತು ಪ್ರೀತಿಯ ಗಮನವನ್ನು ಕುರಿತು ತುಸು ಆಲೋಚಿಸಿರಿ. ಆದುದರಿಂದ ದೇವರ ವಾಕ್ಯವು ಹೀಗೆ ಸಲಹೆ ನೀಡುವುದು ಅದೆಷ್ಟು ನ್ಯಾಯಸಮ್ಮತ: “ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು. ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ”!—ಎಫೆಸ 6:2, 3.

      ಭಾವಾತ್ಮಕ ಅಗತ್ಯಗಳನ್ನು ಗ್ರಹಿಸಿಕೊಳ್ಳುವುದು

      2. ಬೆಳೆದ ಮಕ್ಕಳು ತಮ್ಮ ಹೆತ್ತವರಿಗೆ ಸಲ್ಲತಕ್ಕ “ಪ್ರತ್ಯುಪಕಾರವನ್ನು” ಮಾಡಸಾಧ್ಯವಿರುವುದು ಹೇಗೆ?

      2 ಅಪೊಸ್ತಲ ಪೌಲನು ಕ್ರೈಸ್ತರಿಗೆ ಬರೆದುದು: “ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ [“ಮನೆವಾರ್ತೆಯಲ್ಲಿ,” NW] ಭಕ್ತಿತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೊಥೆಯ 5:4) ತಮ್ಮ ಹೆತ್ತವರು ಮತ್ತು ಅಜ್ಜಅಜ್ಜಿಯರು ತಮಗೆ ಕೊಟ್ಟ ವರ್ಷಗಳುದ್ದದ ಪ್ರೀತಿ, ಶ್ರಮೆ, ಹಾಗೂ ಆರೈಕೆಗಾಗಿ ಗಣ್ಯತೆಯನ್ನು ತೋರಿಸುವುದರ ಮೂಲಕ, ಬೆಳೆದ ಮಕ್ಕಳು ಈ “ಸಲ್ಲತಕ್ಕ ಪ್ರತ್ಯುಪಕಾರ”ವನ್ನು ಕೊಡುವರು. ಇದನ್ನು ಮಕ್ಕಳು ಮಾಡಬಲ್ಲ ಒಂದು ವಿಧವು, ಬೇರೆ ಎಲ್ಲರ ಹಾಗೆ ವೃದ್ಧರಿಗೆ ಪ್ರೀತಿ ಮತ್ತು ಅಭಯವು—ಕೆಲವೊಮ್ಮೆ ಅತಿಹೆಚ್ಚಾಗಿ ಅಗತ್ಯವಿದೆಯೆಂದು ಗ್ರಹಿಸಿಕೊಳ್ಳುವ ಮೂಲಕವಾಗಿದೆ. ಆದುದರಿಂದ, ನಮ್ಮೆಲ್ಲರಂತೆ, ಅವರು ಅಮೂಲ್ಯರೆಂದೆಣಿಸಲ್ಪಡುವ ಅಗತ್ಯವಿದೆ. ತಮ್ಮ ಜೀವನಗಳು ಸಾರ್ಥಕವೆಂದು ಭಾವಿಸುವ ಅಗತ್ಯವು ಅವರಿಗಿದೆ.

      3. ಹೆತ್ತವರನ್ನು ಮತ್ತು ಅಜ್ಜಅಜ್ಜಿಯರನ್ನು ನಾವು ಹೇಗೆ ಸನ್ಮಾನಿಸಬಲ್ಲೆವು?

      3 ಆದುದರಿಂದ, ನಾವು ಅವರನ್ನು ಪ್ರೀತಿಸುತ್ತೇವೆಂದು ಅವರು ತಿಳಿದುಕೊಳ್ಳುವಂತೆ ಬಿಡುವ ಮೂಲಕ, ನಮ್ಮ ಹೆತ್ತವರನ್ನು ಮತ್ತು ಅಜ್ಜಅಜ್ಜಿಯರನ್ನು ನಾವು ಸನ್ಮಾನಿಸಬಲ್ಲೆವು. (1 ಕೊರಿಂಥ 16:14) ನಮ್ಮ ಹೆತ್ತವರು ನಮ್ಮೊಂದಿಗೆ ಜೀವಿಸುತ್ತಿಲ್ಲವಾದರೆ, ನಮ್ಮಿಂದ ವರ್ತಮಾನವನ್ನು ಕೇಳುವುದು ಅವರಿಗೆ ಬಹಳ ಮುಖ್ಯವೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. ಒಂದು ಉಲ್ಲಾಸಭರಿತ ಪತ್ರ, ಒಂದು ಫೋನ್‌ ಕರೆ, ಅಥವಾ ಒಂದು ಭೇಟಿಯು ಅವರ ಸಂತೋಷಕ್ಕೆ ಹೆಚ್ಚನ್ನು ಕೂಡಿಸಬಲ್ಲದು. ಜಪಾನಿನಲ್ಲಿ ಜೀವಿಸುವ ಮಿಯೊ, ತಾನು 82 ವರ್ಷ ವಯಸ್ಸಿನವಳಾಗಿದ್ದಾಗ ಬರೆದುದು: “ನನ್ನ ಮಗಳು [ಅವಳ ಗಂಡ ಸಂಚಾರ ಶುಶ್ರೂಷಕನು] ನನಗೆ ಹೇಳುವುದು: ‘ದಯವಿಟ್ಟು ನಮ್ಮೊಂದಿಗೆ “ಸಂಚಾರ” ಮಾಡಮ್ಮಾ.’ ಅವರ ಪ್ರಯಾಣದ ವಿವರಪಟ್ಟಿಯನ್ನು ಮತ್ತು ಪ್ರತಿ ವಾರದ ಟೆಲಿಫೋನ್‌ ನಂಬರನ್ನು ಅವಳು ನನಗೆ ಕಳುಹಿಸುತ್ತಾಳೆ. ನಾನು ನನ್ನ ನಕ್ಷೆಯನ್ನು ತೆರೆದು, ‘ಹಾ, ಅವರೀಗ ಇಲ್ಲಿದ್ದಾರೆ!’ ಎಂದು ಹೇಳಬಲ್ಲೆ. ಅಂತಹ ಒಬ್ಬ ಮಗಳನ್ನು ಹೊಂದಿರುವ ಆಶೀರ್ವಾದಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಉಪಕಾರ ಹೇಳುತ್ತೇನೆ.”

      ಪ್ರಾಪಂಚಿಕ ಅಗತ್ಯಗಳಲ್ಲಿ ಸಹಾಯಕೊಡುವುದು

      4. ಯೆಹೂದಿ ಧಾರ್ಮಿಕ ಸಂಪ್ರದಾಯವು ವೃದ್ಧ ಹೆತ್ತವರೆಡೆಗೆ ನಿರ್ದಯತೆಯನ್ನು ಹೇಗೆ ಉತ್ತೇಜಿಸಿತು?

      4 ಹೆತ್ತವರನ್ನು ಸನ್ಮಾನಿಸುವುದರಲ್ಲಿ ಅವರ ಪ್ರಾಪಂಚಿಕ ಅಗತ್ಯಗಳನ್ನು ನೋಡಿಕೊಳ್ಳುವುದು ಸಹ ಸೇರಿರಸಾಧ್ಯವಿದೆಯೇ? ಹೌದು. ಅದು ಆಗಾಗ ಸೇರಿರುತ್ತದೆ. ಯೇಸುವಿನ ದಿನದಲ್ಲಿ ಯೆಹೂದಿ ಧಾರ್ಮಿಕ ನಾಯಕರು, ಒಬ್ಬನು ತನ್ನ ಹಣ ಅಥವಾ ಆಸ್ತಿಯನ್ನು “ದೇವರಿಗಾಗಿ ಇಟ್ಟಿದ್ದೇನೆ” ಎಂದು ಘೋಷಿಸುವುದಾದರೆ, ತನ್ನ ಹೆತ್ತವರ ಪರಾಮರಿಕೆಗಾಗಿ ಅದನ್ನು ಉಪಯೋಗಿಸುವ ಜವಾಬ್ದಾರಿಯಿಂದ ಮುಕ್ತನಾಗುತ್ತಾನೆಂಬ ಸಂಪ್ರದಾಯವನ್ನು ಎತ್ತಿಹಿಡಿದರು. (ಮತ್ತಾಯ 15:3-6) ಎಂತಹ ನಿರ್ದಯತೆ! ಕಾರ್ಯತಃ ಜನರು ತಮ್ಮ ಹೆತ್ತವರನ್ನು ಸನ್ಮಾನಿಸುವ ಬದಲಿಗೆ ಸ್ವಾರ್ಥದಿಂದ ಅವರ ಅಗತ್ಯಗಳನ್ನು ಅಲ್ಲಗಳೆದು, ಅವರನ್ನು ಧಿಕ್ಕರಿಸುವಂತೆ ಆ ಧಾರ್ಮಿಕ ನಾಯಕರು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ನಾವೆಂದೂ ಅದನ್ನು ಮಾಡಬಯಸದಿರೋಣ!—ಧರ್ಮೋಪದೇಶಕಾಂಡ 27:16.

      5. ಕೆಲವು ದೇಶಗಳ ಸರಕಾರಗಳಿಂದ ಮಾಡಲ್ಪಟ್ಟ ಒದಗಿಸುವಿಕೆಗಳ ಹೊರತೂ, ಒಬ್ಬನ ಹೆತ್ತವರನ್ನು ಸನ್ಮಾನಿಸುವುದು ಕೆಲವು ಸಲ ಹಣಕಾಸಿನ ಸಹಾಯವನ್ನು ಕೊಡುವುದನ್ನು ಒಳಗೊಳ್ಳುತ್ತದೆಯೇಕೆ?

      5 ಇಂದು ಅನೇಕ ದೇಶಗಳಲ್ಲಿ, ಸರಕಾರಿ ಬೆಂಬಲದ ಸಾಮಾಜಿಕ ಪರಿಹಾರ ಕೇಂದ್ರಗಳು ಆಹಾರ, ಬಟ್ಟೆಬರೆ, ಮತ್ತು ಆಶ್ರಯದಂತಹ ವೃದ್ಧರ ಕೆಲವು ಪ್ರಾಪಂಚಿಕ ಅಗತ್ಯಗಳನ್ನು ಒದಗಿಸುತ್ತವೆ. ಅದಕ್ಕೆ ಕೂಡಿಸಿ, ವೃದ್ಧರು ಸ್ವತಃ ತಮ್ಮ ವೃದ್ಧಾಪ್ಯಕ್ಕಾಗಿ ಸ್ವಲ್ಪ ಒದಗಿಸುವಿಕೆಯನ್ನು ಬದಿಗಿಡಲು ಶಕ್ತರಾಗಿದ್ದಿರಬಹುದು. ಆದರೆ ಈ ಒದಗಿಸುವಿಕೆಗಳು ಮುಗಿದುಹೋಗುವುದಾದರೆ ಅಥವಾ ಸಾಲದಿದ್ದರೆ ಹೆತ್ತವರ ಅಗತ್ಯಗಳನ್ನು ಪೂರೈಸಲು ತಮಗೆ ಮಾಡಸಾಧ್ಯವಿರುವುದನ್ನು ಮಾಡುವ ಮೂಲಕ ಮಕ್ಕಳು ತಮ್ಮ ಹೆತ್ತವರನ್ನು ಸನ್ಮಾನಿಸುತ್ತಾರೆ. ವಾಸ್ತವಿಕವಾಗಿ, ಮುಪ್ಪಿನ ಹೆತ್ತವರ ಆರೈಕೆಮಾಡುವುದು ದಿವ್ಯ ಭಕ್ತಿಯ ಅಂದರೆ, ಕುಟುಂಬದೇರ್ಪಾಡಿನ ಮೂಲಕರ್ತನಾದ ಯೆಹೋವ ದೇವರಿಗೆ ಒಬ್ಬನ ಭಕ್ತಿಯ ಒಂದು ಪುರಾವೆಯಾಗಿರುತ್ತದೆ.

      ಪ್ರೀತಿ ಮತ್ತು ಸ್ವತ್ಯಾಗ

      6. ತಮ್ಮ ಹೆತ್ತವರ ಅಗತ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ವಾಸದ ಯಾವ ಏರ್ಪಾಡುಗಳನ್ನು ಕೆಲವರು ಮಾಡಿದ್ದಾರೆ?

      6 ಅನೇಕ ವಯಸ್ಕ ಮಕ್ಕಳು, ತಮ್ಮ ನಿರ್ಬಲ ಹೆತ್ತವರ ಅಗತ್ಯಗಳಿಗೆ ಪ್ರೀತಿ ಮತ್ತು ಸ್ವತ್ಯಾಗದ ಭಾವದಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ತಮ್ಮ ಹೆತ್ತವರನ್ನು ತಮ್ಮ ಸ್ವಂತ ಮನೆಗಳೊಳಗೆ ಸೇರಿಸಿಕೊಂಡಿದ್ದಾರೆ ಅಥವಾ ಅವರ ಸಮೀಪ ಇರುವುದಕ್ಕಾಗಿ ಸ್ಥಳ ಬದಲಾಯಿಸಿದ್ದಾರೆ. ಇತರರು ತಮ್ಮ ಹೆತ್ತವರೊಂದಿಗೆ ವಾಸಿಸಲು ಹೋಗಿದ್ದಾರೆ. ಆಗಾಗ ಅಂತಹ ಏರ್ಪಾಡುಗಳು ಹೆತ್ತವರಿಗೆ ಮತ್ತು ಮಕ್ಕಳಿಗೆ ಇಬ್ಬರಿಗೂ ಒಂದು ಆಶೀರ್ವಾದವಾಗಿ ಪರಿಣಮಿಸಿರುತ್ತವೆ.

      7. ವೃದ್ಧ ಹೆತ್ತವರ ವಿಷಯವಾಗಿ ನಿರ್ಣಯಗಳನ್ನು ಮಾಡುವಾಗ ಅವಸರ ಮಾಡದಿರುವುದು ಯಾಕೆ ಒಳ್ಳೆಯದು?

      7 ಕೆಲವು ಸಲವಾದರೊ ಅಂತಹ ಏರ್ಪಾಡುಗಳು ಒಳ್ಳೇದಾಗಿ ಪರಿಣಮಿಸುವುದಿಲ್ಲ. ಯಾಕೆ? ನಿರ್ಣಯಗಳನ್ನು ತೀರ ಅವಸರದಿಂದ ಮಾಡುವುದರಿಂದ, ಇಲ್ಲವೆ ಅವು ಬರೇ ಭಾವಾವೇಶದ ಮೇಲೆ ಆಧಾರಿಸಿರುವುದರಿಂದಾಗಿರಬಹುದು. “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಎಂದು ಬೈಬಲು ವಿವೇಕಯುತವಾಗಿ ಎಚ್ಚರಿಸುತ್ತದೆ. (ಜ್ಞಾನೋಕ್ತಿ 14:15) ಉದಾಹರಣೆಗಾಗಿ, ನಿಮ್ಮ ಮುದಿ ತಾಯಿಗೆ ಒಬ್ಬಂಟಿಗರಾಗಿ ಜೀವಿಸುವುದಕ್ಕೆ ಕಷ್ಟವಾಗುತ್ತದೆಂದು ಮತ್ತು ನಿಮ್ಮೊಂದಿಗೆ ಜೀವಿಸುವುದಾದರೆ ಅವರಿಗೆ ಪ್ರಯೋಜನವಾದೀತೆಂದು ನೀವು ನೆನಸುತ್ತೀರೆಂದು ಭಾವಿಸೋಣ. ನಿಮ್ಮ ಹೆಜ್ಜೆಗಳನ್ನು ಜಾಣತನದಿಂದ ಪರಿಗಣಿಸುವುದರಲ್ಲಿ ಈ ಕೆಳಗಿನವುಗಳನ್ನು ನೀವು ಪರಿಗಣಿಸಬಹುದು: ಅವರ ವಾಸ್ತವಿಕ ಆವಶ್ಯಕತೆಗಳು ಯಾವುವು? ಸ್ವೀಕಾರಯೋಗ್ಯವಾದ ಬದಲಿ ಪರಿಹಾರವನ್ನು ನೀಡುವ ಖಾಸಗಿ ಅಥವಾ ಸರಕಾರ ಪ್ರಾಯೋಜಿತ ಸಾಮಾಜಿಕ ಸೇವೆಗಳು ಇವೆಯೊ? ಅವರಿಗೆ ಸ್ಥಳಬದಲಾಯಿಸಲು ಮನಸ್ಸಿದೆಯೆ? ಇರುವುದಾದರೆ, ಅವರ ಜೀವನವು ಯಾವ ರೀತಿಗಳಲ್ಲಿ ಪರಿಣಾಮಕ್ಕೆ ಒಳಗಾಗಲಿದೆ? ಅವರಿಗೆ ಸ್ನೇಹಿತರನ್ನು ಬಿಟ್ಟು ಬರಬೇಕಾದೀತೊ? ಭಾವನಾತ್ಮಕವಾಗಿ ಇದು ಅವರನ್ನು ಹೇಗೆ ಬಾಧಿಸೀತು? ನೀವು ಅವರೊಂದಿಗೆ ಈ ವಿಷಯಗಳನ್ನು ಮಾತಾಡಿನೋಡಿದ್ದೀರೊ? ಅಂತಹ ಒಂದು ಬದಲಾವಣೆ ನಿಮ್ಮನ್ನು, ನಿಮ್ಮ ಸಂಗಾತಿಯನ್ನು, ಮತ್ತು ನಿಮ್ಮ ಸ್ವಂತ ಮಕ್ಕಳನ್ನು ಹೇಗೆ ಪ್ರಭಾವಿಸೀತು? ನಿಮ್ಮ ತಾಯಿಗೆ ಆರೈಕೆ ಅಗತ್ಯವಿದ್ದರೆ ಅದನ್ನು ಒದಗಿಸುವವರು ಯಾರು? ಆ ಜವಾಬ್ದಾರಿಯನ್ನು ಹಂಚಿಕೊಳ್ಳಸಾಧ್ಯವೊ? ನೇರವಾಗಿ ಒಳಗೂಡಿರುವವರೆಲ್ಲರೊಂದಿಗೆ ಆ ವಿಷಯವನ್ನು ನೀವು ಚರ್ಚಿಸಿದ್ದೀರೊ?

      8. ನಿಮ್ಮ ವೃದ್ಧ ಹೆತ್ತವರಿಗೆ ಸಹಾಯ ಮಾಡುವ ವಿಧವನ್ನು ನಿರ್ಣಯಿಸುವಾಗ, ಯಾರನ್ನು ಸಂಪರ್ಕಿಸಲು ನೀವು ಶಕ್ತರಾಗಬಹುದು?

      8 ಆರೈಕೆಯ ಜವಾಬ್ದಾರಿಯು ಒಂದು ಕುಟುಂಬದ ಮಕ್ಕಳೆಲ್ಲರ ಮೇಲೆ ಆಧಾರಿಸುತ್ತದೆಯಾದ್ದರಿಂದ, ನಿರ್ಣಯಗಳನ್ನು ಮಾಡುವುದರಲ್ಲಿ ಎಲ್ಲರೂ ಪಾಲುಗಾರರಾಗುವಂತೆ ಒಂದು ಕುಟುಂಬ ಸಮಾಲೋಚನೆಯನ್ನು ನಡೆಸುವುದು ವಿವೇಕಪ್ರದವಾದೀತು. ಕ್ರೈಸ್ತ ಸಭೆಯ ಹಿರಿಯರೊಂದಿಗೆ ಅಥವಾ ತದ್ರೀತಿಯ ಸನ್ನಿವೇಶವನ್ನು ಎದುರಿಸಿರುವ ಸ್ನೇಹಿತರೊಂದಿಗೆ ಮಾತನಾಡುವುದು ಸಹ ಸಹಾಯಕರವಾಗಿರಬಹುದು. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು,” ಎಂದು ಎಚ್ಚರಿಸುತ್ತದೆ ಬೈಬಲು, “ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22.

      ಅನುಭೂತಿ ಮತ್ತು ಗ್ರಹಿಕೆಯುಳ್ಳವರಾಗಿರಿ

      [ಪುಟ 179ರಲ್ಲಿರುವ ಚಿತ್ರ]

      ಹೆತ್ತವರೊಂದಿಗೆ ಮೊದಲಾಗಿ ಮಾತಾಡದೆ, ಅವರಿಗಾಗಿ ನಿರ್ಣಯಗಳನ್ನು ಮಾಡುವುದು ಅವಿವೇಕತನವಾಗಿದೆ

      9, 10. (ಎ) ಮುಪ್ಪಿನವರಾಗಿದ್ದಾಗ್ಯೂ, ವಯೋವೃದ್ಧರಿಗೆ ಯಾವ ಪರಿಗಣನೆಯನ್ನು ಕೊಡತಕ್ಕದ್ದು? (ಬಿ) ಬೆಳೆದ ಮಗನು ತನ್ನ ಹೆತ್ತವರ ಸಲುವಾಗಿ ಯಾವುದೇ ಹೆಜ್ಜೆಗಳನ್ನು ತೆಗೆದುಕೊಳ್ಳಲಿ, ಅವನು ಅವರಿಗೆ ಯಾವಾಗಲೂ ಏನನ್ನು ಕೊಡಬೇಕು?

      9 ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು ಅನುಭೂತಿ ಮತ್ತು ಗ್ರಹಿಕೆಯನ್ನು ಅವಶ್ಯಪಡಿಸುತ್ತದೆ. ಸಂದ ವರ್ಷಗಳು ತಮ್ಮ ಪಾವತಿಯನ್ನು ತೆಗೆದುಕೊಳ್ಳುವಂತೆ, ನಡೆಯಲು, ತಿನ್ನಲು, ಮತ್ತು ಜ್ಞಾಪಿಸಿಕೊಳ್ಳಲು ಅಧಿಕಾಧಿಕ ಕಷ್ಟವಾಗುವುದನ್ನು ವೃದ್ಧರು ಕಂಡುಕೊಳ್ಳಬಹುದು. ಅವರಿಗೆ ಸಹಾಯವು ಬೇಕಾದೀತು. ಅನೇಕ ಸಲ ಮಕ್ಕಳು ತಮ್ಮ ಹೆತ್ತವರ ಸುರಕ್ಷೆಯಲ್ಲಿ ಅತಿರೇಕ ಕಾಳಜಿ ವಹಿಸುವವರಾಗುತ್ತಾ ಮಾರ್ಗದರ್ಶನವನ್ನು ನೀಡಲು ಪ್ರಯತ್ನಿಸುತ್ತಾರೆ. ಆದರೆ ವೃದ್ಧರು ಜ್ಞಾನ ಮತ್ತು ಅನುಭವ ಸಂಚಯದಲ್ಲಿ ಜೀವಮಾನವನ್ನು, ತಮ್ಮ ಸ್ವಂತ ಪರಾಮರಿಕೆಯಲ್ಲಿ ಮತ್ತು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವುದರಲ್ಲಿ ತಮ್ಮ ಜೀವಮಾನವನ್ನು ಕಳೆದ ವಯಸ್ಕರಾಗಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಸ್ವಗೌರವವು, ಹೆತ್ತವರು ಮತ್ತು ವಯಸ್ಕರೋಪಾದಿ ಅವರ ಪಾತ್ರದ ಮೇಲೆ ಕೇಂದ್ರಿತವಾಗಿರಬಹುದು. ತಮ್ಮ ಜೀವಿತಗಳ ನಿಯಂತ್ರಣವನ್ನು ತಮ್ಮ ಮಕ್ಕಳಿಗೆ ಬಿಟ್ಟುಕೊಡಬೇಕಾಗಿದೆ ಎಂದು ಭಾವಿಸುವ ಹೆತ್ತವರು, ಖಿನ್ನರು ಅಥವಾ ಕುಪಿತರು ಆಗಬಹುದು. ತಮ್ಮ ಸ್ವಾತಂತ್ರ್ಯವನ್ನು ಅಪಹರಿಸುವ ಪ್ರಯತ್ನಗಳಾಗಿ ಅವರು ಕಾಣಬಹುದಾದ ಇವುಗಳಿಂದಾಗಿ ಕೆಲವರು ತೀವ್ರ ಅಸಮಾಧಾನಪಟ್ಟು, ಅವನ್ನು ಪ್ರತಿಭಟಿಸುತ್ತಾರೆ.

      10 ಅಂತಹ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಇರುವುದಿಲ್ಲ, ಆದರೆ ವೃದ್ಧ ಹೆತ್ತವರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಪರಾಮರಿಕೆಯನ್ನು ಮಾಡಿಕೊಂಡು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಬಿಡುವುದು ದಯೆಯಾಗಿದೆ. ನಿಮ್ಮ ಹೆತ್ತವರೊಂದಿಗೆ ಮೊದಲಾಗಿ ಮಾತಾಡುವ ಹೊರತು ಅವರಿಗೆ ಯಾವುದು ಅತ್ಯುತ್ತಮ ಎಂಬ ನಿರ್ಣಯಗಳನ್ನು ಮಾಡದಿರುವುದು ವಿವೇಕಪ್ರದವಾದದ್ದು. ಅವರು ಹೆಚ್ಚನ್ನು ಕಳೆದುಕೊಂಡಿರಬಹುದು. ಅವರಿಗೆ ಯಾವುದು ಇನ್ನೂ ಇದೆಯೊ ಅದನ್ನು ಅವರು ಇಟ್ಟುಕೊಳ್ಳುವಂತೆ ಬಿಡಿರಿ. ನಿಮ್ಮ ಹೆತ್ತವರ ಜೀವಿತಗಳನ್ನು ನಿಯಂತ್ರಿಸಲು ನೀವು ಎಷ್ಟು ಕಡಿಮೆ ಪ್ರಯತ್ನಿಸುತ್ತೀರೊ ಅಷ್ಟು ಹೆಚ್ಚಾಗಿ ಅವರೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುವುದನ್ನು ನೀವು ಕಾಣಬಹುದು. ಅವರು ಹೆಚ್ಚು ಸಂತೋಷಿತರಾಗುವರು, ನೀವೂ ಸಂತೋಷಿಸುವಿರಿ. ಅವರ ಹಿತಕ್ಕಾಗಿ ನಿರ್ದಿಷ್ಟ ವಿಷಯಗಳನ್ನು ಒತ್ತಾಯಿಸುವುದು ಆವಶ್ಯಕವಾದರೂ, ನಿಮ್ಮ ಹೆತ್ತವರನ್ನು ಸನ್ಮಾನಿಸುವುದು, ನೀವು ಅವರಿಗೆ ಅರ್ಹವಾದ ಗೌರವ ಮತ್ತು ಆದರವನ್ನು ತೋರಿಸುವುದನ್ನು ಅವಶ್ಯಪಡಿಸುತ್ತದೆ. ದೇವರ ವಾಕ್ಯವು ಸಲಹೆಯನ್ನೀಯುವುದು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.”—ಯಾಜಕಕಾಂಡ 19:32.

      ಯೋಗ್ಯ ಮನೋಭಾವವನ್ನು ಕಾಪಾಡಿಕೊಳ್ಳುವುದು

      11-13. ಗತಸಮಯದಲ್ಲಿ, ತನ್ನ ಹೆತ್ತವರೊಂದಿಗಿನ ಒಬ್ಬ ವಯಸ್ಕ ಮಗನ ಸಂಬಂಧವು ಒಳ್ಳೇದಾಗಿ ಇರದಿದ್ದಲ್ಲಿ, ಮುಪ್ಪಿನ ವಯಸ್ಸಿನಲ್ಲಿ ಅವರ ಆರೈಕೆಯನ್ನು ಮಾಡುವ ಪಂಥಾಹ್ವಾನವನ್ನು ಅವನು ಇನ್ನೂ ಹೇಗೆ ನಿರ್ವಹಿಸಬಲ್ಲನು?

      11 ತಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದರಲ್ಲಿ ವಯಸ್ಕ ಮಕ್ಕಳು ಕೆಲವೊಮ್ಮೆ ಎದುರಿಸುವ ಒಂದು ಸಮಸ್ಯೆಯು, ಆರಂಭದ ಸಮಯಗಳಲ್ಲಿ ತಮ್ಮ ಹೆತ್ತವರೊಂದಿಗೆ ಅವರಿಗಿದ್ದ ಸಂಬಂಧವನ್ನು ಒಳಗೂಡುತ್ತದೆ. ಪ್ರಾಯಶಃ ನಿಮ್ಮ ತಂದೆಯು ಸ್ನೇಹರಹಿತರೂ ಪ್ರೀತಿರಹಿತರೂ, ನಿಮ್ಮ ತಾಯಿ ದಬ್ಬಾಳಿಕೆಯವರೂ ನಿಷ್ಠುರರೂ ಆಗಿದ್ದಿರಬಹುದು. ನೀವು ಬಯಸಿದ್ದಂತಹ ಹೆತ್ತವರು ಅವರು ಆಗಿರದಿದ್ದುದಕ್ಕೆ ನೀವಿನ್ನೂ ಹತಾಶರೂ, ಕುಪಿತರೂ, ಅಥವಾ ನೊಂದವರೂ ಆಗಿರಬಹುದು. ನೀವು ಅಂತಹ ಅನಿಸಿಕೆಗಳನ್ನು ಜಯಿಸಬಲ್ಲಿರೊ?a

      12 ಫಿನ್‌ಲೆಂಡ್‌ನಲ್ಲಿ ಬೆಳೆದ ಬಾಸ ಎಂಬವನು ಹೇಳುವುದು: “ನನ್ನ ಮಲತಂದೆ ನಾಸಿ ಜರ್ಮನಿಯಲ್ಲಿ ಒಬ್ಬ ಎಸ್‌ಎಸ್‌ ಅಧಿಕಾರಿಯಾಗಿದ್ದರು. ಅವರು ಸುಲಭವಾಗಿ ಕೋಪಗೊಳ್ಳುತ್ತಿದ್ದರು ಮತ್ತು ಆಗ ಅಪಾಯಕಾರಿಯಾಗಿದ್ದರು. ಅವರು ನನ್ನ ಕಣ್ಣೆದುರಿನಲ್ಲೇ ಅನೇಕ ಸಲ ನನ್ನ ತಾಯಿಗೆ ಹೊಡೆದರು. ಒಮ್ಮೆ ನನ್ನ ಮೇಲೆ ಅವರು ಸಿಟ್ಟುಗೊಂಡಿದ್ದಾಗ, ತನ್ನ ಬೆಲ್ಟನ್ನು ಬೀಸಿ ಬಕ್‌ಲ್‌ನಿಂದ ನನ್ನ ಮುಖಕ್ಕೆ ಹೊಡೆದರು. ಅದು ನನಗೆಷ್ಟು ಬಲವಾಗಿ ಬಡಿಯಿತೆಂದರೆ ನಾನು ಹಾಸಿಗೆಯ ಮೇಲೆ ಮುಗ್ಗರಿಸಿಬಿದ್ದೆ.”

      13 ಆದರೂ, ಅವರ ಚಾರಿತ್ರ್ಯದ ಬೇರೆ ಅಂಶಗಳೂ ಇದ್ದವು. ಬಾಸ ಕೂಡಿಸುವುದು: “ಇನ್ನೊಂದು ಕಡೆ ಅವರು ಬಹಳ ಶ್ರಮಪಟ್ಟು ದುಡಿದರು ಮತ್ತು ಕುಟುಂಬ ಪಾಲನೆ ಪೋಷಣೆಯಲ್ಲಿ ತನ್ನನ್ನು ಮಿತವ್ಯಯಿಸಿಕೊಳ್ಳುತ್ತಿರಲಿಲ್ಲ. ತಂದೆಯ ಮಮತೆಯನ್ನು ಅವರು ನನಗೆಂದೂ ತೋರಿಸಲಿಲ್ಲ, ಆದರೆ ಅವರು ಭಾವಾತ್ಮಕವಾಗಿ ಗಾಯಗೊಂಡಿದ್ದರೆಂದು ನನಗೆ ಗೊತ್ತಿತ್ತು. ಅವರು ಚಿಕ್ಕ ಹುಡುಗರಾಗಿದ್ದಾಗ ಅವರ ತಾಯಿಯು ಅವರನ್ನು ಮನೆಯಿಂದ ಹೊರಗಟ್ಟಿದ್ದರು. ಅವರು ಮುಷ್ಟಿಬಲದಿಂದಲೇ ಬೆಳೆದು ತಮ್ಮ ಯೌವನದಲ್ಲಿ ಯುದ್ಧಕ್ಕೆ ಸೇರಿದರು. ಸ್ವಲ್ಪಮಟ್ಟಿಗೆ ನನಗೆ ಅವರನ್ನು ತಿಳಿದುಕೊಳ್ಳಸಾಧ್ಯವಿತ್ತು ಮತ್ತು ನಾನು ಅವರನ್ನು ದೂರಲಿಲ್ಲ. ನಾನು ವಯಸ್ಕನಾದಾಗ, ಅವರ ಮರಣದ ತನಕ ನನ್ನಿಂದಾದಷ್ಟು ಸಹಾಯವನ್ನು ನಾನು ಮಾಡಬಯಸಿದೆ. ಅದು ಸುಲಭವಾಗಿರಲಿಲ್ಲ, ಆದರೆ ನನ್ನಿಂದ ಸಾಧ್ಯವಿರುವುದೆಲ್ಲವನ್ನೂ ನಾನು ಮಾಡಿದೆ. ಅಂತ್ಯದ ತನಕ ನಾನು ಒಬ್ಬ ಸುಪುತ್ರನಾಗಿರಲು ಪ್ರಯತ್ನಿಸಿದೆ, ಮತ್ತು ಅವರು ನನ್ನನ್ನು ಹಾಗೆಯೇ ಸ್ವೀಕರಿಸಿದರೆಂದು ನಾನು ಎಣಿಸುತ್ತೇನೆ.”

      14. ವೃದ್ಧ ಹೆತ್ತವರ ಆರೈಕೆಯಲ್ಲಿ ಏಳುವವುಗಳನ್ನೂ ಸೇರಿಸಿ, ಎಲ್ಲಾ ಸನ್ನಿವೇಶಗಳಲ್ಲಿ ಯಾವ ಶಾಸ್ತ್ರವಚನವು ಅನ್ವಯವಾಗುತ್ತದೆ?

      14 ಬೇರೆ ವಿಷಯಗಳಲ್ಲಿರುವಂತೆಯೆ, ಕುಟುಂಬ ಸನ್ನಿವೇಶಗಳಲ್ಲಿ, ಬೈಬಲ್‌ ಸಲಹೆಯು ಅನ್ವಯವಾಗುತ್ತದೆ: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:12, 13.

      ಆರೈಕೆಮಾಡುವವರಿಗೂ ಆರೈಕೆ ಬೇಕು

      15. ಹೆತ್ತವರ ಆರೈಕೆಯು ಕೆಲವು ಸಲ ಸಂಕಟಕರವಾಗಿದೆಯೇಕೆ?

      15 ಒಬ್ಬ ನಿರ್ಬಲ ಹೆತ್ತವರ ಆರೈಕೆ ಮಾಡುವುದು ಕಷ್ಟದ ಕೆಲಸವಾಗಿದೆ, ಅದರಲ್ಲಿ ಅನೇಕ ಹೊರೆಗಳು, ಅಧಿಕ ಜವಾಬ್ದಾರಿ, ಮತ್ತು ಹೊತ್ತುಮೀರಿದ ಕೆಲಸವು ಸೇರಿರುತ್ತದೆ. ಆದರೆ ಭಾವಾತ್ಮಕ ವಿಷಯವು ಅತ್ಯಂತ ಕಷ್ಟದ ಭಾಗ. ನಿಮ್ಮ ಹೆತ್ತವರು ತಮ್ಮ ಆರೋಗ್ಯ, ಸ್ಮರಣಶಕ್ತಿ, ಮತ್ತು ಸ್ವಾವಲಂಬನೆಯನ್ನು ಕಳೆದುಕೊಳ್ಳುವುದನ್ನು ನೋಡುವುದು ಸಂಕಟಕರ. ಪೋರ್ಟ ರೀಕೊದಿಂದ ಬರುವ ಸ್ಯಾಂಡಿ ಹೇಳುವುದು: “ನನ್ನ ತಾಯಿ ನಮ್ಮ ಕುಟುಂಬದ ಕೇಂದ್ರಬಿಂದುವಾಗಿದ್ದರು. ಅವರ ಆರೈಕೆಯನ್ನು ಮಾಡುವುದು ಅತಿ ವೇದನಾಮಯವಾಗಿತ್ತು. ಆರಂಭದಲ್ಲಿ ಅವರು ಕುಂಟತೊಡಗಿದರು; ಅನಂತರ ಕೈಕೋಲು ಅವರಿಗೆ ಬೇಕಾಯಿತು, ಆಮೇಲೆ ನಡೆಗಾಡಿ, ಬಳಿಕ ಗಾಲಿಕುರ್ಚಿ. ತದನಂತರ ಮತ್ತೂ ಕೆಡುತ್ತಾ ಬಂದು ಅವರು ತೀರಿಕೊಂಡರು. ಅವರಿಗೆ ಎಲುಬಿನ ಕ್ಯಾನ್ಸರ್‌ ತಗಲಿತು ಮತ್ತು ಸತತವಾಗಿ—ಹಗಲಿರುಳು ಆರೈಕೆ ಬೇಕಾಯಿತು. ನಾವು ಅವರನ್ನು ಮೀಯಿಸಿದೆವು, ಅವರಿಗೆ ಉಣಿಸಿದೆವು, ಓದಿಹೇಳಿದೆವು. ಇದು ಬಹಳ ಕಷ್ಟಕರವಾಗಿತ್ತು—ವಿಶೇಷವಾಗಿ ಭಾವನಾತ್ಮಕವಾಗಿ. ನನ್ನ ತಾಯಿ ಸಾಯುತ್ತಿರುವುದನ್ನು ನಾನು ಗ್ರಹಿಸಿಕೊಂಡಾಗ, ನಾನು ಅತ್ತೆ, ಯಾಕಂದರೆ ನಾನು ಅವರನ್ನು ಬಹಳವಾಗಿ ಪ್ರೀತಿಸಿದ್ದೆ.”

      16, 17. ಆರೈಕೆಗಾರನು ವಿಷಯದ ಒಂದು ಸಮತೆಯ ವೀಕ್ಷಣವನ್ನು ಇಟ್ಟುಕೊಳ್ಳಲು ಯಾವ ಬುದ್ಧಿವಾದವು ಸಹಾಯ ಮಾಡಬಹುದು?

      16 ತದ್ರೀತಿಯ ಒಂದು ಸನ್ನಿವೇಶದಲ್ಲಿ ನೀವು ನಿಮ್ಮನ್ನು ಕಂಡುಕೊಂಡರೆ, ನಿಭಾಯಿಸಲಿಕ್ಕೆ ನೀವೇನು ಮಾಡಬಲ್ಲಿರಿ? ಬೈಬಲ್‌ ವಾಚನದ ಮೂಲಕ ಯೆಹೋವನಿಗೆ ಕಿವಿಗೊಡುವುದು ಮತ್ತು ಪ್ರಾರ್ಥನೆಯ ಮೂಲಕ ಆತನೊಂದಿಗೆ ಮಾತಾಡುವುದು ನಿಮಗೆ ಬಹಳವಾಗಿ ಸಹಾಯ ಮಾಡುವುದು. (ಫಿಲಿಪ್ಪಿ 4:6, 7) ಒಂದು ಪ್ರಾಯೋಗಿಕ ರೀತಿಯಲ್ಲಿ, ನೀವು ಸಮತೂಕದ ಊಟಗಳನ್ನು ಉಣ್ಣಲು ನಿಶ್ಚಯಮಾಡಿಕೊಳ್ಳಿರಿ ಮತ್ತು ಸಾಕಷ್ಟು ನಿದ್ರೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಇದನ್ನು ಮಾಡುವ ಮೂಲಕ, ನಿಮ್ಮ ಪ್ರಿಯರ ಆರೈಕೆ ಮಾಡಲು ನೀವು ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ಉತ್ತಮ ಸ್ಥಿತಿಯಲ್ಲಿರುವಿರಿ. ಪ್ರಾಯಶಃ ಆಗಾಗ ನಿಮ್ಮ ಆ ದಿನಚರ್ಯೆಯಿಂದ ತುಸು ವಿರಾಮವನ್ನು ನೀವು ಏರ್ಪಡಿಸಿಕೊಳ್ಳಸಾಧ್ಯವಿದೆ. ರಜೆಯು ಅಶಕ್ಯವಾಗಿರುವುದಾದರೂ, ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಬದಿಗಿಡುವುದು ಮತ್ತೂ ವಿವೇಕಪ್ರದವಾಗಿದೆ. ಅಸ್ವಸ್ಥರಾದ ನಿಮ್ಮ ಹೆತ್ತವರೊಂದಿಗೆ ಯಾರಾದರೂ ಇರುವಂತೆ ಏರ್ಪಡಿಸುವ ಮೂಲಕ ನೀವು ಸ್ವಲ್ಪ ಸಮಯ ಅವರಿಂದ ದೂರವಿರಲೂ ಶಕ್ತರಾಗಬಹುದು.

      17 ವಯಸ್ಕ ಆರೈಕೆಗಾರರಿಗೆ ತಮ್ಮ ವಿಷಯವಾಗಿ ಅಯುಕ್ತವಾದ ನಿರೀಕ್ಷಣೆಗಳಿರುವುದೇನೂ ಅಸಾಮಾನ್ಯವಲ್ಲ. ಆದರೆ ನಿಮಗೇನು ಮಾಡಸಾಧ್ಯವಿಲ್ಲವೊ ಅದಕ್ಕಾಗಿ ದೋಷಿಭಾವವನ್ನು ತಾಳಬೇಡಿ. ಕೆಲವು ಪರಿಸ್ಥಿತಿಗಳಲ್ಲಿ ನಿಮಗೆ ನಿಮ್ಮ ಪ್ರಿಯರನ್ನು ಒಂದು ರೋಗೋಪಚಾರ ಗೃಹಕ್ಕೆ ವಹಿಸಿಕೊಡುವ ಅಗತ್ಯಬಿದ್ದೀತು. ಆರೈಕೆಗಾರರು ನೀವಾಗಿರುವುದಾದರೆ, ನಿಮಗಾಗಿ ಸಮಂಜಸವಾದ ನಿರೀಕ್ಷಣೆಗಳನ್ನಿಡಿರಿ. ನಿಮ್ಮ ಹೆತ್ತವರ ಅಗತ್ಯಗಳನ್ನು ಮಾತ್ರವಲ್ಲ ನಿಮ್ಮ ಮಕ್ಕಳ, ನಿಮ್ಮ ಜೊತೆಗಾರರ ಹಾಗೂ ನಿಮ್ಮ ಅಗತ್ಯಗಳನ್ನು ನೀವು ಸರಿದೂಗಿಸಬೇಕು.

      ಸಾಮಾನ್ಯವಾಗಿರುವುದನ್ನು ಮೀರುವ ಬಲ

      18, 19. ಬೆಂಬಲದ ಯಾವ ವಾಗ್ದಾನವನ್ನು ಯೆಹೋವನು ಮಾಡಿದ್ದಾನೆ, ಮತ್ತು ಆತನು ಈ ವಾಗ್ದಾನವನ್ನು ನೆರವೇರಿಸುತ್ತಾನೆಂದು ಯಾವ ಅನುಭವವು ತೋರಿಸುತ್ತದೆ?

      18 ವೃದ್ಧ ಹೆತ್ತವರ ಆರೈಕೆ ಮಾಡುವುದರಲ್ಲಿ ಒಬ್ಬ ವ್ಯಕ್ತಿಗೆ ಬಹಳವಾಗಿ ಸಹಾಯ ಮಾಡಬಲ್ಲ ಮಾರ್ಗದರ್ಶನವನ್ನು ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ಪ್ರೀತಿಯಿಂದ ಒದಗಿಸುತ್ತಾನೆ, ಆದರೆ ಆತನು ಒದಗಿಸುವಂತಹ ಸಹಾಯವು ಅದು ಮಾತ್ರವೇ ಅಲ್ಲ. “ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ,” ಎಂದು ಕೀರ್ತನೆಗಾರನು ಪ್ರೇರಿತನಾಗಿ ಬರೆದನು. “ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” ಅತ್ಯಂತ ಕಷ್ಟದ ಸನ್ನಿವೇಶಗಳಿಂದ ಕೂಡ ಯೆಹೋವನು ತನ್ನ ನಂಬಿಗಸ್ತರನ್ನು ರಕ್ಷಿಸುವನು ಅಥವಾ ಕಾಪಾಡಿ ಉಳಿಸುವನು.—ಕೀರ್ತನೆ 145:18, 19.

      19 ಫಿಲಿಪ್ಪೀನ್ಸ್‌ನ ಮರ್ನಳಿಗೆ, ಲಕ್ವಾ ಹೊಡೆತದಿಂದಾಗಿ ಅಸಹಾಯಕಳಾಗಿ ಮಾಡಲ್ಪಟ್ಟ ತನ್ನ ತಾಯಿಯ ಆರೈಕೆ ಮಾಡುತ್ತಿದ್ದಾಗ, ಇದು ತಿಳಿದುಬಂತು. “ಎಲ್ಲಿ ನೋಯುತ್ತದೆಂದು ಹೇಳಶಕ್ತರಾಗದೆ ನಮ್ಮ ಪ್ರಿಯರು ನರಳುವುದನ್ನು ನೋಡುವುದಕ್ಕಿಂತ ಹೆಚ್ಚಿನ ಕೊರಗು ಬೇರೊಂದಿಲ್ಲ,” ಎಂದು ಬರೆಯುತ್ತಾಳೆ ಮರ್ನ. “ಅದು ಅವರು ಸ್ವಲ್ಪ ಸ್ವಲ್ಪವಾಗಿಯೆ ಮುಳುಗುತ್ತಾ ಸಾಯುವುದನ್ನು ಕಾಣುವಂತಿತ್ತು ಮತ್ತು ನನಗೇನೂ ಮಾಡಸಾಧ್ಯವಿರಲಿಲ್ಲ. ಅನೇಕಸಲ ನಾನು ಮೊಣಕಾಲೂರಿ, ನಾನೆಷ್ಟು ಬಳಲಿದ್ದೇನೆಂಬುದರ ಕುರಿತು ಯೆಹೋವನಿಗೆ ಹೇಳುತ್ತಿದ್ದೆ. ತನ್ನ ಕಣ್ಣೀರನ್ನು ಬುದ್ದಲಿಯಲ್ಲಿ ತುಂಬಿಸಿ ತನ್ನನ್ನು ಜ್ಞಾಪಿಸಿಕೊಳ್ಳುವಂತೆ ಯೆಹೋವನಿಗೆ ಮೊರೆಯಿಟ್ಟ ದಾವೀದನಂತೆ ನಾನು ಅತ್ತೆ. [ಕೀರ್ತನೆ 56:8] ಮತ್ತು ಯೆಹೋವನು ವಚನವಿತ್ತ ಪ್ರಕಾರವೇ, ನನಗೆ ಅಗತ್ಯವಾದ ಬಲವನ್ನು ಆತನು ಕೊಟ್ಟನು. ‘ಯೆಹೋವನು ನನಗೆ ಉದ್ಧಾರಕನಾದನು.’”—ಕೀರ್ತನೆ 18:18.

      20. ತಾವು ಯಾರನ್ನು ಆರೈಕೆಮಾಡುತ್ತಾರೊ ಅವರು ಸತ್ತರೂ, ಆರೈಕೆಗಾರರಿಗೆ ಆಶಾವಾದಿಗಳಾಗಿ ಉಳಿಯಲು ಯಾವ ಬೈಬಲ್‌ ವಾಗ್ದಾನಗಳು ಸಹಾಯ ಮಾಡುತ್ತವೆ?

      20 ವೃದ್ಧ ಹೆತ್ತವರನ್ನು ಪರಾಮರಿಸುವುದು “ಶುಭಸಮಾಪ್ತಿಯಿರದ ಕಥೆ” ಎಂದು ಹೇಳಲ್ಪಡುತ್ತದೆ. ಆರೈಕೆ ಕೊಡುವ ಅತ್ಯುತ್ತಮ ಪ್ರಯತ್ನಗಳ ಹೊರತೂ, ಮರ್ನಳ ತಾಯಿಯಂತೆ, ಮುದಿಪ್ರಾಯದವರು ಸಾಯಬಹುದು. ಆದರೆ ಮರಣವು ವಿಷಯದ ಅಶುಭ ಸಮಾಪ್ತಿಯಾಗಿರುವುದಿಲ್ಲವೆಂದು ಯೆಹೋವನಲ್ಲಿ ಭರವಸವಿಡುವವರಿಗೆ ತಿಳಿದದೆ. ಅಪೊಸ್ತಲ ಪೌಲನು ಹೇಳಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ವೃದ್ಧ ಹೆತ್ತವರನ್ನು ಮರಣದಲ್ಲಿ ಕಳೆದುಕೊಂಡವರು, ‘ಇನ್ನು ಮರಣವಿಲ್ಲದ’ ದೇವನಿರ್ಮಿತ ಹೊಸ ಲೋಕವೊಂದರ ಉಲ್ಲಾಸಕರ ವಾಗ್ದಾನದೊಂದಿಗೆ, ಪುನರುತ್ಥಾನದ ನಿರೀಕ್ಷೆಯಲ್ಲಿ ಸಾಂತ್ವನವನ್ನು ಪಡೆದುಕೊಳ್ಳುವರು.—ಪ್ರಕಟನೆ 21:4.

      21. ವೃದ್ಧ ಹೆತ್ತವರನ್ನು ಸನ್ಮಾನಿಸುವುದರಿಂದ ಯಾವ ಸತ್ಪರಿಣಾಮಗಳು ಬರುತ್ತವೆ?

      21 ದೇವರ ಸೇವಕರಿಗೆ ತಮ್ಮ ಹೆತ್ತವರ ಮೇಲೆ, ಅವರು ಮುಪ್ಪಿಗೆ ತಲಪಿರಬಹುದಾದರೂ, ಆಳವಾದ ಆದರವಿರುತ್ತದೆ. (ಜ್ಞಾನೋಕ್ತಿ 23:22-24) ಅವರು ಅವರನ್ನು ಸನ್ಮಾನಿಸುತ್ತಾರೆ. ಹಾಗೆ ಮಾಡುವುದರಲ್ಲಿ ಪ್ರೇರಿತ ಜ್ಞಾನೋಕ್ತಿ ಏನು ಹೇಳುತ್ತದೊ ಅದನ್ನು ಅವರು ಅನುಭವಿಸುತ್ತಾರೆ: “ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.” (ಜ್ಞಾನೋಕ್ತಿ 23:25) ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ತಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವವರು ಯೆಹೋವ ದೇವರನ್ನು ಸಹ ಮೆಚ್ಚಿಸಿ ಸನ್ಮಾನಿಸುತ್ತಾರೆ.

      a ನಾವಿಲ್ಲಿ, ಯಾವುದರಲ್ಲಿ ಹೆತ್ತವರು ತಮ್ಮ ಶಕ್ತಿ ಮತ್ತು ಭರವಸೆಯ ಅತಿರೇಕ ದುರುಪಯೋಗಕ್ಕೆ ದೋಷಿಗಳಾಗಿದ್ದರೊ, ಯಾವುದನ್ನು ಪಾತಕ ಪ್ರಮಾಣವಾಗಿ ವೀಕ್ಷಿಸಬಹುದೊ ಆ ಸನ್ನಿವೇಶಗಳನ್ನು ಚರ್ಚಿಸುತ್ತಿಲ್ಲ.

      ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸಲಿಕ್ಕಾಗಿ ನಮಗೆ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ಹೆತ್ತವರಿಗೆ ಮತ್ತು ಅಜ್ಜಅಜ್ಜಿಯರಿಗೆ ಸಲ್ಲತಕ್ಕ ಪ್ರತ್ಯುಪಕಾರವನ್ನು ನಾವು ಸಲ್ಲಿಸಬೇಕು.—1 ತಿಮೊಥೆಯ 5:4.

      ನಮ್ಮ ಕಾರ್ಯಾದಿಗಳೆಲ್ಲವೂ ಪ್ರೀತಿಯಿಂದ ನಡೆಯಬೇಕು. —1 ಕೊರಿಂಥ 16:14.

      ಮಹತ್ವದ ನಿರ್ಣಯಗಳನ್ನು ಎಂದೂ ಅವಸರದಿಂದ ಮಾಡಬಾರದು. —ಜ್ಞಾನೋಕ್ತಿ 14:15.

      ವೃದ್ಧ ಹೆತ್ತವರು, ಅಸ್ವಸ್ಥರೂ ನಿರ್ಬಲರೂ ಆಗಿದ್ದರೂ, ಸನ್ಮಾನಿಸಲ್ಪಡಬೇಕು.—ಯಾಜಕಕಾಂಡ 19:32.

      ವೃದ್ಧರಾಗುವ ಮತ್ತು ಸಾಯುವ ಪ್ರತೀಕ್ಷೆಯನ್ನು ನಾವು ಯಾವಾಗಲೂ ಎದುರಿಸುತ್ತಿರೆವು.—ಪ್ರಕಟನೆ 21:4.

  • ನಿಮ್ಮ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ
    ಕುಟುಂಬ ಸಂತೋಷದ ರಹಸ್ಯ
    • ಅಧ್ಯಾಯ ಹದಿನಾರು

      ನಿಮ್ಮ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ

      1. ಕುಟುಂಬ ಏರ್ಪಾಡಿಗಾಗಿ ಯೆಹೋವನ ಉದ್ದೇಶವೇನಾಗಿತ್ತು?

      ಯೆಹೋವ ದೇವರು ಆದಾಮ ಮತ್ತು ಹವ್ವರನ್ನು ವಿವಾಹದಲ್ಲಿ ಐಕ್ಯಗೊಳಿಸಿದಾಗ, ದಾಖಲೆಯಾಗಿರುವ ಅತ್ಯಾರಂಭದ ಹೀಬ್ರು ಕವಿತೆಯನ್ನು ನುಡಿಯುವ ಮೂಲಕ ಆದಾಮನು ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. (ಆದಿಕಾಂಡ 2:22, 23) ಆದರೂ, ತನ್ನ ಮಾನವ ಮಕ್ಕಳಿಗೆ ಕೇವಲ ಸುಖಾನುಭವವನ್ನು ತರುವುದಕ್ಕಿಂತಲೂ ಹೆಚ್ಚನ್ನು ನಿರ್ಮಾಣಿಕನು ಸಂಕಲ್ಪಿಸಿದ್ದನು. ವಿವಾಹಿತ ದಂಪತಿಗಳು ಮತ್ತು ಕುಟುಂಬಗಳು ತನ್ನ ಚಿತ್ತವನ್ನು ಮಾಡುವಂತೆ ಆತನು ಬಯಸಿದ್ದನು. ಮೊದಲ ಜೊತೆಗೆ ಅವನಂದದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಅದು ಎಂತಹ ಮಹಾ, ಪ್ರತಿಫಲದಾಯಕ ನೇಮಕವಾಗಿತ್ತು! ಆದಾಮ, ಹವ್ವ, ಮತ್ತು ಅವರ ಭವಿಷ್ಯದ ಮಕ್ಕಳು ಯೆಹೋವನ ಚಿತ್ತವನ್ನು ಪೂರ್ಣ ವಿಧೇಯತೆಯಿಂದ ಮಾಡಿದ್ದುದಾದರೆ, ಅವರೆಷ್ಟು ಸಂತೋಷದಲ್ಲಿರುತ್ತಿದ್ದರು!

      2, 3. ಇಂದು ಕುಟುಂಬಗಳು ಅತ್ಯಂತ ಮಹಾ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲವು?

      2 ಇಂದು ಸಹ ಕುಟುಂಬಗಳು ದೇವರ ಚಿತ್ತವನ್ನು ಮಾಡುವುದಕ್ಕೆ ಒಂದುಗೂಡಿ ಕಾರ್ಯನಡೆಸುವಾಗ, ಅತ್ಯಂತ ಸಂತೋಷಿತವಾಗುತ್ತವೆ. ಅಪೊಸ್ತಲ ಪೌಲನು ಬರೆದುದು: “ದಿವ್ಯ ಭಕ್ತಿಯಾದರೊ ಈಗಿನ ಮತ್ತು ಬರಲಿರುವ ಜೀವಿತದ ವಾಗ್ದಾನವನ್ನು ಹಿಡಿದಿರುವುದರಿಂದ, ಸಕಲ ವಿಷಯಗಳಿಗೆ ಪ್ರಯೋಜನಕರವಾಗಿದೆ.” (1 ತಿಮೊಥೆಯ 4:8, NW) ದಿವ್ಯ ಭಕ್ತಿಯೊಂದಿಗೆ ಜೀವಿಸುವ ಮತ್ತು ಬೈಬಲಿನಲ್ಲಿ ಒಳಗೊಂಡಿರುವ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವ ಒಂದು ಕುಟುಂಬವು, “ಈಗಿನ . . . ಜೀವಿತ”ದಲ್ಲಿ ಸಂತೋಷವನ್ನು ಪಡೆಯುವುದು. (ಕೀರ್ತನೆ 1:1-3; 119:105; 2 ತಿಮೊಥೆಯ 3:16) ಕುಟುಂಬದ ಒಬ್ಬನೇ ಒಬ್ಬ ಸದಸ್ಯನು ಬೈಬಲಿನ ಮೂಲತತ್ವಗಳನ್ನು ಅನ್ವಯಿಸುವುದಾದರೂ, ಸನ್ನಿವೇಶವು ಯಾರೂ ಅನುಸರಿಸದೆ ಇರುವುದಕ್ಕಿಂತ ಹೆಚ್ಚು ಉತ್ತಮವಾಗಿರುತ್ತದೆ.

      3 ಕುಟುಂಬ ಸಂತೋಷಕ್ಕೆ ನೆರವಾಗುವ ಅನೇಕ ಬೈಬಲ್‌ ಮೂಲತತ್ವಗಳನ್ನು ಈ ಪುಸ್ತಕವು ಚರ್ಚಿಸಿದೆ. ಅವುಗಳಲ್ಲಿ ಕೆಲವು ಮೂಲತತ್ವಗಳು ಇಡೀ ಪುಸ್ತಕದಲ್ಲಿ ಪದೇ ಪದೇ ಕಂಡುಬರುವುದನ್ನು ಪ್ರಾಯಶಃ ನೀವು ಗಮನಿಸಿದ್ದೀರಿ. ಯಾಕೆ? ಯಾಕಂದರೆ ಕುಟುಂಬ ಜೀವನದ ವಿವಿಧ ಅಂಶಗಳಲ್ಲಿ ಎಲ್ಲರ ಒಳಿತಿಗಾಗಿ ಕಾರ್ಯನಡೆಸುವ ಪ್ರಬಲ ಸತ್ಯಗಳನ್ನು ಅವು ಪ್ರತಿನಿಧಿಸುತ್ತವೆ. ಬೈಬಲಿನ ಈ ಮೂಲತತ್ವಗಳನ್ನು ಅನ್ವಯಿಸುವುದಕ್ಕೆ ಪ್ರಯಾಸಪಡುವ ಒಂದು ಕುಟುಂಬವು, ದಿವ್ಯ ಭಕ್ತಿಯು ನಿಜವಾಗಿ “ಈಗಿನ ಜೀವಿತದ ವಾಗ್ದಾನವನ್ನು ಹಿಡಿದಿರು”ತ್ತದಂದು ಕಂಡುಕೊಳ್ಳುತ್ತದೆ. ಆ ಪ್ರಾಮುಖ್ಯ ಮೂಲತತ್ವಗಳಲ್ಲಿ ನಾಲ್ಕರ ಕಡೆಗೆ ನಾವು ಪುನಃ ನೋಡೋಣ.

      ಆತ್ಮಸಂಯಮದ ಮೌಲ್ಯ

      4. ಒಂದು ವಿವಾಹದಲ್ಲಿ ಆತ್ಮಸಂಯಮವು ಏಕೆ ಅತ್ಯಾವಶ್ಯಕ?

      4 ಅರಸನಾದ ಸೊಲೊಮೋನನು ಹೇಳಿದ್ದು: “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 25:28; 29:11) ಒಂದು ಸಂತೋಷದ ವಿವಾಹವನ್ನು ಬಯಸುವವರು ‘ಆತ್ಮ ನಿಯಂತ್ರಣವನ್ನು,’ ಆತ್ಮಸಂಯಮವನ್ನು ಅಭ್ಯಾಸಿಸುವುದು ಅತ್ಯಾವಶ್ಯಕ. ಕ್ರೋಧ ಅಥವಾ ಅನೈತಿಕ ಕಾಮಾಭಿಲಾಷೆಯಂತಹ ನಾಶಕಾರಕ ಭಾವಾವೇಶಗಳಿಗೆ ಒಪ್ಪಿಸಿಕೊಡುವುದು, ದುರಸ್ತಿಗೆ—ಎಂದಾದರೂ ಮಾಡಸಾಧ್ಯವಿರುವಲ್ಲಿ—ವರುಷಗಳು ತಗಲುವ ಹಾನಿಯನ್ನು ಆಗಿಸುವುದು.

      5. ಒಬ್ಬ ಅಪರಿಪೂರ್ಣ ಮಾನವನು ಆತ್ಮಸಂಯಮವನ್ನು ಹೇಗೆ ಬೆಳೆಸಿಕೊಳ್ಳಬಲ್ಲನು, ಮತ್ತು ಯಾವ ಪ್ರಯೋಜನಗಳೊಂದಿಗೆ?

      5 ನಿಶ್ಚಯವಾಗಿಯೂ ಆದಾಮನ ಯಾವ ಸಂತತಿಯವನೂ ತನ್ನ ಅಪರಿಪೂರ್ಣ ಶರೀರವನ್ನು ಪೂರ್ಣವಾಗಿ ಸ್ವಾಧೀನದಲ್ಲಿಡಶಕ್ತನಲ್ಲ. (ರೋಮಾಪುರ 7:21, 22) ಆದರೂ, ಆತ್ಮಸಂಯಮವು ಆತ್ಮದ ಫಲಗಳಲ್ಲಿ ಒಂದಾಗಿದೆ. (ಗಲಾತ್ಯ 5:22, 23) ಆದಕಾರಣ, ನಾವು ಈ ಗುಣಕ್ಕಾಗಿ ಪ್ರಾರ್ಥಿಸುವುದಾದರೆ, ಶಾಸ್ತ್ರಗಳಲ್ಲಿ ಕಂಡುಬರುವ ಸೂಕ್ತವಾದ ಸಲಹೆಯನ್ನು ನಾವು ಅನ್ವಯಿಸುವುದಾದರೆ, ಮತ್ತು ಅದನ್ನು ಪ್ರದರ್ಶಿಸುವ ಇತರರೊಂದಿಗೆ ನಾವು ಸಾಹಚರ್ಯವನ್ನಿಟ್ಟುಕೊಂಡು ಅದನ್ನು ಪ್ರದರ್ಶಿಸದವರನ್ನು ವರ್ಜಿಸುವುದಾದರೆ, ದೇವರಾತ್ಮವು ನಮ್ಮಲ್ಲಿ ಆತ್ಮಸಂಯಮವನ್ನು ಉತ್ಪಾದಿಸುವುದು. (ಕೀರ್ತನೆ 119:100, 101, 130; ಜ್ಞಾನೋಕ್ತಿ 13:20; 1 ಪೇತ್ರ 4:7) ಅಂತಹ ಒಂದು ಮಾರ್ಗವು, ನಾವು ಶೋಧನೆಗೆ ಗುರಿಯಾದಾಗಲೂ, “ಜಾರತ್ವಕ್ಕೆ ದೂರವಾಗಿ ಓಡಿ”ಹೋಗುವುದಕ್ಕೆ ಸಹಾಯ ಮಾಡುವುದು. (1 ಕೊರಿಂಥ 6:18) ನಾವು ಹಿಂಸಾಚಾರವನ್ನು ತಳ್ಳಿಹಾಕಿ, ಮದ್ಯರೋಗಾವಸ್ಥೆಯನ್ನು ವರ್ಜಿಸುವೆವು ಅಥವಾ ಜಯಿಸುವೆವು. ಮತ್ತು ಕೆರಳಿಕೆಗಳೊಂದಿಗೆ ಮತ್ತು ಕಷ್ಟದ ಸನ್ನಿವೇಶಗಳೊಂದಿಗೆ ಹೆಚ್ಚು ಶಾಂತಮನಸ್ಸಿನಿಂದ ವ್ಯವಹರಿಸುವೆವು. ನಾವೆಲ್ಲರೂ—ಮಕ್ಕಳೂ ಸೇರಿ—ದೇವರಾತ್ಮದ ಈ ಮಹತ್ವವುಳ್ಳ ಫಲವನ್ನು ಬೆಳೆಸಿಕೊಳ್ಳಲು ಕಲಿಯುವಂತಾಗಲಿ.—ಕೀರ್ತನೆ 119:1, 2.

      ತಲೆತನದ ಕುರಿತಾಗಿ ಒಂದು ಯೋಗ್ಯ ನೋಟ

      6. (ಎ) ದೈವಿಕವಾಗಿ ಸ್ಥಾಪಿಸಲ್ಪಟ್ಟ ತಲೆತನದ ಏರ್ಪಾಡು ಯಾವುದು? (ಬಿ) ತಲೆತನವು ತನ್ನ ಕುಟುಂಬಕ್ಕೆ ಸಂತೋಷವನ್ನು ತರಬೇಕಾದರೆ ಒಬ್ಬ ಪುರುಷನು ಏನನ್ನು ನೆನಪಿನಲ್ಲಿಡಬೇಕು?

      6 ಎರಡನೆಯ ಪ್ರಾಮುಖ್ಯ ಮೂಲತತ್ವವು ತಲೆತನದ ಅಂಗೀಕಾರವಾಗಿದೆ. ಪೌಲನು ಹೀಗೆ ಹೇಳಿದಾಗ ವಿಷಯಗಳ ಯೋಗ್ಯವಾದ ಕ್ರಮವನ್ನು ವರ್ಣಿಸಿದನು: “ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಇದರ ಅರ್ಥವೇನಂದರೆ, ಕುಟುಂಬದಲ್ಲಿ ಪುರುಷನು ನಾಯಕತ್ವ ವಹಿಸುತ್ತಾನೆ, ಅವನ ಹೆಂಡತಿಯು ನಿಷ್ಠೆಯಿಂದ ಬೆಂಬಲಿಸುತ್ತಾಳೆ, ಮತ್ತು ಮಕ್ಕಳು ತಮ್ಮ ಹೆತ್ತವರಿಗೆ ಅಧೀನರಾಗುತ್ತಾರೆ. (ಎಫೆಸ 5:22-25, 28-33; 6:1-4) ಆದರೂ, ಅದನ್ನು ಒಂದು ಯೋಗ್ಯ ರೀತಿಯಲ್ಲಿ ನಿರ್ವಹಿಸಿದಾಗ ಮಾತ್ರ ತಲೆತನವು ಸಂತೋಷಕ್ಕೆ ನಡೆಸುತ್ತದೆ ಎಂಬುದನ್ನು ಗಮನಿಸಿರಿ. ದಿವ್ಯ ಭಕ್ತಿಯಲ್ಲಿ ಜೀವಿಸುವ ಗಂಡಂದಿರಿಗೆ ತಲೆತನವು ನಿರಂಕುಶ ಪ್ರಭುತ್ವವಲ್ಲವೆಂದು ತಿಳಿದಿದೆ. ತಮ್ಮ ತಲೆಯಾದ ಯೇಸುವನ್ನು ಅವರು ಅನುಕರಿಸುತ್ತಾರೆ. ಯೇಸು ‘ಎಲ್ಲಾದರ ಮೇಲೆ ಶಿರಸ್ಸಾಗಿ’ ಇರಲಿದ್ದರೂ, ಅವನು “ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದ”ಕ್ಕೆ ಬಂದನು. (ಎಫೆಸ 1:22; ಮತ್ತಾಯ 20:28) ಅದೇ ರೀತಿಯಲ್ಲಿ, ಒಬ್ಬ ಕ್ರೈಸ್ತ ಪುರುಷನು ತಲೆತನವನ್ನು, ತನ್ನ ಪ್ರಯೋಜನಕ್ಕಾಗಿ ಅಲ್ಲ, ತನ್ನ ಹೆಂಡತಿ ಮತ್ತು ಮಕ್ಕಳ ಹಿತಾಸಕ್ತಿಗಳ ಪರಾಮರಿಕೆಗಾಗಿ ನಡೆಸುತ್ತಾನೆ.—1 ಕೊರಿಂಥ 13:4, 5.

      7. ಯಾವ ಶಾಸ್ತ್ರೀಯ ಮೂಲತತ್ವಗಳು ಕುಟುಂಬದಲ್ಲಿ ತನ್ನ ದೈವನೇಮಿತ ಪಾತ್ರವನ್ನು ನೆರವೇರಿಸಲು ಹೆಂಡತಿಗೆ ಸಹಾಯ ಮಾಡುವವು?

      7 ದಿವ್ಯ ಭಕ್ತಿಯಲ್ಲಿ ಜೀವಿಸುವ ಹೆಂಡತಿಯಂತೂ, ತನ್ನ ಗಂಡನೊಂದಿಗೆ ಸ್ಪರ್ಧಿಸಲು ಅಥವಾ ಅವನ ಮೇಲೆ ಅಧಿಕಾರ ನಡೆಸಲು ಪ್ರಯತ್ನಿಸುವುದಿಲ್ಲ. ಅವನಿಗೆ ಬೆಂಬಲಿಗಳಾಗಿರಲು ಮತ್ತು ಅವನೊಂದಿಗೆ ಸಹಕರಿಸಲು ಅವಳು ಸಂತೋಷಪಡುತ್ತಾಳೆ. ಬೈಬಲು ಕೆಲವು ಸಲ ಹೆಂಡತಿಯ ಕುರಿತು ಅವಳು ತನ್ನ ಗಂಡನ “ಸ್ವಾಮ್ಯದ” ಕೆಳಗೆ ಇರುವವಳಾಗಿ ಮಾತಾಡುತ್ತಾ, ಅವನು ಅವಳ ತಲೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. (ಆದಿಕಾಂಡ 20:3, NW) ವಿವಾಹದ ಮೂಲಕ ಅವಳು “ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು.” (ರೋಮಾಪುರ 7:2) ಅದೇ ಸಮಯದಲ್ಲಿ, ಬೈಬಲು ಅವಳನ್ನು “ಸಹಕಾರಿಣಿ” ಅಥವಾ ಒಂದು “ಪರಿಪೂರಕ”ಳು ಎಂದು ಕರೆಯುತ್ತದೆ. (ಆದಿಕಾಂಡ 2:20, NW) ತನ್ನ ಗಂಡನಲ್ಲಿ ನ್ಯೂನವಾಗಿರುವ ಗುಣಗಳನ್ನು ಮತ್ತು ಸಾಮರ್ಥ್ಯಗಳನ್ನು ಅವಳು ಒದಗಿಸಿ, ಅವನಿಗೆ ಬೇಕಾದ ಬೆಂಬಲವನ್ನು ನೀಡುತ್ತಾಳೆ. (ಜ್ಞಾನೋಕ್ತಿ 31:10-31) ಹೆಂಡತಿಯು ತನ್ನ ಸಂಗಾತಿಯೊಂದಿಗೆ ಜೊತೆಜೊತೆಯಾಗಿ ಕೆಲಸಮಾಡುವ “ಸಹಭಾಗಿ” ಎಂದೂ ಬೈಬಲು ಹೇಳುತ್ತದೆ. (ಮಲಾಕಿಯ 2:14) ಈ ಶಾಸ್ತ್ರೀಯ ಮೂಲತತ್ವಗಳು ಒಬ್ಬ ಗಂಡ ಮತ್ತು ಹೆಂಡತಿಗೆ, ತಮ್ಮ ಪರಸ್ಪರ ಸ್ಥಾನವನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಯೋಗ್ಯ ಗೌರವ ಮತ್ತು ಆದರದಿಂದ ಒಬ್ಬರನ್ನೊಬ್ಬರು ಉಪಚರಿಸುವುದಕ್ಕೆ ಸಹಾಯ ಮಾಡುತ್ತವೆ.

      “ಕಿವಿಗೊಡುವುದರಲ್ಲಿ ತೀವ್ರವಾಗಿ” ಇರಿ

      8, 9. ಕುಟುಂಬದಲ್ಲಿರುವವರೆಲ್ಲರಿಗೆ, ತಮ್ಮ ಸಂವಾದದ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಮೂಲತತ್ವಗಳನ್ನು ವಿವರಿಸಿರಿ.

      8 ಸಂವಾದ ಮಾಡುವ ಅಗತ್ಯವನ್ನು ಪದೇ ಪದೇ ಈ ಪುಸ್ತಕದಲ್ಲಿ ಒತ್ತಿಹೇಳಲಾಗಿದೆ. ಯಾಕೆ? ಯಾಕಂದರೆ ಜನರು ಇತರರೊಂದಿಗೆ ಮಾತಾಡುವಾಗ ಮತ್ತು ನಿಜವಾಗಿಯೂ ಪರಸ್ಪರವಾಗಿ ಕಿವಿಗೊಡುವಾಗ, ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಸುಲಭವಾಗಿರುತ್ತದೆ. ಸಂವಾದವು ಒಂದು ಇದ್ದಾರಿಯ ರಸ್ತೆಯೆಂಬುದಾಗಿ ಪದೇ ಪದೇ ಒತ್ತಿ ಹೇಳಲಾಗಿತ್ತು. ಶಿಷ್ಯ ಯಾಕೋಬನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.”—ಯಾಕೋಬ 1:19.

      9 ನಾವು ಹೇಗೆ ಮಾತಾಡುತ್ತೇವೆಂಬುದರ ಕುರಿತು ಜಾಗ್ರತೆಯಿಂದಿರುವುದೂ ಪ್ರಾಮುಖ್ಯವಾಗಿದೆ. ದುಡುಕಿನ, ತಕರಾರಿನ, ಅಥವಾ ಕಟು ಟೀಕಾತ್ಮಕ ಮಾತುಗಳು ಯಶ್ವಸಿಯಾದ ಸಂವಾದವನ್ನು ಸಂಯೋಜಿಸುವುದಿಲ್ಲ. (ಜ್ಞಾನೋಕ್ತಿ 15:1; 21:9; 29:11, 20) ನಾವು ಸರಿಯಾದುದನ್ನು ಹೇಳುವಾಗಲೂ, ಅದನ್ನು ಕಠಿನವಾಗಿ, ಜಂಬದಿಂದ, ಅಥವಾ ಭಾವಶೂನ್ಯತೆಯಿಂದ ಹೇಳುವುದಾದರೆ, ಅದು ಒಳ್ಳೇದನ್ನು ಮಾಡುವುದಕ್ಕಿಂತ ಹೆಚ್ಚು ಹಾನಿಮಾಡುವುದು ಸಂಭವನೀಯ. ನಮ್ಮ ಮಾತು ರುಚಿಕರವೂ “ರಸವತ್ತಾಗಿಯೂ” ಇರಬೇಕು. (ಕೊಲೊಸ್ಸೆ 4:6) ನಮ್ಮ ನುಡಿಗಳು “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು”ಗಳಂತಿರಬೇಕು. (ಜ್ಞಾನೋಕ್ತಿ 25:11) ಚೆನ್ನಾಗಿ ಸಂವಾದ ಮಾಡಲು ಕಲಿಯುವ ಕುಟುಂಬಗಳು ಸಂತೋಷವನ್ನು ಗಳಿಸುವ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿವೆ.

      ಪ್ರೀತಿಯ ಪ್ರಾಮುಖ್ಯ ಪಾತ್ರ

      10. ವಿವಾಹದಲ್ಲಿ ಯಾವ ವಿಧದ ಪ್ರೀತಿಯು ಅತ್ಯಾವಶ್ಯಕ?

      10 ಈ ಪುಸ್ತಕದಲ್ಲಿ “ಪ್ರೀತಿ” ಎಂಬ ಶಬ್ದವು ಪದೇ ಪದೇ ತೋರಿಬರುತ್ತದೆ. ಪ್ರೀತಿಯ ಯಾವ ವಿಧವನ್ನು ಪ್ರಧಾನವಾಗಿ ಸೂಚಿಸಲಾಗಿದೆಯೆಂದು ನಿಮಗೆ ನೆನಪಿದೆಯೆ? ಪ್ರಣಯ ಪ್ರೀತಿ (ಗ್ರೀಕ್‌, ಈರೊಸ್‌) ವಿವಾಹದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆಂಬುದು ನಿಜ, ಮತ್ತು ಯಶ್ವಸಿಯಾದ ವಿವಾಹಗಳಲ್ಲಿ, ಒಬ್ಬ ಗಂಡ ಮತ್ತು ಒಬ್ಬ ಹೆಂಡತಿಯ ಮಧ್ಯೆ ಆಳವಾದ ಮಮತೆ ಮತ್ತು ಗೆಳೆತನ (ಗ್ರೀಕ್‌, ಫಿಲೀಯ)ವು ಬೆಳೆಯುತ್ತದೆ. ಆದರೆ ಗ್ರೀಕ್‌ ಪದವಾದ ಅಗಾಪೆಯಿಂದ ಪ್ರತಿನಿಧಿಸಲ್ಪಡುವ ಪ್ರೀತಿಯು ಅದಕ್ಕಿಂತಲೂ ಹೆಚ್ಚು ಮಹತ್ವದ್ದು. ಯೆಹೋವನಿಗಾಗಿ, ಯೇಸುವಿಗಾಗಿ, ಮತ್ತು ನಮ್ಮ ನೆರೆಯವನಿಗಾಗಿ ನಾವು ಬೆಳೆಸಿಕೊಳ್ಳುವ ಪ್ರೀತಿಯು ಇದೇ. (ಮತ್ತಾಯ 22:37-39) ಯೆಹೋವನು ಮಾನವಕುಲದ ಕಡೆಗೆ ವ್ಯಕ್ತಪಡಿಸುವ ಪ್ರೀತಿಯು ಇದಾಗಿದೆ. (ಯೋಹಾನ 3:16) ಅದೇ ವಿಧದ ಪ್ರೀತಿಯನ್ನು ನಾವು ನಮ್ಮ ವಿವಾಹ ಸಂಗಾತಿಗಾಗಿ ಮತ್ತು ಮಕ್ಕಳಿಗಾಗಿ ತೋರಿಸಬಲ್ಲವರಾಗಿರುವುದು ಎಷ್ಟು ಅದ್ಭುತಕರವಾಗಿದೆ!—1 ಯೋಹಾನ 4:19.

      11. ಒಂದು ವಿವಾಹದ ಒಳಿತಿಗಾಗಿ ಪ್ರೀತಿಯು ಹೇಗೆ ಕಾರ್ಯನಡೆಸುತ್ತದೆ?

      11 ವಿವಾಹದಲ್ಲಿ ಈ ಉದಾತ್ತ ಪ್ರೀತಿಯು ನಿಜವಾಗಿಯೂ “ಐಕ್ಯದ ಒಂದು ಪರಿಪೂರ್ಣ ಬಂಧ”ವಾಗಿದೆ. (ಕೊಲೊಸ್ಸೆ 3:14, NW) ಅದು ಒಬ್ಬ ದಂಪತಿಗಳನ್ನು ಒಂದಾಗಿ ಬಂಧಿಸಿ, ತಾವು ಒಬ್ಬರಿಗೊಬ್ಬರು ಮತ್ತು ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾದುದನ್ನು ಮಾಡಬಯಸುವಂತೆ ಮಾಡುತ್ತದೆ. ಕುಟುಂಬಗಳು ಕಷ್ಟದ ಸನ್ನಿವೇಶಗಳನ್ನು ಎದುರಿಸುವಾಗ, ವಿಷಯಗಳನ್ನು ಐಕ್ಯದಿಂದ ನಿರ್ವಹಿಸುವುದಕ್ಕೆ ಪ್ರೀತಿಯು ಅವರಿಗೆ ಸಹಾಯ ಮಾಡುತ್ತದೆ. ಒಬ್ಬ ದಂಪತಿಗಳಿಗೆ ವಯಸ್ಸಾಗುತ್ತಾ ಹೋಗುವಾಗ, ಒಬ್ಬರನ್ನೊಬ್ಬರು ಬೆಂಬಲಿಸುವುದಕ್ಕೆ ಮತ್ತು ಗಣ್ಯಮಾಡುತ್ತಾ ಮಂದುವರಿಯುವುದಕ್ಕೆ ಪ್ರೀತಿಯು ಸಹಾಯ ಮಾಡುತ್ತದೆ. “ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ. . . . ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ. ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”—1 ಕೊರಿಂಥ 13:4-8.

      12. ವಿವಾಹ ದಂಪತಿಗಳಲ್ಲಿರುವ ದೇವರ ಮೇಲಣ ಪ್ರೀತಿಯು ಅವರ ವಿವಾಹವನ್ನು ಏಕೆ ಬಲಪಡಿಸುತ್ತದೆ?

      12 ವಿವಾಹ ಬಂಧವು ವಿವಾಹ ಸಂಗಾತಿಗಳ ನಡುವಣ ಪ್ರೀತಿಯಿಂದ ಮಾತ್ರವಲ್ಲ, ಪ್ರಾಮುಖ್ಯವಾಗಿ ಯೆಹೋವನ ಮೇಲಣ ಪ್ರೀತಿಯಿಂದ ಬಿಗಿಯಾಗಿ ಬಂಧಿಸಲ್ಪಡುವಾಗ ವಿಶೇಷವಾಗಿ ಬಲವಾಗಿರುತ್ತದೆ. (ಪ್ರಸಂಗಿ 4:9-12) ಯಾಕೆ? ಒಳ್ಳೇದು, ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾನ 5:3) ಹೀಗೆ, ಒಬ್ಬ ದಂಪತಿಗಳು ತಮ್ಮ ಮಕ್ಕಳನ್ನು ದಿವ್ಯ ಭಕ್ತಿಯಲ್ಲಿ ತರಬೇತು ಮಾಡುವುದು, ತಾವು ಅವರನ್ನು ಆಳವಾಗಿ ಪ್ರೀತಿಸುವುದರಿಂದ ಮಾತ್ರವಲ್ಲ, ಇದು ಯೆಹೋವನ ಆಜ್ಞೆಯಾಗಿರುವ ಕಾರಣದಿಂದಲೂ ಆಗಿದೆ. (ಧರ್ಮೋಪದೇಶಕಾಂಡ 6:6, 7) ಅವರು ಅನೈತಿಕತೆಯನ್ನು, ಒಬ್ಬರನ್ನೊಬ್ಬರು ಪ್ರೀತಿಸುವ ಕಾರಣದಿಂದಾಗಿ ಮಾತ್ರವಲ್ಲ, “ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸು”ವವನಾದ ಯೆಹೋವನನ್ನು ಪ್ರೀತಿಸುವ ಮುಖ್ಯ ಕಾರಣದಿಂದಾಗಿಯೂ ವರ್ಜಿಸಬೇಕು. (ಇಬ್ರಿಯ 13:4) ವಿವಾಹದ ಒಬ್ಬ ಸಹಭಾಗಿಯು ತೀವ್ರ ಸಮಸ್ಯೆಗಳನ್ನು ಉಂಟುಮಾಡುವುದಾದರೂ, ಯೆಹೋವನಿಗಾಗಿರುವ ಪ್ರೀತಿಯು ಆ ಇನ್ನೊಬ್ಬ ಸಂಗಾತಿಯನ್ನು, ಬೈಬಲ್‌ ಮೂಲತತ್ವಗಳನ್ನು ಅನುಸರಿಸುತ್ತಾ ಮುಂದುವರಿಯುವಂತೆ ಪ್ರೇರಿಸುವುದು. ಯಾವ ಕುಟುಂಬದಲ್ಲಿ ಒಬ್ಬರಿಗೊಬ್ಬರಿಗಿರುವ ಪ್ರೀತಿಯು ಯೆಹೋವನ ಮೇಲಣ ಪ್ರೀತಿಯಿಂದ ಬಿಗಿಯಾಗಿ ಬಂಧಿಸಲ್ಪಡುತ್ತದೊ ಅವು ಧನ್ಯವೇ ಸರಿ!

      ದೇವರ ಚಿತ್ತವನ್ನು ಮಾಡುವ ಕುಟುಂಬ

      13. ದೇವರ ಚಿತ್ತವನ್ನು ಮಾಡುವ ದೃಢನಿಶ್ಚಯವು, ನಿಜವಾಗಿ ಮಹತ್ವವಾದ ವಿಷಯಗಳ ಮೇಲೆ ಕೇಂದ್ರೀಕರಿಸುವಂತೆ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡುವುದು?

      13 ಒಬ್ಬ ಕ್ರೈಸ್ತನ ಇಡೀ ಜೀವನವು ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರಿತವಾಗಿದೆ. (ಕೀರ್ತನೆ 143:10) ದಿವ್ಯ ಭಕ್ತಿಯ ನಿಜವಾದ ಅರ್ಥವು ಇದೇ ಆಗಿದೆ. ದೇವರ ಚಿತ್ತವನ್ನು ಮಾಡುವುದು ಕುಟುಂಬಗಳಿಗೆ ತಮ್ಮ ದೃಷ್ಟಿಯನ್ನು ನಿಜವಾಗಿ ಮಹತ್ವವಾದ ವಿಷಯಗಳ ಮೇಲೆ ಕೇಂದ್ರೀಕರಿಸುವಂತೆ ಸಹಾಯ ಮಾಡುತ್ತದೆ. (ಫಿಲಿಪ್ಪಿ 1:9, 10) ಉದಾಹರಣೆಗಾಗಿ, ಯೇಸು ಎಚ್ಚರಿಸಿದ್ದು: “ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ [“ಮನೆವಾರ್ತೆಯವರೇ,” NW] ವೈರಿಗಳಾಗುವರು.” (ಮತ್ತಾಯ 10:35, 36) ಯೇಸುವಿನ ಎಚ್ಚರಿಕೆಗೆ ಸರಿಯಾಗಿ, ಆತನ ಹಿಂಬಾಲಕರಲ್ಲಿ ಅನೇಕರು ಕುಟುಂಬ ಸದಸ್ಯರಿಂದ ಹಿಂಸಿಸಲ್ಪಟ್ಟಿದ್ದಾರೆ. ಎಂತಹ ವಿಷಾದಕರವಾದ, ದುಃಖಕರವಾದ ಸನ್ನಿವೇಶ! ಆದರೂ, ಕುಟುಂಬ ಬಂಧಗಳು, ಯೆಹೋವ ದೇವರಿಗಾಗಿ ಮತ್ತು ಯೇಸು ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಗಿಂತ ಹೆಚ್ಚು ಪ್ರಧಾನವಾಗಿರಬಾರದು. (ಮತ್ತಾಯ 10:37-39) ಕುಟುಂಬ ವಿರೋಧದ ಮಧ್ಯೆಯೂ ಒಬ್ಬನು ತಾಳಿಕೊಳ್ಳುವುದಾದರೆ, ವಿರೋಧಿಗಳು ದಿವ್ಯ ಭಕ್ತಿಯ ಸತ್ಪರಿಣಾಮಗಳನ್ನು ಕಾಣುವಾಗ ಬದಲಾಗಲೂಬಹುದು. (1 ಕೊರಿಂಥ 7:12-16; 1 ಪೇತ್ರ 3:1, 2) ಅದು ಸಂಭವಿಸದಿದ್ದರೂ, ವಿರೋಧದ ಕಾರಣ ದೇವರನ್ನು ಸೇವಿಸುವುದನ್ನು ಬಿಟ್ಟುಬಿಡುವುದರಿಂದ ಯಾವ ಚಿರಸ್ಥಾಯಿ ಒಳಿತೂ ದೊರಕದು.

      14. ದೇವರ ಚಿತ್ತವನ್ನು ಮಾಡುವ ಅಪೇಕ್ಷೆಯು ಹೆತ್ತವರನ್ನು ತಮ್ಮ ಮಕ್ಕಳ ಹಿತಾಸಕ್ತಿಗಾಗಿ ಕ್ರಿಯೆನಡಿಸಲು ಹೇಗೆ ಸಹಾಯ ಮಾಡುವುದು?

      14 ದೇವರ ಚಿತ್ತವನ್ನು ಮಾಡುವುದು ಯೋಗ್ಯ ನಿರ್ಣಯಗಳನ್ನು ಮಾಡಲು ಹೆತ್ತವರಿಗೆ ಸಹಾಯ ಮಾಡುವುದು. ಉದಾಹರಣೆಗಾಗಿ, ಕೆಲವು ಸಮುದಾಯಗಳಲ್ಲಿ ಹೆತ್ತವರು ಮಕ್ಕಳನ್ನು ಒಂದು ಬಂಡವಾಳವಾಗಿ ನೋಡುವ ಪ್ರವೃತ್ತಿ ಇದೆ, ಮತ್ತು ತಮ್ಮ ವೃದ್ಧಾಪ್ಯದಲ್ಲಿ ತಮ್ಮನ್ನು ಆರೈಕೆಮಾಡುವಂತೆ ಅವರು ಮಕ್ಕಳ ಮೇಲೆ ಹೊಂದಿಕೊಳ್ಳುತ್ತಾರೆ. ಬೆಳೆದ ಮಕ್ಕಳು ತಮ್ಮ ಮುಪ್ಪಿನ ಹೆತ್ತವರನ್ನು ನೋಡಿಕೊಳ್ಳುವುದು ಯುಕ್ತವೂ ಯೋಗ್ಯವೂ ಆಗಿದೆಯಾದರೂ, ಅಂತಹ ಒಂದು ಪರಿಗಣನೆಯು ಹೆತ್ತವರು ತಮ್ಮ ಮಕ್ಕಳನ್ನು ಪ್ರಾಪಂಚಿಕವಾದೊಂದು ಜೀವಿತ ಮಾರ್ಗವನ್ನು ಬೆನ್ನಟ್ಟುವಂತೆ ಪ್ರೇರಿಸಬಾರದು. ತಮ್ಮ ಮಕ್ಕಳು ಆತ್ಮಿಕ ವಿಷಯಗಳಿಗಿಂತ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳನ್ನು ಬೆಲೆಯುಳ್ಳದ್ದಾಗಿರುವಂತೆ ಮಾಡಿ ಬೆಳೆಸುವುದಾದರೆ, ಹೆತ್ತವರು ಅವರಿಗೆ ಯಾವ ಒಳಿತನ್ನೂ ಮಾಡುವುದಿಲ್ಲ.—1 ತಿಮೊಥೆಯ 6:9.

      15. ತಿಮೊಥೆಯನ ತಾಯಿಯಾದ ಯೂನೀಕೆಯು, ದೇವರ ಚಿತ್ತವನ್ನು ಮಾಡಿದ ಹೆತ್ತವರಲ್ಲೊಬ್ಬರಿಗೆ ಅತ್ಯುತ್ತಮ ಮಾದರಿಯಾಗಿದ್ದದ್ದು ಹೇಗೆ?

      15 ಈ ವಿಷಯದಲ್ಲಿ ಒಂದು ಅತ್ಯುತ್ತಮ ಉದಾಹರಣೆಯು ಪೌಲನ ಯುವ ಮಿತ್ರನಾದ ತಿಮೊಥೆಯನ ತಾಯಿ ಯೂನೀಕೆಯದ್ದಾಗಿದೆ. (2 ತಿಮೊಥೆಯ 1:5) ಯೂನೀಕೆ ಒಬ್ಬ ಅವಿಶ್ವಾಸಿಯನ್ನು ವಿವಾಹವಾಗಿದ್ದರೂ, ಅವಳು ತಿಮೊಥೆಯನ ಅಜ್ಜಿ ಲೋವಿಯೊಂದಿಗೆ, ತಿಮೊಥೆಯನನ್ನು ದಿವ್ಯ ಭಕ್ತಿಯನ್ನು ಬೆನ್ನಟ್ಟುವಂತೆ ಯಶಸ್ವಿಯಾಗಿ ಬೆಳೆಸಿದಳು. (2 ತಿಮೊಥೆಯ 3:14, 15) ತಿಮೊಥೆಯನು ಸಾಕಷ್ಟು ದೊಡ್ಡವನಾದಾಗ ಅವನು ಮನೆಬಿಟ್ಟುಹೋಗಿ, ಪೌಲನ ಮಿಷನೆರಿ ಸಂಗಡಿಗನಾಗಿ ರಾಜ್ಯ ಪ್ರಚಾರದ ಕಾರ್ಯವನ್ನು ಕೈಗೊಳ್ಳುವಂತೆ ಯೂನೀಕೆ ಅನುಮತಿಸಿದಳು. (ಅ. ಕೃತ್ಯಗಳು 16:1-5) ಅವಳ ಮಗನು ಒಬ್ಬ ಪ್ರಮುಖ ಮಿಷನೆರಿಯಾದಾಗ ಅವಳೆಷ್ಟು ಪುಳಕಿತಳಾಗಿದ್ದಿರಬೇಕು! ವಯಸ್ಕನಾದ ಅವನ ದಿವ್ಯ ಭಕ್ತಿಯು ಅವನ ಆರಂಭಿಕ ತರಬೇತಿನ ಮೇಲೆ ಚೆನ್ನಾಗಿ ಪ್ರತಿಬಿಂಬಿಸಿತು. ಯೂನೀಕೆಯು ಮನೆಯಲ್ಲಿ ತಿಮೊಥೆಯನ ಅನುಪಸ್ಥಿತಿಯಿಂದಾಗಿ ಮರುಕವುಳ್ಳವಳಾಗಿದ್ದಿರಬಹುದಾದರೂ, ಅವನ ನಂಬಿಗಸ್ತ ಸೇವಾ ವರದಿಗಳನ್ನು ಕೇಳುವುದರಲ್ಲಿ ಸಂತೃಪ್ತಿಯನ್ನೂ ಆನಂದವನ್ನೂ ಅವಳು ಕಂಡುಕೊಂಡಳೆಂಬುದು ನಿಶ್ಚಯ.—ಫಿಲಿಪ್ಪಿ 2:19, 20.

      ಕುಟುಂಬ ಮತ್ತು ನಿಮ್ಮ ಭವಿಷ್ಯತ್ತು

      16. ಮಗನೋಪಾದಿ ಯೇಸು ಯಾವ ಯೋಗ್ಯ ಆಸ್ಥೆಯನ್ನು ತೋರಿಸಿದನು, ಆದರೆ ಅವನ ಮುಖ್ಯ ಗುರಿಯು ಏನಾಗಿತ್ತು?

      16 ಯೇಸು ದೈವ ಭಕ್ತಿಯ ಕುಟುಂಬವೊಂದರಲ್ಲಿ ಬೆಳೆಸಲ್ಪಟ್ಟನು, ಮತ್ತು ಒಬ್ಬ ವಯಸ್ಕನಂತೆ ತನ್ನ ತಾಯಿಗಾಗಿ ಒಬ್ಬ ಮಗನ ಯೋಗ್ಯ ಆಸ್ಥೆಯನ್ನು ತೋರಿಸಿದನು. (ಲೂಕ 2:51, 52; ಯೋಹಾನ 19:26) ಆದರೂ, ಯೇಸುವಿನ ಮುಖ್ಯ ಗುರಿಯು ದೇವರ ಚಿತ್ತವನ್ನು ನೆರವೇರಿಸುವುದಾಗಿತ್ತು, ಅವನಿಗೆ ಇದರಲ್ಲಿ ನಿತ್ಯಜೀವವನ್ನು ಅನುಭವಿಸುವಂತೆ ಮಾನವರಿಗಾಗಿ ದಾರಿಯನ್ನು ತೆರೆಯುವುದೂ ಸೇರಿತ್ತು. ಪಾಪಪೂರ್ಣ ಮಾನವಕುಲಕ್ಕಾಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ನೀಡಿದಾಗ ಅವನು ಇದನ್ನು ಮಾಡಿದನು.—ಮಾರ್ಕ 10:45; ಯೋಹಾನ 5:28, 29.

      17. ದೇವರ ಚಿತ್ತವನ್ನು ಮಾಡುವವರಿಗಾಗಿ ಯೇಸುವಿನ ನಂಬಿಗಸ್ತ ಮಾರ್ಗವು ಯಾವ ಮಹಿಮೆಯುಳ್ಳ ಪ್ರತೀಕ್ಷೆಗಳನ್ನು ತೆರೆಯಿತು?

      17 ಯೇಸುವಿನ ಮರಣಾನಂತರ ಯೆಹೋವನು ಅವನನ್ನು ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಿ, ಮಹಾ ಆಧಿಕಾರವನ್ನು ಅವನಿಗೆ ಕೊಟ್ಟು, ಕೊನೆಗೆ ಅವನನ್ನು ಸ್ವರ್ಗೀಯ ರಾಜ್ಯದಲ್ಲಿ ಅರಸನಾಗಿ ಸ್ಥಾಪಿಸಿದನು. (ಮತ್ತಾಯ 28:18; ರೋಮಾಪುರ 14:9; ಪ್ರಕಟನೆ 11:15) ಯೇಸುವಿನ ಯಜ್ಞಾರ್ಪಣೆಯು ಕೆಲವು ಮಾನವರಿಗೆ, ಆ ರಾಜ್ಯದಲ್ಲಿ ಆತನೊಂದಿಗೆ ಆಳುವುದಕ್ಕಾಗಿ ಆರಿಸಲ್ಪಡುವಂತೆ ಸಾಧ್ಯಮಾಡಿತು. ಸಹೃದಯದ ಮಾನವಕುಲದಲ್ಲಿ ಉಳಿದವರಿಗೆ, ಇದು ಪ್ರಮೋದವನ್ಯ ಪರಿಸ್ಥಿತಿಗಳಿಗೆ ಪುನಸ್ಸ್ಥಾಪಿಸಲ್ಪಟ್ಟ ಭೂಮಿಯಲ್ಲಿ ಪರಿಪೂರ್ಣ ಜೀವವನ್ನು ಅನುಭವಿಸಲು ಮಾರ್ಗವನ್ನೂ ತೆರೆಯಿತು. (ಪ್ರಕಟನೆ 5:9, 10; 14:1, 4; 21:3-5; 22:1-4) ಇಂದು ನಮಗಿರುವಂತಹ ಅತ್ಯಂತ ಮಹಾ ಸುಯೋಗಗಳಲ್ಲಿ ಒಂದು, ಈ ಮಹಿಮಾಭರಿತವಾದ ಸುವಾರ್ತೆಯನ್ನು ನಮ್ಮ ನೆರೆಹೊರೆಯವರಿಗೆ ಹೇಳುವುದೇ ಆಗಿದೆ.—ಮತ್ತಾಯ 24:14.

      18. ಕುಟುಂಬಗಳಿಗೆ ಮತ್ತು ವ್ಯಕ್ತಿಗಳಿಗೆ—ಉಭಯರಿಗೂ—ಯಾವ ಮರುಜ್ಞಾಪನ ಮತ್ತು ಯಾವ ಪ್ರೋತ್ಸಾಹನೆಯನ್ನು ಕೊಡಲಾಗಿದೆ?

      18 ಅಪೊಸ್ತಲ ಪೌಲನು ತೋರಿಸಿದ ಪ್ರಕಾರ, ದಿವ್ಯ ಭಕ್ತಿಯ ಜೀವಿತವನ್ನು ಜೀವಿಸುವುದು, ಜನರು “ಬರಲಿರುವ” ಜೀವಿತದಲ್ಲಿ ಆ ಆಶೀರ್ವಾದಗಳನ್ನು ಬಾಧ್ಯವಾಗಿ ಹೊಂದಬಲ್ಲರೆಂಬ ವಾಗ್ದಾನವನ್ನೀಯುತ್ತದೆ. ನಿಶ್ಚಯವಾಗಿಯೂ, ಸಂತೋಷವನ್ನು ಕಂಡುಕೊಳ್ಳುವ ಅತ್ಯುತ್ತಮ ಮಾರ್ಗವಿದು! ನೆನಪಿನಲ್ಲಿಡಿರಿ, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಆದಕಾರಣ, ನೀವು ಒಬ್ಬ ಮಗುವಾಗಿರಲಿ ಅಥವಾ ಒಬ್ಬ ಹೆತ್ತವರಾಗಿರಲಿ, ಒಬ್ಬ ಗಂಡನಾಗಿರಲಿ ಯಾ ಒಬ್ಬ ಹೆಂಡತಿಯಾಗಿರಲಿ, ಅಥವಾ ಮಕ್ಕಳಿರುವ ಅಥವಾ ಇಲ್ಲದ ಒಂಟಿಗ ವಯಸ್ಕರಾಗಿರಲಿ, ದೇವರ ಚಿತ್ತವನ್ನು ಮಾಡಲಿಕ್ಕೆ ಪ್ರಯಾಸಪಡಿರಿ. ಒತ್ತಡದ ಕೆಳಗಿರುವಾಗಲೂ ಅಥವಾ ವಿಪರೀತ ಕಷ್ಟಗಳನ್ನು ಎದುರಿಸುವಾಗಲೂ, ನೀವು ಜೀವಸ್ವರೂಪನಾದ ದೇವರ ಒಬ್ಬ ಸೇವಕರೆಂಬುದನ್ನು ಎಂದಿಗೂ ಮರೆಯದಿರಿ. ಹೀಗೆ, ನಿಮ್ಮ ಕ್ರಿಯೆಗಳು ಯೆಹೋವನಿಗೆ ಸಂತೋಷವನ್ನು ತರುವಂತಾಗಲಿ. (ಜ್ಞಾನೋಕ್ತಿ 27:11) ಮತ್ತು ನಿಮ್ಮ ನಡತೆಯು ನಿಮಗೆ ಈಗ ಸಂತೋಷವನ್ನೂ, ಬರಲಿರುವ ನೂತನ ಲೋಕದಲ್ಲಿ ನಿತ್ಯಜೀವವನ್ನೂ ಫಲಿಸುವಂತಾಗಲಿ!

      ನಿಮ್ಮ ಕುಟುಂಬವು ಸಂತೋಷವಾಗಿರಲು . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

      ಆತ್ಮಸಂಯಮವನ್ನು ಬೆಳೆಸಿಕೊಳ್ಳಸಾಧ್ಯವಿದೆ.—ಗಲಾತ್ಯ 5:22, 23.

      ತಲೆತನದ ಯೋಗ್ಯ ನೋಟದೊಂದಿಗೆ, ಗಂಡ ಮತ್ತು ಹೆಂಡತಿ—ಇಬ್ಬರೂ—ಕುಟುಂಬದ ಉತ್ತಮ ಹಿತಾಸಕ್ತಿಗಳನ್ನು ಹುಡುಕುತ್ತಾರೆ.—ಎಫೆಸ 5:22-25, 28-33; 6:4.

      ಸಂವಾದದಲ್ಲಿ ಕಿವಿಗೊಡುವಿಕೆಯು ಸೇರಿರುತ್ತದೆ.—ಯಾಕೋಬ 1:19.

      ಯೆಹೋವನಿಗಾಗಿರುವ ಪ್ರೀತಿಯು ಒಂದು ವಿವಾಹವನ್ನು ಬಿಗಿಯಾಗಿ ಬಂಧಿಸುವುದು.—1 ಯೋಹಾನ 5:3.

      ದೇವರ ಚಿತ್ತವನ್ನು ಮಾಡುವುದು ಒಂದು ಕುಟುಂಬಕ್ಕಿರುವ ಅತ್ಯಂತ ಮಹತ್ವದ ಗುರಿಯಾಗಿದೆ.—ಕೀರ್ತನೆ 143:10; 1 ತಿಮೊಥೆಯ 4:8.

      ಅವಿವಾಹಿತತೆಯ ವರ

      ಪ್ರತಿಯೊಬ್ಬನೂ ವಿವಾಹವಾಗುವುದಿಲ್ಲ. ಮತ್ತು ವಿವಾಹಿತರಾಗಿರುವ ಎಲ್ಲಾ ದಂಪತಿಗಳು ಮಕ್ಕಳನ್ನು ಹಡೆಯಲು ಆಯ್ದುಕೊಳ್ಳುವುದಿಲ್ಲ. ಯೇಸು ಅವಿವಾಹಿತನಾಗಿದ್ದನು, ಮತ್ತು ಅವಿವಾಹಿತತೆಯನ್ನು ಒಂದು ವರವಾಗಿ ಅವನು ಮಾತನಾಡಿದ್ದು “ಪರಲೋಕರಾಜ್ಯದ ನಿಮಿತ್ತವಾಗಿ.” (ಮತ್ತಾಯ 19:11, 12) ಅಪೊಸ್ತಲ ಪೌಲನು ಸಹ ವಿವಾಹವಾಗದಿರಲು ಆಯ್ದುಕೊಂಡನು. ಅವಿವಾಹಿತ ಸ್ಥಿತಿ ಮತ್ತು ವಿವಾಹಿತ ಸ್ಥಿತಿ ಇವೆರಡನ್ನೂ ‘ವರಗಳಾಗಿ’ ಅವನು ಮಾತಾಡಿದನು. (1 ಕೊರಿಂಥ 7:7, 8, 25-28) ಆದಕಾರಣ, ಈ ಪುಸ್ತಕದ ಅಧಿಕಾಂಶ ಭಾಗವು ವಿವಾಹದ ಮತ್ತು ಮಕ್ಕಳನ್ನು ಬೆಳೆಸುವ ಸಂಬಂಧವಾಗಿ ಚರ್ಚಿಸಿದೆಯಾದರೂ, ಅವಿವಾಹಿತರಾಗಿ ಉಳಿಯುವ ಅಥವಾ ವಿವಾಹವಾದರೂ ಮಕ್ಕಳಿಲ್ಲದೆ ಉಳಿಯುವ ಸಂಭಾವ್ಯ ಆಶೀರ್ವಾದಗಳನ್ನು ಮತ್ತು ಬಹುಮಾನಗಳನ್ನು ನಾವು ಮರೆತುಬಿಡಬಾರದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ