ಗೀತೆ 59
ನಾವು ದೇವರಿಗೆ ಸಮರ್ಪಿತರು!
1. ಯೆಹೋವ ಸೆಳೆದನೆಮ್ಮ ಕ್ರಿಸ್ತ ಬಳಿ
ಶಿಷ್ಯರಾಗೋ ಉದ್ದೇಶಕ್ಕಾಗಿ.
ಯೆಹೋವ ಸಿಂಹಾಸನ
ಬೆಳಗಿಸಿತು ಸತ್ಯ.
ನಂಬಿಕೆ ವೃದ್ಧಿಸಿತು;
ಸ್ವತ್ಯಾಗವ ಮಾಡಿದೆವು.
(ಪಲ್ಲವಿ)
ಸಮರ್ಪಣೆ ದೇವರಿಗೆ ನಮ್ಮಾಯ್ಕೆಯು.
ದೇವ, ಕ್ರಿಸ್ತರಲ್ಲಿ ಹಿಗ್ಗುವೆವು.
2. ಇದ್ದೇವೆ ಯೆಹೋವ ಮುಂದೆ ಪ್ರಾರ್ಥಿಸುತ್ತ,
ಸೇವಿಸುವೆವಾತನ ಸದಾ.
ಈ ಹರ್ಷ ಅನುಪಮ,
ಪಾಲಿಗರಾಗ ಯೋಗ್ಯ.
ಯೆಹೋವನ ನಾಮದಿ
ರಾಜ್ಯವಾರ್ತೆ ಪ್ರಕಟಿಸಿ.
(ಪಲ್ಲವಿ)
ಸಮರ್ಪಣೆ ದೇವರಿಗೆ ನಮ್ಮಾಯ್ಕೆಯು.
ದೇವ, ಕ್ರಿಸ್ತರಲ್ಲಿ ಹಿಗ್ಗುವೆವು.
(ಕೀರ್ತ. 43:3; 107:22; ಯೋಹಾ. 6:44 ಸಹ ನೋಡಿ.)