ಸತ್ಯದೇವರಿಗೆ ಈಗ ಏಕೆ ಭಯಪಡಬೇಕು?
“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
1, 2. ದೇವರ ಕಡೆಗೆ ಯೋಗ್ಯವಾದ ಭಯವು ತಕ್ಕದ್ದಾಗಿದೆಯೇಕೆ?
ದೇವರ ಕಡೆಗೆ ಸ್ವಸ್ಥವಾದ ಪೂಜ್ಯಭಾವನೆಯ ಭಯವು ಮನುಷ್ಯನಿಗೆ ಹಿತಕರ. ಹೌದು, ಅನೇಕ ಮಾನವ ಭಯಗಳು ಭಾವನಾತ್ಮಕವಾಗಿ ಕ್ಷೋಭೆಗೊಳಿಸುವಂತಹವುಗಳೂ, ನಮ್ಮ ಯೋಗಕ್ಷೇಮಕ್ಕೆ ಹಾನಿಕರವಾಗಿರುವುವುಗಳೂ ಆಗಿವೆಯಾದರೂ, ಯೆಹೋವ ದೇವರಿಗೆ ಭಯಪಡುವುದು ನಮಗೆ ಹಿತಕರ.—ಕೀರ್ತನೆ 112:1; ಪ್ರಸಂಗಿ 8:12.
2 ಇದು ಸೃಷ್ಟಿಕರ್ತನಿಗೆ ಗೊತ್ತು. ತನ್ನ ಸೃಷ್ಟಿಗಾಗಿ ಪ್ರೀತಿಯಿಂದಾಗಿ, ಸಕಲರೂ ಆತನಿಗೆ ಭಯಪಟ್ಟು ಆತನನ್ನು ಆರಾಧಿಸುವಂತೆ ಆತನು ಆಜ್ಞಾಪಿಸುತ್ತಾನೆ. ನಾವು ಓದುವುದು: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು—ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ ಎಂದು ಮಹಾ ಶಬ್ದದಿಂದ ಹೇಳಿದನು.”—ಪ್ರಕಟನೆ 14:6, 7.
3. ಸೃಷ್ಟಿಕರ್ತನು ನಮ್ಮ ಆದಿ ಪಿತೃಗಳಿಗೆ ಏನು ಮಾಡಿದನು?
3 ನಾವು ಸಕಲ ವಸ್ತುಗಳ ಸೃಷ್ಟಿಕರ್ತನನ್ನು, ಜೀವದ ಮೂಲನನ್ನು ನಿಶ್ಚಯವಾಗಿಯೂ ಕಡೆಗಣಿಸಬಾರದು, ಕಾರಣ ಆತನು ನಮ್ಮ ಮತ್ತು ಈ ಗ್ರಹದ ಒಡೆಯನಾಗಿದ್ದಾನೆ. (ಕೀರ್ತನೆ 24:1) ತನ್ನ ಮಹಾ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿ, ಯೆಹೋವನು ತನ್ನ ಭೌಮಿಕ ಮಕ್ಕಳಿಗೆ ಜೀವವನ್ನು ಕೊಟ್ಟು, ಜೀವಿಸಲು ಒಂದು ಅದ್ಭುತಕರವಾದ ಸ್ಥಳವನ್ನು—ಒಂದು ಸುಂದರ ಪ್ರಮೋದವನವನ್ನು—ಒದಗಿಸಿದನು. ಆದರೂ ಈ ಅದ್ಭುತಕರವಾದ ಕೊಡುಗೆಯು ಷರತ್ತುರಹಿತವಾಗಿರಲಿಲ್ಲ. ಕಾರ್ಯತಃ, ಅದನ್ನು ವಿಶ್ವಾಸದಿಂದ ಕೊಡಲಾಯಿತು. ನಮ್ಮ ಪ್ರಥಮ ಪಿತೃಗಳು ತಮ್ಮ ಬೀಡಿನ ಜಾಗ್ರತೆವಹಿಸಿ, ಅವರು ಇಡೀ ಭೂಮಿಯನ್ನು ಜನರಿಂದ ತುಂಬಿಸಿ ವಶಮಾಡಿಕೊಳ್ಳುವ ವರೆಗೆ ವಿಸ್ತರಿಸಬೇಕಿತ್ತು. ಭೂಮೃಗಗಳು, ಪಕ್ಷಿಗಳು ಮತ್ತು ಮೀನು—ಹೀಗೆ ಅವರೊಂದಿಗೆ ಮತ್ತು ಅವರ ಸಂತಾನದೊಂದಿಗೆ ಈ ಭೂಮಿಯಲ್ಲಿ ಪಾಲಿಗರಾಗುವ ಇತರ ಸಕಲ ಜೀವಿಗಳ ಕಡೆಗೆ ಅವರಿಗೆ ಸುಯೋಗಗಳೂ ಜವಾಬ್ದಾರಿಗಳೂ ಇದ್ದವು. ಈ ಮಹಾ ವಿಶ್ವಾಸಕ್ಕಾಗಿ ಮನುಷ್ಯನು ಉತ್ತರವಾದಿಯಾಗಲಿದ್ದನು.
4. ಮನುಷ್ಯನು ದೇವರ ಸೃಷ್ಟಿಗೆ ಏನು ಮಾಡಿದ್ದಾನೆ?
4 ಆ ಆಶ್ಚರ್ಯಕರವಾದ ಪ್ರಾರಂಭದ ಹೊರತೂ, ತನ್ನ ಸುಂದರವಾದ ಭೌಮಿಕ ಬೀಡನ್ನು ಮಲಿನಗೊಳಿಸಲು ಮನುಷ್ಯನು ಏನು ಮಾಡಿದ್ದಾನೆಂದು ನೋಡಿರಿ! ಈ ರತ್ನದ ದೇವರ ಸ್ವಾಮ್ಯಕ್ಕೆ ತುಚ್ಛೀಕಾರದ ಅಲಕ್ಷ್ಯವನ್ನು ತೋರಿಸುತ್ತ ಮಾನವರು ಭೂಮಿಯನ್ನು ಅಸಹ್ಯಗೊಳಿಸಿದ್ದಾರೆ. ಈ ಮಾಲಿನ್ಯವು ಹೆಚ್ಚೆಚ್ಚು ಪ್ರಾಣಿ, ಪಕ್ಷಿ, ಮೀನು ಜಾತಿಗಳ ಅಸ್ತಿತ್ವಕ್ಕೆ ಅಪಾಯ ತರುವ ಬಿಂದುವಿನಲ್ಲಿದೆ. ನ್ಯಾಯವಂತನೂ ಪ್ರೀತಿವಂತನೂ ಆದ ನಮ್ಮ ದೇವರು ಇದನ್ನು ಅನಿಶ್ಚಿತಕಾಲದ ವರೆಗೆ ಸಹಿಸಿಕೊಳ್ಳನು. ಭೂಧ್ವಂಸವು ಲೆಕ್ಕ ಒಪ್ಪಿಸುವಂತೆ ಮೊರೆಯಿಡುತ್ತದೆ. ಇದು ಅನೇಕರು ಭಯಪಡಲು ಕಾರಣವನ್ನೊದಗಿಸುತ್ತದೆ. ಇನ್ನೊಂದು ಕಡೆಯಲ್ಲಿ, ದೇವರಲ್ಲಿ ಗೌರವಪೂರ್ಣವಾಗಿ ಭರವಸೆಯಿಡುವವರಿಗಾದರೋ, ಏನು ಸಂಭವಿಸುವುದೆಂದು ತಿಳಿಯುವುದು ದುಃಖಶಾಮಕವಾಗಿರುತ್ತದೆ. ಯೆಹೋವನು ಲೆಕ್ಕವನ್ನು ಕೇಳಲು ಕರೆಕೊಡುವನು ಮತ್ತು ಈ ಭೂಮಿಯು ಪೂರ್ವಸ್ಥಿತಿಗೆ ತರಲ್ಪಡುವುದು. ಇದು ಭೂಮಿಯಲ್ಲಿರುವ ಸಕಲ ಸಹೃದಯಿಗಳಿಗೆ ನಿಜವಾಗಿಯೂ ಸಂತೋಷದ ಸಮಾಚಾರವಾಗಿದೆ.
5, 6. ಮನುಷ್ಯನು ತನ್ನ ಸೃಷ್ಟಿಗೆ ಏನು ಮಾಡಿದ್ದಾನೊ ಅದಕ್ಕೆ ಯೆಹೋವನು ಹೇಗೆ ಪ್ರತಿವರ್ತಿಸುವನು?
5 ದೇವರು ತನ್ನ ನ್ಯಾಯತೀರ್ಪನ್ನು ಯಾವುದರ ಮೂಲಕ ನಿರ್ವಹಿಸುವನು? ಈಗ ದೇವರ ಸ್ವರ್ಗೀಯ ರಾಜ್ಯದ ಸಿಂಹಾಸನಾರೂಢ ಅರಸನಾದ ಯೇಸು ಕ್ರಿಸ್ತನ ಮೂಲಕವೇ. ಆ ಸ್ವರ್ಗೀಯ ಕುಮಾರನ ಮುಖೇನ, ಯೆಹೋವನು ಸದ್ಯದ ಅಶುದ್ಧ, ಪ್ರತಿರೋಧಕ ವ್ಯವಸ್ಥೆಯನ್ನು ಅಂತ್ಯಗೊಳಿಸುವನು. (2 ಥೆಸಲೊನೀಕ 1:6-9; ಪ್ರಕಟನೆ 19:11) ಈ ವಿಧದಲ್ಲಿ ಆತನು, ತನಗೆ ಭಯಪಡುವವರಿಗೆ ಉಪಶಮನವನ್ನು ತರುವನು ಮತ್ತು ಅದೇ ಸಮಯದಲ್ಲಿ ನಮ್ಮ ಭೂಬೀಡನ್ನು ರಕ್ಷಿಸಿ ಉಳಿಸುವನು.
6 ಇದು ಹೇಗೆ ನಡೆಯುವುದು? ಅರ್ಮಗೆದೋನ್ ಯುದ್ಧದಲ್ಲಿ ಪರಾಕಾಷ್ಠೆಗೇರುವ, ಆಗಮಿಸಲಿರುವ ಒಂದು ಮಹಾ ಸಂಕಟದ ಕುರಿತು ಬೈಬಲು ತಿಳಿಸುತ್ತದೆ. (ಪ್ರಕಟನೆ 7:14; 16:16) ಇದು ಈ ಮಲಿನಗೊಂಡಿರುವ ವಿಷಯಗಳ ವ್ಯವಸ್ಥೆ ಹಾಗೂ ಅದರ ಮಲಿನಕಾರರ ವಿರುದ್ಧ ದೇವರ ನ್ಯಾಯತೀರ್ಪಾಗಿರುವುದು. ಯಾವ ಮಾನವರಾದರೂ ಬದುಕಿ ಉಳಿಯುವರೊ? ಹೌದು! ದೇವರ ಗೀಳುಹಿಡಿದ, ಅಸ್ವಸ್ಥವಾದ ಭಯವುಳ್ಳವರು ಇವರಾಗಿರದೆ, ಆತನ ಗೌರವಪೂರ್ಣ, ಪೂಜ್ಯಭಾವನೆಯ ಭಯವುಳ್ಳವರು ಇವರಾಗಿರುವರು. ಅವರು ವಿಮೋಚಿಸಲ್ಪಡುವರು.—ಜ್ಞಾನೋಕ್ತಿ 2:21, 22.
ಬೆರಗು ಹಿಡಿಸುವ ಒಂದು ಶಕ್ತಿಪ್ರದರ್ಶನ
7. ದೇವರು ಮೋಶೆಯ ದಿನದಲ್ಲಿ ಇಸ್ರಾಯೇಲಿನ ಪರವಾಗಿ ಹಸ್ತಕ್ಷೇಪ ಮಾಡಿದ್ದೇಕೆ?
7 ಯೆಹೋವ ದೇವರ ಈ ನಾಟಕೀಯ ಕ್ರಿಯೆಯು, ಆತನು ತನ್ನ ಆರಾಧಕರ ಪರವಾಗಿ, ನಮ್ಮ ಸಾಮಾನ್ಯ ಶಕಕ್ಕೆ ಸುಮಾರು 1,500 ವರುಷಗಳ ಹಿಂದೆಮಾಡಿದ ಒಂದು ಮಹತ್ಕಾರ್ಯದಿಂದ ಮುನ್ಸೂಚಿಸಲ್ಪಟ್ಟಿತು. ಮಹಾ ಮಿಲಿಟರಿ ಶಕ್ತಿಯಾಗಿದ್ದ ಐಗುಪ್ತವು ವಲಸೆಹೋಗಿದ್ದ ಇಸ್ರಾಯೇಲ್ಯ ಕಾರ್ಮಿಕ ಪಡೆಯನ್ನು ಗುಲಾಮರನ್ನಾಗಿ ಮಾಡಿಕೊಂಡದ್ದು, ಅದರ ಅರಸನಾದ ಫರೋಹನು ನವಜನಿತ ಗಂಡು ಇಸ್ರಾಯೇಲ್ಯರೆಲ್ಲರು ಸಾಯಬೇಕೆಂದು ಆಜ್ಞೆ ಹೊರಡಿಸಿದಾಗ, ಒಂದು ರೀತಿಯ ಜನಾಂಗಹತ್ಯೆಯನ್ನೂ ಪ್ರಯತ್ನಿಸಿತ್ತು. ಐಗುಪ್ತದ ವಿರುದ್ಧ ದೇವರ ವಿಜಯವು, ಆ ದಬ್ಬಾಳಿಕೆಯ ರಾಜಕೀಯ ವ್ಯವಸ್ಥೆಯಿಂದ ಇಸ್ರಾಯೇಲ್ಯರಿಗೆ ವಿಮೋಚನೆಯನ್ನು, ಹೌದು, ಅನೇಕ ದೇವತೆಗಳ ಆರಾಧನೆಯಿಂದ ಮಲಿನಗೊಂಡಿದ್ದ ಆ ಜನಾಂಗದಿಂದ ಸ್ವಾತಂತ್ರ್ಯವನ್ನು ತರಲಿಕ್ಕಿತ್ತು.
8, 9. ದೇವರ ಹಸ್ತಕ್ಷೇಪಕ್ಕೆ ಮೋಶೆ ಮತ್ತು ಇಸ್ರಾಯೇಲ್ಯರು ಹೇಗೆ ಪ್ರತಿವರ್ತಿಸಿದರು?
8 ವಿಮೋಚನಕಾಂಡ 15ನೆಯ ಅಧ್ಯಾಯವು ಐಗುಪ್ತದಿಂದಾದ ವಿಮೋಚನೆಗೆ ಇಸ್ರಾಯೇಲಿನ ಪ್ರತಿಕ್ರಿಯೆಯನ್ನು ದಾಖಲಿಸುತ್ತದೆ. ಈ ವೃತ್ತಾಂತದ ವಿಶ್ಲೇಷಣೆಯು, ಕ್ರೈಸ್ತರು ಆತ್ಮಿಕವಾಗಿಯೂ ಭೌತಿಕವಾಗಿಯೂ ಹೊಲಸಾಗಿರುವ ಸದ್ಯದ ವ್ಯವಸ್ಥೆಯಿಂದ ಹೇಗೆ ವಿಮೋಚಿಸಲ್ಪಡಬಲ್ಲರೆಂದು ಮಾನ್ಯಮಾಡುವಂತೆ ನಮಗೆ ಸಹಾಯಿಸುವುದು. ಸತ್ಯದೇವರಾದ ಯೆಹೋವನಿಗೆ ಭಯಪಡಲು ನಾವೇಕೆ ಆರಿಸಿಕೊಳ್ಳಬೇಕೆಂದು ಕಲಿಯಲು, ಆಯ್ದ ವಚನಗಳ ಮೇಲೆ ಕೇಂದ್ರೀಕರಿಸುತ್ತ ವಿಮೋಚನಕಾಂಡ, ಅಧ್ಯಾಯ 15ನ್ನು ನಾವು ಪರಿಗಣಿಸೋಣ. ನಾವು 1 ಮತ್ತು 2ನೆಯ ವಚನಗಳಿಂದ ಆರಂಭಿಸುತ್ತೇವೆ:
9 “ಆಗ ಮೋಶೆಯೂ ಇಸ್ರಾಯೇಲ್ಯರೂ ಯೆಹೋವನ ಸ್ತೋತ್ರಕ್ಕಾಗಿ ಈ ಕೀರ್ತನೆಯನ್ನು ಹಾಡಿದರು—ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು; ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು. ನಮ್ಮ ದೇವರು ಆತನೇ, ಆತನನ್ನು ವರ್ಣಿಸುವೆವು; ನಮ್ಮ ಪಿತೃಗಳ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು.”
10. ಐಗುಪ್ತದ ಸೈನ್ಯಗಳು ದೇವರಿಂದ ನಾಶಗೊಳ್ಳುವುದಕ್ಕೆ ಯಾವುದು ನಡಿಸಿತು?
10 ಯೆಹೋವನು ಇಸ್ರಾಯೇಲನ್ನು ಐಗುಪ್ತದಿಂದ ಹೇಗೆ ವಿಮೋಚಿಸಿದನೆಂಬ ವೃತ್ತಾಂತದ ಪರಿಚಯ ಭೂಗೋಳದಾದ್ಯಂತ ಇರುವ ಜನರಿಗಿದೆ. ಫರೋಹನು ಕೊನೆಗೆ ಇಸ್ರಾಯೇಲ್ಯರು ಬಿಟ್ಟುಹೋಗುವಂತೆ ಅನುಮತಿಸುವ ವರೆಗೆ ದೇವರು ಆ ಬಲಾಢ್ಯವಾದ ಲೋಕ ಶಕ್ತಿಯ ಮೇಲೆ ವ್ಯಾಧಿಗಳನ್ನು ಬರಮಾಡಿದನು. ಆದರೆ ಫರೋಹನ ಸೈನ್ಯಗಳು ಈ ಅರಕ್ಷಿತ ಜನರನ್ನು ಬೆನ್ನಟ್ಟಿ ಬಂದವು, ಮತ್ತು ಕೆಂಪು ಸಮುದ್ರ ತೀರದಲ್ಲಿ ಅವರನ್ನು ಸಿಕ್ಕಿಸಿಹಾಕಿದಂತೆ ತೋರಿಬಂತು. ಇಸ್ರಾಯೇಲ್ಯರು ತಮ್ಮ ನವಲಭಿತ ಸ್ವಾತಂತ್ರ್ಯವನ್ನು ಬೇಗನೆ ಕಳೆದುಕೊಳ್ಳುವರೆಂದು ತೋರಿಬಂದರೂ, ಯೆಹೋವನ ಮನಸ್ಸಿನಲ್ಲಿದ್ದ ವಿಷಯವು ಭಿನ್ನವಾಗಿತ್ತು. ಆತನು ಸಮುದ್ರದ ಮುಖೇನ ಒಂದು ದಾರಿಯನ್ನು ತೆರೆದು ತನ್ನ ಜನರನ್ನು ಭದ್ರತೆಗೆ ಒಯನ್ದು. ಐಗುಪ್ತ್ಯರು ಹಿಂಬಾಲಿಸಿದಾಗ, ಆತನು ಕೆಂಪು ಸಮುದ್ರವನ್ನು ಅವರ ಮೇಲೆ ಮುಚ್ಚಿಬಿಟ್ಟು, ಫರೋಹನನ್ನೂ ಅವನ ಮಿಲಿಟರಿ ಸೈನ್ಯವನ್ನೂ ಮುಳುಗಿಸಿಬಿಟ್ಟನು.—ವಿಮೋಚನಕಾಂಡ 14:1-31.
11. ಐಗುಪ್ತದ ವಿರುದ್ಧ ಕೈಕೊಂಡ ದೇವರ ಕ್ರಮದಿಂದ ಏನು ಪರಿಣಮಿಸಿತು?
11 ಐಗುಪ್ತ್ಯರ ಸೈನ್ಯ ಪಡೆಗಳನ್ನು ಯೆಹೋವನು ನಾಶಮಾಡಿದ್ದು, ಆತನ ಆರಾಧಕರ ದೃಷ್ಟಿಯಲ್ಲಿ ಆತನನ್ನು ಘನತೆಗೇರಿಸಿ, ಆತನ ಹೆಸರನ್ನು ವ್ಯಾಪಕವಾಗಿ ಪ್ರಸಿದ್ಧಗೊಳಿಸಿತು. (ಯೆಹೋಶುವ 2:9, 10; 4:23, 24) ಹೌದು, ಆತನ ನಾಮವು, ತಮ್ಮ ಆರಾಧಕರನ್ನು ವಿಮೋಚಿಸಲು ಅಶಕ್ತರಾಗಿ ಪರಿಣಮಿಸಿದ ಐಗುಪ್ತದ ಶಕಿಹ್ತೀನ ಸುಳ್ಳು ದೇವತೆಗಳಿಗಿಂತ ಉನ್ನತಕ್ಕೇರಿತು. ತಮ್ಮ ದೇವತೆಗಳ ಮತ್ತು ಮರ್ತ್ಯ ಮನುಷ್ಯನ ಮತ್ತು ಸೈನ್ಯಶಕ್ತಿಯ ಮೇಲೆ ಭರವಸೆಯು ಕಟುವಾದ ನಿರಾಶೆಗೆ ನಡೆಸಿತು. (ಕೀರ್ತನೆ 146:3) ತನ್ನ ಜನರನ್ನು ಬಲವತ್ತಾಗಿ ವಿಮೋಚಿಸುವ, ಜೀವಸ್ವರೂಪನಾದ ದೇವರ ಹಿತಕರವಾದ ಭಯವನ್ನು ಪ್ರತಿಬಿಂಬಿಸಿದ ಸುತ್ತಿಗಳನ್ನು ಹಾಡಲು ಇಸ್ರಾಯೇಲ್ಯರು ಪ್ರಚೋದಿತರಾದುದು ಆಶ್ಚರ್ಯವಲ್ಲ!
12, 13. ಕೆಂಪು ಸಮುದ್ರದಲ್ಲಿ ದೇವರ ವಿಜಯದಿಂದ ನಾವೇನು ಕಲಿಯಬೇಕು?
12 ತದ್ರೀತಿ, ನಮ್ಮ ಕಾಲದ ಯಾವ ಸುಳ್ಳು ದೇವತೆಗಳೂ, ನ್ಯೂಕ್ಲಿಯರ್ ಯುದ್ಧಾಸ್ತ್ರಗಳೂ ಇರುವ ಯಾವುದೇ ಅತಿಶಕ್ತಿಯೂ ಯೆಹೋವನಿಗೆ ಸರಿಸಮವಾಗಿರಲು ಸಾಧ್ಯವಿಲ್ಲವೆಂದು ನಾವು ಗ್ರಹಿಸತಕ್ಕದ್ದು. ಆತನು ತನ್ನ ಜನರನ್ನು ವಿಮೋಚಿಸಶಕ್ತನು ಮತ್ತು ವಿಮೋಚಿಸುವನು. ಆತನು, “ಪರಲೋಕ ಸೈನ್ಯದವರಲ್ಲಿಯೂ ಭೂಲೋಕದವರಲ್ಲಿಯೂ ತನ್ನ ಇಚ್ಛಾನುಸಾರ ನಡೆಯುತ್ತಾನೆ; ಯಾರೂ ಆತನ ಕೈಯನ್ನು ಹಿಂದಕ್ಕೆ ತಳ್ಳಲಾರರು, ನೀನು ಏನು ಮಾಡುತ್ತೀ ಎಂದು ಯಾರೂ ಕೇಳಲಾರರು.” (ದಾನಿಯೇಲ 4:35) ನಾವು ಈ ಮಾತುಗಳನ್ನು ಪೂರ್ಣಾರ್ಥ ಮಾಡಿಕೊಳ್ಳುವಾಗ, ನಾವೂ ಆತನ ಸುತ್ತಿಗಳನ್ನು ಸಂತೋಷದಿಂದ ಹಾಡುವಂತೆ ಪ್ರಚೋದಿಸಲ್ಪಡುತ್ತೇವೆ.
13 ಕೆಂಪು ಸಮುದ್ರದ ವಿಜಯ ಗೀತೆಯು ಮುಂದುವರಿಯುತ್ತದೆ: “ಯೆಹೋವನು ಯುದ್ಧಶೂರನು; ಆತನ ನಾಮಧೇಯವು ಯೆಹೋವನೇ.” ಆದಕಾರಣ, ಈ ಅಜೇಯ ಯುದ್ಧಶೂರನು ಮನುಷ್ಯನ ಯಾವುದೇ ಅನಾಮಿಕ ಮನೋಭ್ರಾಂತಿಯಾಗಿರುವುದಿಲ್ಲ. ಆತನಿಗೆ ಒಂದು ಹೆಸರಿದೆ! ಆತನು ‘ಆಗುವಂತೆ ಆಗಿಸುವವನು,’ ಮಹಾ ನಿರ್ಮಾಣಿಕನು, “ಯೆಹೋವನಾಮ”ವನ್ನು ಹೊಂದಿದವನು, “ಭೂಲೋಕದಲೆಲ್ಲಾ ಸರ್ವೋನ್ನತ”ನು. (ವಿಮೋಚನಕಾಂಡ 3:14; 15:3-5; ಕೀರ್ತನೆ 83:18) ಆ ಪೂರ್ವಕಾಲದ ಐಗುಪ್ತ್ಯರು, ಸರ್ವಶಕ್ತನನ್ನು ಮೂದಲಿಸುವ ಬದಲಿಗೆ ಆತನಿಗೆ ನ್ಯಾಯಸಮ್ಮತವಾದ ಮತ್ತು ಗೌರವಪೂರ್ಣವಾದ ಭಯವನ್ನು ತೋರಿಸುವದು ಅವರಿಗೆ ವಿವೇಕದ್ದಾಗುತ್ತಿತ್ತೆಂದು ನೀವು ಒಪ್ಪುವುದಿಲ್ಲವೊ?
14. ದೈವಿಕ ಭಯದ ಮೌಲ್ಯವು ಕೆಂಪು ಸಮುದ್ರದ ಬಳಿ ಹೇಗೆ ಪ್ರದರ್ಶಿಸಲ್ಪಟ್ಟಿತು?
14 ಭೂಮಿಯ ವಿನ್ಯಾಸಗಾರನಾಗಿರುವುದರಿಂದ, ಸಮುದ್ರ ರಚಕನಿಗೆ ಜಲಸಮೂಹಗಳ ಮೇಲೆ ಪೂರ್ಣ ನಿಯಂತ್ರಣವಿದೆ. (ವಿಮೋಚನಕಾಂಡ 15:8) ಗಾಳಿಯ ನಿಯಂತ್ರಣವನ್ನೂ ಉಪಯೋಗಿಸುತ್ತ, ಆತನು ಅಸಾಧ್ಯವೆಂದು ತೋರಿದ್ದನ್ನು ನೆರವೇರಿಸಿದನು. ಆತನು ಜಲಾಂತರಾಳವನ್ನು ಒಂದು ನಿರ್ದಿಷ್ಟ ಕಡೆಯಲ್ಲಿ ಸೀಳುಮಾಡಿ, ತನ್ನ ಜನರು ಹಾದುಹೋಗುವಂತೆ ಒಂದು ಸಾಲುಜಲವಿರುವ ಪ್ರವೇಶದಾರಿಯನ್ನು ತಯಾರಿಸಲಿಕ್ಕಾಗಿ ಅದನ್ನು ವಿರುದ್ಧ ದಿಕ್ಕುಗಳಿಗೆ ಹಿಮ್ಮೆಟ್ಟಿಸಿದನು. ದೃಶ್ಯವನ್ನು ಚಿತ್ರಿಸಿಕೊಳ್ಳಿ: ಸಮಾಂತರ ಗೋಡೆಗಳಲ್ಲಿ ಎತ್ತರವಾಗಿ ರಾಶಿಹಾಕಿರುವ ಕೋಟಿಗಟ್ಟಲೆ ಟನ್ನುಗಳಷ್ಟು ಸಮುದ್ರ ಜಲ, ಇಸ್ರಾಯೇಲ್ಯರ ರಕ್ಷಿತ ಪಲಾಯನ ಮಾರ್ಗವನ್ನು ರಚಿಸಿರುತ್ತದೆ. ಹೌದು, ದೇವರಿಗೆ ಸ್ವಸ್ಥವಾದೊಂದು ಭಯವನ್ನು ತೋರಿಸಿದವರು ಸಂರಕ್ಷಣೆಯನ್ನು ಪಡೆದರು. ಆ ಬಳಿಕ, ಒಂದು ಬಲವಾದ ಪ್ರವಾಹದೋಪಾದಿ ಮತ್ತೆ ಉಕ್ಕೇರಿ ಬರುವಂತೆ ಬಿಡುತ್ತಾ, ಯೆಹೋವನು ಆ ನೀರನ್ನು ಬಿಡುಗಡೆ ಮಾಡಿದನು, ಅದು ಫರೋಹನ ಪಡೆಗಳನ್ನೂ ಸಾಮಾನು ಸರಂಜಾಮುಗಳನ್ನೂ ಮುಳುಗಿಸಿಬಿಟ್ಟಿತು. ಕೆಲಸಕ್ಕೆ ಬಾರದ ದೇವತೆಗಳ ಮತ್ತು ಮಾನವ ಮಿಲಿಟರಿ ಬಲದ ವಿರುದ್ಧ ದೈವಿಕ ಶಕ್ತಿಯ ಎಂತಹ ಒಂದು ಪ್ರದರ್ಶನ! ನಿಶ್ಚಯವಾಗಿ, ಯೆಹೋವನು ಭಯಕ್ಕೆ ಯೋಗ್ಯನು, ಅಲ್ಲವೆ?—ವಿಮೋಚನಕಾಂಡ 14:21, 22, 28; 15:8.
ದೇವರ ಕಡೆಗೆ ನಮಗಿರುವ ಭಯವನ್ನು ಪ್ರದರ್ಶಿಸುವುದು
15. ದೇವರ ಬಲಾಢ್ಯ ರಕ್ಷಣಾ ಕ್ರಿಯೆಗಳಿಗೆ ನಮ್ಮ ಪ್ರತಿವರ್ತನೆ ಏನಾಗಿರಬೇಕು?
15 ನಾವು ಮೋಶೆಯೊಂದಿಗೆ ಭದ್ರವಾಗಿ ನಿಂತಿದ್ದರೆ, ನಾವೂ ಖಂಡಿತವಾಗಿ ಹೀಗೆ ಹಾಡುವಂತೆ ಪ್ರೇರಿಸಲ್ಪಡುತ್ತಿದ್ದೆವು: “ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ?” (ವಿಮೋಚನಕಾಂಡ 15:11) ಅಂಥ ರಸಭಾವಗಳನ್ನು ಅಂದಿನಿಂದ ಶತಮಾನಗಳ ಆದ್ಯಂತವೂ ಪ್ರತಿಧ್ವನಿಸಲಾಗಿದೆ. ಬೈಬಲಿನ ಕೊನೆಯ ಪುಸ್ತಕದಲ್ಲಿ, ದೇವರ ನಂಬಿಗಸ್ತ ಅಭಿಷಿಕ್ತ ಸೇವಕರ ಒಂದು ಗುಂಪನ್ನು ಅಪೊಸ್ತಲ ಯೋಹಾನನು ವರ್ಣಿಸುತ್ತಾನೆ: ಅವರು “ದೇವರ ದಾಸನಾದ ಮೋಶೆಯ ಹಾಡನ್ನೂ ಯಜ್ಞದಕುರಿಯಾದಾತನ ಹಾಡನ್ನೂ” ಹಾಡುತ್ತಿದ್ದಾರೆ. ಈ ಮಹಾ ಹಾಡು ಯಾವುದು? “ದೇವರಾದ ಕರ್ತ [“ಯೆಹೋವ,” NW]ನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ [“ಶಾಶ್ವತತೆಯ,” NW] ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತ [“ಯೆಹೋವ,” NW]ನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು [“ನಿಷ್ಠನು,” NW].”—ಪ್ರಕಟನೆ 15:2-4.
16, 17. ಇಂದು ಯಾವ ಅದ್ಭುತಕರವಾದ ವಿಕಸನವು ಸಂಭವಿಸುತ್ತಿರುವುದನ್ನು ನಾವು ನೋಡುತ್ತೇವೆ?
16 ಹಾಗೆಯೇ ಇಂದೂ ದೇವರ ಸೃಷ್ಟಿ ಕೈಕಾರ್ಯಗಳನ್ನಷ್ಟೇಯಲ್ಲ, ಆತನ ಆಜ್ಞೆಗಳನ್ನೂ ಮಾನ್ಯಮಾಡುವ ವಿಮೋಚಿತ ಆರಾಧಕರಿದ್ದಾರೆ. ಸಕಲ ಜನಾಂಗಗಳ ಜನರು ಆತ್ಮಿಕವಾಗಿ ವಿಮೋಚಿಸಲ್ಪಟ್ಟು, ಈ ಮಲಿನಗೊಂಡಿರುವ ಲೋಕದಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ, ಏಕೆಂದರೆ ಅವರು ದೇವರ ನೀತಿಯ ಆಜ್ಞೆಗಳನ್ನು ಒಪ್ಪಿ, ಅವನ್ನು ಕಾರ್ಯರೂಪಕ್ಕೆ ಹಾಕುತ್ತಾರೆ. ವಾರ್ಷಿಕವಾಗಿ, ಲಕ್ಷಾಂತರ ಜನರು ಯೆಹೋವನ ಆರಾಧಕರ ಶುದ್ಧವಾದ, ಪ್ರಾಮಾಣಿಕ ಸಂಸ್ಥೆಯೊಂದಿಗೆ ವಾಸಿಸಲು ಈ ಭ್ರಷ್ಟಲೋಕದಿಂದ ಪಲಾಯನಮಾಡುತ್ತಾರೆ. ಶೀಘ್ರವೇ, ಸುಳ್ಳು ಧರ್ಮ ಮತ್ತು ಈ ದುಷ್ಟ ವ್ಯವಸ್ಥೆಯಲ್ಲಿ ಬಾಕಿ ಉಳಿದಿರುವವರ ವಿರುದ್ಧ ದೇವರ ಉರಿಯುವ ತೀರ್ಪು ನಿರ್ವಹಿಸಲ್ಪಟ್ಟ ಮೇಲೆ, ಅವರು ಒಂದು ನೀತಿಯ ನೂತನ ಲೋಕದಲ್ಲಿ ಸದಾ ಜೀವಿಸುವರು.
17 ಪ್ರಕಟನೆ 14:6, 7ಕ್ಕೆ ಹೊಂದಿಕೆಯಾಗಿ, ಮಾನವ ಕುಲವು ಈಗ ದೇವದೂತ ಮಾರ್ಗದರ್ಶನೆಯಿಂದ, ಯೆಹೋವನ ಸಾಕ್ಷಿಗಳಿಂದ ಸಾರಲ್ಪಡುವ ನ್ಯಾಯತೀರ್ಪಿನ ಎಚ್ಚರಿಕೆಯ ಒಂದು ಸಂದೇಶವನ್ನು ಕೇಳುತ್ತಿದೆ. 230ಕ್ಕೂ ಹೆಚ್ಚು ದೇಶಗಳಲ್ಲಿ ಕಳೆದ ವರ್ಷ, ಸುಮಾರು 50 ಲಕ್ಷ ಸಾಕ್ಷಿಗಳು ದೇವರ ರಾಜ್ಯ ಮತ್ತು ಆತನ ತೀರ್ಪಿನ ಸಮಯದ ಕುರಿತು ಸುವಾರ್ತೆಯನ್ನು ಘೋಷಿಸಿದರು. ತಮ್ಮ ಜೊತೆ ಮಾನವರಿಗೆ ಪಾರಾಗುವಿಕೆಗಾಗಿ ಶಿಕ್ಷಣಕೊಡಲು, ಸಾಕ್ಷಿಗಳು ಜನರ ಮನೆಗಳಿಗೆ ಕ್ರಮದ ಭೇಟಿಗಳನ್ನು ನೀಡಿ ಉಚಿತ ಬೈಬಲ್ ಅಧ್ಯಯನಗಳನ್ನು ನಡೆಸಿದರು. ಹೀಗೆ ಪ್ರತಿ ವರ್ಷ, ಲಕ್ಷಾಂತರ ಮಂದಿ, ಸತ್ಯ ದೇವರಿಗೆ ಬುದ್ಧಿಪೂರ್ವಕವಾಗಿ ಭಯಪಡಲು, ತಮ್ಮ ಜೀವವನ್ನು ಆತನಿಗೆ ಸಮರ್ಪಿಸಲು ಮತ್ತು ದೀಕ್ಷಾಸ್ನಾನಹೊಂದಲು ಸಾಕಷ್ಟನ್ನು ಕಲಿಯುತ್ತಾರೆ. ಇಂಥವರು ಸತ್ಯದೇವರಿಗೆ ಭಯಪಡುವಂತಾದದ್ದು ಎಷ್ಟು ಆನಂದಕರ!—ಲೂಕ 1:49-51; ಅ. ಕೃತ್ಯಗಳು 9:31; ಹೋಲಿಸಿ ಇಬ್ರಿಯ 11:7.
18. ನಮ್ಮ ಸಾರುವಿಕೆಯಲ್ಲಿ ದೇವದೂತರು ಸೇರಿದ್ದಾರೆಂದು ಯಾವುದು ಚಿತ್ರಿಸುತ್ತದೆ?
18 ದೇವದೂತರು ಈ ಸಾರುವ ಕಾರ್ಯದಲ್ಲಿ ಸೇರಿಕೊಂಡಿದ್ದಾರೆಂಬುದು ನಿಜವೊ? ದೇವದೂತರ ಮಾರ್ಗದರ್ಶನೆಯು ಅನೇಕ ವೇಳೆ ಯಾವನೋ ದುಃಖಿತನು ಆತ್ಮಿಕ ಸಹಾಯಕ್ಕಾಗಿ ಹಂಬಲಿಸುತ್ತಿದ್ದು, ಪ್ರಾರ್ಥನೆ ಕೂಡ ಮಾಡುತ್ತಿದ್ದ ಮನೆಗೆ ಯೆಹೋವನ ಸಾಕ್ಷಿಗಳನ್ನು ಕರೆತಂದಿರುವುದು ಸ್ಪಷ್ಟವೆಂದು ನಿಶ್ಚಯವಾಗಿಯೂ ತೋರಿಬರುತ್ತದೆ! ಉದಾಹರಣೆಗೆ, ಒಂದು ಕ್ಯಾರಿಬಿಯನ್ ದ್ವೀಪದಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು ಒಬ್ಬ ಚಿಕ್ಕ ಹುಡುಗನೊಂದಿಗೆ ಸುವಾರ್ತೆ ಸಾರುತ್ತಿದ್ದರು. ಮಧ್ಯಾಹ್ನವು ಸಮೀಪಿಸಿದಂತೆ ಆ ಇಬ್ಬರು ಆ ದಿನಕ್ಕೆ ತಮ್ಮ ಕೆಲಸವನ್ನು ಮುಗಿಸಲು ನಿರ್ಧರಿಸಿದರು. ಆದರೆ ಆ ಹುಡುಗನು ಮುಂದಿನ ಮನೆಯನ್ನು ಸಂದರ್ಶಿಸಲು ಅಸಾಮಾನ್ಯವಾದ ಉತ್ಸಾಹವನ್ನು ತೋರಿಸಿದನು. ದೊಡ್ಡವರು ಆಗ ಆ ಮನೆಯನ್ನು ಸಂದರ್ಶಿಸಲು ಮನಸ್ಸು ಮಾಡದಿದುದ್ದನ್ನು ನೋಡಿದ ಅವನು, ತಾನೇ ಹೋಗಿ ಬಾಗಿಲು ತಟ್ಟಿದನು. ಒಬ್ಬ ಯುವ ಹೆಂಗಸು ಬಾಗಿಲು ತೆರೆದಳು. ದೊಡ್ಡವರು ಇದನ್ನು ನೋಡಿದಾಗ, ಅವರು ಹೋಗಿ ಅವಳೊಂದಿಗೆ ಮಾತಾಡಿದರು. ಆಕೆ ಅವರನ್ನು ಒಳಗೆ ಆಮಂತ್ರಿಸಿ, ಬಾಗಿಲು ತಟ್ಟಿದ್ದನ್ನು ತಾನು ಕೇಳಿದಾಗ, ಬೈಬಲನ್ನು ಕಲಿಸಲು ಸಾಕ್ಷಿಗಳನ್ನು ತನ್ನ ಮನೆಗೆ ಕಳುಹಿಸಬೇಕೆಂದು ತಾನು ಪ್ರಾರ್ಥಿಸುತ್ತಿದ್ದೆ ಎಂದು ವಿವರಿಸಿದಳು. ಬೈಬಲಧ್ಯಯನಕ್ಕಾಗಿ ಏರ್ಪಾಡುಗಳನ್ನು ಮಾಡಲಾಯಿತು.
19. ದೇವರಿಗೆ ಭಯಪಡುವುದರಿಂದ ಆಗುವ ಒಂದು ಪ್ರಯೋಜನವೆಂದು ನಾವು ಯಾವುದಕ್ಕೆ ಸೂಚಿಸಬಲ್ಲೆವು?
19 ನಾವು ದೇವರ ತೀರ್ಪಿನ ಸಂದೇಶವನ್ನು ನಂಬಿಗಸ್ತಿಕೆಯಿಂದ ತಲಪಿಸುವಾಗ, ನಾವು ಆತನ ನೀತಿಯ ಕಟ್ಟಳೆಗಳನ್ನೂ ಕಲಿಸುತ್ತೇವೆ. ಅವನ್ನು ಜನರ ಜೀವಿತಗಳಲ್ಲಿ ಅನ್ವಯಿಸಲಾದಾಗ, ಶಾರೀರಿಕ ಹಾಗೂ ಆತ್ಮಿಕ ಆಶೀರ್ವಾದಗಳು ಫಲಿಸುತ್ತವೆ. ಉದಾಹರಣೆಗೆ, ಎಲ್ಲ ರೀತಿಯ ಲೈಂಗಿಕ ದುರಾಚಾರವನ್ನು ಖಂಡಿಸುವುದರಲ್ಲಿ ಬೈಬಲು ತೀರಾ ಸ್ಪಷ್ಟದೃಷ್ಟಿಯದ್ದಾಗಿದೆ. (ರೋಮಾಪುರ 1:26, 27, 32) ಇಂದು ಲೋಕದಲ್ಲಿ ದೈವಿಕ ಮಟ್ಟಗಳು ವ್ಯಾಪಕವಾಗಿ ಕಡೆಗಣಿಸಲ್ಪಡುತ್ತವೆ. ಪರಿಣಾಮವೇನು? ವಿವಾಹಗಳು ಒಡೆಯುತ್ತಿವೆ. ಅಪರಾಧವು ಹೆಚ್ಚಾಗುತ್ತಿದೆ. ಈ 20 ನೆಯ ಶತಮಾನದಲ್ಲಿ, ಶಕ್ತಿಗುಂದಿಸುವ ರತಿರವಾನಿತ ರೋಗಗಳು ಸರ್ವವ್ಯಾಪಿಯಾಗಿ ಪರಿಣಮಿಸಿ ಹೆಚ್ಚುತ್ತಿವೆ. ಹೌದು, ಆ ಭಯಂಕರ ವ್ಯಾಧಿಯಾದ ಏಡ್ಸ್ ಹೆಚ್ಚಾಗಿ ಲೈಂಗಿಕ ದುರಾಚಾರದಿಂದಾಗಿ ಹರಡುತ್ತದೆ. ಆದರೆ ಸತ್ಯಾರಾಧಕರಿಗೆ, ದೇವರ ಕಡೆಗಿರುವ ಗೌರವಪೂರ್ಣವಾದ ಭಯವು ಮಹಾ ಸಂರಕ್ಷಣೆಯಾಗಿ ಪರಿಣಮಿಸಿರುವುದಿಲ್ಲವೊ?—2 ಕೊರಿಂಥ 7:1; ಫಿಲಿಪ್ಪಿ 2:12; ಅ. ಕೃತ್ಯಗಳು 15:28, 29ನ್ನು ಸಹ ನೋಡಿರಿ.
ಈಗ ದೇವರಿಗೆ ಭಯಪಡುವುದರ ಪರಿಣಾಮಗಳು
20. ಯೆಹೋವನ ಸಾಕ್ಷಿಗಳ ಸತ್ಕೀರ್ತಿಯನ್ನು ಇತರರು ತಿಳಿದಿದ್ದಾರೆಂದು ಯಾವುದು ತೋರಿಸುತ್ತದೆ?
20 ದೇವರಿಗೆ ಭಯಪಟ್ಟು ಆತನ ಕಟ್ಟಳೆಗಳನ್ನು ಅನುಸರಿಸುವವರಿಗೆ ಆಶೀರ್ವಾದಗಳೋ ಹೇರಳ. ಯೆಹೋವನ ಸಾಕ್ಷಿಗಳು ನೈತಿಕವಾಗಿ ಪ್ರಾಮಾಣಿಕವಾದ ಒಂದು ಶಾಂತಿಭರಿತ ಭ್ರಾತೃತ್ವವನ್ನು ರಚಿಸುತ್ತಾರೆಂಬ ನಿಜತ್ವದ ಬೆಳೆಯುತ್ತಿರುವ ಅಂಗೀಕಾರವನ್ನು ಚಿತ್ರಿಸುವ ಒಂದು ಸಂದರ್ಭವನ್ನು ಪರಿಗಣಿಸಿರಿ. ದಕ್ಷಿಣ ಅಮೆರಿಕದ ಒಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಹೋಗಿದ್ದ ಅನೇಕ ವ್ಯಕ್ತಿಗಳು, ಅಲ್ಲಿಯ ರಾಷ್ಟ್ರಾಧ್ಯಕ್ಷರು ಮಾತಾಡಲಿದ್ದ ಒಂದು ಸಾಕ್ಷ್ಯೇತರ ಸಭೆಯು ಒಂದು ರಾತ್ರಿ ಉಪಯೋಗಿಸಿದ ಹೋಟೇಲಿನಲ್ಲಿ ತಂಗಿದ್ದರು. ರಾಷ್ಟ್ರಾಧ್ಯಕ್ಷರನ್ನು ಮೈಗಾವಲಿನವರು ಒಂದು ಎಲಿವೇಟರ್ (ಎತ್ತಿಕೆ)ನಲ್ಲಿ ಒಯ್ಯಲು ಅವಸರ ಪಡುತ್ತಿದ್ದಾಗ, ಮೈಗಾವಲಿನವರ ಆಶ್ಚರ್ಯಕ್ಕೆ, ಎಲಿವೇಟರ್‌ನಲ್ಲಿ ಯಾರಿದ್ದಾರೆ ಎಂದು ಗೊತ್ತಿದ್ದಿರದ ಒಬ್ಬ ಸಾಕ್ಷಿ ಒಳಗೆ ಬಂದಳು! ತಾನು ಮಾಡಿದ್ದನ್ನು ಗ್ರಹಿಸಿದ ಆ ಸಾಕ್ಷಿಯು, ತನ್ನ ಅಕ್ರಮ ಪ್ರವೇಶಕ್ಕಾಗಿ ಕ್ಷಮೆ ಕೇಳಿದಳು. ತಾನು ಸಾಕ್ಷಿಯೆಂದು ಗುರುತಿಸುವ ತನ್ನ ಕನ್ವೆನ್ಶನ್ ಬ್ಯಾಡ್ಜನ್ನು ತೋರಿಸಿ, ತಾನು ರಾಷ್ಟ್ರಾಧ್ಯಕ್ಷರಿಗೆ ಕೇಡಿನ ಸೂಚನೆಯಲ್ಲ ಎಂದು ಹೇಳಿದಳು. ಮುಗುಳು ನಗುತ್ತಾ, ಒಬ್ಬ ಗಾರ್ಡ್ ಹೇಳಿದ್ದು: “ಎಲ್ಲರೂ ಯೆಹೋವನ ಸಾಕ್ಷಿಗಳಂದಿದ್ದರೆ, ನಮಗೆ ಈ ರೀತಿಯ ಭದ್ರತೆಯ ಅವಶ್ಯವಿರುತ್ತಿದ್ದಿಲ್ಲ.”—ಯೆಶಾಯ 2:2-4.
21. ಇಂದು ಜನರಿಗೆ ಕ್ರಿಯೆಯ ಯಾವ ಮಾರ್ಗಗಳು ತೆರೆದಿವೆ?
21 ಈಗ ಯೆಹೋವನು ಒಟ್ಟುಗೂಡಿಸುವುದು ಮತ್ತು ಈ ವ್ಯವಸ್ಥೆಯನ್ನು ಅಂತ್ಯಗೊಳಿಸುವ ‘ಮಹಾ ಸಂಕಟದಿಂದ ಹೊರಗೆಬರುವಂತೆ’ ತಯಾರಿಸುವುದು ಈ ವಿಧದ ಜನರನ್ನೇ. (ಪ್ರಕಟನೆ 7:9, 10, 14) ಇಂತಹ ಪಾರಾಗುವಿಕೆಯು ಒಂದು ಅನಿರೀಕ್ಷಿತವಾಗಿ ಸಂಭವಿಸುವ ವಿಷಯವಾಗಿರುವುದಿಲ್ಲ. ಪಾರಾಗಿ ಉಳಿಯಬೇಕಾದರೆ, ಒಬ್ಬ ವ್ಯಕ್ತಿಯು ಯೆಹೋವನಿಗೆ ಭಯಪಟ್ಟು, ಆತನನ್ನು ನ್ಯಾಯವಾದ ಪರಮಾಧಿಕಾರಿಯೆಂದು ಒಪ್ಪಿ, ಆತನಿಗೆ ಸಮರ್ಪಿತನಾಗಬೇಕು. ಆದರೆ ನಿಜತ್ವವೇನೆಂದರೆ, ಸಂರಕ್ಷಣೆಗೆ ಪಾತ್ರವಾಗಿರುವ ರೀತಿಯ ಭಯವನ್ನು ಅಧಿಕಾಂಶ ಜನರು ಬೆಳೆಸರು. (ಕೀರ್ತನೆ 2:1-6) ಲಭ್ಯವಾಗಿರುವ ಎಲ್ಲ ಸಾಕ್ಷ್ಯಕ್ಕನುಸಾರ, ಯೆಹೋವನು ಆಯ್ದುಕೊಂಡಿರುವ ಪ್ರಭುವಾದ ಯೇಸುಕ್ರಿಸ್ತನು, ಆ ಸಂದಿಗ್ಧ ವರ್ಷವಾದ 1914ರಿಂದ ಅರಸನಾಗಿ ಆಳುತ್ತಿದ್ದಾನೆ. ಇದರ ಅರ್ಥವು ಯೆಹೋವನಿಗೆ ಹಿತಕರವಾದ ಭಯವನ್ನು ವಿಕಾಸಗೊಳಿಸಿ ತೋರಿಸಲು ಒಬ್ಬೊಬ್ಬ ವ್ಯಕ್ತಿಗಳಿಗಿರುವ ಸಮಯವು ಬೇಗನೇ ಮುಗಿದು ಹೋಗುತ್ತಾ ಇದೆ. ಆದರೂ ನಮ್ಮ ಸೃಷ್ಟಿಕರ್ತನು, ವ್ಯಕ್ತಿಗಳನ್ನು, ಅಧಿಕಾರಸ್ಥಾನದಲ್ಲಿರುವವರನ್ನು ಸಹ, ಪ್ರತಿವರ್ತನೆ ತೋರಿಸುವಂತೆ ಬಿಡುತ್ತಾನೆ: “ಆದದರಿಂದ ಅರಸುಗಳಿರಾ, ವಿವೇಕಿಗಳಾಗಿರ್ರಿ; ದೇಶಾಧಿಪತಿಗಳಿರಾ, ಬುದಿಮ್ಧಾತುಗಳಿಗೆ ಕಿವಿಗೊಡಿರಿ. ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ; ನಡುಗುತ್ತಾ ಉಲ್ಲಾಸಪಡಿರಿ. ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ. ಆತನ ಮರೆಹೊಕ್ಕವರೆಲ್ಲರು ಧನ್ಯರು.”—ಕೀರ್ತನೆ 2:7-12.
22. ಈಗ ದೇವರಿಗೆ ಭಯಪಡುವವರಿಗೆ ಭವಿಷ್ಯತ್ತಿನಲ್ಲಿ ಏನು ಕಾದಿದೆ?
22 ನಮ್ಮನ್ನು ರಕ್ಷಿಸಿದ ನಮ್ಮ ಸೃಷ್ಟಿಕರ್ತನಾಗಿ ಆತನನ್ನು ಸುತ್ತಿಸುವವರ ಮಧ್ಯೆ ನಾವು ಇರುವಂತಾಗಲಿ. ಆದರೆ, ನಾವು ಈಗ ಸತ್ಯದೇವರಿಗೆ ಭಯಪಡುವಂತೆ ಇದು ನಮ್ಮನ್ನು ಕೇಳಿಕೊಳ್ಳುತ್ತದೆ! (ಹೋಲಿಸಿ ಕೀರ್ತನೆ 2:11; ಇಬ್ರಿಯ 12:28; 1 ಪೇತ್ರ 1:17.) ನಾವು ಆತನ ನೀತಿಯ ಕಟ್ಟಳೆಗಳನ್ನು ಕಲಿಯುವುದನ್ನು ಮುಂದುವರಿಸುತ್ತಾ ಅವುಗಳಿಗೆ ವಿಧೇಯರಾಗಬೇಕು. ಪ್ರಕಟನೆ 15:3, 4ರಲ್ಲಿ ದಾಖಲಿಸಲ್ಪಟ್ಟಿರುವ ಮೋಶೆಯ ಮತ್ತು ಕುರಿಮರಿಯ ಹಾಡು, ಯೆಹೋವನು ಭೂಮಿಯ ಮೇಲಿನ ಸಕಲ ದುಷ್ಟತ್ವವನ್ನು ನಿವಾರಿಸಿ, ಮನುಷ್ಯನನ್ನೂ ಅವನ ಭೂನಿವಾಸವನ್ನೂ ಪಾಪದ ಮಲಿನಗೊಳಿಸುವ ಪರಿಣಾಮದಿಂದ ವಾಸಿಮಾಡಲು ಆರಂಭಿಸುವಾಗ ಆರೋಹಣವನ್ನು ತಲಪುವುದು. ಆಗ ನಾವು ಪೂರ್ಣ ಹೃದಯದಿಂದ ಹೀಗೆ ಹಾಡುವೆವು: “ದೇವರಾದ ಕರ್ತ [“ಯೆಹೋವ,” NW]ನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ [“ಶಾಶ್ವತತೆಯ,” NW] ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತ [“ಯೆಹೋವ,” NW]ನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ?”
ನಿಮಗೆ ನೆನಪಿದೆಯೆ?
◻ ನಮ್ಮ ಹಿತಕರವಾದ ಭಯಕ್ಕೆ ಯೆಹೋವನು ಏಕೆ ಅರ್ಹನು?
◻ ಕೆಂಪು ಸಮುದ್ರದಲ್ಲಿ ಯೆಹೋವನ ಸಾಧನೆಗಳಲ್ಲಿ ಏನು ಪ್ರದರ್ಶಿಸಲ್ಪಟ್ಟಿತು?
◻ ಯೆಹೋವನಿಗೆ ತೋರಿಸುವ ಗೌರವಪೂರ್ಣ ಭಯದಿಂದಾಗಿ ಯಾವ ಪ್ರಯೋಜನಗಳು ಬರುತ್ತವೆ?
◻ ಈಗ ಸತ್ಯದೇವರಿಗೆ ಭಯಪಡುವವರಿಗೆ ಯಾವ ಭವಿಷ್ಯತ್ತು ಕಾಯುತ್ತದೆ?