ಗೀತೆ 129
ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು
1. ಜನ ಹುಡುಕುತ್ತಾರೆ ಕತ್ತಲೆಯಲಿ.
ಆದರೆ ಸಿಗುವುದು ಬರೇ ಗಾಳಿ.
ಮಾನವರ ಅಸಾಮರ್ಥ್ಯವು ವ್ಯಕ್ತ;
ಲೋಕ ರಕ್ಷಣೆಯು ಅಸಾಧ್ಯ.
(ಪಲ್ಲವಿ)
ಹರ್ಷದಿ ಹಾಡಿ ರಾಜ್ಯವಿಲ್ಲಿದೆ!
ಪುತ್ರನಾಳಿಕೆ ಭಯ ನೀಗಿಸುತೆ.
ಇಲ್ಲವಾಗುತೆ ಬೇಗ ದುಷ್ಟತ್ವ;
ಈ ನಿರೀಕ್ಷೆ ಲಂಗರದಂತೆ ಸ್ಥಿರ.
2. ‘ಆ ದಿನ’ ಸಮೀಪ, ರಾಜ್ಯ ಘೋಷವಿದು;
‘ಇನ್ನೆಷ್ಟು ಕಾಲ?’ ಎನ್ನರು ಜನರು.
ನರಳುವ ಸೃಷ್ಟಿ ಆಗೋದು ಮುಕ್ತ.
ದೇವರ್ಗೆ ಹಾಡಿ ನಮ್ಮ ಕೂಡ.
(ಪಲ್ಲವಿ)
ಹರ್ಷದಿ ಹಾಡಿ ರಾಜ್ಯವಿಲ್ಲಿದೆ!
ಪುತ್ರನಾಳಿಕೆ ಭಯ ನೀಗಿಸುತೆ.
ಇಲ್ಲವಾಗುತೆ ಬೇಗ ದುಷ್ಟತ್ವ;
ಈ ನಿರೀಕ್ಷೆ ಲಂಗರದಂತೆ ಸ್ಥಿರ.
(ಹಬ. 1:2, 3; ಕೀರ್ತ. 27:14; ಯೋವೇ. 2:1; ರೋಮ. 8:22 ಸಹ ನೋಡಿ.)