ನಾಯಕತ್ವ ವಹಿಸುವವರಿಗೆ ವಿಧೇಯರಾಗಿರಿ
“ನಿಮ್ಮಲ್ಲಿ ಯಾರು ನಾಯಕತ್ವ ವಹಿಸುತ್ತಾರೋ ಅವರಿಗೆ ವಿಧೇಯರಾಗಿರಿ, ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ.”—ಇಬ್ರಿಯ 13:17, NW.
1. ಕ್ರೈಸ್ತ ಮೇಲ್ವಿಚಾರಕರಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?
ಯೆಹೋವನು ಈ “ಅಂತ್ಯ ಕಾಲದಲ್ಲಿ” ತನ್ನ ಸಂಸ್ಥೆಗಾಗಿ ಮೇಲ್ವಿಚಾರಕರನ್ನು ಒದಗಿಸಿದ್ದಾನೆ. (ದಾನಿಯೇಲ 12:4) ಕುರಿಸದೃಶರನ್ನು ಪರಿಪಾಲಿಸುವುದರಲ್ಲಿ ಅವರು ನಾಯಕತ್ವವನ್ನು ವಹಿಸುತ್ತಾರೆ ಮತ್ತು ಅವರ ಮೇಲ್ವಿಚಾರವು ಚೈತನ್ಯಕರವಾಗಿದೆ. (ಯೆಶಾಯ 32:1, 2) ಅದಲ್ಲದೆ, ದೇವರ ಮಂದೆಯನ್ನು ಮಮತೆಯಿಂದ ಉಪಚರಿಸುವ ಹಿರಿಯರ ಪ್ರೀತಿಯುಳ್ಳ ಮೇಲ್ವಿಚಾರವು, ಸೈತಾನನಿಂದ ಮತ್ತು ಈ ದುಷ್ಟ ವಿಷಯ ವ್ಯವಸ್ಥೆಯಿಂದ ಒಂದು ಭದ್ರತೆಯಾಗಿ ಕಾರ್ಯನಡಿಸುತ್ತದೆ.—ಅಪೂಸ್ತಲರ ಕೃತ್ಯ 20:28-30; 1 ಪೇತ್ರ 5:8; 1 ಯೋಹಾನ 5:19.
2. ಕೆಲವರು ಅಪೂಸ್ತಲ ಪೌಲನನ್ನು ಹೇಗೆ ವೀಕ್ಷಿಸಿದ್ದರು, ಆದರೆ ಹಿರಿಯರ ಕಡೆಗೆ ಯಾವ ಮನೋಭಾವ ಯೋಗ್ಯವಾಗಿದೆ?
2 ಆದರೆ ನೀವು ಹಿರಿಯರನ್ನು ಹೇಗೆ ವೀಕ್ಷಿಸುತ್ತೀರಿ? ನಿಮ್ಮ ಹೃದಯದಲ್ಲಿ ನೀವು, “ನನಗೆ ಒಂದು ಸಮಸ್ಯೆ ಇದ್ದರೆ ನಾನೆಂದೂ ಇನ್ನೊಬ್ಬ ಹಿರಿಯನ ಬಳಿಗೆ ಹೋಗಲಾರೆ, ಯಾಕಂದರೆ ಅವರಲ್ಲಿ ಯಾರಲ್ಲೂ ನನಗೆ ವಿಶ್ವಾಸವಿಲ್ಲ” ಎಂದು ಹೇಳುತ್ತೀರೋ? ನಿಮ್ಮ ಭಾವನೆಯು ಈ ರೀತಿಯಾಗಿದ್ದರೆ, ಅವರ ಅಸಂಪೂರ್ಣತೆಯನ್ನು ಒಂದುವೇಳೆ ನೀವು ಮಿತಿಮೀರಿ ಒತ್ತಿಹೇಳುವಂಥವರೋ? ಪುರಾತನ ಕೊರಿಂಥದಲ್ಲಿ ಕೆಲವರು, ಅಪೂಸ್ತಲ ಪೌಲನು ಕುರಿತು ಹೇಳಿದ್ದು: “ಅವನಿಂದ ಬಂದ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ. ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು.” ಆದರೂ ದೇವರು, ಪೌಲನನ್ನು ಒಂದು ಶುಶ್ರೂಷೆಗೆ ನೇಮಿಸಿದನು ಮತ್ತು “ಅನ್ಯಜನರಿಗೆ ಅಪೂಸ್ತಲನಾಗಿ” ಉಪಯೋಗಿಸಿದನು. (2 ಕೊರಿಂಥ 10:10; ರೋಮಾಪುರ 11:13; 1 ತಿಮೊಥಿ 1:12) ಹೀಗಿರಲಾಗಿ, “ಲೋಕದಲ್ಲಿ ಅತ್ಯುತ್ತಮವಾದ ಹಿರಿಯ ಮಂಡಲಿ ನಮಗಿದೆ. ಸಹಾಯ ಬೇಕಾದಾಗ ಅದನ್ನು ನೀಡಲು ಅವರು ಇಲ್ಲಿಯೇ ಇರುತ್ತಿದ್ದರು” ಎಂದು ಹೇಳಿ ತನ್ನ ಭಾವನೆ ವ್ಯಕ್ತಪಡಿಸಿದ ಆ ಸಹೋದರಿಯಂತೆ, ನಿಮ್ಮ ಭಾವನೆಯೂ ಇರುವಂತೆ ನಿರೀಕ್ಷಿಸಲಾಗುತ್ತದೆ.
ಯಾಕೆ ಅವರಿಗೆ ವಿಧೇಯರಾಗಬೇಕು?
3. ಕರ್ತನು ನಾವು ತೋರಿಸುವ ಆತ್ಮದ ಸಂಗಡ ಇರಬೇಕಾದರೆ ಕ್ರೈಸ್ತ ಉಪಕುರುಬರನ್ನು ನಾವು ಹೇಗೆ ವೀಕ್ಷಿಸಬೇಕು?
3 ಕ್ರೈಸ್ತ ಉಪಕುರುಬರು ಮಹಾ ಕುರುಬನಾದ ಯೆಹೋವ ದೇವರಿಂದ ಒದಗಿಸಲ್ಪಟ್ಟವರಾದರ್ದಿಂದ, ನಾವು ಅವರನ್ನು ಹೇಗೆ ವೀಕ್ಷಿಸಬೇಕೆಂದು ಆತನು ಬಯಸುತ್ತಾನೆ? ಯೆಹೋವನ ಸಾಕ್ಷಿಗಳ ಆಡಳಿತಾ ಮಂಡಲಿಯ ಮೇಲ್ವಿಚಾರದ ಕೆಳಗಿರುವ ಪ್ರೀತಿಯುಳ್ಳ ಮೇಲ್ವಿಚಾರಕರ ಮೂಲಕ ಕೊಡಲ್ಪಡುವ ಬೈಬಲಾಧರಿತ ಮಾರ್ಗದರ್ಶನೆಯನ್ನು ನಾವು ಪಾಲಿಸುವಂತೆ ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ ನಿಶ್ಚಯ. ಆಗ, ‘ಕರ್ತನು ನಾವು ತೋರಿಸುವ ಆತ್ಮದ ಸಂಗಡ ಇರುವನು’ ಮತ್ತು ನಾವು ಸಮಾಧಾನದಲ್ಲಿ ಆನಂದಿಸುವೆವು, ಮತ್ತು ಆತ್ಮಿಕವಾಗಿ ಬಲವಾಗಿ ಕಟ್ಟಲ್ಪಡುವೆವು.—2 ತಿಮೊಥಿ 4:22; ಅಪೂಸ್ತಲರ ಕೃತ್ಯ 9:31; 15:23-32 ಹೋಲಿಸಿ.
4. ಇಬ್ರಿಯ 13:7ನ್ನು ನಾವು ವೈಯಕ್ತಿಕವಾಗಿ ಹೇಗೆ ಅನ್ವಯಿಸ ಸಾಧ್ಯವಿದೆ?
4 ಪೌಲನು ಪ್ರೋತ್ಸಾಹಿಸಿದ್ದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮಲ್ಲಿ ನಾಯಕತ್ವ ವಹಿಸುವವರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ಯಾವ ರೀತಿಯಲ್ಲಿ ನಡಕೊಂಡರೆಂಬದನ್ನು ಆಲೋಚಿಸಿ, ಅವರ ನಂಬಿಕೆಯನ್ನು ಅನುಸರಿಸಿರಿ.” (ಇಬ್ರಿಯ 13:7, NW) ಆರಂಭದ ಕ್ರೈಸ್ತರಲ್ಲಿ ಮುಖ್ಯವಾಗಿ ಅಪೋಸ್ತಲರು, ನಾಯಕತ್ವ ವಹಿಸಿದ್ದರು. ಇಂದು, ಯೆಹೋವನ ಸಾಕ್ಷಿಗಳ ಆಡಳಿತಾ ಮಂಡಲಿಯಲ್ಲಿರುವವರು, ಬೇರೆ ಅಭಿಷಿಕ್ತ ಮೇಲ್ವಿಚಾರಕರು, ಮತ್ತು “ಮಹಾ ಸಮೂಹದ” ಪುರುಷರು ನಮ್ಮಲ್ಲಿ ನಾಯಕತ್ವ ವಹಿಸುವುದನ್ನು ನಾವು ಕಾಣುತ್ತೇವೆ. (ಪ್ರಕಟನೆ 7:9) ಅವರ ಸರ್ವದರ್ಜೆಯನ್ನು, ಅವರ ನಿಲುವಿನ ರೀತಿಯನ್ನು ಅಥವಾ ಅವರ ಮನುಷ್ಯ ಸ್ವಭಾವಗಳನ್ನು ಅನುಸರಿಸುವಂತೆ ನಾವು ಪ್ರೋತ್ಸಾಹಿಸಲ್ಪಡದಿದ್ದರೂ, ಅವರ ನಂಬಿಕೆಯನ್ನು ಅನುಸರಿಸುವ ಮೂಲಕ ನಮ್ಮ ನಡವಳಿಕೆಯನ್ನು ಸರಿಗೊಳಿಸಲು ನಾವು ಶಕ್ತರಾಗಬೇಕು.
5. ಕ್ರೈಸ್ತ ಸಭೆಯನ್ನು ಪರಿಪಾಲಿಸುವ ಮುಖ್ಯ ಜವಾಬ್ದಾರಿಕೆಯು ಇಂದು ಭೂಮಿಯಲ್ಲಿ ಯಾರಿಗೆ ವಹಿಸಲ್ಪಟ್ಟಿದೆ, ಮತ್ತು ಅವರು ಯಾವುದಕ್ಕೆ ಅರ್ಹರು?
5 ಇಂದು ಭೂಮಿಯಲ್ಲಿ ನಮ್ಮ ಆತ್ಮಿಕ ಅಗತ್ಯತೆಗಳನ್ನು ನೋಡಿಕೊಳ್ಳುವ ಮುಖ್ಯ ಜವಾಬ್ದಾರಿಕೆಯು “ನಂಬಿಗಸ್ತನೂ ವಿಶ್ವಾಸಿಯೂ ಆದ ಆಳಿಗೆ” ಒಪ್ಪಿಸಲ್ಪಟ್ಟಿದೆ. ಅದರ ಕಾರುಭಾರಿಯಾದ ಆಡಳಿತಾ ಮಂಡಲಿಯು ಲೋಕವ್ಯಾಪಕ ರಾಜ್ಯ-ಸಾರುವಿಕೆಯಲ್ಲಿ ನಾಯಕತ್ವ ವಹಿಸುತ್ತದೆ ಮತ್ತು ಅದನ್ನು ಸುಸಂಘಟಿಸುತ್ತದೆ. (ಮತ್ತಾಯ 24:14, 45-47) ವಿಶೇಷವಾಗಿ ಈ ಆತ್ಮಾಭಿಷಿಕ್ತ ಹಿರಿಯರನ್ನು ಆತ್ಮಿಕ ಆಡಳಿತಗಾರರಾಗಿ ವೀಕ್ಷಿಸಬಹುದು, ಯಾಕಂದರೆ ಇಬ್ರಿಯ 13:7ನ್ನು ಹೀಗೆ ತರ್ಜುಮೆ ಮಾಡ ಸಾಧ್ಯವಿದೆ: “ನಿಮ್ಮ ಮೇಲೆ ಆಡಳಿತ ಮಾಡುವವರನ್ನು ನೆನಪು ಮಾಡಿಕೊಳ್ಳಿರಿ.” (ಕಿಂಗ್ಡಂ ಇಂಟರ್ಲಿನಿಯರ್) ಈಗ 63,000 ಕ್ಕಿಂತಲೂ ಹೆಚ್ಚು ಸಭೆಗಳು ಮತ್ತು 40,17,000 ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರು ಇರಲಾಗಿ, 12 ಮಂದಿ ಹಿರಿಯರಿರುವ ಆಡಳಿತ ಮಂಡಲಿಗೆ ‘ಕರ್ತನ ಕೆಲಸದಲ್ಲಿ ಮಾಡಲು ಯಥೇಷ್ಟವಿದೆ’ ನಿಶ್ಚಯ. (1 ಕೊರಿಂಥ 15:58) ಅವರ ದೇವದತ್ತ ನೇಮಕದ ನೋಟದಲ್ಲಿ, ನಮ್ಮ ಪೂರ್ಣ ರೀತಿಯ ಸಹಕಾರಕ್ಕೆ ಅವರು ಅರ್ಹರಾಗಿದ್ದಾರೆ. ಒಂದನೇ ಶತಕದ ಆಡಳಿತ ಮಂಡಲಿಗೂ ಆರಂಭದ ಕ್ರೈಸ್ತರ ಸಹಕಾರವಿತ್ತು.—ಅಪೂಸ್ತಲರ ಕೃತ್ಯ 15:1, 2.
6. ಯೆಹೋವನ ಜನರ ಪ್ರಯೋಜನಕ್ಕಾಗಿ ಹಿರಿಯರಿಂದ ನಡಿಸಲ್ಪಡುವ ಕೆಲವು ವಿಷಯಗಳಾವುವು?
6 ಸಭೆಯ ಆತ್ಮಿಕ ಅಗತ್ಯತೆಗಳನ್ನು ನೋಡಿಕೊಳ್ಳಲು ಮೇಲ್ವಿಚಾರಕರು ಆತ್ಮದಿಂದ ನೇಮಕವನ್ನು ಪಡೆದವರು. (ಅಪೂಸ್ತಲರ ಕೃತ್ಯ 20:28) ಸ್ಥಳೀಕ ಸಭೆಯ ಕ್ಷೇತ್ರದಲ್ಲಿ ರಾಜ್ಯ ಸಂದೇಶವು ಸಾರಲ್ಪಡುವಂತೆ ಅವರು ನೋಡಿಕೊಳ್ಳುತ್ತಾರೆ. ಶಾಸ್ತ್ರೀಯವಾಗಿ ಯೋಗ್ಯತೆ ಪಡೆದ ಪುರುಷರು ಆತ್ಮಿಕ ಮಾರ್ಗದರ್ಶನೆಯನ್ನೂ ಪ್ರೀತಿಯಿಂದ ನೀಡುತ್ತಾರೆ. ತಮ್ಮ ಆತ್ಮಿಕ ಸಹೋದರ ಸಹೋದರಿಯರು ದೇವರಿಗೆ ಯೋಗ್ಯರಾಗಿ ನಡೆಯುತ್ತಾ ಹೋಗುವಂತೆ ಉಪದೇಶ, ಸಾಂತ್ವನ, ಮತ್ತು ಸಾಕ್ಷಿಯನ್ನು ಅವರು ನೀಡುತ್ತಾರೆ. (1 ಥೆಸಲೋನಿಕ 2:7, 8, 11, 12) ಯಾರಾದರೂ ತಿಳಿಯದೆ ಒಂದು ದೋಷದಲ್ಲಿ ಸಿಕ್ಕಿದಾಗಲೂ ಈ ಪುರುಷರು, ಅವನನ್ನು “ಶಾಂತಭಾವದಿಂದ” ತಿದ್ದಿ ಸರಿಮಾಡಲು ಪ್ರಯತ್ನಿಸುತ್ತಾರೆ.—ಗಲಾತ್ಯ 6:1.
7. ಇಬ್ರಿಯ 13:17ರಲ್ಲಿ ಯಾವ ಸೂಚನೆಯನ್ನು ಪೌಲನು ಕೊಟ್ಟಿದ್ದಾನೆ?
7 ಇಂಥ ಪ್ರೀತಿಯುಳ್ಳ ಮೇಲ್ವಿಚಾರಕರೊಂದಿಗೆ ಸಹಕರಿಸಲು ನಮ್ಮ ಹೃದಯಗಳು ಪ್ರೇರಿಸಲ್ಪಡುತ್ತವೆ. ಇದು ಯೋಗ್ಯವಾದದ್ದೇ ಯಾಕಂದರೆ ಪೌಲನು ಬರೆದದ್ದು: “ನಿಮ್ಮಲ್ಲಿ ನಾಯಕತ್ವ ವಹಿಸುವವರಿಗೆ ವಿಧೇಯರಾಗಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ.” (ಇಬ್ರಿಯ 13:17) ಈ ಸೂಚನೆಯನ್ನು ನಾವು ಅರ್ಥಮಾಡುವುದು ಹೇಗೆ?
8, 9. (ಎ) ಇಬ್ರಿಯ 13:17ರ ನೋಟದಲ್ಲಿ, ನಾಯಕತ್ವ ವಹಿಸುವವರಿಗೆ ನಾವೇಕೆ ವಿಧೇಯರಾಗಬೇಕು? (ಬಿ) ನಮ್ಮ ವಿಧೇಯತೆ ಮತ್ತು ಅಧೀನತೆಯು ಯಾವ ಒಳ್ಳೇ ಪರಿಣಾಮಗಳನ್ನು ತರಬಲ್ಲದು?
8 ನಮ್ಮನ್ನು ಆತ್ಮಿಕವಾಗಿ ಆಳುವವರಿಗೆ ನಾವು ವಿಧೇಯರಾಗುವಂತೆ ಪೌಲನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಈ ಉಪಕುರುಬರಿಗೆ ನಾವು “ಅಧೀನರಾಗಿರ” ಬೇಕು, ಒಳಗಾಗಬೇಕು. ಏಕೆ? ಏಕೆಂದರೆ ಅವರು ನಮ್ಮ ‘ಆತ್ಮಗಳನ್ನು’ ಅಥವಾ ದೇವರಿಗೆ ಸಮರ್ಪಿತವಾದ ನಮ್ಮ ಜೀವಗಳನ್ನು ‘ಕಾಯುವವರಾಗಿದ್ದಾರೆ.’ ಇಲ್ಲಿ ಗ್ರೀಕ್ ಕ್ರಿಯಾಪದದ ವರ್ತಮಾನ ಸಕರ್ಮಕ ರೂಪವಾದ ಆಗ್ರುಪ್ನೆಯೊ (a.gru.pne’o) ಎಂಬ ಪದಕ್ಕೆ ಅಕ್ಷರಾರ್ಥವಾಗಿ, ಹಿರಿಯರು “ನಿದ್ದೆ ವರ್ಜಿಸುತ್ತಿದ್ದಾರೆ” ಎಂಬರ್ಥವಿದೆ. ಇದು ನಮಗೆ, ರಾತ್ರಿ ವೇಳೆಯ ಅಪಾಯಗಳಿಂದ ತನ್ನ ಮಂದೆಯನ್ನು ಕಾಯಲು ನಿದ್ರಾರಹಿತ ರಾತ್ರಿಗಳನ್ನು ಕಳೆಯುವ ಒಂಟಿಗ ಕುರುಬನ ಜ್ಞಾಪಕವನ್ನು ಕೊಡುತ್ತದೆ. ಹಿರಿಯರು ಕೆಲವು ಸಾರಿ ದೇವರ ಮಂದೆಯ ಕಡೆಗಿನ ಪ್ರಾರ್ಥನಾ ಪೂರ್ವಕ ಚಿಂತೆಯಲ್ಲಿ ಅಥವಾ ಜೊತೆ ವಿಶ್ವಾಸಿಗಳಿಗೆ ಆತ್ಮಿಕ ಸಹಾಯವನ್ನು ಕೊಡುವುದರಲ್ಲಿ ನಿದ್ರಾರಹಿತ ರಾತ್ರಿಗಳನ್ನು ಕಳೆಯುತ್ತಾರೆ. ಈ ನಂಬಿಗಸ್ತ ಸೇವೆಯನ್ನು ನಾವೆಷ್ಟು ಹೆಚ್ಚು ಗಣ್ಯಮಾಡಬೇಕು! ನಿಶ್ಚಯವಾಗಿಯೂ, ನಾವು ಯೂದನ ದಿನಗಳ “ಭಕ್ತಿಹೀನ” ಜನರಂತೆ, ‘ಪ್ರಭುತ್ವವನ್ನು ಅಸಡ್ಡೆ ಮಾಡುತ್ತಾ ಮಹಾ ಪದವಿಯವರನ್ನು ದೂಷಿಸಬಾರದು’ ಅಂದರೆ ದೇವದತ್ತ ಪದವಿಯಾ ಗೌರವ ನೀಡಲ್ಪಟ್ಟವರಾದ ಅಭಿಷಿಕ್ತ ಕ್ರೈಸ್ತ ಹಿರಿಯರನ್ನು ದೂಷಿಸಬಾರದು.—ಯೂದ 3:4, 8.
9 ಕ್ರೈಸ್ತ ಮೇಲ್ವಿಚಾರಕರಿಗೆ ವಿಧೇಯರಾಗಲು ಮತ್ತು ಅಧೀನರಾಗಲು ನಾವು ತಪ್ಪುವುದನ್ನು ಯೆಹೋವನು ಮೆಚ್ಚಲಾರನು. ಇದು ಅವರಿಗೆ ಹೊರೆಯಾಗಿಯೂ ರುಜುವಾಗುವುದು ಮತ್ತು ನಮಗೆ ಆತ್ಮಿಕವಾಗಿ ಹಾನಿಕರ. ನಾವು ಅಸಹಕಾರ ತೋರಿಸಿದರೆ ಹಿರಿಯರು ವ್ಯಸನದಿಂದ, ನಿರಾಶೆಯ ಭಾವದಿಂದ ತಮ್ಮ ಕರ್ತವ್ಯಗಳನ್ನು ಮಾಡಿಯಾರು, ಇದು ನಮ್ಮ ಕ್ರೈಸ್ತ ಚಟುವಟಿಕೆಯಲ್ಲಿ ಸಂತೋಷ ನಷ್ಟಕ್ಕೆ ಪರಿಣಮಿಸೀತು. ಆದರೆ ನಮ್ಮ ವಿಧೇಯತೆ ಮತ್ತು ಅಧೀನತೆಯು ದೈವಿಕ ನಡವಳಿಯನ್ನು ವರ್ಧಿಸುವುದು ಮತ್ತು ನಮ್ಮ ನಂಬಿಕೆಯನ್ನು ಬಲಗೊಳಿಸುವುದು. ‘ಕರ್ತನು ನಾವು ತೋರಿಸುವ ಆತ್ಮದ ಸಂಗಡ ಇರುವನು’ ಮತ್ತು ಇಂಥಾ ಸಹಕಾರ, ಸಮಾಧಾನ ಮತ್ತು ಐಕ್ಯತೆಯ ವಾತಾವರಣದಲ್ಲಿ ಸಂತೋಷವು ಸಮೃದ್ಧಿಗೊಳ್ಳುವುದು.—2 ತಿಮೊಥಿ 4:22; ಕೀರ್ತನೆ 133:1.
10. 1 ತಿಮೊಥಿ 5:17ಕ್ಕೆ ಅನುಸಾರವಾಗಿ, ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ನಡಿಸುವವರು ಮಾನಕ್ಕೆ ಯೋಗ್ಯರು ಏಕೆ?
10 ಸಭಾ ಹಿರಿಯರಿಗೆ ನಮ್ಮ ವಿಧೇಯತೆ ಮತ್ತು ಅಧೀನತೆಯೆಂದರೆ ನಾವು ಮನುಷ್ಯರನ್ನು ಮೆಚ್ಚಿಸುವವರೆಂದಲ್ಲ. ಅದು ಅಶಾಸ್ತ್ರೀಯವು, ಯಾಕಂದರೆ ಒಂದನೇ ಶತಕದ ಕ್ರೈಸ್ತ ದಾಸರು ತಮ್ಮ ಯಜಮಾನರಿಗೆ ವಿಧೇಯರಾಗುವಂತೆ ಹೇಳಲ್ಪಟ್ಟಾಗ ಅವರು, “ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಸೇವೆ ಮಾಡದೆ ಯೆಹೋವನಿಗೆ ಭಯಪಡುವವರಾಗಿ ಸರಳ ಮನಸ್ಸಿನಿಂದ ಮಾಡು”ವಂತೆ ಹೇಳಲಾಗಿತ್ತು. (ಕೊಲೊಸ್ಸೆ 3:22; ಎಫೆಸ 6:5, 6) ‘ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ನಡಿಸುವ ಮತ್ತು ಪ್ರಸಂಗ ಮತ್ತು ಉಪದೇಶದಲ್ಲಿ ಕಷ್ಟಪಟ್ಟು ಕೆಲಸ ಮಾಡುವ’ ಮೇಲ್ವಿಚಾರಕರು ಮಾನಕ್ಕೆ ಯೋಗ್ಯರಾಗಿರುವುದು ಮುಖ್ಯವಾಗಿ ಅವರ ಕಲಿಸುವಿಕೆಯು ದೇವರ ವಾಕ್ಯದಲ್ಲಿ ಆಧರಿಸಿರುವುದರಿಂದಲೇ. ಪೌಲನು ಬರೆದಂತೆ, “ಚೆನ್ನಾಗಿ ಅಧ್ಯಕ್ಷತೆ ವಹಿಸುವ ಹಿರೀ ಪುರುಷರನ್ನು ವಿಶೇಷವಾಗಿ ಪ್ರಸಂಗದಲ್ಲಿಯೂ, ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. ಕಣತುಳಿಯುವ ಎತ್ತಿನ ಬಾಯಿ ಕಟ್ಟಿಬಾರದೆಂತಲೂ ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಶಾಸ್ತ್ರದಲ್ಲಿ ಬರೆದದೆಯಲ್ಲಾ.”—1 ತಿಮೊಥಿ 5:17, 18.
11. ಒಬ್ಬ ಹಿರಿಯನಿಗೆ “ಇಮ್ಮಡಿಯಾದ ಮಾನ” ಹೇಗೆ ಬರಬಹುದು, ಆದರೆ ಅವನು ಏನನ್ನು ವರ್ಜಿಸಬೇಕು?
11 ಮೇಲೆ ಉದ್ದರಿಸಲ್ಪಟ್ಟ ಪೌಲನ ಮಾತುಗಳು, ಇತರರ ಆತ್ಮಿಕ ಅಭಿರುಚಿಗಳನ್ನು ನೋಡಿಕೊಳ್ಳುವವರಿಗೆ ಐಹಿಕ ಸಹಾಯವನ್ನು ಕೊಡುವುದು ಯೋಗ್ಯವೆಂಬದಾಗಿ ಸೂಚಿಸುತ್ತದೆ. ಆದರೂ ಹಿರಿಯರು ಒಂದು ವೇತನವನ್ನು ಪಡೆಯಬೇಕೆಂದು ಇದು ಸೂಚಿಸುವುದಿಲ್ಲ. ಮತ್ತು “ಇಮ್ಮಡಿಯಾದ ಮಾನವು” ಒಬ್ಬ ಹಿರಿಯನು ಒತ್ತಾಯದಿಂದ ಕೇಳುವ ವಿಷಯವೂ ಅಲ್ಲ. ಅದು ಸಭಾ ಸದಸ್ಯರಿಂದ ಸ್ವಪ್ರೇರಣೆಯಿಂದ ಬರಬಹುದು ಆದರೆ ಅವನು ತನ್ನ ನೇಮಕವನ್ನು ಅಧಿಕಾರ ಗಳಿಸಲಿಕ್ಕಾಗಿ ಅಥವಾ ಐಹಿಕ ಸೊತ್ತುಗಳ ಲಾಭಕ್ಕಾಗಿ ಎಂದಿಗೂ ಉಪಯೋಗಿಸಬಾರದು. ಅವನು ತನ್ನ ಸ್ವಂತ ಘನವನ್ನು ಹುಡುಕಬಾರದು ಅಥವಾ ಆರ್ಥಿಕ ಲಾಭಕ್ಕಾಗಿ ಹೆಚ್ಚು ಧನವಂತರ ಸಹವಾಸವನ್ನು ಅಧಿಕವಾಗಿ ಹುಡುಕಿ ಇತರರನ್ನು ದುರ್ಲಕ್ಷಿಸುವಂತಾಗಬಾರದು. (ಜ್ಞಾನೋಕ್ತಿ 25:27; 29:23; ಯೂದ 16) ಬದಲಿಗೆ ಮೇಲ್ವಿಚಾರಕನು ದೇವರ ಮಂದೆಯನ್ನು, ‘ಇಷ್ಟಪೂರ್ವಕವಾಗಿ ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದ’ ಪರಿಪಾಲಿಸಬೇಕು.—1 ಪೇತ್ರ 5:2.
12. ಏನನ್ನು ಮನಸ್ಸಿನಲ್ಲಿಡುವ ಮೂಲಕ ನಾವು, ನಮ್ಮಲ್ಲಿ ನಾಯಕತ್ವ ವಹಿಸುವವರಿಗೆ ವಿಧೇಯರಾಗಲು ಸಹಾಯ ಮಾಡಲ್ಪಡುವೆವು.?
12 ದೇವರು ತಾನೇ ಹಿರಿಯರನ್ನು ಒದಗಿಸಿದವನು ಎಂಬದನ್ನು ನಾವು ನೆನಪಿಟ್ಟರೆ, ಆ ನಾಯಕತ್ವ ವಹಿಸುವವರಿಗೆ ವಿಧೇಯರಾಗಲು ಮತ್ತು ಮಾನಕೊಡಲು ಸಹಾಯ ಮಾಡಲ್ಪಡುವೆವು. (ಎಫೆಸ 4:7-13) ಈ ಪುರುಷರು ಆತ್ಮದಿಂದ ನೇಮಕ ಹೊಂದಿದವರಾಗಿರುವುದರಿಂದ ಮತ್ತು ಯೆಹೋವನ ಸಾಕ್ಷಿಗಳ ಜೀವಿತದಲ್ಲಿ ದೇವರ ಸಂಸ್ಥೆಯು ಮಹತ್ವದ ಸ್ಥಾನ ವಹಿಸಿದೆಯಾದ್ದರಿಂದ ನಿಶ್ಚಯವಾಗಿಯೂ ನಾವು, ದೇವಪ್ರಭುತ್ವ ಏರ್ಪಾಡುಗಳಿಗೆ ಕೃತಜ್ಞತೆಯನ್ನು ಮತ್ತು ಸನ್ಮಾನವನ್ನು ತೋರಿಸ ಬಯಸುವೆವು. ಅಷ್ಟಲ್ಲದೆ, ನಮ್ಮಲ್ಲಿ ನಾಯಕತ್ವ ವಹಿಸುವವರಿಗೆ ವಿಧೇಯತೆ ಮತ್ತು ಅಧೀನತೆಯ ಉತ್ತಮ ಮಾದರಿಯನ್ನು ನಾವಿಡುವುದಾದರೆ, ಹೊಸಬರೂ ಈ ಮನೋಭಾವವನ್ನು ವಿಕಸಿಸುವಂತೆ ನಾವು ನೆರವಾಗಬಲ್ಲೆವು.
ಅವರ ಸೇವೆಯನ್ನೇಕೆ ಗಣ್ಯಮಾಡಬೇಕು?
13. (ಎ) ಲೋಕದಲ್ಲಿ ಮತ್ತು ಯೆಹೋವನ ಸಂಸ್ಥೆಯಲ್ಲಿ ನಾಯಕತ್ವದ ಬಗ್ಗೆ ಯಾವ ಪ್ರತಿವಿರುದ್ಧ ನೋಟಗಳು ನೆಲೆಸಿವೆ? (ಬಿ) ನಮ್ಮಲ್ಲಿ ನಾಯಕತ್ವ ವಹಿಸುವ ಪುರುಷರಲ್ಲಿ ವಿಶ್ವಾಸವಿಡಲು ನಮಗೆ ಯಾವ ಯೋಗ್ಯ ಕಾರಣಗಳಿವೆ? (ಬಿ) ಕಷ್ಟಪಟ್ಟು ಕೆಲಸ ಮಾಡುವ ಹಿರಿಯರ ಅಸಂಪೂರ್ಣತೆಗಳನ್ನು ದೊಡ್ಡದು ಮಾಡುವ ಬದಲಿಗೆ, ನಾವೇನು ಮಾಡತಕ್ಕದ್ದು?
13 ನಾಯಕತ್ವವನ್ನು ತಿರಸ್ಕರಿಸುವ ಪ್ರವೃತ್ತಿಯು ಲೋಕದಲ್ಲಿದೆ. ಒಬ್ಬ ಉಪನ್ಯಾಸಕರು ಹೇಳಿದ್ದು: “ಶಿಕ್ಷಣದ ಮೇಲ್ಮಟ್ಟವು ಅನುಯಾಯಿಗಳ ಪ್ರತಿಭೆಯ ಪ್ರಮಾಣವನ್ನು ಬಹು ಹೆಚ್ಚಿಸಿರುವುದರಿಂದ ಅವರೆಷ್ಟು ಠೀಕಾಕಾರರಾಗಿ ಪರಿಣಮಿಸಿದ್ದಾರೆಂದರೆ, ಅವರನ್ನು ನಡಿಸುವುದೇ ಬಹುಮಟ್ಟಿಗೆ ಅಶಕ್ಯ.” ಆದರೆ ಈ ಸ್ವತಂತ್ರ ವರ್ತನೆಯ ಆತ್ಮವು ದೇವರ ಸಂಸ್ಥೆಯಲ್ಲಿ ನೆಲೆಸಿರುವುದಿಲ್ಲ. ಮತ್ತು ನಮ್ಮಲ್ಲಿ ನಾಯಕತ್ವ ವಹಿಸುವ ಪುರುಷರಲ್ಲಿ ವಿಶ್ವಾಸವನ್ನಿಡಲು ನಮಗೆ ಯೋಗ್ಯ ಕಾರಣಗಳು ಇವೆ. ಉದಾಹರಣೆಗೆ, ಶಾಸ್ತ್ರೀಯ ಆವಶ್ಯಕತೆಗಳನ್ನು ಮುಟ್ಟುವವರು ಮಾತ್ರವೇ ಹಿರಿಯರಾಗಿ ನೇಮಿಸಲ್ಪಡುತ್ತಾರೆ. (1 ತಿಮೊಥಿ 3:1-7) ಅವರು ದಯೆಯುಳ್ಳವರೂ, ಪ್ರೀತಿಯುಳ್ಳವರೂ ಮತ್ತು ಸಹಾಯಕರೂ ಆಗಿರುವಂತೆ ತರಬೇತು ಹೊಂದಿದ್ದಾರೆ. ಆದರೂ, ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿ ಹಿಡಿಯುವುದರಲ್ಲಿ ಅವರು ದೃಢತೆಯಿಂದಿರುವರು. ಹಿರಿಯರು ಶಾಸ್ತ್ರೀಯ ಸತ್ಯವನ್ನು ಪಾಲಿಸುತ್ತಾರೆ, ‘ಸ್ವಸ್ಥ ಬೋಧನೆಯಿಂದ ಜನರನ್ನು ಎಚ್ಚರಿಸುವದಕ್ಕೆ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡುಕೊಂಡವರು’ ಆಗಿದ್ದಾರೆ. (ತೀತ 1:5-9) ಆದರೂ, ಅವರ ಮಾನವ ಅಸಂಪೂರ್ಣತೆಗಳನ್ನು ನಾವು ದೊಡ್ಡದಾಗಿ ಮಾಡಬಾರದು ಯಾಕೆಂದರೆ ನಾವೆಲ್ಲರೂ ಅಸಂಪೂರ್ಣರೇ. (1 ಅರಸು 8:46; ರೋಮಾಪುರ 5:12) ಅವರ ಸೀಮಿತಗಳಿಂದ ಹತಾಶೆಗೊಂಡು ಅವರ ಸೂಚನೆಗಳನ್ನು ಹಗುರವಾಗಿ ತಕ್ಕೊಳ್ಳುವ ಬದಲಾಗಿ ನಾವು, ಹಿರಿಯರ ಬೈಬಲಾಧರಿತ ಮಾರ್ಗದರ್ಶನೆಯನ್ನು ದೇವರಿಂದ ಬಂದವುಗಳೆಂಬಂತೆ ಗಣ್ಯ ಮಾಡೋಣ ಮತ್ತು ಸ್ವೀಕರಿಸೋಣ.
14. 1 ತಿಮೊಥಿ 1:12ರ ನೋಟದಲ್ಲಿ, ತನಗೆ ನೇಮಿಸಲ್ಪಟ್ಟ ಶುಶ್ರೂಷೆಯನ್ನು ಒಬ್ಬ ಹಿರಿಯನು ಹೇಗೆ ವೀಕ್ಷಿಸತಕ್ಕದ್ದು?
14 ಗಣ್ಯತೆಯಿದ್ದ ಪುರುಷನಾಗಿದ್ದ ಪೌಲನು, ಅಂದದ್ದು: “ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸುಕ್ರಿಸ್ತನೇ. ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ.” (1 ತಿಮೊಥಿ 1:12) ಆ ಸೇವೆ ಅಥವಾ ಶುಶ್ರೂಷೆಯಲ್ಲಿ ಸಾರುವ ಕಾರ್ಯ ಮತ್ತು ಜೊತೆ ವಿಶ್ವಾಸಿಗಳ ಸೇವೆಯು ಕೂಡಿತ್ತು. ಒಬ್ಬ ಮೇಲ್ವಿಚಾರಕನು ಕುರುಬನಾಗಿ ಸೇವೆ ಮಾಡಲು ಪವಿತ್ರಾತ್ಮನಿಂದ ನೇಮಕ ಹೊಂದಿದರೂ ಇದು ಅವನಿಗೆ, ಇತರರಿಗಿಂತ ಶ್ರೇಷ್ಟನೆಂಬ ಅನಿಸಿಕೆಯನ್ನು ಕೊಡಬಾರದು ಯಾಕೆಂದರೆ ಅವನು ಸ್ವತಾ ದೇವರ ಮಂದೆಯ ಕುರಿಸದೃಶ್ಯರ ಭಾಗವಾಗಿದ್ದಾನೆ. (1 ಪೇತ್ರ 5:4) ಬದಲಾಗಿ ಅವನು, ಮಂದೆಯ ಸದಸ್ಯರ ಶುಶ್ರೂಷೆ ಮಾಡಲು ಪಾತ್ರನಾಗಿ ಎಣಿಸಲ್ಪಟ್ಟದ್ದಕ್ಕಾಗಿ ಸಭೆಯ ತಲೆಯಾದ ಯೇಸು ಕ್ರಿಸ್ತನಿಗೆ ಮತ್ತು ಅದಕ್ಕೆ ಬೇಕಾದ ಜ್ಞಾನ, ವಿವೇಕ ಮತ್ತು ತಿಳುವಳಿಕೆಯನ್ನು ದಯಪಾಲಿಸಿದ ದೇವರಿಗೆ ಕೃತಜ್ಞನಾಗಿರಬೇಕು. (2 ಕೊರಿಂಥ 3:5) ತನ್ನ ದೇವದತ್ತ ಸುಯೋಗಗಳಿಗಾಗಿ ಕೃತಜ್ಞನಾಗಿರಲು ಹಿರಿಯನಿಗೆ ಕಾರಣವಿರುವದರಿಂದ, ಸಭೆಯ ಇತರ ಸದಸ್ಯರು ಈ ಶುಶ್ರೂಷೆಯನ್ನು ಅಥವಾ ಸೇವೆಯನ್ನು ಗಣ್ಯಮಾಡತಕ್ಕದ್ದು.
15. 1 ಥೆಸಲೋನಿಕ 5:12, 13ರಲ್ಲಿ ಪೌಲನ ಸೂಚನೆಯ ಸಾರಾಂಶವೇನು?
15 ಈ ಕಡೇ ದಿನಗಳಲ್ಲಿ ದೇವರು ಕಟ್ಟಿಕೊಟ್ಟ ಈ ಸಂಸ್ಥೆಗಾಗಿ ಯೆಹೋವನ ಸಾಕ್ಷಿಗಳು ಕೃತಜ್ಞರು ಮತ್ತು ಈ ಗಣ್ಯತೆಯು ನಮ್ಮನ್ನು ಹಿರಿಯರನ್ನು ಗೌರವಿಸಲು ಪ್ರಚೋದಿಸುತ್ತದೆ. ನಮ್ಮ ಪ್ರಯೋಜನಕ್ಕಾಗಿ ಅವರು ಮಾಡುವ ಏರ್ಪಾಡುಗಳೊಂದಿಗೆ ನಾವು ಪೂರ್ಣವಾಗಿ ಸಹಕರಿಸಲು ಸಂತೋಷ ಪಡುವವರಾಗಬೇಕು. ಪೌಲನು ಅಂದದ್ದು: “ಸಹೋದರರೇ, ನಿಮ್ಮಲ್ಲಿ ಯಾರು ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.” (1 ಥೆಸಲೋನಿಕ 5:12, 13) ಈ ಸೂಚನೆಯನ್ನು ಅನ್ವಯಿಸುವುದರಿಂದ ಸಂತೋಷವೂ ಯೆಹೋವನ ಆಶೀರ್ವಾದವೂ ಬರುವುದು.
ಸೂಚನೆಯನ್ನು ಕ್ಷಿಪ್ರವಾಗಿ ಅನ್ವಯಿಸಿರಿ
16, 17. ಮದುವೆಯ ವಿಷಯದಲ್ಲಿ ಹಿರಿಯರು ಯಾವ ಸೂಚನೆಯನ್ನು ಕೊಡಬಹುದು, ಮತ್ತು ಅದನ್ನು ಅನುಸರಿಸುವುದರಿಂದ ಏನು ಫಲಿತಾಂಶಿಸುವುದು?
16 ಪೌಲನು ತೀತನನ್ನು “ಬೋಧಿಸುತ್ತಾ, ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು” ಎಂಬದಾಗಿ ಪ್ರಚೋದಿಸಿದನು. (ತೀತ 2:15) ತದ್ರೀತಿಯಲ್ಲಿ ಇಂದು ದೇವರ ಪ್ರತಿನಿಧಿಗಳು, ಬೈಬಲ್ ನಿಯಮಗಳಿಗೆ ಮತ್ತು ತತ್ವಗಳಿಗೆ ನಮ್ಮನ್ನು ಮಾರ್ಗದರ್ಶಿಸುತ್ತಾ ಇದ್ದಾರೆ. ಯೆಹೋವನ ಸಂಸ್ಥೆಯ ಮತ್ತು ನೇಮಿತ ಹಿರಿಯರ ಸೂಚನೆ ಮತ್ತು ಮಾರ್ಗದರ್ಶನೆಯನ್ನು ಅನ್ವಯಿಸುವರೇ ಪದೆಪದೇ ಕೊಡಲ್ಪಡುವ ಉಪದೇಶವನ್ನು ಸ್ವೀಕರಿಸುವುದಕ್ಕೆ ಸಕಾರಣಗಳು ಅಲ್ಲಿವೆ.
17 ದೃಷ್ಟಾಂತಕ್ಕಾಗಿ, ಹಿರಿಯರು ಕ್ರೈಸ್ತನೊಬ್ಬನಿಗೆ, “ಕರ್ತನಲ್ಲಿ ಮಾತ್ರವೇ ಮದುವೆಯಾಗುವ” ಬೈಬಲ್ ಸೂಚನೆಯನ್ನು ಕೊಡಬಹುದು. (1 ಕೊರಿಂಥ 7:39; ಧರ್ಮೋಪದೇಶ 7:3, 4) ಸ್ನಾನಿತನಲ್ಲದ ವ್ಯಕ್ತಿಯನ್ನು ಮದುವೆಯಾಗುವುದರಿಂದ ಗಂಭೀರ ಸಮಸ್ಯೆಗಳು ಬರಬಹುದೆಂದೂ, ರಾಜ ಸೊಲಮೋನನು ಸಹಾ ಅನ್ಯ ಪತ್ನಿಯರನ್ನು ವಿವಾಹವಾದ ಮೂಲಕ ಹೇಗೆ ಘೋರ ತಪ್ಪನ್ನು ಮಾಡಿದನೆಂದೂ, ಮತ್ತು ಅವರು ಅವನ ಹೃದಯವನ್ನು ಹೇಗೆ ಸುಳ್ಳು ದೇವತೆಗಳ ಕಡೆಗೆ ತಿರುಗಿಸಿ ಯೆಹೋವನಿಂದ ದೂರ ತೊಲಗಿಸಿದರೆಂದೂ, ಎತ್ತಿ ಹೇಳಬಹುದು. (1 ಅರಸು 11:1-6) ಯೆಹೂದಿ ಪುರುಷರು ತಮ್ಮ ಅನ್ಯ ಪತ್ನಿಯರನ್ನು ಬಿಟ್ಟುಕೊಡುವಂತೆ ಎಜ್ರನು ಮಾಡಿದ ವಿಷಯವನ್ನೂ, ಅವಿಶ್ವಾಸಿಗಳನ್ನು ಮದುವೆಯಾಗುವವರು ‘ದೇವರ ವಿರುದ್ಧವಾಗಿ ಘೋರವಾದ ದುಷ್ಟತ್ವವನ್ನು ನಡಿಸಿ ದೇವರಿಗೆ ದ್ರೋಹಿ’ ಗಳಾಗುವ ಕುರಿತು ನೆಹೆಮೀಯನು ಹೇಳಿದ್ದನ್ನೂ ಹಿರಿಯರು ವಿವರಿಸಬಹುದು. (ನೆಹೆಮೀಯ 13:23-27; ಎಜ್ರ 10:10-14; ದಿ ವಾಚ್ಟವರ್ ಮಾರ್ಚ್ 15, 1982, ಪುಟ 31; ನವಂಬರ 15, 1986, ಪುಟ 26-30 ನೋಡಿ.) ಪ್ರೀತಿಯುಳ್ಳ ಹಿರಿಯರಿಂದ ಕೊಡಲ್ಪಡುವ ಅಂಥಾ ಶಾಸ್ತ್ರೀಯ ಸೂಚನೆಗಳನ್ನು ಅನ್ವಯಿಸುವ ಫಲವಾಗಿ, ಯೆಹೋವನನ್ನು ಮೆಚ್ಚಿಸುವ ಸಂತೃಪ್ತಿಯೂ ಆಶೀರ್ವಾದವೂ ಲಭಿಸುವುದು.
18. 1 ಕೊರಿಂಥ 5:9-13ರಲ್ಲಿ ಪೌಲನು ಏನು ಬರೆದನೋ ಅದನ್ನು ಗಮನಿಸುವಲ್ಲಿ, ಕುಟುಂಬ ಸದಸ್ಯನೊಬ್ಬನು ಬಹಿಷ್ಕೃತನಾದರೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
18 ಹಿರಿಯರ ನ್ಯಾಯ ವಿಧಾಯಕ ನಿರ್ಣಯಗಳನ್ನು ಗೌರವಿಸುವುದೂ ಯೋಗ್ಯವಾಗಿದೆ. ಪೌಲನು ಕೊರಿಂಥದ ಕ್ರೈಸ್ತರಿಗೆ ಹೇಳಿದ್ದು: “ಕ್ರೈಸ್ತ ಸಹೋದರನೆನಿಸಿಕೊಳ್ಳುವವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಮಾಡಲೂ ಬಾರದು.” ಅವರು ‘ಆ ದುಷ್ಟನನ್ನು ಅವರ ಮಧ್ಯದಿಂದ ತೆಗೆದು ಹಾಕ’ ಬೇಕಿತ್ತು. (1 ಕೊರಿಂಥ 5:9-13) ಆದರೆ ನಿಮ್ಮ ಸಂಬಂಧಿಕರಲ್ಲಿ ಒಬ್ಬರು ಬಹಿಷ್ಕೃತರಾದರೆ ನೀವು ಹೇಗೆ ಪ್ರತಿವರ್ತಿಸುವಿರಿ? ಕುಟುಂಬದ ವಿಷಯಗಳನ್ನು ನೋಡಿಕೊಳ್ಳಲು ಸೀಮಿತ ಸಂಪರ್ಕದ ಅಗತ್ಯವು ಅಲ್ಲಿರಬಹುದಾದರೂ, ಬಹಿಷ್ಕೃತ ಸಂಬಂಧಿಕನೊಂದಿಗಿನ ಎಲ್ಲಾ ಆತ್ಮಿಕ ಸಹವಾಸವನ್ನು ಕಡಿದು ಹಾಕಲೇಬೇಕು. (ದಿ ವಾಚ್ಟವರ್ ಎಪ್ರಿಲ್ 15, 1988, ಪುಟ 26-31 ನೋಡಿ.) ನಿಶ್ಚಯವಾಗಿಯೂ ದೇವರಿಗೆ ಮತ್ತು ಆತನ ಸಂಸ್ಥೆಗೆ ನಿಷ್ಟೆಯು, ಮೇಲ್ವಿಚಾರಕರ ನ್ಯಾಯ ವಿಧಾಯಕ ತೀರ್ಮಾನಗಳನ್ನು ಗೌರವಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು.
19. ನಾವು ಆತ್ಮಿಕವಾಗಿ ತಪ್ಪು ಹಾದಿಯಲ್ಲಿ ಹೋಗುತ್ತಿದ್ದೇವೆಂದು ಒಂದುವೇಳೆ ಹಿರಿಯರು ನಮಗೆ ತೋರಿಸಿದರೆ ನಾವೇನು ಮಾಡಬೇಕು?
19 ಜೀವದ ಇಕ್ಕಟ್ಟಾದ ಹಾದಿಯಲ್ಲಿ ಉಳಿಯುವದು ಅಷ್ಟೇನೂ ಸುಲಭವಲ್ಲ. ದೇವರ ವಾಕ್ಯದಲ್ಲಿ ಮತ್ತು ಆತನ ಸಂಸ್ಥೆಯಲ್ಲಿ ಕುರಿಪಾಲನೆಯ ಜವಾಬ್ದಾರಿಕೆ ವಹಿಸಲ್ಪಟ್ಟವರಿಂದ ಕೊಡಲ್ಪಟ್ಟ ಮಾರ್ಗದರ್ಶನೆಯನ್ನು ನಾವು ಪಾಲಿಸಲೇಬೇಕು. (ಮತ್ತಾಯ 7:13, 14) ನಾವು ಒಂದು ಮೋಟಾರು ಗಾಡಿಯಲ್ಲಿ ಕೂತು ಒಂದು ಶಹರದಿಂದ ಇನ್ನೊಂದಕ್ಕೆ ಪ್ರಯಣಿಸಿದಾಗ ಒಂದು ತಪ್ಪು ದಾರಿಗೆ ತಿರುಗಿದರೆ, ಸರಿಯಾದ ಹಾದಿಗೆ ತಿರುಗಲು ಕ್ರಿಯೆಯನ್ನು ಕೈಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ನಾವು ಸೇರಬೇಕಾದ ಸ್ಥಳವನ್ನು ಎಂದೂ ತಲಪಲಾರೆವು. ತದ್ರೀತಿಯಲ್ಲಿ, ಪ್ರಾಯಶಃ ಅವಿಶ್ವಾಸಿಯೊಂದಿಗೆ ಪ್ರಣಯಾಚರಣೆ ನಡಿಸುವ ಆತ್ಮಿಕ ತಪ್ಪು ಹಾದಿಯಲ್ಲಿ ನಾವಿದ್ದೇವೆಂದು ಹಿರಿಯರು ನಮಗೆ ತೋರಿಸುವುದಾದರೆ, ನಾವು ಕ್ಷಿಪ್ರವಾಗಿ ಅವರ ಶಾಸ್ತ್ರೀಯ ಸೂಚನೆಯನ್ನು ಅನ್ವಯಿಸಬೇಕು. ನಾವು ನಿಜವಾಗಿ “ಯೆಹೋವನಲ್ಲಿ ಭರವಸವಿಡುತ್ತೇವೆ” ಎಂದು ತೋರಿಸುವ ಒಂದು ವಿಧಾನವು ಇದಾಗಿದೆ.—ಜ್ಞಾನೋಕ್ತಿ 3:5, 6.
ಚಿಕ್ಕ ವಿಷಯಗಳಲ್ಲೂ ಗೌರವ
20. ಚಿಕ್ಕ ವಿಷಯಗಳಲ್ಲೂ ಹಿರಿಯರ ಮಾರ್ಗದರ್ಶನೆಗೆ ಗೌರವ ತೋರಿಸಲು ಯಾವ ಪ್ರಶ್ನೆಗಳನ್ನು ನಮಗೆ ಕೇಳಿಕೊಳ್ಳುವುದು ಸಹಾಯಕಾರಿಯಾಗಬಲ್ಲದು?
20 ಹಿರಿಯರ ಮಾರ್ಗದರ್ಶನೆಗೆ ಚಿಕ್ಕ ವಿಷಯಗಳಲ್ಲೂ ಗೌರವ ತೋರಿಸುವ ಅಗತ್ಯ ನಮಗಿದೆ. ಆದ್ದರಿಂದ ನಾವು ನಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಬಹುದು: “ರೋಗಿಗಳನ್ನು ಸಂದರ್ಶಿಸಲು ಅಥವಾ ಹೊಸಬರನ್ನು ಕ್ಷೇತ್ರ ಸೇವೆಯಲ್ಲಿ ತರಬೇತು ಮಾಡಲು ಹಿರಿಯರು ನಮ್ಮನ್ನು ಕೇಳಿಕೊಂಡರೆ ನಾನು ಸಹಕಾರ ತೋರಿಸುತ್ತೇನೋ? ನಾನು ಕೂಟಗಳ ನೇಮಕಗಳನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತೇನೋ ಮತ್ತು ಅದನ್ನು ಚೆನ್ನಾಗಿ ತಯಾರಿಸುತ್ತೇನೋ? ಅಧಿವೇಶನಗಳಲ್ಲಿ ಕುರ್ಚಿ ಕಾದಿರಿಸುವ ವಿಷಯದಲ್ಲಿ, ನಮ್ಮ ಉಡುಪಿನ ವಿಧಾನವೇ ಮುಂತಾದವುಗಳ ಕುರಿತು ಹಿರಿಯರು ಮಾರ್ಗದರ್ಶನೆ ಕೊಡುವಾಗ ನಾನು ಪ್ರತಿಕ್ರಿಯೆ ತೋರಿಸುತ್ತೇನೋ? ರಾಜ್ಯ ಗೃಹವನ್ನು ಶುಚಿಮಾಡುವುದರಲ್ಲಿ, ಕ್ಷೇತ್ರ ಸೇವೆಯನ್ನು ತಕ್ಕ ಸಮಯದಲ್ಲಿ ವರದಿಸುವಂತೆ ಅಥವಾ ಕೂಟಕ್ಕೆ ಸರೀ ಸಮಯಕ್ಕೆ ಬರುವಂತೆ ಅವರು ಕೇಳಿಕೊಳ್ಳುವಾಗ ನಾನು ಸಹಕರಿಸುತ್ತೇನೋ?’
21. ಹಿರಿಯರಿಗೆ ನಮ್ಮ ಗೌರವ ತೋರಿಸುವಿಕೆಯು ಯೇಸುವಿನ ಯಾವ ಮಾತುಗಳನ್ನು ನೆನಪಿಗೆ ತರಬಹುದು?
21 ಸಭಾ ಮೇಲ್ವಿಚಾರಕರು ನಮ್ಮ ಸಹಕಾರವನ್ನು ಗಣ್ಯಮಾಡುತ್ತಾರೆ, ಮತ್ತು ಅದು ಬಹಳಷ್ಟು ಒಳೆಯದನ್ನು ಫಲಿಸುತ್ತದೆ. ವಾಸ್ತವದಲ್ಲಿ, ಅಲ್ಪ ವಿಷಯಗಳಲ್ಲೂ ನಾವು ಆದರವನ್ನೂ ಸಹಕಾರವನ್ನೂ ತೋರಿಸುವಾಗ, ಯೇಸುವಿನ ಮಾತುಗಳನ್ನು ನೆನಪಿಗೆ ತರುವುದು ಒಳ್ಳೆಯದು: “ಸ್ವಲ್ಪವಾದದರಲ್ಲಿ ನಂಬಿಗಸ್ತನಾದವನು ಬಹಳವಾದದರಲ್ಲಿಯೂ ನಂಬಿಗಸ್ತನಾಗುವನು.” (ಲೂಕ 16:10) ನಿಶ್ಚಯವಾಗಿಯೂ ನಾವು ನಂಬಿಗಸ್ತರೆಂದು ಗಮನಿಸಲ್ಪಡ ಬಯಸುತ್ತೇವೆ.
ಪ್ರೀತಿಯುಳ್ಳ ಮೇಲ್ವಿಚಾರಕ್ಕೆ ಪ್ರತಿವರ್ತನೆ ತೋರಿಸುತ್ತಿರ್ರಿ
22. ನಂಬಿಗಸ್ತ ಆಳು ಮತ್ತು ಸಭಾ ಹಿರಿಯರ ಪ್ರೀತಿಯುಳ್ಳ ಮೇಲ್ವಿಚಾರದಿಂದ ಬರುವ ಕೆಲವು ಪ್ರಯೋಜನಗಳಾವುವು?
22 ನಂಬಿಗಸ್ತ ಆಳಿನ ಮತ್ತು ಸಭಾ ಹಿರಿಯರ ಪ್ರೀತಿಯುಳ್ಳ ಮೇಲ್ವಿಚಾರದಿಂದ ದೊರೆಯುವ ಪ್ರಯೋಜನಗಳು, ಯೆಹೋವನ ಹೇರಳವಾದ ಆಶೀರ್ವಾದವು ಆತನ ಐಹಿಕ ಸಂಸ್ಥೆಯ ಮೇಲಿದೆ ಎಂಬದಕ್ಕೆ ರುಜುವಾತಾಗಿದೆ. ಅದಲ್ಲದೆ, ಹಿರಿಯರ ಕುಶಲ ಮಾರ್ಗದರ್ಶನೆಯು ಅವರ ಸಾಮರ್ಥ್ಯಗಳೊಂದಿಗೆ ಸಂಮಿಳಿತವಾಗುತ್ತದೆ ಮತ್ತು ನಮ್ಮೊಳಗೆ ಐಕ್ಯತೆಯನ್ನು ಪ್ರವರ್ಧಿಸುತ್ತದೆ. ಅದು ರಾಜ್ಯಾಭಿರುಚಿಗಳ ಪ್ರವರ್ಧನೆಗಾಗಿ ಒಂದು ಐಕ್ಯವಾದ ಮತ್ತು ಸಾಫಲ್ಯದ ಪ್ರಯತ್ನದಲ್ಲೂ ಫಲಿಸುತ್ತದೆ. ನಾಯಕತ್ವ ವಹಿಸುವವರ ಮೇಲ್ವಿಚಾರಕ್ಕೆ ನಮ್ಮ ಗಣ್ಯತಾಪೂರ್ವಕ ಪ್ರತಿವರ್ತನೆಯ ಒಂದು ಸಕಾರಾತ್ಮಕ ಫಲಿತಾಂಶವು, ದೇವರು ನಮ್ಮ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಆಶೀರ್ವದಿಸುವುದೇ ನಿಶ್ಚಯ. (ಮತ್ತಾಯ 28:19, 20) ಹಿರಿಯರೊಂದಿಗೆ ನಮ್ಮ ಸಹಕಾರವು, ಹೊಸ ವ್ಯವಸ್ಥೆಯಲ್ಲಿನ ನಿತ್ಯಜೀವಕ್ಕಾಗಿಯೂ ನಮ್ಮನ್ನು ತಯಾರಿಸುತ್ತದೆ.
23. 1 ಯೋಹಾನ 5:3ರ ಬೆಳಕಿನಲ್ಲಿ, ನಾವೇನನ್ನು ಮಾಡಲು ಪ್ರೇರಿಸಲ್ಪಡಬೇಕು?
23 ನಾವು ಯೆಹೋವನನ್ನು ಪ್ರೀತಿಸುತ್ತೇವಾದ್ದರಿಂದ, ಆತನಿಗೆ ವಿಧೇಯರಾಗುವುದು ಒಂದು ಅಹಿತಕರವಾದ ಕೆಲಸವಲ್ಲ. ಅಪೂಸ್ತಲ ಯೋಹಾನ ಬರೆದದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. (1 ಯೋಹಾನ 5:3) ನಿಷ್ಟೆಯುಳ್ಳ ಕ್ರೈಸ್ತರು ಯೆಹೋವನ ಆಜೆಗ್ಞಳಿಗೆ ಸಂತೋಷದಿಂದ ವಿಧೇಯರಾಗುತ್ತಾರೆ ಮತ್ತು ಸಭಾ ಮೇಲ್ವಿಚಾರವನ್ನು ಆತನು ಯಾರಿಗೆ ಒಪ್ಪಿಸಿದ್ದಾನೋ ಅವರೊಂದಿಗೆ ಸಹಕರಿಸಲು ಪ್ರೇರಿಸಲ್ಪಡುತ್ತಾರೆ. ದೇವರ ಸಂಸ್ಥೆಯಲ್ಲಿ ನಾವು ಕೂಡಿರುವುದಕ್ಕೆ ಮತ್ತು ಇಂಥಾ “ಮನುಷ್ಯರಲ್ಲಿ ದಾನಗಳು” ನಮ್ಮ ನಡುವೆ ಇರುವುದಕ್ಕೆ ನಾವೆಷ್ಟು ಕೃತಜ್ಞರು! (ಎಫೆಸ 4:8) ಹಾಗಾದರೆ, ದೇವರು ತನ್ನ ಜನರನ್ನು ಮಾರ್ಗದರ್ಶಿಸುತ್ತಿದ್ದಾನೆಂಬ ಪೂರ್ಣ ವಿಶ್ವಾಸದಿಂದ, ಯೆಹೋವನ ಸಾಕ್ಷಿಗಳ ನಡುವೆ ನಾಯಕತ್ವ ವಹಿಸುವ ಸುಯೋಗವು ಯಾರಿಗಿದೆಯೋ ಅವರಿಗೆ ನಾವು ಯಾವಾಗಲೂ ವಿಧೇಯತೆಯನ್ನು ತೋರಿಸುತ್ತಾ ಇರೋಣ. (w89 9/15)
ನಿಮ್ಮ ಉತ್ತರಗಳೇನು?
◻ ನಮ್ಮಲ್ಲಿ ನಾಯಕತ್ವ ವಹಿಸುವವರಿಗೆ ಏಕೆ ವಿಧೇಯರಾಗಿರಬೇಕು?
◻ ಕಷ್ಟಪಟ್ಟು ಕೆಲಸ ಮಾಡುವ ಹಿರಿಯರಿಂದ ನೀಡಲ್ಪಡುವ ಸೇವೆಯ ವಿಷಯದಲ್ಲಿ ನಮ್ಮ ಮನೋಭಾವ ಹೇಗಿರಬೇಕು?
◻ ಹಿರಿಯರಿಂದ ಕೊಡಲ್ಪಡುವ ಸೂಚನೆಗಳನ್ನು ಕ್ಷಿಪ್ರವಾಗಿ ಅನ್ವಯಿಸಬೇಕೇಕೆ?
◻ ಪ್ರೀತಿಯುಳ್ಳ ಮೇಲ್ವಿಚಾರಕ್ಕೆ ನಮ್ಮ ಗಣ್ಯತಾಪೂರ್ವಕ ಪ್ರತಿವರ್ತನೆಯಿಂದ ಯಾವ ಪ್ರಯೋಜನ ಲಭಿಸುತ್ತದೆ?
[ಪುಟ 26 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನೀವು ಕೂಟಗಳಿಗಾಗಿ ನೇಮಕಗಳನ್ನು ಸ್ವೀಕರಿಸುವ ಮೂಲಕ, ರಾಜ್ಯಗೃಹವನ್ನು ಶುಚಿಮಾಡಲು ಸಹಾಯ ಮಾಡುವ ಮಾಲಕ, ನಿಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ತಕ್ಕ ಸಮಯದಲ್ಲಿ ವರದಿಸುವ ಮೂಲಕ ಮತ್ತು ಬೇರೆ ವಿಷಯಗಳಲ್ಲೂ ಹಿರಿಯರೊಂದಿಗೆ ಸಹಕರಿಸುತ್ತೀರೋ?
[ಪುಟ 25 ರಲ್ಲಿರುವ ಚಿತ್ರ]
ಪೌಲನು ಸುವಾರ್ತೆ ಸಾರಲು ಮತ್ತು ಜೊತೆ ವಿಶ್ವಾಸಿಗಳ ಸೇವೆ ಮಾಡಲು ಸಂತೋಷಪಟ್ಟನು. ಹಿರಿಯರೋಪಾದಿ ನೀವು, ನಿಮ್ಮ ದೇವದತ್ತ ಸುಯೋಗಗಳಿಗಾಗಿ ಕೃತಜ್ಞರೋ?