ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 11/1 ಪು. 30-31
  • ನೀವು ಸೂಚನೆಗಳನ್ನು ಪಾಲಿಸುತ್ತೀರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಸೂಚನೆಗಳನ್ನು ಪಾಲಿಸುತ್ತೀರೋ?
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕುಟುಂಬದೊಳಗೆ
  • ಸಭೆಯಲ್ಲಿ
  • ಸಂತೋಷಕರ ಫಲಿತಾಂಶಗಳು
  • ನೀವು ಪಾರಾಗಿ ಉಳಿಯಲು ಸಿದ್ಧರಾಗಿದ್ದೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಸುಖ ಸಂಸಾರ ಸಾಧ್ಯ!
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು—1991
w91 11/1 ಪು. 30-31

ನೀವು ಸೂಚನೆಗಳನ್ನು ಪಾಲಿಸುತ್ತೀರೋ?

ಒಬ್ಬ ಪ್ರೀತಿಯುಳ್ಳ ತಂದೆಯು, ತನ್ನ ಮಕ್ಕಳು ಜೀವಿತದಲ್ಲಿ ಸಾಫಲ್ಯ ಹೊಂದುವಂತೆ ಮತ್ತು ಪ್ರಾಯದವರಾದಾಗ ಸಂತೋಷ ಪಡುವಂತೆ ಅವರಿಗೆ ಬುದ್ಧಿವಾದವನ್ನು ಕೊಡುತ್ತಾನೆ. ಮತ್ತು ತಮ್ಮ ಹೆತ್ತವರನ್ನು ಪ್ರೀತಿಸುವ ಮತ್ತು ಗೌರವಿಸುವ ಮಕ್ಕಳು ಅಂಥ ಬುದ್ಧಿವಾದವನ್ನು ಸ್ವೀಕರಿಸುತ್ತಾರೆ ಯಾಕಂದರೆ ಅದು ತಮ್ಮ ಒಳ್ಳೆಯದಕ್ಕೆಂದು ಅವರಿಗೆ ಗೊತ್ತದೆ. ಅದೇ ರೀತಿ ನಮ್ಮ ಪ್ರೀತಿಯುಳ್ಳ ಪರಲೋಕದ ತಂದೆಯಾದ ಯೆಹೋವ ದೇವರು ತನ್ನ ಸೇವಕರ ಜೀವಿತಕ್ಕೆ ಸಾಫಲ್ಯ ಮತ್ತು ಸಂತೋಷವನ್ನು ತರುವ ಮಾರ್ಗದರ್ಶನೆಯನ್ನು ಒದಗಿಸುತ್ತಾನೆ. ಆದುದರಿಂದ, ದೇವರು ತನ್ನ ವಾಕ್ಯವಾದ ಬೈಬಲಿನ ಮೂಲಕ ಮತ್ತು ಐಹಿಕ ಸಂಸ್ಥೆಯ ಮೂಲಕ ಕೊಡುವ ಬುದ್ಧಿವಾದವನ್ನು ನಾವು ಸ್ವೀಕರಿಸುವದು ಪ್ರಾಮುಖ್ಯವು.

ಕುಟುಂಬದೊಳಗೆ

ಯಾವದಕ್ಕಾಗಿ ನಮಗೆ ಬುದ್ಧಿವಾದ ನೀಡಲ್ಪಡುತ್ತದೋ ಅಂಥ ಕ್ಷೇತ್ರಗಳಾದರೋ ಅನೇಕವಿವೆ; ಅದರಲ್ಲೊಂದು ಕುಟುಂಬ ಚಕ್ರವು. ಮದುವೆ ಮತ್ತು ಕುಟುಂಬಗಳು ದೈವಿಕ ಮೂಲದ್ದು. ಮೊದಲನೆ ಮಾನವ ಜತೆಯ ಮದುವೆಯನ್ನು ನಡಿಸಿದವನು ಮತ್ತು ಅವರು ಮಕ್ಕಳನ್ನು ಹುಟ್ಟಿಸುವಂತೆ ಹೇಳಿದವನು ದೇವರು ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 1:27, 28; 2:22-24) ಕುಟುಂಬದ ಸದಸ್ಯರೆಲ್ಲರು ಸಂಬಂಧಿತ ಕರ್ತವ್ಯಗಳ ಕುರಿತಾದ ಸೂಚನೆಗಳನ್ನು ನಿರ್ಮಾಣಿಕನು ಒದಗಿಸಿದ್ದನು. ದೃಷ್ಟಾಂತಕ್ಕಾಗಿ, ಗಂಡನು ಮತ್ತು ತಂದೆಯು ಮನೆವಾರ್ತೆಯ ತಲೆ ಅಂದರೆ ಕುಟುಂಬಕ್ಕೆ ಬೇಕಾದ ಮಾರ್ಗದರ್ಶನೆ, ಅನ್ನ, ಬಟ್ಟೆ, ಮನೆ, ಭದ್ರತೆ ಮತ್ತು ಶಿಸ್ತನ್ನು ಒದಗಿಸುವ ಜವಾಬ್ದಾರಿಕೆ ಆತನದ್ದು. ಮಹತ್ವದ ಕುಟುಂಬ ನಿರ್ಣಯಗಳನ್ನೂ ಅವನು ಮಾಡುತ್ತಾನೆ. ಗಂಡನಾದ ಅವನು ತನ್ನ ಹೆಂಡತಿಗೆ ಪರಿಗಣನೆಯನ್ನು ತೋರಿಸಿ, ಬಲಹೀನ ಪಾತ್ರೆಯೋಪಾದಿ ಗೌರವವನ್ನು ಕೊಡುವನು. (ಎಫೆಸ 5:22, 23; 1 ತಿಮೊಥಿ 5:8; 1 ಪೇತ್ರ 3:7) ಹೆಂಡತಿಯು ತನ್ನ ಗಂಡನಿಗೆ ಅಧೀನತೆ ತೋರಿಸಬೇಕು, ಆಳವಾದ ಗೌರವ ತೋರಿಸಬೇಕು, ಅವನ ಸಹಕಾರಿಣಿ ಮತ್ತು ಅನುಪೂರಕಳಾಗಿ ಇರಬೇಕು. ಮತ್ತು ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕೆಂದು ಬೈಬಲು ಹೇಳುತ್ತದೆ.—ಆದಿಕಾಂಡ 2:18; ಎಫೆಸ 6:1-3; 1 ಪೇತ್ರ 3:1, 2.

ಈ ಸೂಚನೆಗಳನ್ನು ದುರ್ಲಕ್ಷಿಸಿದರೆ ಏನಾಗುವದು? ಗಂಡಂದಿರು ತಮ್ಮ ಹೆಂಡತಿಯರಿಗೆ ಪರಿಗಣನೆಯನ್ನು ತೋರಿಸಲು ತಪ್ಪುವಾಗ, ಮತ್ತು ಹೆಂಡತಿಯರು ತಮ್ಮ ಗಂಡಂದಿರ ತಲೆತನಕ್ಕೆ ಕೊಂಚವೇ ಗೌರವವನ್ನು ತೋರಿಸುವಾಗ, ಭಿನ್ನಾಬಿಪ್ರಾಯಗಳು ಮತ್ತು ಕಲಹಗಳು ಉಂಟಾಗುತ್ತವೆ. ವಾಸ್ತವದಲ್ಲಿ ಅಂಥ ವಿಷಯಗಳು ಅನೇಕ ವಿವಾಹಗಳನ್ನು ಮುರಿದಿವೆ. ಅವಿಧೇಯ ಮತ್ತು ಎದುರುಬೀಳುವ ಮಕ್ಕಳು ಅನೇಕ ಹೆತ್ತವರಿಗೆ ಬಹಳ ದುಃಖವನ್ನು ತಂದಿರುತ್ತಾರೆ. ಹೆಚ್ಚಾಗಿ ಹೆತ್ತವರು ತಮ್ಮ ಮಕ್ಕಳನ್ನು ಯೋಗ್ಯ ಶಿಸ್ತಿಗೆ ಅನುಸಾರವಾಗಿ ಬೆಳೆಸದೆ ಇರುವದರಿಂದ, ಅವರ ಕೆರಳಿಕೆಗೆ ಕಾರಣರಾಗಿ ದೋಷಪಾತ್ರರಾಗಿದ್ದಾರೆ.—ಎಫೆಸ 6:4.

ಸಾಮಾಜಿಕ ಕಾರ್ಯಕರ್ತರು, ಮನಶಾಸ್ತ್ರಜ್ಞರು ಮತ್ತು ಇತರರು ಕುಟುಂಬ ಸಮಸ್ಯೆಗಳನ್ನು ಬಗೆಹರಿಸುವ ವಿಷಯವಾಗಿ ಅನೇಕ ಸಲಹೆಗಳನ್ನು ನೀಡಿದ್ದಾರಾದರೂ, ಕುಟುಂಬ ನಿರ್ಮಾಣಿಕನು ತಾನೇ ಬೈಬಲಲ್ಲಿ ನೀಡಿರುವ ಸಲಹೆಗಳಿಗಿಂತ ಬೇರೆ ಯಾವುದಾದರೂ ಹೆಚ್ಚು ಪರಿಣಾಮಕಾರಕವಲ್ಲ. ಇವನ್ನು ಅನುಸರಿಸುವದರಿಂದ ನಿಜ ಸಂತೋಷ ಮತ್ತು ಸಂತೃಪ್ತಿಯು ಲಭಿಸುವದು.—ಕೀರ್ತನೆ 19:7-9.

ಸಭೆಯಲ್ಲಿ

ಕ್ರೈಸ್ತ ಸಭೆಯ ಶಿರಸ್ಸಾದ ಯೇಸು ಕ್ರಿಸ್ತನು, ಭೂಮಿಯಲ್ಲಿ ದೇವರ ಸಂಸ್ಥೆಯ ನೇಮಿತ ಕಾಲುವೆಯಾದ, “ನಂಬಿಗಸ್ತನೂ ವಿಶ್ವಾಸಿಯೂ ಆದ ಆಳು” ಮುಖಾಂತರ ಕೊಡುವ ಸೂಚನೆಗಳನ್ನು ನಾವು ಪಾಲಿಸಬೇಕು. (ಮತ್ತಾಯ 24:45-47; ಎಫೆಸ 5:23) ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಕಾಪಾಡಲು, ಅದರ ಸದಸ್ಯರೆಲ್ಲರೂ ಕೊಡಲ್ಪಟ್ಟ ಮಾರ್ಗದರ್ಶನೆಗೆ ಅನುಸಾರವಾಗಿ ಕ್ರಿಯೆಗೈಯಲೇ ಬೇಕು. ದೃಷ್ಟಾಂತಕ್ಕಾಗಿ, ಸಭೆಯಲ್ಲಿ ಕಲಿಸುವದರಲ್ಲಿ ಮತ್ತು ಇತರರಿಗೆ ಸಹಾಯ ಮಾಡುವದರಲ್ಲಿ ನಾಯಕತ್ವವನ್ನು ವಹಿಸುವವರು ಯೆಹೋವನ ಸಂಸ್ಥೆಯಿಂದ ತಮಗೆ ದೊರಕುವ ಮಾರ್ಗದರ್ಶನೆಗೆ ಅಂಟಿಕೊಳ್ಳುವ ಅಗತ್ಯವಿದೆ. ಇದು ಅವರ ಕಾರ್ಯದ ಪರಿಣಾಮಕಾರತೆಗೆ ನೆರವಾಗುವದು. ಸಾರುವ ಕಾರ್ಯದಲ್ಲಿ ಭಾಗವಹಿಸುವದು ಹೇಗೆ, ಸಭೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವದು ಹೇಗೆ, ಸೂಚನೆ ಮತ್ತು ಪ್ರೋತ್ಸಾಹನೆಯನ್ನು ಹೇಗೆ ನೀಡುವದು, ಬಾಧಿತರನ್ನು ಹೇಗೆ ಸಂತೈಸುವದು ಮುಂತಾದವುಗಳ ಕುರಿತು ಸೂಚನೆಗಳು ದೊರಕಬಹುದು. ಕ್ರೈಸ್ತ ಸಭೆಯಲ್ಲಿ ಸಹವಸಿಸುವ ಎಲ್ಲರಿಗೆ ಬೋಧಪ್ರದವೂ ಬಲವರ್ಧಕವೂ ಆಗಿರುವ ಕೂಟಗಳನ್ನು ತಯಾರಿಸುವದು ಹೇಗೆ ಎಂಬದರ ಮಾರ್ಗದರ್ಶಕಗಳೂ ಅಲ್ಲಿವೆ.—ಅಪೋಸ್ತಲಕೃತ್ಯ 20:20; ರೋಮಾಪುರ 12:6-8; ಗಲಾತ್ಯ 6:1; 1 ಥೆಸಲೋನಿಕ 3:1-3.

ಈ ವಿಷಯದಲ್ಲಿ ಸಭಾ ಹಿರಿಯರು ಅಥವಾ ಮೇಲ್ವಿಚಾರಕರು ವಿಶೇಷವಾಗಿ ಒಳ್ಳೇ ಮಾದರಿಯನ್ನು ಇಡಬೇಕು. ಹಿರಿಯರು ಜಾಗ್ರತೆಯಿಂದ ಮತ್ತು ನಂಬಿಗಸ್ತಿಕೆಯಿಂದ ಪಾಲಿಸಬೇಕಾದ ಸೂಚನೆಗಳನ್ನು ಆಡಳಿತ ಮಂಡಲಿಯು ಕಳುಹಿಸುತ್ತದೆ. ಅವರು ಆ ಸೂಚನೆಗಳನ್ನು ಸ್ಥಳೀಕ ಪರಿಸ್ಥಿತಿಗಳಿಗೆ ಹೊಂದಿಸಿಕೊಂಡು, ಅನ್ವಯಿಸಬೇಕು. ಕ್ರೈಸ್ತ ಸಭೆಯನ್ನು ಮಾರ್ಗದರ್ಶಿಸುವವನು ಯೇಸು ಕ್ರಿಸ್ತನು ಎಂಬದನ್ನು ನಾವು ಮನಸ್ಸಿನಲ್ಲಿಡತಕ್ಕದ್ದು. ಭೂಸುತ್ತಲಿನ ಎಲ್ಲಾ ಸಭೆಗಳ ಅವಶ್ಯಕತೆಯನ್ನು ಆತನು ಪರಿಪೂರ್ಣವಾಗಿ ತಿಳಿಯಶಕ್ತನು, ಮತ್ತು ಬೇಕಾದ ಉತ್ತೇಜನ ಮತ್ತು ಸಹಾಯವನ್ನು ಆತನು ಒದಗಿಸುವನು. ಆದುದರಿಂದ, ದೇವರ ದೇವಪ್ರಭುತ್ವ ಸಂಸ್ಥೆಯಿಂದ ಅವರು ಪಡೆಯುವ ಯಾವುದೇ ಮಾರ್ಗದರ್ಶಕಗಳನ್ನು ಅನ್ವಯಿಸಲು ಹಿರಿಯರು ಶಂಕಿಸಬಾರದು. ಇದು ಪ್ರತಿಯೊಂದು ಸಭೆಯ ಎಲ್ಲರಿಗೆ ಒಳ್ಳೇ ಮಾದರಿಯಾಗಿ ಕಾರ್ಯನಡಿಸುವದು ಮತ್ತು ತಮ್ಮ ತಮ್ಮೊಳಗೆ ಐಕ್ಯದಿಂದಿರುವಂತೆ ಮತ್ತು ಭೂಸುತ್ತಲೂ ಇರುವ ಇತರ ಕ್ರೈಸ್ತ ಬಾಂಧವರೊಂದಿಗೆ ಒಮ್ಮತದಿಂದಿರುವಂತೆ ಸಹಾಯ ಮಾಡುವದು.—ಅಪೋಸ್ತಲರಕೃತ್ಯ 15:1-31; ಇಬ್ರಿಯ 13:7; ಪ್ರಕಟನೆ 5:6.

ಸಂತೋಷಕರ ಫಲಿತಾಂಶಗಳು

ಮನೇ ಕಟ್ಟುವವನು ಒಂದು ದೊಡ್ಡ ಕಟ್ಟಡವನ್ನು ಕಟ್ಟುವಾಗ, ಕಟ್ಟಡದ ಬಾಳಿಕೆಗಾಗಿ ವಾಸ್ತುಶಿಲ್ಪಿಯ ನಕ್ಷೆಯನ್ನು ಜಾಗ್ರತೆಯಿಂದ ಪಾಲಿಸುತ್ತಾನೆ. ಜಲಪ್ರಲಯಕ್ಕೆ ಮುಂಚಿನ ಹಿಂಸಾತ್ಮಕ ಯುಗದಲ್ಲಿ, ಒಂದು ನಾವೆಯನ್ನು ಕಟ್ಟುವಂತೆ ನೋಹನಿಗೆ ಆಜ್ಞಾಪಿಸಲಾಯಿತು. ಅದನ್ನು ಹೇಗೆ ಕಟ್ಟಬೇಕು ಮತ್ತು ಬರಲಿರುವ ಪ್ರಲಯದಿಂದ ಪಾರಾಗಲು ಯಾವ ಮನುಷ್ಯರನ್ನು ಮತ್ತು ಪಶುಗಳನ್ನು ಒಳತರಬೇಕು ಎಂಬ ಸೂಚನೆಯನ್ನು ಅವನಿಗೆ ಕೊಡಲಾಯಿತು. ನೋಹನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಬೈಬಲು ಅನ್ನುವದು: “ದೇವರು ಅಪ್ಪಣೆ ಕೊಟ್ಟ ಪ್ರಕಾರವೇ ನೋಹನು ಮಾಡಿದನು.” ನೋಹ ಮತ್ತು ಅವನೊಂದಿಗೆ ನಾವೆಯಲ್ಲಿದ್ದವರು ಮಾತ್ರವೇ ಪ್ರಲಯವನ್ನು ಪಾರಾದರು. (ಆದಿಕಾಂಡ 6:5, 13:-22; 7:23) ನೋಹನ ದಿನಗಳಂಥ ಸಮಯದಲ್ಲಿ ನಾವಿಂದು ಜೀವಿಸುತ್ತಿದ್ದೇವೆ, ಮತ್ತು ಆ ಕಾರಣದಿಂದ ದೇವರು ಎಲ್ಲಾ ದುಷ್ಟರನ್ನು ನಿರ್ಮೂಲಗೊಳಿಸುವನು. ಪಾರಾಗುವವರೊಂದಿಗೆ ನಾವಿರಬೇಕಾದರೆ ಯಾವ ಹೆಜ್ಜೆಗಳನ್ನು ತಕ್ಕೊಳ್ಳಬೇಕೆಂದು ಬೈಬಲು ತಿಳಿಸುತ್ತದೆ.—ಮತ್ತಾಯ 24:37-39; 2 ಪೇತ್ರ 3:5-7, 11.

ಆದುದರಿಂದ, ಯೆಹೋವನು ತನ್ನ ಲಿಖಿತ ವಾಕ್ಯ ಮತ್ತು ಐಹಿಕ ಸಂಸ್ಥೆಯ ಮೂಲಕ ಕೊಡುವ ಸೂಚನೆಗಳನ್ನು ನಾವು ಗಣ್ಯತೆಯಿಂದ ಸ್ವೀಕರಿಸೋಣ ಮತ್ತು ಕಾರ್ಯರೂಪಕ್ಕೆ ಹಾಕೋಣ. ಇದನ್ನು ಮಾಡುವದರಿಂದ ಸಾಫಲ್ಯ ಮತ್ತು ಸಂತೋಷವು ನಮ್ಮದಾಗುವದು ಮತ್ತು ನಮ್ಮ ಜೀವವೂ ರಕ್ಷಿಸಲ್ಪಡುವದು. (w90 10/1)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ