-
ಧರ್ಮದಲ್ಲಿ ಯಾಕೆ ಆಸಕ್ತರಾಗಿರಬೇಕು?ಕಾವಲಿನಬುರುಜು—1994 | ಜೂನ್ 1
-
-
ಧರ್ಮದಲ್ಲಿ ಯಾಕೆ ಆಸಕ್ತರಾಗಿರಬೇಕು?
ಭೂಮಿಯ ಮೇಲಿನ ಪ್ರತಿಯೊಂದು ದೇಶದಲ್ಲಿ, ಧರ್ಮದಲ್ಲಿ ಅಭಿರುಚಿಯುಂಟು. ಇನ್ನೊಂದು ಬದಿಯಲ್ಲಿ, ಧರ್ಮದಲ್ಲಿ ತಮಗೆ ಅಭಿರುಚಿಯೇ ಇಲ್ಲ ಎಂದು ಅತಿ ನೇರವಾಗಿ ಹೇಳುವ ಅನೇಕರೂ ಇದ್ದಾರೆ. ಆದರೆ ಅವರಿಗೆ ಯಾವಾಗಲೂ ಹಾಗೆಯೆ ಅನಿಸುತ್ತಿತ್ತೋ?
ಒಬ್ಬ ವ್ಯಕ್ತಿಯು ಕೇವಲ ಭೌತಿಕ ವಸ್ತುಗಳೊಂದಿಗೆ ನಿಜಕ್ಕೂ ಸಂತೃಪ್ತಿಪಡಲಾರನು ಎಂಬಂತೆ ಮಾನವ ಸ್ವಭಾವವು ಇದೆ. ಮಾನವರಿಗೆ ಆತ್ಮಿಕತೆ ಅವಶ್ಯ. ವಿನೋದದ ಸಮಯೋಪಯುಕ್ತ ಅವಧಿಗಳೊಂದಿಗೆ, ಕೇವಲ ದೈಹಿಕ ಆವಶ್ಯಕತೆಗಳನ್ನು ಪಡೆದುಕೊಳ್ಳುವುದರ ಸುತ್ತಲು ಕಟ್ಟಿರುವ ದಿನನಿತ್ಯದ ಆಸ್ತಿತ್ವವು, ವ್ಯಕ್ತಿಯ ಅತ್ಯಂತ ಆಂತರಿಕ ಅಗತ್ಯಗಳನ್ನು ಪೂರ್ಣವಾಗಿ ಈಡೇರಿಸುವುದಿಲ್ಲ. ಪ್ರಾಣಿಗಳಿಗೆ ಅಸದೃಶವಾಗಿ, ಮಾನವರು, ‘ಜೀವಿತದ ಉದ್ದೇಶವೇನಾಗಿದೆ?’ ‘ಸುಂದರವಾದ ಹೇರಳ ವಿಷಯಗಳನ್ನು ಮಾತ್ರವಲ್ಲ ವಿರೂಪವಾದ ಹೇರಳ ವಿಷಯಗಳನ್ನು ಸಹ ಒಳಗೊಂಡಿರುವ ಈ ಅಲ್ಪ ಕಾಲಿಕ ಜೀವನ ಇರುವುದು ಇಷ್ಟು ಮಾತ್ರವೊ?,’ ಎಂದು ತಿಳಿಯಬಯಸುತ್ತಾರೆ. ಇಂತಹ ಪ್ರಶ್ನೆಗಳನ್ನು ನೀವು ಕೇಳಿರುವುದಿಲ್ಲವೊ?
ಆದರೂ, ಇಂದು ಜೀವದಿಂದಿರುವ ಅನೇಕ ಲಕ್ಷಗಟ್ಟಲೆ ಜನರು ಧರ್ಮದಲ್ಲಿ ಯಾವುದೇ ಅರ್ಥಭರಿತ ಅಭಿರುಚಿಯನ್ನು ನಿರುತ್ತೇಜಿಸುವ ಪರಿಸರದಲ್ಲಿ ಬೆಳೆದಿರುತ್ತಾರೆ. ಆ ಪ್ರಭಾವವು ಅವರ ಹೆತ್ತವರ ಮೂಲಕ, ಶಿಕ್ಷಕರ ಮೂಲಕ, ಸಮಾನ ವಯಸ್ಕರ ಮೂಲಕ ಯಾ ಸರಕಾರದ ಮೂಲಕ ಸಹ ಬಂದಿರಬಹುದು.
ಸ್ಕಾಲಾಬ್ರಿನೊ ಎಂಬ ಅಲ್ಪೇನ್ಯದ ಯುವಕನು ವಿವರಿಸಿದ್ದೇನೆಂದರೆ, ಕಮ್ಯೂನಿಸ್ಟ್ ಆಳಿಕೆಯ ಕೆಳಗೆ, ದೇವರು ಇಲ್ಲ ಎಂದು ಜನರಿಗೆ ಕಲಿಸಲ್ಪಟ್ಟಿತು. ಇಷ್ಟೇ ಅಲ್ಲದೆ, ಅವರು ಧರ್ಮದ ಕುರಿತು ಮಾತಾಡುವುದು ಅಪಾಯಕರವಾಗಿತ್ತು; ಹಾಗೆ ಮಾಡುವುದು ಸೆರೆವಾಸಕ್ಕೆ ನಡೆಸಸಾಧ್ಯವಿತ್ತು. ಆದರೂ, 1991 ರಲ್ಲಿ, ಅವನು ಸ್ವಿಟ್ಸರ್ಲೆಂಡ್‌ನಲ್ಲಿ ನಿರಾಶ್ರಿತನಾಗಿದ್ದಾಗ, ಬೈಬಲ್ ಅಧ್ಯಯನವನ್ನು ಮಾಡುವ ಸಂದರ್ಭವು ಅವನಿಗೆ ಕೊಡಲ್ಪಟ್ಟಿತು. ಅದನ್ನಾತನು ಸ್ವೀಕರಿಸಿದನು. ಯಾಕೆ?
ಬೈಬಲ್ ಎಂಬಂತಹ ಪುಸ್ತಕವು ಇದೆ ಎಂದು ಅವನು ಅಲ್ಪೇನ್ಯದಲ್ಲಿ ಕೇಳಿದ್ದನು, ಆದರೆ ಆತನಿಗೆ ಅದರ ಕುರಿತು ನಿಜಕ್ಕೂ ಏನೂ ಗೊತ್ತಿರಲಿಲ್ಲ. ಹೀಗೆ, ಆರಂಭದಲ್ಲಿ ಬೈಬಲನ್ನು ತಿಳಿಯುವ ಬಯಕೆಯು ಪ್ರಧಾನವಾಗಿ ಅವನನ್ನು ಪ್ರೇರೇಪಿಸಿರಲಿಕ್ಕಿಲ್ಲ. ಮಾನವಕುಲ ಮತ್ತು ಭೂಮಿಗಾಗಿ ದೇವರ ಉದ್ದೇಶದ ಕುರಿತು ಅವನು ಅಭ್ಯಾಸ ಮಾಡುವನೆಂದು ಅವನಿಗೆ ಹೇಳಲಾಗಿತ್ತಾದರೂ, ಸ್ಥಳೀಯ ಭಾಷೆಯ ಅವನ ಬಳಕೆಯನ್ನು ಪ್ರಗತಿಗೊಳಿಸಲು ಒಂದು ಸಂದರ್ಭವನ್ನಾಗಿಯೂ ಅವನು ಅದನ್ನು ಕಂಡನು. ಆದಾಗ್ಯೂ, ಅವನು ಕಲಿಯುತ್ತಿದ್ದದ್ದು ಅವನ ಪಾಲಿಗೆ ಬಲವಾದ ಆಂತರಿಕ ಆತ್ಮಿಕ ಹಂಬಲವನ್ನು ಈಡೇರಿಸಿತು ಎಂಬುದನ್ನು ಆತನು ಕೂಡಲೆ ಕಂಡುಕೊಂಡನು. ಶಾಂತಿಯು ಉಳಿಯಬಲ್ಲ ನೂತನ ಲೋಕ, ಜನರು ಸದಾ ಜೀವಿಸಶಕ್ತರಾಗುವ ಮತ್ತು ಜೀವನಕ್ಕೆ ಅವಶ್ಯವಿರುವ ಎಲ್ಲ ವಸ್ತುಗಳ ಒಂದು ಹೇರಳತೆಯನ್ನು ಅನುಭವಿಸುವ ಲೋಕದ ದೇವರ ವಾಗ್ದಾನದ ಕುರಿತು ಅವನು ಕಲಿತಾಗ, ಅವನು ಸಂತೋಷ ಮತ್ತು ಆನಂದವನ್ನನುಭವಿಸಿದನು. ಅವನು ಮತ್ತು ಅವನ ಕುಟುಂಬವು ಈ ನೂತನ ಲೋಕದ ಭಾಗವಾಗಶಕ್ತರೆಂಬುದನ್ನು ಅವನು ಕಲಿತಾಗ ಅವನ ಅಭಿರುಚಿಯು ಅಧಿಕವಾಯಿತು. ಈ ಸುವಾರ್ತೆಯನ್ನು ತನ್ನಷ್ಟಕ್ಕೆ ಇಟ್ಟುಕೊಳ್ಳಲಾಗದೆ, ಅದನ್ನು ಅಲ್ಪೇನ್ಯದಲ್ಲಿನ ತನ್ನ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಅವನು ದೂರವಾಣಿಯ ಮೂಲಕ ಅವರೊಂದಿಗೆ ಮಾತಾಡಿದನು.
ರಷ್ಯಾದಲ್ಲಿ ಜೀವಿಸುವ ಅಲ್ಯಿಕ್‌ಸ್ವೇ ಕೂಡ, ಒಬ್ಬ ವ್ಯಕ್ತಿಯ ಜೀವಿತದ ಮೇಲೆ ಬೀರಬಲ್ಲ ಬೈಬಲಿನ ನಿಷ್ಕೃಷ್ಟ ಜ್ಞಾನದ ಪ್ರಭಾವದ ಬಗ್ಗೆ ಬೆರಗುಗೊಂಡನು. ಸಮಸ್ಯೆಗಳೊಂದಿಗೆ ಪೂರ್ತಿ ಮುಳುಗಲ್ಪಟ್ಟು, ಜೀವಿತದ ಉದ್ದೇಶದ ಕುರಿತು ತೃಪ್ತಿಕರ ವಿವರಣೆಯನ್ನು ಕಂಡುಕೊಳ್ಳಲಾರದೆ, ಅವನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಯೋಜಿಸಿದನು. ಆದರೂ, ಮೊದಲು ಸ್ನೇಹಿತನನ್ನು ಭೇಟಿಯಾಗಲು ಅವನು ಫಿನ್ಲೆಂಡಿಗೆ ಹೋದನು. ರೈಲು ಬಂಡಿಯಲ್ಲಿ ದಾರಿಯಲ್ಲಿ, ಕೆಲವು ಜೊತೆ ಪ್ರವಾಸಿಗರೊಂದಿಗೆ ಅವನು ತನ್ನ ಸಮಸ್ಯೆಗಳ ಕುರಿತು ಮಾತಾಡಿದನು. ಅವರಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬಳಿದ್ದಳು, ಅಂತಹ ಸಮಸ್ಯೆಗಳಿಗೆ ಬೈಬಲು ಪರಿಹಾರಗಳನ್ನು ಕೊಡುವುದರಿಂದ, ಅವಳು ಅವನನ್ನು ಅದನ್ನು ಅಧ್ಯಯನ ಮಾಡುವಂತೆ ಕೇಳಿಕೊಂಡಳು. ಅವನು ಅನಿಶ್ಚಿತಮತಿಯಾಗಿದ್ದನು. ಹಿಂದಿರುಗುವ ಪ್ರಯಾಣದಲ್ಲಿ, ಅವನಿಗೆ ಅಂಥಾದ್ದೇ ಅನುಭವವಾಯಿತು. ಈ ಸಲ ಸರಳವಾಗಿ ಮಾತಾಡಿದವಳು ಇನೊಬ್ಬ ಸಾಕ್ಷಿಯಾಗಿದಳ್ದು ಮತ್ತು ಅವಳಿಗೂ ಇದೇ ಬಗೆಯ ಸಮಸ್ಯೆಗಳು ಇದ್ದವು ಆದರೆ ಇವುಗಳನ್ನು ಜಯಿಸಲು ಬೈಬಲು ತನಗೆ ಸಹಾಯ ಮಾಡಿತು ಎಂದು ಅವಳು ಅವನಿಗೆ ಹೇಳಿದಳು. ಅವಳು ಕೂಡ ಬೈಬಲ್ ಅಧ್ಯಯನ ಮಾಡುವಂತೆ ಅವನನ್ನು ಪ್ರೋತ್ಸಾಹಿಸಿದಳು. ಅವನು ಮನೆಗೆ ತಲಪಿದಾಗ, ದೂರವಾಣಿಯು ಘಣಘಣಿಸಿತು. ಅದು ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುತ್ತಿದ್ದ ಮತ್ತು ಬಹಳ ಸಂತೋಷವಾಗಿದ್ದ ಇನ್ನೊಬ್ಬ ಸ್ನೇಹಿತೆಯದ್ದಾಗಿತ್ತು. ಅವನಿಗೆ ಏನು ಅಗತ್ಯವಿತ್ತೋ ಅದನ್ನು ಪ್ರಾಯಶಃ ಬೈಬಲು ನಿಜಕ್ಕೂ ಕೊಡಬಲ್ಲದೆಂದು ಆ ಮನುಷ್ಯನು ಅರಿಯಲಾರಂಭಿಸಿದನು, ಆದರೆ ಸಹಾಯವಿಲ್ಲದೆ ಅದನ್ನಾತನು ತಿಳಿಯಲಸಾಧ್ಯವೆಂದು ಅವನು ಅರಿತಿದ್ದನು. ಯೆಹೋವನ ಸಾಕ್ಷಿಗಳೊಂದಿಗೆ ಕ್ರಮದ ಮನೆ ಬೈಬಲ್ ಅಧ್ಯಯನವನ್ನು ಪಡೆದುಕೊಳ್ಳಲು ಅವನು ಒಪ್ಪಿದನು, ಮತ್ತು ಅವನು ಅವರ ಕೂಟಗಳನ್ನು ಹಾಜರಾಗಲು ಆರಂಭಿಸಿದನು. ಬೈಬಲ್ ಕಲಿಸುವುದರ ಸುತ್ತ ತಮ್ಮ ಜೀವಿತಗಳನ್ನು ರೂಪಿಸಿಕೊಳ್ಳುವವರು, ಮಾನವಕುಲಕ್ಕೆ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಅವರು ಕೂಡ ಎದುರಿಸುವದಾದರೂ, ಅಷ್ಟೊಂದು ಸಂತೋಷಿಗಳಾಗಿರುವ ಕಾರಣವನ್ನು ತಿಳಿಯಲು ಅವನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.
ಮಾನವ ಸಂಬಂಧದ ಒಳನೋಟದೊಂದಿಗೆ, ಯೇಸು ಕ್ರಿಸ್ತನು ಹೇಳಿದ್ದು: “ಮನುಷ್ಯನು ರೊಟ್ಟಿಯಿಂದ ಮಾತ್ರ ಬದುಕಲಾರನು.” (ಮತ್ತಾಯ 4:4, ದ ನ್ಯೂ ಇಂಗ್ಲಿಷ್ ಬೈಬಲ್) ಅವನು ಮತ್ತೂ ಅಂದದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ಅವರು ತಮ್ಮ ಅಗತ್ಯಗಳ ಕುರಿತು ತೀವ್ರವಾಗಿ ಎಚ್ಚರವಿರುವ ಕಾರಣದಿಂದಾಗಿ, ಅದನ್ನು ಈಡೇರಿಸಲು ತಕ್ಕ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ, ಮತ್ತು ದೇವರ ಆಶೀರ್ವಾದವನ್ನು ಅನುಭವಿಸುವುದರಿಂದ ಅವರಿಗೆ ಸಂತೋಷವು ಲಭಿಸುತ್ತದೆ. ಆದಾಗ್ಯೂ, ಕೇವಲ ಒಂದು ಚರ್ಚಿಗೆ ಸೇರುವುದರ ಮೂಲಕ ಯಾ ಕೆಲವು ಧಾರ್ಮಿಕ ಆರಾಧನೆಗಳನ್ನು ಹಾಜರಾಗುವ ಮೂಲಕ ನಮ್ಮ ಆತ್ಮಿಕ ಅಗತ್ಯವು ಈಡೇರಲಾರದು. ಬಹುವಾಗಿ ಮತಾಚರಣೆಯಿರುವ ಧರ್ಮವು ಒಬ್ಬನ ಭಾವೊದ್ರೇಕಗಳಿಗೆ ಹಿಡಿಸಬಹುದು, ಆದರೆ ಅದು ಜೀವಿತದ ಸಮಸ್ಯೆಗಳಿಗೆ ಯಥಾವತ್ತಾದ ಪರಿಹಾರ ಮಾರ್ಗಗಳನ್ನು ಒದಗಿಸುತ್ತದೋ? ಒಂದು ಧರ್ಮವು ಕೆಲವು ಮೂಲ ನೀತಿ ಬೋಧೆಗಳು ತರ್ಕಬದ್ಧವಾಗಿವೆ ಎಂದು ಹೇಳಿಕೊಳ್ಳುವುದಾದರೂ, ಜೀವಿತದ ನಿಜ ಉದ್ದೇಶದ ಕುರಿತು ಸತ್ಯ ತಿಳಿವಳಿಕೆಯನ್ನು ಒದಗಿಸಲು ತಪ್ಪುವುದಾದರೆ, ಅದು ನಿಮ್ಮ ಆತ್ಮಿಕ ಅಗತ್ಯವನ್ನು ಈಡೇರಿಸುವುದೋ? ಇನ್ನೂ ಮಹತ್ತಾದ ಚಿಂತೆಯು, ಅಂತಹ ಒಂದು ಧರ್ಮವನ್ನು ಆಚರಿಸುವುದು ದೇವರೊಂದಿಗೆ ಉತ್ತಮ ಸಂಬಂಧಕ್ಕೆ ನಡೆಸುವುದೋ? ಅದಿಲ್ಲದೆ, ನಿಜ ಸಂತೃಪ್ತಿಯು ಇಲ್ಲದಿರುವುದು.
ಈ ವಿಷಯದಲ್ಲಿ ಅನೇಕ ಜನರು ಅವರಿಗೆ ಇನ್ನೂ ದೊರಕದಿರುವುದನ್ನು ಅನ್ವೇಷಿಸುತ್ತಿದ್ದಾರೆ.
[ಪುಟ 3 ರಲ್ಲಿರುವ ಚಿತ್ರ]
ಒಂದು ಚರ್ಚನ್ನು ಸೇರುವುದರ ಮೂಲಕ ನಿಮ್ಮ ಆತ್ಮಿಕ ಅಗತ್ಯಗಳು ನಿಜವಾಗಿಯೂ ಈಡೇರುವವೂ?
[ಪುಟ 4 ರಲ್ಲಿರುವ ಚಿತ್ರ]
ಬೈಬಲನ್ನು ಅವರು ತಿಳಿದುಕೊಂಡಾಗ, ಜೀವಿತವು ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆಂದು ಅನೇಕರು ಕಂಡುಕೊಂಡಿದ್ದಾರೆ
-
-
ಯುಕ್ತವಾದ ಧರ್ಮಕ್ಕಾಗಿ ಅವರ ಅನ್ವೇಷಣೆಕಾವಲಿನಬುರುಜು—1994 | ಜೂನ್ 1
-
-
ಯುಕ್ತವಾದ ಧರ್ಮಕ್ಕಾಗಿ ಅವರ ಅನ್ವೇಷಣೆ
ಬಾಲ್ಯಾವಸ್ಥೆಯಿಂದಲೆ ಕೆಲವು ಜನರು ಜೀವಿತದ ಕುರಿತು ಅವರ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳಿಗಾಗಿ ಅನ್ವೇಷಿಸಿದ್ದಾರೆ. ಯುವಕರಾಗಿದ್ದಾಗ, ಅವರು ಧಾರ್ಮಿಕ ಆರಾಧನೆಗಳನ್ನು ಹಾಜರಾಗಿದ್ದಿರಬಹುದು. ಆದರೆ ಕೊಡಲ್ಪಟ್ಟ ಉತ್ತರಗಳಾಗಲಿ ಅಥವಾ ಚರ್ಚಿನ ಮತಾಚರಣೆಯಾಗಲಿ ಜೀವಿತದ ಸಮಸ್ಯೆಗಳನ್ನು ನಿಭಾಯಿಸಲು ನಿಜಕ್ಕೂ ಸಹಾಯ ಮಾಡಿಲ್ಲವೆಂದು ಅನೇಕರು ಕಂಡುಕೊಂಡಿದ್ದಾರೆ.
ಅವರು ಧಾರ್ಮಿಕ ಆರಾಧನೆಗಳನ್ನು ಅಪರೂಪಕ್ಕೆ ಹಾಜರಾಗುವುದಾದರೂ, ತಮ್ಮ ಹೆತ್ತವರ ಧರ್ಮಕ್ಕೆ ತಾವು ಇನ್ನೂ ಸೇರಿದವರೆಂದು ಅವರು ಹೇಳಬಹುದು. ಚರ್ಚ್ ಆಫ್ ಇಂಗ್ಲೆಂಡಿನ ಬಿಷಪರಿಗನುಸಾರ, ಅವರಲ್ಲಿ ಉಳಿದಿರುವ ಕೊಂಚ ನಂಬಿಕೆಯು ಅವರ ಜೀವಿತಗಳ ಮೇಲೆ ಕೇವಲ ಅಲ್ಪ ಪ್ರಭಾವವನ್ನು ಬೀರುತ್ತದೆ. ಅವರು ಧರ್ಮವನ್ನು ಕ್ರಿಯಾಶೀಲ ಗಮನದ ಹೊರಗಿನ ಸ್ಥಿತಿಯಲ್ಲಿ ಹಾಕಿದ್ದಾರೆ. ಇತರರು, ಧಾರ್ಮಿಕ ವರ್ತುಲಗಳಲ್ಲಿ ಅವರು ಕಾಣುವ ಕಪಟಕ್ಕೂ ಅಸಹ್ಯಪಟ್ಟಿದ್ದಾರೆ ಮತ್ತು ಧರ್ಮವನ್ನು ಪೂರ್ಣವಾಗಿ ತಿರಸ್ಕರಿಸಿದ್ದಾರೆ. ಆದರೂ, ಜೀವಿತದ ಕುರಿತು ಅವರ ಪ್ರಶ್ನೆಗಳು ಪಟ್ಟುಹಿಡಿದಿವೆ.
ಕೆಲವರಿಗೆ ಗಂಭೀರ ಸಂಶಯಗಳಿರುವ ಕಾರಣ
ಮನೆ ಇಲ್ಲದವರಿಗೆ ಸಹಾಯ ಮಾಡಲು, ಅಗತ್ಯವಿರುವವರಿಗೆ ಆಹಾರ ವಿತರಿಸಲು, ಮತ್ತು ಸಂಸ್ಕೃತಿಯ ಘಟನೆಗಳ ಜವಾಬ್ದಾರಿ ಹೊರುವ ನಿಯೋಗಗಳು ಅನೇಕ ಚರ್ಚುಗಳಿಗಿವೆ ಎಂಬುದು ಹೆಚ್ಚಿನ ಜನರಿಗೆ ಗೊತ್ತುಂಟು. ಆದರೆ ಕೇವಲ ಕ್ರೈಸ್ತೇತರರೊಂದಿಗೆ ಮಾತ್ರವಲ್ಲ, ಕ್ರೈಸ್ತರೆಂದು ಹೇಳಿಕೊಳ್ಳುವವರೊಳಗೂ ಧರ್ಮದಲ್ಲಿ ಬೇರೂರಿದ ಹಿಂಸಾಕೃತ್ಯ ಮತ್ತು ರಕ್ತಪಾತದ ವಾರ್ತಾ ವರದಿಗಳನ್ನು ಅವರು ಹೆಚ್ಚಿನಾಂಶ ಪ್ರತಿ ದಿನ ಕೇಳುತ್ತಾರೆ. ಅಂಥ ಹಿಂಸಾಕೃತ್ಯದಲ್ಲಿ ಒಳಗೂಡಿದ ಆ ಗುಂಪುಗಳು ಯುಕ್ತವಾದ ಧರ್ಮವನ್ನು ಆಚರಿಸುತ್ತಿವೆಯೊ ಎಂದು ಅವರು ಸಂಶಯ ಪಡುವುದಾದರೆ ಅದು ನಮ್ಮನ್ನು ಅಚ್ಚರಿಗೊಳಿಸಬೇಕೋ?
ಚರ್ಚುಗಳ ಮೂಲಕ ಪುರಸ್ಕೃತವಾದ ಅನಾಥಾಲಯಗಳು ಉತ್ತಮವಾದ ವಿಷಯವೆಂದು ಧಾರ್ಮಿಕ ಹಿನ್ನಲೆ ಇರುವ ಅನೇಕರು ಆಲೋಚಿಸುತ್ತಿದ್ದರು. ಆದಾಗ್ಯೂ, ಇತ್ತೀಚೆಗಿನ ವರುಷಗಳಲ್ಲಿ, ಒಂದರ ಅನಂತರ ಇನ್ನೊಂದು ಸ್ಥಳದಲ್ಲಿ ತಮ್ಮ ಆರೈಕೆಯಲ್ಲಿ ಕೊಡಲ್ಪಟ್ಟ ಮಕ್ಕಳನ್ನು ಪಾದ್ರಿಗಳು ಲೈಂಗಿಕವಾಗಿ ದುರುಪಯೋಗಿಸಿದ್ದಾರೆಂದು ಆರೋಪಿಸಲ್ಪಟ್ಟಿರುವಾಗ ಅವರು ಗಾಬರಿಪಟ್ಟಿರುತ್ತಾರೆ. ಆರಂಭದಲ್ಲಿ ಕೇವಲ ಕೆಲವೇ ಪಾದ್ರಿಗಳು ನಿಂದಾರ್ಹರು ಎಂದು ಜನರು ಆಲೋಚಿಸಿದರು. ಈಗ ಅವರಲ್ಲಿ ಕೆಲವರು ಚರ್ಚ್‌ನೊಂದಿಗೆಯೇ ಏನಾದರು ತಪ್ಪು ಇದೆಯೋ ಎಂದು ಕೌತುಕಗೊಳ್ಳುತ್ತಾರೆ.
ಏವುಕೆನ್ಯಳಂತೆ ಕೊಂಚ ಮಂದಿ, ತಮ್ಮ ಧರ್ಮದಲ್ಲಿ ಒಮ್ಮೆ ಆಳವಾಗಿ ಒಳಗೂಡಿದ್ದರು. ಅರ್ಜೆಂಟೀನದಲ್ಲಿ ಯುವತಿಯೋಪಾದಿ, ಇಟಾಟಿಯ ಕನ್ಯೆಯ ಆರಾಧನೆಗಾಗಿ ಯಾತ್ರೆ ಹೊರಟಿದ್ದವರಲ್ಲಿ ಅವಳಿದಳ್ದು. ಅವಳು 14 ವರುಷ ಕಾನ್ವೆಂಟ್‌ನಲ್ಲಿ ಕ್ರೈಸ್ತ ಸಂನ್ಯಾಸಿನಿಯಾಗಿ ಜೀವಿಸಿದಳು. ಅನಂತರ ಅವಳು, ಕ್ರಾಂತಿಯ ಮೂಲಕವಾಗಿ ಸಾಮಾಜಿಕ ಮತ್ತು ಆರ್ಥಿಕ ರಚಾನಾಕ್ರಮದ ತ್ವರಿತ, ತೀವ್ರ ಬದಲಾವಣೆಯನ್ನು ಸಮರ್ಥಿಸಿದ ಅಂತಾರಾಷ್ಟ್ರೀಯ ಧಾರ್ಮಿಕರಾಜಕೀಯ ಗುಂಪನ್ನು ಸೇರಲು ಕಾನ್ವೆಂಟನ್ನು ಬಿಟಳ್ಟು. ಅವಳು ನೋಡಿದ್ದ ಮತ್ತು ಅನುಭವಿಸಿದರ್ದ ಫಲಿತಾಂಶವಾಗಿ, ಅವಳು ದೇವರಲ್ಲಿನ ನಂಬಿಕೆ ಮತ್ತು ಭರವಸೆಯನ್ನು ಕಳೆದುಕೊಂಡಳು. ವಿಶ್ವಾಸ ಇಡಶಕ್ತವಾಗುವ ಒಂದು ಧರ್ಮವನ್ನು ಅವಳು ನಿಜಕ್ಕೂ ಅನ್ವೇಷಿಸತ್ತಿರಲಿಲ್ಲ. ಬಡವರಾಗಿರುವವರಿಗೆ ನ್ಯಾಯವನ್ನು ತರುವ—ಹೌದು, ಮತ್ತು ಆಕೆಯು ಭರವಸೆ ಇಡಬಹುದಾದ ಸ್ನೇಹಿತನನ್ನು ಪಡೆದುಕೊಳ್ಳುವ—ಮಾರ್ಗವು ಅವಳಿಗೆ ಬೇಕಾಗಿತ್ತು.
ಇತರರು ಚರ್ಚುಗಳಲ್ಲಿ ನಡೆಯುತ್ತಿರುವುದನ್ನು ಗಮನಿಸುತ್ತಾರೆ ಮತ್ತು ಅವುಗಳಿಂದ ದೂರವಿದ್ದಾರೆ. ಯಾರ ದೃಷ್ಟಿಕೋನಗಳನ್ನು ಸ್ಪುಟ್ನಿಕ್ ಪತ್ರಿಕೆಯಲ್ಲಿ, 1991 ರಲ್ಲಿ ಪ್ರಕಟಿಸಲಾಗಿತ್ತೊ, ಆ ಒಬ್ಬ ನಾಸ್ತಿಕನು ಮುಚ್ಚುಮರೆ ಇಲ್ಲದೆ ಹೇಳಿದ್ದು: “ಅನ್ಯ ಮತ್ತು ಕ್ರೈಸ್ತ ಪುರಾಣದ ಗುಣಗಳ ನಡುವೆ ಯಾವುದೆ ಅಗತ್ಯ ವ್ಯತ್ಯಾಸವನ್ನು ನಾನು ಕಾಣುವುದಿಲ್ಲ.” ಒಂದು ಉದಾಹರಣೆಯಾಗಿ, ಮಾಸ್ಕೊ ನಗರದ ಬೀದಿಗಳಲ್ಲಿ ರಕ್ಷಿತಶವವಿರುವ ಕಲ್ಲಿನ ಶವ ಸಂಪುಟವನ್ನು, ಸುವರ್ಣ ಕಸೂತಿ ಹಾಕಲ್ಪಟ್ಟ ನೀಳುಡುಪನ್ನು ಧರಿಸಿದ್ದ ಪಾದ್ರಿಗಳು, ನಿಧಾನವಾಗಿ ಹೊತ್ತುಕೊಂಡು ನಡೆದರು ಎಂದು ಒಂದು ಮೆರವಣಿಗೆಯನ್ನು ಅವನು ವಿವರಿಸಿದನು. ಆ ದೇಹವು ವಸ್ತು ಸಂಗ್ರಹಾಲಯದಿಂದ ಒಂದು ಚರ್ಚ್‌ಗೆ ಸ್ಥಳಾಂತರಿಸಲಾಗುತ್ತಿದ್ದ “ಒಬ್ಬ ಆರ್ತೊಡಾಕ್ಸ್ ಕ್ರೈಸ್ತ ಸಂತ”ನದಾಗಿತ್ತು, ಮತ್ತು ಈ ಮೆರವಣಿಗೆಯು ಆ ಬರಹಗಾರನಿಗೆ ಪ್ರಾಚೀನ ಐಗುಪ್ತದಲಿನ್ಲ ಪುರೋಹಿತರ ಮತ್ತು ರಕ್ಷಿತಶವಗಳ ನೆನಪು ಹುಟ್ಟಿಸಿತು. ಅವನು ಇನ್ನೂ ಜ್ಞಾಪಿಸಿದ್ದು, ಮೊಸ್ಕೊದಲ್ಲಿನ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವವರು “ಕ್ರೈಸ್ತ ತ್ರಯೈಕ್ಯ”ದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದಂತೆ, ಐಗುಪ್ತರು ಕೂಡ—ಒಸೈರಿಸ್, ಐಸಿಸ್, ಮತ್ತು ಹೋರಸ್ ಎಂಬ—ದೇವರುಗಳ ಒಂದು ತ್ರಿತ್ವವನ್ನು ಆರಾಧಿಸಿದ್ದರು.
ಅದೇ ಬರಹಗಾರನು ಪ್ರೀತಿಯ ಕ್ರೈಸ್ತ ಭಾವವು—“ದೇವರು ಪ್ರೀತಿಸ್ವರೂಪಿಯು,” ಮತ್ತು “ನಿನ್ನ ನೆರೆಯವನನ್ನು ಪ್ರೀತಿಸು”—ಪ್ರಾಚೀನ ಐಗುಪ್ತದಲ್ಲಿ ಹೋಲಿಕೆಯಿಲ್ಲದ್ದಾಗಿ ಕಂಡುಕೊಂಡದ್ದನ್ನು ಸೂಚಿಸಿದನು. ಆದರೆ ಅವನು ಅವಲೋಕಿಸಿದ್ದು: “ಲೋಕದಲ್ಲಿ, ಕ್ರೈಸ್ತ ಲೋಕವೆಂದು ತನ್ನನ್ನೇ ಕರೆದುಕೊಳ್ಳುವ ಅದರ ಭಾಗದಲ್ಲಿಯೂ, ಸಹೋದರ ಪ್ರೀತಿಯು ಲೋಕದಲ್ಲಿ ಜಯಿಸಲು ವಿಫಲಗೊಂಡಿದೆ.” ದೇಶದ ವ್ಯವಹಾರಗಳಲ್ಲಿ ಒಳಗೂಡಿರುವುದರಲ್ಲಿ ಚರ್ಚಿನ ಹಠದಿಂದಾಗಿ ಬಂದ ಕೆಟ್ಟ ಫಲದ ಕುರಿತ ಹೇಳಿಕೆಗಳನ್ನು ಅವನು ಅನಂತರ ಮಾಡಿದನು. ಅವನು ನೋಡಿದ್ದ ವಿಷಯಗಳು, ತಾನು ಅನ್ವೇಷಿಸುವದನ್ನು ಕ್ರೈಸ್ತ ಪ್ರಪಂಚದ ಚರ್ಚುಗಳು ಕೊಡುವವೆಂದು ಎಣಿಸಲು ಅವನನ್ನು ಪ್ರಚೋದಿಸಲಿಲ್ಲ.
ಅದಕ್ಕೆ ವ್ಯತಿರಿಕ್ತವಾಗಿ, ಇತರರು ಸಂತೃಪ್ತಿಕರ ಉತ್ತರಗಳನ್ನು ಕಂಡುಕೊಂಡಿದ್ದಾರೆ, ಆದರೆ ಕ್ರೈಸ್ತ ಪ್ರಪಂಚದ ಚರ್ಚುಗಳಲ್ಲಿ ಅಲ್ಲ.
ಅವಳು ಮೃತರ ಕುರಿತು ಸತ್ಯವನ್ನು ಕಲಿತಳು
ಈಗ 37 ವರ್ಷ ಪ್ರಾಯದವಳಾಗಿರುವ ಮಾಗ್ದಾಲೇನಾಳು, ಬಲ್ಗೇರಿಯಾದಲ್ಲಿ ಜೀವಿಸುತ್ತಾಳೆ. ಅವಳ ಮಾವನು 1991 ರಲ್ಲಿ ತೀರಿಕೊಂಡ ಅನಂತರ, ಅವಳು ಬಹಳ ಎದೆಗುಂದಿದವಳಾಗಿದ್ದಳು. ಆಕೆಯು ಪುನಃ ಪುನಃ ತನ್ನನ್ನೇ ಕೇಳಿಕೊಂಡದ್ದು, ‘ಮೃತರು ಎಲ್ಲಿಗೆ ಹೋಗುತ್ತಾರೆ? ನನ್ನ ಮಾವನು ಎಲ್ಲಿದ್ದಾನೆ?’ ಅವಳು ಚರ್ಚಿಗೆ ಹೋದಳು, ಮತ್ತು ಅವಳು ಮನೆಯಲ್ಲಿ ಒಂದು ಪ್ರತಿಮೆಯ ಎದುರು ಪ್ರಾರ್ಥಿಸಿದಳು, ಆದರೂ ಅವಳಿಗೆ ಉತ್ತರಗಳು ದೊರಕಲಿಲ್ಲ.
ಅನಂತರ ಒಂದು ದಿನ ಒಬ್ಬ ನೆರೆಯವನು ಅವಳನ್ನು ತನ್ನ ಮನೆಗೆ ಆಮಂತ್ರಿಸಲು ಫೋನನ್ನು ಮಾಡಿದನು. ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನವನ್ನು ಮಾಡುತ್ತಿದ್ದ ಒಬ್ಬ ಯುವಕನು ಆ ನೆರೆಯವನಿಗೆ ಭೇಟಿ ಕೊಡುತ್ತಿದ್ದನು. ಅವನು ದೇವರ ರಾಜ್ಯ ಮತ್ತು ಜನರು ಸಂತೋಷದಲ್ಲಿ ಸದಾ ಕಾಲ ಜೀವಿಸಶಕ್ತವಾಗುವಂತೆ ಭೂಮಿಯನ್ನು ಪ್ರಮೋದವನವನ್ನಾಗಿ ಮಾಡುವ ಆತನ ಉದ್ದೇಶದ ಕುರಿತು ಮಾತಾಡುತ್ತಿರುವಾಗ ಅವಳು ಆಲಿಸಿದಳು. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ಮೇಜಿನ ಮೇಲಿತ್ತು. ಅದನ್ನುಪಯೋಗಿಸಿ, ಆ ಯುವಕನು ಅವಳ ಚಿತ್ತವನ್ನು ಪ್ರಸಂಗಿ 9:5 ರಲ್ಲಿನ ಬೈಬಲಿನ ವಚನದ ಕಡೆಗೆ ಮಾರ್ಗದರ್ಶಿಸಿದನು, ಅದು ಹೇಳುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” ಆ ಸಂಜೆ ಅವಳು ಹೆಚ್ಚು ಓದಿದಳು. ಮೃತರು ಸ್ವರ್ಗ ಯಾ ನರಕದಲ್ಲಿ ಮತ್ತೊಂದು ಜೀವಿತಕ್ಕಾಗಿ ಹೋಗಿಲ್ಲ ಎಂದಾಕೆ ಕಲಿತಳು; ಅವರು ಗಾಢ ನಿದ್ರೆಯಲ್ಲಿರುವಂತೆ, ಯಾವುದರ ಪ್ರಜ್ಞೆಯೂ ಇಲ್ಲದವರಾಗಿದ್ದಾರೆ. ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಕೂಟಕ್ಕೆ ಹಾಜರಾಗುವ ಆಮಂತ್ರಣವನ್ನು ಅವಳು ಉಲ್ಲಾಸದಿಂದ ಸ್ವೀಕರಿಸಿದಳು. ಕೂಟದ ಅನಂತರ ಅವಳು ಬೈಬಲಿನ ಕ್ರಮವಾದ ಅಧ್ಯಯನಕ್ಕೆ ಒಪ್ಪಿಕೊಂಡಳು. ಕೂಟದಲ್ಲಿ ಯೆಹೋವನಿಗೆ ಪ್ರಾರ್ಥನೆಗಳು ಸಲ್ಲಿಸಲ್ಪಡುವ ವಿಧಾನವನ್ನು ಅವಲೋಕಿಸಿ, ಆಳವಾಗಿ ಬೇರುಬಿಟ್ಟಿರುವ ಬಲಹೀನತೆಯನ್ನು ಜಯಿಸುವಂತೆ ಸಹಾಯಕ್ಕಾಗಿ ಯೆಹೋವನಿಗೆ ಅವಳು ಕೂಡ ಪ್ರಾರ್ಥಿಸಲು ಆರಂಭಿಸಿದಳು. ಅವಳ ಪ್ರಾರ್ಥನೆಯು ಉತ್ತರಿಸಲ್ಪಟ್ಟಾಗ, ಅವಳಿಗೆ ಯುಕ್ತವಾದ ಧರ್ಮ ದೊರಕಿತೆಂದು ಅವಳಿಗೆ ತಿಳಿಯಿತು.
ಅರ್ಥವಿರುವ ಜೀವಿತವನ್ನು ಅವರು ಕಂಡುಕೊಂಡರು
ಆಂಡ್ರೆಯು ಒಂದು ಬಲವಾದ ಕ್ಯಾತೊಲಿಕ್ ಮನೆಯಲ್ಲಿ ಬೆಳೆದವನಾಗಿದ್ದನು ಮತ್ತು ಸ್ಥಳಿಕ ಪಾದ್ರಿಗೆ ಒಬ್ಬ ಸಹಾಯಕನಾಗಿ ಸೇವಿಸಿದ್ದನು. ಆದಾಗ್ಯೂ, ಆ ಸಮಯಾವಧಿಯಲ್ಲಿ, ಚರ್ಚಿಗಾಗಿ ಅವನ ಗೌರವವನ್ನು ಶಿಥಿಲಗೊಳಿಸುವ ವಿಷಯಗಳನ್ನು ಅವನು ನೋಡಿದನು. ಅದರ ಫಲಿತಾಂಶವಾಗಿ, ಅವನು ಹೆಸರು ಮಾತ್ರಕ್ಕೆ ಕ್ಯಾತೊಲಿಕನಾಗಿದ್ದನು.
ಅವನು 15 ವರುಷ ವೃತ್ತಿಪರ ಕಾಲ್ಚೆಂಡಾಟವನ್ನು ಆಡಿದ್ದನು. ಒಂದು ಸಂದರ್ಭದಲ್ಲಿ ಅವನ ತಂಡವು ಇಟಲಿಯಲ್ಲಿ ಒಂದು ಕ್ರೀಡಾ ಸ್ಪರ್ಧೆಯನ್ನು ಆಡಿದಾಗ, ಅವರು ಪೋಪನೊಂದಿಗೆ ಭೇಟಿಗಾಗಿ ಆಮಂತ್ರಿಸಲ್ಪಟ್ಟಿದ್ದರು. ಆ ಸಂದರ್ಶನದಲ್ಲಿ ಆತ್ಮಿಕವಾಗಿ ಭಕ್ತಿವೃದ್ಧಿಯನ್ನುಂಟುಮಾಡುವಂಥದ್ದು ಯಾವುದೂ ಇರಲಿಲ್ಲ, ಮತ್ತು ಪೋಪನನ್ನು ಆವರಿಸಿದ್ದ ಲೌಕಿಕ ಐಶ್ವರ್ಯವು ಆಂಡ್ರೆಯನ್ನು ಕಲಕಿಸಿತು. ಚರ್ಚಿನ ಕುರಿತು ಅವನ ಸಂಶಯಗಳು ಆಳಗೊಂಡವು. ಎರಡು ಮುರಿದ ವಿವಾಹಗಳ ಕಾರಣ ಅವನ ಸ್ವಂತ ಖಾಸಗಿ ಜೀವನ ಅಸಂತೋಷದ್ದಾಗಿತ್ತು. ಲೋಕ ಪರಿಸ್ಥಿತಿಯು ಅವನನ್ನು ಆಶಾಭಂಗಪಡಿಸಿತು. ಇಸವಿ 1989 ರಲ್ಲಿ ಅವನು ತನ್ನ ಡೈರಿಯಲ್ಲಿ ಬರೆದದ್ದು: ‘ನಮ್ಮ ಸುತ್ತಲು ಜರುಗುವ ಎಲ್ಲಾ ಮೂರ್ಖ ವಿಷಯಗಳ ಅರ್ಥವು ಏನಾಗಿದೆ?’ ಅವನ ಧರ್ಮದಿಂದ ಅವನಿಗೆ ಉತ್ತರಗಳು ದೊರೆಯಲಿಲ್ಲ.
ಇಸವಿ 1990 ರಲ್ಲಿ, ಆಂಡ್ರೆಯು ಐಸ್‌ಲೆಂಡ್‌ನಲ್ಲಿ ಕಾಲ್ಚೆಂಡಾಟದ ಶಿಕ್ಷಕನೋಪಾದಿ ಕೆಲಸ ಮಾಡುತ್ತಿದ್ದಾಗ, ಈರಸ್ ಎಂಬ ಯೆಹೋವನ ಸಾಕ್ಷಿಗಳ ಒಬ್ಬ ಮಿಷನೆರಿಯು ಅವನನ್ನು ಸಂಪರ್ಕಿಸಿದಳು. ಅವನು ಸಾಹಿತ್ಯಗಳನ್ನು ಸ್ವೀಕರಿಸಿದನು ಮತ್ತು ಮಿಷನೆರಿಯನ್ನು ಹಿಂದಿರುಗಿ ಬರಲು ಆಮಂತ್ರಿಸಿದನು. ಅವಳು ತನ್ನ ಗಂಡ ಚೆಲ್‌ನೊಂದಿಗೆ ಹಿಂದಿರುಗಿದಳು. ಅವರು ಅಂತಿಮವಾಗಿ ಕೂತುಕೊಳ್ಳುವಂತೆ ಮತ್ತು ಆಂಡ್ರೆಯೊಂದಿಗೆ ಮಾತಾಡುವಂತಾದಾಗ, ಅವನು ಬೈಬಲನ್ನು ತಿಳಿದುಕೊಳ್ಳುವುದರಲ್ಲಿ ಆಳವಾಗಿ ಅಭಿರುಚಿಯುಳ್ಳವನಾಗಿದನ್ದೆಂಬುದು ಸ್ಪಷ್ಟವಾಗಿಗಿತ್ತು. ಅವನ ಹೆಂಡತಿ, ಆಸ್ಟಾ, ಅವನ ಅಭಿರುಚಿಯಲ್ಲಿ ಭಾಗಿಯಾದಳು. ದಿನದ ಮಧ್ಯದಲ್ಲಿ, ಅವನ ತರಬೇತಿ ನೀಡುವ ಅವಧಿಗಳ ನಡುವೆ ಮೂರು ತಾಸುಗಳು ಅವನಿಗೆ ಇದ್ದವು, ಮತ್ತು ಆ ಸಮಯವನ್ನು ಬೈಬಲ್ ಅಧ್ಯಯನಕ್ಕಾಗಿ ಬಳಸಲು ಅವರು ನಿರ್ಧರಿಸಿದರು. “ಕೇವಲ ವಿಶ್ರಾಂತಿ ಪಡೆಯುವುದಕ್ಕಿಂತಲೂ ಬೈಬಲಿನ ಅಧ್ಯಯನ ಮಾಡುವುದರ ಮೂಲಕ ನಾನು ಹೆಚ್ಚು ನವಚೈತನ್ಯವನ್ನನುಭವಿಸುತ್ತೇನೆ,” ಎಂದು ಅವನಂದನು. ಕ್ರಮೇಣ ಬೈಬಲು ಅವರ ಪ್ರಶ್ನೆಗಳನ್ನು ಉತ್ತರಿಸಿತು. ಯೆಹೋವ ಮತ್ತು ಆತನ ರಾಜ್ಯದಲ್ಲಿ ಅವರ ನಂಬಿಕೆಯು ನಿಧಾನವಾಗಿ ಬೆಳೆಯಿತು. ಒಂದು ಶಾಂತಿಭರಿತ ಹೊಸ ಲೋಕದ, “ಜರುಗುವ ಎಲ್ಲಾ ಮೂರ್ಖ ವಿಷಯಗಳಿಂದ” ವಿಮುಕ್ತವಾದ ಲೋಕವೊಂದರ, ಬೈಬಲಿನ ಮಹಿಮಾಭರಿತ ವಾಗ್ದಾನವು, ಅವರಿಗೆ ವಾಸ್ತವವಾಯಿತು. ಆಂಡ್ರೆ ಮತ್ತು ಆಸ್ಟಾ ಇಬ್ಬರೂ ಈಗ ತಮ್ಮ ಹೊಸದಾಗಿ ಕಂಡುಕೊಂಡ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಮಾಗ್ದಾಲೇನಾ, ಆಂಡ್ರೆ, ಮತ್ತು ಆಸ್ಟಾ ಅಂತಿಮವಾಗಿ ಅವರಿಗೆ ಯುಕ್ತವಾದ ಧರ್ಮವು ದೊರಕಿತೆಂದು ಭರವಸೆಯ ಭಾವನೆಯುಳ್ಳವರಾಗಿದ್ದಾರೆ. ಏವುಕೆನ್ಯಳು ಕೂಡ, ರಾಜಕೀಯ ಸಾಧನಗಳ ಮೂಲಕ ಲೋಕದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ ಅನಂತರ, ಕಟ್ಟಕಡೆಗೆ ಯುಕ್ತವೆಂದು ಅವಳಿಗೆ ತೋರಿದ ಧರ್ಮವನ್ನು ಯೆಹೋವನ ಸಾಕ್ಷಿಗಳೊಳಗೆ ಕಂಡುಕೊಂಡಳು. ಆದರೆ ಒಂದು ಧರ್ಮವು ಯುಕ್ತವಾಗಿದೆಯೊ ಎಂದು ನಿಜಕ್ಕೂ ನಿರ್ಧರಿಸುವುದು ಯಾವುದು? ದಯವಿಟ್ಟು ಮುಂದಿನ ವಿಷಯವನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಒಂದು ಕ್ರಮದ ಅಧ್ಯಯನವು ಐವತ್ತು ಲಕ್ಷಕ್ಕಿಂತಲೂ ಅಧಿಕ ಜನರಿಗೆ ತೃಪ್ತಿದಾಯಕ ಉತ್ತರಗಳ ಅವರ ಅನ್ವೇಷಣೆಯಲ್ಲಿ ಸಹಾಯ ಮಾಡುತ್ತಿದೆ
-