ಒದು ಘಟನೆ ನೀವು ತಪ್ಪಿಸಲೇ ಬಾರದು
“ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” ಲೂಕ 22:19 ರಲ್ಲಿ ಕಂಡು ಬರುವ ಈ ಮಾತುಗಳು ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದ ನುಡಿಯಲ್ಪಟ್ಟದ್ದು ಆತನು ತನ್ನ ಮರಣದ ಜ್ಞಾಪಕವನ್ನು ಪ್ರತಿಷ್ಟಾಪಿಸಿದ್ದ ಸಮಯದಲ್ಲೇ. ಯೇಸುವಿನ ಮರಣವೇ ಮಾನವ ಕುಲಕ್ಕೆ ಪ್ರಮೋದವನದ ಪರಿಸ್ಥಿತಿಗಳಲ್ಲಿ ನಿತ್ಯಜೀವವನ್ನು ಪಡೆಯುವ ಪ್ರತೀಕ್ಷೆಯನ್ನು ತೆರೆದಿತ್ತು. ಆದುದರಿಂದ ಆತನ ಮರಣವು ನಾವು ಜ್ಞಾಪಿಸಿಕೊಳ್ಳಬೇಕಾದ ಒಂದು ಘಟನೆಯಾಗಿದೆ.
ಅದರ ಜ್ಞಾಪಕವನ್ನು ಈ ವರ್ಷದಲ್ಲಿ ನೀವು ಆಚರಿಸುವಿರೋ?
ಈ ಮಹತ್ವದ ಘಟನೆಯನ್ನು ಸ್ಮರಿಸಿಕೊಳ್ಳುವದರಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಜತೆಗೂಡುವದಕ್ಕಾಗಿ ಈ ಆಮಂತ್ರಣವನ್ನು ಅವರಿಂದ ದಯವಿಟ್ಟು ಸ್ವೀಕರಿಸಿರಿ. ಈ ಆಚರಣೆಯು ಬೈಬಲಿನ ಚಾಂದ್ರಮಾನ ಕ್ಯಾಲೆಂಡರಿನ ನೈಸಾನ್ 14 ರೊಂದಿಗೆ ಅನುಗುಣವಾಗಿರುವ ತಾರೀಕಿನಂದು ಸೂರ್ಯಾಸ್ತಮಾನದ ನಂತರ ನಡೆಯಲಿದೆ. ಆ ತಾರೀಕನ್ನು ಮರೆತುಬಿಡದಂತೆ ನೀವದನ್ನು ನಿಮ್ಮ ಕ್ಯಾಲೆಂಡರಿನಲ್ಲಿ ಗುರುತು ಮಾಡಿಡಿರಿ. ಅದು ಮಾರ್ಚ್ 30, 1991 ರ ಶನಿವಾರ. ಸ್ಥಳೀಯ ಯೆಹೋವನ ಸಾಕ್ಷಿಗಳು ನಿಮ್ಮ ವಠಾರದಲ್ಲಿ ಈ ಘಟನೆಯನ್ನು ಆಚರಿಸುವ ಸರಿಯಾದ ಸಮಯ ಮತ್ತು ಸ್ಥಳವನ್ನು ನಿಮಗೆ ತಿಳಿಸ ಶಕ್ತರು.