ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಸಹಜಸ್ಥಿತಿಗಿಂತ ಹೆಚ್ಚಿನ ಬಲಾಧಿಕ್ಯ”
    ಕಾವಲಿನಬುರುಜು—1992 | ಮೇ 1
    • “ಸಹಜಸ್ಥಿತಿಗಿಂತ ಹೆಚ್ಚಿನ ಬಲಾಧಿಕ್ಯ”

      ಎಷ್ಟು ಹೆಚ್ಚು ಕಷ್ಟಾನುಭವವನ್ನು ಒಬ್ಬ ಕ್ರೈಸ್ತನು ತಾಳಿಕೊಂಡಾನು? ಇಂದು ಭೂಸುತ್ತಲೂ ಇರುವ ಕ್ರೈಸ್ತರು ಬಡತನ, ಕುಟುಂಬ ಒಡಕು, ಮಾನಸಿಕ ಆಘಾತ, ಅನಾರೋಗ್ಯ, ಯುದ್ಧಗಳು, ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆಯೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವರಿಂದ ನಿರೀಕ್ಷಿಸುವುದು ನ್ಯಾಯಸಮ್ಮತವೂ? ನ್ಯಾಯಸಮ್ಮತವೆಂದು ಪೌಲನು ಹೇಳುತ್ತಾನೆ. ಅವನು ಬರೆದದ್ದು: “ನನ್ನಲ್ಲಿ ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.

      ಯೆಹೋವನಿಂದ ಬರುವ ಶಕ್ತಿಯು ಎಲ್ಲಾ ವಿಷಯಗಳಿಗೆ ನಿಜವಾಗಿ ಸಾಕು ಎಂದು ಇತಿಹಾಸವು ತೋರಿಸಿದೆ. ದೃಷ್ಟಾಂತಕ್ಕಾಗಿ ಜರ್ಮನಿಯಲ್ಲಿ, ನಾಝೀ ಆಡಳಿತದ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಕ್ರೂರ ಹಿಂಸೆಯನ್ನು ಅನುಭವಿಸಿದರು. ಅವರದನ್ನು ಸಹಿಸಿಕೊಂಡರೋ? ದ ಲೆಸ್‌ ಬಿಬಿಲ್‌ಫೋಶ್ಚರ್‌ ಎಟ್‌ ಲಿ ನಾಜಿಸ್ಮಿ (ಬೈಬಲ್‌ ವಿದ್ಯಾರ್ಥಿಗಳು ಮತ್ತು ನಾಝೀಜಂ) ಹೇಳುವುದು: “ಹೊಡೆತಗಳು, ಬೆದರಿಕೆಗಳು ಮತ್ತು ನಿಷೇಧಗಳೆಲ್ಲವುಗಳ ಮಧ್ಯೆ, ಬಹಿರಂಗ ಅಪಹಾಸ್ಯಗಳು, ಸೆರೆಮನೆವಾಸಗಳು ಮತ್ತು ಕೂಟಶಿಬಿರಗಳ ನಡುವೆಯೂ ಬೈಬಲ್‌ ವಿದ್ಯಾರ್ಥಿಗಳು [ಯೆಹೋವನ ಸಾಕ್ಷಿಗಳು] ತಮ್ಮನ್ನೆಂದೂ ‘ಮರುಶಿಕ್ಷಣಕ್ಕೆ’ ಒಳಪಡಿಸಲು ಬಿಟ್ಟುಕೊಡಲಿಲ್ಲ.

      ಕೂಟ ಶಿಬಿರಗಳಲ್ಲಿ ಸಾಕ್ಷಿಗಳನ್ನು ಅವರ ತೋಳುಗಳ ಮೇಲಿನ ಚಿಕ್ಕ ನೇರಳೆ ಬಣ್ಣದ ತ್ರಿಕೋಣಗಳಿಂದ ಗುರುತಿಸಲಾಗುತ್ತಿತ್ತು ಮತ್ತು ಕ್ರೂರ ಉಪಚಾರಕ್ಕೆ ಆಯ್ದು ತೆಗೆಯಲಾಗುತ್ತಿತ್ತು. ಆದರೆ ಇದು ಅವರನ್ನು ಅಳುಕಿಸಿತೋ? ಮನಶಾಸ್ತ್ರಜ್ಞ ಬ್ರೂನೋ ಬೆಟೆಲ್ಟ್‌ಹಿಮ್‌ ಗಮನಿಸಿದ್ದೇನಂದರೆ, “ಅವರು ಮಾನುಷ ಘನತೆಯ ಅಸಾಮಾನ್ಯ ಶಿಕರವನ್ನು ತೋರಿಸಿದರು ಮಾತ್ರವೇ ಅಲ್ಲ, ನನ್ನ ಮನೋವಿಶ್ಲೇಷಕ ಮಿತ್ರರಿಂದ ಮತ್ತು ನನ್ನಿಂದ ಚೆನ್ನಾದ ಉಪಚಾರಕ್ಕೆ ಒಳಗಾದವರೆಂದು ಪರಿಗಣಿಸಲ್ಪಟ್ಟಿದ್ದ ವ್ಯಕ್ತಿಗಳನ್ನು ಬೇಗನೇ ನಷ್ಟಗೊಳಿಸಿದ ಅದೇ ಶಿಬಿರ ಅನುಭವಗಳನ್ನು ಸುರಕ್ಷಿತರಾಗಿ ತಾಳಿಕೊಂಡಂತೆ ಕಂಡರು.”

      ಹೌದು, ಅವರು ‘ಎಲ್ಲಕ್ಕೂ ಶಕ್ತರಾಗಿದ್ದಾರೆ.’ ಏಕೆ? ಏಕೆಂದರೆ ಅವರು ಯೆಹೋವನಲ್ಲಿ ಆತುಕೊಂಡದ್ದರಿಂದಲೇ. “ಬಲಾಧಿಕ್ಯವು ದೇವರದ್ದೇ ಹೊರತು ನಮ್ಮೊಳಗಿಂದ ಬಂದದಲ್ಲವೆಂದು ತೋರುವುದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಕಗಳಲ್ಲಿ ನಮಗುಂಟು.” (2 ಕೊರಿಂಥ 4:7) ಒಂದು ಸಂಕಟಮಯ ಪರಿಸ್ಥಿತಿಯನ್ನು ನೀವು ಎದುರಿಸಬೇಕಾದಾಗ, ಭರವಸದಿಂದ ಯೆಹೋವನೆಡೆಗೆ ಸಹಾಯಕ್ಕಾಗಿ ನೋಡಿರಿ. ಆತನು ಒದಗಿಸುವ ಸಹಜಸ್ಥಿತಿಗಿಂತ ಹೆಚ್ಚಿನ ಬಲಾಧಿಕ್ಯದಿಂದ ಬಲಗೊಂಡವರಾಗಿ, ನೀವು ತಾಳಿಕೊಳ್ಳಲು ಶಕ್ತರಾಗುವಿರಿ—ಲೂಕ 11:13.

  • ಒಂದು ಸಂದರ್ಶನೆಯನ್ನು ನೀವು ಸ್ವಾಗತಿಸುವಿರೋ?
    ಕಾವಲಿನಬುರುಜು—1992 | ಮೇ 1
    • ಒಂದು ಸಂದರ್ಶನೆಯನ್ನು ನೀವು ಸ್ವಾಗತಿಸುವಿರೋ?

      ಈ ತೊಂದರೆಯುಕ್ತ ಲೋಕದಲ್ಲೂ ದೇವರ, ಆತನ ರಾಜ್ಯದ ಮತ್ತು ಮಾನವಕುಲಕ್ಕಾಗಿ ಆತನ ಆಶ್ಚರ್ಯಕರ ಉದ್ದೇಶದ ನಿಷ್ಕ್ರಷ್ಟ ಜ್ಞಾನದಿಂದ ನೀವು ಸಂತೋಷವನ್ನು ಗಳಿಸ ಸಾಧ್ಯವಿದೆ. ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲಧ್ಯಯನವನ್ನು ನಡಿಸುವಂತೆ ಯಾರಾದರೂ ಸಂದರ್ಶಿಸುವಂತೆ ನೀವು ಬಯಸುವುದಾದರೆ ದಯವಿಟ್ಟು, Watch Tower, H-58 Old Khandala Road, Lonavla, 410 401 Mah; India. ಇವರಿಗೆ, ಅಥವಾ 2ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ