ಕೇವಲ ಕೇಳುವವರಲ್ಲ—ನಡೆಯುವವರಾಗಿರ್ರಿ
1 ಕೇವಲ ಕೇಳುವವರಲ್ಲ, ಬದಲಾಗಿ ವಾಕ್ಯದ ಪ್ರಕಾರ ನಡೆಯುವವರಾಗಿರಬೇಕು ಎಂಬ ಬೈಬಲ್ ಬುದ್ಧಿವಾದವನ್ನು ಇಂದು ಸತ್ಯ ಕ್ರೈಸ್ತರು ಹೃದಯಕ್ಕೆ ತೆಗೆದುಕೊಳ್ಳುತ್ತಾರೆ. (ಯಾಕೋ. 1:22) ಇದು ಅವರನ್ನು, ಯಾರು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರಾದರೂ ದೇವರಿಗೆ ಬರೀ ತುಟಿ ಸೇವೆಯನ್ನು ಸಲ್ಲಿಸುತ್ತಾರೋ ಅವರಿಂದ ಸ್ಪಷ್ಟವಾಗಿ ಭಿನ್ನವಾಗಿರಿಸುತ್ತದೆ. (ಯೆಶಾ. 29:13) ದೇವರ ಚಿತ್ತವನ್ನು ನಡೆಸುವವರು ಮಾತ್ರ ಪಾರುಗೊಳಿಸಲ್ಪಡುವರು ಎಂದು ಯೇಸು ಸ್ಪಷ್ಟವಾಗಿ ಹೇಳಿದನು.—ಮತ್ತಾ. 7:21.
2 ದೈವಭಕ್ತಿಯ ಕಾರ್ಯಗಳಿಲ್ಲದ ಆರಾಧನೆಯು ಅರ್ಥರಹಿತವಾದದ್ದಾಗಿದೆ. (ಯಾಕೋ. 2:26) ಆದುದರಿಂದ ನಾವು ಸ್ವತಃ ಕೇಳಿಕೊಳ್ಳಬೇಕು, ‘ನನ್ನ ನಂಬಿಕೆಯು ಯಥಾರ್ಥವಾಗಿದೆಯೆಂದು ನನ್ನ ಕಾರ್ಯಗಳು ಹೇಗೆ ರುಜುಪಡಿಸುತ್ತವೆ? ನಾನು ಏನನ್ನು ನಂಬುತ್ತೇನೊ ಅದಕ್ಕೆ ಹೊಂದಿಕೆಯಲ್ಲಿ ನಾನು ನಿಜವಾಗಿ ಜೀವಿಸುತ್ತೇನೆಂದು ಯಾವುದು ತೋರಿಸುತ್ತದೆ? ನಾನು ಯೇಸುವನ್ನು ಹೆಚ್ಚು ಪೂರ್ಣವಾಗಿ ಹೇಗೆ ಅನುಕರಿಸಸಾಧ್ಯವಿದೆ?’ ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಉತ್ತರಗಳು, ದೇವರ ಚಿತ್ತವನ್ನು ನಡೆಸುವುದರಲ್ಲಿ ನಾವು ಮಾಡಿರುವ ಅಥವಾ ಇನ್ನೂ ಮಾಡಲು ಅಗತ್ಯವಿರುವ ಪ್ರಗತಿಯನ್ನು ಅವಲೋಕಿಸಲು ನಮಗೆ ಸಹಾಯ ಮಾಡುವುದು.
3 ಯೇಸುವಿನ ಹಿಂಬಾಲಕರೋಪಾದಿ, ಕೀರ್ತನೆಗಾರನಿಂದ ವ್ಯಕ್ತಪಡಿಸಲ್ಪಟ್ಟಂತಹದ್ದೇ ರೀತಿಯ ಪ್ರಧಾನ ಗುರಿಯು ನಮಗಿರಬೇಕು: “ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು.” (ಕೀರ್ತ. 44:8) ಕ್ರೈಸ್ತತ್ವವು, ಪ್ರತಿದಿನ ಹಾಗೂ ನಾವು ಮಾಡುವ ಪ್ರತಿಯೊಂದು ಸಂಗತಿಯಲ್ಲೂ ತನ್ನನ್ನು ಪ್ರಕಟಪಡಿಸಿಕೊಳ್ಳುವ ಒಂದು ಜೀವನ ರೀತಿಯಾಗಿದೆ. ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಯೆಹೋವನನ್ನು ಸ್ತುತಿಸುವ ನಮ್ಮ ಹೃತ್ಪೂರ್ವಕ ಆಶೆಯನ್ನು ನಾವು ಪ್ರದರ್ಶಿಸಿದಂತೆ, ನಾವು ಎಂತಹ ತೃಪ್ತಿಯನ್ನು ಕಂಡುಕೊಳ್ಳುತ್ತೇವೆ!—ಫಿಲಿ. 1:11.
4 ಯೆಹೋವನನ್ನು ಸ್ತುತಿಸುವುದರಲ್ಲಿ, ಒಂದು ಯಥಾರ್ಥವಾದ ಜೀವನವನ್ನು ಜೀವಿಸುವುದಕ್ಕಿಂತ ಹೆಚ್ಚಿನದ್ದು ಒಳಗೊಳ್ಳುತ್ತದೆ: ದೇವರು ಅಪೇಕ್ಷಿಸುವಂತಹದ್ದು ಕೇವಲ ಉತ್ತಮ ನಡತೆಯಾಗಿರುತ್ತಿದ್ದರೆ, ನಾವು ಕೇವಲ ನಮ್ಮ ವ್ಯಕ್ತಿತ್ವವನ್ನು ಪರಿಷ್ಕರಿಸಿಕೊಳ್ಳುವುದರ ಮೇಲೆ ಗಮನವನ್ನು ಕೇಂದ್ರೀಕರಿಸಸಾಧ್ಯವಿತ್ತು. ಆದಾಗಲೂ, ನಮ್ಮ ಆರಾಧನೆಯು, ಯೆಹೋವನ ಗುಣಾತಿಶಯಗಳನ್ನು ಪ್ರಕಟಪಡಿಸುವುದನ್ನು ಮತ್ತು ಆತನ ಹೆಸರಿಗೆ ಬಹಿರಂಗ ಘೋಷಣೆ ಮಾಡುವುದನ್ನು ಸಹ ಒಳಗೊಳ್ಳುತ್ತದೆ!—ಇಬ್ರಿ. 13:15; 1 ಪೇತ್ರ 2:9.
5 ಸುವಾರ್ತೆಯ ಬಹಿರಂಗ ಸಾರುವಿಕೆಯು, ನಾವು ಮಾಡುವಂತಹ ಅತ್ಯಂತ ಪ್ರಾಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಅದು ಕಿವಿಗೊಡುವವರಿಗೆ ನಿತ್ಯ ಜೀವದ ಅರ್ಥದಲ್ಲಿದೆಯೆಂದು ಯೇಸುವಿಗೆ ತಿಳಿದಿದ್ದದರಿಂದ, ಅವನು ಈ ಕೆಲಸಕ್ಕೆ ತನ್ನನ್ನು ಅರ್ಪಿಸಿಕೊಂಡನು. (ಯೋಹಾ. 17:3) ಇಂದು “ವಾಕ್ಯದ ಶುಶ್ರೂಷೆ”ಯು ಅಷ್ಟೇ ಪ್ರಾಮುಖ್ಯವಾದದ್ದಾಗಿದೆ; ಅದು ಜನರು ರಕ್ಷಿಸಲ್ಪಡಸಾಧ್ಯವಿರುವ ಏಕಮಾತ್ರ ಮಾಧ್ಯಮವಾಗಿದೆ. (ಅ. ಕೃ. 6:4, NW; ರೋಮಾ. 10:13) ಬಹು ದೂರ ವ್ಯಾಪಿಸುವ ಪ್ರಯೋಜನಗಳನ್ನು ಗ್ರಹಿಸುತ್ತಾ, ನಾವು “ವಾಕ್ಯವನ್ನು ಸಾರು”ವಂತೆ ಮತ್ತು “ತ್ವರಿತವಾಗಿ ಮಾಡುವಂತೆ” ಪೌಲನು ನಮಗೆ ಪ್ರಬೋಧಿಸಿದ ಕಾರಣವನ್ನು ನಾವು ಗಣ್ಯಮಾಡಸಾಧ್ಯವಿದೆ.—2 ತಿಮೊ. 4:2, NW.
6 ಯೆಹೋವನನ್ನು ಸ್ತುತಿಸುವುದು, ನಮ್ಮ ಜೀವಿತಗಳನ್ನು ಎಷ್ಟರ ಮಟ್ಟಿಗೆ ವ್ಯಾಪಿಸಬೇಕು? ಅದು ಇಡೀ ದಿನ ತನ್ನ ಮನಸ್ಸಿನಲ್ಲಿತ್ತು ಎಂದು ಕೀರ್ತನೆಗಾರನು ಹೇಳಿದನು. ನಮಗೆ ಹಾಗೆ ಅನಿಸುವುದಿಲ್ಲವೊ? ಹೌದು, ಮತ್ತು ನಾವು ಇನ್ನೊಬ್ಬ ವ್ಯಕ್ತಿಯೊಂದಿಗಿನ ಪ್ರತಿಯೊಂದು ಸಂಪರ್ಕವನ್ನು ಯೆಹೋವನ ನಾಮದ ಕುರಿತಾಗಿ ಮಾತಾಡಲಿಕ್ಕಾಗಿರುವ ಒಂದು ಸಂಭಾವ್ಯ ಸಂದರ್ಭವಾಗಿ ಎಣಿಸುವೆವು. ನಮ್ಮ ಸಂಭಾಷಣೆಯನ್ನು ಆತ್ಮಿಕ ವಿಷಯಗಳ ಕಡೆಗೆ ನಿರ್ದೇಶಿಸಲಿಕ್ಕಾಗಿ ನಾವು ಸೂಕ್ತ ಅವಕಾಶಗಳಿಗಾಗಿ ಹುಡುಕುವೆವು. ಸಭೆಯಿಂದ ಸಂಘಟಿಸಲ್ಪಟ್ಟಿರುವ ಕ್ಷೇತ್ರ ಸೇವಾ ಚಟುವಟಿಕೆಗಳಲ್ಲಿ ಕ್ರಮವಾಗಿ ಪಾಲ್ಗೊಳ್ಳಲು ಸಹ ನಾವು ಪ್ರಯತ್ನಿಸುವೆವು. ಯಾರ ಪರಿಸ್ಥಿತಿಗಳು ಅನುಮತಿಸುತ್ತವೋ ಅವರು, ಪಯನೀಯರ್ ಸೇವೆಗೆ ಗಂಭೀರವಾದ ಪರಿಗಣನೆಯನ್ನು ಕೊಡಸಾಧ್ಯವಿದೆ, ಯಾಕಂದರೆ ಇದು ಸಾರುವ ಕಾರ್ಯವನ್ನು ಪ್ರತಿ ದಿನ ನಮ್ಮ ಜೀವಿತದಲ್ಲಿ ಅಗ್ರಗಣ್ಯವಾಗಿ ಇಡಲು ನಮಗೆ ಸಹಾಯ ಮಾಡುತ್ತದೆ. ದೇವರ ಚಿತ್ತವನ್ನು ಪಟ್ಟುಹಿಡಿದು ನಡೆಸುವವರಾಗಿರುವ ಮೂಲಕ, ನಾವು ಸಂತೋಷಿತರಾಗಿರುವೆವೆಂದು ದೇವರ ವಾಕ್ಯವು ನಮಗೆ ಆಶ್ವಾಸನೆಯನ್ನೀಯುತ್ತದೆ.—ಯಾಕೋ. 1:25.