ಕಿವಿಗೊಡುವವರನ್ನು ನಾನು ಹೇಗೆ ಕಂಡುಕೊಳ್ಳಬಲ್ಲೆ?
1 ಫಿಲಿಪ್ಪಿ ನಗರದಲ್ಲಿ, “ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳಾದ, ಲುದ್ಯಳೆಂಬ ಒಬ್ಬ ಸ್ತ್ರೀ . . . ಕಿವಿಗೊಡುತ್ತಿದ್ದಳು ಮತ್ತು ಪೌಲನು ಹೇಳುತ್ತಿದ್ದ ವಿಷಯಗಳಿಗೆ ಲಕ್ಷ್ಯಕೊಡುವುದಕ್ಕೆ ಯೆಹೋವನು ಅವಳ ಹೃದಯವನ್ನು ತೆರೆದನು.” (ಅ. ಕೃ. 16:14, NW) ಈ ವೃತ್ತಾಂತವು ನಮಗೆ ಏನನ್ನು ಕಲಿಸುತ್ತದೆ? ಕಿವಿಗೊಡುವುದು ತಾನೇ ಒಬ್ಬ ವ್ಯಕ್ತಿ ಸತ್ಯವನ್ನು ಕಲಿಯುವುದಕ್ಕೆ ಬಾಗಿಲನ್ನು ತೆರೆಯುತ್ತದೆ. ರಾಜ್ಯ ಸಂದೇಶದ ಹಂಚುವಿಕೆಯಲ್ಲಿನ ನಮ್ಮ ಸಫಲತೆಯು, ಪ್ರಾಥಮಿಕವಾಗಿ ಕಿವಿಗೊಡಲಿಕ್ಕಿರುವ ಮನೆಯವನ ಸ್ವಇಚ್ಛೆಯ ಮೇಲೆ ಅವಲಂಬಿಸುತ್ತದೆ. ಒಮ್ಮೆ ನಾವು ಕಿವಿಗೊಡುವವರನ್ನು ಕಂಡುಕೊಳ್ಳುವಲ್ಲಿ, ನಮ್ಮ ಸಂದೇಶವನ್ನು ಪ್ರಸ್ತುತಪಡಿಸುವುದು ಸಂಬಂಧಸೂಚಕವಾಗಿ ಸುಲಭವಾಗಿದೆ. ಆದರೆ ಕಿವಿಗೊಡುವ ಯಾರಾದರೊಬ್ಬರನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ನಾವು ಏನು ಮಾಡಬಲ್ಲೆವು?
2 ಸೇವೆಯಲ್ಲಿ ಪಾಲುತೆಗೆದುಕೊಳ್ಳುವ ಮುನ್ನ, ನಾವು ನಮ್ಮ ತೋರಿಕೆಗೆ ಮತ್ತು ಉಪಯೋಗಿಸಲಿರುವ ಸಾಧನಕ್ಕೆ ಗಮನವನ್ನು ಕೊಡಬೇಕು. ಏಕೆ? ತನ್ನನ್ನೇ ಗೌರವಪೂರ್ವಕವಾಗಿ ಪ್ರಸ್ತುತಪಡಿಸಿಕೊಳ್ಳುವ ಯಾರಾದರೊಬ್ಬರಿಗೆ ಕಿವಿಗೊಡಲು ಜನರು ಹೆಚ್ಚು ಒಲವುಳ್ಳವರಾಗಿರುತ್ತಾರೆ. ಸುಸಂಸ್ಕೃತರಾಗಿ ಆದರೂ ಸಭ್ಯತೆಯುಳ್ಳವರಾಗಿ ನಾವು ಉಡುಪನ್ನು ಧರಿಸಿದ್ದೇವೋ? ಲೋಕದಲ್ಲಿ ಅಚ್ಚುಕಟ್ಟಿಲ್ಲದ್ದ ತೊಡುಗೆಯು ಜನಪ್ರಿಯವಾಗಿರುವುದಾದರೂ, ಅಂಥ ಅಜಾಗರೂಕತೆಯನ್ನು ನಾವು ವರ್ಜಿಸುವೆವು, ಏಕೆಂದರೆ ನಾವು ದೇವರ ರಾಜ್ಯವನ್ನು ಪ್ರತಿನಿಧಿಸುವ ಸೇವಕರಾಗಿದ್ದೇವೆ. ನಮ್ಮ ಸ್ವಚ್ಛ ಮತ್ತು ನೀಟಾದ ತೋರಿಕೆಯು, ನಾವು ಸಾರುವ ರಾಜ್ಯ ಸಂದೇಶಕ್ಕೆ ಅನುಕೂಲಕರವಾದ ಸಾಕ್ಷ್ಯವನ್ನು ಕೂಡಿಸುತ್ತದೆ.
3 ಸ್ನೇಹಪೂರ್ವಕರೂ ಗೌರವಭರಿತರೂ ಆಗಿರ್ರಿ: ಇಂದಿನ ಬದಲಾಗುತ್ತಿರುವ ಮನೋಭಾವಗಳ ಹೊರತೂ, ಅನೇಕ ಜನರಿಗೆ ಬೈಬಲಿನ ಕಡೆಗೆ ಗಣ್ಯತೆ ಇದೆ ಮತ್ತು ಬೈಬಲಿನಲ್ಲಿ ಒಳಗೊಂಡಿರುವ ವಿಷಯಗಳ ಕುರಿತಾದ ಗೌರವಭರಿತ ಹಾಗೂ ಸ್ನೇಹಪೂರ್ವಕವಾದ ಸಂಭಾಷಣೆಗೆ ಅನುಕೂಲಕರವಾಗಿ ಪ್ರತಿಕ್ರಿಯಿಸುವರು. ಒಂದು ಹೃದಯೋಲ್ಲಾಸದ, ಯಥಾರ್ಥವಾದ ಮುಗುಳ್ನಗೆಯು ಮನೆಯವನನ್ನು ಪ್ರಶಾಂತಗೊಳಿಸಬಲ್ಲದು ಮತ್ತು ಹಿತಕರವಾದೊಂದು ಚರ್ಚೆಗಾಗಿ ಮಾರ್ಗವನ್ನು ತೆರೆಯಬಲ್ಲದು. ನಮ್ಮ ಪ್ರಾಮಾಣಿಕತೆ ಮತ್ತು ಒಳ್ಳೆಯ ಸಭ್ಯತೆಗಳು ನಮ್ಮ ಮಾತಿನಲ್ಲಿ ಮತ್ತು ವರ್ತನೆಗಳಲ್ಲಿ ಸುವ್ಯಕ್ತಗೊಳ್ಳಬೇಕು—ಇದು ಮನೆಯವನ ಅವಲೋಕನೆಗಳಿಗೆ ನಮ್ಮ ಗೌರವಪೂರ್ವಕವಾದ ಕಿವಿಗೊಡುವಿಕೆಯನ್ನು ಒಳಗೂಡುತ್ತದೆ.
4 ಇತರರೊಂದಿಗೆ ಬೈಬಲಿನ ನಿರೀಕ್ಷೆಯನ್ನು ಹಂಚಿಕೊಳ್ಳುವುದೇ ನಮ್ಮ ಉದ್ದೇಶವಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ನಮ್ಮ ಸಂಭಾಷಣೆಯು ಪ್ರತಿಸ್ಪರ್ಧಿಸುವಂಥದ್ದು ಅಥವಾ ಸವಾಲು ಹಾಕುವಂಥದ್ದಲ್ಲ, ರಂಜಿಸುವಂಥದ್ದೂ ಔಚಿತ್ಯ ಜ್ಞಾನವುಳ್ಳದ್ದೂ ಆಗಿದೆ ಎಂಬುದರ ಕುರಿತು ನಾವು ಖಾತ್ರಿಯಿಂದಿರಬೇಕು. ಸ್ಪಷ್ಟವಾಗಿ ವಿರೋಧಿಸುವ ಒಬ್ಬ ವ್ಯಕ್ತಿಯೊಂದಿಗೆ ವಾದಿಸುತ್ತಾ ಸಮಯವನ್ನು ಹಾಳುಮಾಡುವ ಅಗತ್ಯವಿಲ್ಲ. ನಮ್ಮ ಗುರಿಯು, ವಾದಗಳನ್ನು ಗೆಲ್ಲುವುದು ಅಥವಾ ನಮ್ಮ ಕೆಲಸವನ್ನು ಇಷ್ಟಪಡದಿರುವ ಜನರ ಮೇಲೆ ನಮ್ಮ ವಿಶ್ವಾಸಗಳನ್ನು ಹೇರುವುದು ಆಗಿರುವುದಿಲ್ಲ. (2 ತಿಮೊ. 2:23-25) ನಮಗಾಗಿ ನಮ್ಮ ರಾಜ್ಯದ ಸೇವೆಯಲ್ಲಿ ಮತ್ತು ರೀಸನಿಂಗ್ ಪುಸ್ತಕದಲ್ಲಿ ಒದಗಿಸಲ್ಪಟ್ಟಿರುವ, ಪ್ರೋತ್ಸಾಹನೆಯುಳ್ಳದ್ದೂ ಸಮಯೋಚಿತವಾದದ್ದೂ ಆದ ಹೆಚ್ಚು ವೈವಿಧ್ಯಮಯವಾದ ವಿಷಯದಿಂದ ನಾವು ಆರಿಸಿಕೊಳ್ಳಬಲ್ಲೆವು. ನಿಶ್ಚಯವಾಗಿ, ಒಂದು ಹೃದಯೋಲ್ಲಾಸಗೊಳಿಸುವಂಥ ಮತ್ತು ಮನವೊಪ್ಪಿಸುವಂಥ ವಿಧದಲ್ಲಿ ನಾವು ಮಾತಾಡಸಾಧ್ಯವಿರುವಂತೆ ಇವುಗಳನ್ನು ಚೆನ್ನಾಗಿ ತಯಾರಿಸುವ ಅಗತ್ಯವಿದೆ.—1 ಪೇತ್ರ 3:15.
5 ನಮ್ಮ ಪ್ರಥಮ ಭೇಟಿಯ ಅನಂತರ, ಕೆಲವೇ ಮನೆಯವರು ನಾವು ಹೇಳಿದ ವಿಷಯವನ್ನು ನಿಖರವಾಗಿ ಜ್ಞಾಪಿಸಿಕೊಳ್ಳಶಕ್ತರಾಗಿದ್ದಾರೆ. ಹಾಗಿದ್ದರೂ, ಕಾರ್ಯತಃ ಅವರಲ್ಲಿ ಎಲ್ಲರೂ ಅದು ಯಾವ ವಿಧದಲ್ಲಿ ಮಾತಾಡಲ್ಪಟ್ಟಿತು ಎಂಬುದನ್ನು ಜ್ಞಾಪಿಸಿಕೊಳ್ಳಬಲ್ಲರು. ಒಳ್ಳೆಯತನದ ಮತ್ತು ದಯೆಯ ಶಕ್ತಿಯನ್ನು ನಾವೆಂದೂ ಕಡಿಮೆಯದ್ದಾಗಿ ಎಣಿಸಬಾರದು. ಪ್ರಥಮ ಶತಮಾನದಲ್ಲಿ ಲೂದ್ಯಳು ಮಾಡಿದಂತೆಯೇ, ನಮ್ಮ ಟೆರಿಟೊರಿಯಲ್ಲಿ ಸತ್ಯಕ್ಕೆ ಕಿವಿಗೊಡುವ ಅನೇಕ ಕುರಿಸದೃಶ ಜನರಿದ್ದಾರೆ ಎಂಬುದು ನಿಶ್ಚಯ. ನಮ್ಮ ತೋರಿಕೆಗೆ ಮತ್ತು ಮಾತನಾಡುವ ರೀತಿಗೆ ಜಾಗರೂಕ ಗಮನವನ್ನು ನೀಡುವುದು, ದೇವರ ವಾಕ್ಯಕ್ಕೆ ಕಿವಿಗೊಡಲು ಮತ್ತು ಅದನ್ನು ಅನುಕೂಲಕರವಾಗಿ ಸ್ವೀಕರಿಸಲು ಪ್ರಾಮಾಣಿಕ ಜನರನ್ನು ಪ್ರೋತ್ಸಾಹಿಸಬಲ್ಲದು.—ಮಾರ್ಕ 4:20.