ಅಪರಿಚಿತರಿಗೆ ಅತಿಥಿಸತ್ಕಾರವು ತೋರಿಸಲ್ಪಡುವ ಸ್ಥಳ
ಸೆಪ್ಟೆಂಬರ್ 1994ರಲ್ಲಿ, ಅಮೆರಿಕದ ಮಿಶಿಗನ್ನ ಒಬ್ಬ ಮನುಷ್ಯನು, ಟೆನಸ್ಸಿಯ ಲೆಬನನಿನಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಗೆ ಬರೆದನು. ಅವನು ವಿವರಿಸಿದ್ದು:
“1993ರ ಜೂನ್ 6ನೆಯ ಆದಿತ್ಯವಾರ, ನಾನು ನಿಮ್ಮ ಬಹಿರಂಗ ಭಾಷಣ ಮತ್ತು ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾದೆ. ಒಂದು ರಾಜ್ಯ ಸಭಾಗೃಹವನ್ನು ನಾನು ಪ್ರವೇಶಿಸಿದ್ದು ಅದೇ ಪ್ರಥಮ ಸಲವಾಗಿತ್ತು, ಮತ್ತು ಆ ಎಲ್ಲಾ ನಗುಮೊಗದ ಮುಖಗಳಿಂದ ಮತ್ತು ನನಗೆ ತೋರಿಸಲ್ಪಟ್ಟ ಪ್ರಾಮಾಣಿಕ ಪ್ರೀತಿಯಿಂದ ನಿಜವಾಗಿಯೂ ನಾನು ಪ್ರಭಾವಿತನಾದೆ. ನಾನು ಕೆಲವು ನಿಮಿಷಗಳಷ್ಟು ತಡವಾಗಿ ಬಂದಿದ್ದೆ, ಮತ್ತು ನಾನು ಒಳಸೇರಿದಾಗ, ನಾನು ಒಬ್ಬನೇ ಕುಳಿತುಕೊಂಡೆ. ಅದೇ ಸಾಲಿನಲ್ಲಿ ಕುಳಿತಿದ್ದ ಒಬ್ಬ ಯುವ ದಂಪತಿಗಳು ಒಂದು ಬೈಬಲನ್ನು ಮತ್ತು ಕಟ್ಟಕಡೆಗೆ ಅಭ್ಯಾಸಕ್ಕಾಗಿ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ನನಗೆ ನೀಡಿದರು.
“ಕೂಟಗಳ ನಂತರ ನಿಮ್ಮಲ್ಲಿ ಹೆಚ್ಚಿನವರು ನನ್ನೊಂದಿಗೆ ಮಾತಾಡಿ, ಕೈಕುಲುಕಿ, ನನ್ನ ಉಪಸ್ಥಿತಿಯನ್ನು ಒಂದು ತೀರ ಆಹ್ಲಾದಕರ ಅನುಭವವನ್ನಾಗಿ ಮಾಡಿದಿರಿ. ಕೊನೆಗೆ ನಾನು ನಿಮ್ಮ ರಾಜ್ಯ ಸಭಾಗೃಹವನ್ನು ಬಿಟ್ಟು ತೆರಳಿದಾಗ, ನಾನು ನನ್ನೊಂದಿಗೆ—ಬೈಬಲ್, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ, ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ—ಎಂಬ ಮೂರು ಪುಸ್ತಕಗಳನ್ನು ತೆಗೆದುಕೊಂಡು ಹೋದೆ. ಆ ರಾತ್ರಿ, ನಾನು ಸದಾ ಜೀವಿಸಬಲ್ಲಿರಿ ಪುಸ್ತಕದ ಹೆಚ್ಚಿನ ಭಾಗವನ್ನು ಓದಿದೆ, ಮತ್ತು ನನ್ನ ದೇವರಿಗಾಗಿ ಯೆಹೋವ ಎಂಬ ಹೊಸ ಹೆಸರನ್ನು ಕಲಿತೆ. . . .
“ಸಂಪೂರ್ಣವಾಗಿ ಅಪರಿಚಿತನಾದವನೊಬ್ಬನಿಗೆ ನಿಮ್ಮ ಅದ್ಭುತಕರವಾದ ಅತಿಥಿಸತ್ಕಾರವನ್ನು ನಾನು ಎಷ್ಟು ಗಣ್ಯಮಾಡಿದೆನೆಂದು ನೀವೆಲ್ಲರೂ ತಿಳಿಯಬೇಕೆಂದು ನಾನು ಬಯಸುತ್ತೇನೆ ಮತ್ತು ವಿಶೇಷವಾಗಿ ನೀವಿದನ್ನು ತಿಳಿಯಬೇಕೆಂದು ಬಯಸುತ್ತೇನೆ, ಏನೆಂದರೆ . . . ನಾನು 70ರಷ್ಟು ಎಳೆಯ ಪ್ರಾಯದಲ್ಲಿ, ಜುಲೈ 9, 1994ರಂದು ದೀಕ್ಷಾಸ್ನಾನ ಹೊಂದಿದೆ.”
ದೇವರಿಗೆ ಸೇವೆ ಸಲ್ಲಿಸುವುದರಲ್ಲಿ ಆನಂದಿಸುವವರಿಂದ ಹೃದಯೋಲ್ಲಾಸದ ಅತಿಥಿಸತ್ಕಾರವನ್ನು ಪಡೆಯಲು ನೀವು ಇಷ್ಟಪಡುವಲ್ಲಿ, ದಯವಿಟ್ಟು Watch Tower, H-58 Old Khandala Road, Lonavla 410 401, Mah., ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ್ದ ವಿಳಾಸಕ್ಕೆ ಬರೆಯಿರಿ. ನಿಮ್ಮ ಮನೆಗೆ ಸಮೀಪದಲ್ಲಿರುವ ರಾಜ್ಯ ಸಭಾಗೃಹದ ಸಂಪರ್ಕವನ್ನು ಅವರು ನಿಮಗೆ ಮಾಡಿಸುವರು.