ಎಲ್ಲ ವಿಧಗಳ ಜನರಿಗೆ ಎಲ್ಲ ವಿಷಯಗಳಾಗಿ ಪರಿಣಮಿಸುವುದು
There is no corresponding article in English
ಇತ್ತೀಚಿನ ತಿಂಗಳುಗಳಲ್ಲಿ ದೇವಪ್ರಭುತ್ವ ಚಟುವಟಿಕೆಯ ಎಲ್ಲ ವೈಶಿಷ್ಟ್ಯಗಳಲ್ಲಿ ಉತ್ತಮ ವರ್ಧಿಸುವಿಕೆಗಳನ್ನು ಕೇಳುವುದು, ಭಾರತದ ಈ ಬಹುವಿಸ್ತಾರವಾದ ಉಪಖಂಡದಲ್ಲಿರುವ ಯೆಹೋವನ ಸಾಕ್ಷಿಗಳಿಗೆ ಮಹತ್ತಾದ ಉತ್ತೇಜನದ ಒಂದು ಮೂಲವಾಗಿದೆ. ಸಕಲ ಹಿನ್ನೆಲೆಗಳಿಂದ ಬರುವ ಹೆಚ್ಚೆಚ್ಚು ವ್ಯಕ್ತಿಗಳು ಸತ್ಯವನ್ನು ಅಂಗೀಕರಿಸುತ್ತಿರುವುದನ್ನು ನಾವು ನೋಡಿದ ಹಾಗೆ, ಮಹಾ ಸಂಕಟವು ಬರುವ ಮುನ್ನ ಲೋಕದ ಉಳಿದ ಭಾಗದಲ್ಲಿರುವಂತೆ, ಭಾರತದ ಕ್ಷೇತ್ರದಲ್ಲಿ ಕುರಿಸದೃಶ ಜನರ ಒಟ್ಟುಗೂಡಿಸುವಿಕೆಯನ್ನು ಯೆಹೋವನು ‘ತ್ವರಿತಗೊಳಿಸು’ತ್ತಿದ್ದಾನೆ ಎಂಬುದನ್ನು ನಾವು ಗಣ್ಯ ಮಾಡುತ್ತೇವೆ. ಆದಾಗಲೂ, ನಮ್ಮ ಟೆರಿಟೊರಿಯಲ್ಲಿರುವ ಲಕ್ಷಾಂತರ ಜನರನ್ನು ಸುವಾರ್ತೆಯೊಂದಿಗೆ ಇನ್ನೂ ತಲಪಲಿರುವುದರಿಂದ, ಸ್ಫುಟವಾಗಿ ಮಾಡಬೇಕಾಗಿರುವ ಕೆಲಸವು ಇನ್ನೂ ಬಹಳಷ್ಟಿದೆ.—ಯೆಶಾ. 60:22.
ನಾವು ಭಾರತದಲ್ಲಿರುವ ಧಾರ್ಮಿಕ ನಂಬಿಕೆಗಳ ಮಹತ್ತರ ವೈವಿಧ್ಯವನ್ನು ಪರಿಗಣಿಸುವಾಗ, ನಾವು ಹೀಗೆ ಕೇಳಬಹುದು: ಸತ್ಯದ ಕುರಿತಾದ ನಮ್ಮ ಪ್ರಸ್ತುತಪಡಿಸುವಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ನಾವು ಮಾಡಸಾಧ್ಯವಿರುವ ಯಾವುದಾದರೂ ವಿಷಯವಿದೆಯೋ? ಮನೆಯವನು ಒಬ್ಬ ಹಿಂದೂ, ಮುಸ್ಲಿಮ್, ಪಾರ್ಸಿ ಅಥವಾ ನಾಮಮಾತ್ರದ ಕ್ರೈಸ್ತನಾಗಿರಲಿ, ಅದೇ ಪೀಠಿಕೆ ಅಥವಾ ಸಂಭಾಷಣೆಯ ಮಾತಿನ ಅಂಶವು ತಕ್ಕದ್ದಾಗಿರುವುದೋ? ನಾವು 1 ಕೊರಿಂ. 9:19-23 (NW)ರಲ್ಲಿ ಓದುವಂತೆ, ಅಪೊಸ್ತಲ ಪೌಲನು ತನ್ನ ಕೇಳುಗರಿಗೆ ತಕ್ಕದ್ದಾಗಿರುವಂತೆ ತನ್ನ ಸಮೀಪಿಸುವಿಕೆಯನ್ನು ಸರಿಹೊಂದಿಸಿಕೊಳ್ಳುವುದರ ಕುರಿತಾಗಿ ತುಂಬ ಪ್ರಜ್ಞೆಯುಳ್ಳವನಾಗಿದ್ದನು. ‘ಎಲ್ಲ ವಿಧಗಳ ಜನರಿಗೆ ಎಲ್ಲ ವಿಷಯಗಳಾಗಿ ಪರಿಣಮಿಸುವುದ’ರಲ್ಲಿನ ಅವನ ಹೇತುವು ಏನಾಗಿತ್ತು? ಅವನು ಹೇಳುವುದು: “ನಾನು [ಇತರರ] ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.”
ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕವು, ರಾಜ್ಯ ಸಂದೇಶವನ್ನು ಪರಿಚಯಿಸಲು ಮತ್ತು ಇನ್ನೂ ಹೆಚ್ಚಿನ ಚರ್ಚೆಗೆ ತಡೆಯೊಡ್ಡಸಾಧ್ಯವಿದ್ದ ಆಕ್ಷೇಪಣೆಗಳನ್ನು ನಿರ್ವಹಿಸಲೂ ನಮಗೆ ಸಹಾಯಮಾಡಲಿಕ್ಕೆ ಸಂಪದ್ಭರಿತ ವಿಷಯವನ್ನು ನೀಡುತ್ತದೆ. ಪೀಠಿಕೆಗಳಲ್ಲಿ ಅನೇಕ ಪೀಠಿಕೆಗಳು ಸಾಮಾನ್ಯವಾದ ವಿಧದ್ದಾಗಿವೆ; ಇವು ಒಬ್ಬ ವ್ಯಕ್ತಿಯು ಯಾವುದೇ ಧರ್ಮವನ್ನು ಅನುಸರಿಸಲಿ ಅಥವಾ ಅವರು ಧಾರ್ಮಿಕರೇ ಆಗಿರದಿರುವುದಾದರೂ ಉಪಯೋಗಿಸಲ್ಪಡಸಾಧ್ಯವಿದೆ. ಇವು ನಮ್ಮ ಕ್ಷೇತ್ರದಲ್ಲಿ ಪರಿಣಾಮಕಾರಿಯಾದವುಗಳಾಗಿ ಕಂಡುಕೊಳ್ಳಲ್ಪಟ್ಟಿವೆ. ಆದರೂ, ಆಗಾಗ ನಾವು ಸಂಧಿಸುವ ಸಂಭವನೀಯತೆಯಿರುವ ಜನರೊಂದಿಗೆ ಉಪಯೋಗಿಸಲಿಕ್ಕಾಗಿ ಹೆಚ್ಚು ನಿರ್ದಿಷ್ಟವಾಗಿರುವ ಲೇಖನಗಳಿಗಾಗಿ ನಮಗೆ ವಿನಂತಿಗಳು ಬಂದಿವೆ. ಈ ಅಗತ್ಯವನ್ನು ಪೂರೈಸಲು, ನೀವು ಉಪಯೋಗಿಸಲು ಇಚ್ಛಿಸಬಹುದಾದ ಕೆಲವು ಸಲಹೆಗಳನ್ನು ನಾವು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಕ್ಷೇತ್ರ ಸೇವಾ ಬ್ಯಾಗ್ಗಳಲ್ಲಿ ನಮ್ಮೊಂದಿಗೆ ರೀಸನಿಂಗ್ ಪುಸ್ತಕವನ್ನು ತೆಗೆದುಕೊಂಡು ಹೋಗುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ; ಈ ಪುರವಣಿಯನ್ನು ಆ ಪುಸ್ತಕದಲ್ಲಿ ನಿಮ್ಮ ಉಪಕರಣದ ಒಂದು ಶಾಶ್ವತ ಭಾಗದೋಪಾದಿ ಒಳಗೂಡಿಸುವುದು ಒಳ್ಳೆಯದಾಗಿರಬಹುದು.
ಮನಸ್ಸಿನಲ್ಲಿಡಬೇಕಾದ ಪ್ರಮುಖವಾದೊಂದು ವಿಷಯವು ಏನಾಗಿದೆಯೆಂದರೆ, ಒಂದು ನಿರ್ದಿಷ್ಟವಾದ ಧರ್ಮದ ಒಬ್ಬ ವ್ಯಕ್ತಿಗೆ ನಾವು ನಮ್ಮ ಪೀಠಿಕೆಯನ್ನು ಸರಿಹೊಂದಿಸುವಾಗ, ನಾವು ಮಾತಾಡುತ್ತಿರುವ ವ್ಯಕ್ತಿಯು ನಾವು ಯಾವುದರ ಕುರಿತಾಗಿ ಮಾತಾಡುತ್ತಿದ್ದೇವೋ ಆ ಧರ್ಮಕ್ಕೆ ನಿಜವಾಗಿಯೂ ಸೇರಿದ್ದಾನೆಂಬುದರ ಕುರಿತಾಗಿ ಖಾತ್ರಿಯಿಂದಿರುವುದಾಗಿದೆ. ಉದಾಹರಣೆಗಾಗಿ, ಒಂದು ಹಿಂದೂ ಗುರಿನುಡಿ, ಒಂದು ಸ್ವಸ್ತಿಕ ಅಥವಾ ಬಾಗಿಲಿನ ಮೇಲೆ ಒಂದು ಹಿಂದೂ ದೇವರ ಅಲಂಕಾರ ಫಲಕವಿರುವ ಒಂದು ಮನೆಯನ್ನು ನಾವು ಸಂದರ್ಶಿಸಬಹುದು. ಬಾಗಿಲಿಗೆ ಬರುವ ವ್ಯಕ್ತಿಯಾದರೋ ಒಬ್ಬ ರೋಮನ್ ಕ್ಯಾಥೊಲಿಕ್ ಬಾಡಿಗೆದಾರನಾಗಿರಬಹುದು. ಆದುದರಿಂದ, ನಿರ್ದಿಷ್ಟ ಪದಗಳನ್ನು ಉಪಯೋಗಿಸುವುದರಲ್ಲಿ, ಅಥವಾ ನಿರ್ದಿಷ್ಟವಾದೊಂದು ನಂಬಿಕೆಯನ್ನು ಪರೋಕ್ಷವಾಗಿ ಸೂಚಿಸುವುದರಲ್ಲಿ ನಾವು ವಿವೇಚನೆಯುಳ್ಳವರಾಗಿರತಕ್ಕದ್ದು. ಭಾರತದಲ್ಲಿನ ಕ್ಷೇತ್ರದಲ್ಲಿ ಕೆಲಸಮಾಡುವ ಒಂದು ಪ್ರಯೋಜನವು ಏನಾಗಿದೆಯೆಂದರೆ, ಸಾಮಾನ್ಯವಾಗಿ ಇತರ ದೇಶಗಳಲ್ಲಿ ಜನರು ಅವಸರಿಸುವಂತೆ ಇವರು ಅವಸರಿಸುವುದಿಲ್ಲ ಮತ್ತು ಆ ವ್ಯಕ್ತಿಯ ಧರ್ಮ ಅಥವಾ ಸಮುದಾಯವನ್ನು ನಿರ್ಧರಿಸಲು ಪ್ರಯತ್ನಿಸುವಾಗ, ನಮ್ಮನ್ನು ಪರಿಚಯಿಸಿಕೊಳ್ಳಲು ಮತ್ತು ಅಭಿವಂದಿಸುವಿಕೆಗಳನ್ನು ಸ್ನೇಹಪೂರ್ವಕವಾಗಿ ವಿನಿಮಯಿಸಿಕೊಳ್ಳಲು ಸಮಯವನ್ನು ನಾವು ತೆಗೆದುಕೊಳ್ಳಬಲ್ಲೆವು.
ಅರಸನಾದ ಸೊಲೊಮೋನನು “ಆನಂದಕರವಾದ ಮಾತುಗಳನ್ನು ಮತ್ತು ಸತ್ಯದ ಸರಿಯಾದ ಮಾತುಗಳನ್ನು . . . ಕಂಡುಹಿಡಿಯಲು ಪ್ರಯತ್ನಿಸಿದನು.” (ಪ್ರಸಂ. 12:10, NW) “ಸತ್ಯದ ಸರಿಯಾದ ಮಾತುಗಳನ್ನು” ಆಡುವುದು, ನಾವೇನನ್ನು ಹೇಳುತ್ತೇವೋ ಅದರ ಕುರಿತಾಗಿ ನಾವು ಯಾವಾಗಲೂ ನಿಷ್ಕೃಷ್ಟರಾಗಿರುವೆವು ಎಂಬುದನ್ನು ಅರ್ಥೈಸುತ್ತದೆ. ಕೆಲವೊಮ್ಮೆ ಸಹೋದರರು, ತಾವು ಸಮಯೋಚಿತ ನಯವುಳ್ಳವರಾಗಿದ್ದೇವೆಂದು ಭಾವಿಸುತ್ತಾ, ಸತ್ಯವಾಗಿಲ್ಲದ ಒಂದು ವಿಧದಲ್ಲಿ ಹೇಳಿಕೆಗಳನ್ನು ಮಾಡುತ್ತಾರೆ ಅಥವಾ ವ್ಯಾಖ್ಯೆಗಳಿಗೆ ಉತ್ತರಿಸುತ್ತಾರೆ. ಉದಾಹರಣೆಗಾಗಿ, ಅನೇಕ ಬಾರಿ ಮಾಡಲ್ಪಡುವ ವ್ಯಾಖ್ಯೆಯು ‘ನಾನು ಒಬ್ಬ ಕ್ರೈಸ್ತನಾಗಬೇಕೆಂದು ನೀವು ಬಯಸುತ್ತೀರಿ’ ಎಂದಾಗಿದೆ. ಸಹೋದರರು ‘ಇಲ್ಲವೇ ಇಲ್ಲ!’ ಎಂದು ಉತ್ತರಿಸಿದ್ದಾರೆಂಬ ಪ್ರತೀತಿಯಿದೆ. ಅದು ನಿಜವಾಗಿದೆಯೋ? ಅಥವಾ ಒಬ್ಬ ಹಿಂದೂ ತಾನು ರಾಮರಾಜ್ಯಕ್ಕೆ ಎದುರುನೋಡುತ್ತಿದ್ದೇನೆ ಎಂಬುದಾಗಿ ಹೇಳಬಹುದು. ‘ನಾವು ಅದರ ಕುರಿತಾಗಿಯೇ ಮಾತಾಡಲು ಬಂದಿದ್ದೇವೆ’ ಎಂಬಂಥ ಹೇಳಿಕೆಯೊಂದಿಗೆ ನಾವು ಉತ್ತರಿಸುವೆವೋ? ‘ನಾನು ನನ್ನ ಸ್ವಂತ ಪವಿತ್ರ ಬರಹಗಳನ್ನು ಮಾತ್ರ ಓದುತ್ತೇನೆ’ ಎಂದು ಯಾರಾದರೊಬ್ಬರು ಹೇಳುತ್ತಾರೆ. ‘ಅದು ಒಳ್ಳೆಯದಾಗಿದೆ’ ಅಥವಾ ‘ಅದನ್ನು ತಿಳಿಯಲು ನಾನು ಸಂತೋಷಿಸುತ್ತೇನೆ’ ಎಂಬುದಾಗಿ ನಾವು ಉತ್ತರಿಸಬಲ್ಲೆವೂ. ನಮ್ಮ ಮಾತುಗಳ ಕುರಿತಾಗಿ ಜಾಗ್ರತೆಯುಳ್ಳವರಾಗಿರುವುದು, ಮತ್ತು ರಾಜ್ಯದ ಶುದ್ಧ, ಸರಳ ಸಂದೇಶವನ್ನು, ಮಿಥ್ಯೆ ಮತ್ತು ಮಾನವ ತತ್ತ್ವಜ್ಞಾನಗಳಿಂದ ಪ್ರತ್ಯೇಕವಾಗಿಡುವುದು “ಸತ್ಯದ ಸರಿಯಾದ ಮಾತುಗಳನ್ನು” ನಾವು ಆಡುವಂತೆ ಮಾಡುವುದು.
ಇದು ನಮ್ಮ ಕೇಳುಗರಿಗೆ ಪರಿಚಿತವಾಗಿರುವ ಪದಗಳಿಗೆ ಮತ್ತು ಅಭಿಪ್ರಾಯಗಳಿಗೆ ನಾವು ಉಲ್ಲೇಖನವನ್ನು ಮಾಡುವುದಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ಮನೆಯಲ್ಲಿ ಚಿತ್ರಗಳು ಅಥವಾ ಮೂರ್ತಿಗಳಿಂದ ಅಥವಾ ಪ್ರಾಯಶಃ ಆ ವ್ಯಕ್ತಿಯ ಹೆಸರು ಅಥವಾ ಬಟ್ಟೆ ಧರಿಸುವಿಕೆಯ ವಿಧದಿಂದ ತೋರಿಸಲ್ಪಟ್ಟಂತೆ ಒಬ್ಬ ಹಿಂದೂವನ್ನು ನಾವು ಭೇಟಿಯಾಗುವುದಾದರೆ, ಇಲ್ಲಿ ಸೂಚಿಸಲ್ಪಟ್ಟ ಪೀಠಿಕೆಗಳಲ್ಲಿ ಒಂದನ್ನು ನಾವು ಉಪಯೋಗಿಸಲು ಇಚ್ಛಿಸಬಹುದು:
ಒಬ್ಬ ಹಿಂದೂ ವ್ಯಕ್ತಿಯೊಡನೆ ಮಾತಾಡುವುದು:
◼ ‘ಒಂದಿಷ್ಟು ತುಂಬ ಒಳ್ಳೆಯ ವಾರ್ತೆಯನ್ನು ತರಲು, ಲೋಕವ್ಯಾಪಕವಾದೊಂದು ಸೇವಾ ಭಾಗದೋಪಾದಿ ನಾವು ಸಂದರ್ಶಿಸುತ್ತಿದ್ದೇವೆ. ದಿನೇ ದಿನೇ ಲೋಕದ ಪರಿಸ್ಥಿತಿಗಳು ಹೆಚ್ಚೆಚ್ಚು ಕೆಡುತ್ತಾ ಹೋಗುತ್ತಿವೆಯೆಂಬುದರಲ್ಲಿ ನೀವು ನಮ್ಮೊಂದಿಗೆ ಸಮ್ಮತಿಸುವಿರೆಂಬ ಖಾತ್ರಿ ನನಗಿದೆ . . . ಹಿಂಸಾಚಾರ, ಪಾತಕ ಮತ್ತು ಸಂಪೂರ್ಣ ನೈತಿಕ ಕುಸಿತವು ನಿರೀಕ್ಷಿಸಲ್ಪಡುವ, ನೀವು ‘ಕಲಿಯುಗ’ ಎಂದು ಕರೆಯುವಂಥ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂಬುದಾಗಿ ನೀವು ಭಾವಿಸಬಹುದು. ಈ ಪರಿಸ್ಥಿತಿಗಳನ್ನು ಒಂದು ಪ್ರಾಚೀನ ಪವಿತ್ರ ಬರಹವು ಹೇಗೆ ವರ್ಣಿಸುತ್ತದೆಂಬುದನ್ನೂ ಮುಂದಿರುವ ಒಳ್ಳೆಯ ವಿಷಯಗಳನ್ನು ಹೇಗೆ ತೋರಿಸುತ್ತದೆಂಬುದನ್ನೂ ನಿಮಗೆ ತೋರಿಸಲು ನಾನು ಇಚ್ಛಿಸುತ್ತೇನೆ . . . (2 ತಿಮೊ. 3:1-5; ಕೀರ್ತ. 37:10, 11)’
◼ ‘ನಿಮ್ಮೊಂದಿಗೆ ಒಂದಿಷ್ಟು ಒಳ್ಳೆಯ ವಾರ್ತೆಯನ್ನು ಹಂಚಿಕೊಳ್ಳಲು ನಾವು ಸಂದರ್ಶಿಸುತ್ತಿದ್ದೇವೆ. ಇಂದು ನಾವು ಕೇಳುವ ಹೆಚ್ಚಿನ ವಾರ್ತೆಯು ಕೆಟ್ಟದ್ದಾಗಿದೆ, ಅಲ್ಲವೇ? ನಾವು ಯಾವಾಗಲೂ ಹಿಂಸಾಚಾರ, ಪಾತಕ, ನಿರುದ್ಯೋಗ, ಅಸ್ವಸ್ಥತೆ ಮತ್ತು ದಾರಿದ್ರ್ಯದ ಕುರಿತಾಗಿ ಕೇಳುತ್ತೇವೆ . . . ನೀವು ಯಾವುದನ್ನು ‘ಕಲಿಯುಗ’ವೆಂದು ತಿಳಿದಿದ್ದೀರೋ ಅದು ಇಲ್ಲಿದೆ ಎಂಬುದಾಗಿ ನೀವು ನಂಬಬಹುದು. ನೀವು ‘ಸತ್ಯಯುಗ’ ಎಂದು ಯಾವುದನ್ನು ಕರೆಯುತ್ತೀರೋ, ಅದು ನಮ್ಮ ಜೀವಮಾನದಲ್ಲಿ ಬರುವುದೆಂಬುದಾಗಿ ನೀವು ನೆನಸುತ್ತೀರೋ? . . . ದೇವರು ಲೋಕ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡುವಾಗ ಈ ಕೆಟ್ಟ ಪರಿಸ್ಥಿತಿಗಳು ಅತಿ ಬೇಗನೆ ತೆಗೆದುಹಾಕಲ್ಪಡುವವು ಎಂದು ಪ್ರಾಚೀನ ಪವಿತ್ರ ಬರವಣಿಗೆಗಳ ನಮ್ಮ ಅಧ್ಯಯನವು ನಮಗೆ ಮನಗಾಣಿಸಿದೆ. ಇದನ್ನು ಒಬ್ಬ ಬರಹಗಾರನು ವರ್ಣಿಸುವುದು ಹೀಗೆಯೇ. (ಜ್ಞಾನೋ. 2:21, 22) ಈ ನಿರೀಕ್ಷೆಯು ಅತ್ಯುತ್ಕೃಷ್ಟ ಮಾಹಿತಿಯ ಮೇಲೆ ಆಧರಿತವಾಗಿದೆ ಮತ್ತು ಬದಲಾವಣೆಯೊಂದು ಹತ್ತಿರವಿದೆ ಎಂಬುದನ್ನು ನಮಗೆ ಮನಗಾಣಿಸಿರುವ ಒಂದಿಷ್ಟು ಮಾಹಿತಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.’
ಒಬ್ಬ ಹಿಂದೂ ಅಥವಾ ಒಬ್ಬ ಮುಸ್ಲಿಮ್ ವ್ಯಕ್ತಿಯೊಂದಿಗೆ ಮಾತಾಡುವುದು:
ನೆರೆಹೊರೆಯವರ ಮಧ್ಯೆ ಶಾಂತಿಭರಿತ ಸಂಬಂಧಗಳ ವಿಷಯದ ಕುರಿತಾದ ಒಂದು ವ್ಯಾಖ್ಯೆಗೆ ಒಬ್ಬ ಹಿಂದೂ ಅಥವಾ ಒಬ್ಬ ಮುಸ್ಲಿಮ್ ವ್ಯಕ್ತಿಯು ಪ್ರತಿಕ್ರಿಯಿಸಬಹುದು. ಈ ರೀತಿಯ ಯಾವುದಾದರೂ ವಿಷಯವನ್ನು ನಾವು ಹೇಳಸಾಧ್ಯವಿದೆ:
◼ ‘ಹಿಂದೆ ಪರಸ್ಪರ ಸ್ನೇಹಿತರಾಗಿದ್ದ ಜನರ ನಡುವೆ ಹೆಚ್ಚುತ್ತಿರುವ ಹಿಂಸಾಚಾರದಿಂದ ಬರುತ್ತಿರುವ ಸಮಸ್ಯೆಗಳ ಕುರಿತಾಗಿ ನಾವು ನಿಮ್ಮ ನೆರೆಹೊರೆಯವರೊಂದಿಗೆ ಮಾತಾಡುತ್ತಿದ್ದೇವೆ. ‘ನಾವೆಲ್ಲರೂ ಸಹೋದರರಾಗಿದ್ದೇವೆ’ ಎಂಬ ಹೇಳಿಕೆಯನ್ನು ನಾವು ಅನೇಕ ವೇಳೆ ಕೇಳುತ್ತೇವೆ, ಆದರೆ ಇಂದು ಭ್ರಾತೃತ್ವ ಭಾವನೆಯು ಸುವ್ಯಕ್ತವಾಗಿದೆಯೆಂದು ನೀವು ನೆನಸುತ್ತೀರೋ ಅಥವಾ ಅದು ಕಣ್ಮರೆಯಾಗುತ್ತಿದೆ ಎಂದೋ? . . . ಇಂದಿನ ಪರಿಸ್ಥಿತಿಗಳು ಬಹಳ ಹಿಂದೆಯೇ ಮಾಡಲ್ಪಟ್ಟ ಈ ಕಾಲಜ್ಞಾನ ಹೇಳುವಿಕೆಯನ್ನು ಸರಿಹೊಂದುತ್ತವೆಂಬುದಾಗಿ ನೀವು ನೆನಸುವುದಿಲ್ಲವೋ? (2 ತಿಮೊ. 3:1-5, [ಭಾಗಗಳು]) . . . ಆದರೆ ಈ ವಿಷಯಗಳು “ಕಡೇ ದಿವಸಗಳ”ಲ್ಲಿರುವುವು ಎಂದು ಈ ಬರವಣಿಗೆಯು ಹೇಳುವುದನ್ನು ಗಮನಿಸಿರಿ. ಈ “ಕಡೇ ದಿವಸಗಳ” ಅನಂತರ ಏನು ಬರುವುದೆಂಬುದರ ಕುರಿತಾದ ಇನ್ನೂ ಹೆಚ್ಚಿನ ವಾಗ್ದಾನಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.’
◼ ‘ನಾವು ಲೋಕವ್ಯಾಪಕವಾದೊಂದು ಶೈಕ್ಷಣಿಕ ಕಾರ್ಯದ ಭಾಗದೋಪಾದಿ ಸಂದರ್ಶಿಸುತ್ತಿದ್ದೇವೆ; ಇದರಲ್ಲಿ ಪಾಲನ್ನು ತೆಗೆದುಕೊಳ್ಳುತ್ತಿರುವವರು ಲೋಕ ಶಾಂತಿಯನ್ನು ನೋಡುವುದರಲ್ಲಿ ಆಸಕ್ತರಾಗಿದ್ದಾರೆ. ಲೋಕವು ಯಾವುದೇ ಭಯ, ಹಿಂಸೆ ಅಥವಾ ಪಾತಕವಿಲ್ಲದೆ ಎಂದಾದರೂ ಸಂಪೂರ್ಣವಾಗಿ ಶಾಂತಿಭರಿತವಾಗಿರುವುದು ಎಂದು ನೀವು ನೆನಸುತ್ತೀರೋ? . . . (ಅನೇಕರು ಅದು ದೇವರಿಗೆ ಸೇರಿದ್ದು ಎಂದು ಹೇಳುವರು; ಅವರು ಹಾಗೆ ಹೇಳುವಲ್ಲಿ ನಾವು ಹೀಗೆ ಕೂಡಿಸಬಲ್ಲೆವು . . .) ನಾವು ನಿಮ್ಮೊಂದಿಗೆ ಸಂಪೂರ್ಣವಾಗಿ ಸಮ್ಮತಿಸುತ್ತೇವೆ. ಇದರ ಕುರಿತಾಗಿ ಒಬ್ಬ ದೈವಭಕ್ತನು ಏನು ಹೇಳಿದನು ಎಂಬುದನ್ನು ಗಮನಿಸಿರಿ. (ಯೆಶಾ. 2:4) (ಅವರು ದೇವರ ಬಗ್ಗೆ ಮಾತಾಡದಿದ್ದರೆ, ನಾವು ಹೀಗೆ ಹೇಳಸಾಧ್ಯವಿದೆ . . .) ಈ ಪ್ರಾಚೀನ ವಿವೇಕಿಯು ನಂಬಿದ್ದಂತೆ ದೇವರು ಲೋಕ ವ್ಯವಹಾರಗಳಲ್ಲಿ ಎಂದಾದರೂ ಮಧ್ಯೆ ಕೈಹಾಕುವನು ಎಂದು ನೀವು ನೆನಸುತ್ತೀರೋ? . . . (ಯೆಶಾ. 2:4)’
ಒಬ್ಬ ಮುಸ್ಲಿಮ್ ವ್ಯಕ್ತಿಯೊಂದಿಗೆ ಮಾತಾಡುವುದು:
ಮುಸ್ಲಿಮರು ಹೀಬ್ರು ಶಾಸ್ತ್ರಗಳನ್ನು ಗೌರವಿಸುತ್ತಾರೆಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ಅವರಿಗೆ ಪರಿಚಯವಿರುವ ಹೆಸರುಗಳನ್ನು ಉಲ್ಲೇಖಿಸುತ್ತಾ, ಅದರಿಂದ ನಾವು ವಚನಗಳನ್ನು ಉಪಯೋಗಿಸಬಲ್ಲೆವು. ನಾವು ಹೀಗೆ ಹೇಳಸಾಧ್ಯವಿದೆ:
◼ ‘ಇಂದಿನ ನಮ್ಮ ಭೇಟಿಯು, ಸಕಲ ರಾಷ್ಟ್ರಗಳ ಜನರು ಶಾಂತಿಯಲ್ಲಿ ಜೀವಿಸುವುದನ್ನು ನೋಡುವುದರಲ್ಲಿ ಆಸಕ್ತರಾಗಿರುವವರೊಡನೆ ಮಾತಾಡುತ್ತಿರುವ 50 ಲಕ್ಷಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರಿರುವ ಒಂದು ಅಂತಾರಾಷ್ಟ್ರೀಯ ಕೆಲಸದ ಭಾಗವಾಗಿದೆ. ಅದು ಅದ್ಭುತಕರವಾಗಿರುವುದು ಅಲ್ಲವೇ? . . . ಭವಿಷ್ಯತ್ತಿಗಾಗಿ ದೇವರು ಅಬ್ರಹಾಮನಿಗೆ ಏನನ್ನು ವಾಗ್ದಾನಿಸಿದನು ಎಂಬುದನ್ನು ನೀವೆಂದಾದರೂ ಓದಿದ್ದೀರೋ? (ಆದಿ. 22:18) ಸಕಲ ರಾಷ್ಟ್ರಗಳ ಜನರಿಗಿರುವ ಆ ಆಶೀರ್ವಾದದ ಕುರಿತು ಅನೇಕ ಪ್ರವಾದಿಗಳು ಏನನ್ನು ಹೇಳಿದರೋ, ಅದರ ವಿಷಯವಾಗಿ ನಾವು ಒಂದು ಸಂಪೂರ್ಣ ಅಧ್ಯಯನವನ್ನು ಮಾಡಿದ್ದೇವೆ ಮತ್ತು ಇದು ಅತಿ ಬೇಗನೆ ಬರಲಿರುವುದು ಎಂಬುದರ ಕುರಿತಾಗಿ ನಾವು ಖಾತ್ರಿಯಿಂದಿದ್ದೇವೆ. ಇದು ಸುವಾರ್ತೆಯಾಗಿದೆ ಮತ್ತು ಇದನ್ನು ನಮ್ಮ ನೆರೆಯವರೊಂದಿಗೆ ಹಂಚಿಕೊಳ್ಳಲು ನಾವು ಬಯಸುತ್ತೇವೆ.’
◼ ‘ನೀವು ಮನೆಯಲ್ಲಿರುವುದನ್ನು ಕಂಡುಕೊಳ್ಳಲು ನಾನು ಸಂತೋಷಿಸುತ್ತೇನೆ. ಒಬ್ಬ ಮುಸ್ಲಿಮರಾಗಿರುವುದರಿಂದ, ಮನುಷ್ಯರಲ್ಲಿ ಆಸಕ್ತಿಯುಳ್ಳವನಾಗಿರುವ ಮತ್ತು ಎಂದಾದರೂ ಒಂದು ದಿನ ಭೂಮಿಯ ಮೇಲಿರುವ ದುಷ್ಟ ಜನರಿಗೆ ನ್ಯಾಯತೀರ್ಪುಮಾಡುವವನಾಗಿರುವ ಒಬ್ಬ ಸರ್ವಶಕ್ತ ದೇವರಲ್ಲಿ ನೀವು ನಂಬಿಕೆಯನ್ನಿಡುತ್ತೀರೆಂಬುದು ನಮಗೆ ತಿಳಿದಿದೆ. ಇದು ಹೇಗೆ ನೆರವೇರುವುದೆಂಬುದರ ಕುರಿತಾದ ಈ ವರ್ಣನೆಯನ್ನು ನಾವು ಬಹಳ ಆಸಕ್ತಿಭರಿತವಾದದ್ದಾಗಿ ಕಂಡುಕೊಂಡಿದ್ದೇವೆ. (ಯೆಶಾ. 2:4) ಇದು ಸಂಭವಿಸಿದ ಅನಂತರ ಭೂಮಿಯ ಮೇಲೆ ಪರಿಸ್ಥಿತಿಯು ಹೇಗಿರುವುದು? ಎಂಬುದರ ಕುರಿತಾದ ಇದೇ ಪ್ರವಾದಿಯ ವರ್ಣನೆಯನ್ನು ನೀವೆಂದಾದರೂ ಓದಿದ್ದೀರೋ ಎಂದು ನಾನು ಕುತೂಹಲಪಡುತ್ತೇನೆ . . . (ಯೆಶಾ. 35:5, 6 ಅಥವಾ 65:21, 22)’
ಸಂಭಾಷಣ ತಡೆಗಟ್ಟುಗಳು:
ರೀಸನಿಂಗ್ ಪುಸ್ತಕವು ಸಂಭಾಷಣೆಯೊಂದನ್ನು ನಿಲ್ಲಿಸಸಾಧ್ಯವಿರುವ ಆಕ್ಷೇಪಣೆಗಳನ್ನು ನಿರ್ವಹಿಸಲು ನಮಗೆ ಅನೇಕ ವಿಧಗಳನ್ನು ನೀಡುತ್ತದೆ. ಭಾರತದಲ್ಲಿನ ನಮ್ಮ ಶುಶ್ರೂಷೆಯಲ್ಲಿ ನಾವು ಕೇಳುವ ಸಾಮಾನ್ಯ ಆಕ್ಷೇಪಣೆಗಳೊಂದಿಗೆ ಸಂಬಂಧಿಸುವ ಕೆಲವನ್ನು ನಾವು ನೀಡುತ್ತಿದ್ದೇವೆ.
‘ನೀವು ಹೋಗಿ ರಾಜಕಾರಣಿಗಳಿಗೆ ಸಾರಬೇಕು, ನಮಗಲ್ಲ.’
◼ ‘ಯಾವನೇ ಮುಖಂಡನು ತನ್ನ ದೇಶದಲ್ಲಿ ಅವನಿಗೆ ಎಷ್ಟೇ ಹೆಚ್ಚು ಅಧಿಕಾರವಿರುವುದಾದರೂ, ಇಡೀ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಬಲ್ಲನೆಂದು ನೀವು ನಿಜವಾಗಿಯೂ ನೆನಸುತ್ತೀರೋ? ಎಂದು ನನಗೆ ಹೇಳಿ . . . ನಮ್ಮನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು, ನೀವು ಮತ್ತು ನಾನು ಪರಿಹರಿಸಲು ಅಸಾಧ್ಯವಾಗಿರುವಂತೆಯೇ, ರಾಜಕಾರಣಿಗಳು—ಅವರು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಬಹುದಾದರೂ—ಪರಿಹರಿಸಸಾಧ್ಯವಿಲ್ಲ. ಆದರೆ ಮನುಷ್ಯನ ಸಕಲ ಸಮಸ್ಯೆಗಳನ್ನು ನಿಜವಾಗಿಯೂ ಪರಿಹರಿಸಬಲ್ಲನಾದ ಒಬ್ಬನು ಇದ್ದಾನೆ . . . (ಯೆಶಾ. 2:4; ಯೆಶಾ. 65:17, 20, 21)’
◼ ‘ಅವರನ್ನು ನಾವು ಭೇಟಿಯಾಗಸಾಧ್ಯವಿರುವಾಗೆಲ್ಲಾ ನಾವು ಅದನ್ನು ಮಾಡುತ್ತೇವೆ. ನಮ್ಮೆಲ್ಲರನ್ನು—ಒಬ್ಬ ಮುಖಂಡನಾಗಿರಲಿ ಅಥವಾ ಜನತೆಯ ಒಬ್ಬ ಸದಸ್ಯನಾಗಿರಲಿ—ಎದುರಿಸುವ ಭಾವಪರವಶಗೊಳಿಸುವ ಸಮಸ್ಯೆಗಳು ಅತಿ ಬೇಗನೆ ತೆಗೆದುಹಾಕಲ್ಪಡಲಿಕ್ಕಿವೆ ಎಂಬ ಸುವಾರ್ತೆಯನ್ನು ಜನರಿಗೆ ನೀಡಲು, ಜೀವನದ ಎಲ್ಲ ಪಥಗಳಿಂದ ಬರುವವರನ್ನು ಭೇಟಿಯಾಗುವುದೇ ನಮ್ಮ ಜವಾಬ್ದಾರಿಯಾಗಿದೆ. ಈ ವಾಗ್ದಾನಗಳನ್ನು ಪ್ರಾಮಾಣಿಕ ರಾಜಕಾರಣಿಗಳು ನಂಬಶಕ್ತರಾಗುವಲ್ಲಿ ಅವರು ಸಂತೋಷಿತರಾಗುವರು ಎಂಬುದಾಗಿ ನೀವು ನೆನಸುವುದಿಲ್ಲವೋ? . . . (ಕೀರ್ತ. 46:8, 9; ಮೀಕ 4:3, 4)’
◼ ‘ಲೋಕದಾದ್ಯಂತವಾಗಿ ರಾಜಕಾರಣಿಗಳು, ತಮ್ಮನ್ನು ಅಧಿಕಾರಕ್ಕೇರಿಸುವುದಕ್ಕಾಗಿ ಮತಹಾಕಿದವರಿಗೆ ತಾವು ಮಾಡಿದ ವಾಗ್ದಾನಗಳನ್ನು ಪೂರೈಸುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಿದ್ದಾರೆಂಬುದು ಸತ್ಯ ಅಲ್ಲವೇ? . . . ಸನ್ನಿವೇಶವು, ಶತಮಾನಗಳ ಹಿಂದೆ ಒಬ್ಬ ಬರಹಗಾರನು ವರ್ಣಿಸಿದ ಹಾಗೆಯೇ ಇದೆ. (ಕೀರ್ತ. 146:3, 4) ಒಬ್ಬ ಮುಖಂಡನು ಸ್ವಲ್ಪ ಒಳ್ಳೆಯ ವಿಷಯವನ್ನು ಮಾಡಿದಾಗಲೂ ಅವನು ಅನೇಕ ವೇಳೆ ಅಧಿಕಾರದಿಂದ ತೆಗೆದುಹಾಕಲ್ಪಡುತ್ತಾನೆ, ಅಥವಾ ಅವನು ಸಾಯುತ್ತಾನೆ, ಮತ್ತು ಅವನ ನಂತರ ಬಂದವನಿಂದ ಅವನ ಕೆಲಸವು ರದ್ದುಗೊಳಿಸಲ್ಪಡುತ್ತದೆ. ನಾವು ವಾಸ್ತವವಾಗಿ ಸಕಲ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಅಧಿಕಾರವಿರುವ ಒಬ್ಬ ಶಾಶ್ವತ ಪ್ರಭುವಿರುವ ಒಂದು ಲೋಕ ಸರಕಾರದ ಕುರಿತಾಗಿ ನಿಮಗೆ ಹೇಳಲು ಬಂದಿದ್ದೇವೆ. ಅದು ಅದ್ಭುತಕರವಾಗಿರಲಿಕ್ಕಿಲ್ಲವೇ? . . . (ಕೀರ್ತ. 72:7, 8, 13, 14)’
‘ಪಾಶ್ಚಾತ್ಯ ದೇಶಗಳಿಗೆ ಹೋಗಿ ಸಾರಿರಿ, ಭಾರತವು ಒಂದು ಧಾರ್ಮಿಕ ದೇಶವಾಗಿದೆ.’
◼ ‘ಈ 20ನೇ ಶತಮಾನದಲ್ಲಿರುವ ಅನೇಕ ದೇಶಗಳು, ಧಾರ್ಮಿಕ ಸಂಸ್ಕಾರವನ್ನು, ಮತ್ತು ತಾವು ಅನುಸರಿಸುತ್ತೇವೆಂದು ಪ್ರತಿಪಾದಿಸಿಕೊಳ್ಳುವ ಧರ್ಮದ ನೈತಿಕ ಮಟ್ಟಗಳನ್ನೂ ತಿರಿಸ್ಕರಿಸಿವೆಯೆಂಬುದು ನಿಜವಾಗಿದೆ. ಆದರೆ ಇಲ್ಲಿ, ಭಾರತದಲ್ಲಿ ನಮಗಿರುವ ಎಲ್ಲ ಸಮಸ್ಯೆಗಳನ್ನು ಧರ್ಮವು ನಿಜವಾಗಿಯೂ ಪರಿಹರಿಸುತ್ತಿದೆಯೆಂದು ನೀವು ನೆನಸುತ್ತೀರೋ? ಈ ದೇಶದಲ್ಲೇ ನಾವು ಎದುರಿಸುವ ಹೆಚ್ಚಿನ ಹಿಂಸಾಚಾರವು ಒಂದು ಧಾರ್ಮಿಕ ಆಧಾರವನ್ನು ಹೊಂದಿದೆಯೆಂಬುದು ನಿಜವಾಗಿರುವುದಿಲ್ಲವೋ? . . . ಸಕಲ ರಾಷ್ಟ್ರಗಳ ಜನರು ಐಕ್ಯಗೊಂಡು, ಸತ್ಯವಾದ ಧಾರ್ಮಿಕ ತತ್ತ್ವಗಳನ್ನು ಅನುಸರಿಸಸಾಧ್ಯವಿದ್ದಿದ್ದರೆ ಎಷ್ಟೊಂದು ಒಳ್ಳೆಯದಾಗಿರುತ್ತಿತ್ತು . . . (ಕೀರ್ತ. 133:1)’
◼ ‘ವಾಸ್ತವವಾಗಿ, ಇಲ್ಲಿ ಭಾರತದಲ್ಲಿ ಸಾರುತ್ತಿರುವವರಿಗಿಂತಲೂ ಹೆಚ್ಚಾಗಿ ಲಕ್ಷಾಂತರ ಯೆಹೋವನ ಸಾಕ್ಷಿಗಳು ಪಾಶ್ಚಾತ್ಯ ದೇಶಗಳಲ್ಲಿ ಸಾರುತ್ತಿದ್ದಾರೆ. ಆದರೆ ನಾವು ತರುತ್ತಿರುವ ಸಂದೇಶವು, ಕಷ್ಟಾನುಭವ, ಹಿಂಸಾಚಾರ ಮತ್ತು ಅಸಂತೋಷದ ಅಂತ್ಯವನ್ನು ನೋಡಲು ಹಾತೊರೆಯುತ್ತಿರುವ ಸಕಲ ರಾಷ್ಟ್ರಗಳ ಜನರಿಗಾಗಿದೆ. ನಾವೆಲ್ಲಿಯೇ ಜೀವಿಸಲಿ ಈ ರೀತಿಯ ಪರಿಸ್ಥಿತಿಗಳನ್ನು ನೋಡಲು ನಾವು ಇಷ್ಟಪಡುವೆವು ಎಂಬ ವಿಷಯದೊಂದಿಗೆ ನೀವು ಸಮ್ಮತಿಸುವುದಿಲ್ಲವೋ? . . . (ಪ್ರಕ. 21:4)?’
◼ ‘ಪಾಶ್ಚಾತ್ಯ ದೇಶಗಳಲ್ಲಿರುವ ಅನೇಕ ಜನರು ಸಂಪೂರ್ಣವಾಗಿ ಪ್ರಾಪಂಚಿಕತೆಯ ಮನೋಭಾವವುಳ್ಳವರಾಗಿರುವಂತೆ ತೋರುತ್ತದೆ ನಿಜ. ಆದರೆ ಭಾರತದಲ್ಲಿರುವ ಧಾರ್ಮಿಕ ಜನರೂ ಹಿಂಸಾಚಾರ, ಆಹಾರ ಅಭಾವಗಳು, ನಿರುದ್ಯೋಗ, ಅಸ್ವಸ್ಥತೆ ಮತ್ತು ಮರಣದಿಂದ ಬಾಧಿತರಾಗಿರುವುದು ನಿಜವಾಗಿರುವುದಿಲ್ಲವೋ? . . . ಪೂರ್ವ ಮತ್ತು ಪಶ್ಚಿಮದಲ್ಲಿ—ಎರಡೂ ಕಡೆಯಲ್ಲಿ—ಆಸಕ್ತಿಯುಳ್ಳವನಾಗಿರುವ ದೇವರು, ಈ ಸಮಸ್ಯೆಗಳಿಂದ ಭೂಮಿಯನ್ನು ಬೇಗನೆ ಮುಕ್ತಗೊಳಿಸುವನೆಂಬುದರ ಕುರಿತು ನಾವು ಮನಗಾಣಿಸಲ್ಪಟ್ಟಿದ್ದೇವೆ ಮತ್ತು ನಾವು ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ . . . (ಕೀರ್ತ. 37:10, 11, 29)’
‘ನೀವು ನಮ್ಮನ್ನು ಕ್ರೈಸ್ತತ್ವಕ್ಕೆ ಮತಾಂತರಿಸಲು ಪ್ರಯತ್ನಿಸುತ್ತಿದ್ದೀರಿ’
◼ ‘ಇತಿಹಾಸದಾದ್ಯಂತವಾಗಿ ತಮ್ಮ ಧರ್ಮವನ್ನು ಬದಲಾಯಿಸುವಂತೆ ಜನರನ್ನು ಬಲಾತ್ಕರಿಸಲು ತುಂಬ ಪ್ರಯತ್ನಗಳು ಮಾಡಲ್ಪಟ್ಟವು ಎಂಬುದು ಖಂಡಿತ. ಆದರೆ ಅದರೊಂದಿಗೆ ನಾವು ಸಮ್ಮತಿಸುವುದಿಲ್ಲವೆಂಬುದರ ಬಗ್ಗೆ ನಾನು ನಿಮಗೆ ಆಶ್ವಾಸನೆಯನ್ನು ನೀಡುತ್ತೇನೆ. ಸಾಮಾನ್ಯವಾಗಿ ಕಾರಣವು ರಾಜಕೀಯ, ಅಥವಾ ಕೆಲವು ವೈಯಕ್ತಿಕ ಲಾಭವನ್ನು ಪಡೆದುಕೊಳ್ಳಲು ಆಗಿದೆ. ನಾವಾದರೋ ನಿಮಗೆ, ಮತ್ತು ನಿಮ್ಮ ಕುಟುಂಬಕ್ಕೆ, ಮತ್ತು ಲೋಕದಲ್ಲಿ ನಾವು ನೋಡುವ ಅಸಂತೋಷಿತ ಪರಿಸ್ಥಿತಿಗಳಿಂದ ಒಂದು ಬದಲಾವಣೆಯನ್ನು ನೋಡಲು ಅಭಿಲಾಷೆಯುಳ್ಳ ಸಕಲ ಧರ್ಮಗಳ ಪ್ರಾಮಾಣಿಕ ಜನರಿಗೆ, ಪ್ರಯೋಜನಕರವಾಗಲಿರುವ ಒಂದು ಸಂದೇಶದೊಂದಿಗೆ ಭೇಟಿಯಾಗುತ್ತಿದ್ದೇವೆ. ಪ್ರಾಚೀನ ಪವಿತ್ರ ಬರವಣಿಗೆಯೊಂದು ಈ ಬದಲಾವಣೆಯನ್ನು ಹೀಗೆ ವರ್ಣಿಸುತ್ತದೆ. (ಕೀರ್ತ. 37:10, 11)’
◼ ‘ಜನರಿಗೆ, ತಮ್ಮ ಧರ್ಮವನ್ನು ಬದಲಾಯಿಸಿಕೊಳ್ಳಲು ಲಂಚಕೊಡುವ ಅಥವಾ ಬಲವಂತಮಾಡುವುದರ ಒಂದು ದಾಖಲೆಯನ್ನು ಪಡೆದಿರುವ ಚರ್ಚ್ ಸಂಘಟನೆಗಳಿಗೆ ನಾವು ಸಂಬಂಧಿಸಲ್ಪಟ್ಟಿದ್ದೇವೆಂದು ಕೆಲವು ಜನರು ಭಾವಿಸುತ್ತಾರೆ. ಅಂಥ ಕ್ರಿಯೆಗಳನ್ನು ನಾವು ಖಂಡಿತವಾಗಿಯೂ ಅನುಮೋದಿಸುವುದಿಲ್ಲ, ಇಲ್ಲವೇ ನಾವು ಚರ್ಚುಗಳಿಗೆ ಯಾವುದೇ ವಿಧದಲ್ಲಿ ಸಂಬಂಧಿಸಲ್ಪಟ್ಟಿಲ್ಲ. ನಾವು ಶೀಘ್ರವೇ ಇನ್ನು ಮುಂದೆ ಯುದ್ಧಗಳಿರುವುದಿಲ್ಲ ಎಂಬ ಸುವಾರ್ತೆಯೊಂದಿಗೆ, ತಮ್ಮ ನೆರೆಯವರನ್ನು ಭೇಟಿಮಾಡುತ್ತಿರುವ 50 ಲಕ್ಷಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರ ಒಂದು ಅಂತಾರಾಷ್ಟ್ರೀಯ ಮಂಡಳಿಯ ಭಾಗವಾಗಿದ್ದೇವೆ. ಈ ಆಶ್ವಾಸನೆಯನ್ನು ನಮಗೆ ಯಾವುದು ನೀಡಿದೆ ಎಂಬುದನ್ನು ನಾನು ನಿಮಗೆ ತೋರಿಸಲೋ? . . . (ಕೀರ್ತ. 46:8, 9)’
‘ನಾನು ನನ್ನ ಸ್ವಂತ ಪವಿತ್ರ ಪುಸ್ತಕಗಳನ್ನು ಮಾತ್ರವೇ ಓದುತ್ತೇನೆ’
◼ ‘ಧರ್ಮದಲ್ಲಿ ಇನ್ನೂ ಆಸಕ್ತಿಯುಳ್ಳವರಾಗಿರುವ ಒಬ್ಬರನ್ನು ಕಂಡುಕೊಳ್ಳಲು ನಾನು ತುಂಬ ಸಂತೋಷಿಸುತ್ತೇನೆ. ಇಂದು ಹೆಚ್ಚಿನ ಜನರು ಮನೋರಂಜನೆಯಲ್ಲಿ ಮತ್ತು ಪ್ರಾಪಂಚಿಕ ಅನುಭೋಗದಲ್ಲಿ ಹೆಚ್ಚು ಆಸಕ್ತರಾಗಿದ್ದಾರೆಂದು ತೋರುತ್ತದೆಂಬುದರ ಕುರಿತಾಗಿ ನೀವು ನನ್ನೊಂದಿಗೆ ಸಮ್ಮತಿಸುವಿರೆಂದು ನಾನು ಖಾತ್ರಿಯಿಂದಿದ್ದೇನೆ . . . ನೀವು ಕೆಲವು ಧಾರ್ಮಿಕ ಪುಸ್ತಕಗಳೊಂದಿಗೆ ಪರಿಚಿತರಾಗಿರುವುದರಿಂದ, ನಾನು ಹೆಚ್ಚು ಪರಿಚಿತನಾಗಿರುವ ಪವಿತ್ರ ಪುಸ್ತಕವಾದ ಬೈಬಲಿನ ಈ ವಚನದ ಕುರಿತಾಗಿ ನಿಮ್ಮ ಅಭಿಪ್ರಾಯವೇನು? ಎಂಬುದರ ಬಗ್ಗೆ ಕುತೂಹಲಪಡುತ್ತೇನೆ. (ಜ್ಞಾನೋ. 2:20-22) . . . ಈಗ, ಅನೇಕ ಪವಿತ್ರ ಬರವಣಿಗೆಗಳು, ದೇವರು ಒಂದಲ್ಲ ಒಂದು ದಿನ ಎಲ್ಲ ದುಷ್ಟ ಜನರನ್ನು ನಾಶಮಾಡುತ್ತಾನೆಂಬುದನ್ನು ಸೂಚಿಸುತ್ತವೆ, ನಾವಾದರೋ, ನಮ್ಮ ನೆರೆಯವರೊಂದಿಗೆ ಭೇಟಿಯಾಗುವ ಕಾರಣವು, ಈ ನಾಶನವು ಯಾವಾಗ ಸಂಭವಿಸುವುದೆಂಬುದರ ಅತಿ ನಿರ್ದಿಷ್ಟವಾದ ಸೂಚನೆಗಳನ್ನು ಬೈಬಲು ನೀಡುತ್ತದೆ ಮತ್ತು ನಾವು ಭೂಮಿಯ ಮೇಲೆ ಸಂತೋಷವಾಗಿ ಜೀವಿಸಲು ಹೇಗೆ ಪಾರಾಗಬಲ್ಲೆವೆಂಬುದನ್ನು ಅದು ನಮಗೆ ತಿಳಿಸುತ್ತದೆಂದು ತೋರಿಸುವುದಕ್ಕಾಗಿದೆ. ಆ ಮಾಹಿತಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.’
◼ ‘ಹೌದು, ಅನೇಕ ಜನರು ಬಾಲ್ಯಾವಸ್ಥೆಯಿಂದ ತಮಗೆ ಕಲಿಸಲ್ಪಟ್ಟಿರುವ ಧಾರ್ಮಿಕ ಬರವಣಿಗೆಗಳನ್ನು ಮಾತ್ರವೇ ಓದುವುದರಿಂದ ತೃಪ್ತರಾಗಿದ್ದಾರೆ. ವೈಯಕ್ತಿಕವಾಗಿ, ಇತರ ಜನರು ದೇವರ ಮತ್ತು ಆತನನ್ನು ಆರಾಧಿಸುವ ವಿಧದ ಕುರಿತಾಗಿ ಯಾವುದನ್ನು ನಂಬುತ್ತಾರೆಂಬುದನ್ನು ಕಲಿಯುವುದನ್ನು ನಾನು ತುಂಬ ಆಸಕ್ತಿಯುಳ್ಳದ್ದಾಗಿ ಕಂಡುಕೊಂಡಿದ್ದೇನೆ. ಅದು ಲೋಕವು ಇಷ್ಟೊಂದು ಹಿಂಸಾಚಾರ ಮತ್ತು ಸಂಕಷ್ಟಗಳಿಂದ ತುಂಬಿರುವಾಗ, ನಮ್ಮ ದಿನಗಳ ಕೆಲವು ಎದ್ದುಕಾಣುವ ಕಾಲಜ್ಞಾನ ಹೇಳಿಕೆಗಳನ್ನು ಕಂಡುಕೊಳ್ಳಲು ನನ್ನನ್ನು ನಡೆಸಿದೆ. ನೀವು ತುಂಬ ನಿಷ್ಕೃಷ್ಟವಾಗಿ ಕಂಡುಕೊಳ್ಳುವಿರೆಂದು ನಾನು ನೆನಸುವ ಇಂದಿನ ಲೋಕದ ಒಂದು ವರ್ಣನೆಯನ್ನು ನಾನು ನಿಮಗೆ ತೋರಿಸಲು ಇಚ್ಛಿಸುತ್ತೇನೆ . . . (2 ತಿಮೊ. 3:1-5, [ಭಾಗಗಳು])’
ಅಪೊಸ್ತಲ ಪೌಲನು ಭರವಸೆಯಿಂದ ಹೇಳಿದ್ದು: “ನಾನು ಮನುಷ್ಯರೆಲ್ಲರ ರಕ್ತದಿಂದ ಶುದ್ಧನಾಗಿದ್ದೇನೆ, ಏಕೆಂದರೆ ನಾನು ದೇವರ ಸಲಹೆಯೆಲ್ಲವನ್ನು ನಿಮಗೆ ಹೇಳುವುದರಿಂದ ಹಿಂದೆಗೆದಿರುವುದಿಲ್ಲ.” (ಅ. ಕೃ. 20:26, 27, NW) ನಾವು ‘ಎಲ್ಲ ರೀತಿಯ ಮನುಷ್ಯರಿಗೆ’ ಸತ್ಯದ ಅದ್ಭುತಕರವಾದ ಸಂದೇಶವನ್ನು ಪ್ರಸ್ತುತಪಡಿಸಿದ ಹಾಗೆ, ನಮ್ಮ “ಸ್ಫುಟವಾದ ಆಲೋಚನಾ ಸಾಮರ್ಥ್ಯಗಳನ್ನು” ಉಪಯೋಗಿಸುವ ಮೂಲಕ, ಪೌಲನು ತೋರಿಸಿದಂಥ ಅದೇ ಶ್ರದ್ಧೆಯನ್ನು ತೋರಿಸಲು ನಾವು ಪ್ರತಿಯೊಂದು ಪ್ರಯತ್ನವನ್ನು ಮಾಡೋಣ.—2 ಪೇತ್ರ 3:1, NW.