ಕಾವಲಿನಬುರುಜು ಮತ್ತು ಎಚ್ಚರ!—ಸತ್ಯದ ಸಮಯೋಚಿತ ಪತ್ರಿಕೆಗಳು
“ಯೆಹೋವನೇ, ನಂಬಿಕೆಯುಳ್ಳ ದೇವರೇ, ನನ್ನನ್ನು ವಿಮೋಚಿಸಿದ್ದೀ.”—ಕೀರ್ತನೆ 31:5.
1, 2. (ಎ) ಕಾವಲಿನಬುರುಜು ಪತ್ರಿಕೆಯಲ್ಲಿ ಒಂದು ವಿಷಯದ ಕುರಿತು ಓದಿದ ಸಹೋದರಿಗೆ ಹೇಗನಿಸಿತು? (ಬಿ) ನಮ್ಮ ಪತ್ರಿಕೆಗಳ ಬಗ್ಗೆ ಯಾವ ಪ್ರಶ್ನೆಗಳು ಕೇಳಲ್ಪಡುತ್ತವೆ?
“‘ಸಂಕಟದ ಸಮಯಗಳಲ್ಲಿ ನೀವು ಸಂತೈಸುವಿಕೆಯನ್ನು ಕಂಡುಕೊಳ್ಳಬಲ್ಲಿರಿ,’a ಎಂಬ ಕಾವಲಿನಬುರುಜುವಿನ ಲೇಖನದಲ್ಲಿನ ಆಶ್ಚರ್ಯಕರ ಮಾಹಿತಿಗಾಗಿ ನಿಮಗೆ ಬಹಳಷ್ಟು ಉಪಕಾರಗಳು. ನೀವು ಹೊರತಂದವುಗಳಲ್ಲಿ ಅನೇಕ ವಿಷಯಗಳು ನಾನು ಯಾವವುಗಳನ್ನು ನಿಭಾಯಿಸಬೇಕಾಗಿತ್ತೋ ಅದಕ್ಕೆ ಸಮಾನವಾಗಿದ್ದ ಭಾವನೆಗಳಾಗಿದ್ದವು; ಈ ಲೇಖನವು ನೇರವಾಗಿ ನನಗೆ ಬರೆಯಲ್ಪಟ್ಟಂತಿತ್ತು. ಮೊದಲ ಸಲ ಅದನ್ನು ಓದಿದಾಗ, ನನ್ನ ಕಣ್ಣುಗಳಲ್ಲಿ ಅಶ್ರು ಹರಿಯಿತು. ನನಗೆ ಹೇಗೆ ಅನಿಸುತ್ತದೆ ಎಂಬುದನ್ನು ಇನ್ನೊಬ್ಬರು ತಿಳಿದಿದ್ದಾರೆಂದು ಅರಿಯುವುದು ಎಷ್ಟೊಂದು ಅದ್ಭುತಕರವಾಗಿದೆ! ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರುವುದಕ್ಕೆ ಬಹಳ ಅಭಾರಿ. ಸಮೀಪದ ಭವಿಷ್ಯದಲ್ಲಿ ಪ್ರಮೋದವನದಲ್ಲಿ ನಿತ್ಯ ಜೀವದ ವಾಗ್ದಾನಗಳನ್ನು ಮತ್ತು, ಈಗ, ನಮ್ಮ ಆತ್ಮಗಳಿಗೆ ಸಾಂತ್ವನವನ್ನು ನಾವು ಇನ್ನೆಲ್ಲಿ ಕಂಡುಕೊಳ್ಳಬಲ್ಲೆವು! ನಿಮಗೆ ಉಪಕಾರ. ನಿಮಗೆ ಲಕ್ಷಗಟ್ಟಲೆ ಉಪಕಾರ,” ಎಂದು ಒಬ್ಬ ಕ್ರೈಸ್ತ ಸಹೋದರಿ ಬರೆದಳು.
2 ನಿಮಗೆಂದಾದರೂ ಆ ರೀತಿಯ ಭಾವನೆ ಉಂಟಾಗಿದೆಯೊ? ಕಾವಲಿನಬುರುಜು ಯಾ ಅದರ ಸಂಗಾತಿ ಪತ್ರಿಕೆ, ಎಚ್ಚರ!ದಲ್ಲಿನ ಯಾವುದೇ ವಿಷಯವು, ವಿಶೇಷವಾಗಿ ನಿಮಗಾಗಿಯೆ ಬರೆಯಲ್ಪಟ್ಟಿದೆ ಎಂದು ಎಂದಾದರೂ ತೋಚಿದೆಯೊ? ನಮ್ಮ ಪತ್ರಿಕೆಗಳಲ್ಲಿ ಜನರ ಹೃದಯಗಳನ್ನು ಸೆರೆ ಹಿಡಿಯುವಂಥಾದ್ದು ಏನಿದೆ? ಅವುಗಳಲ್ಲಿ ಅಡಗಿರುವ ಜೀವ ರಕ್ಷಕ ಸಂದೇಶದಿಂದ ಪ್ರಯೋಜನ ಹೊಂದಲು ಇತರರಿಗೆ ನಾವು ಹೇಗೆ ಸಹಾಯ ಮಾಡಬಲ್ಲೆವು?—1 ತಿಮೊಥೆಯ 4:16.
ಸತ್ಯವನ್ನು ಸಮರ್ಥಿಸುವ ಪತ್ರಿಕೆಗಳು
3. ಯಾವ ಉತ್ತಮ ಕಾರಣಗಳಿಗಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅನೇಕ ಓದುಗರ ಹೃದಯವನ್ನು ಸ್ಪರ್ಶಿಸಿವೆ?
3 ಯೆಹೋವನು “ನಂಬಿಕೆಯುಳ್ಳ [ಸತ್ಯದ, NW] ದೇವರು.” (ಕೀರ್ತನೆ 31:5) ಆತನ ವಾಕ್ಯವಾದ ಬೈಬಲ್ ಸತ್ಯದ ಪುಸ್ತಕವಾಗಿದೆ. (ಯೋಹಾನ 17:17) ಪ್ರಾಮಾಣಿಕ ಹೃದಯದ ಜನರು ಸತ್ಯಕ್ಕೆ ಪ್ರತಿಕ್ರಿಯಿಸುತ್ತಾರೆ. (ಹೋಲಿಸಿ ಯೋಹಾನ 4:23, 24.) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಲಕ್ಷಗಟ್ಟಲೆ ಓದುಗರ ಹೃದಯಗಳನ್ನು ಸ್ಪರ್ಶಿಸಿರುವ ಒಂದು ಕಾರಣವು, ಅವುಗಳು ಸಮಗ್ರತೆ ಮತ್ತು ಸತ್ಯದ ಪತ್ರಿಕೆಗಳಾಗಿವೆ. ನಿಜತ್ವದಲ್ಲಿ, ಬೈಬಲ್ ಸತ್ಯದ ನಿಷ್ಠೆಯ ವಿವಾದದ ಮೇಲೆ ಕಾವಲಿನಬುರುಜು ಪ್ರಕಾಶಿಸಲ್ಪಡಲಾರಂಭಿಸಿತು.
4, 5. (ಎ) ಸಿ. ಟಿ. ರಸಲ್ರು ಕಾವಲಿನಬುರುಜು ಪತ್ರಿಕೆಯನ್ನು ಪ್ರಕಾಶಿಸುವಂತೆ ನಡೆಸಿದ ಪರಿಸ್ಥಿತಿಗಳು ಯಾವುವು? (ಬಿ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಕಾವಲಿನಬುರುಜು ಪತ್ರಿಕೆಯು ಹೇಗೆ ಉಪಯೋಗಿಸಲ್ಪಡುತ್ತಿದೆ?
4 ಚಾರ್ಲ್ಸ್ ಟಿ. ರಸಲ್ರು 1876 ರಲ್ಲಿ, ನ್ಯೂ ಯಾರ್ಕ್ನ, ರಾಚೆಸ್ಟರ್ನಲ್ಲಿನ ನೆಲ್ಸನ್ ಏಚ್. ಬಾರ್ಬರ್ರೊಂದಿಗೆ ಜತೆಗೂಡಿದ್ದರು. ಬಾರ್ಬರ್ ಮುಖ್ಯ ಸಂಪಾದಕರಾಗಿ ಮತ್ತು ರಸಲ್ ಸಹಾಯಕ ಸಂಪಾದಕರಾಗುವುದರೊಂದಿಗೆ, ಬಾರ್ಬರರ ಹೆರಲ್ಡ್ ಆಫ್ ದ ಮಾರ್ನಿಂಗ್ ಎಂಬ ಧಾರ್ಮಿಕ ನಿಯತ ಕಾಲಿಕದ ಮುದ್ರಣವನ್ನು ಪುನರುಜ್ಜೀವನ ಮಾಡಲು ರಸಲ್ರು ಹಣಕಾಸನ್ನು ಒದಗಿಸಿದರು. ಆದಾಗ್ಯೂ, ಸಾಧಾರಣ ಒಂದುವರೆ ವರುಷಾನಂತರ, 1878ರ ಅಗಸ್ಟ್ನಲ್ಲಿ ಹೆರಲ್ಡ್ನ ಸಂಚಿಕೆಯಲ್ಲಿ, ಕ್ರಿಸ್ತನ ಮರಣದ ವಿಮೋಚನಾ ಮೌಲ್ಯವನ್ನು ಅಲ್ಲಗಳೆದ ಒಂದು ಲೇಖನವನ್ನು ಬಾರ್ಬರ್ ಬರೆದರು. ಬಾರ್ಬರ್ಗಿಂತ 30 ವರುಷ ಎಳೆಯರಾದ ರಸಲ್ರು, ಮುಂದಿನ ಸಂಚಿಕೆಯಲ್ಲೇ “ದೇವರ ವಾಕ್ಯದ ಅತಿ ಪ್ರಾಮುಖ್ಯ ಬೋಧನೆಗಳಲ್ಲಿ ಒಂದು” ಎಂದು ಉಲ್ಲೇಖಿಸಿ, ಪ್ರಾಯಶ್ಚಿತವ್ತನ್ನು ಎತ್ತಿ ಹಿಡಿದ ಒಂದು ಲೇಖನದೊಂದಿಗೆ ಪ್ರತಿಕ್ರಿಯಿಸಿದರು. (ಮತ್ತಾಯ 20:28) ಬಾರ್ಬರ್ರೊಂದಿಗೆ ಶಾಸ್ತ್ರೀಯವಾಗಿ ವಿವೇಚಿಸಲು ಸಂತತವಾದ ಪ್ರಯತ್ನಗಳಾನಂತರ, ಅಂತಿಮವಾಗಿ ರಸಲ್ರು ಹೆರಲ್ಡ್ನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿಯಲು ನಿರ್ಧರಿಸಿದರು. ಆ ಪತ್ರಿಕೆಯ ಜೂನ್ 1879ರ ಸಂಚಿಕೆಯಿಂದಾರಂಭಿಸಿ, ರಸಲ್ರ ಹೆಸರು ಒಬ್ಬ ಸಹಾಯಕ ಸಂಪಾದಕರಾಗಿ ಕಂಡುಬರಲಿಲ್ಲ. ಒಂದು ತಿಂಗಳಾನಂತರ, 27 ವರುಷ ಪ್ರಾಯದ ರಸಲ್ರು, ಮೊದಲಿನಿಂದಲೂ ಪ್ರಾಯಶ್ಚಿತದ್ತ ಶಾಸ್ತ್ರೀಯ ಸತ್ಯವನ್ನು ಎತ್ತಿಹಿಡಿದ, ಜೈಅನ್ಸ್ ವಾಚ್ಟವರ್ ಆ್ಯಂಡ್ ಹೆರಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ (ದ ವಾಚ್ಟವರ್ ಅನೌನ್ಸಿಂಗ್ ಜಿಹೋವಜ್ ಕಿಂಗ್ಡಮ್ ಎಂದು ಈಗ ಪ್ರಸಿದ್ಧ) ಪ್ರಕಾಶಿಸಲು ಆರಂಭಿಸಿದರು.
5 ಕಳೆದ 114 ವರುಷಗಳಲ್ಲಿ, ಕಾವಲಿನಬುರುಜು, ಕುಶಲ ವಕೀಲನೋಪಾದಿ, ಬೈಬಲ್ ಸತ್ಯ ಮತ್ತು ತತ್ವದ ರಕ್ಷಕನಾಗಿ ತನ್ನನ್ನೇ ಸ್ಥಾಪಿಸಿಕೊಂಡಿದೆ. ಪ್ರಕ್ರಿಯೆಯಲ್ಲಿ, ಅದು ಲಕ್ಷಗಟ್ಟಲೆ ಗಣ್ಯತೆಯ ಓದುಗರ ಭರವಸೆಯನ್ನು ಜಯಿಸಿದೆ. ಅದು ಇನ್ನೂ ಬಲವತ್ತಾಗಿ ಪ್ರಾಯಶ್ಚಿತವ್ತನ್ನು ಬೆಂಬಲಿಸುತ್ತದೆ. (ಉದಾಹರಣೆಗಾಗಿ, ಸಪ್ಟಂಬರ 15, 1992ರ ಸಂಚಿಕೆ 3-7 ಪುಟಗಳನ್ನು ನೋಡಿರಿ.) ಮತ್ತದು ಯೆಹೋವನ ಸ್ಥಾಪಿತ ರಾಜ್ಯದ ಘೋಷಣೆಗಾಗಿ ಮತ್ತು “ಹೊತ್ತುಹೊತ್ತಿಗೆ” ಆತ್ಮಿಕ ಆಹಾರವನ್ನು ಹಂಚುವುದಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮತ್ತು ಆಡಳಿತ ಮಂಡಳಿಯ ಮುಖ್ಯ ಸಾಧನವಾಗಿ ಮುಂದರಿಯುತ್ತಿದೆ.—ಮತ್ತಾಯ 24:14, 45.
6, 7. ದ ಗೋಲ್ಡ್ನ್ ಏಜ್ ಪತ್ರಿಕೆಯ ನಮೂದಿತ ಉದ್ದೇಶವು ಏನಾಗಿತ್ತು, ಮತ್ತು ಆಲೋಚಿಸುವ ಜನರು ಅದರ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿದರೆಂದು ಯಾವುದು ತೋರಿಸುತ್ತದೆ?
6 ಎಚ್ಚರ! ಪತ್ರಿಕೆಯ ವಿಷಯದಲ್ಲೇನು? ಅದರ ಆರಂಭದಿಂದ, ಎಚ್ಚರ!ವು ಕೂಡ ಸತ್ಯವನ್ನು ಸಮರ್ಥಿಸಿದೆ. ಆರಂಭದಲ್ಲಿ ದ ಗೋಲ್ಡ್ನ್ ಏಜ್ ಎಂದು ಕರೆಯಲ್ಪಟ್ಟ ಈ ಪತ್ರಿಕೆಯು ಸಾರ್ವಜನಿಕ ಹಂಚುವಿಕೆಗಾಗಿ ರಚಿತವಾಗಿತ್ತು. ಅದರ ಉದ್ದೇಶದ ಕುರಿತು, ಅದರ ಮೊದಲ ಸಂಚಿಕೆ, ಅಕ್ಟೋಬರ 1, 1919, ನಮೂದಿಸಿದ್ದು: “ಪ್ರಸ್ತುತ ದಿನದ ಮಹಾ ಘಟನೆಯ ನಿಜ ಅರ್ಥವನ್ನು ದೈವಿಕ ವಿವೇಕದ ಬೆಳಕಿನಲ್ಲಿ ವಿವರಿಸುವುದು ಮತ್ತು ಮಾನವಕುಲದ ಮಹತ್ತರವಾದ ಆಶೀರ್ವಾದದ ಸಮಯವು ಹತ್ತರವದೆ ಎಂಬದನ್ನು ನಿರ್ವಿವಾದದ ಮತ್ತು ಮನಗಾಣಿಸುವ ರುಜುವಾತಿನ ಮೂಲಕ ಆಲೋಚಿಸುವ ಮನಸ್ಸುಗಳಿಗೆ ದೃಢಪಡಿಸುವುದು ಇದರ ಉದ್ದೇಶವಾಗಿದೆ.” ಆಲೋಚಿಸುವ ಜನರು ದ ಗೋಲ್ಡ್ನ್ ಏಜ್ ಪತ್ರಿಕೆಯ ಸಂದೇಶಕ್ಕೆ ಪ್ರತಿಕ್ರಿಯಿಸಿದರು. ಅನೇಕ ವರುಷಗಳ ವರೆಗೆ, ಅದರ ಹಂಚಿಕೆಯು ಕಾವಲಿನಬುರುಜು ಪತ್ರಿಕೆಯ ಹಂಚಿಕೆಗಿಂತಲೂ ಮಹತ್ತರವಾಗಿತ್ತು.b
7 ಆದಾಗ್ಯೂ, ಕಾವಲಿನಬುರುಜು ಮತ್ತು ಎಚ್ಚರ!ದ ಅಪೀಲು, ಅವು ತಾತ್ವಿಕ ಸತ್ಯವನ್ನು ಪ್ರಕಾಶಿಸುವ ಮತ್ತು ಲೋಕ ಪರಿಸ್ಥಿತಿಗಳ ಪ್ರವಾದನಾ ಮಹತ್ವವನ್ನು ವಿವರಿಸುವ ನಿಜತ್ವಕ್ಕಿಂತ ಮುಂದಕ್ಕೆ ಹೋಗುತ್ತದೆ. ವಿಶೇಷವಾಗಿ ಕಳೆದ ಎರಡು ಅಥವಾ ಮೂರು ದಶಕಗಳಲ್ಲಿ, ನಮ್ಮ ಪತ್ರಿಕೆಗಳು ಮತ್ತೊಂದು ಕಾರಣಕ್ಕಾಗಿಯೂ ಜನರ ಹೃದಯಗಳನ್ನು ಸೆರೆಹಿಡಿದಿವೆ.
ಜನರ ಜೀವಿತಗಳನ್ನು ತಾಕುವ ಸಮಯೋಚಿತ ಲೇಖನಗಳು
8. ಸಭೆಯೊಳಗಿನ ಯಾವ ಪ್ರಭಾವಗಳನ್ನು ತಡೆಯುವಂತೆ ತನ್ನ ಓದುಗರನ್ನು ಪ್ರಚೋದಿಸುತ್ತಾ, ಬರವಣಿಗೆಯ ಯಾವ ಹೊಂದಾಣಿಕೆಯನ್ನು ಯೂದನು ಮಾಡಿದನು?
8 ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಸಾಧಾರಣ 30 ವರುಷಗಳ ಬಳಿಕ, ಬೈಬಲ್ ಬರಹಗಾರ ಯೂದನು ಒಂದು ಆಹ್ವಾನಾತ್ಮಕ ಪರಿಸ್ಥಿತಿಯನ್ನು ಎದುರಿಸಿದನು. ಅನೈತಿಕ, ಮೃಗೀಯ ಪುರುಷರು ಕ್ರೈಸ್ತರೊಳಗೆ ನುಸುಳಿದ್ದರು. ಯೂದನು ಜೊತೆ ಕ್ರೈಸ್ತರಿಗೆ, ಒಂದು ತಾತ್ವಿಕ ವಿಷಯದ—ಅಭಿಷಿಕ್ತ ಕ್ರೈಸ್ತರು ಸಾಮಾನ್ಯತೆಯಲ್ಲಿ ಹಿಡಿದಿರುವ ರಕ್ಷಣೆಯ—ಕುರಿತು ಬರೆಯಬೇಕೆಂದು ಉದ್ದೇಶಿಸಿದ್ದನು. ಅದರ ಬದಲಾಗಿ, ಪವಿತಾತ್ಮದ ಮೂಲಕ ಮಾರ್ಗದರ್ಶಿಸಲ್ಪಟ್ಟು, ಸಭೆಯೊಳಗಿನ ಭ್ರಷ್ಟಗೊಳಿಸುವ ಪ್ರಭಾವವನ್ನು ತಡೆಯಲು ತನ್ನ ಓದುಗರನ್ನೇ ಪ್ರಚೋದಿಸುವುದು ಅಗತ್ಯವೆಂದು ಕಂಡುಕೊಂಡನು. (ಯೂದ 3, 4, 19-23) ಯೂದನು ಪರಿಸ್ಥಿತಿಗೆ ಹೊಂದಿಕೊಂಡನು ಮತ್ತು ಅವನ ಕ್ರೈಸ್ತ ಸಹೋದರರ ಅಗತ್ಯಗಳನ್ನು ಪೂರೈಸಿದ ಸಮಯೋಚಿತ ಸಲಹೆಯನ್ನು ಒದಗಿಸಿದನು.
9. ನಮ್ಮ ಪತ್ರಿಕೆಗಳಿಗೆ ಸಮಯೋಚಿತ ಲೇಖನಗಳನ್ನು ಒದಗಿಸುವುದರಲ್ಲಿ ಏನು ಒಳಗೂಡಿದೆ?
9 ಅದೇ ರೀತಿಯಲ್ಲಿ, ನಮ್ಮ ಪತ್ರಿಕೆಗಳಿಗೆ ಸಮಯೋಚಿತ ಲೇಖನಗಳನ್ನು ತಯಾರಿಸುವುದು ಒಂದು ಆಹ್ವಾನಾತ್ಮಕ ಜವಾಬ್ದಾರಿಯಾಗಿದೆ. ಸಮಯಗಳು ಬದಲಾಗುತ್ತವೆ, ಮತ್ತು ಅದರಂತೆಯೆ ಜನರೂ ಬದಲಾಗುತ್ತಾರೆ—ಅವರ ಆವಶ್ಯಕತೆಗಳು ಮತ್ತು ಅಭಿರುಚಿಗಳು ಒಂದು ಯಾ ಎರಡು ದಶಕಗಳ ಹಿಂದೆ ಇದ್ದಂತೆಯೂ ಈಗ ಇಲ್ಲ. ಒಬ್ಬ ಸಂಚರಣಾ ಮೇಲ್ವಿಚಾರಕನು ಇತ್ತೀಚೆಗೆ ಅವಲೋಕಿಸಿದ್ದು: “ನಾನು ಹಿಂದೆ 1950 ಗಳಲ್ಲಿ ಸಾಕ್ಷಿಯಾದಾಗ, ಜನರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸಲು ಇದ್ದ ಸಮೀಪಿಸುವಿಕೆಯು ಮೂಲತಃ ತತ್ವ ಸಂಬಂಧವಾಗಿತ್ತು—ಅವರಿಗೆ ತ್ರಯೈಕ್ಯ, ನರಕಾಗ್ನಿ, ಆತ್ಮ, ಮುಂತಾದವುಗಳ ಕುರಿತು ಸತ್ಯವನ್ನು ಕಲಿಸುವುದಾಗಿತ್ತು. ಆದರೆ ಈಗ, ಜನರ ಜೀವಿತಗಳಲ್ಲಿ ಎಷ್ಟೊಂದು ಸಮಸ್ಯೆ ಮತ್ತು ತೊಂದರೆಗಳಿರುವುದರಿಂದ ನಾವು ಅವರಿಗೆ ಹೇಗೆ ಜೀವಿಸುವುದು ಎಂದು ಕಲಿಸಬೇಕೆಂದು ತೋರುತ್ತದೆ.” ಇದು ಯಾಕೆ ಹೀಗಿದೆ?
10. ಇಸವಿ 1914 ರಿಂದ ಮಾನವ ವ್ಯವಹಾರಗಳಲ್ಲಿ ಏಕಪ್ರಕಾರದ ಅವನತಿ ಹೊಂದುವಿಕೆಯು ನಮ್ಮನ್ನು ಚಕಿತರನ್ನಾಗಿ ಮಾಡಬಾರದು ಯಾಕೆ?
10 “ಕಡೇ ದಿವಸಗಳ” ಕುರಿತು, ಬೈಬಲ್ ಮುಂತಿಳಿಸಿದ್ದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1, 13) ಆದುದರಿಂದ, ಇಸವಿ 1914 ರಲ್ಲಿ ಅಂತ್ಯದ ಸಮಯ ಆರಂಭವಾದಂದಿನಿಂದ ಮಾನವ ವ್ಯವಹಾರಗಳಲ್ಲಿ ಏಕಪ್ರಕಾರದ ಅವನತಿ ಹೊಂದುವಿಕೆಯು ನಮ್ಮನ್ನು ಚಕಿತರನ್ನಾಗಿ ಮಾಡಬಾರದು. ಯಾರ ಉಳಿದ ಸಮಯವು ಎಂದಿಗಿಂತಲೂ ಕೊಂಚವಿದೆಯೋ ಆ ಸೈತಾನನು, ಹಿಂದೆ ಎಂದೂ ಮಾಡಿರದಂತಹ ರೀತಿಯಲ್ಲಿ ಮಾನವ ಸಮಾಜದ ಮೇಲೆ ತನ್ನ ಕೋಪವನ್ನು ಕಾರುತ್ತಿದ್ದಾನೆ. (ಪ್ರಕಟನೆ 12:9, 12) ಫಲಿತಾಂಶವಾಗಿ, ನೈತಿಕ ಮತ್ತು ಕುಟುಂಬ ಮೌಲ್ಯಗಳು ಕೇವಲ 30 ಯಾ 40 ವರುಷಗಳ ಹಿಂದೆ ಏನಾಗಿದವ್ದೊ ಅದಕ್ಕಿಂತ ಅತಿ ಭಿನ್ನವಾಗಿವೆ. ಜನರು ಸಾಮಾನ್ಯವಾಗಿ ಕಳೆದ ದಶಕಗಳಲ್ಲಿದ್ದಷ್ಟು ಧಾರ್ಮಿಕ ಪ್ರವೃತ್ತಿಯುಳ್ಳವರಾಗಿಲ್ಲ. ಪಾತಕವು ಎಷ್ಟೊಂದು ಹಬ್ಬಿದೆಯೆಂದರೆ, ಕೇವಲ 20 ಯಾ 30 ವರುಷಗಳ ಹಿಂದೆ ಕೇಳಿರದ ಮುಂಜಾಗರೂಕತೆಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ.—ಮತ್ತಾಯ 24:12.
11. (ಎ) ಯಾವ ವಿಧದ ವಿಷಯಗಳು ಜನರ ಮನಸ್ಸಿನೊಳಗಿವೆ, ಮತ್ತು ನಂಬಿಗಸ್ತ ಮತ್ತು ವಿವೇಕಿ ಆಳು ವರ್ಗವು ಈ ಅಗತ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದೆ? (ಬಿ) ನಿಮ್ಮ ಜೀವಿತವನ್ನು ಸ್ಪರ್ಶಿಸಿರುವ ಕಾವಲಿನಬುರುಜು ಯಾ ಒಂದು ಎಚ್ಚರ! ಲೇಖನದ ಉದಾಹರಣೆಯನ್ನು ಕೊಡಿರಿ.
11 ಅನೇಕ ಜನರ ಮನಸ್ಸುಗಳಲ್ಲಿ ಭಾವನಾತ್ಮಕ, ಸಾಮಾಜಿಕ, ಮತ್ತು ಕುಟುಂಬ, ವಿವಾದಗಳಿರುವುದು ಆಶ್ಚರ್ಯವಾದದ್ದಲ್ಲ. ನಂಬಿಗಸ್ತ ಮತ್ತು ವಿವೇಕಿ ಆಳು ವರ್ಗವು ಜನರ ನಿಜ ಅಗತ್ಯಗಳೊಂದಿಗೆ ವ್ಯವಹರಿಸುವ ಸಮಯೋಚಿತ ಲೇಖನಗಳ ಮೂಲಕ ಕಾವಲಿನಬುರುಜು ಮತ್ತು ಎಚ್ಚರ!ಗಳಲ್ಲಿ ಧೈರ್ಯದಿಂದ ಪ್ರತಿಕ್ರಿಯಿಸಿದೆ ಮತ್ತು ಅವುಗಳು ನಿಜಕ್ಕೂ ಅವರ ಜೀವಿತಗಳನ್ನು ಸ್ಪರ್ಶಿಸಿವೆ. ಕೆಲವು ಉದಾಹರಣೆಗಳನ್ನು ಗಮನಿಸಿರಿ.
12. (ಎ)ಇಸವಿ 1980 ರಲ್ಲಿ ಕಾವಲಿನಬುರುಜುಗಾಗಿ ಏಕ ಹೆತ್ತವರ ಕುಟುಂಬಗಳ ಕುರಿತು ಲೇಖನಗಳನ್ನು ಯಾಕೆ ತಯಾರಿಸಲಾಗಿತ್ತು? (ಬಿ) ಏಕ ಹೆತ್ತವರ ಕುಟುಂಬಗಳ ಮೇಲಿನ ಲೇಖನಗಳಿಗಾಗಿ ಒಬ್ಬ ಸಹೋದರಿಯು ಆಕೆಯ ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದಳು?
12 ಕುಟುಂಬ ವಿವಾದಾಂಶಗಳು. ಏಕ ಹೆತ್ತವರ ಕುಟುಂಬಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳವನ್ನು ಲೋಕವ್ಯಾಪಕ ವರದಿಯು ತೋರಿಸಿದಾಗ, ಕಾವಲಿನಬುರುಜುವಿನ ಸಪ್ಟಂಬರ 15, 1980ರ ಸಂಚಿಕೆಗಾಗಿ “ಏಕ ಹೆತ್ತವರ ಕುಟುಂಬಗಳು—ಸಮಸ್ಯೆಗಳೊಂದಿಗೆ ನಿಭಾಯಿಸುವುದು” ಎಂಬ ಮುಖ್ಯ ವಿಷಯದ ಮೇಲೆ ಹೊಸ ರೀತಿಯ ಲೇಖನಗಳು ತಯಾರಿಸಲ್ಪಟ್ಟವು. ಆ ಲೇಖನಗಳಿಗೆ ಇಮ್ಮಡಿ ಉದ್ದೇಶವಿತ್ತು: (1) ತಾವು ಎದುರಿಸುವ ಅಪೂರ್ವ ಸಮಸ್ಯೆಗಳೊಂದಿಗೆ ನಿಭಾಯಿಸುವಂತೆ ಏಕ ಹೆತ್ತವರಿಗೆ ಸಹಾಯಿಸುವುದು ಮತ್ತು (2) ಇತರರು “ಪರರ ಸುಖದುಃಖಗಳಲ್ಲಿ ಸೇರುವವರಾಗಲು” ಮತ್ತು ಏಕ ಹೆತ್ತವರ ಕುಟುಂಬಗಳನ್ನು ಸಾಚಾಗಿ “ಪರಾಮರಿಸಲು” ಉತ್ತಮ ಮಾಹಿತಿಯುಳ್ಳವರಾಗಲು ಸಹಾಯಿಸುವುದು. (1 ಪೇತ್ರ 3:8; ಯಾಕೋಬ 1:27) ಈ ಲೇಖನಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತ, ಅನೇಕ ಓದುಗರು ಬರೆದರು. ಒಬ್ಬ ಏಕ ಹೆತ್ತವಳು ಬರೆದದ್ದು: “ನಾನು ಮುಖಪುಟವನ್ನು ನೋಡಿದಾಗ ಅದು ನಿಜಕ್ಕೂ ನನ್ನ ಕಣ್ಣುಗಳಲ್ಲಿ ನೀರನ್ನು ತಂದಿತು, ಮತ್ತು ನಾನು ಪತ್ರಿಕೆಯನ್ನು ತೆರೆದಾಗ ಮತ್ತು ಮಾಹಿತಿಯನ್ನು ಓದಿದಾಗ, ಅಗತ್ಯವಾದ ಸಮಯದಲ್ಲಿ ಅಂತಹ ಮಾಹಿತಿಯನ್ನು ಒದಗಿಸಿದಕ್ಕಾಗಿ ನನ್ನ ಹೃದಯವು ಯೆಹೋವನಿಗೆ ಕೃತಜ್ಞತೆಯಿಂದ ತುಂಬಿ ಹರಿಯಿತು.”
13. ಇಸವಿ 1981 ರಲ್ಲಿನ ಎಚ್ಚರ!ದಲ್ಲಿ ಖಿನ್ನತೆಯ ಕುರಿತು ಯಾವ ಆಳವಾದ ಚರ್ಚೆಯು ಪ್ರಕಾಶಿಸಲ್ಪಟ್ಟಿತ್ತು, ಮತ್ತು ಅದರ ಕುರಿತು ಒಬ್ಬ ಓದುಗನಿಗೆ ಏನನ್ನು ಹೇಳಲಿಕ್ಕಿದೆ?
13 ಭಾವನಾತ್ಮಕ ವಿವಾದಾಂಶಗಳು. ಖಿನ್ನತೆಯ ವಿಷಯವನ್ನು 1960 ಗಳಿಂದ ಕಾವಲಿನಬುರುಜು ಮತ್ತು ಎಚ್ಚರ!ಗಳಲ್ಲಿ ಚರ್ಚಿಸಲಾಗುತ್ತಿದೆ. (1 ಥೆಸಲೊನೀಕ 5:14) ಆದರೆ ಸಪ್ಟಂಬರ 8, 1981ರ ಎಚ್ಚರ!ದಲ್ಲಿನ “ನೀವು ಖಿನ್ನತೆಯೊಂದಿಗೆ ಹೋರಾಡಬಲ್ಲಿರಿ!” ಎಂಬ ಮುಖಪುಟ ಲೇಖನ ಮಾಲೆಯಲ್ಲಿ ಆ ವಿಷಯದ ಮೇಲೆ ಒಂದು ಹೊಸ ಮತ್ತು ಸಕಾರಾತ್ಮಕ ನೋಟವು ತೆಗೆದುಕೊಳ್ಳಲ್ಪಟ್ಟಿತು. ಲೋಕದ ಎಲ್ಲಾ ಭಾಗಗಳಿಂದ ಗಣ್ಯತೆಯ ಪತ್ರಗಳು ವಾಚ್ ಟವರ್ ಸೊಸೈಟಿಯೊಳಗೆ ಹರಿದು ಬಂದವು. ಒಬ್ಬ ಸಹೋದರಿಯು ಬರೆದದ್ದು: “ನನ್ನ ಹೃದಯದೊಳಗಿನ ಭಾವನೆಗಳನ್ನು ನಾನು ಕಾಗದದ ಮೇಲೆ ಹೇಗೆ ವ್ಯಕ್ತಪಡಿಸಬಲ್ಲೆನು? ನಾನು 24 ವರ್ಷ ಪ್ರಾಯದವಳು, ಮತ್ತು ಕಳೆದ ಹತ್ತು ವರ್ಷಗಳಲ್ಲಿ, ಖಿನ್ನತೆಯ ಅನೇಕ ಅವಧಿಗಳು ನನಗಿದ್ದವು. ಆದರೆ ಈಗ ನಾನು ಯೆಹೋವನ ಸಮೀಪಕ್ಕೆ ಬಂದ ಅನುಭವ ನನಗಾಗುತ್ತಿದೆ ಮತ್ತು ಈ ಲೇಖನಗಳೊಂದಿಗೆ ಖಿನ್ನ ಜನರ ಅಗತ್ಯಗಳಿಗೆ ಆತನು ಪ್ರತಿಕ್ರಿಯಿಸಿದಕ್ಕಾಗಿ ಅಭಾರಿಯಾಗಿರುತ್ತೇನೆ, ಮತ್ತು ನಾನಿದನ್ನು ನಿಮಗೆ ಹೇಳಬಯಸಿದ್ದೆ.”
14, 15. (ಎ) ಮಕ್ಕಳ ದುರುಪಯೋಗದ ವಿಷಯವು ನಮ್ಮ ಪತ್ರಿಕೆಗಳಲ್ಲಿ ಹೇಗೆ ವ್ಯವಹರಿಸಲ್ಪಟ್ಟಿದೆ? (ಬಿ) ಆಸ್ಟ್ರೇಲಿಯದಲ್ಲಿನ ಜೂಜುಕುದುರೆಯ ಸವಾರನಿಗೆ ಪತ್ರಿಕೆಯ ಯಾವ ಲೇಖನಗಳು ಹೆಚ್ಚು ಪರಿಣಾಮವುಂಟುಮಾಡಿದವು?
14 ಸಾಮಾಜಿಕ ವಿವಾದಾಂಶಗಳು. “ಕಡೇ ದಿವಸಗಳಲ್ಲಿ . . . ಮನುಷ್ಯರು ಸ್ವಾರ್ಥಚಿಂತಕರೂ . . . ಮಮತೆಯಿಲ್ಲದವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಆಗಿರುವರೆಂದು ಬೈಬಲ್ ಮುಂತಿಳಿಸಿತು. (2 ತಿಮೊಥೆಯ 3:1-3) ಆದುದರಿಂದ, ಇಂದು ಅಧಿಕ ಪ್ರಮಾಣದಲ್ಲಿ ಮಕ್ಕಳ ದುರುಪಯೋಗವು ಆಚರಿಸಲ್ಪಡುವುದು ನಮ್ಮನ್ನು ಚಕಿತರನ್ನಾಗಿ ಮಾಡಬಾರದು. ಅಕ್ಟೋಬರ 1, 1983ರ ಕಾವಲಿನಬುರುಜುವಿನಲ್ಲಿನ “ಅಗಮ್ಯ ಗಮನದ ಬಲಿಗಳಿಗಾಗಿ ಸಹಾಯ” ಎಂಬ ಲೇಖನದಲ್ಲಿ ಈ ವಿಷಯಕ್ಕೆ ನೇರ ಚಿಕಿತ್ಸೆಯು ಕೊಡಲ್ಪಟ್ಟಿತ್ತು. ಎಂಟು ವರುಷಗಳ ಬಳಿಕ, ಎಚ್ಚರ!ದ ಅಕ್ಟೋಬರ 8, 1991 ರಲ್ಲಿನ “ಮಕ್ಕಳ ದುರುಪಯೋಗದ ಗಾಯಗಳನ್ನು ಗುಣಪಡಿಸುವುದು” ಎಂಬ ಮುಖಪುಟ ಸರಣಿಯನ್ನು, ಬಲಿಯಾದವರಿಗೆ ತಿಳಿವಳಿಕೆಯನ್ನು ಮತ್ತು ನಿರೀಕ್ಷೆಯನ್ನು ಒದಗಿಸಲಿಕ್ಕಾಗಿ ಮತ್ತು ಉಪಯುಕಕ್ತರ ಸಹಾಯವನ್ನು ನೀಡಲಾಗುವಂತೆ ಇತರರಿಗೆ ಜ್ಞಾನೋದಯವನ್ನುಂಟು ಮಾಡಲಿಕ್ಕಾಗಿ, ಜಾಗರೂಕತೆಯಿಂದ ತಯಾರಿಸಲಾಗಿತ್ತು. ಈ ಲೇಖನಗಳ ಸರಣಿಯು ನಮ್ಮ ಪತ್ರಿಕೆಗಳ ಇತಿಹಾಸದಲ್ಲಿ ಅತ್ಯಂತ ಮಹತ್ತಾದ ಓದುಗರ ಪ್ರತಿಕ್ರಿಯೆಯನ್ನು ಹೊರಸೆಳೆಯಿತು. ಒಬ್ಬ ಒದುಗನು ಬರೆದದ್ದು: “ನನ್ನ ಚೇತರಿಸುವಿಕೆಯ ಮೇಲೆ ಮಹತ್ತಾದ ಅಪ್ಪಳಿಕೆಯು ಈ ಲೇಖನಗಳಲ್ಲಿನ ಸಂತೈಸುವಿಕೆಯ ಆಲೋಚನೆಗಳು ಮತ್ತು ಶಾಸ್ತ್ರೀಯ ಉಲ್ಲೇಖನಗಳಾಗಿದ್ದವು. ಯೆಹೋವನು ನನ್ನ ಬಗ್ಗೆ ಯಾವುದೇ ಕೀಳನ್ನು ಆಲೋಚಿಸಿಲ್ಲವೆಂದು ತಿಳಿಯುವುದು ಒಂದು ತಡೆಯಲಸಾಧ್ಯವಾದ ಬಿಡುಗಡೆಯಾಗಿತ್ತು. ನಾನು ಒಬ್ಬಂಟಿಗನಾಗಿಲ್ಲವೆಂದು ತಿಳಿಯುವುದೂ ಸಮಾನ ಸಂತೈಸುವಿಕೆಯಾಗಿತ್ತು.”
15 ಆಸ್ಟ್ರೇಲಿಯ, ಮೆಲ್ಬೇರ್ನ್ನಲ್ಲಿನ ಜೂಜುಕುದುರೆಯ ಸವಾರನೊಬ್ಬನು, ಕುದುರೆ ಓಟದ ಪರಿಸರದೊಂದಿಗಿನ ತನ್ನ ಹೇವರಿಕೆಯನ್ನು ಅಭಿವ್ಯಕ್ತಪಡಿಸುತ್ತಾ, ವಾಚ್ ಟವರ್ ಸೊಸೈಟಿಯ ಸಿಡ್ನಿ ಕಚೇರಿಗೆ ದೂರದ ಫೋನ್ ಕರೆಯನ್ನು ಮಾಡಿದನು. ಇದೀಗಲೇ ತಾನು “ಬಲಾತ್ಕಾರ ಸಂಭೋಗ—ಒಬ್ಬ ಮಹಿಳೆಯ ಘೋರ ಸ್ವಪ್ನ” ಎಂಬ ಮಾರ್ಚ್ 8, 1993ರ ಅವೇಕ್! ಪತ್ರಿಕೆಯನ್ನು ಓದಿದನೆಂದು ಮತ್ತು ಅಂಥ ಅಮೂಲ್ಯ ಪತ್ರಿಕೆಗಳು ಅಸ್ತಿತ್ವದಲ್ಲಿವೆ ಎಂದು ನಂಬಲು ಕಷ್ಟವೆಂದು ಅವನು ಹೇಳಿದನು. ಅವನು ಸಾಧರಣ 30 ನಿಮಿಷಗಳವರೆಗೆ ಪ್ರಶ್ನೆಗಳನ್ನು ಕೇಳಿದನು ಮತ್ತು ಕೊಡಲ್ಪಟ್ಟ ಉತ್ತರಗಳನ್ನು ಕೇಳಿ ಆನಂದಪಟ್ಟನು.
16. ನಮ್ಮ ಪತ್ರಿಕೆಗಳಿಗಾಗಿ ಯಾವ ವಿಧಾನಗಳಲ್ಲಿ ನಿಮ್ಮ ಗಣ್ಯತೆಯನ್ನು ನೀವು ಪ್ರದರ್ಶಿಸಬಲ್ಲಿರಿ?
16 ನಿಮ್ಮ ವಿಷಯದಲ್ಲೇನು? ಕಾವಲಿನಬುರುಜು ಯಾ ಎಚ್ಚರ!ದಲ್ಲಿ ಪ್ರಕಟಿಸಲಾದ ನಿರ್ದಿಷ್ಟ ಲೇಖನದ ಮೂಲಕ ನಿಮ್ಮ ಜೀವಿತವು ಸ್ಪರ್ಶಿಸಲ್ಪಟ್ಟಿದೆಯೊ? ಹಾಗಿರುವಲ್ಲಿ, ನಮ್ಮ ಪತ್ರಿಕೆಗಳಿಗಾಗಿ ಉಪಕಾರದ ಆಳವಾದ ಭಾವನೆಯು ನಿಮಗುಂಟಾಗಿರುವುದರಲ್ಲಿ ಸಂಶಯವಿಲ್ಲ. ನಿಮ್ಮ ಗಣ್ಯತೆಯನ್ನು ನೀವು ಹೇಗೆ ಪ್ರದರ್ಶಿಸುವಿರಿ? ನಿಜಕ್ಕೂ ಪ್ರತಿಯೊಂದು ಸಂಚಿಕೆಯನ್ನು ನೀವಾಗಿಯೆ ಓದುವುದರ ಮೂಲಕ. ಈ ಅಮೂಲ್ಯ ಪತ್ರಿಕೆಗಳನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ಹಂಚುವುದರಲ್ಲಿಯೂ ನೀವು ಭಾಗಿಗಳಾಗಬಲ್ಲಿರಿ. ಇದನ್ನು ಹೇಗೆ ಮಾಡಸಾಧ್ಯವಿದೆ?
ಅವುಗಳನ್ನು ಇತರರಿಗೆ ಹಂಚಿರಿ!
17. ಪತ್ರಿಕಾ ಹಂಚುವಿಕೆಯನ್ನು ಹೆಚ್ಚಿಸಲು ಸಭೆಗಳು ಏನು ಮಾಡಬಲ್ಲವು?
17 ಮೊದಲನೇದಾಗಿ, ಪ್ರತಿಯೊಂದು ಸಭೆಯು ಮಾಡಬಲ್ಲ ವಿಷಯವೊಂದಿದೆ. ಅಕ್ಟೋಬರ 1952ರ ಇನ್ಫಾರ್ಮಂಟ್ (ಈಗ ನಮ್ಮ ರಾಜ್ಯದ ಸೇವೆ) ಸಂಚಿಕೆಯು ತಿಳಿಸಿದ್ದು: “ಪತ್ರಿಕೆಗಳನ್ನು ಹಂಚುವ ಅತಿ ಪರಿಣಾಮಕಾರಿ ವಿಧಾನವು ಮನೆಯಿಂದ ಮನೆ ಮತ್ತು ಅಂಗಡಿಯಿಂದ ಅಂಗಡಿಯಾಗಿರುತ್ತದೆ. ಆದುದರಿಂದ ಸಂಸ್ಥೆಯು ಈ ಪತ್ರಿಕಾ ಹಂಚುವಿಕೆಯ ಮಾರ್ಗಗಳನ್ನು ಪತ್ರಿಕಾ ದಿನದ ಕಾರ್ಯದ ಕ್ರಮದ ಭಾಗವಾಗಿ ಶಿಫಾರಸ್ಸು ಮಾಡುತ್ತದೆ.” ಆ ಬುದ್ಧಿವಾದವು ಇಂದಿಗೂ ಸಮ್ಮತವಾಗಿದೆ. ಸಭೆಗಳು ಕ್ರಮದ ಪತ್ರಿಕಾ ದಿನ—ಪ್ರಮುಖವಾಗಿ ಪತ್ರಿಕಾ ಸಾಕ್ಷಿ ಕಾರ್ಯಕ್ಕಾಗಿ ಬದಿಗಿಟ್ಟ ದಿನ—ಗಳನ್ನು ಏರ್ಪಡಿಸಬಹುದು. ಹೆಚ್ಚಿನ ಸಭೆಗಳಿಗೆ, ಗೊತ್ತುಮಾಡಲ್ಪಟ್ಟ ಶನಿವಾರಗಳು ನಿಸ್ಸಂದೇಹವಾಗಿ ಉತ್ತಮ ಸಮಯವಾಗಿರುವುದು. ಹೌದು, ಪ್ರತಿಯೊಂದು ಸಭೆಯೂ ಪತ್ರಿಕಾ ಸಾಕ್ಷಿ ಕಾರ್ಯ—ಮನೆಯಿಂದ ಮನೆ, ಅಂಗಡಿಯಿಂದ ಅಂಗಡಿ, ದಾರಿ ಬದಿಯ ಕಾರ್ಯ, ಮತ್ತು ಪತ್ರಿಕಾ ಪಥ—ಕ್ಕಾಗಿ ವಿಶೇಷ ದಿನಗಳನ್ನು ಮತ್ತು ಸಂಜೆಗಳನ್ನು ಬದಿಗಿಡಲಿ. ಅದಕ್ಕೆ ಕೂಡಿಸಿ ರಾಜ್ಯ ಪ್ರಚಾರಕರಾದ ನೀವು, ಪತ್ರಿಕಾ ಹಂಚಿಕೆಯನ್ನು ಹೆಚ್ಚಿಸುವಂತೆ ಸಹಾಯಿಸಲು, ಏನು ಮಾಡಬಲ್ಲಿರಿ?
18, 19. (ಎ) ಕಾವಲಿನಬುರುಜು ಮತ್ತು ಎಚ್ಚರ!ದ ಪ್ರಜ್ಞೆಯುಳ್ಳವರಾಗಿರುವುದು ನೀವು ಪತ್ರಿಕೆಗಳನ್ನು ನೀಡುವಂತೆ ಹೇಗೆ ಸಹಾಯ ಮಾಡಬಲ್ಲದು? (ಬಿ) ಪತ್ರಿಕೆಗಳನ್ನು ನೀಡುವಾಗ ಚಿಕ್ಕ, ವಿಷಯಕ್ಕನುಗುಣವಾದ, ಸಾದರಪಡಿಸುವಿಕೆಯ ಪ್ರಯೋಜನ ಯಾವುದು? (ಸಿ) ಜನರ ಮನೆಯೊಳಗೆ ಪತ್ರಿಕೆಗಳನ್ನು ಹೊಗಿಸುವುದರ ಮೌಲ್ಯವನ್ನು ಯಾವುದು ತೋರಿಸುತ್ತದೆ?
18 “ಕಾವಲಿನಬುರುಜು” ಮತ್ತು “ಎಚ್ಚರ!”ದ ಪ್ರಜ್ಞೆಯುಳ್ಳವರಾಗಿರುವುದು ಮೊದಲ ಹೆಜ್ಜೆಯಾಗಿದೆ. ಪತ್ರಿಕೆಗಳನ್ನು ಮುಂಚೆಯೇ ಓದಿರಿ. ಪ್ರತಿಯೊಂದು ಲೇಖನವನ್ನು ನೀವು ಓದುವಾಗ, ‘ಈ ಲೇಖನವು ಯಾರಿಗೆ ಅಭಿರುಚಿಯದ್ದಾಗಿರುವುದು?’ ಎಂದು ನಿಮ್ಮನ್ನೆ ಕೇಳಿಕೊಳ್ಳಿರಿ. ಲೇಖನದಲ್ಲಿ ಆಸಕ್ತಿಯನ್ನು ಪ್ರಚೋದಿಸಲು ನೀವು ಹೇಳಸಾಧ್ಯವಿರುವ ಕೆಲವು ಶಬ್ದಗಳನ್ನು ಆಲೋಚಿಸಿರಿ. ಕ್ರಮದ ಪತ್ರಿಕಾ ದಿನವನ್ನು ಬೆಂಬಲಿಸುವುದಲ್ಲದೆ, ನೀವು ಪ್ರತಿಯೊಂದು ಸಂದರ್ಭದ ಪ್ರಯೋಜನವನ್ನು ತೆಗೆದುಕೊಳ್ಳುವಂತೆ ಇತರರಿಗೆ—ಪ್ರಯಾಣಿಸುವಾಗ ಯಾ ಖರೀದಿಸುವಾಗ ಮತ್ತು ಜತೆಕೆಲಸದವರೊಂದಿಗೆ, ನೆರೆಯವರೊಂದಿಗೆ, ಶಾಲಾ ಸ್ನೇಹಿತರೊಂದಿಗೆ ಯಾ ಉಪಾಧ್ಯಾಯರುಗಳೊಂದಿಗೆ ಮಾತಾಡುವಾಗ—ಹಂಚಲು ನಿಮ್ಮೊಂದಿಗೆ ಪ್ರತಿಗಳನ್ನು ಯಾಕೆ ಕೊಂಡೊಯ್ಯಬಾರದು?
19 ನಿಮ್ಮ ಸಾದರಪಡಿಸುವಿಕೆಯನ್ನು ಸರಳವಾಗಿಡಿರಿ ಎಂಬುದು ಎರಡನೇ ಸಲಹೆಯಾಗಿದೆ. ದಶಂಬರ 1, 1956ರ ಕಾವಲಿನಬುರುಜು ನಮೂದಿಸಿದ್ದು: “ಪತ್ರಿಕೆಗಳನ್ನು ನೀಡುವಾಗ ವಿಷಯಕ್ಕನುಗುಣವಾದ, ಚಿಕ್ಕ, ಸಾದರಪಡಿಸುವಿಕೆಯು ಉತ್ತಮವಾಗಿರುವುದು. ಉದ್ದೇಶವು ಅನೇಕ ಪ್ರತಿಗಳನ್ನು ನೀಡುವುದಾಗಿದೆ. ಅವುಗಳು ತಮ್ಮ ಸ್ವಂತ ‘ಮಾತಾಡುವಿಕೆಯನ್ನು’ ಮಾಡುವವು.” ಒಂದು ಲೇಖನದಿಂದ ಒಂದು ವಿಷಯವನ್ನು ತೆಗೆದು, ಅದನ್ನು ಕೆಲವು ಶಬ್ದಗಳಲ್ಲಿ ವಿವರಿಸುವುದು, ಮತ್ತು ಪತ್ರಿಕೆಯನ್ನು ಸಾದರಪಡಿಸುವುದು ಪರಿಣಾಮಕಾರಿ ಎಂದು ಕೆಲವು ಪ್ರಚಾರಕರು ಕಂಡುಕೊಂಡಿರುತ್ತಾರೆ. ಒಮ್ಮೆ ಆ ಪತ್ರಿಕೆಗಳು ಮನೆಯೊಳಗೆ ಸ್ವೀಕರಿಸಲ್ಪಟ್ಟ ಅನಂತರ, ನಿಮ್ಮಿಂದ ಆ ಪತ್ರಿಕೆಗಳನ್ನು ಸ್ವೀಕರಿಸಿದ ವ್ಯಕ್ತಿಯನ್ನು ಕೂಡಿಸಿ ಇತರರೊಂದಿಗೂ ಅವು “ಮಾತಾಡಬಲ್ಲವು.” ಐರ್ಲಂಡಿನಲ್ಲಿ ವಿಶ್ವವಿದ್ಯಾಲಯದ ಯುವ ವಿದ್ಯಾರ್ಥಿನಿಯೊಬ್ಬಳು, ಅವಳ ತಂದೆ ಒಬ್ಬ ಸಾಕ್ಷಿಯಿಂದ ಸ್ವೀಕರಿಸಿದ, ಸಪ್ಟಂಬರ 1, 1991ರ ಕಾವಲಿನಬುರುಜು ಸಂಚಿಕೆಯನ್ನು ಓದಿದಳು. ಸಂಸರ್ಗ ಮತ್ತು ಇತರ ವಿಷಯಗಳ ಮೇಲಿನ ಲೇಖನಗಳು ಅವಳ ಅಭಿರುಚಿಯನ್ನು ಜಾಗ್ರತಗೊಳಿಸಿದವು. ಅವಳು ಪತ್ರಿಕೆಯನ್ನು ಓದಿದ ಕೂಡಲೆ, ಫೋನ್ ಪುಸ್ತಕದಲ್ಲಿ ಪಟ್ಟಿ ಮಾಡಲಾದ ಸಂಖ್ಯೆಯನ್ನು ಸಂಪರ್ಕಿಸಿ, ಸಾಕ್ಷಿಗಳಿಗೆ ಟೆಲಿಫೋನ್ ಮಾಡಿದಳು. ಬೇಗನೆ ಬೈಬಲ್ ಅಧ್ಯಯನವೊಂದು ಆರಂಭಿಸಲ್ಪಟ್ಟಿತು, ಮತ್ತು ಆ ಯುವ ಸ್ತ್ರೀಯು ಜುಲೈ 1993ರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದಳು. ಅಗತ್ಯವಾಗಿ, ಎಲ್ಲಿ ಅವುಗಳು ಜನರೊಂದಿಗೆ “ಮಾತಾಡ” ಬಲ್ಲವೊ, ಆ ಮನೆಗಳಲ್ಲಿ ನಾವು ಪತ್ರಿಕೆಗಳನ್ನು ಹೊಗಿಸೋಣ! ಒಬ್ಬ ಸಂಚರಣಾ ಮೇಲ್ವಿಚಾರಕನು ಮತ್ತೊಂದು ಸರಳ ಸಲಹೆಯನ್ನಿತ್ತನು: “ಪತ್ರಿಕೆಗಳನ್ನು ನಿಮ್ಮ ಪುಸ್ತಕ ಚೀಲದಿಂದ ಹೊರಕ್ಕೆ ತೆಗೆಯಿರಿ.” ನಿಜಕ್ಕೂ, ನೀವು ಹೇಳುವುದು ಮನೆಯವನ ಅಭಿರುಚಿಯನ್ನು ಹಿಡಿಯದಿದ್ದಲ್ಲಿ, ಬಹುಶಃ ಅವುಗಳ ಆಕರ್ಷಕ ಮುಖಪುಟದ ಚಿತ್ರಗಳು ನಿಮಗಾಗಿ ಪತ್ರಿಕೆಗಳನ್ನು ನೀಡುವವು.
20, 21. (ಎ) ಪತ್ರಿಕಾ ಕಾರ್ಯದಲ್ಲಿ ಭಾಗವಹಿಸುವಾಗ ನೀವು ಹೇಗೆ ಹೊಂದಿಕೊಳ್ಳುವವರಾಗಿರಬಲ್ಲಿರಿ? (ಬಿ) ಪ್ರತಿಯೊಂದು ತಿಂಗಳಲ್ಲಿ ಹೆಚ್ಚಿನ ಪತ್ರಿಕೆಗಳನ್ನು ನೀಡಲು ನೀವೇನನ್ನು ಮಾಡಶಕ್ತರು?
20 ಮೂರನೇ ಸಲಹೆಯು ಹೊಂದಿಕೊಳ್ಳುವವರಾಗಿರ್ರಿ. (ಹೋಲಿಸಿ 1 ಕೊರಿಂಥ 9:19-23.) ಕೆಲವು ಚುಟುಕಾದ ಸಾದರಪಡಿಸುವಿಕೆಗಳನ್ನು ತಯಾರಿಸಿರಿ. ಪುರುಷರಿಗೆ ಮೆಚ್ಚುವ ಒಂದು ಲೇಖನವನ್ನು, ಸ್ತ್ರೀಯರಿಗಾಗಿ ಇನ್ನೊಂದನ್ನು ಮನಸ್ಸಿನಲ್ಲಿಡಿರಿ. ಯುವಕರಿಗಾಗಿ, ನೀವು “ಯುವ ಜನರು ಪ್ರಶ್ನಿಸುವುದು . . . ” ಲೇಖನವನ್ನು ಸಾದರಪಡಿಸಬಹುದು. ಪತ್ರಿಕಾ ಕಾರ್ಯದಲ್ಲಿ ಭಾಗವಹಿಸುವಾಗಲೂ ಹೊಂದಿಕೊಳ್ಳುವವರಾಗಿರ್ರಿ. ಪತ್ರಿಕಾ ದಿನಕ್ಕೆ ಕೂಡಿಸಿ, ಸಂಜೆಯ ಸಾಕ್ಷಿ ಕಾರ್ಯವು ಮನೆಯಿಂದ ಮನೆಗೆ ಪತ್ರಿಕೆಗಳನ್ನು ನೀಡಲು ಒಂದು ಅತ್ಯತಮ್ತ ಸಂದರ್ಭ ಒದಗಿಸುತ್ತದೆಂದು ನೀವು ಕಂಡುಕೊಳ್ಳಬಹುದು.
21 ಒಂದು ವೈಯಕ್ತಿಕ ಗುರಿಯನ್ನಿಡುವುದು ನಾಲ್ಕನೇ ಸಲಹೆಯಾಗಿರುತ್ತದೆ. ಎಪ್ರಿಲ್ 1984ರ ನಮ್ಮ ರಾಜ್ಯದ ಸೇವೆ ಯಲ್ಲಿ ಕಂಡುಬಂದ “ಪತ್ರಿಕೆಗಳು ಜೀವಕ್ಕೆ ಮಾರ್ಗವನ್ನು ತೋರಿಸುತ್ತವೆ” ಎಂಬ ಪುರವಣಿಯು, ತಿಳಿಸಿದ್ದು: “ಒಂದು ಸಲಹೆಯಾಗಿ, ಅವರ ಪರಿಸ್ಥಿತಿಗಳ ಮೇಲೆ ಆಧಾರಿಸಿ, ತಿಂಗಳಿಗೆ 10 ಪತ್ರಿಕೆಗಳು ಎನ್ನುವ ಗುರಿಯನ್ನು ಪ್ರಚಾರಕರು ಇಡಬಹುದು ಮತ್ತು ಪಯನೀಯರರು 90 ಕ್ಕಾಗಿ ಪ್ರಯತ್ನಿಸಬಹುದು. ನಿಶ್ಚಯವಾಗಿಯೂ, ಕೆಲವು ಪ್ರಚಾರಕರು ತಿಂಗಳಿಗೆ ಹೆಚ್ಚು ಪತ್ರಿಕೆಗಳನ್ನು ನೀಡಶಕ್ತರಿರಬಹುದು, ಆದುದರಿಂದ ಹೆಚ್ಚಿನ ವೈಯಕ್ತಿಕ ಗುರಿಯೊಂದನ್ನು ಅವರಿಡುವರು. ಆದಾಗ್ಯೂ, ಅನಾರೋಗ್ಯ, ಟೆರಿಟೊರಿಯ ವಿಧ, ಯಾ ಇತರ ಒಳ್ಳೇ ಕಾರಣಗಳಿಂದಾಗಿ, ಇತರರ ಗುರಿಯು ಕಡಿಮೆಯಾಗಿರಬಹುದು. ಆದರೂ ಯೆಹೋವನಿಗೋಸ್ಕರ ಅವರ ಸೇವೆಯು ಅಷ್ಟೆ ಅಮೂಲ್ಯವಾಗಿದೆ. (ಮತ್ತಾಯ 13:23; ಲೂಕ 21:3, 4) ಪ್ರಾಮುಖ್ಯ ಸಂಗತಿಯು, ವೈಯಕಿಕ್ತ ಗುರಿ ಇರುವುದೇ ಆಗಿದೆ.”
22. ನಮ್ಮ ಸತ್ಯದ ಸಮಯೋಚಿತ ಪತ್ರಿಕೆಗಳಿಗಾಗಿ ಯೆಹೋವನಿಗೆ ನಾವು ಅಭಾರಿಗಳಾಗಿದ್ದೇವೆಂದು ಯಾವ ವಿಧದಲ್ಲಿ ನಾವು ತೋರಿಸಬಲ್ಲೆವು?
22 ನಂಬಿಗಸ್ತ ಮತ್ತು ವಿವೇಕಿ ಆಳು ವರ್ಗವನ್ನು ಮತ್ತು ಅದರ ಆಡಳಿತ ಮಂಡಳಿಯನ್ನು ಈ ಸವಯೋಚಿತ ಪತ್ರಿಕೆಗಳನ್ನು ನಮಗೆ ಒದಗಿಸಲು ಉಪಯೋಗಿಸಿದರ್ದಿಂದ ನಾವು “ಸತ್ಯದ ದೇವರಾದ” ಯೆಹೋವನಿಗೆ ಎಷ್ಟೊಂದು ಅಭಾರಿಗಳಾಗಿರುತ್ತೇವೆ! (ಕೀರ್ತನೆ 31:5) ಎಷ್ಟರವರೆಗೆ ಯೆಹೋವನು ಇಷ್ಟಪಡುತ್ತಾನೊ ಅಷ್ಟರವರೆಗೆ, ಈ ಪತ್ರಿಕೆಗಳು ಜನರ ನಿಜ ಅಗತ್ಯಗಳನ್ನು ನಿಭಾಯಿಸುತ್ತಾ ಮುಂದುವರಿಯುವವು. ಅವುಗಳು ನೈತಿಕತೆಯ ಕುರಿತಾದ ಯೆಹೋವನ ಉಚ್ಚ ಮಟ್ಟಗಳನ್ನು ಎತ್ತಿಹಿಡಿಯುತ್ತಾ ಇರುವವು. ಅವುಗಳು ಸರಿಯಾದ ಧಾರ್ಮಿಕ ತತ್ವಕ್ಕೆ ಒತ್ತಾಸೆ ಕೊಡುವುದನ್ನು ಬಿಟ್ಟುಕೊಡವು. ಮತ್ತು ಅವುಗಳು ನಮ್ಮ ದಿನಗಳು ದೇವರ ರಾಜ್ಯವು ಆಳುತ್ತಿರುವ ಮತ್ತು ಯೆಹೋವನ ನಿಜ ಆರಾಧಕರ ಒಂದು ಹೆಚ್ಚುತ್ತಿರುವ ಸಂಖ್ಯೆಯ ಮೂಲಕ ದೇವರ ಚಿತ್ತವು ಭೂಮಿಯ ಮೇಲೆ ಹಿಂದೆಂದೂ ಮಾಡಲ್ಪಡಲಾರದ ರೀತಿಯಲ್ಲಿ ಮಾಡಲ್ಪಟ್ಟಿಲ್ಲದ ಸಮಯವೆಂದು ಗುರುತಿಸುವ ಪ್ರವಾದನೆಯ ನೆರವೇರಿಕೆಯ ಕಡೆಗೆ ಗಮನವನ್ನು ಸೆಳೆಯುತ್ತಾ ದೃಢವಾಗಿ ನಿಲ್ಲುವವು. (ಮತ್ತಾಯ 6:10; ಪ್ರಕಟನೆ 11:15) ಕಾವಲಿನಬುರುಜು ಮತ್ತು ಎಚ್ಚರ!ದಲ್ಲಿ ಎಂತಹ ಒಂದು ಅಮೂಲ್ಯ ನಿಧಿ ನಮಗಿದೆ! ಜನರ ಜೀವಿತಗಳನ್ನು ತಟ್ಟುವ ಮತ್ತು ರಾಜ್ಯ ಸತ್ಯಗಳಿಗಾಗಿ ಹೋರಾಡುವ ಈ ಪ್ರಾಮುಖ್ಯ ಪತ್ರಿಕೆಗಳನ್ನು ದೀನ ಹೃದಯಿಗಳೊಂದಿಗೆ ಹಂಚಿಕೊಳ್ಳಲು ಪ್ರತಿಯೊಂದು ಸಂದರ್ಭದ ಪ್ರಯೋಜನವನ್ನು ನಾವು ತೆಗೆದುಕೊಳ್ಳೋಣ.
[ಅಧ್ಯಯನ ಪ್ರಶ್ನೆಗಳು]
a ಅಕ್ಟೋಬರ 15, 1992, 19-22 ಪುಟಗಳು.
b ಅನೇಕ ವರುಷಗಳ ವರೆಗೆ ಕಾವಲಿನಬುರುಜು ನಿರ್ದಿಷ್ಟವಾಗಿ ಅಭಿಷಿಕ್ತ ಕ್ರೈಸ್ತರಿಗಾಗಿರುವ ಪತ್ರಿಕೆ ಎಂದು ವೀಕ್ಷಿಸಲ್ಪಡುತ್ತಿತ್ತು. ಆದಾಗ್ಯೂ, ಇಸವಿ 1935 ರಿಂದಾರಂಭಿಸಿ, ಕಾವಲಿನಬುರುಜು ಪತ್ರಿಕೆಯನ್ನು ಪಡೆದುಕೊಂಡು, ಓದುವಂತೆ, ಭೂಮಿಯ ಮೇಲೆ ನಿತ್ಯ ಜೀವದ ನಿರೀಕ್ಷೆ ಇರುವ, “ಮಹಾ ಸಮೂಹ” ದವರನ್ನು ಪ್ರೋತ್ಸಾಹಿಸುವುದರ ಮೇಲೆ ಹೆಚ್ಚುತ್ತಿರುವ ಪ್ರಾಧಾನ್ಯವನ್ನು ಹಾಕಲಾಯಿತು. (ಪ್ರಕಟನೆ 7:9) ಕೆಲವು ವರ್ಷಗಳಾನಂತರ, 1940 ರಲ್ಲಿ, ಕಾವಲಿನಬುರುಜು ಕ್ರಮವಾಗಿ ದಾರಿಬದಿಯಲ್ಲಿ ಜನರಿಗೆ ನೀಡಲ್ಪಟ್ಟಿತು. ತರುವಾಯ, ಹಂಚಿಕೆಯು ತೀವ್ರವಾಗಿ ಹೆಚ್ಚಿತು.
ನಿಮ್ಮ ಉತ್ತರಗಳೇನು?
▫ ಕಾವಲಿನಬುರುಜು ಮತ್ತು ಎಚ್ಚರ! ಸತ್ಯದ ಪತ್ರಿಕೆಗಳೆಂದು ಯಾವುದು ತೋರಿಸುತ್ತದೆ?
▫ ಕಾವಲಿನಬುರುಜು ಮತ್ತು ಎಚ್ಚರ! ಜನರ ಜೀವಿತಗಳನ್ನು ಹೇಗೆ ಸ್ಪರ್ಶಿಸಿವೆ?
▫ ಪತ್ರಿಕಾ ಹಂಚುವಿಕೆಯನ್ನು ಹೆಚ್ಚಿಸಲು ಸಭೆಗಳು ಏನು ಮಾಡಬಲ್ಲವು?
▫ ಯಾವ ಸಲಹೆಗಳು ನೀವು ಹೆಚ್ಚು ಪತ್ರಿಕೆಗಳನ್ನು ನೀಡುವಂತೆ ಸಹಾಯಿಸಬಲ್ಲವು?
[ಪುಟ 22 ರಲ್ಲಿರುವ ಚೌಕ]
ಜನರ ಜೀವಿತಗಳನ್ನು ಸ್ಪರ್ಶಿಸಿದ ಕೆಲವು ಲೇಖನಗಳು
ಗತ ವರುಷಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ!ದಲ್ಲಿ ಪ್ರಕಾಶಿಸಲಾದ ನಿರ್ದಿಷ್ಟ ಲೇಖನಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಲು ಅನೇಕ ಓದುಗರು ಬರೆದಿರುತ್ತಾರೆ. ನಮ್ಮ ಓದುಗರನ್ನು ಪ್ರಭಾವಿಸಿದ ಅನೇಕ ವಿಷಯಗಳಲ್ಲಿ ಕೇವಲ ಕೆಲವನ್ನೆ ಕೆಳಗೆ ಪಟ್ಟಿಮಾಡಲಾಗಿದೆ. ಇವುಗಳು ಮತ್ತು ಇತರ ಲೇಖನಗಳು ನಿಮ್ಮ ಜೀವಿತವನ್ನು ಬದಲಾಯಿಸಿವೆಯೋ?
ಕಾವಲಿನಬುರುಜು
“ಗುಪ್ತ ತಪ್ಪುಗಳನ್ನು ಜಯಿಸಲು ದೇವರ ಸಹಾಯವನ್ನು ಸ್ವೀಕರಿಸಿರಿ” (ಎಪ್ರಿಲ್ 15, 1985)
“ವೃದ್ಧ ಹೆತ್ತವರ ಕಡೆಗೆ ದೇವ ಭಕ್ತಿಯನ್ನು ಆಚರಿಸುವುದು” (ದಶಂಬರ 1, 1987)
“ಒಂದು ಉದ್ದೇಶದೊಂದಿಗೆ ವಿದ್ಯೆ” (ಫೆಬ್ರವರಿ 1, 1993)
ಎಚ್ಚರ!
“ನೀವು ಖಿನ್ನತೆಯೊಂದಿಗೆ ಹೋರಾಡಬಲ್ಲಿರಿ!” (ಸಪ್ಟಂಬರ 8, 1981)
“ನೀವು ಪ್ರೀತಿಸುವವರೊಬ್ಬರು ಸಾಯುವಾಗ . . . ” (ಫೆಬ್ರವರಿ 8, 1986)
“ನಿಮ್ಮ ಮಕ್ಕಳನ್ನು ಸಂರಕ್ಷಿಸಿರಿ!” (ಅಕ್ಟೋಬರ 8, 1993)
[ಪುಟ 23 ರಲ್ಲಿರುವ ಚಿತ್ರ]
ಕೆನಡದಲ್ಲಿ—ಪತ್ರಿಕೆಗಳೊಂದಿಗೆ ಸಾರುವುದು
[ಪುಟ 24 ರಲ್ಲಿರುವ ಚಿತ್ರ]
ಮ್ಯಾನ್ಮಾರ್ನಲ್ಲಿ—ಜೀವಿತದ ಮಾರ್ಗವನ್ನು ನಿರ್ದೇಶಿಸುವ ಪತ್ರಿಕೆಗಳನ್ನು ನೀಡುವುದು