ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ
1 ಫೆಬ್ರವರಿ 1997ರಲ್ಲಿ ಆರಂಭವಾಗುವ ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು, “ಕೊಡುವಿಕೆಯಲ್ಲಿರುವ ಹೆಚ್ಚಿನ ಸಂತೋಷವನ್ನು ಅನುಭವಿಸಿರಿ” ಎಂಬ ಮುಖ್ಯವಿಷಯವನ್ನು ವಿಶದಪಡಿಸುವುದು. (ಅ. ಕೃ. 20:35) ಸಂತೋಷವನ್ನು “ಸುಕ್ಷೇಮ ಮತ್ತು ಸಂತೃಪ್ತಿಯ ಒಂದು ಸ್ಥಿತಿ”ಯಾಗಿ ವರ್ಣಿಸಲಾಗಿದೆ. ಇಂದು ಹೆಚ್ಚಿನ ಜನರು ಜೀವನದಿಂದ ತಾವು ಪಡೆಯಸಾಧ್ಯವಿರುವ ಯಾವುದೇ ಸುಖಾನುಭವವನ್ನು ದೋಚಿಕೊಳ್ಳುತ್ತಾರೆ, ಮತ್ತು ಅವರು ಅದನ್ನು ಪಡೆಯುವಾಗ ಅದು ಅನೇಕವೇಳೆ ತಾತ್ಕಾಲಿಕವಾದದ್ದಾಗಿರುತ್ತದೆ. ಅದು ನಿಜ ಸಂತೋಷವಲ್ಲ. ಆದರೂ, ನಾವು ಸದಾಕಾಲಕ್ಕಾಗಿ ಹೇಗೆ ಪ್ರಯೋಜನ ತರಬಹುದೆಂಬುದನ್ನು ಯೆಹೋವನು ನಮಗೆ ಕಲಿಸುತ್ತಾನೆ. (ಯೆಶಾ. 48:17; 1 ಯೋಹಾ. 2:17) ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು, ಒಂದು ಆತ್ಮಿಕ ವಿಧದಲ್ಲಿ ಕೊಡುವ ಮೂಲಕ ಹೆಚ್ಚಿನ ಸಂತೋಷವನ್ನು ನಾವು ಗಳಿಸಸಾಧ್ಯವಿರುವ ವಿಧವನ್ನು ಒತ್ತಿಹೇಳುವುದು.
2 ಶುಶ್ರೂಷೆಯಲ್ಲಿ ನಾವು ನಮ್ಮನ್ನೇ ಕೊಟ್ಟುಕೊಳ್ಳಸಾಧ್ಯವಿರುವ ವ್ಯಾವಹಾರಿಕ ಮಾರ್ಗಗಳನ್ನು ನಾವು ಕಲಿಯುವೆವು. ಸಂಚರಣ ಮೇಲ್ವಿಚಾರಕರಿಂದ ಕೊಡಲ್ಪಡಲಿರುವ ಭಾಷಣಗಳಲ್ಲಿ ಕೆಲವು ಈ ಶಿರೋನಾಮಗಳದ್ದಾಗಿವೆ: “ಅನ್ಯಾಯದ ಐಶ್ವರ್ಯಗಳ ಮೂಲಕ ಸ್ನೇಹಿತರನ್ನು ಮಾಡಿಕೊಳ್ಳುವುದು,” “‘ಪುರುಷರಲ್ಲಿ ದಾನಗಳ’ ದೈವಿಕ ಒದಗಿಸುವಿಕೆಯನ್ನು ಗೌರವಿಸಿರಿ,” ಮತ್ತು “ನಿಜ ಸಂತೋಷದ ಅನೇಕ ಮುಖಗಳನ್ನು ಅನುಭವಿಸಿರಿ.” ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆಯಲಿಚ್ಛಿಸುವವರು, ಹಿರಿಯರು ತಮ್ಮೊಂದಿಗೆ ದೀಕ್ಷಾಸ್ನಾನದ ಪ್ರಶ್ನೆಗಳನ್ನು ಪುನರ್ವಿಮರ್ಶಿಸಲು ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಲು ಸಾಧ್ಯವಾಗುವಂತೆ ಅವನೊಂದಿಗೆ ಮಾತಾಡಲು ಬಯಸುವರು. ಒಂದು ಶುದ್ಧವಾದ ಸಂಬಂಧದಲ್ಲಿ ಯೆಹೋವನಿಗೆ ಸೇವೆಸಲ್ಲಿಸುವುದು, ಹೊಸತಾಗಿ ದೀಕ್ಷಾಸ್ನಾನ ಹೊಂದಿದವರಿಗೆ ಮಹಾ ಸಂತೋಷವನ್ನು ತರುವುದು.
3 ಯೆಹೋವನ ಅಧಿಕಾರದ ಯೋಗ್ಯವಾದ ಅಂಗೀಕಾರವು ನಿಜ ಸಂತೋಷ ಮತ್ತು ಭದ್ರತೆಯನ್ನೂ ತರುತ್ತದೆ. ಎಲ್ಲಾ ಜನರು ಇದನ್ನು ತಿಳಿದುಕೊಳ್ಳಬೇಕು. ಹೀಗಿರುವುದರಿಂದ ಸರ್ಕಿಟ್ ಸಮ್ಮೇಳನದಲ್ಲಿನ ಸಾರ್ವಜನಿಕ ಭಾಷಣವು “ದೇವರ ಸಂತೋಷಿತ ಜನರೊಂದಿಗೆ ಒಂದುಗೂಡಿರಿ” ಎಂಬ ಮುಖ್ಯಶೀರ್ಷಿಕೆಯನ್ನು ವಿಶದಪಡಿಸುವುದು. ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿರುವವರೆಲ್ಲರಿಗೆ ಈ ಭಾಷಣಕ್ಕೆ ಬರುವಂತೆ ಆಮಂತ್ರಿಸಲು ನಿಶ್ಚಯಮಾಡಿಕೊಳ್ಳಿರಿ. ಸೈತಾನನ ಶಕ್ತಿಯಲ್ಲಿ ಬಿದ್ದಿರುವ ಈ ಲೋಕದ ಮಾನವ ಆಳ್ವಿಕೆಯ ಕೆಳಗೆ ಅವರು ನಿಜವಾದ ಭದ್ರತೆ ಮತ್ತು ಬಾಳುವ ಸಂತೋಷವನ್ನು ಕಂಡುಕೊಂಡಿಲ್ಲ. (ಪ್ರಸಂ. 8:9) ಆದರೆ ಯೆಹೋವನ ಸಂತೋಷಿತ ಜನರೊಂದಿಗೆ ಸಹವಾಸಿಸುವುದರಲ್ಲಿ ಅವರು ಎಂತಹ ಆನಂದವನ್ನು ಕಂಡುಕೊಳ್ಳುವರು!—ಕೀರ್ತ. 144:15ಬಿ.
4 ಈ ವಿಷಯಗಳ ವ್ಯವಸ್ಥೆಯಲ್ಲಿನ ಕೆಡುತ್ತಿರುವ ಪರಿಸ್ಥಿತಿಗಳ ಹೊರತೂ, ಆತ್ಮಿಕವಾಗಿ ಕೊಡುವುದರಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸುವವರು, ಸಂತೋಷದ ದೇವರಿಂದ ಎಂದೂ ನಿರಾಶೆಗೊಳಿಸಲ್ಪಡರು. (1 ತಿಮೊ. 1:11) ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮವು ಇದು ನಿಜವೆಂಬುದನ್ನು ಪ್ರದರ್ಶಿಸುವುದು. ಅದನ್ನು ತಪ್ಪಿಸಬೇಡಿರಿ!