ಹಳೆಯ ಪುಸ್ತಕಗಳನ್ನು ಉಪಯೋಗಿಸುವುದು
1 “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ” ಎಂದು ವಿವೇಕಿಯಾದ ರಾಜ ಸೊಲೊಮೋನನು ಬರೆದನು. (ಪ್ರಸಂ. 12:12) ಮಾನವ ವಿವೇಕ ಮತ್ತು ತತ್ತ್ವಜ್ಞಾನವನ್ನು ಹೊಂದಿರುವ ಪುಸ್ತಕಗಳ ವಿಷಯದಲ್ಲಿ ಈ ಹೇಳಿಕೆಯು ಎಷ್ಟು ಸತ್ಯವಾಗಿದೆ. ಆದರೆ ನಂಬಿಗಸ್ತನೂ ವಿವೇಕಿಯೂ ಆದ ಆಳಿನಿಂದ ತಯಾರಿಸಲ್ಪಡುವ ಮತ್ತು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ದೈವಿಕ ವಿವೇಕದ ಮೇಲೆ ಆಧಾರಿತವಾದ ಪುಸ್ತಕಗಳ ಕುರಿತಾಗಿ ಏನು? ಇವುಗಳು, ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹೊಂದಿರುತ್ತವೆ.—ಜ್ಞಾನೋ. 2:1-9, 21, 22.
2 ನಿರ್ದಿಷ್ಟ ಹಳೆಯ ಪುಸ್ತಕಗಳಲ್ಲಿ ಪ್ರತಿಯೊಂದರ ಬೆಲೆಯನ್ನು ಕೇವಲ ರೂ. 2.50ಕ್ಕೆ ಇಳಿಸುವುದು, ಈ ಪುಸ್ತಕಗಳನ್ನು ಮತ್ತು ಅವುಗಳಲ್ಲಿರುವ ಜೀವದಾಯಕ ಸಂದೇಶವನ್ನು ಸಾರ್ವಜನಿಕರಿಗೆ ಕೊಡಲು ಸೊಸೈಟಿಯಿಂದ ಮಾಡಲ್ಪಟ್ಟಿರುವ ಒಂದು ಒದಗಿಸುವಿಕೆಯಾಗಿದೆ. ಈ ಏರ್ಪಾಡು, ಭಾರತದಲ್ಲಿರುವ ಎಲ್ಲ ಸಭೆಗಳಲ್ಲಿ ಇತ್ತೀಚೆಗೆ ಪ್ರಕಟಿಸಲ್ಪಟ್ಟು, ವಿವರಿಸಲ್ಪಟ್ಟಿತು. ಇಲ್ಲಿ, ನಾವು ಅಂತಹ ಎಲ್ಲ ಪ್ರಕಾಶನಗಳ ಒಂದು ಪಟ್ಟಿಯನ್ನು ಕೊಡುತ್ತಿದ್ದೇವೆ. ಹೀಗೆ ವ್ಯಕ್ತಿಗತವಾಗಿ ಪ್ರಚಾರಕರು ಎಲ್ಲ ಸಮಯಗಳಲ್ಲಿ ಈ ಪಟ್ಟಿಯನ್ನು ಸುಲಭವಾಗಿ ಉಪಯೋಗಿಸಬಹುದು.
ಪ್ರತಿಯೊಂದಕ್ಕೆ ರೂ. 2.50ರ ಬೆಲೆಗೆ ಲಭ್ಯವಿರುವ ಪ್ರಕಾಶನಗಳು
ಇರುವುದು ಈ ಜೀವಿತ ಮಾತ್ರವೋ?—ಇಂಗ್ಲಿಷ್, ತೆಲುಗು
ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು—ಮಲೆಯಾಲಂ, ಮರಾಠಿ, ನೇಪಾಲಿ, ತಮಿಳು
ಒಂದು ಹೊಸ ಭೂಮಿಯೊಳಗೆ ಪಾರಾಗುವಿಕೆ—ಮಲೆಯಾಲಂ, ತಮಿಳು
“ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು”—ಕನ್ನಡ
ನಿಜ ಶಾಂತಿ ಮತ್ತು ಭದ್ರತೆ—ಯಾವ ಮೂಲದಿಂದ?—ತಮಿಳು
“ನಿನ್ನ ರಾಜ್ಯವು ಬರಲಿ”—ಎಲ್ಲ ಭಾಷೆಗಳಲ್ಲಿ
ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು—ಗುಜರಾಥಿ
ನಿತ್ಯಜೀವಕ್ಕೆ ನಡಿಸುವ ಸತ್ಯವು—ಗುಜರಾಥಿ
ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ—ಇಂಗ್ಲಿಷ್
ಮಹಾ ಬೋಧಕನಿಗೆ ಕಿವಿಗೊಡುವುದು—ಮರಾಠಿ
ಮಾನವನು ಇಲ್ಲಿ ವಿಕಾಸದ ಮೂಲಕ ಬಂದನೋ, ಸೃಷ್ಟಿಯ ಮೂಲಕವೊ—ಇಂಗ್ಲಿಷ್
“ಶಾಂತಿಯ ಪ್ರಭು”ವಿನ ಕೆಳಗೆ ಲೋಕವ್ಯಾಪಕ ಭದ್ರತೆ—ಇಂಗ್ಲಿಷ್
3 ಈ ಪುಸ್ತಕಗಳನ್ನು ಹೇಗೆ ಅತ್ಯುತ್ತಮವಾಗಿ ಉಪಯೋಗಿಸಸಾಧ್ಯವಿದೆ? ಒಂದು ವಿಷಯವೇನೆಂದರೆ, ನಿಮ್ಮ ವೈಯಕ್ತಿಕ ಲೈಬ್ರರಿಯ ಕಡೆಗೆ ನೀವು ತತ್ಕ್ಷಣವೇ ನೋಟವನ್ನು ಹರಿಸುವಂತೆ ನಾವು ಸಲಹೆ ನೀಡುತ್ತೇವೆ. ಮೇಲೆ ಪಟ್ಟಿಮಾಡಲಾಗಿರುವ ಎಲ್ಲ ಪುಸ್ತಕಗಳು ನಿಮ್ಮಲ್ಲಿವೆಯೊ? ಯಾವುದಾದರೂ ಇಲ್ಲದಿರುವಲ್ಲಿ, ನಿಮ್ಮ ಮನೆಯ ಲೈಬ್ರರಿಯನ್ನು ನೀವು ಪೂರ್ಣಗೊಳಿಸುವಂತೆ, ನಿಮ್ಮ ಸಭೆಯ ಮೂಲಕ ಕೆಲವು ಪ್ರತಿಗಳನ್ನು ನೀವೇಕೆ ಆರ್ಡರ್ ಮಾಡಬಾರದು? ಶಾಲಾ ಲೈಬ್ರರಿಯಲ್ಲಿ ಈ ಎಲ್ಲ ಪುಸ್ತಕಗಳಿವೆಯೊ ಎಂಬುದನ್ನು ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮೇಲ್ವಿಚಾರಕರು ಪರೀಕ್ಷಿಸಿ ನೋಡಸಾಧ್ಯವಿದೆ. ಅವು ಇಲ್ಲದಿರುವಲ್ಲಿ, ಶಾಲಾ ಲೈಬ್ರರಿಯಲ್ಲಿ ಇಡಲಿಕ್ಕಾಗಿ ಅವರು ಪ್ರತಿಗಳನ್ನು ಅರ್ಡರ್ ಮಾಡಸಾಧ್ಯವಿದೆ, ಮತ್ತು ಇವುಗಳಿಗಾಗಿ ಸಭೆಯು ಹಣವನ್ನು ತೆರಸಾಧ್ಯವಿದೆ. ನಿಮ್ಮ ಮನೆಯ ಲೈಬ್ರರಿಯಲ್ಲೂ ಸಭೆಯ ಶಾಲಾ ಲೈಬ್ರರಿಯಲ್ಲೂ ಈ ಪುಸ್ತಕಗಳನ್ನು ಹಲವಾರು ಭಾಷೆಗಳಲ್ಲಿ—ನೀವು ಹೆಚ್ಚಾಗಿ ಉಪಯೋಗಿಸದಂತಹ ಭಾಷೆಗಳಲ್ಲೂ—ಇಟ್ಟುಕೊಳ್ಳುವುದು ಒಳ್ಳೆಯದಾಗಿರಬಹುದು. ಕ್ಷೇತ್ರದಲ್ಲಿ ಆ ಭಾಷೆಯನ್ನು ಮಾತಾಡುವ ಯಾರನ್ನಾದರೂ ನೀವು ಭೇಟಿಯಾಗುವಲ್ಲಿ ಅಥವಾ ಆ ಭಾಷೆಯನ್ನು ತಿಳಿದಿರುವ ಆಸಕ್ತ ವ್ಯಕ್ತಿಗಳು ಕೂಟಗಳಿಗೆ ಹಾಜರಾಗುವುದನ್ನು ಆರಂಭಿಸುವಲ್ಲಿ ಇವು ಉಪಯೋಗಕ್ಕೆ ಬರಬಹುದು. ನೆನಪಿನಲ್ಲಿಡಿ, ಈ ಪುಸ್ತಕಗಳಲ್ಲಿ ಯಾವುದನ್ನೂ ಇನ್ನು ಮುಂದೆ ಪುನರ್ಮುದ್ರಿಸುವ ಯೋಜನೆಗಳು ನಮಗಿಲ್ಲ—ನಮ್ಮ ಸದ್ಯದ ಸ್ಟಾಕ್ಗಳು ಮುಗಿದನಂತರ, ನೀವು ಪುನಃ ಹೊಸ ಪ್ರತಿಗಳನ್ನು ಇನ್ನೆಂದೂ ಪಡೆಯಲು ಶಕ್ತರಾಗಿರದಿರಬಹುದು!
4 ನೀವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗಲೆಲ್ಲಾ ಈ ಪ್ರಕಾಶನಗಳಲ್ಲಿ ಕೆಲವನ್ನು ಒಯ್ಯುವಂತೆಯೂ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಅವುಗಳನ್ನು ವರ್ಷದ ಯಾವುದೇ ಸಮಯದಲ್ಲಿ—ಕೇವಲ ವಿಶೇಷ ನೀಡಿಕೆಯ ಕ್ಯಾಂಪೇನ್ ಸಮಯಗಳಲ್ಲಿ ಅಲ್ಲ—ರೂ. 2.50ರ ವಿಶೇಷ ದರದಲ್ಲಿ ನೀಡಸಾಧ್ಯವಿದೆಯೆಂಬುದನ್ನು ಮನಸ್ಸಿನಲ್ಲಿಡಿರಿ. ಮತ್ತು ಅವುಗಳನ್ನು ಒಂದು ಸೆಟ್ಟ್ ಆಗಿ ನೀಡಸಾಧ್ಯವಿದೆ—ಉದಾಹರಣೆಗಾಗಿ, ನೀವು ಒಂದು ಪುಸ್ತಕಕ್ಕೆ ಪ್ರಮುಖತೆ ಕೊಟ್ಟು, ಅನಂತರ ನಾಲ್ಕು ಪುಸ್ತಕಗಳನ್ನು ಒಟ್ಟಿಗೆ ರೂ. 10.00ಕ್ಕೆ ನೀಡಸಾಧ್ಯವಿದೆ. ಈ ಪುಸ್ತಕಗಳಲ್ಲಿ, ವಿಕಾಸ ಮತ್ತು ಇರುವುದು ಈ ಜೀವಿತ ಎಂಬಂತಹ ಹಲವಾರು ಪುಸ್ತಕಗಳು, ಒಂದು ನಿರ್ದಿಷ್ಟ ವಿಷಯದ ಕುರಿತು ವಿಶಿಷ್ಟ ಮಾಹಿತಿಯನ್ನು ಕೊಡುತ್ತವೆ ಮತ್ತು ಒಬ್ಬ ಮನೆಯವನು ಆ ವಿಷಯವನ್ನು ಎಬ್ಬಿಸುವಲ್ಲಿ ಉಪಯುಕ್ತವಾಗಿ ಉಪಯೋಗಿಸಲ್ಪಡಸಾಧ್ಯವಿದೆ.
5 ಪುಸ್ತಕಗಳಿಂದ ಚೆನ್ನಾಗಿ ತುಂಬಿರುವ ಒಂದು ದೇವಪ್ರಭುತ್ವ ಲೈಬ್ರರಿಯು ಒಂದು ಅಮೂಲ್ಯ ಸಂಪತ್ತಾಗಿದೆ. ಕೆಲವೊಮ್ಮೆ ಒಂದು ನಿರ್ದಿಷ್ಟ ವಿಷಯದ ಕುರಿತು ಹೆಚ್ಚು ವಿಸ್ತೃತ ಮಾಹಿತಿಯಿರುವ ಹಳೆಯ ಪುಸ್ತಕಗಳಲ್ಲಿ ಹುಡುಕುವ ಮೂಲಕ ನಮ್ಮ ಶಾಸ್ತ್ರೀಯ ಜ್ಞಾನವನ್ನು ಗಾಢಗೊಳಿಸಿಕೊಳ್ಳಲು ನಮ್ಮನ್ನು ಶಕ್ತಗೊಳಿಸುತ್ತದೆ. ಇದಕ್ಕೆ ಕೂಡಿಸಿ, ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವಾಗ, ಮನೆಯವನ ಗಮನವನ್ನು ಸೆರೆಹಿಡಿಯಲು ಯುಕ್ತವಾದ ಪುಸ್ತಕವನ್ನು ಹೊಂದಿರುವುದು, ಆ ವ್ಯಕ್ತಿಯನ್ನು ಜೀವದ ಪಥಕ್ಕೆ ಸೆಳೆಯುತ್ತಾ, ಒಂದು ಒಳ್ಳೆಯ ಸಂಭಾಷಣೆ ಮತ್ತು ಅನಂತರ ಒಂದು ಬೈಬಲ್ ಅಭ್ಯಾಸಕ್ಕೆ ನಡಿಸಬಹುದು. ಆದುದರಿಂದ, ಮೇಲೆ ಪಟ್ಟಿಮಾಡಲಾಗಿರುವ ಪುಸ್ತಕಗಳ ಪರ್ಯಾಪ್ತ ಸರಬರಾಯಿಗಳನ್ನು ನಿಮ್ಮ ಸಭೆಯ ಮೂಲಕ ಆರ್ಡರ್ ಮಾಡುವಂತೆ, ಮತ್ತು ನಿಮ್ಮ ವೈಯಕ್ತಿಕ ಅಭ್ಯಾಸದಲ್ಲಿಯೂ ಕ್ಷೇತ್ರದಲ್ಲಿಯೂ ಅವುಗಳನ್ನು ಸದ್ವಿನಿಯೋಗಿಸಲು ನಿಮ್ಮನ್ನು ಉತ್ತೇಜಿಸುತ್ತೇವೆ.—ಜ್ಞಾನೋ. 2:10, 11.