ಹೊಸ ಬ್ರೋಷರ್ ಮತ್ತು ಅದರ ಕ್ಯಾಸೆಟ್ಟನ್ನು ಉಪಯೋಗಿಸುವ ಮೂಲಕ ಇತರರು ದೇವರ ಆವಶ್ಯಕತೆಗಳನ್ನು ಕಲಿಯುವಂತೆ ಸಹಾಯಮಾಡಿರಿ
1 “ದೈವಿಕ ಶಾಂತಿಯ ಸಂದೇಶವಾಹಕರು” ಎಂಬ ಜಿಲ್ಲಾ ಅಧಿವೇಶನದ ಸಮಯದಲ್ಲಿ, ಒತ್ತುಹಾಕಲ್ಪಟ್ಟಿದ್ದ ಒಂದು ಕ್ಷೇತ್ರವು, ದೇವರ ಆವಶ್ಯಕತೆಗಳನ್ನು ಕಲಿಯುವುದರಲ್ಲಿ ಇತರರಿಗೆ ಸಹಾಯಮಾಡುವುದಾಗಿತ್ತು. ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ನ ಬಿಡುಗಡೆಯ ಅನಂತರ, ಆ ಬ್ರೋಷರನ್ನು ಉಪಯೋಗಿಸುತ್ತಾ ಒಂದು ಬೈಬಲ್ ಅಭ್ಯಾಸವನ್ನು ನಡಿಸುವ ಮೂಲಕ, ದೇವರನ್ನು ಸೇವಿಸುವುದಕ್ಕಾಗಿರುವ ಅತಿ ಪ್ರಾಮುಖ್ಯ ಆವಶ್ಯಕತೆಗಳನ್ನು ಕಲಿಯಲು ಇತರರಿಗೆ ಸಹಾಯಮಾಡಲಿಕ್ಕಾಗಿ ಬ್ರೋಷರ್ನ ಉಪಯೋಗವನ್ನು ಭಾಷಣವೊಂದು ರೇಖಿಸಿತು. ಈ ಬ್ರೋಷರ್ನಲ್ಲಿ ಎರಡು ಪುಟದ 13 ಪಾಠಗಳಿವೆ ಮತ್ತು ಒಂದು ಪುಟದ ಮೂರು ಪಾಠಗಳಿವೆ. ಇವು ಮನೆಯವನಿಗೆ ಸಂಬಂಧಸೂಚಕವಾಗಿ ಅಲ್ಪಾವಧಿಯಲ್ಲೇ, ದೇವರನ್ನು ಮೆಚ್ಚಿಸಲಿಕ್ಕಾಗಿರುವ ಅತಿ ಪ್ರಾಮುಖ್ಯ ಆವಶ್ಯಕತೆಗಳನ್ನು ಗ್ರಹಿಸಲು ಸಹಾಯಮಾಡುವವು. ಆ ಭಾಷಣ ಮತ್ತು ಅದರ ಪ್ರತ್ಯಕ್ಷಾಭಿನಯವು, ಈ ಪ್ರಕಾಶನವನ್ನು ಉಪಯೋಗಿಸುತ್ತಾ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವುದು ಎಷ್ಟು ಸುಲಭವಾಗಿರುವುದೆಂಬುದನ್ನು ತೋರಿಸಿತು.
2 ಅನಂತರ ಈ ಪ್ರಶ್ನೆಯು ಕೇಳಲ್ಪಟ್ಟಿತು: “ಆಸಕ್ತ ವ್ಯಕ್ತಿಯೊಬ್ಬನು ಓದಲು ಶಕ್ತನಾಗಿರದಿದ್ದಲ್ಲಿ ಏನು?” ಈ ಹಂತದಲ್ಲಿ, “ಸೊಸೈಟಿಯು ಈ ಹೊಸ ಬ್ರೋಷರನ್ನು ಆಡಿಯೊಕ್ಯಾಸೆಟ್ನಲ್ಲಿ ಲಭ್ಯಗೊಳಿಸುತ್ತದೆಂದು ಪ್ರಕಟಿಸಲು ನಾವು ಸಂತೋಷಿಸುತ್ತೇವೆ” ಎಂಬ ಪ್ರಕಟನೆಯೊಂದಿಗೆ ಒಂದು ಆಡಿಯೊ ಕ್ಯಾಸೆಟ್ ಬಿಡುಗಡೆಗೊಳಿಸಲ್ಪಟ್ಟಿತು. ಈ ಕ್ಯಾಸೆಟ್ ಈಗ ಹತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಆದುದರಿಂದ, ಸಮೃದ್ಧ ಚಿತ್ರಗಳಿರುವ ಈ ಬ್ರೋಷರ್ ಮತ್ತು ಅದರ ಆಡಿಯೊ ಕ್ಯಾಸೆಟ್ನೊಂದಿಗೆ, ಓದಲಾಗದ ಅನೇಕ ಆಸಕ್ತ ವ್ಯಕ್ತಿಗಳೊಂದಿಗೆ ನಾವು ಅಭ್ಯಾಸಗಳನ್ನು ಆರಂಭಿಸಲು ಶಕ್ತರಾಗಿರಬೇಕು. (1 ತಿಮೊ. 2:3, 4) ಇದಕ್ಕೆ ಕೂಡಿಸಿ, ಈ ಬ್ರೋಷರ್ ಕ್ಯಾಸೆಟ್ ಸಂಯೋಜನವು, ಇನ್ನೂ ಚೆನ್ನಾಗಿ ಓದಲು ಶಕ್ತರಾಗಿರದ ಎಳೆಯರೊಂದಿಗೂ ಅಭ್ಯಾಸವನ್ನು ನಡೆಸಲು ಉಪಯೋಗಿಸಲ್ಪಡಸಾಧ್ಯವಿದೆ. ಇದನ್ನು ಪರಿಣಾಮಕಾರಿಯಾಗಿ ಹೇಗೆ ಮಾಡಸಾಧ್ಯವಿದೆ?
3 ಪ್ರಚಾರಕನು, ಪುನರ್ಭೇಟಿಮಾಡಲಿಕ್ಕಾಗಿ ಮನೆಯವನ ನಿವಾಸಕ್ಕೆ ಬಂದಿದ್ದಾನೆಂದಿಟ್ಟುಕೊಳ್ಳೋಣ. ಒಂದು ಕ್ಯಾಸೆಟ್ ಪ್ಲೇಯರ್ ಮತ್ತು ಸ್ಥಳಿಕ ಭಾಷೆಯಲ್ಲಿನ ಅಪೇಕ್ಷಿಸು ಬ್ರೋಷರ್ನ ಆಡಿಯೊ ಕ್ಯಾಸೆಟ್ಟನ್ನು ಉಪಯೋಗಿಸುತ್ತಾ, ಓದಲು ಸಾಧ್ಯವಿಲ್ಲದ ಮನೆಯವನಿಗೆ, ಅವನು ದೇವರ ಆವಶ್ಯಕತೆಗಳೇನಾಗಿವೆಯೆಂಬುದನ್ನು ಕಲಿಯಲಿಕ್ಕಾಗಿ ಒಂದು ಅಭ್ಯಾಸವನ್ನು ನಡೆಸಲು ಆ ಕ್ಯಾಸೆಟ್ ಮತ್ತು ಅಪೇಕ್ಷಿಸು ಬ್ರೋಷರ್ ಹೇಗೆ ಉಪಯೋಗಿಸಲ್ಪಡುವುದೆಂಬುದನ್ನು ಪ್ರತ್ಯಕ್ಷಾಭಿನಯಿಸುತ್ತಾನೆ.
4 ಮೊದಲು ಟೇಪ್ ರೆಕಾರ್ಡರನ್ನು ಆನ್ ಮಾಡಿರಿ. ಮನೆಯವನು ಟೇಪನ್ನು ಆಲಿಸುತ್ತಿರುವಾಗ, ನಾವು ಪಾಠ ಒಂದರಲ್ಲಿ ಪ್ಯಾರಗ್ರಾಫ್ ಒಂದಕ್ಕೆ ಬರುತ್ತೇವೆ. ದೇವರಿಂದ ನಮಗೆ ಬಂದಿರುವ ಅತಿ ದೊಡ್ಡ ಬಹುಮಾನವು ಬೈಬಲ್ ಆಗಿದೆಯೆಂದು ಅದು ಹೇಳುತ್ತದೆ. ಟೇಪ್ ರೆಕಾರ್ಡರನ್ನು ನಿಲ್ಲಿಸಿರಿ ಮತ್ತು ಪುಟ ಮೂರರಲ್ಲಿರುವ ಚಿತ್ರವನ್ನು ಮನೆಯವನಿಗೆ ತೋರಿಸಿ, ಬೈಬಲ್ ಪುರಾತನ ಹಸ್ತಪ್ರತಿಗಳಿಂದ ನಕಲುಮಾಡಲ್ಪಡುತ್ತಿರುವ ಮತ್ತು ಆ ನಕಲುಪ್ರತಿಗಳನ್ನು ಎಷ್ಟು ಶ್ರಮವಹಿಸಿ ಮಾಡಲಾಯಿತೆಂಬುದನ್ನು ಅದು ಚಿತ್ರಿಸುವ ವಿಧದ ಕುರಿತಾಗಿ ಹೇಳಿಕೆಯನ್ನು ನೀಡಿರಿ. ನೀವು ಮುಂದಿನ ಪಾಠಕ್ಕೆ ಮುಂದುವರಿದಂತೆ, ನಾವು ದೇವರ ಕುರಿತಾಗಿ ಆತನ ಸೃಷ್ಟಿ ಮತ್ತು ಆತನ ವಾಕ್ಯದಿಂದ ತಿಳಿದುಕೊಳ್ಳಸಾಧ್ಯವಿದೆಯೆಂಬುದನ್ನು ಪ್ಯಾರಗ್ರಾಫ್ ಆರು ತೋರಿಸುತ್ತದೆ. ಪುನಃ, ಟೇಪ್ ರೆಕಾರ್ಡರನ್ನು ನಿಲ್ಲಿಸಿದ ಬಳಿಕ, ನಾಲ್ಕನೆಯ ಮತ್ತು ಐದನೆಯ ಪುಟಗಳಲ್ಲಿರುವ ಸುಂದರ ಚಿತ್ರಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ ಮತ್ತು ಯೆಹೋವನ ಸೃಜನಾತ್ಮಕ ಸಾಮರ್ಥ್ಯವನ್ನು ಎತ್ತಿತೋರಿಸುತ್ತಾ, ಅವುಗಳ ಕುರಿತಾಗಿ ಮನೆಯವನ ಹೇಳಿಕೆಗಳನ್ನು ಆಮಂತ್ರಿಸಿರಿ. ಇನ್ನೂ ಪ್ಯಾರಗ್ರಾಫ್ ಆರರಲ್ಲಿರುವಾಗ, ಒಂದು ಸ್ಟ್ಯಾಂಡಿನ ಮೇಲೆ ತೆರೆದಿಡಲ್ಪಟ್ಟಿರುವ ಬೈಬಲನ್ನು ತೋರಿಸಿರಿ. ಹೀಗೆ, ಆತನ ಸೃಜನಾತ್ಮಕ ಕೃತಿಗಳು ಮತ್ತು ಆತನ ವಾಕ್ಯದ ಮೂಲಕ ದೇವರು ಅಸ್ತಿತ್ವದಲ್ಲಿದ್ದಾನೆಂದು ನಮಗೆ ತಿಳಿದುಬರುತ್ತದೆಂಬ ವಿಷಯವನ್ನು ಮನೆಯವನ ಮನಸ್ಸಿನಲ್ಲಿ ಅಚ್ಚೊತ್ತಿಸಿರಿ. ಇತರ ಪಾಠಗಳಿಗೂ ಇದೇ ರೀತಿಯ ಕಾರ್ಯವಿಧಾನವನ್ನು ಅನುಸರಿಸಿರಿ.
5 ಅಗತ್ಯವಿರುವಾಗಲೆಲ್ಲಾ, ಚಿತ್ರಗಳ ಕಡೆಗೆ ಗಮನವನ್ನು ಸೆಳೆಯಲಿಕ್ಕಾಗಿ, ಟೇಪ್ ರೆಕಾರ್ಡರನ್ನು ನಿಲ್ಲಿಸಲು ಎಚ್ಚರವಾಗಿರಿ. ಪ್ರತಿಯೊಂದು ಪಾಠದ ಅನಂತರ, ಪುನರ್ವಿಮರ್ಶಾ ಪ್ರಶ್ನೆಗಳಿಗೆ ಹಿಂದಿರುಗಿ (ಟೇಪ್ ರೆಕಾರ್ಡರನ್ನು ಆಫ್ ಮಾಡಿರಿ) ಮನೆಯವನು ತನ್ನ ಸ್ವಂತ ಮಾತುಗಳಲ್ಲಿ ತನ್ನ ಹೇಳಿಕೆಗಳನ್ನು ಕೊಡುವಂತೆ ಅನುಮತಿಸಿರಿ. ವಿದ್ಯಾರ್ಥಿಯ ಗಮನಕೊಡುವ ವ್ಯಾಪ್ತಿ ಮತ್ತು ಸಾಮರ್ಥ್ಯಗಳ ಮೇಲೆ ಹೊಂದಿಕೊಂಡು, ಒಂದು ಅಭ್ಯಾಸದಲ್ಲಿ ಕಡಿಮೆಪಕ್ಷ ಒಂದು ಅಧ್ಯಾಯವನ್ನು ಪೂರ್ಣಗೊಳಿಸುವುದು ಸಾಧ್ಯವಾಗಿರಬೇಕು. ಅಭ್ಯಾಸವನ್ನು ಅವಸರದಿಂದ ಮಾಡುವುದರಿಂದ ದೂರವಿರಿ. ವಿದ್ಯಾರ್ಥಿಯು ಯೆಹೋವನಿಗಾಗಿ ಹೃತ್ಪೂರ್ವಕ ಗಣ್ಯತೆಯನ್ನು ವಿಕಸಿಸಿಕೊಳ್ಳಲು ಸಹಾಯಮಾಡುವುದೇ ಮುಖ್ಯ ಉದ್ದೇಶವಾಗಿದೆ. ಬ್ರೋಷರ್ನಲ್ಲಿ ವಿವರಿಸಲ್ಪಟ್ಟಿರುವ ಮೂಲಭೂತ ವಿಷಯಗಳನ್ನು ಮನೆಯವನು ಒಮ್ಮೆ ಗ್ರಹಿಸಿದ ಅನಂತರ, ಜ್ಞಾನ ಪುಸ್ತಕಕ್ಕೆ ಬದಲಾಯಿಸಿ, ಅಭ್ಯಾಸವನ್ನು ಮುಂದುವರಿಸಿರಿ.
6 ನೀವು ಒಂದು ಅಭ್ಯಾಸವನ್ನು ಆರಂಭಿಸುವಾಗ, ಆಗಲೇ ಮನೆಯವನನ್ನು ಸ್ಥಳಿಕ ರಾಜ್ಯ ಸಭಾಗೃಹದಲ್ಲಿರುವ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸಿರಿ. ಪ್ರತಿ ವಾರದ ಸಾರ್ವಜನಿಕ ಭಾಷಣದ ಶೀರ್ಷಿಕೆಯ ಕುರಿತಾಗಿ ಅವನಿಗೆ ತಿಳಿಸಿರಿ, ಮತ್ತು ಆ ವಿದ್ಯಾರ್ಥಿಯು ಯಾವ ವಿಷಯದಲ್ಲಿ ಆಸಕ್ತಿಯನ್ನು ತೋರಿಸಿದ್ದಾನೊ ಅದರ ಕುರಿತಾದ ಸಾರ್ವಜನಿಕ ಭಾಷಣವಿರುವಾಗ, ಹಾಜರಾಗಲಿಕ್ಕಾಗಿ ಅವನಿಗೆ ವಿಶೇಷವಾದ ಉತ್ತೇಜನವನ್ನು ನೀಡಿರಿ. ಅವನು ಹಾಜರಾಗುವಾಗ, ಕೂಟದ ಸ್ಥಳದಲ್ಲಿ ಅವನನ್ನು ಇತರರಿಗೆ ಪರಿಚಯಮಾಡಿಸಿರಿ. ಈ ರೀತಿಯಲ್ಲಿ, ವಿದ್ಯಾರ್ಥಿಯು ಸಂಸ್ಥೆಯೊಂದಿಗೆ ಸಹವಸಿಸುವಂತೆ ನೀವು ಕ್ರಮೇಣವಾಗಿ ಸಹಾಯಮಾಡಲು ಶಕ್ತರಾಗುವಿರಿ. ಅವನು ಕೆಲವೊಂದು ಕೂಟಗಳಿಗೆ ಹಾಜರಾದ ಮೇಲೆ, ಸಂಕೋಚವನ್ನು ಜಯಿಸಿ, ತನ್ನ ಸ್ವಂತ ಮಾತುಗಳಲ್ಲಿ ಸಂಕ್ಷಿಪ್ತ ಹೇಳಿಕೆಗಳನ್ನು ಕೊಡುವಂತೆ ಅವನಿಗೆ ಸಹಾಯಮಾಡಿರಿ. ಇದು, ಏನು ನಡೆಯುತ್ತಿದೆಯೊ ಅದರಲ್ಲಿ ತಾನು ಒಳಗೂಡಿದ್ದೇನೆಂದು ಭಾವಿಸುವಂತೆ ಅವನಿಗೆ ಸಹಾಯಮಾಡುವುದು.
7 ವಿದ್ಯಾರ್ಥಿಯು ಪ್ರಗತಿಮಾಡಿದಂತೆ, ಅವನು ಬ್ರೋಷರ್ ಮತ್ತು ಕ್ಯಾಸೆಟ್ ಅಥವಾ ಜ್ಞಾನ ಪುಸ್ತಕದಿಂದ ಕಲಿಯುವ ಅಮೂಲ್ಯ ಅಂಶಗಳ ಕುರಿತಾಗಿ ಇತರರಿಗೆ ತಿಳಿಸುವಂತೆ ಅವನನ್ನು ಉತ್ತೇಜಿಸಿರಿ. ಸಕಾಲದಲ್ಲಿ ಶುಶ್ರೂಷೆಯಲ್ಲಿ ನಮ್ಮೊಂದಿಗೆ ಜೊತೆಗೂಡಲಿಕ್ಕಾಗಿರುವ ಅಗತ್ಯವನ್ನು ಚರ್ಚಿಸಿರಿ ಮತ್ತು ಒಬ್ಬ ಅಸ್ನಾನಿತ ಪ್ರಚಾರಕನಾಗಿರುವ ಸುಯೋಗಕ್ಕಾಗಿ ಅವನನ್ನು ತಯಾರಿಸಿರಿ. ಈ ಹೆಜ್ಜೆಗಳು, ಅವನು ಸಕಾಲದಲ್ಲಿ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕಾಗಿ ಅರ್ಹನಾಗಲು ಅವನನ್ನು ಸಹಾಯಮಾಡುವವು.
8 ಒಬ್ಬ ಶ್ರದ್ಧಾಶೀಲ ಮತ್ತು ವಿವೇಚನಾಶೀಲ ಶಿಕ್ಷಕರೋಪಾದಿ, ಯೆಹೋವ ಮತ್ತು ಆತನ ಸಂಸ್ಥೆಯ ಕಡೆಗೆ ವಿದ್ಯಾರ್ಥಿಗಿರುವ ಪ್ರೀತಿಯನ್ನು ಅಳೆಯಲು ಶಕ್ತರಾಗುವಿರಿ. ಅಪೇಕ್ಷಿಸು ಬ್ರೋಷರ್ ಮತ್ತು ಅದರ ಕ್ಯಾಸೆಟ್, ತಮ್ಮ ಓದುವಿಕೆಯ ಸಾಮರ್ಥ್ಯದಲ್ಲಿ ಸೀಮಿತರಾಗಿರುವವರಿಗಾಗಿ ಜೋಡಿ ಸಹಾಯಕಗಳಾಗಿವೆಯೆಂಬುದನ್ನು ನೆನಪಿನಲ್ಲಿಡಿರಿ. ದೇವರ ಹೊಸ ಲೋಕದಲ್ಲಿ ನಿತ್ಯಜೀವವನ್ನು ಗಳಿಸಲು ಅಂತಹವರಿಗೆ ಸಹಾಯಮಾಡಲಿಕ್ಕಾಗಿ ಇವುಗಳನ್ನು ಚೆನ್ನಾಗಿ ಬಳಸಿರಿ.