-
ದೇವರ ಆದಿ ಸೇವಕರಲ್ಲಿ ಸ್ತ್ರೀಯರ ಗೌರವವುಳ್ಳ ಪಾತ್ರಕಾವಲಿನಬುರುಜು—1995 | ಜುಲೈ 15
-
-
ಧಾರ್ಮಿಕ ಸುಯೋಗಗಳಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಬಹಳವಾಗಿ ನಿರ್ಬಂಧಿಸಿದ್ದವು. ಅಂತಹ ಸಂಪ್ರದಾಯಗಳು ಯೇಸು ಸ್ತ್ರೀಯರೊಂದಿಗೆ ವ್ಯವಹರಿಸಿದ ರೀತಿಯನ್ನು ಪ್ರಭಾವಿಸಿದವೊ? ಇಂದು ಕ್ರೈಸ್ತ ಸ್ತ್ರೀಯರು ಹೇಗೆ ಉಪಚರಿಸಲ್ಪಡಬೇಕು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುವು.
-
-
ಕ್ರೈಸ್ತ ಸ್ತ್ರೀಯರು ಮಾನ ಮತ್ತು ಮರ್ಯಾದೆಗೆ ಪಾತ್ರರುಕಾವಲಿನಬುರುಜು—1995 | ಜುಲೈ 15
-
-
ಕ್ರೈಸ್ತ ಸ್ತ್ರೀಯರು ಮಾನ ಮತ್ತು ಮರ್ಯಾದೆಗೆ ಪಾತ್ರರು
“ಗಂಡಂದಿರೇ, . . . ಅವರೊಂದಿಗೆ ಜ್ಞಾನಾನುಸಾರವಾಗಿ ಜೀವಿಸುತ್ತಾ ಹೋಗಿರಿ . . . ಅವರಿಗೆ ಅಬಲೆಯಾದ ಸ್ತ್ರೀಯಂತೆ ಮಾನವನ್ನು ಸಲ್ಲಿಸಿರಿ.”—1 ಪೇತ್ರ 3:7, NW.
1, 2. (ಎ) ಸಮಾರ್ಯದ ಸ್ತ್ರೀಯೊಂದಿಗಿನ ಬಾವಿಯ ಬಳಿಯ ಯೇಸುವಿನ ಸಂಭಾಷಣೆಯು ಯಾವ ಚಿಂತೆಯನ್ನು ಪ್ರಚೋದಿಸಿತು, ಮತ್ತು ಏಕೆ? (ಪಾದಟಿಪ್ಪಣಿಯನ್ನೂ ನೋಡಿ.) (ಬಿ) ಸಮಾರ್ಯದ ಸ್ತ್ರೀಗೆ ಸಾರುವ ಮೂಲಕ ಯೇಸು ಏನನ್ನು ಪ್ರದರ್ಶಿಸಿದನು?
ಸ್ತ್ರೀಯರನ್ನು ಹೇಗೆ ಉಪಚರಿಸಬೇಕೆಂಬ ತನ್ನ ಭಾವನೆಯನ್ನು ಸಾ.ಶ. 30ರ ಅಂತ್ಯದ ಸುಮಾರಿಗೆ ಸುಖರೆಂಬ ಊರಿನ ಪುರಾತನ ಬಾವಿಯ ಬಳಿ ಒಂದು ನಡು ಮಧ್ಯಾಹ್ನ ಯೇಸು ಪ್ರಕಟಿಸಿದನು. ಸಮಾರ್ಯದ ಗುಡ್ಡ ಪ್ರದೇಶವನ್ನು ದಾಟಿಕೊಂಡು ಪಯಣಿಸುವುದರಲ್ಲಿ ಅವನು ಬೆಳಗ್ಗಿನ ಸಮಯವನ್ನು ಕಳೆದಿದ್ದನು ಮತ್ತು ಬಳಲಿದವನೂ ಹಸಿದವನೂ ಬಾಯಾರಿದವನೂ ಆಗಿ ಬಾವಿಯ ಬಳಿಗೆ ಬಂದನು. ಬಾವಿಯ ಬಳಿಯಲ್ಲಿ ಅವನು ಕುಳಿತುಕೊಂಡಾಗ, ಒಬ್ಬ ಸಮಾರ್ಯದ ಹೆಂಗಸು ಸ್ವಲ್ಪ ನೀರು ಸೇದುವುದಕ್ಕಾಗಿ ಬಂದಳು. “ನೀರು ಕುಡಿಯುವದಕ್ಕೆ ಕೊಡು” ಎಂದು ಯೇಸು ಅವಳಿಗೆ ಹೇಳಿದನು. ಆ ಸ್ತ್ರೀಯು ಅಚ್ಚರಿಯಿಂದ ಅವನೆಡೆಗೆ ನೋಡಿರಬೇಕು. ಅವಳು ಕೇಳುವುದು: “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ?” ತದನಂತರ, ಆಹಾರವಸ್ತುಗಳನ್ನು ಕೊಳ್ಳಲು ಹೋಗಿದ್ದ ಅವನ ಶಿಷ್ಯರು ಹಿಂದೆಬಂದಾಗ, ಯೇಸು “ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು” ಕಂಡು ಆಶ್ಚರ್ಯಪಟ್ಟರು.—ಯೋಹಾನ 4:4-9, 27.
2 ಈ ಸ್ತ್ರೀಯ ಪ್ರಶ್ನೆಯನ್ನು ಮತ್ತು ಶಿಷ್ಯರ ಚಿಂತೆಯನ್ನು ಯಾವುದು ಪ್ರಚೋದಿಸಿತು? ಅವಳು ಒಬ್ಬ ಸಮಾರ್ಯದವಳಾಗಿದ್ದಳು ಮತ್ತು ಯೆಹೂದ್ಯರಿಗೆ ಸಮಾರ್ಯದವರೊಂದಿಗೆ ಯಾವ ವ್ಯವಹಾರವೂ ಇರಲಿಲ್ಲ. (ಯೋಹಾನ 8:48) ಆದರೆ ಚಿಂತಿತರಾಗಲು ಇನ್ನೊಂದು ಕಾರಣ ಸಹ ಇತ್ತೆಂಬುದು ವ್ಯಕ್ತ. ಆ ಸಮಯದಲ್ಲಿ, ಸ್ತ್ರೀಯರೊಂದಿಗೆ ಸಾರ್ವಜನಿಕವಾಗಿ ಮಾತಾಡುವುದನ್ನು ರಬ್ಬಿಗಳ ಸಂಪ್ರದಾಯವು ನಿರುತ್ತೇಜನಗೊಳಿಸಿತ್ತು.a ಆದರೂ, ಯೇಸು ಬಹಿರಂಗವಾಗಿ ಈ ಪ್ರಾಮಾಣಿಕ ಸ್ತ್ರೀಗೆ ಸಾರಿದನು, ತಾನು ಮೆಸ್ಸೀಯನೆಂಬುದಾಗಿ ಅವಳಿಗೆ ಪ್ರಕಟಪಡಿಸಿದನು ಕೂಡ. (ಯೋಹಾನ 4:25, 26) ಸ್ತ್ರೀಯರನ್ನು ಅವಹೇಳನ ಮಾಡುವವುಗಳೂ ಸೇರಿರುವ, ಅಶಾಸ್ತ್ರೀಯ ಸಂಪ್ರದಾಯಗಳಿಗೆ ತಾನು ಕಟ್ಟುಬೀಳವವನಲ್ಲವೆಂದು ಯೇಸು ಆ ಮೂಲಕ ತೋರಿಸಿಕೊಟ್ಟನು. (ಮಾರ್ಕ 7:9-13) ಇದಕ್ಕೆ ಪ್ರತಿಯಾಗಿ, ಸ್ತ್ರೀಯರನ್ನು ಮಾನ ಮರ್ಯಾದೆಯಿಂದ ಉಪಚರಿಸಬೇಕೆಂದು ಯೇಸು ತಾನು ಮಾಡಿದ ಮತ್ತು ಕಲಿಸಿದ ವಿಷಯಗಳಿಂದ ಪ್ರದರ್ಶಿಸಿದನು.
ಯೇಸು ಸ್ತ್ರೀಯರನ್ನು ಉಪಚರಿಸಿದ ವಿಧ
3, 4. (ಎ) ತನ್ನ ಉಡುಪನ್ನು ಮುಟ್ಟಿದ ಸ್ತ್ರೀಗೆ ಯೇಸು ಹೇಗೆ ಪ್ರತಿಕ್ರಿಯೆ ತೋರಿಸಿದನು? (ಬಿ) ಕ್ರೈಸ್ತ ಪುರುಷರಿಗೆ, ವಿಶೇಷವಾಗಿ ಮೇಲ್ವಿಚಾರಕರಿಗೆ ಯೇಸು ಒಳ್ಳೇ ಮಾದರಿಯನ್ನಿಟ್ಟದ್ದು ಹೇಗೆ?
3 ಸ್ತ್ರೀಯರೊಂದಿಗೆ ಅವನು ವ್ಯವಹರಿಸಿದ ರೀತಿಯಲ್ಲಿ
-